ಟಿಫ಼ಿನ್: ದಕ್ಷಿಣ ಏಷ್ಯಾದ ಒಂದು ಬಗೆಯ ಆಹಾರ

ಟಿಫ಼ಿನ್ ಒಂದು ಬಗೆಯ ಭೋಜನವನ್ನು ಸೂಚಿಸುವ ಭಾರತೀಯ ಇಂಗ್ಲಿಷ್ ಶಬ್ದವಾಗಿದೆ.

ಇದು ನಡುಹಗಲಿನ ಊಟ, ಅಥವಾ ಭಾರತೀಯ ಉಪಖಂಡದ ಕೆಲವು ಪ್ರದೇಶಗಳಲ್ಲಿ ಊಟದ ನಡುವಿನ ಲಘು ಆಹಾರ, ಅಥವಾ ದಕ್ಷಿಣ ಭಾರತೀಯ ಬಳಕೆಯಲ್ಲಿ ಹಗುರವಾದ ಬೆಳಗಿನ ಉಪಾಹಾರವನ್ನು ಸೂಚಿಸಬಹುದು. ಬ್ರಿಟಿಷ್ ಆಳ್ವಿಕೆಯಲ್ಲಿ, ಬ್ರಿಟಿಷ್ ರೂಢಿಯಾದ ಮಧ್ಯಾಹ್ನದ ಚಹಾದ ಬದಲಿಗೆ ಆ ಹೊತ್ತಿಗೆ ಲಘು ಭೋಜನವನ್ನು ತೆಗೆದುಕೊಳ್ಳುವ ಭಾರತೀಯ ಅಭ್ಯಾಸ ಚಾಲ್ತಿಗೆ ಬಂದಿತು. ಇದನ್ನು ಟಿಫ಼ಿನ್ ಎಂದು ಕರೆಯಲಾಯಿತು.

ದಕ್ಷಿಣ ಭಾರತ ಮತ್ತು ನೇಪಾಳದಲ್ಲಿ, ಟಿಫ಼ಿನ್ ಎಂದರೆ ಸಾಮಾನ್ಯವಾಗಿ ಊಟಗಳ ನಡುವಿನ ಲಘು ಆಹಾರ: ದೋಸೆ, ಇಡ್ಲಿ, ವಡೆ, ಇತ್ಯಾದಿ. ಮುಂಬಯಿಯಂತಹ ಭಾರತದ ಇತರ ಭಾಗಗಳಲ್ಲಿ, ಈ ಶಬ್ದವು ಬಹುತೇಕವಾಗಿ ಯಾವುದೋ ಬಗೆಯ ಡಬ್ಬಿ ತುಂಬಿದ ಮಧ್ಯಾಹ್ನದ ಊಟವನ್ನು ಸೂಚಿಸುತ್ತದೆ. ಮುಂಬಯಿಯಲ್ಲಿ, ಇದನ್ನು ಹಲವುವೇಳೆ ಡಬ್ಬಾವಾಲಾಗಳು ರವಾನಿಸುತ್ತಾರೆ. ಇದು ಸಾವಿರಾರು ಟಿಫ಼ಿನ್ ಬಾಕ್ಸ್‌ಗಳನ್ನು ಅವುಗಳ ಗಮ್ಯಸ್ಥಾನಗಳಿಗೆ ತಲುಪಿಸುವ ಒಂದು ಸಂಕೀರ್ಣ ವ್ಯವಸ್ಥೆಯಾಗಿದೆ. ಮುಂಬಯಿಯಲ್ಲಿ, ಶಾಲೆಗೆ ಹೋಗುವ ಮಗುವಿನ ಊಟದ ಡಬ್ಬಿಯನ್ನು ಪ್ರೀತಿಯಿಂದ ಟಿಫ಼ಿನ್ ಬಾಕ್ಸ್ ಎಂದು ಕರೆಯಲಾಗುತ್ತದೆ. ಟಿಫ಼ಿನ್ ಹಲವುವೇಳೆ ಅನ್ನ, ಸಾರು/ತೊವ್ವೆ, ಮೇಲೋಗರ, ತರಕಾರಿಗಳು, ಚಪಾತಿಗಳು ಅಥವಾ ಮಸಾಲೆಭರಿತ ಮಾಂಸದ ಖಾದ್ಯಗಳನ್ನು ಹೊಂದಿರುತ್ತದೆ. ಜೊತೆಗೆ, ಊಟದ ಡಬ್ಬಿಗಳನ್ನು ಸ್ವತಃ ಟಿಫ಼ಿನ್ ಕ್ಯಾರಿಯರ್‌ಗಳೆಂದು ಕರೆಯಲಾಗುತ್ತದೆ.

ಉಲ್ಲೇಖಗಳು

Tags:

ಭಾರತೀಯ ಉಪಖಂಡ

🔥 Trending searches on Wiki ಕನ್ನಡ:

ನಾಗಠಾಣ ವಿಧಾನಸಭಾ ಕ್ಷೇತ್ರಭಾರತದ ಮಾನವ ಹಕ್ಕುಗಳುಸಿದ್ದರಾಮಯ್ಯಕರ್ನಾಟಕದ ಶಾಸನಗಳುವಿಜಯನಗರ ಜಿಲ್ಲೆಹೊಯ್ಸಳೇಶ್ವರ ದೇವಸ್ಥಾನಸಂಸ್ಕೃತ ಸಂಧಿಲಿನಕ್ಸ್ಭಾರತೀಯ ಕಾವ್ಯ ಮೀಮಾಂಸೆಪಿ.ಲಂಕೇಶ್ತುಂಗಭದ್ರಾ ಅಣೆಕಟ್ಟುಭಾರತದ ನದಿಗಳುಸಂಗೀತಕನ್ನಡ ಚಂಪು ಸಾಹಿತ್ಯವೆಂಕಟೇಶ್ವರ ದೇವಸ್ಥಾನಕೆ. ಅಣ್ಣಾಮಲೈಸಂಕ್ಷಿಪ್ತ ಪೂಜಾಕ್ರಮಕುಮಾರವ್ಯಾಸಹಾಗಲಕಾಯಿಸಮುಚ್ಚಯ ಪದಗಳುಸಂಸ್ಕಾರಗೋವಿಂದ ಪೈಚೋಳ ವಂಶಗ್ರಹಮಧುಮೇಹಮದುವೆಶಿವಗಂಗೆ ಬೆಟ್ಟಭ್ರಷ್ಟಾಚಾರಕಪ್ಪೆ ಅರಭಟ್ಟಶಿಕ್ಷಣಪ್ರಜಾವಾಣಿವಿಜಯಪುರಕೊಪ್ಪಳಈಡನ್ ಗಾರ್ಡನ್ಸ್ಭೂತಾರಾಧನೆಬೆರಳ್ಗೆ ಕೊರಳ್ವಾಯು ಮಾಲಿನ್ಯರಾಧಿಕಾ ಕುಮಾರಸ್ವಾಮಿಪುನೀತ್ ರಾಜ್‍ಕುಮಾರ್ಆದಿವಾಸಿಗಳುಪ್ರಾಥಮಿಕ ಶಿಕ್ಷಣಕರ್ನಾಟಕದ ಸಂಸ್ಕೃತಿಪರಶುರಾಮಕೊಲ್ಲೂರು ಮೂಕಾಂಬಿಕಾ ದೇವಸ್ಥಾನಸಿ. ಎನ್. ಆರ್. ರಾವ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕಾರ್ಮಿಕ ಕಾನೂನುಗಳುಕರ್ನಾಟಕ ರತ್ನದ್ರಾವಿಡ ಭಾಷೆಗಳುಗೋವನಾಗಚಂದ್ರಭಾರತದ ಇತಿಹಾಸಮಹೇಂದ್ರ ಸಿಂಗ್ ಧೋನಿಚೋಮನ ದುಡಿಕೃಷಿ ಉಪಕರಣಗಳುಬಾಲ್ಯ ವಿವಾಹಮೆಕ್ಕೆ ಜೋಳಭೂಕಂಪಕೃಷ್ಣ ಮಠವಿಕ್ರಮಾರ್ಜುನ ವಿಜಯರಾಷ್ಟ್ರೀಯತೆಚಾಲುಕ್ಯಕೋಲಾಟಶ್ರೀ ಕೃಷ್ಣ ಪಾರಿಜಾತಪಂಚ ವಾರ್ಷಿಕ ಯೋಜನೆಗಳುಕಾವ್ಯಮೀಮಾಂಸೆಶಾಲೆಭರತನಾಟ್ಯಉಪ್ಪಿನ ಸತ್ಯಾಗ್ರಹಕರ್ನಾಟಕದ ಮುಖ್ಯಮಂತ್ರಿಗಳುನಾಡ ಗೀತೆಗಾಂಜಾಗಿಡಶಬ್ದಮಣಿದರ್ಪಣಭರತ-ಬಾಹುಬಲಿರಾಯಲ್ ಚಾಲೆಂಜರ್ಸ್ ಬೆಂಗಳೂರುಕೆ. ಎಸ್. ನರಸಿಂಹಸ್ವಾಮಿ🡆 More