ತ. ರಾ. ಸುಬ್ಬರಾಯ: ಭಾರತೀಯ ಕಾದಂಬರಿಕಾರ

ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್ (೧೯೨೦ - ೧೯೮೪), ತರಾಸು ಎಂದೇ ಜನಪ್ರಿಯರಾದ ಕನ್ನಡದ ಖ್ಯಾತ ಕಾದಂಬರಿಕಾರರು.

ಚಿತ್ರದುರ್ಗದ ಇತಿಹಾಸದ ಮೇಲೆ ಅವರು ರಚಿಸಿದ ಐತಿಹಾಸಿಕ ಕಾದಂಬರಿಗಳು; ಸಾಮಾನ್ಯ ಜನಜೀವನ ಕುರಿತ ಅವರ ಸಾಮಾಜಿಕ ಕಾದಂಬರಿಗಳು ಓದುಗರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ. ಹಲವು ಕಾದಂಬರಿಗಳು ಸಿನಿಮಾಗಳಾಗಿವೆ. ಅವರ ‛ದುರ್ಗಾಸ್ತಮಾನ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

ತ. ರಾ. ಸುಬ್ಬರಾಯ
ತ. ರಾ. ಸುಬ್ಬರಾಯ: ಜನನ ಹಾಗೂ ಬಾಲ್ಯ, ವಿವಾಹ, ಅ.ನ.ಕೃ ಗುರುಗಳ ಸಾನಿಧ್ಯದಲ್ಲಿ
ಜನನಸುಬ್ಬರಾವ್
ಏಪ್ರಿಲ್ 21, 1920
ಚಿತ್ರದುರ್ಗ
ಮರಣಏಪ್ರಿಲ್ 10, 1984(1984-04-10)
ಬೆಂಗಳೂರು, ಕರ್ನಾಟಕ
ವೃತ್ತಿಕಾದಂಬರಿಕಾರ

ಜನನ ಹಾಗೂ ಬಾಲ್ಯ

  • 'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಇವರ ಮನೆಮಾತು ತೆಲುಗು. ಇವರ ತಾತ 'ಸುಬ್ಬಣ್ಣ'ನವರು ೮ ವರ್ಷದವರಾಗಿದ್ದಾಗ ಆಂಧ್ರ ಪ್ರದೇಶದ ಕಡೆಯಿಂದ ತಳುಕಿಗೆ ಬಂದು ನೆಲೆಸಿದವರು. ತಂದೆ ರಾಮಸ್ವಾಮಯ್ಯ'ನವರು 'ಪ್ಲೀಡರ್' ಆಗಿ ಚಿತ್ರದುರ್ಗದಲ್ಲಿ ಕೆಲಸ ಮಾಡುತ್ತಿದ್ದರು.
  • ಚಿಕ್ಕಂದಿನಿಂದ ಬಹಳ ತುಂಟರಾಗಿದ್ದ 'ಸುಬ್ಬರಾಯರು' ಇಂಟರ್ ಮುಗಿದ ಕೂಡಲೇ ಓದಿಗೆ ಶರಣು ಎಂದು ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ಭಾಗಿಯಾಗಿದ್ದರು. ಅವರು ಬರೆದ 'ನಾಗರಹಾವು' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು.

ವಿವಾಹ

ಸಂಬಂಧಿಗಳಲ್ಲೇ ಮದುವೆಯಾಗಿದ್ದ ಅವರ ಪತ್ನಿಯ ಹೆಸರು 'ಅಂಬುಜ'. ಬಹಳ ಸಮಯದ ನಂತರ ಹುಟ್ಟಿದ ಮೂವರು ಮಕ್ಕಳು 'ನಾಗಪ್ರಸಾದ್', 'ಪೂರ್ಣಿಮಾ' ಮತ್ತು 'ಪ್ರದೀಪ'. ಪತ್ನಿ ಮತ್ತು ಮಕ್ಕಳು ಮೈಸೂರಿನಲ್ಲಿ ವಾಸವಾಗಿದ್ದಾರೆ. ಮೈಸೂರಿನ ಯಾದವಗಿರಿಯಲ್ಲಿ ಕಟ್ಟಿಸಿದ ಅವರ ಮನೆಯ ಹೆಸರು 'ಗಿರಿಕನ್ಯಕಾ'.

ಅ.ನ.ಕೃ ಗುರುಗಳ ಸಾನಿಧ್ಯದಲ್ಲಿ

  • ಅವರಿಗೆ ಗುರುವಾಗಿದ್ದವರು ಅ.ನ. ಕೃಷ್ಣರಾಯರು. ಆ ಸಮಯಕ್ಕಾಗಲೇ ಸಾಮಾಜಿಕ ವಿಷಯಗಳ ಬಗ್ಗೆ ಕಾದಂಬರಿಗಳನ್ನು ಬರೆದಿದ್ದ ಅನಕೃ ಅವರು ಕನ್ನಡಿಗರ ಮನೆ ಮಾತಾಗಿದ್ದರು. ಬರಹ ಅವರ ರಕ್ತಕ್ಕೆ ಬಂದಂತಿತ್ತು. ಅವರು ಬರೆದಿದ್ದ ಒಂದು ಕಾದಂಬರಿಯ (ಹಂಸ ಗೀತೆ) ವಸ್ತು ಹಿಂದಿ ಭಾಷೆಯ ಚಲನಚಿತ್ರವಾದ 'ಬಸಂತ್ ಬಹಾರ್' ಆಯಿತು.
  • ಅಲ್ಲಿಯವರೆವಿಗೆ ಅವರು ಕನ್ನಡದ ಹೋರಾಟದಲ್ಲಿ ಅನಕೃ ಮತ್ತಿತರ ಸಹೃದಯರರ ಜೊತೆ ಲೀನವಾಗಿದ್ದರು. ಕನ್ನಡದ ಹೋರಾಟದಲ್ಲಿ ಅನಕೃ ಅವರೊಂದಿಗೆ ಸರಿಸಾಟಿಯಾಗಿ ನಿಂತರು. ಅವರೊಂದಿಗೆ ಕೈ ಜೋಡಿಸಿದವರು ಮ.ರಾಮಮೂರ್ತಿಗಳು. ಆ ಸಮಯದಲ್ಲಿ ರಾಜ್ಯಾದ್ಯಂತ ಓಡಾಡಿ ಕನ್ನಡಿಗರಲ್ಲಿ ಜಾಗೃತಿಯನ್ನು ಉಂಟು ಮಾಡಲು ಶ್ರಮಿಸಿದರು.

ಚಲನಚಿತ್ರವಾದ ಸುಬ್ಬರಾಯರ ಕಾದಂಬರಿಗಳು

ಕಾದಂಬರಿಗಳನ್ನು ಬರೆದರೂ, ಹಣಗಳಿಕೆಯಲ್ಲಿ ವಿಫಲರಾಗಿದ್ದರು. ೧೯೬೦ರ ಸುಮಾರಿಗೆ ರಷ್ಯಾಗೆ ಸರ್ಕಾರದ ವತಿಯಿಂದ ಹೋದ ಮೇಲೆ ಅವರ ಅದೃಷ್ಟ ಬದಲಾಯಿತು. ಅವರ ಕಾದಂಬರಿಗಳ ಸುವಾಸನೆ ಬಹಳ ನಿಧಾನವಾಗಿ ಕನ್ನಡ ಚಲನಚಿತ್ರಲೋಕ ಮೂಲಕ ಪಸರಿಸಿ ಹಣಗಳಿಸಿಕೊಟ್ಟಿತು.

  1. ಚಂದವಳ್ಳಿಯ ತೋಟ
  2. ಹಂಸಗೀತೆ
  3. ನಾಗರಹಾವು
  4. ಬೆಂಕಿಯ ಬಲೆ
  5. ಗಾಳಿಮಾತು
  6. ಚಂದನದ ಗೊಂಬೆ
  7. 'ಬಿಡುಗಡೆಯ ಬೇಡಿ'
  8. ಮಸಣದ ಹೂ
  9. ಇವರ 'ಹಂಸಗೀತೆ' ಕಾದಂಬರಿಯನ್ನು ಆಧರಿಸಿ ೧೯೫೬ರಲ್ಲಿ ಬಸಂತ್ ಬಹಾರ್ ಎಂಬ ಹಿಂದಿ ಚಲನಚಿತ್ರ ಬಿಡುಗಡೆಯಾಯಿತು.

ಮಹತ್ವದ ಕೃತಿಗಳು

ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಅದರಲ್ಲಿ ವಿವರಿಸಿರುವ ಪಾಳೇಗಾರರ ವೈಭವ, ದರ್ಪ ಮತ್ತು ಕ್ರೌರ್ಯ ಮೈ ನವಿರೇಳುವಂತಿದೆ ಎನ್ನಲಾಗಿದೆ. ಇದು ತರಾಸು ಅವರ ಬರಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ.೧೯೭೦ರ ಸಮಯದಲ್ಲಿ ಶೃಂಗೇರಿ ಸ್ವಾಮಿಗಳ ಸಾನ್ನಿಧ್ಯದಲ್ಲಿದ್ದರು. ಆಗ ಆರೋಗ್ಯ ಸ್ವಲ್ಪ ಸುಧಾರಿಸಿತು. ಆ ಸಮಯದಲ್ಲಿ ಅವರು ಬರೆದ ಕಾದಂಬರಿ ೪ * ೪ = ೧.

ಕೃತಿಗಳು

ಸಾಮಾಜಿಕ ಕಾದಂಬರಿಗಳು

  1. ಮನೆಗೆ ಬಂದ ಮಹಾಲಕ್ಷ್ಮಿ
  2. ನಾಗರ ಹಾವು
  3. ರಕ್ತ ತರ್ಪಣ
  4. ಪುರುಷಾವತಾರ
  5. ಬೇಡದ ಮಗು
  6. ಮಸಣದ ಹೂವು
  7. ಬಿಡುಗಡೆಯ ಬೇಡಿ
  8. ಚಂದನದ ಗೊಂಬೆ
  9. ಚಕ್ರ ತೀರ್ಥ
  10. ಸಾಕು ಮಗಳು
  11. ಮಾರ್ಗ ದರ್ಶಿ
  12. ಭಾಗ್ಯಶಿಲ್ಪಿ
  13. ಬೆಳಕಿನ ಬೀದಿ
  14. ಬೆಂಕಿಯ ಬಲೆ
  15. ಚಂದವಳ್ಳಿಯ ತೋಟ
  16. ಎರಡು ಹೆಣ್ಣು ಒಂದು ಗಂಡು
  17. ಗಾಳಿ ಮಾತು
  18. ಕಾರ್ಕೋಟಕ
  19. ಪಂಜರದ ಪಕ್ಷಿ
  20. ಖೋಟಾ ನೋಟು
  21. ಮೊದಲ ನೋಟ

ಪೌರಾಣಿಕ ಕಾದಂಬರಿಗಳು

  1. ಬೆಳಕು ತಂದ ಬಾಲಕ
  2. ನಾಲ್ಕು × ನಾಲ್ಕು

ಐತಿಹಾಸಿಕ ಕಾದಂಬರಿಗಳು

  1. ನೃಪತುಂಗ
  2. ಸಿಡಿಲ ಮೊಗ್ಗು
  3. ಹಂಸಗೀತೆ
  4. ಶಿಲ್ಪ ಶ್ರೀ
  5. ಕಸ್ತೂರಿ ಕಂಕಣ
  6. ಕಂಬನಿಯ ಕುಯಿಲು
  7. ರಕ್ತ ರಾತ್ರಿ
  8. ತಿರುಗು ಬಾಣ
  9. ದುರ್ಗಾಸ್ತಮಾನ
  10. ರಾಜ್ಯದಾಹ
  11. ಹೊಸಹಗಲು
  12. ವಿಜಯೋತ್ಸವ
  13. ಕೀರ್ತಿನಾರಾಯಣ

ಕಥಾ ಸಂಕಲನಗಳು

  1. ರೂಪಸಿ
  2. ತೊಟ್ಟಿಲು ತೂಗಿತು
  3. ಮಲ್ಲಿಗೆಯ ನಂದನದಲ್ಲಿ
  4. ಇದೇ ನಿಜವಾದ ಸಂಪತ್ತು

ನಾಟಕಗಳು

  1. ಜ್ವಾಲಾ.
  2. ಮೃತ್ಯು ಸಿಂಹಾಸನ.
  3. ಅನ್ನಾವತಾರ.
  4. ಮಹಾಶ್ವೇತೆ.

ನಿಧನ

ಪ್ರಶಸ್ತಿಗಳು

ಬಾಹ್ಯ ಸಂಪರ್ಕಗಳು

ಉಲ್ಲೇಖ

Tags:

ತ. ರಾ. ಸುಬ್ಬರಾಯ ಜನನ ಹಾಗೂ ಬಾಲ್ಯತ. ರಾ. ಸುಬ್ಬರಾಯ ವಿವಾಹತ. ರಾ. ಸುಬ್ಬರಾಯ ಅ.ನ.ಕೃ ಗುರುಗಳ ಸಾನಿಧ್ಯದಲ್ಲಿತ. ರಾ. ಸುಬ್ಬರಾಯ ಚಲನಚಿತ್ರವಾದ ಸುಬ್ಬರಾಯರ ಕಾದಂಬರಿಗಳುತ. ರಾ. ಸುಬ್ಬರಾಯ ಮಹತ್ವದ ಕೃತಿಗಳುತ. ರಾ. ಸುಬ್ಬರಾಯ ಕೃತಿಗಳುತ. ರಾ. ಸುಬ್ಬರಾಯ ನಿಧನತ. ರಾ. ಸುಬ್ಬರಾಯ ಪ್ರಶಸ್ತಿಗಳುತ. ರಾ. ಸುಬ್ಬರಾಯ ಬಾಹ್ಯ ಸಂಪರ್ಕಗಳುತ. ರಾ. ಸುಬ್ಬರಾಯ ಉಲ್ಲೇಖತ. ರಾ. ಸುಬ್ಬರಾಯಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

🔥 Trending searches on Wiki ಕನ್ನಡ:

ಕನ್ನಡಪ್ರಭಕರ್ನಾಟಕ ವಿಧಾನ ಸಭೆಯಕ್ಷಗಾನಸಂಜಯ್ ಚೌಹಾಣ್ (ಸೈನಿಕ)ವಿಕಿರಣಅಂತಿಮ ಸಂಸ್ಕಾರಸೂರ್ಯವ್ಯೂಹದ ಗ್ರಹಗಳುಸಚಿನ್ ತೆಂಡೂಲ್ಕರ್ಊಟಹಳೇಬೀಡುಮುದ್ದಣಭಾರತದಲ್ಲಿ ತುರ್ತು ಪರಿಸ್ಥಿತಿಏಡ್ಸ್ ರೋಗಕಾಳಿದಾಸಶ್ರೀವಿಜಯ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಪೊನ್ನಆರೋಗ್ಯಕಂದಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಅಂತರಜಾಲಸವದತ್ತಿಶೈಕ್ಷಣಿಕ ಸಂಶೋಧನೆಕೊಡಗಿನ ಗೌರಮ್ಮಸಂಗ್ಯಾ ಬಾಳ್ಯಾ(ನಾಟಕ)ಕೆ.ಎಲ್.ರಾಹುಲ್ಅಭಿಮನ್ಯುಕನ್ನಡದಲ್ಲಿ ಗಾದೆಗಳುಪುರಂದರದಾಸನೈಸರ್ಗಿಕ ಸಂಪನ್ಮೂಲಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕನ್ನಡದಲ್ಲಿ ಮಹಿಳಾ ಸಾಹಿತ್ಯಕ್ರಿಕೆಟ್ಜೋಗಿ (ಚಲನಚಿತ್ರ)ಬಾಹುಬಲಿಕರ್ನಾಟಕ ಐತಿಹಾಸಿಕ ಸ್ಥಳಗಳುಜರಾಸಂಧಬಾದಾಮಿಎರಡನೇ ಮಹಾಯುದ್ಧಜನಪದ ಕಲೆಗಳುಅರಬ್ಬೀ ಸಾಹಿತ್ಯಹರಿಹರ (ಕವಿ)ಜಾತ್ರೆಕರ್ನಾಟಕ ಸ್ವಾತಂತ್ರ್ಯ ಚಳವಳಿಭಾರತ ರತ್ನಮತದಾನಪಂಪ ಪ್ರಶಸ್ತಿಜಲ ಮಾಲಿನ್ಯಪ್ರಾಥಮಿಕ ಶಾಲೆಅಮೇರಿಕ ಸಂಯುಕ್ತ ಸಂಸ್ಥಾನರೋಸ್‌ಮರಿಭಾರತದ ರೂಪಾಯಿಮೈಸೂರು ದಸರಾಅನುಶ್ರೀಕುಮಾರವ್ಯಾಸಕನ್ನಡ ಛಂದಸ್ಸುಭಾಮಿನೀ ಷಟ್ಪದಿಇಂದಿರಾ ಗಾಂಧಿಶಿವಸ್ಕೌಟ್ಸ್ ಮತ್ತು ಗೈಡ್ಸ್ಯು. ಆರ್. ಅನಂತಮೂರ್ತಿಗೊಮ್ಮಟೇಶ್ವರ ಪ್ರತಿಮೆಉಡುಪಿ ಜಿಲ್ಲೆಪ್ಯಾರಾಸಿಟಮಾಲ್ಶ್ರುತಿ (ನಟಿ)ಮಾನವ ಅಸ್ಥಿಪಂಜರವರ್ಗೀಯ ವ್ಯಂಜನಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಅವತಾರಅಷ್ಟ ಮಠಗಳುಗೀತಾ (ನಟಿ)ವೀರಗಾಸೆಪಂಚ ವಾರ್ಷಿಕ ಯೋಜನೆಗಳುಬಳ್ಳಾರಿಮಳೆಚಿತ್ರಲೇಖಆಟಪ್ರಜಾವಾಣಿ🡆 More