ಟ್ರಾನ್ಸ್ ಎಂಬುದು ೧೯೯೦ರ ದಶಕದಲ್ಲಿ ಬೆಳಕಿಗೆ ಬಂದ ವಿದ್ಯುನ್ಮಾನ ನೃತ್ಯ ಸಂಗೀತದ ಒಂದು ಪ್ರಕಾರವಾಗಿದೆ.
ಟ್ರಾನ್ಸ್ ಸಂಗೀತವು ೧೩೦ರಿಂದ ೧೫೫ವರೆಗಿನ BPMಗಳ ನಡುವಿನ ಒಂದು ಲಯಗತಿ, ಇಂಪಾದ ಸ್ವರವನ್ನುಂಟುಮಾಡುವ ಸಂಗೀತ ಸಂಯೋಜಕ ವಾದ್ಯದ ಕಿರು ಗೀತಾಂಗ ಭಾಗಗಳು, ಮತ್ತು ಒಂದು ಧ್ವನಿಪಥದಾದ್ಯಂತ ಆರೋಹಣ ಮತ್ತು ಅವರೋಹಣವನ್ನು ನಿರ್ಮಿಸುವ ಒಂದು ಸಂಗೀತಮಯ ಸ್ವರೂಪ ಇವುಗಳಿಂದ ಸ್ಥೂಲವಾಗಿ ನಿರೂಪಿಸಲ್ಪಟ್ಟಿದೆ. ಇದು ಔದ್ಯಮಿಕ, ಟೆಕ್ನೊ, ಹಾಗೂ ಹೌಸ್ ಸಂಗೀತದಂಥ, ಸಂಗೀತದ ಅನೇಕ ಸ್ವರೂಪಗಳ ಒಂದು ಸಂಯೋಜನೆಯಾಗಿದೆ. 'ಟ್ರಾನ್ಸ್' ಸಂಗೀತ ಎಂಬ ಪದದ ಮೂಲವು ಸರಿಯಾಗಿ ತಿಳಿದುಬಂದಿಲ್ಲ. ಇದು ಕ್ಲೌಸ್ ಷುಲ್ಜ್ ಗೀತಸಂಪುಟವಾದ ಟ್ರಾನ್ಸ್ಫರ್ನಿಂದ (೧೯೮೧) ಅಥವಾ ಡಾನ್ಸ್ 2 ಟ್ರಾನ್ಸ್ ಎಂಬ ಮುಂಚಿನ ಟ್ರಾನ್ಸ್ ಪ್ರದರ್ಶನದಿಂದ ಜನ್ಯವಾಗಿದೆ ಎಂಬುದಾಗಿ ಕೆಲವರು ಸೂಚಿಸುತ್ತಾರೆ. ಅದೇನೇ ಇದ್ದರೂ, ಒಂದು ಸಮಾಧಿ ಸ್ಥಿತಿ ಎಂದು ಹೇಳಲಾಗುವ ಜಾಗ್ರತಾವಸ್ಥೆಯ ಮಾರ್ಪಡಿಸಲ್ಪಟ್ಟ ಸ್ಥಿತಿಯೊಂದನ್ನು ಉಂಟುಮಾಡುವಲ್ಲಿನ ಸಂಗೀತದ ಸಾಮರ್ಥ್ಯಕ್ಕೆ ಸದರಿ ಹೆಸರು ನಿಸ್ಸಂದೇಹವಾಗಿ ಜೋಡಣೆಗೊಂಡಿದೆ. ಡ್ರಮ್ವಾದ್ಯ ಬಾರಿಸುವಿಕೆಯ ಸುದೀರ್ಘ ಅವಧಿಗಳ ಸಮಯದಲ್ಲಿ ಪ್ರಾಚೀನ ಉಪಾಸಕ ಪಂಥದವರಿಂದ ಸೃಷ್ಟಿಯಾಗುತ್ತಿದ್ದ ಸಮಾಧಿಸ್ಥಿತಿಯನ್ನು-ಉಂಟುಮಾಡುವ ಸಂಗೀತಕ್ಕೆ ಕೆಲವೊಂದು ಟ್ರಾನ್ಸ್ ಸಂಗೀತದ ಪರಿಣಾಮವನ್ನು ಹೋಲಿಸಿಕೊಂಡು ಬರಲಾಗಿದೆ.
Trance | |
---|---|
Stylistic origins | Techno House Ambient Industrial Electronic art music |
Cultural origins | Early ೧೯೯೦s, Berlin, Germany |
Typical instruments | Synthesizer, Keyboard, Drum machine, Sequencer, Sampler, Personal computer |
Subgenres | |
Acid, Classic, Euro, Psychedelic, Goa, Hard, Dark, Progressive, Tech, Uplifting, (Full list) | |
Fusion genres | |
Trancestep | |
Other topics | |
Raves - Glowsticking |
೧೯೮೦ರ ದಶಕದ ಆರಂಭದಲ್ಲಿ ಕ್ಲೌಸ್ ಷುಲ್ಜ್ ಎಂಬ ಜರ್ಮನ್ ಸಂಯೋಜಕ ಪ್ರಯೋಗಾತ್ಮಕ "ಕಾಲಾವಧಿ ಸಂಗೀತ"ದ ಹಲವಾರು ಗೀತಸಂಪುಟಗಳನ್ನು ಸಂಯೋಜಿಸಿದ. ಇದು ಅತೀವವಾಗಿ ಭಾವಾತ್ಮಕ ಪರಿಸರ ಕಲ್ಪಿಸುವ ಹಾಗೂ ಅನುಕ್ರಮ ಸಾಧಕ-ಪ್ರಚೋದಿತ ಸಂಗೀತ-ಸ್ವರೂಪವನ್ನು ಹೊಂದಿತ್ತು. ಇವುಗಳ ಪೈಕಿ ಕೆಲವೊಂದು ಹಾಡುಗಳು ಮುಂಚಿನ ಟ್ರಾನ್ಸ್ ಸಂಗೀತದೊಂದಿಗೆ ಅನೇಕ ಹೋಲಿಕೆಗಳನ್ನು ಹಂಚಿಕೊಳ್ಳುತ್ತವೆ ಮತ್ತು ಟ್ರಾನ್ಸ್ ಎಂಬುದಾಗಿ ಕೆಲವೊಮ್ಮೆ ವರ್ಗೀಕರಿಸಲ್ಪಡುತ್ತವೆ. ೧೯೮೦ರ ದಶಕದಲ್ಲಿ ಬಂದ ಅವನ ಗೀತಸಂಪುಟಗಳ ಪೈಕಿ ಎರಡು ತಮ್ಮ ಶೀರ್ಷಿಕೆಗಳಲ್ಲಿ "ಟ್ರಾನ್ಸ್" ಎಂಬ ಪದವನ್ನು ಒಳಗೊಂಡಿವೆ. ಅವೆಂದರೆ ೧೯೮೧ರಲ್ಲಿ ಬಂದ ಟ್ರಾನ್ಸ್ಫರ್ ಹಾಗೂ ೧೯೮೭ರಲ್ಲಿ ಬಂದ ಎನ್=ಟ್ರಾನ್ಸ್ ಗೀತಸಂಪುಟಗಳು. ಆದಾಗ್ಯೂ, ಜೀನ್ ಮೈಕೇಲ್ ಜರ್ರೆ ಎಂಬಾತನ ೧೯೭೬ರಲ್ಲಿ ಬಂದ ಆಕ್ಸಿಜನ್ ಹಾಗೂ ೧೯೭೮ರಲ್ಲಿ ಬಂದ ಈಕ್ವಿನಾಕ್ಸ್ ಗೀತಸಂಪುಟಗಳು ಷುಲ್ಜ್ನ ೧೯೮೦ರ ದಶಕದಲ್ಲಿನ ಬಿಡುಗಡೆಗಳಿಗೆ ಸಾಕಷ್ಟು ಮುಂಚಿತವಾಗಿ ತಮ್ಮ ಅಸ್ತಿತ್ವವನ್ನು ದಾಖಲಿಸಿದ್ದವು. ಷುಲ್ಜ್ನ ೧೯೮೦ರ ದಶಕದ ಪ್ರಯತ್ನಗಳು ಹಾಗೂ ಅದನ್ನು ಅನುಸರಿಸಿ ಬಂದ ಇತರ ಅನೇಕ ಪ್ರಯತ್ನಗಳಿಗೆ ಕಾರಣವಾದ, ಭಾವಾತ್ಮಕ ಪರಿಸರ ಕಲ್ಪಿಸುವ ಪ್ರಯೋಗಾತ್ಮಕ ಸಂಗೀತದ ರೀತಿಯ ಶೈಲಿಗಳೊಂದಿಗೆ ಪ್ರಯೋಗವನ್ನು ನಡೆಸಿದ ಜರ್ರೆಯನ್ನು ಸದರಿ ಸಂಗೀತ ಪ್ರಕಾರದ ಹಿತಪೋಷಕ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.
ಸಿಂಹಾವಲೋಕನ ಮಾಡಿದಾಗ, ದಿ KLFನಿಂದ ಪಥನಿರ್ಮಾಣ ಮಾಡಲ್ಪಟ್ಟ ಆಸಿಡ್ ಹೌಸ್ ಕಾರ್ಯಚಟುವಟಿಕೆಯಿಂದ ಬಹಳ ಹಿಂದಿನ ಒಂದಷ್ಟು ಗುರುತಿಸಬಹುದಾದ ಟ್ರಾನ್ಸ್ ಧ್ವನಿಮುದ್ರಣಗಳು ಬಂದವು. ಇವುಗಳ ಪೈಕಿ ಅತ್ಯಂತ ಗಮನಾರ್ಹವಾದವುಗಳೆಂದರೆ "ವಾಟ್ ಟೈಮ್ ಈಸ್ ಲವ್?" ಹಾಗೂ "3 a.m. ಎಟರ್ನಲ್" ಎಂಬುದರ ೧೯೮೮ / ೧೯೮೯ರ ಮೂಲ ಆವೃತ್ತಿಗಳು. ಇವುಗಳ ಜೊತೆಗೆ ಸೂಕ್ತವಾದ ಶೀರ್ಷಿಕೆಯನ್ನು ಹೊಂದಿದ್ದ "ಕೈಲಿ ಸೆಡ್ ಟ್ರಾನ್ಸ್" (೧೯೮೯) ಹಾಗೂ "ಲಾಸ್ಟ್ ಟ್ರೇನ್ ಟು ಟ್ರಾನ್ಸೆಂಟ್ರಲ್" (೧೯೯೦) ಕೂಡಾ ಸೇರಿದ್ದವು. ಈ ಮುಂಚಿನ ಧ್ವನಿಮುದ್ರಣಗಳಿಗೆ "ಪ್ಯೂರ್ ಟ್ರಾನ್ಸ್" ಎಂಬ ಹಣೆಪಟ್ಟಿಯನ್ನು ದಿ KLF ಅಂಟಿಸಿತು. ಅವು ದಿ ವೈಟ್ ರೂಮ್ ಗೀತಸಂಪುಟದೊಂದಿಗೆ (೧೯೯೧) ಅನೇಕ ಹೋಲಿಕೆಗಳನ್ನು ಹೊಂದಿವೆಯಾದರೂ, ಅವು ಗಮನಾರ್ಹವಾಗಿ ಅತ್ಯಂತ ಕನಿಷ್ಠೀಯತಾವಾದಿಯಾಗಿವೆ, ರಾತ್ರಿಕ್ಲಬ್ಬುಗಳನ್ನು ಗುರಿಯಾಗಿರಿಸಿಕೊಂಡಿವೆ ಮತ್ತು ಧ್ವನಿಯಲ್ಲಿ 'ಪ್ರಾಯೋಗಿಕ'ವಾಗಿವೆ. ದಿ KLFನ ಕೃತಿಗಳು ಪ್ರೊಟೊ-ಟ್ರಾನ್ಸ್ನ ನಿಚ್ಚಳ ಉದಾಹರಣೆಗಳಾಗಿದ್ದರೆ, ೧೯೯೦ರಿಂದ ಬಂದ ಎರಡು ಹಾಡುಗಳು ಮೊದಲ "ನಿಜವಾದ" ಟ್ರಾನ್ಸ್ ಧ್ವನಿಮುದ್ರಿಕೆಗಳಾಗಿವೆಯೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿವೆ. ಮೊದಲನೆಯದು ಏಜ್ ಆಫ್ ಲವ್ನ ಸ್ವಯಂ-ಶೀರ್ಷಿಕೆಯುಳ್ಳ ಪ್ರಥಮ ಪ್ರವೇಶದ ಏಕಗೀತೆಯ ಧ್ವನಿಮುದ್ರಿಕೆಯಾಗಿದ್ದು, ೧೯೯೦ರ ಆರಂಭದಲ್ಲಿ ಅದು ಬಿಡುಗಡೆಯಾಯಿತು ಹಾಗೂ ಮೂಲ ಟ್ರಾನ್ಸ್ ಧ್ವನಿಯು ಜರ್ಮನಿಯಿಂದ ಆಚೆಗೆ ಬರುವುದಕ್ಕೆ ಸಂಬಂಧಿಸಿದ ಒಂದು ಆಧಾರವಾಗಿ ಅದನ್ನು ನೋಡಲಾಗುತ್ತದೆ. ಕೆಲವೊಬ್ಬರು "ದಿ ಏಜ್ ಆಫ್ ಲವ್"ನ್ನು ಮೊದಲ ನಿಜವಾದ ಟ್ರಾನ್ಸ್ ಏಕಗೀತೆ ಎಂದು ಪರಿಗಣಿಸುತ್ತಾರೆ. ಡಾನ್ಸ್ 2 ಟ್ರಾನ್ಸ್ನ "ವಿ ಕೇಮ್ ಇನ್ ಪೀಸ್" ಎಂಬುದು ಎರಡನೇ ಧ್ವನಿಪಥವಾಗಿದ್ದು, ಇದು ಅವರದೇ ಸ್ವಂತದ ಸ್ವಯಂ-ಶೀರ್ಷಿಕೆಯ ಪ್ರಥಮ ಪರಿಚಯದ ಏಕಗೀತೆಯ ಧ್ವನಿಮುದ್ರಿಕೆಯ ಬಿ-ಪಾರ್ಶ್ವವಾಗಿತ್ತು. ಫ್ಯೂಚರ್ ಸೌಂಡ್ ಆಫ್ ಲಂಡನ್ನ್ನ "ಪಪುವಾ ನ್ಯೂಗಿನಿಯಾ" (೧೯೯೧) ಎಂಬುದು ಮತ್ತೊಂದು ಪ್ರಭಾವಪೂರ್ಣ ಗೀತೆಯಾಗಿತ್ತು.
ಈ ಆಸಿಡ್-ಯುಗದ ಉಗಮದ ಆಚೆಗಿನ ಟ್ರಾನ್ಸ್ ಧ್ವನಿಯು, ೧೯೯೦ರ ದಶಕದ ಅತ್ಯಂತ ಮುಂಚಿನ ಅವಧಿಯಲ್ಲಿ ಜರ್ಮನ್ ಕ್ಲಬ್ಗಳಲ್ಲಿನ ಟೆಕ್ನೊ ಸಂಗೀತದ ಒಂದು ನಿಷ್ಪನ್ನವಾಗಿದೆ ಎಂಬ ರೀತಿಯಲ್ಲಿ ಹೇಳಲಾಗಿದೆ. ಜರ್ಮನಿಯನ್ನು ಟ್ರಾನ್ಸ್ ಸಂಸ್ಕೃತಿಯ ಜನ್ಮಸ್ಥಳವಾಗಿ ಅನೇಕ ಬಾರಿ ಉಲ್ಲೇಖಿಸಲಾಗಿದೆ. ಈ ಪ್ರಕಾರದ ಬಹಳ ಹಿಂದಿನ ಪಥನಿರ್ಮಾಪಕರಲ್ಲಿ ಜ್ಯಾಮ್ ಎಲ್ಮಾರ್, ಆಲಿವರ್ ಲೀಬ್, ಹಾಗೂ ಸ್ವೆನ್ ವಾಥ್ ಸೇರಿದ್ದು, ಅನೇಕ ಉಪನಾಮಗಳ ಅಡಿಯಲ್ಲಿ ಹಲವಾರು ಧ್ವನಿಪಥಗಳನ್ನು ಇವರೆಲ್ಲ ನಿರ್ಮಿಸಿದ್ದಾರೆ. ಐ Q, ಹಾರ್ತ್ಹೌಸ್, ರೈಸಿಂಗ್ ಹೈ ರೆಕಾರ್ಡ್ಸ್, FAX +49-69/450464 ಮತ್ತು MFS ರೆಕಾರ್ಡ್ಸ್ನಂಥ ಟ್ರಾನ್ಸ್ ಹಣೆಪಟ್ಟಿ ಹೊತ್ತ ಧ್ವನಿಮುದ್ರಿಕೆಗಳು ಫ್ರಾಂಕ್ಫರ್ಟ್ ಮೂಲದವಾಗಿದ್ದವು. ಚರ್ಚಾಯೋಗ್ಯವಾದ ರೀತಿಯಲ್ಲಿ ಟೆಕ್ನೊ ಸಂಗೀತ ಮತ್ತು ಹೌಸ್ ಸಂಗೀತದ ಒಂದು ಬೆರಕೆ ಸಂಗೀತವಾಗಿದ್ದ ಹಿಂದಿನ ಟ್ರಾನ್ಸ್ ಸಂಗೀತವು, ಲಯಗತಿ ಹಾಗೂ ಲಯದ ಸ್ವರೂಪಗಳ ಪರಿಭಾಷೆಯಲ್ಲಿ ಟೆಕ್ನೊ ಸಂಗೀತದೊಂದಿಗೆ ಬಹುಪಾಲನ್ನು ಹಂಚಿಕೊಂಡಿತಾದರೂ, ಇಂಪಾದ ಸ್ವರವನ್ನುಂಟುಮಾಡುವ ಹೆಚ್ಚಿನ ಅಧಿಸ್ವರಗಳನ್ನೂ ಅದು ಸೇರಿಸಿತು. ಅಷ್ಟೇ ಅಲ್ಲ, ಹೌಸ್ ಸಂಗೀತವು ಮಾಡಿದ ರೀತಿಯಲ್ಲಿ ಈ ಹಾಡುಗಳು "ನೆಗೆದಾಡಿಕೊಂಡು ಸುತ್ತಲಿಲ್ಲ" ಮತ್ತು ಬಡಿತದ ಸ್ವರೂಪದಲ್ಲಿ ಊಹಿಸಿ ಹೇಳಲಾಗದ ಬದಲಾಯಿಸುವಿಕೆಗಳನ್ನು ಅವು ಅನೇಕಬಾರಿ ಹೊಂದಿದ್ದವು. ಟ್ರಾನ್ಸ್ನ ಈ ಮುಂಚಿನ ಸ್ವರೂಪಗಳನ್ನು ಈಗ ಸಾಂಪ್ರದಾಯಿಕ ಟ್ರಾನ್ಸ್ ಎಂಬುದಾಗಿ ಉಲ್ಲೇಖಿಸಲಾಗುತ್ತದೆ ಮತ್ತು ನಂತರ ಅನುಸರಿಸಿಕೊಂಡು ಬರಲಿದ್ದ ಹೆಚ್ಚು ನರ್ತಿಸುವಂತೆ ಮಾಡಬಲ್ಲ ಟ್ರಾನ್ಸ್ಗಿಂತ ಇವು ಹೆಚ್ಚು ಸುದೀರ್ಘವಾಗಿದ್ದವು ಹಾಗೂ ಹೆಚ್ಚು ಅಮೂರ್ತವಾಗಿದ್ದವು.
೧೯೯೦ರ ದಶಕದ ಮಧ್ಯದ ವೇಳೆಗೆ ಟ್ರಾನ್ಸ್, ಅದರಲ್ಲೂ ನಿರ್ದಿಷ್ಟವಾಗಿ ಪ್ರಗತಿಶೀಲ ಟ್ರಾನ್ಸ್ ಪ್ರಕಾರವು ನೃತ್ಯ ಸಂಗೀತದ ಪ್ರಭಾವೀ ಪ್ರಕಾರಗಳಲ್ಲಿ ಒಂದಾಗಿ ವ್ಯಾಪಾರೀ ಸ್ವರೂಪದಲ್ಲಿ ಹೊರಹೊಮ್ಮಿತ್ತು. ಒಂದು ರೀತಿಯಲ್ಲಿ ಹೇಳಬೇಕೆಂದರೆ, ಆಸಿಡ್ ಹೌಸ್ನಿಂದ ಪ್ರೋಗ್ರೆಸಿವ್ ಹೌಸ್ ಹೊರಹೊಮ್ಮಿದ್ದ ರೀತಿಯಲ್ಲಿಯೇ ಆಸಿಡ್ ಟ್ರಾನ್ಸ್ನಿಂದ ಪ್ರಗತಿಶೀಲ ಟ್ರಾನ್ಸ್ ಹೊರಹೊಮ್ಮಿದಂತಾಗಿತ್ತು. ಸ್ತುತಿಗೀತೆಯ ಮಂದ್ರಸ್ಥಾಯಿಗಳ ಹಾಗೂ ಪ್ರಮುಖ ಮಧುರ ಶೈಲಿಗಳ ಮೇಲೆ ಹೆಚ್ಚು ಗಮನಹರಿಸುವ ಮೂಲಕ, ಸಮ್ಮೋಹಕ, ಪುನರಾವರ್ತಿಸುವ, ಸ್ವರಗುಂಫನ ಮಾಡಿದ ಅನಲಾಗ್ ಸಿಂಥ್ ಶೈಲಿಗಳು ಹಾಗೂ ಅಂತರದ ಮೆಲುನಡಗೆಯ ಶಬ್ದಗಳಿಂದ ದೂರಸರಿಯುವ ಮೂಲಕ, ಆಧುನಿಕ ಟ್ರಾನ್ಸ್ ಸಂಗೀತದ ಬದಲಾಯಿಸಲಾಗದ ಮೂಲಭೂತ ಸೂತ್ರವನ್ನು ಪ್ರಗತಿಶೀಲ ಟ್ರಾನ್ಸ್ ಸಂಗೀತವು ನೆಲೆಗೊಳಿಸಿದೆ. ಜನಪ್ರಿಯ ಅಂಶಗಳು ಮತ್ತು ಸ್ತುತಿಗೀತೆಯ ಮೆಲುನಡಗೆಯ ಶಬ್ದಗಳು ಹೆಚ್ಚು ವ್ಯಾಪಕವಾಗಿ ವಿಸ್ತರಿಸಿದವು.
ಸಂಗೀತ ಸಂಯೋಜನೆಗಳಲ್ಲಿ ಹೆಚ್ಚಿನ ಬದಲಾವಣೆಗಳ ಸೇರ್ಪಡೆಯಾಗುವುದು ಮುಂದುವರಿಯಿತು (ಇದಕ್ಕೆ ಪ್ರಗತಿಶೀಲ ರಚನೆಗಳು ಎಂದೂ ಹೆಸರು), ಕೆಲವೊಮ್ಮೆ (BTಯು ಆಗಿಂದಾಗ್ಗೆ ಮಾಡುವಂತೆ) ತ್ರಿಸ್ವರ-ಸ್ವರಖಂಡದಲ್ಲಿ ಸಂಯೋಜನೆಗಳು ನಡೆದವು. ಈ ನಡುವೆ, ಉನ್ನತಿಗೇರಿಸುವ ಟ್ರಾನ್ಸ್ ಎಂದು ಸಾಮಾನ್ಯವಾಗಿ ಕರೆಯಲ್ಪಡುತ್ತಿದ್ದ ಒಂದು ವಿಭಿನ್ನ ಬಗೆಯು ಜನಪ್ರಿಯವಾಗುತ್ತಿತ್ತು. ದೀರ್ಘವಾಗಿದ್ದ ಮತ್ತು ಹೆಚ್ಚು ಉತ್ಪ್ರೇಕ್ಷಿಸಲ್ಪಟ್ಟಿದ್ದ ಬೆಳವಣಿಗೆಗಳು ಮತ್ತು ವಿರಾಮಗಳನ್ನು ಉನ್ನತಿಗೇರಿಸುವ ಟ್ರಾನ್ಸ್ ಹೊಂದಿತ್ತು. ಹೆಚ್ಚು ಸುಲಭವಾಗಿ ಗುರುತಿಸಬಹುದಾದ ರಾಗಗಳು ಹಾಗೂ ಸ್ತುತಿಗೀತೆಗಳೊಂದಿಗೆ, ಇದು ಪ್ರಗತಿಶೀಲ ಟ್ರಾನ್ಸ್ಗಿಂತ ಹೆಚ್ಚು ನೇರವಾಗಿತ್ತು ಹಾಗೂ ಕಡಿಮೆ ಸೂಕ್ಷ್ಮವಾಗಿತ್ತು. ಒಂದು ಪೀಠಿಕೆ, ಸ್ಥಿರವಾದ ರಚನಾ ವಿನ್ಯಾಸ, ಒಂದು ವಿರಾಮ, ಮತ್ತು ಆಮೇಲೆ "ನಿರ್ಮಿಸುವ-ವಿರಾಮದ-ಸ್ತುತಿಗೀತೆಯ" ಸ್ವರೂಪ ಎಂದು ಸೂಕ್ತವಾಗಿ ಕರೆಯಲ್ಪಟ್ಟ ಒಂದು ಸ್ತುತಿಗೀತೆಯನ್ನು ಒಳಗೊಳ್ಳುವ ಮೂಲಕ, ಇಂಥ ಅನೇಕ ಟ್ರಾನ್ಸ್ ಧ್ವನಿಪಥಗಳು ಒಂದು ಸಿದ್ಧ ಸ್ವರೂಪವನ್ನು ಅನುಸರಿಸಿದವು. ಸಾಮಾನ್ಯವಾಗಿ ಹೆಣ್ಣುದನಿಯಲ್ಲಿರುತ್ತಿದ್ದ ಉನ್ನತಿಗೇರಿಸುವ ಗಾಯನ ಭಾಗಗಳು ಕೂಡಾ, ಹೆಚ್ಚುಹೆಚ್ಚು ವ್ಯಾಪಕವಾಗಿ ಹರಡುತ್ತಿದ್ದಂತೆ ಟ್ರಾನ್ಸ್ನ ಜನಪ್ರಿಯ ಆಕರ್ಷಣೆಗೆ ತಮ್ಮ ಕೊಡುಗೆಯನ್ನು ಸೇರಿಸುತ್ತಲೇ ಹೋದವು.
ಅಗಾಧವಾಗಿ ಜನಪ್ರಿಯಗೊಂಡ ಟ್ರಾನ್ಸ್ ಸಂಗೀತವು, ಹೌಸ್ ಸಂಗೀತಕ್ಕಿಂತ ಸ್ಫುಟವಾದ, ಡ್ರಮ್ ಮತ್ತು ಬೇಸ್ ಸಂಗೀತಕ್ಕಿಂತ ಹೆಚ್ಚು ಹಿತವಾದ, ಮತ್ತು ಟೆಕ್ನೊ ಸಂಗೀತಕ್ಕಿಂತ ಹೆಚ್ಚು ಇಂಪಾದ ಸ್ವರವನ್ನುಂಟುಮಾಡುವ ಒಂದು ಜಾಗವನ್ನು ಭರ್ತಿಮಾಡುವಲ್ಲಿ ತನ್ನನ್ನು ಕಂಡುಕೊಂಡಿತು. ಇದರಿಂದಾಗಿ ಒಂದು ವಿಶಾಲವ್ಯಾಪ್ತಿಯ ಪ್ರೇಕ್ಷಕರನ್ನು ತಲುಪಲು ಅದಕ್ಕೆ ಸಾಧ್ಯವಾಯಿತು. ಪಾಲ್ ವ್ಯಾನ್ ಡಿಕ್, ಆರ್ಮಿನ್ ವ್ಯಾನ್ ಬ್ಯೂರೆನ್, ಟಿಯೆಸ್ಟೊ, ರಾಬರ್ಟ್ ಮೈಲ್ಸ್, ಎಬೌ & ಬಿಯಾಂಡ್, ಡ್ಯಾರೆನ್ ಟೇಟ್, ಫೆರ್ರಿ ಕಾರ್ಸ್ಟನ್, ಜೋಹಾನ್ ಗೀಲೆನ್, ATB, ಪಾಲ್ ಓಕೆನ್ಫೋಲ್ಡ್, ಪಲ್ಸರ್, ಮತ್ತು ಥರ್ಡ್ ಎಲಿಮೆಂಟ್ನಂಥ ಕಲಾವಿದರು ತಮ್ಮೊಂದಿಗೆ ಭಾವಾತ್ಮಕ, "ಮಹಾಕಾವ್ಯದ" ಶೈಲಿಯ ಅನುಭೂತಿಯನ್ನು ತರುವುದರೊಂದಿಗೆ ಪ್ರಧಾನ ಅಥವಾ ಆದ್ಯಸೃಷ್ಟಿಯ ನಿರ್ಮಾಪಕರಾಗಿ ಮತ್ತು ಮರುಮಿಶ್ರಿತ ಧ್ವನಿಮುದ್ರಣಕಾರರಾಗಿ ಮುಂಚೂಣಿಗೆ ಬಂದರು. ಈ ನಿರ್ಮಾಪಕರ ಪೈಕಿ ಅನೇಕರು ತಮ್ಮದೇ ಸ್ವಂತದ ಸಂಗೀತ ನಿರ್ಮಾಣಗಳನ್ನಷ್ಟೇ ಅಲ್ಲದೇ ಇತರ ಟ್ರಾನ್ಸ್ DJಗಳಿಂದ ನಿರ್ಮಿಸಲ್ಪಟ್ಟ ಸಂಗೀತಗಳನ್ನು ಕ್ಲಬ್ಬುಗಳಲ್ಲಿ ನುಡಿಸುವ ಮೂಲಕ DJಗಳಾಗಿಯೂ ಕೆಲಸ ಮಾಡಿದರು. ೧೯೯೦ರ ದಶಕದ ಅಂತ್ಯದ ವೇಳೆಗೆ, ಟ್ರಾನ್ಸ್ ಸಂಗೀತವು ವ್ಯಾಪಾರೀ ದೃಷ್ಟಿಯಲ್ಲಿ ದೊಡ್ಡದಾದ ರೀತಿಯಲ್ಲಿ ಉಳಿದುಕೊಂಡಿತಾದರೂ, ಒಂದು ಅತ್ಯಂತ ಭಿನ್ನವಾದ ಪ್ರಕಾರದೊಳಗೆ ಪ್ರಭಾವಬೀರತೊಡಗಿತ್ತು. ೧೯೯೦ರ ದಶಕದ ಆರಂಭದಲ್ಲಿ ಹಾಗೂ ಮಧ್ಯಭಾಗದಲ್ಲಿ ಟ್ರಾನ್ಸ್ ಧ್ವನಿಯನ್ನು ಸೃಷ್ಟಿಸುವಲ್ಲಿ ನೆರವಾದ ಕಲಾವಿದರ ಪೈಕಿ ಕೆಲವೊಬ್ಬರು ದಶಕದ ಅಂತ್ಯದ ವೇಳೆಗೆ, ಹೆಚ್ಚು ಪ್ರಾಯೋಗಿಕವಾದ ಧ್ವನಿಗಳ ಪರವಾಗಿ ಒಲವು ಮೂಡಿಸಿಕೊಂಡು ಟ್ರಾನ್ಸ್ ಪ್ರಕಾರವನ್ನು ಸಂಪೂರ್ಣವಾಗಿ ತ್ಯಜಿಸಿದರು. ನಿರ್ದಿಷ್ಟವಾಗಿ ಇಲ್ಲಿನ ಇಂಥ ಪ್ರಸಿದ್ಧ ಕಲಾವಿದರಲ್ಲಿ ಪ್ಯಾಸ್ಕಲ್ F.E.O.S. ಹಾಗೂ ಆಲಿವರ್ ಲೀಬ್ ಸೇರಿದ್ದಾರೆ.
ಒಂದು ಪರ್ಯಾಯ ವಿಕಸನವಾಗಿ, ಡ್ರಮ್'ಎನ್'ಬೇಸ್ನಂಥ ಇತರ ಪ್ರಕಾರಗಳೊಂದಿಗೆ ಟ್ರಾನ್ಸ್ ಸಂಗೀತವನ್ನು ಬೆಸೆಯಲು ಕೆಲವೊಂದು ಕಲಾವಿದರು ಪ್ರಯತ್ನಗಳನ್ನು ನಡೆಸಿದ್ದಾರೆ. ಇತರರು ಹೆಚ್ಚು ಕನಿಷ್ಠೀಯತಾವಾದಿ ಧ್ವನಿಗಳೊಂದಿಗೆ ಪ್ರಯೋಗಗಳನ್ನು ನಡೆಸಿದ್ದಾರೆ. ಇದರಿಂದ ನಿರಾಶೆಗೊಂಡ ಟ್ರಾನ್ಸ್ ಸಂಗೀತದ ಪರಮೋಚ್ಚ ಆವೃತ್ತಿಗಳು ಮಣಿಯದ ಮತ್ತು ಭಯಾನಕವಾದ ಪ್ರಕಾರಗಳೊಂದಿಗೆ ಅತಿಕ್ರಮಿಸುವ "ಕಠಿಣ ಟ್ರಾನ್ಸ್" ಅಥವಾ "ಕಠಿಣಶೈಲಿ"ಯ ಗೌಣಪ್ರಕಾರಗಳಿಗೆ ಹರಟೆಶೈಲಿಯ ಮೂಲಕ ವಿಕೃತಿಹೊಂದಿವೆ.
ಜುನೋ ಡೌನ್ಲೋಡ್, ಮತ್ತು ಬೀಟ್ಪೋರ್ಟ್ನಂಥವುಗಳೂ ಸೇರಿದಂತೆ ಕಾನೂನುಬದ್ಧವಾಗಿರುವ ಸಂಗೀತದ ಡೌನ್ಲೋಡ್ ತಾಣಗಳ ಬಾಹುಳ್ಯವು ಕಂಡುಬಂದ ಹಿನ್ನೆಲೆಯಲ್ಲಿ, ತನ್ನ ಮೂಲಗಳಿಗೆ ಅತ್ಯಂತ ನಿಷ್ಠವಾಗಿರುವ ಟ್ರಾನ್ಸ್ ಸಂಗೀತವು ಅಂತರ್ಜಾಲ ಮಾಧ್ಯಮದ ಮುಖಾಂತರ ತನ್ನ ತಲೆ ಮೇಲಕ್ಕೆತ್ತಲು ಶುರುಮಾಡಿದೆ. ಇದರಿಂದಾಗಿ ಉತ್ಸಾಹಿಗಳು ವಾರಕ್ಕೊಮ್ಮೆ ಪರಿಷ್ಕರಿಸಲ್ಪಡುವ mp೩ಗಳು ಹಾಗೂ ಸಂಕ್ಷೇಪಿಸದ wav ಸ್ವರೂಪದ ಶ್ರವಣ ಕಡತಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಾಗಿದ್ದು, ಅವರು ಇದಕ್ಕಾಗಿ ಕಷ್ಟಪಟ್ಟು ವಿನೈಲ್ ಜಾಹೀರಾತುಗಳನ್ನು ಹುಡುಕಿಕೊಂಡು ಹೋಗುವುದು ತಪ್ಪಿದಂತಾಗಿದೆ. ಇದರ ಪರಿಣಾಮವಾಗಿ, ವಾಣಿಜ್ಯೋದ್ದೇಶದ ಹಾಗೂ ಪ್ರಗತಿಶೀಲ ಟ್ರಾನ್ಸ್ಗಳೆರಡೂ ಈಗ, ಮಾರಾಟ-ಕೋಷ್ಟಕದ ಮಿತಿಗೊಳಪಡದಿದ್ದರೂ, ಹೆಚ್ಚಿನದಾಗಿರುವ ಒಂದು ಜಾಗತಿಕ ಹಾಜರಿಯನ್ನು ಹೊಂದಿವೆ. ಇದಕ್ಕೆ ಹಲವಾರು ದೊಡ್ಡ-ಆಕರ್ಷಣೆಯ ಕಲಾವಿದರು ಬೆಂಬಲ ನೀಡಿದ್ದಾರೆ. ಅವರೆಂದರೆ: ಸಶಾ, ಟಿಯೆಸ್ಟೊ, ATB, ಮಾರ್ಕಸ್ ಷುಲ್ಜ್, ಆರ್ಮಿನ್ ವ್ಯಾನ್ ಬ್ಯೂರೆನ್, BT, ಪಾಲ್ ವ್ಯಾನ್ ಡಿಕ್, ಫೆರ್ರಿ ಕಾರ್ಸ್ಟನ್, ಎಬೌ & ಬಿಯಾಂಡ್, ಬ್ಲ್ಯೂ ಸ್ಟೋನ್, ಪಾಲ್ ಓಕೆನ್ಫೋಲ್ಡ್, ಷಿಲ್ಲರ್, ಸೋಲಾರ್ಸ್ಟೋನ್ ಮತ್ತು USನ ಕ್ರಿಸ್ಟೋಫರ್ ಲಾರೆನ್ಸ್ ಹಾಗೂ ಜಾರ್ಜ್ ಅಕೋಸ್ಟಾ. ಈ ಎಲ್ಲಾ ಕಲಾವಿದರೂ ತಮ್ಮ ಗೌರವಪೂರ್ವಕ ಸ್ಥಾನಗಳನ್ನು ಕಾಯ್ದುಕೊಳ್ಳುವಲ್ಲಿ ಸಮರ್ಥರಾಗಿದ್ದರೆ, ಮುಂಬರಲಿರುವ ನಿರ್ಮಾಪಕರು ಹಾಗೂ DJಗಳು ಕೂಡಾ ಸಾರ್ವಜನಿಕ ಕಾರ್ಯಕ್ಷೇತ್ರದೊಳಗೆ ನುಗ್ಗಬಹುದಾಗಿದೆ.
ಒಂದು ೪/೪ರ ತಾಳ ಸಂಕೇತ, ೧೩೦ರಿಂದ ೧೫೫ರಷ್ಟು BPMವರೆಗಿನ ಒಂದು ಲಯಗತಿ, ೩೨ ತಾಳಶ್ರೇಣಿಯ ಗೀತಾಂಗ ಭಾಗಗಳನ್ನು ಟ್ರಾನ್ಸ್ ಸಂಗೀತವು ಸಾಮಾನ್ಯವಾಗಿ ಬಳಸಿಕೊಳ್ಳುತ್ತದೆ, ಮತ್ತು ಇದು ಹೌಸ್ ಸಂಗೀತಕ್ಕಿಂತ ಕೊಂಚಮಟ್ಟಿಗೆ ವೇಗವಾಗಿದ್ದರೂ, ಪ್ರಜ್ಞಾವಿಸ್ತಾರಕ ಟ್ರಾನ್ಸ್ ಸಂಗೀತದಷ್ಟು ವೇಗವಾಗಿಲ್ಲ. ಪ್ರಾಸಂಗಿಕವಾಗಿ, ಟ್ರಾನ್ಸ್ ಸಂಗೀತವು ಕೆಲವೊಮ್ಮೆ ವೇಗವಾಗಿರಬಹುದು ಮತ್ತು ಕೆಲವೊಮ್ಮೆ ನಿಧಾನಗತಿಯದ್ದಾಗಿರಬಹುದು. ಪ್ರತಿ ದ್ರುತತಾಳದ ಮೇಲೂ ಒಂದು ಕಿಕ್ ಡ್ರಮ್ನ್ನು ಇರಿಸಲಾಗುತ್ತದೆ ಮತ್ತು ಲಘುತಾಳದ ಮೇಲೆ ಒಂದು ಎಂದಿನ ತೆರೆದ ಹೈ-ಹ್ಯಾಟ್ನ್ನು ಅನೇಕ ವೇಳೆ ಇರಿಸಲಾಗುತ್ತದೆ. ತಾಳವಾದ್ಯ ಸಂಬಂಧಿಯಾಗಿರುವ ಕೆಲವೊಂದು ಸರಳವಾದ ಹೆಚ್ಚುವರಿ ಅಂಶಗಳನ್ನು ಸಾಮಾನ್ಯವಾಗಿ ಸೇರಿಸಲಾಗುತ್ತದೆ, ಮತ್ತು ಪ್ರಮುಖ ಸ್ಥಾಯಿ ವ್ಯತ್ಯಾಸಗಳು, ರಚನಾ ಶೈಲಿಗಳು ಅಥವಾ ಸಾರೋಕ್ತಿಗಳು ದೀರ್ಘವಾಗಿರುವ 'ನಿರಂತರ ಭೇರಿ ಬಾಜಣೆಗಳಿಂದ' ಅನೇಕ ವೇಳೆ ಪೂರ್ವಭಾವಿಯಾಗಿ ಸೂಚಿಸಲ್ಪಡುತ್ತವೆ- ಒಂದು ಕೃತಿಭಾಗ ಅಥವಾ ಗೀತಾಂಗ ಭಾಗದ ಅಂತ್ಯದ ವೇಳೆಗೆ ನಾದದ ಪ್ರಮಾಣದಲ್ಲಿ ನಿರ್ಮಾಣಗೊಳ್ಳುವ, ಸಮಾನ ಅಂತರದ ಇತ್ತಲೆ ತಮಟೆಯ ಬಡಿತಗಳ ಒಂದು ಕ್ಷಿಪ್ರವಾದ ಅನುಕ್ರಮ ಇದಾಗಿದೆ.
ಸಂಗೀತ ಸಂಯೋಜಕ ವಾದ್ಯಗಳು ಬಹುಪಾಲು ಟ್ರಾನ್ಸ್ ಧ್ವನಿಪಥಗಳ ಪ್ರಮುಖ ಅಂಶಗಳಾಗಿ ಪಾತ್ರವಹಿಸುತ್ತವೆ. ಬೆರಳಿನಿಂದ ಮೀಟಿ ನುಡಿಸಿದ ಚಿಕ್ಕ ಭಾಗಗಳಿಗಾಗಿ ಮತ್ತು ದೀರ್ಘವಾದ, ವಿಸ್ತಾರವಾದ ತಂತಿಯ ಧ್ವನಿಗಳಿಗಾಗಿ ಎರಡಕ್ಕೂ ಬಳಸಲ್ಪಡುವ ಸರಳವಾದ, ಉಬ್ಬರವಿಳಿತದ ಸ್ವರೂಪವನ್ನು ಆಧರಿಸಿದ ಧ್ವನಿಗಳು ಇಲ್ಲಿ ಬಳಸಲ್ಪಡುತ್ತವೆ. ಇಲೆಕ್ಟ್ರಾನಿಕ್ ಸಂಗೀತದ ಇತರ ಪ್ರಕಾರಗಳೊಂದಿಗೆ ಇರುವಂತೆ, ಟ್ರಾನ್ಸ್ ಸಂಗೀತ ಪ್ರಕಾರದಲ್ಲಿ ರೋಲ್ಯಾಂಡ್ TR-808, TR-909, ಮತ್ತು TB-303 ಮೊದಲಾದವು ಮುಖ್ಯವಾದ ಸಂಗೀತ ಸಂಯೋಜಕ ವಾದ್ಯಗಳಾಗಿವೆ. ಇವುಗಳ ಪೈಕಿ TB-೩೦೩ ವಾದ್ಯವು "ಆಸಿಡ್" ಧ್ವನಿ ಎಂದು ಕರೆಯಲಾಗುವ "ತೀಕ್ಷ್ಣವಾದ" ಧ್ವನಿಯ ಮೂಲವಾಗಿದೆ. ಸಂಗೀತ ಸಂಯೋಜಕ ವಾದ್ಯದ ಹಲವಾರು ಧ್ವನಿಗಳೂ ಈ ವ್ಯವಸ್ಥೆಯೊಳಗಿದ್ದು, ಅವು ಹೆಚ್ಚೂಕಮ್ಮಿ ಸಂಪೂರ್ಣವಾಗಿ ತಮ್ಮ ಪ್ರಕಾರಕ್ಕೆ ವಿಶಿಷ್ಟವೆನಿಸಿವೆ. "ಸೂಪರ್ಸಾ" ಎಂಬುದು ಈ ಧ್ವನಿಗಳ ಪೈಕಿ ಒಂದಾಗಿದ್ದು, ಈ ಅಲೆಯಸ್ವರೂಪದ ಧ್ವನಿಗೆ ರೋಲ್ಯಾಂಡ್ JP-8000, ನೊವೇಷನ್ ಸೂಪರ್ನೋವಾ, ಮತ್ತು ಕೊರ್ಗ್ MS2000ನಂಥ ಸಾಂಪ್ರದಾಯಿಕ ಟ್ರಾನ್ಸ್ ಸಂಗೀತದ ಸಂಯೋಜಕ ವಾದ್ಯಗಳು ಪ್ರಸಿದ್ಧಿಯನ್ನು ತಂದಿತ್ತಿವೆ. ಪ್ರಮುಖ ಧ್ವನಿಗಳನ್ನು ಸೃಷ್ಟಿಸುವಲ್ಲಿ "ಗೇಟಿಂಗ್" ಎಂದು ಕರೆಯಲಾಗುವ ಕೌಶಲವೊಂದನ್ನು ಅನೇಕವೇಳೆ ಬಳಸಿಕೊಳ್ಳಲಾಗುತ್ತದೆ (ಒಂದು ತೊದಲಿಸಲ್ಪಟ್ಟ, ತಡೆದು ತಡೆದು ಆಡಿದ ಧ್ವನಿಯನ್ನು ಸೃಷ್ಟಿಸಲು ತುಣುಕಿನೊಂದಿಗಿನ ಲಯದಲ್ಲಿ ನಾದದ ಪ್ರಮಾಣವನ್ನು ಕ್ಷಿಪ್ರವಾಗಿ ಮೇಲಕ್ಕೆ ಮತ್ತು ಕೆಳಕ್ಕೆ ತಿರುಗಿಸುವುದು). ಕ್ಷಿಪ್ರವಾದ ಸ್ವರಗುಂಫನಗಳು ಮತ್ತು ಕಿರು ಸ್ವರಶ್ರೇಣಿಗಳು ಸಾಮಾನ್ಯ ಲಕ್ಷಣಗಳಾಗಿವೆ. ಟ್ರಾನ್ಸ್ ಧ್ವನಿಪಥಗಳು ಒಂದು ಪ್ರಮುಖವಾದ "ಕೊಕ್ಕೆಗೆರೆ"ಯ ಮಾಧುರ್ಯವನ್ನು ಅನೇಕ ವೇಳೆ ಬಳಸುತ್ತವೆ. ಸಂಪೂರ್ಣ ಹಾಡಿನಾದ್ಯಂತ ಓಡುವ ಇದು, ೨ ತಾಳಶ್ರೇಣಿಗಳು ಮತ್ತು ಹಲವಾರು ಲಯರೇಖೆಗಳ ನಡುವಿನ ಎಲ್ಲಾದರೂ ಮಧ್ಯೆ ಮಧ್ಯೆ ಪುನರಾವರ್ತನೆಯಾಗುತ್ತದೆ.
ಅನೇಕ ಟ್ರಾನ್ಸ್ ಧ್ವನಿಪಥಗಳು ಗಾಯನ ಭಾಗಗಳನ್ನೇ ಹೊಂದಿಲ್ಲದಿರುವ ಸಂದರ್ಭದಲ್ಲಿ, ಇತರ ಧ್ವನಿಪಥಗಳು ಗಾಯನ ಭಾಗಗಳ ಮೇಲೆ ಅಧಿಕವಾಗಿ ನೆಚ್ಚಿಕೆಯನ್ನು ಇಟ್ಟುಕೊಳ್ಳುತ್ತವೆ, ಮತ್ತು ಹೀಗೆ ಒಂದು ಉಪ-ಪ್ರಕಾರವು ಬೆಳೆದುಬಂದಿದೆ. ಸಂಗೀತ ಸೃಷ್ಟಿಯ ಧ್ವನಿ ಮತ್ತು ಗುಣಮಟ್ಟಗಳು ಲಭ್ಯವಿರುವ ತಂತ್ರಜ್ಞಾನದ ಮೇಲೆ ಅತೀವವಾಗಿ ಅವಲಂಬಿತವಾಗಿರುತ್ತವೆ. ಅನೇಕ ನಿರ್ಮಾಪಕರು ಹಾಗೂ ಉತ್ಸಾಹಿಗಳ ಹೃದಯಗಳಲ್ಲಿ ವಿಂಟೇಜ್ ಅನಲಾಗ್ ಉಪಕರಣವು ಈಗಲೂ ಒಂದು ಸ್ಥಾನವನ್ನು ಪಡೆದುಕೊಂಡಿದೆ. ಮೂಗ್, ರೋಲ್ಯಾಂಡ್ ಮತ್ತು ಒಬೆರ್ಹೀಮ್ನಂಥ ಹೆಸರುಗಳೊಂದಿಗೆ ಅದು ಟ್ರಾನ್ಸ್ ಧ್ವನಿಯ ಫಲಕದಲ್ಲಿ ಒಂದುಗೂಡಿಸುತ್ತದೆ. ಆದಾಗ್ಯೂ, ಮುಖ್ಯವಾಹಿನಿಯಲ್ಲಿನ ಡಿಜಿಟಲ್ ತಂತ್ರಜ್ಞಾನದ ಲಭ್ಯತೆಯು ನಿರ್ಮಾಪಕರ ಒಂದು ಸಮಗ್ರ ಹೊಸ ಸಮೂಹವು ಹೊರಹೊಮ್ಮುವಲ್ಲಿ ಅವಕಾಶ ಕಲ್ಪಿಸಿದೆ. ಏಕೆಂದರೆ, ಉನ್ನತ ಸ್ತರದ ಡಿಜಿಟಲ್ (ಅಥವಾ ಅನಲಾಗ್ ಮಾದರಿಯ) ಸಂಗೀತ ಸಂಯೋಜಕ ವಾದ್ಯಗಳು ಸಾವಿರಾರು US ಡಾಲರುಗಳಷ್ಟು ಬೆಲೆಯನ್ನು ಹೊಂದಿರುವ ಸಮಯದಲ್ಲಿ, ಅಪ್ಪಟವಾದ ವಿಂಟೇಜ್ ಅನಲಾಗ್ ಸಂಗೀತ ಸಂಯೋಜಕ ವಾದ್ಯಗಳಿಗಿರುವ ಹೆಚ್ಚಿನ ಬೇಡಿಕೆ ಮತ್ತು ಒಂದು ಅವುಗಳ ಸಣ್ಣ ಪೂರೈಕೆಯು ಅವು ಅಧಿಕವಾಗಿ ವೆಚ್ಚದಾಯಕವಾಗಿರುವಂತೆ ಮಾಡುತ್ತವೆ.
ಸಂಗೀತ ಸಂಯೋಜಕ ವಾದ್ಯ ಧ್ವನಿಗಳು, ಗಾಯನ ಭಾಗಗಳು ಮತ್ತು ಹಲವು ವೇಳೆ ತಾಳವಾದ್ಯ ವಿಭಾಗದ ಭಾಗಗಳ ಮೇಲಿನ ನಾದ ಪ್ರತಿಫಲನ ಹಾಗೂ ವಿಳಂಬಿತ ಕಾಲದ ಪರಿಣಾಮಗಳಿಂದ ಟ್ರಾನ್ಸ್ ಸಂಗೀತದ ಧ್ವನಿಮುದ್ರಿಕೆಗಳು ಅನೇಕವೇಳೆ ಅಧಿಕವಾಗಿ ತುಂಬಿಕೊಂಡಿರುತ್ತವೆ. ಟ್ರಾನ್ಸ್ ಸಂಗೀತ ಪ್ರಕಾರದಲ್ಲಿ ಉತ್ತಮ ಗುಣಮಟ್ಟವನ್ನು ಸಾಧಿಸುವುದಕ್ಕಾಗಿ ಟ್ರಾನ್ಸ್ ಸಂಗೀತದ ನಿರ್ಮಾಪಕರು ಎದುರು ನೋಡುವಂತೆ ಮಾಡುವ ವಿಶಾಲ ಅವಕಾಶದ ಪ್ರಜ್ಞೆಯನ್ನು ಇದು ಧ್ವನಿಪಥಗಳಿಗೆ ಒದಗಿಸುತ್ತದೆ. ಫ್ಲ್ಯಾಂಜರ್ಗಳು, ಫೇಸರ್ಗಳು ಮತ್ತು ಇತರ ಪರಿಣಾಮಗಳೂ ಸಹ ಪರಮಾವಧಿಯ ಸನ್ನಿವೇಶಗಳಲ್ಲಿ ಅಥವಾ ರಾಗ ಸಂಯೋಜನೆಗಳಲ್ಲಿ ಬಳಸಲ್ಪಡುತ್ತವೆ - ಟ್ರಾನ್ಸ್ ಸಂಗೀತದಲ್ಲಿ ವಾಸ್ತವಿಕ-ಪ್ರಪಂಚದ ಯಾವುದೇ ಸಂಗೀತವಾದ್ಯವನ್ನು ಧ್ವನಿಗಳು ಹೋಲಬೇಕು ಎಂದೇನೂ ಇಲ್ಲವಾದ್ದರಿಂದ, ನಿರ್ಮಾಪಕರು ಕಲ್ಪನೆಯನ್ನು ಸ್ವೇಚ್ಛೆಯಾಗಿ ಹರಿಯಗೊಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.
ಅನೇಕ ನೃತ್ಯ ಸಂಗೀತದ ಧ್ವನಿಪಥಗಳಲ್ಲಿರುವಂತೆ, ಟ್ರಾನ್ಸ್ ಸಂಗೀತದ ಧ್ವನಿಪಥಗಳು ಸಾಮಾನ್ಯವಾಗಿ ವಿರಳವಾದ ಪರಿಚಯಗಳು ಮತ್ತು ಬೆನ್ನುಡಿಗಳೊಂದಿಗೆ ರೂಪಿಸಲ್ಪಟ್ಟಿರುತ್ತವೆ. ಹೆಚ್ಚು ಸರಾಗವಾಗಿ ಅವುಗಳನ್ನು ಹದವಾಗಿ ಒಟ್ಟಾಗಿ ಮಿಶ್ರಗೊಳಿಸುವಲ್ಲಿ DJಯನ್ನು ಸಮರ್ಥನನ್ನಾಗಿಸಲು ಈ ವಿಧಾನವನ್ನು ಬಳಸಲಾಗುತ್ತದೆ. ಪರಿಚಯಗಳು ಮತ್ತು ಬೆನ್ನುಡಿಗಳ ಅವಧಿಯಲ್ಲಿ "ಬಿಲ್ಡ್ ಅಪ್, ಸ್ಟ್ರಿಪ್ ಡೌನ್" ಎಂಬ ಈ ವ್ಯವಸ್ಥೆಗೆ ಅಂಟಿಕೊಂಡಿರುವ ಧ್ವನಿಮುದ್ರಿಕೆಗಳು "DJ ಸ್ನೇಹಿ" ಎಂದು ಉಲ್ಲೇಖಿಸಲ್ಪಡುತ್ತವೆ. ಟ್ರಾನ್ಸ್ ಸಂಗೀತವು ಬಹುಪಾಲು ನೃತ್ಯ ಸಂಗೀತಕ್ಕಿಂತ ಇಂಪಾದ ಸ್ವರವನ್ನುಂಟುಮಾಡುವ ಮತ್ತು ಮಧುರ ಮೇಳನದ ವಿಶಿಷ್ಟತೆಯನ್ನು ಹೊಂದಿರುವುದರಿಂದ, ಮಧುರ ಮೇಳನದ ರೀತಿಯಲ್ಲಿ ಸಂಗೀತವನ್ನು ಬೆರೆಸದ DJಗಳಿಂದ ಅಪಶ್ರುತಿಯ ಅಥವಾ ಸ್ವರಮೇಳವಿಲ್ಲದ (ಅಥವಾ "ಪ್ರಧಾನ ಸ್ವರಪ್ರಸ್ತಾರದ ಘರ್ಷಣೆ" ಅಂದರೆ, ಶ್ರುತಿಯೊಂದಿಗೆ ಪರಸ್ಪರ ಹೊಂದಿಕೆಯಿಲ್ಲದಿರುವುದು) ಮಿಶ್ರಣಗಳಾಗುವುದನ್ನು ತಪ್ಪಿಸುವ ಸಲುವಾಗಿ, ಇಂಥದೊಂದು ಟ್ರಾನ್ಸ್ ವಿಶಿಷ್ಟತೆಯ ವಿಧಾನದಲ್ಲಿಯೇ ಟ್ರಾನ್ಸ್ ಧ್ವನಿಪಥಗಳನ್ನು ನಿರ್ಮಿಸುವುದು ಅತ್ಯಂತ ಮುಖ್ಯವಾಗಿದೆ.
ಟ್ರಾನ್ಸ್ ಸಂಗೀತವು ಒಂದು ಬೃಹತ್ ಸಂಖ್ಯೆಯ ಪ್ರಕಾರಗಳಾಗಿ ವಿಂಗಡಿಸಲ್ಪಟ್ಟಿದೆ. ಕಾಲಾನುಕ್ರಮದಂತೆ ಪ್ರಮುಖವಾಗಿರುವ ಪ್ರಕಾರಗಳೆಂದರೆ, ಸಾಂಪ್ರದಾಯಿಕ ಟ್ರಾನ್ಸ್, ಆಸಿಡ್ ಟ್ರಾನ್ಸ್, ಪ್ರಗತಿಶೀಲ ಟ್ರಾನ್ಸ್, ಮತ್ತು ಉನ್ನತಿಗೇರಿಸುವ ಟ್ರಾನ್ಸ್. ಉನ್ನತಿಗೇರಿಸುವ ಟ್ರಾನ್ಸ್ ಪ್ರಕಾರವು "ಸ್ತುತಿಗೀತೆಯ ಟ್ರಾನ್ಸ್", "ಮಹಾಕಾವ್ಯದ ಟ್ರಾನ್ಸ್", "ಕ್ರೀಡಾಂಗಣ ಟ್ರಾನ್ಸ್" ಅಥವಾ "ಭ್ರಾಂತಿಸುಖದಿಂದ ಕೂಡಿದ ಟ್ರಾನ್ಸ್" ಎಂಬ ಹೆಸರುಗಳಿಂದಲೂ ಚಿರಪರಿಚಿತವಾಗಿದೆ. ಯುರೋ-ಟ್ರಾನ್ಸ್ ಎಂಬ ಪ್ರಕಾರವು ಉನ್ನತಿಗೇರಿಸುವ ಟ್ರಾನ್ಸ್ ಪ್ರಕಾರದೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದ್ದು, ಅತೀವವಾಗಿ ವಾಣಿಜ್ಯೀಕರಿಸಲ್ಪಟ್ಟಿರುವ ಐರೋಪ್ಯ ನೃತ್ಯ ಸಂಗೀತದ ಒಂದು ವ್ಯಾಪಕ ವೈವಿಧ್ಯತೆಗೆ ಸಂಬಂಧಿಸಿದಂತೆ ಇದೊಂದು ಸಾರ್ವತ್ರಿಕ ಪದವಾಗಿ ಮಾರ್ಪಟ್ಟಿದೆ. ಇಲೆಕ್ಟ್ರಾನಿಕ್ ಸಂಗೀತದ ಇತರ ಪ್ರಮುಖ ಪ್ರಕಾರಗಳೊಂದಿಗೆ ಹಲವಾರು ಉಪಪ್ರಕಾರಗಳು ಹಾಯುದಾಣಗಳಾಗಿವೆ. ಉದಾಹರಣೆಗೆ, ಟೆಕ್ ಟ್ರಾನ್ಸ್ ಎಂಬುದು ಟ್ರಾನ್ಸ್ ಮತ್ತು ಟೆಕ್ನೊ ಸಂಗೀತದ ಒಂದು ಮಿಶ್ರಣವಾಗಿದೆ, ಗಾಯನ ಸ್ವರೂಪದ ಟ್ರಾನ್ಸ್ ಪ್ರಕಾರವು ಹಾಡುಗಳಿಗೆ ಗಾಯನ ಭಾಗಗಳು ಹಾಗೂ ಒಂದು ಪಾಪ್-ಶೈಲಿಯ ರಚನೆಯನ್ನು ಸೇರಿಸುತ್ತದೆ ಮತ್ತು ಪರಿವೇಷ್ಟಕ ಟ್ರಾನ್ಸ್ ಪ್ರಕಾರವು ಪರಿವೇಷ ಮತ್ತು ಟ್ರಾನ್ಸ್ನ ಒಂದು ಮಿಶ್ರಣವಾಗಿದೆ. ಸ್ಪೇನ್ನ ಇಬಿಝಾದ ದೀರ್ಘಾವಧಿ ರಜೆಯಲ್ಲಿ ವಿಶ್ರಮಿಸಿಕೊಳ್ಳುತ್ತಿರುವ ಜೀವನಶೈಲಿಯೊಂದಿಗೆ ಸಂಬಂಧವನ್ನು ಹೊಂದಿರುವ ಬೇಲಿಯಾರಿಕ್ ಲಯವು ಹಲವು ಬಾರಿ "ಇಬಿಝಾ ಟ್ರಾನ್ಸ್" ಎಂದು ಕರೆಯಲ್ಪಡುತ್ತದೆ. ಇದೇ ರೀತಿಯಲ್ಲಿ, ಕನಸಿನ ಟ್ರಾನ್ಸ್ ಪ್ರಕಾರವು ಕೆಲವೊಮ್ಮೆ "ಕನಸಿನ ಮನೆ" ಎಂದು ಕರೆಯಲ್ಪಡುತ್ತದೆ, ಹಾಗೂ ಇದು ರಾಬರ್ಟ್ ಮೈಲ್ಸ್ ಎಂಬಾತ ೯೦ರ ದಶಕದ ಮಧ್ಯಭಾಗದಲ್ಲಿ ನಿರ್ಮಿಸಿದ ಪಥದಲ್ಲಿ ಸಾಗಿದ ವಿರಮಿಸುವಿಕೆಯ ಟ್ರಾನ್ಸ್ನ ಒಂದು ಉಪಪ್ರಕಾರವಾಗಿದೆ.
ಐರೋಪ್ಯ ಟ್ರಾನ್ಸ್ ಹಾಗೂ ಗೋವಾ ಟ್ರಾನ್ಸ್ ಪ್ರಕಾರಗಳ ನಡುವೆ ಮತ್ತೊಂದು ಪ್ರಮುಖ ವೈಲಕ್ಷಣ್ಯವು ಕಂಡುಬರುತ್ತದೆ. ಟ್ರಾನ್ಸ್ ಪ್ರಕಾರವು ಯುರೋಪ್ನಲ್ಲಿ ವಿಕಸನಗೊಳ್ಳುತ್ತಿದ್ದ ಸರಿಸುಮಾರು ಅದೇ ಸಮಯದಲ್ಲಿಯೇ ಭಾರತದ ಗೋವಾದಲ್ಲಿ ಗೋವಾ ಟ್ರಾನ್ಸ್ ಹುಟ್ಟಿಕೊಂಡಿತು. ಪ್ರಜ್ಞಾವಿಸ್ತಾರಕ ಟ್ರಾನ್ಸ್ ಪ್ರಕಾರದ ರೂಪುಗೊಳ್ಳುವಿಕೆಯಲ್ಲಿ ಗೋವಾ ಟ್ರಾನ್ಸ್ ಪ್ರಭಾವಶಾಲಿ ಪಾತ್ರವನ್ನು ವಹಿಸಿತ್ತು. ನಾಜೂಕಿಲ್ಲದ, ಅಸಂಕಲ್ಪಿತವಾದ ಮಾದರಿಗಳು ಹಾಗೂ ಇತರ ಪ್ರಜ್ಞಾವಿಸ್ತಾರಕ ಅಂಶಗಳನ್ನು ಪ್ರಜ್ಞಾವಿಸ್ತಾರಕ ಟ್ರಾನ್ಸ್ ಒಳಗೊಳ್ಳುತ್ತದೆ. ಇನ್ಫೆಕ್ಟೆಡ್ ಮಶ್ರೂಮ್ ಹಾಗೂ ಯಾಹೆಲ್ ಷೆರ್ಮನ್ರಂಥ ಪ್ರಜ್ಞಾವಿಸ್ತಾರಕ ಟ್ರಾನ್ಸ್ನ ನಿರ್ಮಾಪಕರು ವಿಶ್ವವ್ಯಾಪೀ ಕೀರ್ತಿಯನ್ನು ಸಾಧಿಸುವುದರೊಂದಿಗೆ, ಇಸ್ರೇಲ್ ದೇಶದಲ್ಲಿ ಟ್ರಾನ್ಸ್ ಕೂಡಾ ಅತ್ಯಂತ ಜನಪ್ರಿಯವಾಗಿದೆ. ನಿಝೊನಾಟ್ ಎಂದು ಕರೆಯಲ್ಪಡುವ ಇಸ್ರೇಲಿ ಉಪಪ್ರಕಾರವು, ಪ್ರಜ್ಞಾವಿಸ್ತಾರಕ ಮತ್ತು ಉನ್ನತಿಗೇರಿಸುವ ಟ್ರಾನ್ಸ್ನ ಒಂದು ಮಿಶ್ರಣವಾಗಿದೆ.
ಟ್ರಾನ್ಸ್ ಸಂಗೀತ ಉತ್ಸವಗಳು ಅಗಾಧವಾದ ಜನಸಂದಣಿಯನ್ನು ಆಕರ್ಷಿಸುತ್ತವೆ ಮತ್ತು ಅತ್ಯಾಧುನಿಕ ದೀಪದ ವ್ಯವಸ್ಥೆ, ಲೇಸರ್ ಪ್ರದರ್ಶನ ಹಾಗೂ ಬಾಣಬಿರುಸಿನ ಪ್ರದರ್ಶನಗಳನ್ನು ಇವು ಸಾಮಾನ್ಯವಾಗಿ ಒಳಗೊಂಡಿರುತ್ತವೆ. ಬೃಹತ್ ಟ್ರಾನ್ಸ್ ಉತ್ಸವಗಳ ಪೈಕಿ ಬಹುಪಾಲು ಉತ್ಸವಗಳು ಯುರೋಪ್ನಲ್ಲಿ ಆಯೋಜಿಸಲ್ಪಡುತ್ತವೆ.
ಅತ್ಯುತ್ತಮವಾದ ಉತ್ಸವಗಳ ಪೈಕಿ ಕೆಲವು ನೆದರ್ಲೆಂಡ್ಸ್ನಲ್ಲಿ ಪ್ರದರ್ಶಿಸಲ್ಪಡುತ್ತವೆ. ನೆದರ್ಲೆಂಡ್ಸ್ನಲ್ಲಿ ನಡೆಯುವ ಟ್ರಾನ್ಸ್ ಉತ್ಸವಗಳು ಮುಖ್ಯವಾಗಿ ಮೂರು ಕಂಪನಿಗಳಿಂದ ಸಂಘಟಿಸಲ್ಪಡುತ್ತವೆ. ಅವುಗಳೆಂದರೆ: ID&T, UDC ಮತ್ತು Q-ಡಾನ್ಸ್.
ಐರ್ಲೆಂಡ್ನ ಉತ್ತರ ಮತ್ತು ದಕ್ಷಿಣ ಭಾಗಗಳೆರಡರಲ್ಲೂ ಒಂದು ವಾರ್ಷಿಕ ಉತ್ಸವವನ್ನು, ಹಾಗೂ ಸಣ್ಣ ಪ್ರಮಾಣದಲ್ಲಿ ಇತರ ಹಲವಾರು ಕಾರ್ಯಕ್ರಮಗಳನ್ನು ಪ್ಲಾನೆಟ್ ಲವ್ ನಡೆಸುತ್ತದೆ.
ಜಡ್ಜ್ ಜೂಲ್ಸ್, ಆರ್ಮಿನ್ ವ್ಯಾನ್ ಬ್ಯೂರೆನ್, ಪಾಲ್ ವ್ಯಾನ್ ಡಿಕ್ ಮತ್ತು ಟಿಯೆಸ್ಟೊರಂಥ ಪ್ರಮುಖ DJಗಳು ಪ್ಲಾನೆಟ್ ಲವ್ ಕಾರ್ಯಕ್ರಮಗಳಲ್ಲಿ ಪ್ರದರ್ಶನವನ್ನು ನೀಡಿದ್ದಾರೆ.
ಕಾನೂನು ಕಟ್ಟುಪಾಡುಗಳ ಕಾರಣದಿಂದಾಗಿ ಅನೇಕ ದೇಶಗಳಲ್ಲಿ ಇಂಥ ಉತ್ಸವಗಳ ಕೊರತೆಯಿದೆ. ಅನೇಕ ದೇಶಗಳಲ್ಲಿ, ಅದರಲ್ಲೂ ಗಮನಾರ್ಹವಾಗಿ ಫ್ರಾನ್ಸ್ನಲ್ಲಿರುವ ಸಾರ್ವಜನಿಕ ಕಾನೂನು ಕಟ್ಟಳೆಯ ಇಲಾಖೆಗಳು, ಮಾದಕವಸ್ತು ಸಂಬಂಧಿತ ವಿವಾದಾಂಶಗಳ ಕುರಿತು ಅರಿತಿದ್ದ ಕಾರಣದಿಂದಾಗಿ ಟೆಕ್ನೊ ಸಂಗೀತ ಮತ್ತು ಟ್ರಾನ್ಸ್ ಕಾರ್ಯಕ್ರಮಗಳಿಗೆ ಪರವಾನಗಿಗಳನ್ನು ನೀಡುವುದಕ್ಕೆ ಮನಸ್ಸು ಮಾಡುತ್ತಿಲ್ಲ.[ಸೂಕ್ತ ಉಲ್ಲೇಖನ ಬೇಕು] ಹಿಂದೆ, ID&T ಸಂಘಟನೆಯು ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಂಡು ಬಂದಿತ್ತು ಮತ್ತು ಬೆಲ್ಜಿಯಂ ಹಾಗೂ ಜರ್ಮನಿಯಲ್ಲಿ ಉತ್ಸವಗಳನ್ನು ಸಂಘಟಿಸಲು ಶುರುಮಾಡಿತು. ಸದರಿ ಉತ್ಸವಗಳು ಈ ದೇಶಗಳಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದಿದ್ದವು. ತೀರಾ ಇತ್ತೀಚೆಗೆ (೨೦೦೮) ID&T ಸಂಘಟನೆಯು ಚಿಲಿ, ಚೀನಾ, ಪೋಲೆಂಡ್, ಝೆಕ್ ಗಣರಾಜ್ಯ, ದುಬೈ ಹಾಗೂ ಇನ್ನೂ ಅನೇಕ ಕಡೆಗಳಲ್ಲಿ 'ಸೆನ್ಸೇಷನ್ ವರ್ಲ್ಡ್ ಟೂರ್'ನ್ನು ಕೈಗೊಳ್ಳಲು ಯೋಜಿಸುತ್ತಿದೆ. ಸೆನ್ಸೇಷನ್ ವೈಟ್ ಎಂಬುದು ಕಾರ್ಯಕ್ರಮವನ್ನು ಸುತ್ತುವರೆದಿರುವ ಪ್ರದರ್ಶನ ಹಾಗೂ ಪ್ರಸ್ತುತಿಗಳಿಗೆ ಸಂಬಂಧಿಸಿದ್ದರೆ, ID&Tಯ ಟ್ರಾನ್ಸ್ ಎನರ್ಜಿಯು DJಗಳನ್ನು ಕುರಿತದ್ದಾಗಿದೆ.ಸೆನ್ಸೇಷನ್ ವೈಟ್ & ಬ್ಲ್ಯಾಕ್ ಕುರಿತಾದ ವಿವರಗಳನ್ನು ಟ್ರಾನ್ಸ್ ಎಲಿಮೆಂಟ್ಸ್ ಮತ್ತು ಈ ಜಾಗತಿಕ ವಿದ್ಯಮಾನದ ಭವಿಷ್ಯದ ಯೋಜನೆಯ ಕುರಿತು ಚರ್ಚಿಸುತ್ತದೆ.
This article uses material from the Wikipedia ಕನ್ನಡ article ಟ್ರಾನ್ಸ್ ಸಂಗೀತ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.