ಚೆನ್ನೆಮಣೆ

ಚೆನ್ನೆಮಣೆ ತುಳುನಾಡಿನ ಜನಪ್ರಿಯ ಆಟ.

ಇದನ್ನು ಕನ್ನಡದಲ್ಲಿ 'ಅಳಗುಳಿ ಮನೆ' ಎಂದು ಕರೆಯುತ್ತಾರೆ. ಇದರಲ್ಲಿ ಮನೆ ಅಂದರೆ ತುಳುವಿನ ಮಣೆ. 'ಮಣೆ' ಎಂದರೆ ಮರದಿಂದ ಮಾಡಿದ ಒಂದು ಅಡ್ಡವಾದ ವಸ್ತು.

ಐತಿಹ್ಯ

ಚೆನ್ನೆಮಣೆ
ಚೆನ್ನಮಣೆ

ತುಳುನಾಡಿನಲ್ಲಿ ಕಾರ್ತಿ ಸಾಗುವಳಿ ಮುಗಿದ ನಂತರ ಆಟಿ ತಿಂಗಳಲ್ಲಿ ಚೆನ್ನೆಯ ಮಣೆಯನ್ನು ಅಟ್ಟದಿಂದ ಕೆಳಗೆ ತಂದು ಚೆನ್ನೆಯಾಟ ಪ್ರಾರಂಭಿಸಿಸುವ ಕ್ರಮ. ಚೆನ್ನೆಯಾಟಕ್ಕೆ ಕವಡೆಕಾಯಿ, ಮಂಜೊಟ್ಟಿ ಕಾಯಿ, ಹೊಂಗಾರಕನ ಕಾಯಿ ಉಪಯೋಗಿಸುತ್ತಾರೆ. ಹಿಂದಿನ ಕಾಲದಲ್ಲಿ ಮನೆಯ ಪ್ರತಿಯೊಬ್ಬರು ಮಳೆಗಾಲದ ಸಮಯ ಬೆರೆತು ಕಲೆತು ಆಡುವುದಿತ್ತು. ಆದರೆ ಈಗ ಅಂಥ ದಿನಗಳು ಮಾಯವಾಗಿದೆ. ಈಗ ಹಳೆಯ ಕಾಲದ ಮನೆಗಳಲ್ಲಿ ಮಾತ್ರ ಚೆನ್ನೆ ಮಣೆ ಕಾಣ ಸಿಗುತ್ತದೆ. ಚೆನ್ನೆಯ ಮಣೆಯೊಂದರಲ್ಲಿ ತಲಾ ಏಳರಂತೆ ಎರಡು ಸಾಲಿನಲ್ಲಿ ಒಟ್ಟು ೧೪ ಗುಳಿಗಳಿರುತ್ತವೆ. ಎಡ ಮತ್ತು ಬಲದಲ್ಲಿ ಸಂಗ್ರಹಕ್ಕಾಗಿ ಎರಡು ದೊಡ್ಡ ಗುಳಿಗಳಿರುತ್ತವೆ. ಚೆನ್ನೆಬೀಜ (ಚೆನ್ನೆಕಾಯಿ)ಗಳನ್ನು ಒಂದರ ಬಳಿಕ ಒಂದರಂತೆ ಗುಳಿಗಳನ್ನು ಸಂಖ್ಯಾಬಲದ ಹಿನ್ನಲೆಯಲ್ಲಿ ಆಡುವುದು ಮತ್ತು ಸಂಗ್ರಹ ಗುಳಿಗಳಲ್ಲಿ ಅಧಿಕ ಬೀಜಗಳಿದ್ದರೆ ಆಟಗಾರ ಗೆಲ್ಲುವುದು ಇದರ ವೈಶಿಷ್ಟವಾಗಿದೆ. ಇಬ್ಬರು ಅಥವಾ ಮೂವರು ಆಟವಾಡುವುದು ಇಲ್ಲಿನ ಸಾಮನ್ಯ ಕ್ರಮ. ಇದಕ್ಕೆ ರಾಜನ ಆಟ (ಮೂವರ ಆಟ) ಎಂದೂ ಹೆಸರಿದೆ. ರಾಜನ ಆಟದಲ್ಲಿ ರಾಜನಿಗೆ ಎರಡು ಸಾಲು ಸೇರಿದಂತೆ ನಡುವಿನ ಆರು ಗುಳಿಗಳು ಗುಲಾಮರಿಗೆ ಮತ್ತು ಆತನ ಎಡ ಬಲ ಬದಿಯ ತಲಾ ನಾಲ್ಕು ಗುಳಿಗಳಿರುತ್ತವೆ. ಕೆಲವು ಆಟಗಳಲ್ಲಿ ತಲಾ ಒಂದು ಕಾಯನ್ನು ಹಾಕುವ ಮೂಲಕ ಆಡುವುದು. ಕೆಲವು ಆಟದಲ್ಲಿ ನಿಗದಿತ ಗುಳಿಯಲ್ಲದೆ ವಿರುದ್ಧ ಗುಳಿಯ ಕಾಯಿಯ ಬಳಕೆಗೆ ಸಿಗುವುದುಂಟು. ಕಟ್ಟೆ ಎಂಬ ಆಟದಲ್ಲಿ ಸಂಗ್ರಹ ಗುಳಿ ಬದಲಿ ಆಟದ (ಆಟಗಾರರ ಸಾಲಿನ ಕೊನೆಯ ಗುಳಿ) ಗುಳಿಯೇ ಸಂಗ್ರಹಕ್ಕೆ ಯೋಗ್ಯವಾಗುತ್ತದೆ. ಇದಕ್ಕೆ ತುಳುವಿನಲ್ಲಿ ಪೆರ್ಗ ಎನ್ನುತ್ತಾರೆ. ಪುರಾತನ ಕಾಲದಲ್ಲಿ ಅಬ್ಬಗ ದಾರಗ ಎಂಬ ಅಕ್ಕ ತಂಗಿಯರು ಚೆನ್ನೆಯಾಟವಾಡಿ ಜಗಳವಾಗಿ ಕೊನೆಗೆ ಚೆನ್ನೆಮಣೆಯಿಂದ ಅಕ್ಕ ತಂಗಿಗೆ ಹೊಡೆದು ಪ್ರಾಣ ತೆಗೆಯುತ್ತಾಳೆ.ಆ ಮೇಲೆ ಪಶ್ಚಾತ್ತಾಪವಾಗಿ ಅಕ್ಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಮೆಲೆ ಅಬ್ಬಗ ದಾರಗ ದೈವಗಳಾಗುತ್ತರೆ. ಈ ಕಥೆ ಪಾಡ್ದನದಿಂದ ತಿಳಿಯುತ್ತದೆ. ಅವರ ಶಾಪದನುಸಾರ ಅಕ್ಕ ತಂಗಿಯರು ಚೆನ್ನೆಯಾಟ ಆಡಬಾರದೆಂಬ ನಂಬಿಕೆಯಿದೆ. ಈ ಆಟ ಸಾಗುವಳಿ ಮುಗಿದ ಆಟಿ ಸೋಣ ತಿಂಗಳಿನ ತೆನೆ ಕಟ್ಟಿದ ನಂತರ ಆಡಬಾರದೆಂಬ ನಿಯಮವಿದೆ. ಆ ಮೇಲೆ ಚೆನ್ನೆಮಣೆ ಆಟಕ್ಕೆ ಸೇರುತ್ತದೆ. ಈಗಿನ ಕಾಲದಲ್ಲಿ ಚೆನ್ನೆಮಣೆಯ ಜಾಗವನ್ನು ಕೇರಮ್ ಬೋರ್ಡ್ ಮತ್ತು ಚೆಸ್ ಬೋರ್ಡ್ ಅಕ್ರಮಿಸಿವೆ.

ಆಟದ ಕುರಿತು

ಚೆನ್ನೆಮಣೆ
ಚೆನ್ನ ಮಣೆ

ಜನಪದ ಆಟಗಳು ಆಚರಣಾತ್ಮಕ ಸಂಬಂಧವನ್ನು ಪಡೆದಿವೆ. ಅದರಲ್ಲೂ ತುಳುನಾಡಿನಲ್ಲಿ ಹಲವಾರು ಆಟಗಳು ಧಾರ್ಮಿಕ ಮತ್ತು ಅಚರಣಾತ್ಮಕ ಕ್ರಿಯೆಗಳೊಂದಿಗೆ ಅನ್ಯೋನ್ಯವಾದ ಸಂಬಂಧವನ್ನು ಇರಿಸಿಕೊಂಡಿವೆ.ಇದರಲ್ಲಿ ಚೆನ್ನೆಮಣೆ ಆಟವು ಒಂದಾಗಿದೆ. ಚೆನ್ನೆಮಣೆ ಆಟವು ತುಳುನಾಡಿನ ಜನಪ್ರಿಯ ಒಳಾಂಗಣ ಆಟವಾಗಿದೆ.ತುಳುನಾಡಿನ ಸಾಂಸ್ಕ್ರುತಿಕ ಬದುಕಿನ ವಿವರಗಳು ಚೆನ್ನೆಮಣೆ ಆಟದಲ್ಲಿ ದಾಖಲಾಗುತ್ತದೆ.ಚೆನ್ನೆಮಣೆ ಕೇವಲ ತುಳುನಾಡಿಗೆ ಸೀಮತವಾದ ಆಟವಲ್ಲ,ಆಫ್ರಿಕಾದ ಫಿಲಿಫೈಸ್ಸಿನವರೆಗು ಹಬ್ಬಿರುವ ಈ ಆಟ ಏಷ್ಯಾಖಂಡದಲ್ಲಿ ಜನಪ್ರಿಯವಾಗಿದೆ.ತುಳು ನಾಡಿನಲ್ಲಿ ಈ ಆಟವು ಹೆಚ್ಚು ಮಹತ್ವವನ್ನು ಪಡೆದಿದೆ.ಚೆನ್ನೆಯಾಟ ಮನೆ ಮಂದಿಯೊಂದಿಗೆ ಮಕ್ಕಳೊಂದಿಗೆ ಕುಳಿತು ಸಂತೋಷದಿಂದ ಮನರಂಜನೆಯಿಂದ ಆಡಬಹುದಾದ ಆಟವಾಗಿದೆ.ಚೆನ್ನೆಒಂದು ವಿಶಿಷ್ಟವಾದ ಶಬ್ದವಾಗಿದೆ. ಕನ್ನಡದಲ್ಲಿ ಚೆನ್ನ ಮತ್ತು ಚೆನ್ನೆ ಪದಗಳಿಗೆ ಸುಂದರ ಸುಂದರಿ ಎಂಬ ಅರ್ಥಗಳಿವೆ.ನಮ್ಮ ತುಳುವ-ಪುರಾಣ ಮತ್ತು ಅರಾಧನಾ ಸಂಪ್ರದಾಯಗಳ ಪ್ರಕಾಶವು 'ಚೆನ್ನೆ' ಶಬ್ದಕ್ಕೆ 'ಸುಂದರ'ಮನೋಹರ 'ಆಕರ್ಷಕ' ಮೊದಲಾದ ಅರ್ಥಗಳನ್ನ ಗ್ರಹಿಸಬಹುದಾಗಿದೆ.ತುಳುವಿನಲ್ಲಿ ಚೆನ್ನೆಮಣೆ ಆಟವನ್ನ 'ಚೆನ್ನೆಯ ಗೊಬ್ಬು'ಎಂದು ಕರೆಯುತ್ತಾರೆ.ಚೆನ್ನೆಮಣೆ ಆಟದಲ್ಲು ಭೂಮಿ ಮತ್ತು ಹೆಣ್ಣನ್ನು ರೂಪಕಾತ್ಮಕವಾಗಿ ಬಳಸಿದಂತೆ ತೋರುತ್ತದೆ ಎಂಬುದು ವಿದ್ಯಾಂಸರ ಅಭಿಪ್ರಾಯವಾಗಿದೆ ಹಲವು ಐತಿಯಗಳಿದ್ದು ಈ ಆಟದ ಕುರಿತಾಗಿ ಈ ಐತಿಹ್ಯಗಳು ಹೆಣ್ಣು ಮಕ್ಕಳ ಕುರಿತಾಗಿವೆ.

ಆಟ ಆಡುವ ಸಮಯ

ಈ ಆಟವು ವರ್ಷಪೂರ್ತಿ ಆಡುವ ಹಾಗಿಲ್ಲ ಇದಕ್ಕೂ ಕೂಡ ಕೆಲ ನಂಬಿಕೆಗಳಿವೆ ಅಂದರೆ ಈ ಅಟವನ್ನು ಆಟಿ ತಿಂಗಳಿನಲ್ಲಿ ಮಾತ್ರ ಆಡುವ ಸಂಪ್ರದಾಯ ನಮ್ಮಲ್ಲಿದೆ.ಹಿರಿಯರು ಹೇಳಿದಂತೆ ಆಟಿ ತಿಂಗಳು ಮುಗಿದೊಡನೆ ಚೆನ್ನೆ ಮಣೆಯನ್ನ ಅಟ್ಟದಲ್ಲಿ ಇಡಬೇಕು ಆಟಿ ತಿಂಗಳು ತುಂಬಾ ಮಳೆಯ ಸಮಯ ಹಿಂದಿನ ಕಾಲದಲ್ಲಿ ಹೊರಗೆ ಕಾಲಿಡಿದಷ್ಟು ಮಳೆ ಬರುತ್ತಿತ್ತು ಗದ್ದೆಯಕೆಲಸ ಮುಗಿದಿರುತ್ತದೆ.ಈ ಸಂಧರ್ಭ ಮನೋರಂಜನೆಗಾಗಿ ಚೆನ್ನೆಮಣೆ ಆಡುತ್ತಾರೆ,ಈಗಿನ ದಕ್ಷಿಣ ಕನ್ನಡ, ಉಡುಪಿ ಪ್ರದೇಶಗಳನೊಳಗೊಂಡ ತುಳುನಾಡಿನಲ್ಲಿ ವ್ಯಾಪಕವಾಗಿದೆ. ತುಳುವರು ಬತ್ತದ ಬೆಳೆಯನ್ನು ಆರಾಧನಾ ಬಾವದಿಂದ ಕಂಡವರಾಗಿದ್ದಾರೆ, ಈ ಚೆನ್ನೆಯಾಟವು ಧಾರ್ಮಿಕ ಮತ್ತು ಆಚರಣಾತ್ಮಕ ನಂಬಿಕೆಗಳಿಂದ ನಿಯಂತ್ರಿತವಾಗಿದೆ.'ಸಿರಿ ' ಆರಾಧನೆಯ ಸಂಧರ್ಭದಲ್ಲಿ ಈ ಆಟವು ನೇರವಾಗಿ ಧಾರ್ಮಿಕ ಕ್ರಿಯೆಯಲ್ಲಿ ಬಳಕೆಯಾಗಿದೆ. ಸಿರಿ ಪಾಡ್ಡನದ ಒಂದು ಭಾಗವಾದ 'ಅಬ್ಬಗ-ದಾರಗ' ಪಾಡ್ಡನದಲ್ಲಿ ಚೆನ್ನೆಯಾಟದ ವಿವರಗಳು ದೊರೆಯುತ್ತದೆ.

ನಂಬಿಕೆಗಳು

ಬೂಡಿನ ಬಲ್ಲಾಳ ಅರಸನು ಒಮ್ಮೆ ತನ್ನ ಹೆಂಡತಿ ಮಾಣಿ ಗಳನ್ನು ಚೆನ್ನೆಯಾಟಕ್ಕೆ ಕರೆಯುತ್ತಾರೆ ,ಗಂಡ ಹೆಂಡತಿ ಚೆನ್ನೆಯಾಡುತ್ತಾರೆ. ಗಂಡ ಬಲ್ಲಾಳನು ಸೋಲುತ್ತಾನೆ,ಮಾಣಿಯನ್ನು ನೀರು ತರುವಂತೆ ಕಳುಹಿಸಿದ ಬಲ್ಲಾಳರು ಮಣಿ ತಿರುಗಿಸಿ ಇಡುತ್ತಾರೆ,ಇದರಿಂದ ಮಾಣಿಗಳಿಗೆ ಕೋಪ ಬರುತ್ತದೆ,ಅವಳು ಗಂಡನನ‍್ನ ಅಪಹಾಸ್ಯ ಮಾಡುತ್ತಾಳೆ,ಇದರಿಂದ ಸಿಟ್ಟುಗೊಂಡ ಬಲ್ಲಾಳರು ಮಾಣಿಗಳನ್ನು ಹೊಡೆಯುತ್ತಾರೆ,ಅವಳು ಮನೆಬಿಟ್ಟು ಹೋಗುತ್ತಾಳೆ,ಮತ್ತೇ ಮರಳಿ ಬಂದರು 'ಜೂಮಾದಿ' ಭೂತಕ್ಕೆ ಹರಕೆ ಹೇಳಿದ ಕಾರಣದಿಂದ ಮಾಣಿಗಳು ಸಾಯುತ್ತಾರೆ, ಹೀಗೆ ದುರಂತ ಕಥಾನಕವನ್ನು ಈ ಆಟವು ಹೊಂದಿದೆ, ಗಂಡ ಹೆಂಡತಿ ಈ ಆಟ ಆಡಬಾರದೆಂಬ ನಂಬಿಕೆಯಿದೆ,ಒಂದೇ ತಾಯಿಯ ಮಕ್ಕಳು ಈ ಆಟವನ್ನು ಆಡಬಾರದೆಂಬ ನಿಷೇಧವು ಕೆಲವು ಪ್ರದೇಶಗಳಲ್ಲಿ ಇದೆ. ಈ ಆಟವು ಭಾವನಾತ್ಮಕ ಸಂಘರ್ಷ ವನ್ನು ಉಂಟುಮಾಡಬಾರದೆಂಬ ಕಾರಣದಿಂದ ಇಂಥ ನಿಷೇಧಗಳು ಹುಟ್ಟಿವೆ ಎನ್ನಬಹುದು.

ಆಟದ ವಿಧಾನ ಮತ್ತು ನಿಯಮ

ಈ ಆಟವನ್ನು ಆಟಿ ತಿಂಗಳಲ್ಲಿ ಮಾತ್ರ ಆಡಬೇಕು.ಆಟಿ ತಿಂಗಳು ಆರಂಭವಾಗುವ ತಿಂಗಳ ಮೊದಲ ದಿನ ಅಟ್ಟದಿಂದ ತೆಗೆಯಬೇಕು ಆಟಿ ಹೂರಗೆ ಹಾಕುವ ದಿನ ಅಂದರೆ ಆಟಿ ತಿಂಗಳು ಮುಗಿದು ಶ್ರಾವಣದ ಮೊದಲ ದಿನ ಮಣಿಯನ್ನ ತೊಳೆದು ಅಟ್ಟಕೆ ಹಾಕಬೇಕು ಈ ಆಟದಲ್ಲಿ ಇಬ್ಬರು ಆಟಗಾರರು ಆಡುತ್ತಾರೆ ಆಟಗಾರರು ಕುಳಿತುಕೊಂಡ ವಿರುದ್ಧ ಬದಿಯಕೊಣೆಗಳು ಅವನಿಗೆ ಸೇರಿದ್ದಾಗಿರುತ್ತದೆ.೧೪ ಕೊಣೆಗಳನ್ನು ೪-೪ ಕಾಯಿಗಳಿಂದ ತುಂಬಿಸುತ್ತಾರೆ .ಒಬ್ಬ ಆಟಗಾರನು ತನಗೆ ಸಂಬದಿಸಿದ ಒಂದು ಕೋಣೆಯಿಂದ ಎಲ್ಲಾ ಕಾಯಿಗಳನ್ನು ಒಂದೊಂದರಂತೆ ಅಪ್ರದಕ್ಷಿಣೆಯಾಗಿ ಮುಂದಿನ ಕೋಣೆಗಳಿಗೆ ಹಾಕುತ್ತಾ ಹೋಗುತ್ತಾನೆ.ಕೈಯಲ್ಲಿರುವ ಕಾಯಿಮುಗಿದ ನಂತರ ಕೊನೆಗೆ ಕಾಯಿಹಾಕಿದ ಕೋಣೆಯಿಂದ ಕಾಯಿಗಳನ್ನು ಮತ್ತೆ ಹಂಚುತ್ತಾ ಹೋಗುತ್ತಾರೆ. ಕೈಯಲ್ಲಿರುವ ಕಾಯಿಗಳೆಲ್ಲಾ ಮುಗಿಯುತ್ತಾ ಕೊನೆಯ ಕಾಯಿಯನ್ನು ಒಂದು ಕೋಣೆಗೆ ಹಾಕಿದ ಬಳಿಕ ಕಾಯಿಯಿಲ್ಲದ ಖಾಲಿ ಕೋಣೆ ಸಿಕ್ಕಿದರೆ ಆಗ ಆಟಗಾರನು ಆಟ ನಿಲ್ಲಿಸಬೇಕಾಗುತ್ತದೆ.ಅದರ ಹಿಂದಿನ ಕೋಣಿಗೆ ಹಾಕಿದ ಏಕೈಕ ಕಾಯಿಯನ್ನು 'ಜೆಪ್ಪೆ'ಎಂದು ಕರೆಯುತ್ತಾರೆ .ಅಲ್ಲಿಗೆ ಅವನ ಆಟ ಮುಗಿಯುತ್ತದೆ.ಆದರೆ ಅವನು ಏಕೈಕ ಕಾಯಿಯಿಂದ ಅಂದರೆ ಜೆಪ್ಪೆಯಿಂದ ಆಟ ಪ್ರಾರಂಭಿಸಬಹುದು. ಇದರಲ್ಲಿ ಪೆರ್ಗ ಮತ್ತು ಬುಲೆ ಪೆರ್ಗ ಕೂಡ ಇರುತ್ತದೆ. ಪೆರ್ಗ ಎಂದರೆ ನಮ್ಮ ಅರೆ ಕನ್ನಡ ದಲ್ಲಿ ಹೆಗ್ಗೆ ಎಂದು ಕರೆಯುತ್ತಾರೆ. ಈ ಆಟವನ್ನ ಒಂದೇ ಮಣಿಯಲ್ಲಿ ೩ ಜನ ಕೂಡ ಆಡುತ್ತಾರೆ.ಅರಸು, ಮಂತ್ರಿ,ಪೈಕ, ಅರಸನಿಗೆ ೬ ಕೋಣಿಗಳು ಮೊದಲ ಸಾಲಿನ ೩ ಕೋಣೆ ಅಂದರೆ ಮಧ್ಯದ ಕೋಣೆಗಳು ಎರಡನೇ ಸಾಲಿನ ಮೂರು ಕೋಣೆ ಒಟ್ಟು ೬ ಕೋಣೆಗಳು ಮಂತ್ರಿಗೂ ಪೈಕುಗು ೪-೪ ಕೋಣೆಗಳು. ಆಟ ಆಡಿದ ನಂತರ ಅರಸನಿಗೆ ಪ್ರಧಾನಿ ಮತ್ತು ಪೈಕು ಒಂದೊಂದು ಕಾಯಿಗಳನ್ನ ಗೇಣಿ ಕೊಡಬೇಕಾಗುತ್ತದೆ.ಹೀಗೆ ಈ ಆಟವನ್ನ ಸೋಲು,ಗೆಲುವು ಆಗುವವರೆಗು ಆಟ ಆಡುತ್ತಾ ಹೋಗಬೇಕು. ಹೀಗೆ ಆಟವು ಸೋಲು ಗೆಲುವಿನಲ್ಲಿ ಅಂತ್ಯ ಗೊಳ‍್ಳುತ್ತದೆ. ಅಂದರೆ ಈ ಮಣಿಯಲ್ಲಿ ಆಡಲು ಒಟ್ಟು ೫೬ ಕಾಯಿಗಳಿರಲೇ ಬೇಕಾಗುತ್ತದೆ.ಒಂದು ಕಾಯಿ ತಪ್ಪಿಹೋದರೂ ಆಟ ತಪ್ಪಾಗಿ ಹೋಗುತ್ತದೆ. ಒಟ್ಟಿನಲ್ಲಿ ಹೇಳುದಾದರೆ ಈ ಚೆನ್ನೆ ಮಣೆ ಆಟವು ನಂಬಿಕೆ, ಆಚರಣೆಗಳನ್ನ ಪ್ರತಿಬಿಂಬಿಸುತ್ತದೆ.ಚೆನ್ನೆ ಮಣೆ ಆಟ ಮತ್ತು ಕೃಷಿಗೆ ಸಂಭದಿಸಿದ ಇತರೆ ಆಚರಣೆಗಳ ಮೂಲಕ ಸಂಸ್ಕೃತಿಯು ಈ ಚಟುವಟಿಕೆಗಳಿಗೆ ವ್ಯಕ್ತಿಯನ್ನ ಸಿದ್ದಗೊಳಿಸುತ್ತದೆ.ಇದು ಚೆನ್ನೆ ಮಣೆ ಆಟದ ಒಂದು ಮುಖ್ಯಕಾರ್ಯವಾಗಿದೆ.

ಚೆನ್ನೆಮಣೆ

ಚೆನ್ನೆಮಣೆ ತುಳುನಾಡಿನ ಜನಪ್ರಿಯ ಆಟ.

Tags:

ಚೆನ್ನೆಮಣೆ ಐತಿಹ್ಯಚೆನ್ನೆಮಣೆ ಆಟದ ಕುರಿತುಚೆನ್ನೆಮಣೆ ಆಟ ಆಡುವ ಸಮಯಚೆನ್ನೆಮಣೆ ನಂಬಿಕೆಗಳುಚೆನ್ನೆಮಣೆ ಆಟದ ವಿಧಾನ ಮತ್ತು ನಿಯಮಚೆನ್ನೆಮಣೆ ಉಲ್ಲೇಖಗಳುಚೆನ್ನೆಮಣೆ

🔥 Trending searches on Wiki ಕನ್ನಡ:

ಬಾದಾಮಿಮೈಸೂರು ರಾಜ್ಯವಿಮರ್ಶೆಬೆಂಗಳೂರುಹೂವುಐಹೊಳೆಅರುಣಿಮಾ ಸಿನ್ಹಾಕನ್ನಡ ಸಾಹಿತ್ಯ ಸಮ್ಮೇಳನಕೆ. ಎಸ್. ನರಸಿಂಹಸ್ವಾಮಿಚಂದ್ರಗುಪ್ತ ಮೌರ್ಯಕ್ರೋಮ್ ಕಾರ್ಯಾಚರಣಾ ವ್ಯವಸ್ಥೆಬಹಮನಿ ಸುಲ್ತಾನರುಛಂದಸ್ಸುಕ್ರಿಯಾಪದಜಲ ಮಾಲಿನ್ಯದಾಸವಾಳಕನ್ನಡದಲ್ಲಿ ಸಣ್ಣ ಕಥೆಗಳುಪೌರತ್ವಕರ್ನಾಟಕ ಯುದ್ಧಗಳುಬಾಹುಬಲಿಪರಿಸರ ವ್ಯವಸ್ಥೆರೈತವಾರಿ ಪದ್ಧತಿದ್ರವ್ಯಮಂಕುತಿಮ್ಮನ ಕಗ್ಗಧನಂಜಯ್ (ನಟ)ಎಂ. ಎಂ. ಕಲಬುರ್ಗಿಎಚ್.ಎಸ್.ಶಿವಪ್ರಕಾಶ್ಹಿಮಾಲಯಸಂಶೋಧನೆವೆಂಕಟೇಶ್ವರ ದೇವಸ್ಥಾನಗೋವಿಂದ ಪೈಸೋನು ಗೌಡದುರ್ಗಸಿಂಹತಾಳಗುಂದ ಶಾಸನಶಬ್ದಮಣಿದರ್ಪಣಬಿ. ಆರ್. ಅಂಬೇಡ್ಕರ್ಟಾವೊ ತತ್ತ್ವಬಂಡಾಯ ಸಾಹಿತ್ಯಏಷ್ಯಾ ಖಂಡಧರ್ಮಸಾರಾ ಅಬೂಬಕ್ಕರ್ಜೋಗಬರಗೂರು ರಾಮಚಂದ್ರಪ್ಪಕಿರುಧಾನ್ಯಗಳುಬೇಲೂರುಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಚನ್ನಬಸವೇಶ್ವರರೋಸ್‌ಮರಿಭಾಮಿನೀ ಷಟ್ಪದಿಭಾರತೀಯ ಭೂಸೇನೆಕದಂಬ ರಾಜವಂಶರಮ್ಯಾಕರ್ನಾಟಕದ ಸಂಸ್ಕೃತಿಮೂರನೇ ಮೈಸೂರು ಯುದ್ಧಯೇಸು ಕ್ರಿಸ್ತಕರ್ನಾಟಕ ಸಂಗೀತಪ್ರವಾಸೋದ್ಯಮಅ. ರಾ. ಮಿತ್ರವಂದನಾ ಶಿವದಯಾನಂದ ಸರಸ್ವತಿವೃತ್ತೀಯ ಚಲನೆಅಂಬರ್ ಕೋಟೆಲಾಲ್ ಬಹಾದುರ್ ಶಾಸ್ತ್ರಿಗೋತ್ರ ಮತ್ತು ಪ್ರವರಮಾಧ್ಯಮಗ್ರಹಬಹುವ್ರೀಹಿ ಸಮಾಸಕಾಳ್ಗಿಚ್ಚುಆಂಗ್‌ಕರ್ ವಾಟ್ದಿಕ್ಸೂಚಿಎಚ್ ನರಸಿಂಹಯ್ಯಸಂಭೋಗವಿಮೆಕರ್ನಾಟಕದ ಶಾಸನಗಳುಯಕ್ಷಗಾನಹನುಮಂತಕರ್ನಾಟಕದ ಅಣೆಕಟ್ಟುಗಳು🡆 More