ಸತ್ಯಯುಗ

ಹಿಂದೂ ಧರ್ಮದಲ್ಲಿ ಸತ್ಯಯುಗ ಅಥವಾ ಕೃತಯುಗವು ಸತ್ಯದ ಯುಗ, ಮತ್ತು ಆಗ ಮಾನವಕುಲವು ದೇವತೆಗಳ ಆಡಳಿತದಲ್ಲಿರುತ್ತದೆ, ಮತ್ತು ಪ್ರತಿ ಅಭಿವ್ಯಕ್ತಿ ಅಥವಾ ಕೃತಿಯು ಪರಿಶುದ್ಧ ಆದರ್ಶಕ್ಕೆ ನಿಕಟವಾಗಿರುತ್ತದೆ ಮತ್ತು ಮಾನವಕುಲವು ಆಂತರಿಕ ಒಳ್ಳೆಯತನಕ್ಕೆ ಪರಮಪ್ರಧಾನವಾಗಿ ಆಳಲು ಅನುಮತಿಸುತ್ತದೆ.

ಇದನ್ನು ಕೆಲವೊಮ್ಮೆ "ಸುವರ್ಣಯುಗ" ಎಂದು ಕರೆಯಲಾಗುತ್ತದೆ. ಸತ್ಯಯುಗದ ಅವಧಿ ೧,೭೨೮,೦೦೦ ವರ್ಷಗಳು.

ಪ್ರಪಂಚದ ಕಾಲಮಾನಗಳಿಗನ್ವಯಿಸುವಂತೆ ನಿಯಮಿತವಾಗಿ ಯುಗಗಳೆಂದು ನಿರ್ದಿಷ್ಟವಾಗಿರುವ ಚತುರ್ಯುಗಗಳಲ್ಲಿ ಒಂದನೆಯದು. ಇದಕ್ಕೆ ಆದಿಯುಗ, ದೇವಯುಗ, ಸ್ವರ್ಣಯುಗ ಎಂಬ ಬೇರೆ ಬೇರೆ ಹೆಸರುಗಳಿವೆ. ರವಿ, ಚಂದ್ರ, ಬೃಹಸ್ಪತಿ- ಈ ಮೂರು ಗ್ರಹಗಳೂ ಪುಷ್ಯನಕ್ಷತ್ರದಲ್ಲಿ ಸೇರಿದಾಗ ಕೃತಯುಗದ ಆರಂಭವೆಂದು ಪ್ರತೀತಿ. ಈ ಯುಗದಲ್ಲಿ ಜನ್ಮ ತಾಳಿದ್ದರಿಂದಲೇ ಕೃತಕೃತ್ಯರಾಗುವುದರಿಂದ ಇದಕ್ಕೆ ಕೃತಯುಗವೆಂಬ ಹೆಸರು ಬಂತೆಂದು ಹೇಳಿದ್ದಾರೆ. ==ಪುರಾಣಗಳಲ್ಲಿ ಯುಗವಿಚಾರಗಳನ್ನು ಪ್ರತಿಪಾದಿಸುವ ಹಲವಾರು ಪುರಾಣಾದಿ ಗ್ರಂಥಗಳ ಪ್ರಕಾರ ಕೃತಯುಗದ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ: ಕೃತಯುಗದಲ್ಲಿ ಬೆಳೆವ ಧಾನ್ಯ ಸರ್ವಶ್ರೇಷ್ಠವಾದುದು. ಬ್ರಹ್ಮ ಇದರ ಅಧಿದೇವತೆ. ಇಲ್ಲಿ ಧರ್ಮ ನಾಲ್ಕು ಪಾದಗಳನ್ನೂ ಹೊಂದಿ ಸ್ಥಿರವಾಗಿರುತ್ತದೆ. ಆದ್ದರಿಂದ ಈ ಯುಗದ ಜನರೆಲ್ಲರೂ ಧರ್ಮನಿಷ್ಠರೂ ತಪೋವ್ರತಪರಾಯಣರೂ ಆಗಿರುತ್ತಾರೆ. ಅವರೆಲ್ಲ ನಾರಾಯಣನ ಸೇವೆಯಲ್ಲಿ ನಿರತರು ಮತ್ತು ಶೋಕವ್ಯಾಧಿರಹಿತರು. ಇದು ಸತ್ಯವಂತರ, ದಯಾಶೀಲರ, ದೀರ್ಘಜೀವಿಗಳ, ಪರೋಪಕಾರಿಗಳ, ಸರ್ವಶಾಸ್ತ್ರಪಾರಂಗತರ ಯುಗ. ಅಲ್ಲದೆ ಈ ಯುಗದಲ್ಲಿ ರಾಜರು ಧರ್ಮಗ್ರಾಹಿಗಳೂ ಪ್ರಜಾಪಾಲಕರೂ ಆಗಿದ್ದು, ಭೂಮಿಧಾನ್ಯಾದಿ ಸಂಪತ್ತಿನಿಂದ ಕೂಡಿ ಜಗತ್ತೆಲ್ಲವೂ ಸುಭಿಕ್ಷವಾಗಿರುತ್ತದೆ. ಅಹೋ ಸತ್ಯಯುಗಸ್ಯಾಸ್ತಿ ಕಃ ಸಂಖ್ಯಾತುಂ ಗುಣಾನ್ ಕ್ಷಮಃ(ಈ ಸತ್ಯಯುಗದ ಗುಣಗಳನ್ನು ಎಣಿಕೆ ಮಾಡಲು ಯಾವನು ತಾನೆ ಶಕ್ತನಾಗಿದ್ದಾನೆ) ಎಂಬ ಮಾತುಗಳಲ್ಲಿ ಯುಗದ ಮಹಿಮೆಯನ್ನು ಪದ್ಮ ಪುರಾಣ ಕೊಂಡಾಡುತ್ತದೆ.

ಬಾಹ್ಯ ಸಂಪರ್ಕಗಳು

ಸತ್ಯಯುಗ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ದೇವರುಯುಗ (ಹಿಂದೂ ತತ್ವಶಾಸ್ತ್ರ)ಹಿಂದೂ ಧರ್ಮ

🔥 Trending searches on Wiki ಕನ್ನಡ:

ಆಂಧ್ರ ಪ್ರದೇಶವರ್ಣಾಶ್ರಮ ಪದ್ಧತಿಭಾರತಬಿಳಿಗಿರಿರಂಗನ ಬೆಟ್ಟಪಿತ್ತಕೋಶಪ್ರಬಂಧದ್ರೌಪದಿ ಮುರ್ಮುಸುಭಾಷ್ ಚಂದ್ರ ಬೋಸ್ಸುವರ್ಣ ನ್ಯೂಸ್ಭಾರತದ ಭೌಗೋಳಿಕತೆಕ್ರೈಸ್ತ ಧರ್ಮಜ್ಯೋತಿಷ ಶಾಸ್ತ್ರಹಾಕಿಹಾವೇರಿಮಂತ್ರಾಲಯಅಶೋಕನ ಶಾಸನಗಳುಬೆಳೆ ವಿಮೆಸಂಖ್ಯೆಪೋಕ್ಸೊ ಕಾಯಿದೆಬ್ಯಾಂಕ್ಆತ್ಮಹತ್ಯೆನಾಗಚಂದ್ರಶುಕ್ರಇ-ಕಾಮರ್ಸ್ಕನ್ನಡ ರಾಜ್ಯೋತ್ಸವಜೀವವೈವಿಧ್ಯರಾಮಕೃಷ್ಣ ಹೆಗಡೆನೇಮಿಚಂದ್ರ (ಲೇಖಕಿ)ಸರ್ಪ ಸುತ್ತುಭಾರತದಲ್ಲಿ ಕೃಷಿಪ್ರೀತಿಭಾರತದಲ್ಲಿನ ಶಿಕ್ಷಣದಶಾವತಾರಮೂಢನಂಬಿಕೆಗಳುವಸಿಷ್ಠತಾಳಗುಂದ ಶಾಸನಬೆಟ್ಟದ ನೆಲ್ಲಿಕಾಯಿಅಮೇರಿಕ ಸಂಯುಕ್ತ ಸಂಸ್ಥಾನಕರ್ನಾಟಕದ ಏಕೀಕರಣಏಡ್ಸ್ ರೋಗಬಹುವ್ರೀಹಿ ಸಮಾಸಹಣಕಾಸುಫುಟ್ ಬಾಲ್ಅಡಿಕೆಕನ್ನಡದಲ್ಲಿ ಸಣ್ಣ ಕಥೆಗಳುಕನ್ನಡ ಸಂಧಿತತ್ಪುರುಷ ಸಮಾಸಕಳಿಂಗ ಯುದ್ಧಕೃಷ್ಣರಾಜಸಾಗರಕದಂಬ ರಾಜವಂಶಕಿತ್ತೂರು ಚೆನ್ನಮ್ಮಮಕ್ಕಳ ಸೈನ್ಯಬಾಲಕಾರ್ಮಿಕದಯಾನಂದ ಸರಸ್ವತಿಅಕ್ಕಮಹಾದೇವಿಡಿ.ವಿ.ಗುಂಡಪ್ಪಪ್ರಾಥಮಿಕ ಶಿಕ್ಷಣಭಾರತದಲ್ಲಿ ಬಡತನಭಾರತದ ಪ್ರಧಾನ ಮಂತ್ರಿಸಚಿನ್ ತೆಂಡೂಲ್ಕರ್ಭಾರತದ ರಾಷ್ಟ್ರಪತಿಗಳ ಪಟ್ಟಿಮುಮ್ಮಡಿ ಕೃಷ್ಣರಾಜ ಒಡೆಯರುಮಾಸ್ತಿ ವೆಂಕಟೇಶ ಅಯ್ಯಂಗಾರ್ಚದುರಂಗಅಂತರಾಷ್ಟ್ರೀಯ ಯೋಗ ದಿನಜಶ್ತ್ವ ಸಂಧಿಕೃಷಿಕೆ.ಗೋವಿಂದರಾಜುಶ್ರೀ ರಾಘವೇಂದ್ರ ಸ್ವಾಮಿಗಳುಕಾಳಿದಾಸಕೊರೋನಾವೈರಸ್ಗೌತಮ ಬುದ್ಧಕರ್ಮಧಾರಯ ಸಮಾಸಆಯ್ಕೆಕರ್ನಾಟಕ ಐತಿಹಾಸಿಕ ಸ್ಥಳಗಳುವಿಕ್ರಮಾದಿತ್ಯ ೬ಕೊಡಗಿನ ಗೌರಮ್ಮಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿ🡆 More