ಪವನ್ ಸೆಹ್ರಾವತ್

ಪವನ್ ಕುಮಾರ್ ಸೆಹ್ರಾವತ್ ಒಬ್ಬ ಭಾರತೀಯ ಕಬಡ್ಡಿ ಆಟಗಾರ.

ಅವರು ಪ್ರಸ್ತುತ ಪ್ರೊ ಕಬಡ್ಡಿ ಲೀಗ್‌ನಲ್ಲಿ ತೆಲುಗು ಟೈಟಾನ್ಸ್‌ಗಾಗಿ ಆಡುತ್ತಾರೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಪ್ರತಿನಿಧಿಸುವ ಭಾರತೀಯ ಕಬಡ್ಡಿ ಆಟಗಾರ. ಒಂಬತ್ತನೇ ಸೀಸನ್‌‍ನಲ್ಲಿ ತಮಿಳ್ ತಲೈವಾಸ್ ಅವರನ್ನು ೨.೨೬ ಕೋಟಿಗೆ ಆಯ್ಕೆ ಮಾಡಿದಾಗ ಪವನ್‍ರವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಅತ್ಯಂತ ದುಬಾರಿ ಆಟಗಾರರಾದರು. ಹತ್ತನೇ ಸೀಸನ್‌‍ನಲ್ಲಿ, ತೆಲುಗು ಟೈಟಾನ್ಸ್ ಅವರನ್ನು ೨.೬೦ ಕೋಟಿಗೆ ಖರೀದಿಸಿತು ಮತ್ತು ಇದರೊಂದಿಗೆ, ಅವರು ಮತ್ತೊಮ್ಮೆ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾದರು.

ಪವನ್ ಸೆಹ್ರಾವತ್
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುಪವನ್ ಕುಮಾರ್ ಸೆಹ್ರಾವತ್
ಅಡ್ಡ ಹೆಸರು(ಗಳು)ಹೈ-ಫ್ಲೈಯರ್
ರಾಷ್ರೀಯತೆಭಾರತೀಯ
ನಾಗರಿಕತ್ವಭಾರತೀಯ
ಜನನ (1995-07-09) ೯ ಜುಲೈ ೧೯೯೫ (ವಯಸ್ಸು ೨೮), ನವದೆಹಲಿ
ನಿವಾಸಬವಾನಾ, ದೆಹಲಿ, ನವದೆಹಲಿ
ಶಿಕ್ಷಣದೆಹಲಿ ವಿಶ್ವವಿದ್ಯಾಲಯ
ಆಲ್ಮ ಮಾಟರ್ದೆಹಲಿ ವಿಶ್ವವಿದ್ಯಾಲಯ
ಉದ್ಯೋಗಕಬಡ್ಡಿ ಆಟಗಾರ
ಉದ್ಯೋಗದಾತಭಾರತೀಯ ರಿಸರ್ವ್ ಬ್ಯಾಂಕ್
ಎತ್ತರ೧೭೯ ಸೆಂ.ಮೀ
ತೂಕ೮೫ ಕೆಜಿ
ಇತರ ಆಸಕ್ತಿಗಳುಸಂಗೀತ, ಬ್ಯಾಡ್ಮಿಂಟನ್
Sport
ದೇಶಭಾರತ
ಕ್ರೀಡೆಕಬಡ್ಡಿ
ಲೀಗ್ಪ್ರೊ ಕಬಡ್ಡಿ ಲೀಗ್
ತಂಡಬೆಂಗಳೂರು ಬುಲ್ಸ್ (೨೦೧೬), (೨೦೧೮–೨೦೨೧)

ಗುಜರಾತ್ ಜೈಂಟ್ಸ್ (೨೦೧೭)
ತಮಿಳ್ ತಲೈವಾಸ್ (೨೦೨೨)

ತೆಲುಗು ಟೈಟಾನ್ಸ್ (೨೦೧೩)

ಆರಂಭಿಕ ಜೀವನ

ಪವನ್ ಸೆಹ್ರಾವತ್‍ರವರು ೯ ಜುಲೈ ೧೯೯೬ ರಂದು ದೆಹಲಿಯಲ್ಲಿ ಜನಿಸಿದರು. ಅವರಿಗೆ ೨೭ ವರ್ಷ. ಅವರ ತಂದೆಯ ಹೆಸರು ರಾಜಬೀರ್ ಸಿಂಗ್ ಸೆಹ್ರಾವತ್. ಅವರು ಬವಾನಾದ ಸರ್ಕಾರಿ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರು ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿದ್ದರು.

ವೃತ್ತಿ

ಪ್ರೊ ಕಬಡ್ಡಿ ಲೀಗ್

    ಆರಂಭಿಕ ಸೀಸನ್‍ಗಳು

ಪವನ್ ಪ್ರೊ ಕಬಡ್ಡಿ ಲೀಗ್ ನ ಮೂರನೇ ಸೀಸನ್‍ನಲ್ಲಿ ಬೆಂಗಳೂರು ಬುಲ್ಸ್‌ಗೆ ಪಾದಾರ್ಪಣೆ ಮಾಡಿದರು. ಅವರು ೧೩ ಪಂದ್ಯಗಳಲ್ಲಿ ಆಡಿದರು ಮತ್ತು ೪೫ ಅಂಕಗಳೊಂದಿಗೆ ತನ್ನ ತಂಡದ ಪ್ರಮುಖ ರೈಡ-ಪಾಯಿಂಟ್ ಸ್ಕೋರರ್ ಆಗಿ ಪಂದ್ಯವನ್ನು ಮುಗಿಸಿದರು. ಪವನ್ ಸೀಸನ್ ೪ ರಲ್ಲಿ ಹತ್ತು ಪಂದ್ಯಗಳನ್ನು ಆಡಿದರು ಮತ್ತು ೩೩ ದಾಳಿಗಳಿಂದ ಕೇವಲ ೧೧ ಅಂಕಗಳನ್ನು ಗಳಿಸಿದರು. ಸೀಸನ್ ೫ ರಲ್ಲಿ ಪವನ್‍ರವರನ್ನು ಗುಜರಾತ್ ಜೈಂಟ್ಸ್ ಆಯ್ಕೆ ಮಾಡಿಕೊಂಡರು ಮತ್ತು ಮುಖ್ಯವಾಗಿ ಇರವರನ್ನು ಬೆಂಚ್ ಆಫ್ ಇಂಪ್ಯಾಕ್ಟ್ ರೈಡರ್ ಆಗಿ ಬಳಸಿಕೊಂಡರು. ಅವರು ಫೈನಲ್ ಸೇರಿದಂತೆ ಒಂಬತ್ತು ಪಂದ್ಯಗಳನ್ನು ಆಡಿದರು ಮತ್ತು ಹತ್ತು ಅಂಕಗಳನ್ನು ಗಳಿಸಿದರು.

    ಬ್ರೇಕ್ ಥ್ರೂ ಮತ್ತು ಪ್ರಮುಖ ಆಟಗಾರ

ಪವನ್ ಸೀಸನ್ ೬ ರಲ್ಲಿ ಪುನಃ ಬೆಂಗಳೂರು ಬುಲ್ಸ್‌ಗೆ ಮರಳಿದರು. ಅವರು ತಮಿಳ್ ತಲೈವಾಸ್ ವಿರುದ್ಧದ ಮೊದಲ ಪಂದ್ಯದಲ್ಲಿ ೨೦ ರೈಡ್ ಪಾಯಿಂಟ್‌ಗಳನ್ನು ಗಳಿಸಿದರು. ಅವರು ತಮ್ಮ ಮೊದಲ ಐದು ಪ್ರದರ್ಶನಗಳಲ್ಲಿ ನಾಲ್ಕು ಸೂಪರ್ ೧೦ ಗಳನ್ನು ಗಳಿಸಿದರು. ಅವರು ಅಂತಿಮವಾಗಿ ೧೩ ಸೂಪರ್ ೧೦ ಗಳ ೨೭೨ ಅಂಕಗಳೊಂದಿಗೆ ಪಂದ್ಯವನ್ನು ಮುಗಿಸಿದರು. ಪವನ್ ಕ್ವಾಲಿಫೈಯರ್ ೧ ಪಂದ್ಯದಲ್ಲಿ ೧೩ ರೈಡ್ ಪಾಯಿಂಟ್‌ಗಳನ್ನು ಮತ್ತು ಗುಜರಾತ್ ಜೈಂಟ್ಸ್ ವಿರುದ್ಧದ ಫೈನಲ್‌ನಲ್ಲಿ ೨೨ ರೈಡ್ ಪಾಯಿಂಟ್‌ಗಳನ್ನು ಗಳಿಸಿದರು ಮತ್ತು ಇದರಿಂದ ಬೆಂಗಳೂರು ಬುಲ್ಸ್ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆದ್ದರು. ಪವನ್‍ರವರು ಲೀಗ್‌ನ ಅತ್ಯಂತ ಮೌಲ್ಯಯುತ ಆಟಗಾರ ಎಂಬ ಕಿರೀಟವನ್ನು ಪಡೆದರು.

ಸೆಹ್ರಾವತ್ ಅವರು ಬುಲ್ಸ್ ಅನ್ನು ಸೀಸನ್ ೭ ರಲ್ಲಿ ತಮ್ಮ ಎರಡನೇ ಪ್ಲೇಆಫ್ ಪ್ರದರ್ಶನಕ್ಕೆ ಮುನ್ನಡೆಸಿದರು ಮತ್ತು ೩೫೩ ಅಂಕಗಳೊಂದಿಗೆ ಲೀಗ್‌ನ ಅಗ್ರ ಸ್ಕೋರರ್ ಆಗಿ ಸೀಸನ್‍ನನ್ನು ಮುಗಿಸಿದರು. ಅವರು ಹರಿಯಾಣ ಸ್ಟೀಲರ್ಸ್ ವಿರುದ್ಧ ೩೯ ರೇಡ್ ಅಂಕಗಳನ್ನು ಗಳಿಸಿ ಪ್ರೊ ಕಬಡ್ಡಿ ಲೀಗ್‌ನ ಇತಿಹಾಸದಲ್ಲಿ, ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ರೈಡ್ ಪಾಯಿಂಟ್‌ಗಳನ್ನು ಗಳಿಸಿದರು. ಸೀಸನ್ ೮ ರಲ್ಲಿ ೩೨೦ ಅಂಕಗಳನ್ನು ಗಳಿಸಿದ ಪವನ್ ಅತ್ಯಂತ ಯಶಸ್ವಿ ರೈಡರ್ ಆದರು.

    ಗಾಯ ಮತ್ತು ಪುನರಾಗಮನ

ಒಂಬತ್ತನೇ ಸೀಸನ್‌ನಲ್ಲಿ ಪವನ್‍ರವರನ್ನು ತಮಿಳ್ ತಲೈವಾಸ್ ೨.೨೬ ಕೋಟಿಗೆ ಆಯ್ಕೆ ಮಾಡಿದಾಗ ಪ್ರೊ ಕಬ್ಬಡಿ ಲೀಗ್‌ನ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾದರು. ಅವರು ಗುಜರಾತ್ ಜೈಂಟ್ಸ್ ವಿರುದ್ಧದ ಸೀಸನ್‌ನ ಮೊದಲ ಪಂದ್ಯದಲ್ಲಿ ಮೊಣಕಾಲಿನ ಗಾಯಕ್ಕೆ ಒಳಗಾದರು,ಇದು ಅವರ ಸೀಸನ್‌ನ್ನು ಕೊನೆಗೊಳಿಸಿತು.

ಹತ್ತನೇ ಸೀಸನ್‌ಗೆ ಮೊದಲು, ಪವನ್‍ರವರನ್ನು ತಮಿಳು ತಲೈವಾಸ್ ಬಿಡುಗಡೆ ಮಾಡಿತು ಮತ್ತು ಅವರು ಹರಾಜು ಪೂಲ್‌ಗೆ ಹೋದರು. ಹರಾಜಿನಲ್ಲಿ ಪವನ್ ಅವರನ್ನು ತೆಲುಗು ಟೈಟಾನ್ಸ್ ₹ ೨.೬೦ ಕೋಟಿಗಳ ದಾಖಲೆಯ ಒಪ್ಪಂದಕ್ಕೆ ಖರೀದಿಸಿತು. ಪವನ್ ಸೆಹ್ರಾವತ್ ಪ್ರೊ ಕಬಡ್ಡಿ ಲೀಗ್ ಸೀಸನ್ ೧೦ ರಲ್ಲಿ ಇದುವರೆಗೆ ೫ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು ಒಟ್ಟು ೫೩ ಅಂಕಗಳನ್ನು ಗಳಿಸಿದ್ದಾರೆ ಮತ್ತು ಲೀಗ್‌ನ ಮೂರನೇ ಅತ್ಯಂತ ಯಶಸ್ವಿ ರೈಡರ್ ಆಗಿದ್ದಾರೆ.

ಅಂತರರಾಷ್ಟ್ರೀಯ ವೃತ್ತಿ

ಪವನ್ ೨೦೧೯ ರ ದಕ್ಷಿಣ ಏಷ್ಯಾ ಕ್ರೀಡಾಕೂಟದ ಭಾರತದ ರಾಷ್ಟ್ರೀಯ ಕಬಡ್ಡಿ ಪಂದ್ಯದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಅವರು ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ೨೦೨೩ ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಸಾಧನೆಗಳು

ಪ್ರಶಸ್ತಿಗಳು

ಅವರಿಗೆ ೨೦೨೩ ರಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಲಾಯಿತು.

ಬಾಹ್ಯ ಕೊಂಡಿಗಳು

ಉಲ್ಲೇಖಗಳು

Tags:

ಪವನ್ ಸೆಹ್ರಾವತ್ ಆರಂಭಿಕ ಜೀವನಪವನ್ ಸೆಹ್ರಾವತ್ ವೃತ್ತಿಪವನ್ ಸೆಹ್ರಾವತ್ ಸಾಧನೆಗಳುಪವನ್ ಸೆಹ್ರಾವತ್ ಪ್ರಶಸ್ತಿಗಳುಪವನ್ ಸೆಹ್ರಾವತ್ ಬಾಹ್ಯ ಕೊಂಡಿಗಳುಪವನ್ ಸೆಹ್ರಾವತ್ ಉಲ್ಲೇಖಗಳುಪವನ್ ಸೆಹ್ರಾವತ್ಕಬಡ್ಡಿಪ್ರೊ ಕಬಡ್ಡಿ

🔥 Trending searches on Wiki ಕನ್ನಡ:

ಹೈನುಗಾರಿಕೆವಿಜಯ ಕರ್ನಾಟಕಮಾನವನಲ್ಲಿ ನಿರ್ನಾಳ ಗ್ರಂಥಿಗಳುನಿರ್ಮಲಾ ಸೀತಾರಾಮನ್ಶ್ರೀ ರಾಘವೇಂದ್ರ ಸ್ವಾಮಿಗಳುಕಾವೇರಿ ನದಿಚನ್ನವೀರ ಕಣವಿಬ್ರಹ್ಮಹಸಿರುಮನೆ ಪರಿಣಾಮಭಾರತೀಯ ನದಿಗಳ ಪಟ್ಟಿಕಬಡ್ಡಿತಂತ್ರಜ್ಞಾನದ ಉಪಯೋಗಗಳುಗೋತ್ರ ಮತ್ತು ಪ್ರವರಅಳಲೆ ಕಾಯಿದಶಾವತಾರಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕರ್ನಾಟಕದ ಜಾನಪದ ಕಲೆಗಳುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಶಬ್ದಮಣಿದರ್ಪಣಆಯ್ದಕ್ಕಿ ಲಕ್ಕಮ್ಮಆಡು ಸೋಗೆಜಾಗತೀಕರಣಇಸ್ಲಾಂ ಧರ್ಮರಾಹುಲ್ ಗಾಂಧಿಲಿಂಗಸೂಗೂರುಕೊಪ್ಪಳಪಪ್ಪಾಯಿಬೆಟ್ಟದ ನೆಲ್ಲಿಕಾಯಿಅಮೃತಬಳ್ಳಿಬರವಣಿಗೆಮೊದಲನೆಯ ಕೆಂಪೇಗೌಡಗೌತಮ ಬುದ್ಧಲೋಪಸಂಧಿಪಂಡಿತಕರ್ನಾಟಕ ಆಡಳಿತ ಸೇವೆಆಮ್ಲ ಮಳೆಸಾಮಾಜಿಕ ಸಮಸ್ಯೆಗಳುಜೈನ ಧರ್ಮಕನ್ನಡ ಅಕ್ಷರಮಾಲೆಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ವಂದೇ ಮಾತರಮ್ಮಂಡ್ಯಅಭಿಮನ್ಯುವಿರಾಟ್ ಕೊಹ್ಲಿಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಜವಾಹರ‌ಲಾಲ್ ನೆಹರುಚಂದ್ರಶೇಖರ ಕಂಬಾರಕನ್ನಡ ಬರಹಗಾರ್ತಿಯರುಕವಿರಾಜಮಾರ್ಗಹಂಪೆಕಾಳಿಂಗ ಸರ್ಪಕೇಶಿರಾಜಭಾರತೀಯ ಆಡಳಿತಾತ್ಮಕ ಸೇವೆಗಳುಭಾರತೀಯ ಜನತಾ ಪಕ್ಷಗುರು (ಗ್ರಹ)ಗುಣ ಸಂಧಿಭಾರತದ ರಾಜ್ಯಗಳ ಜನಸಂಖ್ಯೆನೀರುದೀಪಾವಳಿಮೌರ್ಯ (ಚಲನಚಿತ್ರ)ಸರ್ಪ ಸುತ್ತುಆಂಧ್ರ ಪ್ರದೇಶಸೀತೆಕೊಡಗಿನ ಗೌರಮ್ಮಬೆಂಗಳೂರು ಗ್ರಾಮಾಂತರ ಜಿಲ್ಲೆಉತ್ತಮ ಪ್ರಜಾಕೀಯ ಪಕ್ಷಭಾರತದ ಸ್ವಾತಂತ್ರ್ಯ ದಿನಾಚರಣೆಹೊಯ್ಸಳ ವಿಷ್ಣುವರ್ಧನದೇಶಗಳ ವಿಸ್ತೀರ್ಣ ಪಟ್ಟಿಕರ್ಣಕರ್ನಾಟಕ ರಾಷ್ಟ್ರ ಸಮಿತಿಅಕ್ಷಾಂಶ ಮತ್ತು ರೇಖಾಂಶವೈದೇಹಿಅಂತರರಾಷ್ಟ್ರೀಯ ನ್ಯಾಯಾಲಯಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಪ್ರಜಾಪ್ರಭುತ್ವಕನ್ನಡ ಚಂಪು ಸಾಹಿತ್ಯಉಪ್ಪಿನ ಸತ್ಯಾಗ್ರಹ🡆 More