ಟಿಂಗಡೀ

ಟಿಂಗಡೀ- ಹೆಮಿಪ್ಟರ ಗಣಕ್ಕೆ ಸೇರಿದ ಒಂದು ಕುಟುಂಬ.

ಸಸ್ಯಾಹಾರಿಗಳಾದ ಅನೇಕ ತೆರನ ಕೀಟಗಳನ್ನು ಒಳಗೊಂಡಿದೆ. ಇವನ್ನು ಕಲಾಬತ್ತು ತಿಗಣೆಗಳು (ಲೇಸ್ ಬಗ್ಸ್) ಎಂದು ಕರೆಯಲಾಗುವುದು. ವಿವರ ಬಹಳ ಸಣ್ಣಗಾತ್ರದ ಕೀಟಗಳಿವು; ಇವುಗಳ ಉದ್ದ 4-5 mm ದೇಹ ತೆಳುವಾಗಿಯೂ ಚಪ್ಪಟೆಯಾಗಿಯೂ ಇದೆ. ದೇಹದ ಮೇಲೆ ಮುಳ್ಳುಗಳಿರುವುದುಂಟು. ಕೆಲವು ಸಲ ಪ್ರೋನೋಟಮ್ ಭಾಗ ತಲೆಯನ್ನು ಆವರಿಸಿರುವ ಒಂದು ಬಗೆಯ ಕುಂಚಿಗೆಯಾಗಿ ಮಾರ್ಪಟ್ಟಿದೆ. ಜೊತೆಗೆ ಪ್ರೋತೋರ್ಯಾಕ್ಸಿನ್ನಿನ ಆಚೀಚೆ ಹರಡಿರುವ ತಟ್ಟೆಯಾಕಾರದ ಹಾಲೆಗಳೂ ಉಂಟು. ಇವಕ್ಕೆ ಪ್ಯಾರನೋಟ ಎಂದು ಹೆಸರು. ಅಂತೆಯೇ ಉದರಭಾಗದ ಮೇಲೂ ಅಗಲವಾದ ರೆಕ್ಕೆಗಳಂಥ ರಚನೆಗಳಿವೆ. ಇವಕ್ಕೆ ಹೆಮಿಎಲಿಟ್ರ ಎಂದು ಹೆಸರು. ಕುಂಚಿಗೆ, ಪ್ಯಾರನೋಟ ಮತ್ತು ಹೆಮಿಎಲಿಟ್ರಗಳು ತೆಳುವಾಗಿಯೂ ಪಾರದರ್ಶಕವಾಗಿಯೂ ಇರುವುವಲ್ಲದೆ ಇವುಗಳ ಮೇಲೆ ಬಲೆಯ ರೀತಿಯ ವಿನ್ಯಾಸವೂ ಇದೆ. ಇದರಿಂದಾಗಿ ಇವು ಕಲಾಬತ್ತು ವಿನ್ಯಾಸದಂತೆ ಕಾಣುತ್ತವೆ. ಕಲಾಬತ್ತು ತಿಗಣೆಗಳು ಮರಗಿಡಗಳ ಊತಕಗಳನ್ನು ಕೊರೆದು ಮೊಟ್ಟೆಯಿಡುವುವು. ಡಿಂಬಗಳು ಎಲೆಗಳನ್ನು ತಿಂದು ಬೆಳೆಯುತ್ತವೆ. ಇವುಗಳ ಹಾವಳಿಗೆ ತುತ್ತಾದ ಎಲೆಗಳೆಲ್ಲ ಹಳದಿ ಬಣ್ಣಕ್ಕೆ ತಿರುಗಿ ಬಿದ್ದುಹೋಗುತ್ತವೆ.

ಕೆಲವು ಪ್ರಭೇದಗಳು (ಕೋಪಿಯಮ್ ಕಾನ್ರ್ಯೂಟಮ್ ಮತ್ತು ಕೋ.ಟ್ಯೂಕ್ರಿಯೈ) ಯೂರೋಪಿನಲ್ಲಿ ಬೆಳೆಯುವ ಟ್ಯೂಕ್ರಿಯಮ್ ಸಸ್ಯಗಳ ಎಲೆಗಂತಿಗಳನ್ನು (ಗಾಲ್ಸ್) ಉಂಟುಮಾಡುವುವು. ಉಳಿದ ಉದಾಹರಣೆಗಳು : 1 ಕೋರಿ ತೂಕ ಸಿಲಿಯೇಟ (ಸಿಕಮೋರ್ ಲೇಸ್ ಬಗ್) : ಉತ್ತರ ಅಮೆರಿಕದ ಸಿಕಮೋರ್ ಮರಗಳ ಪಿಡುಗೆನಿಸಿರುವ ಕೀಟ. 2 ಗರ್ಗಾಫಿಯ ಸೊಲಾನಿ : ಹತ್ತಿ, ಬದನೆ, ಮುಂತಾದ ಗಿಡಗಳ ಮೇಲೆ ಜೀವಿಸುವ ಕೀಟ. 3 ಸ್ಟೆಫನೈಟಿಸ್ ಪೈರಿ : ಯೂರೋಪಿನಲ್ಲಿ ಸೇಬು, ಪಿಯರ್ ಹಣ್ಣಿನ ಗಿಡಗಳಿಗೆ ಹತ್ತುವ ಕೀಟ. 4 ಸ್ಟೆಫನೈಟಿಸ್ ಆಂಬಿಗುವ : ಜಪಾನಿನಲ್ಲಿ ಚೆರಿ ಮತ್ತು ಸೇಬು ಹಣ್ಣಿನ ಗಿಡಗಳಿಗೆ ಅಂಟುತ್ತದೆ.


ಟಿಂಗಡೀ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ರಾಯಲ್ ಚಾಲೆಂಜರ್ಸ್ ಬೆಂಗಳೂರುಜೋಗಿ (ಚಲನಚಿತ್ರ)ಕಲಬುರಗಿಎಕರೆದ್ರಾವಿಡ ಭಾಷೆಗಳುವೇದಹೊಯ್ಸಳ ವಿಷ್ಣುವರ್ಧನಒಂದನೆಯ ಮಹಾಯುದ್ಧಮಡಿವಾಳ ಮಾಚಿದೇವರೈತವಾರಿ ಪದ್ಧತಿಚಂದ್ರ (ದೇವತೆ)ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಕೋಟಿ ಚೆನ್ನಯಭಾರತೀಯ ಭಾಷೆಗಳುವಿಜಯನಗರಇಮ್ಮಡಿ ಪುಲಿಕೇಶಿವಿಭಕ್ತಿ ಪ್ರತ್ಯಯಗಳುಬೇವುಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಬೌದ್ಧ ಧರ್ಮಎಚ್.ಎಸ್.ವೆಂಕಟೇಶಮೂರ್ತಿಛಂದಸ್ಸುಅಟಲ್ ಬಿಹಾರಿ ವಾಜಪೇಯಿಸಿ. ಎನ್. ಆರ್. ರಾವ್ಕನ್ನಡ ವಿಶ್ವವಿದ್ಯಾಲಯರಾಮನಗರಜಗ್ಗೇಶ್ಕರ್ನಾಟಕದ ವಾಸ್ತುಶಿಲ್ಪಕರ್ನಾಟಕದ ಮಹಾನಗರಪಾಲಿಕೆಗಳುಕನಕದಾಸರುಗೋವಿಂದ ಪೈವಿವಾಹಲಕ್ಷ್ಮಿಏಡ್ಸ್ ರೋಗಗದಗಗಣಗಲೆ ಹೂಉತ್ತರಾಖಂಡಕರ್ನಾಟಕದ ಮುಖ್ಯಮಂತ್ರಿಗಳುಬೇಲೂರುಕೆ.ಎಲ್.ರಾಹುಲ್ರಾವಣಹೊಂಗೆ ಮರಶಬ್ದಮಣಿದರ್ಪಣಭಾರತದ ನದಿಗಳುಜಾಗತಿಕ ತಾಪಮಾನ ಏರಿಕೆಪಠ್ಯಪುಸ್ತಕಶ್ರೀ ರಾಮಾಯಣ ದರ್ಶನಂಶಿವಮೊಗ್ಗಛತ್ರಪತಿ ಶಿವಾಜಿಕೈಗಾರಿಕೆಗಳುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಸುಭಾಷ್ ಚಂದ್ರ ಬೋಸ್ಭಾರತದ ಸ್ವಾತಂತ್ರ್ಯ ಚಳುವಳಿವಾಲ್ಮೀಕಿಎರಡನೇ ಮಹಾಯುದ್ಧಮತದಾನಕರ್ನಾಟಕದ ಶಾಸನಗಳುಭಾರತದಲ್ಲಿ ಮೀಸಲಾತಿಜೀವನ ಚೈತ್ರಭಾರತೀಯ ರಿಸರ್ವ್ ಬ್ಯಾಂಕ್ಯೋನಿಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುರಾಮ್ ಮೋಹನ್ ರಾಯ್ಚಂದ್ರಶೇಖರ ವೆಂಕಟರಾಮನ್ರತ್ನತ್ರಯರುಕರ್ನಾಟಕದ ತಾಲೂಕುಗಳುಕುರುಬಸಾಯಿ ಪಲ್ಲವಿಕನ್ನಡ ಪತ್ರಿಕೆಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯಬಿಳಿ ಎಕ್ಕನಾಗರೀಕತೆವಾಣಿವಿಲಾಸಸಾಗರ ಜಲಾಶಯಚಂದ್ರಶೇಖರ ಕಂಬಾರನವಣೆರೋಸ್‌ಮರಿಆಭರಣಗಳು🡆 More