ಗ್ಯಾಬ್ರೊ

ಕಪ್ಪು ಇಲ್ಲವೇ ನೇರಳೆ ಬಣ್ಣಮಿಶ್ರಿತ ಅಗ್ನಿಶಿಲೆ.

ಗ್ಯಾಬ್ರೊ
A[ಶಾಶ್ವತವಾಗಿ ಮಡಿದ ಕೊಂಡಿ] gabbro landscape on the main ridge of the Cuillin, Isle of Skye, Scotland.
ಗ್ಯಾಬ್ರೊ
[ಶಾಶ್ವತವಾಗಿ ಮಡಿದ ಕೊಂಡಿ]Photomicrograph of a thin section of gabbro

ರಚನೆ

ಶಿಲಾರಸ ಭೂತಳದಲ್ಲಿರುವ ಬಿರುಕುಗಳಿಗೆ ನುಗ್ಗಿ, ನಿಧಾನವಾಗಿ ಘನೀಭವಿಸಿದಾಗ ಇದು ಉಂಟಾಗುತ್ತದೆ. ಹೀಗಾಗಿ ಇದರ ಖನಿಜಗಳಿಗೆ ವಿಶೇಷತಃ ಪೂರ್ಣಸ್ಫಟಿಕತ್ವದ, ಪೂರ್ಣಾಕಾರದ ಮತ್ತು ಗಾತ್ರದಲ್ಲಿ ಉರುಟಾದ ಖನಿಜ ಸಂಯೋಜನೆ ಉಂಟು. ಭೂಮಿಯ ಅಂತರಾಳದಲ್ಲೇ ಶಿಲೆಯಾಗುವ ಅಗ್ನಿಶಿಲೆಗಳನ್ನು ಅಂತರಾಗ್ನಿಶಿಲೆಗಳೆಂದು ಕರೆಯುವುದರಿಂದ ಗ್ಯಾಬ್ರೊಶಿಲೆಯನ್ನು ಈ ಗುಂಪಿಗೆ ಸೇರಿಸುತ್ತಾರೆ. ಈ ಗುಂಪಿನ ಶಿಲೆಗಳು ಹೆಚ್ಚಾಗಿ ಲೊಪೊಲಿತ್ ಅಥವಾ ಡೈಕ್ ಆಕೃತಿಯಲ್ಲಿ ಇರುತ್ತವೆ. ಆರುತ್ತಿರುವ ಶಿಲಾರಸದಿಂದ ಮೊದಲು ಬೇರ್ಪಟ್ಟು ಘನೀಭವಿಸುತ್ತಿರುವ ಶಿಲೆಗಳಲ್ಲಿ ಸಿಲಿಕಾಂಶ ಕಡಿಮೆ ಇರುತ್ತದೆ. ಆಮೇಲೆ ಘನೀಭವಿಸುವ ಶಿಲೆಗಳಲ್ಲಿ ಕ್ರಮೇಣ ಆ ಅಂಶ ಜಾಸ್ತಿಯಾಗುತ್ತದೆ. ಸಿಲಿಕಾಂಶದ ಆಧಾರದ ಮೇಲೆ ಶಿಲೆಗಳನ್ನು ಅತಿಪರ್ಯಾಪ್ತ (ಸಿಲಿಕಾಂಶ ಶೇ.80 - ಶೇ.60), ಪರ್ಯಾಪ್ತ (ಸಿಲಿಕಾಂಶ ಶೇ.50- ಶೇ.48) ಮತ್ತು ಅಪರ್ಯಾಪ್ತ (ಸಿಲಿಕಾಂಶ ಶೇ.54.5 - ಶೇ.41) ಶಿಲೆಗಳೆಂದು ವಿಂಗಡಿಸುವುದು ವಾಡಿಕೆ. ಇದರ ಪ್ರಕಾರ ಗ್ಯಾಬ್ರೊಶಿಲೆ ಪರ್ಯಾಪ್ತ ಶಿಲಾಪಂಗಡಕ್ಕೆ ಸೇರುತ್ತದೆ.

ಪರ್ಯಾಪ್ತ ಅಂತರಾಗ್ನಿ ಶಿಲೆಗಳನ್ನು ಗ್ಯಾಬ್ರೊ, ಅನಾರ್ತೊಸೈಟ್, ಪೆರಿಡೊಟೈಟ್ ಮುಂತಾಗಿ ಅವುಗಳ ಖನಿಜಸಂಯೋಜನೆಗೆ ಅನುಗುಣವಾಗಿ ಕರೆಯುತ್ತಾರೆ.

ಒಳಗಿನ ಖನಿಜಗಳು

ಗ್ಯಾಬ್ರೊ ಶಿಲೆಯಲ್ಲಿ ಪ್ಲೇಜಿಯೋಕ್ಲೀನ್ ಮತ್ತು ಪೈರಾಕ್ಸೀಸ್ ಮುಖ್ಯ ಖನಿಜಗಳು. ಇವುಗಳಲ್ಲದೆ ಬಯೋಟೈಟ್, ಹಾರನ್ಬ್ಲಂಡ್, ಇಲ್ಮನೈಟ್, ಮ್ಯಾಗ್ನಟೈಟ್ ಮುಂತಾದ ಖನಿಜಗಳು ಆನುಷಂಗಿಕವಾಗಿ ಇರಬಹುದು. ಕೆಲವು ವೇಳೆ ಗ್ಯಾಬ್ರೊಶಿಲೆಯಲ್ಲಿ ಬೆಣಚುಕಲ್ಲು ಅಥವಾ ಆಲಿವೀನ್ ಖನಿಜಗಳು ಬೆರೆತಿರುವ ಸಾಧ್ಯತೆ ಉಂಟು. ಇಂಥವುಗಳಿಗೆ ಬೆಣಚುಕಲ್ಲು ಗ್ಯಾಬ್ರೊ ಅಥವಾ ಆಲಿವೀನ್ ಗ್ಯಾಬ್ರೊ ಎಂದು ಹೆಸರು.

ಎಲ್ಲೆಲ್ಲಿ

ಗ್ಯಾಬ್ರೊ ಮತ್ತು ಇದರ ಗುಂಪಿಗೆ ಸೇರಿದ ಇತರ ಶಿಲೆಗಳು ವಿಶೇಷವಾಗಿ ಇಂಗ್ಲೆಂಡಿನ ಲೇಕ್ ಡಿಸ್ಟ್ರಿಕ್ಟ್‌, ಕೆನಡದ ನಡ್ಬೆರಿ, ಗ್ರೀನ್ಲೆಂಡಿನ ಸ್ಕೇಲ್ಗಾರ್ಡ್, ದಕ್ಷಿಣ ಆಫ್ರಿಕದ ಬುಷ್ವೆಲ್ಡ್‌ ಹಾಗೂ ಭಾರತದ ಗಿರ್ನಾರ್ ಗುಡ್ಡಗಳು ಮತ್ತು ಸೇಲಮ್ ಜಿಲ್ಲೆ ಪ್ರದೇಶಗಳಲ್ಲಿ ದೊರೆಯುತ್ತವೆ.

ಉಪಯೋಗ

ಈ ಶಿಲೆಗಳಲ್ಲಿರುವ ಪ್ಲೇಜಿಯೋಕ್ಲೀನ್ (ಲ್ಯಾಬ್ರೊಡರೈಟ್) ಖನಿಜದಿಂದಾಗಿ ಅವುಗಳಿಗೆಲ್ಲ ಒಂದು ಬಗೆಯ ನೇರಳೆಬಣ್ಣ ಬರುವುದುಂಟು. ಇದಲ್ಲದೆ ಈ ಖನಿಜದಿಂದಾಗಿ ಗ್ಯಾಬ್ರೊ ಶಿಲೆಯನ್ನು ಬೇರೆ ಬೇರೆ ಕೋನದಿಂದ ನೋಡಿದಾಗ ಬೇರೆ ಬೇರೆ ಬಣ್ಣ ಕಾಣುವುದೂ ಉಂಟು. ಹೀಗಾಗಿ ಗ್ಯಾಬ್ರೊಶಿಲೆಯನ್ನು ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಅಲಂಕಾರ ಶಿಲೆಯಾಗಿ ಉಪಯೋಗಿಸುತ್ತಾರೆ.

ಉಲ್ಲೇಖಗಳು

ಗ್ಯಾಬ್ರೊ 
A[ಶಾಶ್ವತವಾಗಿ ಮಡಿದ ಕೊಂಡಿ] gabbro landscape on the main ridge of the Cuillin, Isle of Skye, Scotland.
ಗ್ಯಾಬ್ರೊ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಗ್ಯಾಬ್ರೊ ರಚನೆಗ್ಯಾಬ್ರೊ ಒಳಗಿನ ಖನಿಜಗಳುಗ್ಯಾಬ್ರೊ ಎಲ್ಲೆಲ್ಲಿಗ್ಯಾಬ್ರೊ ಉಪಯೋಗಗ್ಯಾಬ್ರೊ ಉಲ್ಲೇಖಗಳುಗ್ಯಾಬ್ರೊಅಗ್ನಿಶಿಲೆ

🔥 Trending searches on Wiki ಕನ್ನಡ:

1935ರ ಭಾರತ ಸರ್ಕಾರ ಕಾಯಿದೆಕ್ಷತ್ರಿಯರವೀಂದ್ರನಾಥ ಠಾಗೋರ್ಕನ್ನಡ ಸಾಹಿತ್ಯಮಲಬದ್ಧತೆಭಾರತದ ರಾಷ್ಟ್ರಪತಿಕನ್ನಡದಲ್ಲಿ ಸಣ್ಣ ಕಥೆಗಳುಅರ್ಥಶಾಸ್ತ್ರಬಾದಾಮಿಅಮ್ಮಯೇಸು ಕ್ರಿಸ್ತಜನಪದ ಕರಕುಶಲ ಕಲೆಗಳುಅರಬ್ಬೀ ಸಾಹಿತ್ಯಪುಟ್ಟರಾಜ ಗವಾಯಿಗರ್ಭಧಾರಣೆಅಂಬರೀಶ್ ನಟನೆಯ ಚಲನಚಿತ್ರಗಳುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಎಚ್ ೧.ಎನ್ ೧. ಜ್ವರಸಾರಾ ಅಬೂಬಕ್ಕರ್ಮುರುಡೇಶ್ವರಕಿತ್ತಳೆಪ್ರೀತಿಗ್ರಾಮ ಪಂಚಾಯತಿಮೆಕ್ಕೆ ಜೋಳಗೋಕರ್ಣಗೋವಿನ ಹಾಡುಮಧ್ವಾಚಾರ್ಯಕಾವೇರಿ ನದಿ ನೀರಿನ ವಿವಾದಗುರುಸಮುದ್ರಗುಪ್ತಆಗುಂಬೆಶಬ್ದವೇಧಿ (ಚಲನಚಿತ್ರ)ಭಾರತದ ಇತಿಹಾಸಮುದ್ದಣಸಾರ್ವಜನಿಕ ಹಣಕಾಸುರಾಜ್‌ಕುಮಾರ್ಚಾಣಕ್ಯಗೂಗಲ್ಛತ್ರಪತಿ ಶಿವಾಜಿಮೌರ್ಯ (ಚಲನಚಿತ್ರ)ಪ್ಲೇಟೊಉಪನಯನಮಲ್ಟಿಮೀಡಿಯಾಮೂಲಭೂತ ಕರ್ತವ್ಯಗಳುಮೈಗ್ರೇನ್‌ (ಅರೆತಲೆ ನೋವು)ಕಮಲಹೈದರಾಲಿಆಮ್ಲ ಮಳೆಎಸ್.ಎಲ್. ಭೈರಪ್ಪಕರ್ನಾಟಕದ ಏಕೀಕರಣಎಚ್ ಎಸ್ ಶಿವಪ್ರಕಾಶ್ಮೌರ್ಯ ಸಾಮ್ರಾಜ್ಯವಿವಾಹಇನ್ಸ್ಟಾಗ್ರಾಮ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಲಿಂಗಾಯತ ಪಂಚಮಸಾಲಿಭಾಮಿನೀ ಷಟ್ಪದಿತುಳಸಿಚಿಕ್ಕೋಡಿಓಂ (ಚಲನಚಿತ್ರ)ಬಿಳಿ ರಕ್ತ ಕಣಗಳುಪರಿಸರ ರಕ್ಷಣೆಫೇಸ್‌ಬುಕ್‌ಚನ್ನಬಸವೇಶ್ವರಮೊದಲನೆಯ ಕೆಂಪೇಗೌಡಕಾಮಸೂತ್ರಸಂಯುಕ್ತ ರಾಷ್ಟ್ರ ಸಂಸ್ಥೆರಾಷ್ಟ್ರೀಯ ಮತದಾರರ ದಿನಬೀಚಿತೀ. ನಂ. ಶ್ರೀಕಂಠಯ್ಯತುಮಕೂರುಹೊಂಗೆ ಮರಗಣೇಶ ಚತುರ್ಥಿರಾಮನಾಮಪದಮಾನವ ಸಂಪನ್ಮೂಲ ನಿರ್ವಹಣೆಚಾರ್ಲಿ ಚಾಪ್ಲಿನ್🡆 More