ಇಡ್ಲಿ

ಇಡ್ಲಿ ದಕ್ಷಿಣ ಭಾರತ ದ ಸಾಂಪ್ರದಾಯಕ ತಿನಿಸುಗಳಲ್ಲಿ ಒಂದು.

ಪ್ರಧಾನವಾಗಿ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲ್ಪಡುವ ಇಡ್ಲಿ ಸಾಮಾನ್ಯವಾಗಿ ತಿಂಡಿಯಾಗಿ ಬಳಸಲ್ಪಡುತ್ತದೆ. ಇಡ್ಲಿಯನ್ನು ಚಟ್ನಿ ಮತ್ತು ಸಾಂಬಾರ್ ಜೊತೆಗೆ ನೀಡಲಾಗುತ್ತದೆ.

ಇಡ್ಲಿ
ಇಡ್ಲಿ
ಚಟ್ನಿ ಮತ್ತು ಸಾಂಬಾರ್ ಜೊತೆ ಇಡ್ಲಿ
ಮೂಲ
ಪರ್ಯಾಯ ಹೆಸರು(ಗಳು)Idly
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯದಕ್ಷಿಣ ಭಾರತ
ವಿವರಗಳು
ಸೇವನಾ ಸಮಯಮುಖ್ಯ ಕೋರ್ಸ್
ಬಡಿಸುವಾಗ ಬೇಕಾದ ಉಷ್ಣತೆಬಿಸಿ ಸಾಂಬಾರ್ ಅಥವಾ ಚಟ್ನಿ ಜೊತೆ.
ಮುಖ್ಯ ಘಟಕಾಂಶ(ಗಳು)ಉದ್ದಿನ ಬೇಳೆ (de-husked), ಅಕ್ಕಿ
ಪ್ರಭೇದಗಳುಬಟನ್ ಇಡ್ಲಿ, ತಟ್ಟೆ ಇಡ್ಲಿ, ಸಣ್ಣ ಇಡ್ಲಿ, ಸಾಂಬಾರ್ ಇಡ್ಲಿ,ರವೆ ಇಡ್ಲಿ.
ಇಡ್ಲಿ
ಇಡ್ಲಿ

ಇಡ್ಲಿ ದಕ್ಷಿಣ ಭಾರತದ ಪ್ರಾಚೀನ ತಿನಿಸುಗಳಲ್ಲಿ ಒಂದು. ಹಳೆಗನ್ನಡ ಲೇಖಕ ಶಿವಕೋಟ್ಯಾಚಾರ್ಯನ (ಕ್ರಿ.ಶ. ೯೨೦) ಬರಹಗಳಲ್ಲಿ ಇಡ್ಲಿಯ ಪ್ರಸ್ತಾಪ ಬಂದಿದೆ. ಆ ಕಾಲದಲ್ಲಿ ಇಡ್ಲಿಯನ್ನು ಮಾಡಲು ಉದ್ದಿನ ಬೇಳೆಯನ್ನು ಮಾತ್ರ ಉಪಯೋಗಿಸುತ್ತಿದ್ದರೆಂಬುದು ಕಂಡು ಬರುತ್ತದೆ. ಕ್ರಿ.ಶ. ೧೦೨೫ ರ ಒಂದು ದಾಖಲೆಯಂತೆ ಉದ್ದಿನ ಬೇಳೆಯನ್ನು ಮಜ್ಜಿಗೆಯಲ್ಲಿ ನೆನೆಸಿ, ರುಬ್ಬಿ, ಮೆಣಸು, ಕೊತ್ತಂಬರಿ, ಇಂಗು ಮೊದಲಾದವನ್ನು ಸೇರಿಸಿ ಇಡ್ಲಿ ಹಿಟ್ಟನ್ನು ಸಿದ್ಧ ಪಡಿಸುತ್ತಿದ್ದರು. ಮೂರನೆಯ ಸೋಮೇಶ್ವರ ತನ್ನ ಸಂಸ್ಕೃತ ಗ್ರಂಥವಾದ ಮಾನಸೋಲ್ಲಾಸದಲ್ಲಿ (ಕ್ರಿ.ಶ. ೧೧೩೦) ಇಡ್ಲಿ ತಯಾರಿಸುವ ವಿಧಾನವನ್ನು ವರ್ಣಿಸಿದ್ದಾನೆ. ಇಡ್ಲಿ ತಯಾರಿಕೆಯಲ್ಲಿ ಅಕ್ಕಿಯನ್ನು ಉಪಯೋಗಿಸುವ ಪ್ರಸ್ತಾಪ ೧೭ ನೆಯ ಶತಮಾನದವರೆಗೆ ಯಾವ ದಾಖಲೆಗಳಲ್ಲೂ ಲಭ್ಯವಾಗಿಲ್ಲ ಎಂಬುದು ಕುತೂಹಲಕರ ಸಂಗತಿ.

ವಿವಿಧ ತರಹದ ಇಡ್ಲಿ

ಇತ್ತೀಚಿನ ದಿನಗಳಲ್ಲಿ ಇಡ್ಲಿಯು ಅನೇಕ ರೂಪಾಂತರಗಳಲ್ಲಿ ಕಾಣಿಸಿ ಕೊಂಡಿವೆ:

ಬೇಕಾಗುವ ಸಾಮಗ್ರಿಗಳು

  • ಅಕ್ಕಿ - 2 ಕಪ್ಪು
  • ಉದ್ದಿನಬೇಳೆ - 1 ಕಪ್ಪು
  • ಉಪ್ಪು ನಾಲಗೆ ಬಯಸುವಷ್ಟು
  • ಅಡುಗೆ ಸೋಡಾ .

ಮಾಡುವ ವಿಧಾನ

ಚೆನ್ನಾಗಿ ತೊಳೆದ ಉದ್ದಿನಬೇಳೆ ಹಾಗೂ ಅಕ್ಕಿಯನ್ನು ಸರಿ ಸುಮಾರು ಎಂಟು ಗಂಟೆಗಳ ಕಾಲ ನೆನೆಸಿಡಿ. ಪ್ರತ್ಯೇಕವಾಗಿರಲಿ.ನಂತರ ಚನ್ನಾಗಿ ತೊಳೆಯಿರಿ . ಆನಂತರ, ಮಿಕ್ಸಿಯಲ್ಲಿ ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಿ ನಂತರ ಅದಕ್ಕೆ ಹಾಕಿ ರುಬ್ಬಿ. ಅಕ್ಕಿ ತರಿ-ತರಿಯಾಗಿರಲಿ, ಅಕ್ಕಿ- ಉದ್ದಿನ ಮಿಶ್ರಣ ಬೆರೆಸಿಡಿ. ಉಪ್ಪನ್ನು ಆಗಲೇ ಸೇರಿಸಬಹುದು. ಮಿಶ್ರಣದ ಪಾತ್ರೆ ಮುಚ್ಚಿಡಿ. ರಾತ್ರಿ ರುಬ್ಬಿಟ್ಟರೆ ಬೆಳಿಗ್ಗೆ ಇಡ್ಲಿ ಮಾಡಲು ಹಿಟ್ಟು ತಯಾರಾಗುತ್ತದೆ. ಇಡ್ಲಿ ಮಾಡುವ ಮೊದಲು ಹುದುಗು ಬಂದಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಇಡ್ಲಿ ತಯಾರಿಸುವಾಗ ತಟ್ಟೆಗಳಿಗೆ ಬಟ್ಟೆ ಹಾಕಬಹುದು ಅಥವಾ ಹಾಗೆ ಹಾಕಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಇಡ್ಲಿ ತಟ್ಟೆಗೆ ತುಪ್ಪ ಅಥವಾ ಅಡುಗೆ ಎಣ್ಣೆ ಹಚ್ಚಿ, ಹಿಟ್ಟನ್ನು ಇಡ್ಲಿ ಪಾತ್ರೆ ಮೇಲೆ ಇಡಿ.ಪಾತ್ರೆಯನ್ನು ಕುಕ್ಕರಿನಲ್ಲಿಟ್ಟು ಬೇಯಲಿಕ್ಕೆ ಬಿಡಬೇಕು. ಹತ್ತು ನಿಮಿಷದ ನಂತರ ಹಬೆಯಾಡುವ ಇಡ್ಲಿ ರೆಡಿಯಾಗುತ್ತದೆ.ಸೇವಿಸುವಾಗ ಚಟ್ನಿ, ಸಾಂಬಾರ್ ಮತ್ತು ತಾಜಾ ಬೆಣ್ಣೆ ಜೊತೆ ಸೇವಿಸಬಹುದು.

ಇಡ್ಲಿ ತಯಾರಿಸಲು ಬಳಸುವ ಪಾತ್ರೆಗಳು

30 ಗ್ರಾಂ ಇಡ್ಲಿಯಲ್ಲಿರುವ ಪೌಷ್ಟಿಕಾಂಶಗಳು

  • ಶಕ್ತಿ ---167 ಕೆಜೆ (40 kcal).
  • ಕಾರ್ಬೋಹೈಡ್ರೇಟ್ಗಳು--7,89 ಗ್ರಾಂ.
  • ಆಹಾರದಲ್ಲಿನ ಫೈಬರ್ --1.5 ಗ್ರಾಂ.
  • ಫ್ಯಾಟ್--0.19 ಗ್ರಾಂ.
  • ಸ್ಯಾಚ್ಯುರೇಟೆಡ್-- 0,037 ಗ್ರಾಂ.
  • ಮೊನೌನ್ಸತುರಟೆಡ್--೦.೦೩೫ ಜಿ.
  • ಪೊಲ್ಯೂನ್ಸತುರಟೆಡ್೦.೦೪೩ ಜಿ.
  • ಪ್ರೋಟೀನ್--1.91 ಗ್ರಾಂ
    ಮಿನರಲ್ಸ್
  • ಪೊಟ್ಯಾಸಿಯಂ(೧%) ೬೩
  • ಎಂಗ್ ಸೋಡಿಯಂ(೧೪%) ೨೦೭ ಮಗ್.

ಉಲ್ಲೇಖಗಳು

Tags:

ಇಡ್ಲಿ ವಿವಿಧ ತರಹದ ಇಡ್ಲಿ ಬೇಕಾಗುವ ಸಾಮಗ್ರಿಗಳುಇಡ್ಲಿ ಮಾಡುವ ವಿಧಾನಇಡ್ಲಿ ತಯಾರಿಸಲು ಬಳಸುವ ಪಾತ್ರೆಗಳುಇಡ್ಲಿ 30 ಗ್ರಾಂ ಯಲ್ಲಿರುವ ಪೌಷ್ಟಿಕಾಂಶಗಳುಇಡ್ಲಿ ಉಲ್ಲೇಖಗಳುಇಡ್ಲಿಅಕ್ಕಿಚಟ್ನಿತಿಂಡಿದಕ್ಷಿಣ ಭಾರತಸಾಂಬಾರ್

🔥 Trending searches on Wiki ಕನ್ನಡ:

ಮಹೇಂದ್ರ ಸಿಂಗ್ ಧೋನಿಸುದೀಪ್ಮಲೆಗಳಲ್ಲಿ ಮದುಮಗಳುಗೋತ್ರ ಮತ್ತು ಪ್ರವರವಿದುರಾಶ್ವತ್ಥಎಂ. ಕೃಷ್ಣಪ್ಪಲಾವಂಚರೈತಎಲಾನ್ ಮಸ್ಕ್ಥಿಯೊಸೊಫಿಕಲ್ ಸೊಸೈಟಿನದಿಮಾಸಮುದ್ದಣಮದುವೆಸಂಸ್ಕೃತಿಹಿಂದೂ ಧರ್ಮಬಾಲಕೃಷ್ಣಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಸರ್ವಜ್ಞವಿಷ್ಣುವರ್ಧನ್ (ನಟ)ಮುಖಚದುರಂಗದ ನಿಯಮಗಳುಉತ್ತರ ಕರ್ನಾಟಕಧರ್ಮಕಾದಂಬರಿಭೂಕಂಪಅರ್ಜುನಬಂಗಾರದ ಮನುಷ್ಯ (ಚಲನಚಿತ್ರ)ಕೊಡಗು೧೬೦೮ಬಡತನಚಿ.ಉದಯಶಂಕರ್ಮಲೇರಿಯಾಭಾರತದ ಸಂವಿಧಾನಲಿವರ್ ಪೂಲ್ ಫುಟ್ ಬಾಲ್ ಕ್ಲಬ್ರಾಷ್ಟ್ರೀಯ ಸೇವಾ ಯೋಜನೆಶಂಕರ್ ನಾಗ್ವೈದೇಹಿನವರತ್ನಗಳುಅನುನಾಸಿಕ ಸಂಧಿವಿಧಾನ ಸಭೆಕರ್ನಾಟಕ ಸ್ವಾತಂತ್ರ್ಯ ಚಳವಳಿಜಿ.ಪಿ.ರಾಜರತ್ನಂಶ್ರೀ ರಾಮಾಯಣ ದರ್ಶನಂಭಾರತದ ರಾಷ್ಟ್ರೀಯ ಉದ್ಯಾನಗಳುಮಲೈ ಮಹದೇಶ್ವರ ಬೆಟ್ಟಬಿಳಿ ರಕ್ತ ಕಣಗಳುಜ್ಞಾನಪೀಠ ಪ್ರಶಸ್ತಿಸತ್ಯ (ಕನ್ನಡ ಧಾರಾವಾಹಿ)ಶ್ರವಣಬೆಳಗೊಳಊಳಿಗಮಾನ ಪದ್ಧತಿಕೃಷಿಅಂತಾರಾಷ್ಟ್ರೀಯ ಸಂಬಂಧಗಳುಜಾತಿಹೆಚ್.ಡಿ.ಕುಮಾರಸ್ವಾಮಿಭಾರತದಲ್ಲಿನ ಜಾತಿ ಪದ್ದತಿಭಾರತೀಯ ಅಂಚೆ ಸೇವೆಶ್ರೀ ರಾಘವೇಂದ್ರ ಸ್ವಾಮಿಗಳುಎ.ಕೆ.ರಾಮಾನುಜನ್ಪ್ಲಾಸಿ ಕದನಭಾರತೀಯ ಸ್ಟೇಟ್ ಬ್ಯಾಂಕ್ಅಳತೆ, ತೂಕ, ಎಣಿಕೆಜೋಡು ನುಡಿಗಟ್ಟುರಾಜಧಾನಿಗಳ ಪಟ್ಟಿನವೋದಯಆಕ್ಟೊಪಸ್ಸಾಮ್ರಾಟ್ ಅಶೋಕಮುಖ್ಯ ಪುಟಡೊಳ್ಳು ಕುಣಿತಮರಾಠಾ ಸಾಮ್ರಾಜ್ಯಪ್ರಜಾಪ್ರಭುತ್ವಕದಂಬ ಮನೆತನರಗಳೆಶಾಲೆ🡆 More