ಕೊಲ್ಲಾಪುರ

ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿರುವ ಒಂದು ನಗರ ಕೊಲ್ಲಾಪುರ.

(ಮರಾಠಿಯಲ್ಲಿ ಕೊಲ್ಹಾಪುರ) ಜನಸಂಖ್ಯೆ (೨೦೦೧ ರ ಜನಗಣತಿ ಯ ಪ್ರಕಾರ) ೪,೯೩,೧೬೭. ಮುಖ್ಯ ಭಾಷೆ ಮರಾಠಿ. ಕೊಲ್ಲಾಪುರಿ ಚಪ್ಪಲಿ, ಲವಂಗಿ ಮೆಣಸು, ಬೆಲ್ಲ ಮತ್ತು ಖಾದ್ಯಪದ್ಧತಿಗಳಿಗೆ ಈ ನಗರ ತನ್ನ ಹೆಸರು ಕೊಟ್ಟಿದೆ. ಪಂಚಗಂಗಾ ನದಿಯ ದಡದಲ್ಲಿರುವ ಈ ನಗರದ ಮಹಾಲಕ್ಷ್ಮಿ ದೇವಾಲಯ ಪ್ರಸಿದ್ಧವಾಗಿದೆ. ಕೊಲ್ಲಾಪುರ ಅದೇ ಹೆಸರಿನ ಜಿಲ್ಲೆಯ ಕೇಂದ್ರವೂ ಹೌದು.

ಕೊಲ್ಲಾಪುರ
ಮಹಾರಾಷ್ಟ್ರದಲ್ಲಿ ಕೊಲ್ಲಾಪುರ ಜಿಲ್ಲೆ

ಸಂಸ್ಕೃತಿ

ಅತಿ ಪುರಾತನ ನಗರ ಕೊಲ್ಲಾಪುರ ಇಲ್ಲಿಯ ಖಾದ್ಯಪದ್ಧತಿ, ತಲೆ ದಿರಿಸು, ಚಪ್ಪಲಿ, ಒಡವೆಗಳು, ಕುಸ್ತಿ ಮತ್ತು ಧಾರ್ಮಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಪ್ರಸಿದ್ಧವಾಗಿದೆ. ಸ್ಥಳೀಯ ಐತಿಹ್ಯದ ಪ್ರಕಾರ, ಮಹಾಲಕ್ಷ್ಮಿಯಿಂದ ಹತನಾದ ಕೊಲ್ಹಾಸುರ ಎಂಬ ರಾಕ್ಷಸನ ಕೊನೆಯ ಇಚ್ಛೆಯ ಪ್ರಕಾರ ಈ ಊರಿಗೆ ಕೊಲ್ಲಾಪುರ ಎಂಬ ಹೆಸರು ಬಂದಿದೆ. ಇಲ್ಲಿಯ ಬಹುತೇಕ ಜನಸಂಖ್ಯೆ ಮರಾಠಾ ಮೂಲದವರಾಗಿದ್ದು ಗುಜರಾತಿ, ಮಾರವಾಡಿ, ಜೈನರು, ಲಿಂಗಾಯತರು ಮತ್ತು ಸಿಂಧಿ ಜನಗಳೂ ಗಣನೀಯ ಸಂಖ್ಯೆಯಲ್ಲಿದ್ದಾರೆ.

ತಲಾ ಉತ್ಪತ್ತಿ ಅತಿ ಹೆಚ್ಚಿರುವ ಭಾರತದ ನಗರಗಳಲ್ಲಿ ಕೊಲ್ಲಾಪುರ ಒಂದು. ಕಬ್ಬು ಇತ್ಯಾದಿ ವಾಣಿಜ್ಯ ಬೆಳೆಗಳು, ಜವಳಿ ಮತ್ತು ಖನಿಜ ಉದ್ಯಮದ ಆಧಾರದ ಮೇಲೆ ಅಭಿವೃದ್ಧಿಯಾಗಿರುವ ಲೋಹ ಉದ್ಯಮ ಇಲ್ಲಿಯ ವ್ಯಾಪಾರೋದ್ಯಮದಲ್ಲಿ ಪ್ರಮುಖವಾಗಿವೆ. ಮುಂಬಯಿ ಬಿಟ್ಟರೆ ಮಹಾರಾಷ್ಟ್ರದಲ್ಲಿಯೇ ಅತಿ ಹೆಚ್ಚು ಮರ್ಸಿಡೀಸ್ ಕಾರುಗಳಿರುವ ನಗರ ಎಂಬ ಈ ನಗರದ ಹೆಗ್ಗಳಿಕೆಯಿಂದ ಇಲ್ಲಿನ ಜನಗಳ ಸಂಪತ್ತಿನ ಕಲ್ಪನೆ ಬರಬಹುದು. ಕೊಲ್ಲಾಪುರ ಸುತ್ತಮುತ್ತಲ ಊರುಗಳಿಂದ ಕೊಳ್ಳುಗರನ್ನು ಆಕರ್ಷಿಸುತ್ತದೆ. ನಗರದ ಹಳೆಯ ಭಾಗದಲ್ಲಿ ಮಹಾಲಕ್ಷ್ಮಿ ದೇವಾಲಯದ ಸಮೀಪದ ಮಹಾದ್ವಾರ ರಸ್ತೆ ಇಲ್ಲಿಯ ಅಂಗಡಿಮುಂಗಟ್ಟುಗಳ ಕೇಂದ್ರ. ಇಲ್ಲಿಯ ಹಳೆಯ ರಾಜಾರಾಮ ಪುರಿ ಭಾಗದಲ್ಲಿಯೂ ಹೊಸ ವಾಣಿಜ್ಯಕೇಂದ್ರಗಳು ತಲೆ ಎತ್ತಿವೆ.

ಕೊಲ್ಲಾಪುರ ಹಿಂದಿನಿಂದಲೂ ಹಾಗೂ ಅನೇಕರ ಪ್ರಕಾರ ಇಂದಿಗೂ, ಮರಾಠಿ ಚಿತ್ರರಂಗದ ಕೇಂದ್ರ. ಮರಾಠಿ ಚಿತ್ರರಂಗದ ದಿಗ್ಗಜಗಳಾದ ಭಾಲಜೀ ಪೆಂಢರ್‍ಕರ್, ಬಾಬುರಾವ್ ಪೈಂಟರ್ ಮತ್ತು ವಿ. ಶಾಂತಾರಾಮ್ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ್ದು ಕೊಲ್ಲಾಪುರದಲ್ಲಿ. ಭಾರತದ ಮೊಟ್ಟಮೊದಲ ಚಲನಚಿತ್ರ ರಾಜಾಹರಿಶ್ಚಂದ್ರ ಚಿತ್ರದ ಪರಿಕಲ್ಪನೆ ಹುಟ್ಟಿದ್ದು ಇಲ್ಲಿಯೇ. ಇಂದಿಗೂ ಕೊಲ್ಲಾಪುರ ಚಿತ್ರೀಕರಣಕ್ಕೆ ಮತ್ತು ಚಲನಚಿತ್ರೋತ್ಸವಗಳಿಗೆ ಸಾಕಷ್ಟು ಅವಕಾಶ ಮಾಡಿಕೊಡುತ್ತಿದೆ. ಇದು ಒಂದು ಮುಖ್ಯ ರಾಜಕೀಯ ಕೇಂದ್ರವೂ ಹೌದು. ಸದ್ಯ (೨೦೦೭) ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಇಲ್ಲಿಯ ಪ್ರಮುಖ ರಾಜಕೀಯ ಪಕ್ಷಗಳು.

ಕೊಲ್ಲಾಪುರ ಸಂಸ್ಥಾನ

ಕೊಲ್ಲಾಪುರ 
ಕೊಲ್ಲಾಫುರ ಸಂಸ್ಥಾನದ ಧ್ವಜ

ಕೊಲ್ಲಾಪುರ ಸಂಸ್ಥಾನ ಬ್ರಿಟೀಶರ ಆಧೀನದಲ್ಲಿದ್ದು ಮುಂಬಯಿ ಪ್ರೆಸಿಡೆನ್ಸಿಯ ಭಾಗವಾಗಿತ್ತು. ಇಂದೂರು, ಬರೋಡಾ, ಗ್ವಾಲಿಯರ್ ಬಿಟ್ಟರೆ ಮರಾಠಾ ಪ್ರದೇಶಗಳಲ್ಲಿ ಕೊಲ್ಲಾಪುರ ಅತಿ ಪ್ರಮುಖವಾಗಿತ್ತು. ಶಿವಾಜಿ (ಭೋಂನ್ಸಲೇ) ವಂಶಸ್ಥರಾದ ಕೊಲ್ಲಾಪುರದ ರಾಜಮನೆತನದವವರಿಗೆ ೧೯ ತೋಪುಗಳ ಮರ್ಯಾದೆಯಿತ್ತು.

ಕೊಲ್ಲಾಪುರ ಸಂಸ್ಥಾನ, ಇತರೆ ಜಹಗೀರುಗಳನ್ನೂ ಸೇರಿದಂತೆ, ೩,೧೬೫ ಚ. ಮೈಲಿ (೮,೨೦೦ ಚ.ಕಿ.ಮೀ) ವಿಸ್ತೀರ್ಣವಾಗಿದ್ದು, ೧೯೦೧ರ ಜನಗಣತಿಯ ಪ್ರಕಾರ, ಇಲ್ಲಿಯ ಜನಸಂಖ್ಯೆ ೯೧೦,೦೧೧ಯಾಗಿತ್ತು. ಕೊಲ್ಲಾಪುರ ನಗರದ ಅಂದಿನ ಜನಸಂಖ್ಯೆ ೫೪,೩೭೩ ಆಗಿತ್ತು. ೧೯೦೧ರಲ್ಲಿ ಸಂಸ್ಥಾನದ ವಾರ್ಷಿಕ ಉತ್ಪತ್ತಿ ೩೦೦,೦೦೦ ಬ್ರಿಟಿಷ್ ಪೌಂಡುಗಳು.

ಇತಿಹಾಸ

ಕೊಲ್ಲಾಪುರ 
ಕೊಲ್ಲಾಪುರದ ಹೊಸ ಅರಮನೆ

ತಂಜಾವೂರು, ಸತಾರಾ ಮತ್ತು ಕೊಲ್ಲಾಪುರ ರಾಜಮನೆತನಗಳ ಮೂಲ ಭೋಂಸಲೇ ಎಂಬ ಮರಾಠಾ ರಾಜವಂಶ. ಮರಾಠಾ ರಾಜ್ಯದ ಉತ್ತರಾಧಿಕಾರದ ವ್ಯಾಜ್ಯದ ಪರಿಣಾಮವಾಗಿ, ೧೭೦೭ರಲ್ಲಿ, ಸತಾರಾ ಮತ್ತು ಕೊಲ್ಲಾಪುರ ಸಂಸ್ಥಾನಗಳು ತಲೆ ಎತ್ತಿದವು. ಶಿವಾಜಿಯ ಹಿರಿಯ ಮಗ ಸಂಭಾಜಿಯ ಪುತ್ರ ಮತ್ತು ಉತ್ತರಾಧಿಕಾರಿ, ೯ ವರ್ಷದ ಶಾಹುವನ್ನು ಮೊಘಲರು ಸೆರೆಹಿಡಿದರು. ಸಂಭಾಜಿಯ ಮರಣದ ವೇಳೆಯಲ್ಲಿಯೂ ಶಾಹೂ ಮೊಘಲರ ಸೆರೆವಾಸದಲ್ಲಿಯೇ ಇದ್ದ. ಸಂಭಾಜಿಯ ಪತ್ನಿ(?) ತಾರಾಬಾಯಿಯು ಸೋದರಸಂಬಂಧಿ ರಾಜಾರಾಮನನ್ನು ಛತ್ರಪತಿ ಮಹಾರಾಜನನ್ನಾಗಿ ಘೋಷಿಸಿದಳು.

ಕೆಲವು ಶರತ್ತುಗಳ ಮೇರೆಗೆ ೧೭೦೭ ರಲ್ಲಿ ಮೊಘಲರ ಸೆರೆವಾಸದಿಂದ ಹೊರಬಂದ ಶಾಹು, ವಾಪಸಾಗಿ ಸಿಂಹಾಸನದ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸಿದ. ರಾಜಾರಾಮನನ್ನು(?)ಖೇಡ್ ಎಂಬಲ್ಲಿಯ ಹೋರಾಟದಲ್ಲಿ ಸೋಲಿಸಿದ ಶಾಹು, ಸತಾರಾದಲ್ಲಿ ನೆಲೆಯೂರಿದಾಗ, ಅನಿವಾರ್ಯವಾಗಿ ತಾರಾಬಾಯಿ ತನ್ನ ಮಗನೊಂದಿಗೆ ಕೊಲ್ಲಾಪುರಕ್ಕೆ ತನ್ನ ನಿವಾಸವನ್ನು ಬದಲಾಯಿಸಬೇಕಾಯಿತು. ೧೭೧೦ರ ಸುಮಾರಿಗೆ ಇವೆರಡೂ ಸ್ವತಂತ್ರ ಸಂಸ್ಥಾನಗಳಾಗಿ ಜಾರಿಗೆ ಬಂದು, ೧೭೩೧ರ ವಾರಣಾ ಸಂಧಿಯ ಮೂಲಕ ಈ ವ್ಯವಸ್ಥೆ ಅಧಿಕೃತವಾಯಿತು.

೧೭೬೫ ಮತ್ತು ೧೭೯೨ರಲ್ಲಿ ಬ್ರಿಟಿಶರು ಕೊಲ್ಲಾಪುರದ ಮೇಲೆ ದಂಡೆತ್ತಿ ಹೋದರು. ೧೮೧೨ರಲ್ಲಿ ಮರಾಠರ ಒಕ್ಕೂಟವು ಶಿಥಿಲವಾದ ನಂತರ , ಕೊಲ್ಲಾಪುರವು ಬ್ರಿಟಿಶರೊಂದಿಗೆ ಸಂಧಿ ಮಾಡಿಕೊಂಡಿತು. ೧೯ನೆಯ ಶತಮಾನದಲ್ಲಿ ಪುನಃ ಧಾಳಿ ಮಾಡಿದ ಬ್ರಿಟಿಶರು, ಕೊಲ್ಲಾಪುರವನ್ನು ನೋಡಿಕೊಳ್ಳುವ ತಾತ್ಕಾಲಿಕ ಕ್ರಮವಾಗಿ ಆಡಳಿತಾಧಿಕಾರಿಯನ್ನು ನಿಯಮಿಸಿದರು.

ಕೊಲ್ಲಾಪುರದ ಕೊನೆಯ ರಾಜ ಛತ್ರಪತಿ ಮಹಾರಾಜ ಎರಡನೆಯ ಶಾಹು ಪುವಾರ. ಭಾರತದ ಸ್ವಾತಂತ್ರದ ನಂತರ ಕೊಲ್ಲಾಪುರ ಭಾರತದಲ್ಲಿ ವಿಲೀನವಾಗಿ ಅಂದಿನ ಬಾಂಬೆ ರಾಜ್ಯದ ಭಾಗವಾಯಿತು. ಸದ್ಯದ ಕೊಲ್ಲಾಪುರ ಜಿಲ್ಲೆಯ ಗಡಿ, ಹಿಂದಿನ ಸಂಸ್ಥಾನದ ಗಡಿಗೆ ಬಹಳ ಸಾದೃಶ್ಯವಾಗಿದೆ.

ಮಹಾಲಕ್ಷ್ಮಿ ದೇವಾಲಯ

ಚಿತ್ರ:MT037.JPG
'ಮಹಾಲಕ್ಷ್ಮಿ ದೇವಾಲಯ'

ಕೊಲ್ಲಾಪುರದ ಅತಿ ಪ್ರಸಿದ್ಧ ಸ್ಥಳಗಳಲ್ಲಿ 'ಮಹಾಲಕ್ಷ್ಮಿ'ಅಥವಾ 'ಅಂಬಾಬಾಯಿ ದೇವಾಲಯ'ವೂ ಒಂದು. ಪುರಾಣೋಕ್ತ ೧೦೮ ಶಕ್ತಿ ಸ್ಥಳಗಳಲ್ಲಿ ಇದೂ ಒಂದು. ಕ್ರಿ.ಶ. ೭ ನೆಯ ಶತಮಾನದಲ್ಲಿ ಚಾಲುಕ್ಯರ ರಾಜ, 'ಕರ್ಣದೇವ'ನು ಈ ದೇವಾಲಯ ನಿರ್ಮಾಣವನ್ನು ಪ್ರಾರಂಭಿಸಿದನು. ಮುಂದೆ ಕ್ರಿ.ಶ. ಒಂಭತ್ತನೆಯ ಶತಮಾನದಲ್ಲಿ 'ಶಿಲಾಹಾರ ಯಾದವ ರಾಜರು' ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿದರು. ೪೦ ಕಿಲೋ ತೂಗುವ ಇಲ್ಲಿಯ ಮಹಾಲಕ್ಷ್ಮಿ ಸ್ವಯಂಭೂ ಮೂರ್ತಿಯಾಗಿದ್ದು , ಇದನ್ನು ಯಾವುದೇ ಶಿಲ್ಪ ಕೃತಿಯಂತೆ ಕಟೆಯದೇ ಮೂಲ ರೂಪದಲ್ಲಿಯೇ ಉಳಿಸಿಕೊಂಡು ಬರಲಾಗಿದೆ. ಪ್ರತಿ ಶುಕ್ರವಾರ ನಡೆಯುವ ಪಲ್ಲಕ್ಕಿ ಉತ್ಸವವಲ್ಲದೆ, ಚೈತ್ರ ಪೂರ್ಣಿಮೆ ಮತ್ತು ನವರಾತ್ರಿಯಲ್ಲಿ ವಿಶೇಷ ಪೂಜೆಗಳಿರುತ್ತದೆ. ಬೆಳಿಗ ೫-೩೦ ಕ್ಕೆ 'ಕಾಕಡಾರತಿ'ಯಿಂದ ಆರಂಭವಾದ ದೇವಿಯ ಪೂಜಾವಿಧಾನಗಳು ಅಲಂಕಾರ ಆಭರಣಗಳ ಸಮರ್ಪಣೆಯೊಂದಿಗೆ ೧೨-೩೦ ಕ್ಕೆಲ್ಲಾ ಮಂಗಳಾರತಿಯಾಗುತ್ತದೆ. ಮತ್ತೆ ಸಂಜೆ ೭ ಗಂಟೆಗೆಲ್ಲಾ 'ಭೋಗಾರತಿ'ಯಾಗುತ್ತದೆ. ಅಸಂಖ್ಯಾತ ನೆರಿಗೆಗಳಿಂದೊಡಗೂಡಿದ ಸೀರೆಯನ್ನುಟ್ಟ ದೇವಿಯು ಇಲ್ಲಿ ಗದಾಧಾರಿಯಾಗಿ,ಬೆಳ್ಳಿಯ ಮಂಟಪದಲ್ಲಿ ವಿರಾಜಮಾನಳಾಗಿದ್ದಾಳೆ, ಮತ್ತು ಮನೋಹರವಾಗಿ ಭಕ್ತಿಗೆ ಪ್ರೇರಣೆಯಾಗಿದ್ದಾಳೆ. ಗರ್ಭಗುಡಿಗೆ ವೈಭವೋಪೇತವಾದ ಬಂಗಾರದ ತೋರಣವಿದೆ. ನವರಾತ್ರಿ ಹಾಗೂ ವಿಶೇಷ ಸಂದರ್ಭಗಳಲ್ಲಿ ವಿಶೇಷ ಪೂಜೆಗಳು ಆಯೋಜಿಸಲ್ಪಡುತ್ತವೆ. ಇಲ್ಲಿ ಆ ಸಮಯದಲ್ಲಿ ನಡೆಯುವ ಸಂಗೀತೋತ್ಸವದಲ್ಲಿ ದೇಶದ ಪ್ರಖ್ಯಾತ ಸಂಗೀತಕಾರರು ಭಾಗವಹಿಸುತ್ತಾರೆ. ಅಂಬಾಬಾಯಿಯ ಉತ್ಸವ ಮೂರ್ತಿಯನ್ನು'ಟೇಮ್ಲಾಬಾಯಿಯ ದೇವಸ್ಥಾನ'ದವರೆವಿಗೂ ಮೆರವಣಿಗೆಯಲ್ಲಿ ಕೊಂಡೊಯ್ದು ಇಬ್ಬರನ್ನೂ ಕೂಡಿಸಿ ಪೂಜೆ ಮಾಡಲಾಗುವುದು.'ಟೇಮ್ಲಾಬಾಯಿಯೆಂಬ ದೇವಿ' ಮಹಾಲಕ್ಷ್ಮಿಗೆ ಕೊಲ್ಹಾಸುರನ ಸಂಹಾರದಲ್ಲಿ ಸಹಾಯ ಮಾಡಿದಳೆಂಬ ಪ್ರತೀತಿಯಿದೆ. ಆದರೆ, ಮುಂದೆ ಈ ಸಹಾಯವನ್ನು ನೆನೆಯದೆ ಮರೆತದ್ದರಿಂದ ಗುಡ್ಡದ ಮೇಲೆ ಹೋಗಿ ನೆಲೆಸಿದಳೆಂಬ ಪ್ರತೀತಿಯಿದೆ. ಮಹಾವಿಷ್ಣುವೇ ಮಹಾಲಕ್ಷ್ಮಿಯ ರೂಪದಲ್ಲಿ ಇಲ್ಲಿ ನೆಲೆಸಿರುವುದರಿಂದ ಈ ಕ್ಷೇತ್ರವನ್ನು 'ದಕ್ಷಿಣ ಕಾಶಿ'ಯೆಂದೂ ಕರೆಯುವ ವಾಡಿಕೆಯಿದೆ. ದೇವಿಗೆ ಸಮರ್ಪಣೆ ಮಾಡಲು 'ಕಮಲ ಪುಷ್ಪ'ಗಳು ಇಲ್ಲಿ ಸಿಗುತ್ತವೆ.

ಸಂಚಾರ ವ್ಯವಸ್ಥೆ

ಕೊಲ್ಲಾಪುರ ಮುನಿಸಿಪಾಲಿಟಿಯ ಸಾರಿಗೆ ವಾಹನಗಳು ಮತ್ತು ಆಟೋರಿಕ್ಷಾ ಇಲ್ಲಿಯ ಸಂಚಾರ ಮಾಧ್ಯಮಗಳಲ್ಲಿ ಕೆಲವು.

ರೈಲು

ಕೊಲ್ಲಾಪುರ ರೈಲ್ವೇ ನಿಲ್ದಾಣದ ಹೆಸರು ಛತ್ರಪತಿ ಶಾಹು ಮಹಾರಾಜ ರೈಲು ನಿಲ್ದಾಣ. 2003ರಲ್ಲಿ ಇದನ್ನು ದಕ್ಷಿಣ ಮಧ್ಯ ರೈಲ್ವೆಯಿಂದ ಮಧ್ಯ ರೈಲ್ವೆಗೆ ವರ್ಗಾವಣೆ ಮಾಡಲಾಯಿತು. ಇಲ್ಲಿಂದ ದಿನಂಪ್ರತಿ ಮುಂಬಯಿ, ತಿರುಪತಿ, ಪುಣೆ, ಬೆಂಗಳೂರು ಮತ್ತು ಅಹಮದಾಬಾದುಗಳಿಗೆ ರೈಲುಗಳು ಓಡುತ್ತವೆ. ಕೊಲ್ಲಾಪುರ ಮತ್ತು ಮೀರಜ್ ನಡುವೆ ಓಡುವ ಇಂಟರ್ ಸಿಟಿ ಶಟಲ್ ಸರ್ವೀಸ್ ಸಹಾ ಇಲ್ಲಿದೆ. ನಿಜಾಮುದ್ದೀನ್ ಎಕ್ಸ್ ಪ್ರೆಸ್ ವಾರಕ್ಕೊಮ್ಮೆ ಇಲ್ಲಿಂದ ದೆಹಲಿಗೆ ಸಂಚರಿಸುತ್ತದೆ.

ಬಸ್ಸುಗಳು

ವೇಗ ಮತ್ತು ವಿಸ್ತಾರವಾದ ರಸ್ತೆ ಜಾಲದ ದೆಸೆಯಿಂದ ಬಸ್ಸುಗಳು ಜನಪ್ರಿಯ ಸಂಚಾರ ಮಾದ್ಯಮಗಳಾಗಿವೆ. ವಾತಾನುಕೂಲಿತ ಮತ್ತು ಸ್ಲೀಪರ್ ಕೋಚುಗಳನ್ನೊಳಗೊಂಡ ಆರಾಮದಾಯಕ ಮತ್ತು ನಂಬಲರ್ಹ ಖಾಸಗೀ ಬಸ್ಸುಗಳು ಸರಕಾರೀ ಬಸ್ಸುಗಳಿಗಿಂತ ಹೆಚ್ಚು ಜನಪ್ರಿಯವಾಗಿವೆ. ನಗರದ ಅನೇಕ ಕಡೆಗಳಲ್ಲಿ ಇತರ ರಾಜ್ಯಗಳ ಬಸ್ ನಿಲ್ದಾಣಗಳಿವೆ. ಇಲ್ಲಿಂದ ಮಹಾರಾಷ್ಟ್ರದ ಇತರ ಎಡೆಗಳಿಗೆ ಅಷ್ಟೇ ಅಲ್ಲದೆ , ಕರ್ನಾಟಕ, ಗೋವಾ ಮತ್ತು ಕೆಲವು ಆಂಧ್ರ ಪ್ರದೇಶ ಮತ್ತು ತಮಿಳು ನಾಡು ರಾಜ್ಯಗಳ ಪ್ರದೇಶಗಳಿಗೂ ನೇರ ಸಂಪರ್ಕವಿದೆ. ಹೆಚ್ಚು ಜನದಟ್ಟಣೆಯ ಮಾರ್ಗಗಳಾದ ಮುಂಬಯಿ, ಪುಣೆ, ಬೆಂಗಳೂರು, ಪಣಜಿ, ಬೆಳಗಾವಿ, ಸೊಲ್ಲಾಪುರ, ಹೈದರಾಬಾದು, ಶಿರಡಿ ಇತ್ಯಾದಿಗಳಿಗೆ ಖಾಸಗೀ ಬಸ್ಸುಗಳ ಹೆಚ್ಚು ಸೌಕರ್ಯಗಳಿವೆ.

ವಿಮಾನ

ನಗರದಿಂದ ೧೩ ಕಿ.ಮೀ ದೂರದಲ್ಲಿರುವ ಉಜಲೈವಾಡಿ ಎಂಬಲ್ಲಿ ವಿಮಾನ ನಿಲ್ದಾಣವಿದೆ. ಇಲ್ಲಿಂದ ಮುಂಬಯಿಗೆ ಏರ್ ಡೆಕ್ಕನಿನ ವಿಮಾನ ನೌಕರ್ಯವಿದೆ (೨೦೦೭). ಪ್ರಯಾಣದ ಅವಧಿ ಒಂದು ಘಂಟೆ.

ಹವಾಮಾನ

ಕೊಲ್ಹಾಪುರದ ಹವಾಮಾನ 'ಮಹಾರಾಷ್ಟ್ರದ ತಟವರ್ತಿ' ಮತ್ತು 'ಒಳನಾಡಿನ ಸ್ಥಳ'ಗಳಲ್ಲಿರುವಂತೆ ಸಂಮಿಶ್ರವಾಗಿದೆ. ಉಷ್ಣಾಂಶ, ಸುಮಾರು ೧೨°C ಯಿಂದ ೩೫°C ವರೆಗೆ ಇರುತ್ತದೆ. ಬೇಸಿಗೆ ಯಲ್ಲಿ ೧೨°C ರಿಂದ ೩೫°C ನ ವರೆಗೆ ಇದ್ದು, ತಂಪಾಗಿರುತ್ತದೆ. ಪಕ್ಕದ ದ್ವೀಪದ ನಗರಗಳಿಗೆ ಹೋಲಿಸಿದರೆ ಇಲ್ಲಿ ಆರ್ದ್ರತೆ ಹೆಚ್ಚು. ಯಾವ ಭಾಗದಲ್ಲೂ ೩೮°C ಕ್ಕಿಂತ ಹೆಚ್ಚು ಉಷ್ಣತೆ ಇರುವುದಿಲ್ಲ. ೩೩°C ರಿಂದ ೩೫°C ರವರೆಗೆ ಮಾತ್ರ. ದಿನದ ಕನಿಷ್ಟ ಉಷ್ಣಾಂಶ ೨೪°C ರಿಂದ ೨೬°C ರವರೆಗೆ ಇರುತ್ತದೆ. ಆದರೆ, ಅತಿಹೆಚ್ಚು ಆರ್ದ್ರತೆಯಿಂದಾಗಿ ಹವಾಮಾನದಲ್ಲಿ ತೊಡಕಾಗುತ್ತದೆ.

ಪಶ್ಚಿಮ ಘಟ್ಟಗಳ ಬದಿಯಲ್ಲೇ ಇದೆ

'ಕೊಲ್ಹಾಪುರ', 'ಪಶ್ಚಿಮಘಟ್ಟ'ಗಳಿಗೆ ಅಂಟಿಕೊಂಡಿರುವುದರಿಂದ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಅತಿಹೆಚ್ಚು ಮಳೆ ಬೀಳುತ್ತದೆ. ಹಲವು ಪ್ರದೇಶಗಳು, ಜಲಾವೃತವಾಗಿರುತ್ತದೆ. ಮಳೆಗಾಲದಲ್ಲಿ ಉಷ್ಣತೆ ಕಡಿಮೆ. (೨೩°C-೩೦°C). ಕೊಲ್ಹಾಪುರದ ಚಳಿಗಾಲ ನವೆಂಬರ್ ನಿಂದ ಫೆಬ್ರವರಿ ತನಕ. ಆದರೆ ಮಹಾರಾಷ್ಟ್ರ ರಾಜ್ಯದ ಪುಣೆ, ನಾಸಿಕ್ ಗಳಿಗೆ ಹೋಲಿಸಿದರೆ, ಹೆಚ್ಚು ತಾಪಮಾನವಿರುತ್ತದೆ. ಕನಿಷ್ಟ ಉಷ್ಣಾಂಶ, ೧೪°C-೧೬°C. ಗರಿಷ್ಟ ಉಷ್ಣಾಂಶ ೨೯°C-32°C.ವರೆಗೆ ಇರುತ್ತದೆ. ಆದರೆ, ಆರ್ದ್ರತೆ ಕಮ್ಮಿ ಇರುವುದರಿಂದ, ಈ ಸಮಯದಲ್ಲಿ ವಾತಾವರಣ ಆಹ್ಲಾದಕರವಾಗಿರುತ್ತದೆ. ಸನ್, ೨೦೦೬ ರಲ್ಲಿ ಅತಿಹೆಚ್ಚು ಮಳೆಯಿಂದಾಗಿ ಕೊಲ್ಹಾಪುರ ದಲ್ಲಿ ಪ್ರವಾಹದಿಂದ ಜನರಿಗೆ ಅತಿ ಹೆಚ್ಚು ತ್ರಾಸವಾಗಿತ್ತು.

ಬಾಹ್ಯ ಸಂಪರ್ಕಗಳು

Tags:

ಕೊಲ್ಲಾಪುರ ಸಂಸ್ಕೃತಿಕೊಲ್ಲಾಪುರ ಸಂಸ್ಥಾನಕೊಲ್ಲಾಪುರ ಇತಿಹಾಸಕೊಲ್ಲಾಪುರ ಮಹಾಲಕ್ಷ್ಮಿ ದೇವಾಲಯಕೊಲ್ಲಾಪುರ ಸಂಚಾರ ವ್ಯವಸ್ಥೆಕೊಲ್ಲಾಪುರ ಹವಾಮಾನಕೊಲ್ಲಾಪುರ ಪಶ್ಚಿಮ ಘಟ್ಟಗಳ ಬದಿಯಲ್ಲೇ ಇದೆಕೊಲ್ಲಾಪುರ ಬಾಹ್ಯ ಸಂಪರ್ಕಗಳುಕೊಲ್ಲಾಪುರಮಹಾರಾಷ್ಟ್ರ

🔥 Trending searches on Wiki ಕನ್ನಡ:

ಚಿನ್ನಸುಗ್ಗಿ ಕುಣಿತಹನುಮಂತಮಾನ್ವಿತಾ ಕಾಮತ್ಕೆ. ಅಣ್ಣಾಮಲೈಗುರುರಾಜ ಕರಜಗಿನುಗ್ಗೆಕಾಯಿಆಗಮ ಸಂಧಿರಾಜಕೀಯ ಪಕ್ಷಉಪೇಂದ್ರ (ಚಲನಚಿತ್ರ)ಜೀವವೈವಿಧ್ಯಅಯೋಧ್ಯೆಕನ್ನಡ ಕಾಗುಣಿತಹಯಗ್ರೀವಶಬರಿಸಾಹಿತ್ಯಪ್ರೀತಿಕಳಸಫುಟ್ ಬಾಲ್ಶಬ್ದಮಣಿದರ್ಪಣಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಬ್ರಹ್ಮಹೊಂಗೆ ಮರ೧೬೦೮ತತ್ಪುರುಷ ಸಮಾಸಜಿ.ಪಿ.ರಾಜರತ್ನಂಪಂಚಾಂಗಭಾರತೀಯ ಅಂಚೆ ಸೇವೆಮಾನವನ ವಿಕಾಸಜ್ಯೋತಿಷ ಶಾಸ್ತ್ರದ ನಕ್ಷತ್ರಗಳು1935ರ ಭಾರತ ಸರ್ಕಾರ ಕಾಯಿದೆಅಕ್ಕಮಹಾದೇವಿಸಿದ್ದರಾಮಯ್ಯಭಾಷೆಆಟವೆಂಕಟೇಶ್ವರ ದೇವಸ್ಥಾನಸಹಕಾರಿ ಸಂಘಗಳುಕರ್ನಾಟಕದಲ್ಲಿ ಪಂಚಾಯತ್ ರಾಜ್ಲೋಕಸಭೆಜಾತ್ಯತೀತತೆವಸ್ತುಸಂಗ್ರಹಾಲಯನಾಯಕ (ಜಾತಿ) ವಾಲ್ಮೀಕಿಚೋಮನ ದುಡಿಬುಡಕಟ್ಟುನೀರುಇಮ್ಮಡಿ ಪುಲಕೇಶಿಮೌರ್ಯ ಸಾಮ್ರಾಜ್ಯಒಗಟುಶಿವರಾಮ ಕಾರಂತಅರ್ಜುನಭೋವಿಮಳೆಗಾಲಊಳಿಗಮಾನ ಪದ್ಧತಿಕುಟುಂಬಬಾದಾಮಿ ಶಾಸನಮಾಸಚುನಾವಣೆಹಿಂದೂ ಮಾಸಗಳುಮುಖ್ಯ ಪುಟಕಲ್ಪನಾಬಾಬು ಜಗಜೀವನ ರಾಮ್ರಾಮಾಚಾರಿ (ಕನ್ನಡ ಧಾರಾವಾಹಿ)ಸೂರ್ಯ (ದೇವ)ಆದಿವಾಸಿಗಳುಪಾರ್ವತಿಚಂಡಮಾರುತಚಿತ್ರದುರ್ಗ ಕೋಟೆಒಡೆಯರ್ಭಾರತದ ಸಂವಿಧಾನಮಿಲಾನ್ಗರ್ಭಧಾರಣೆಮೈಸೂರು ಮಲ್ಲಿಗೆಇತಿಹಾಸಭಾರತೀಯ ಧರ್ಮಗಳುವ್ಯವಸಾಯ🡆 More