ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ

beary sahithya academy ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಉತ್ತೇಜನ ನೀಡುವುದು.

ಧ್ಯೇಯ ಮತ್ತು ಉದ್ದೇಶಗಳು

ಈ ಉದ್ದೇಶಕ್ಕಗಿ ಸಂಶೋಧನಾಲಯ, ಗ್ರಂಥಾಲಯ ಮುಂತಾದುವನ್ನು ಸ್ಥಾಪಿಸುವುದು. ಬ್ಯಾರಿ ಸಾಹಿತ್ಯ ಅಕಾಡೆಮಿತು ತನ್ನ ಉದ್ದೇಶಗಳ ಅಬಿವೃದ್ಧಿಗಾಗಿ ಮತ್ತು ಬೆಳವಣಿಗೆಗಾಗಿ ಬೇರೆ ಕಡೆಗಳಲ್ಲಿರುವ ಇದೇ ರೀತಿಯ ಅಕಾಡೆಮಿಗಳೊಂದಿಗೆ ಮತ್ತು ಕರ್ನಾಟಕದಲ್ಲಿರುವ ಇತರ ಸಂಸ್ಥೆಗಳೊಡನೆ ಸಹಕರಿಸುವುದು, ಉತ್ತೇಜನ ನೀಡುವುದು. ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಾರ್ಯಚಟುವಟಿಕೆಗಳ ಉದ್ದೇಶಕ್ಕಾಗಿ ಸರ್ಕಾರದಿಂದ ಪಡೆದ ಅನುದಾನ ಹಾಗೂ ವಿವಿಧ ಮೂಲಗಳಿಂದ ವಂತಿಗೆಗಳು ಮತ್ತು ದಾನಗಳ ಮೂಲಕ ನಿಧಿ ಸಂಗ್ರಹಣೆ ಮಾಡಬಹುದು. ಹೀಗೆ ಸಂಗ್ರಹಿಸಿದ ನಿಧಿಯನ್ನು ಅಕಾಡೆಮಿಯ ಕಾರ್ಯೋದ್ಧೇಶಗಳಿಗೆ ಬಳಸಿದ ಬಗ್ಗೆ ಕನಾಟಕ ಸಾರ್ವಜನಿಕ ಸಂಗ್ರಹಣೆ ಸಂಗ್ರಹಣೆಯಲ್ಲಿ ಪಾರದರ್ಶತತೆ ಅಧಿನಿಯಮ,ಕರ್ನಾಟಕ ಆರ್ಥಿಕ ಸಂಹಿತೆ, ಸಾದಿಲ್ವಾರು ಸಂಹಿತೆ ಪ್ರಕಾರ ಖರ್ಚಿನ ವಿವರಗಳನ್ನು ಇಡುವುದು. ವಂತಿಕೆ ಹಾಗೂ ದಾನ ಕೊಟ್ಟವರು ಆಪೇಕ್ಷಿಸಿದಲ್ಲಿ ಅವರ ವಂತಿಕೆ ಹಾಗೂ ದಾನದ ಮೊತ್ತದ ಖರ್ಚಿನ ವಿವರಗಳನ್ನು ಲಿಖಿತವಾಗಿ ಅವರಿಗೆ ಒದಗಿಸುವುದು. ಬ್ಯಾರಿ ಅಕಾಡೆಮಿಯು ತನ್ನ ವಿಷಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣ, ಕಾರ್ಯಗಾರ, ಸಂವಾದ, ಉನ್ನತಮಟ್ಟದ ಅಕಾಡೆಮಿಕ್ ಉತ್ಸವ ಮುಂತಾದ ಕಾರ್ಯಕ್ರಮಗಳನ್ನು ನಡೆಸುವುದು. ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಕೇಂದ್ರ ಅಕಾಡೆಮಿಗಳು ಅಪೇಕ್ಷಿಸಿದಾಗ ಬ್ಯಾರಿ ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಗಾಗಿ ಸೂಕ್ತ ಸಲಹೆಗಳನ್ನು ನೀಡುವುದು. ಬ್ಯಾರಿ ಸಾಹಿತ್ಯ ಅಕಾಡೆಮಿಯು ತಮ್ಮ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದ ಪುಸ್ತಕ ಪ್ರಕಟಣೆಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದ ರೀತಿ ಮಾಡುವುದು. ಬ್ಯಾರಿ ಅಕಾಡೆಮಿಯು ಬ್ಯಾರಿ ಸಾಂಸ್ಕೃತಿಕ ಮುನ್ನಡೆಗಾಗಿ ಅಗತ್ಯವಿರಬಹುದಾದ ಮೇಲೆ ತಿಳಿಸಿದಂತಹ ಧ್ಯೇಯೋದ್ಧೇಶಗಳಿಗೆ ಅನುಗುಣವಾದ ಕಾರ್ಯಗಳನ್ನು ನಿರ್ವಹಿಸುವುದು. ತನ್ನ ಉದ್ದೇಶಗಳ ಮುನ್ನಡೆಗಾಗಿ ಅಗತ್ಯವಿರಬಹುದಾದ ಮೇಲೆ ತಿಳಿಸಿದಂಥ ಧ್ಯೇಯೋದ್ಧೇಶಗಳಿಗೆ ಅನುಗುಣವಾದ ಕಾರ್ಯಗಳನ್ನು ನಿರ್ವಹಿಸುವುದು. ಆಯಾ ವರ್ಷ ಆಯವ್ಯಯದ ಪರಿಮಿತಿಯಲ್ಲಿ ಆರ್ಥಿಕ ವರ್ಷದ ಪ್ರಾರಂಭದಲ್ಲಿಯೇ ಕ್ರಿಯಾಯೋಜನೆ ಮತ್ತು ಬಜೆಟನ್ನು ಸಿದ್ಧಪಡಿಸಿ ಸರ್ಕಾರದಿಂದ ಅನುಮೋದನೆ ಪಡೆಯಬೇಕು ಮತ್ತು ಆಪ್ರಕಾರ ಅನುಷ್ಠಾನಗೊಳಿಸಬೇಕು. ಬ್ಯಾರಿ ಸಾಹಿತ್ಯ ಅಕಾಡೆಮಿಯು ತಂತಮ್ಮ ಕ್ಷೇತ್ರದ ಪ್ರತಿಭಾನ್ವಿತರಿಗೆ ಪ್ರಶಸ್ತಿ ಪುರಸ್ಕಾರ ಹಾಗೂ ಬಹುಮಾನಗಳನ್ನು ಪ್ರತಿವರ್ಷವೂ ಕೊಡಬೇಕು.

ಕಾರ್ಯಕ್ರಮಗಳು

ವಿವಿಧ ಸ್ತರಗಳಲ್ಲಿ ಬ್ಯಾರಿ ಸಾಕ್ಷ್ಯಚಿತ್ರ ನಿರ್ಮಾಣ : ಬ್ಯಾರಿ ಕಲೆ, ಭಾಷೆ, ಸಾಹಿತ್ಯ, ಸಂಸ್ಕೃತಿ ಇವುಗಳ ಸಮಗ್ರ ಚಿತ್ರಣವನ್ನು ಬ್ಯಾರಿ ಭಾಷೆಯ ಉಗಮದಿಂದ ಹಿಡಿದು ಈವರೆಗಿನ ಎಲ್ಲಾ ವಿವರಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ದೃಷ್ಠಿಯಿಂದ ವಿವಿಧ ಸ್ತರಗಳಲ್ಲಿ ಬ್ಯಾರಿ ಸಾಕ್ಷ್ಯಚಿತ್ರವನ್ನು ಪ್ರಕಟಿಸುವುದು

ಬೆಲ್ಕಿರಿ ದ್ವೈಮಾಸಿಕ ಸಂಚಿಕೆ ಬ್ಯಾರಿ ಬರಹಗಾರರಿಗೆ ಪ್ರೊತ್ಸಾಹ ನೀಡುವ ಹಾಗೂ ಸಾಹಿತ್ಯದ ಅಭಿವೃದ್ದಿ ಸಲುವಾಗಿ ಬ್ಯಾರಿ ಭಾಷೆಯ ದ್ವೈಮಾಸಿಕ ಸಂಚಿಕೆಯನ್ನು ಪ್ರಕಟನೆ ಮಾಡಲಾಗುತ್ತದೆ.

ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ಗ್ರಂಥಕೋಶ

ಸಾವಿರ ವರ್ಷ ಇತಿಹಾಸವಿರುವ ಬ್ಯಾರಿ ಭಾಷೆ, ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಮುಂದಿನ ತಲೆಮಾರಿನತ್ತ ಕೊಂಡೊಯ್ಯುವ ದೃಷ್ಟಿಯಿಂದ ಬ್ಯಾರಿ ನಿಘಂಟು ಗ್ರಂಥಕೋಶವನ್ನು ಪ್ರಕಟಿಸುವುದು.

ಪ್ರಶಸ್ತಿ ಪ್ರದಾನ – ಪುಸ್ತಕ ಬಹುಮಾನ

ಬ್ಯಾರಿ ಸಾಹಿತ್ಯ- ಸಂಶೋಧನೆ, ರಂಗಭೂಮಿ ಹಾಗೂ ಜಾನಪದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಮೂವರು ಗಣ್ಯರನ್ನು ಗುರುತಿಸಿ, ಅವರಿಗೆ ಅಕಾಡೆಮಿ ಗೌರವ ಪ್ರಶಸ್ತಿಯನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು. ಈ ಪ್ರಶಸ್ತಿಯಲ್ಲಿ ಗೌರವ ಧನ ರೂ. 10,000-00 ನಗದು, ಶಾಲು, ಹಾರ, ಪ್ರಮಾಣ ಪತ್ರ, ಫಲ ತಾಂಬೂಲಗಳನ್ನು ನೀಡಿ ಗೌರವಿಸುವುದು. ಅಕಾಡೆಮಿಯು ಪುಸ್ತಕ ಬಹುಮಾನ ಯೋಜನೆಯಡಿ ಬ್ಯಾರಿ- ಕನ್ನಡ ಭಾಷಾಂತರವನ್ನು ಒಳಗೊಂಡಂತೆ ಗರಿಷ್ಠ ಮೂರು ಪ್ರಕಾರದ ಪುಸ್ತಕಕ್ಕೆ ಬಹುಮಾನ ನೀಡಲಾಗುವುದು. ಈ ಬಹುಮಾನವು ರೂ.5,000-00, ಶಾಲು, ಹೂವಿನ ಹಾರ, ಸ್ಮರಣಿಕೆ, ಪ್ರಮಾಣಪತ್ರ ಮತ್ತು ಫಲ ತಾಂಬೂಲ ನೀಡಿ ಗೌರವಿಸುವುದು. ಈ ಪ್ರಸ್ಕಾರಕ್ಕಾಗಿ ಉತ್ತಮ ಪುಸ್ತಕಗಳೆಂದು ಪರಿಗಣಿಸಲು ಸಹಾಯವಾಗುವಂತೆ ಆಯ್ಕೆ ಮಾಡಲು ಅಯ್ದ ತಜ್ಞರಿಗೆ ನೀಡುವುದು ಹಾಗೂ ತಜ್ಞರು ಆಯ್ಕೆ ಮಾಡಿದ ಪುಸ್ತಕಗಳಿಗೆ ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.

ವಿವಿಧ ಪರಿಕರಗಳ ಆಭರಣ ಮತ್ತು ಅಮೂಲ್ಯ ವಸ್ತುಗಳ ಛಾಯಚಿತ್ರಗಳ ಸಂಗ್ರಹ ಬ್ಯಾರಿ ಜನಾಂಗದಲ್ಲಿ ಇದ್ದ ವಿವಿಧ ಪರಿಕರಗಳ ಆಭರಣ ಮತ್ತು ಇನ್ನಿತರ ಬದುಕಿಗೆ ಅಮೂಲ್ಯ ಹಾಗೂ ಅಪರೂಪದ ವಸ್ತುಗಳ ಛಾಯಚಿತ್ರ ಸಂಗ್ರಹಿಸಿ ಗ್ರಂಥ ರಚಿಸುವುದು.

ಸಾಹಿತ್ಯ – ಸಾಂಸ್ಕೃತಿಕ ಕಾರ್ಯಕ್ರಮಗಳು

ಅಕಾಡೆಮಿಯು ಬ್ಯಾರಿ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬ್ಯಾರಿ ಸಂಸ್ಕೃತಿಗೆ ಪೂರಕವಾದ ಬ್ಯಾರಿಗಳ ವಿಶಿಷ್ಟ ಹಬ್ಬಗಳಾದ ಪೆರ್ನಾಲ್, ಸಂದೋಲ, ಜಾನಪದ ಸಂಗೀತ, ನಾಟಕಗಳಿಗೆ ಸಂಬಂಧಿಸಿದಂತೆ ಉತ್ಸವ, ಸಮಾವೇಶ, ಸಮ್ಮೇಳನ, ದಫ್ ಸ್ಪರ್ಧೆ, ಬ್ಯಾರಿ ನಾಟಕ ಸ್ಪರ್ಧೆ ಮತ್ತು ಬ್ಯಾರಿ ಜಾನಪದ ಕಾರ್ಯಕ್ರಮಗಳನ್ನು ನಡೆಸುವುದು. ಈ ಕಾರ್ಯಕ್ರಮವನ್ನು ರಾಜ್ಯದ ವಿವಿದೆಡೆಗಳಲ್ಲಿ ನಡೆಸುವ ಯೋಜನೆ ಹಾಕಲಾಗಿದೆ.

ಕವಿ ಸಮ್ಮೇಳನ/ಬಹುಭಾಷಾ ಕವಿಗೋಷ್ಠಿಗಳು

ಬ್ಯಾರಿ ಕವಿಗಳನ್ನು ಗುರುತಿಸುವ ಕಾರ್ಯಕ್ರಮ ಕವಿ ಸಮ್ಮೇಳನದ ಮೂಲ ಉದ್ದೇಶ. ಈ ಕವಿ ಸಮ್ಮೇಳನದಲ್ಲಿ ಮೂಡಿ ಬರುವ ಲೇಖನಗಳನ್ನು ಸಂಗ್ರಹಿಸಿ ಒಂದು ಕಿರು ಪರಿಚಯದ ಪುಸ್ತಕ ಪ್ರಕಟಿಸುವುದು. ಮತ್ತು ಬಹುಭಾಷಾ ಕವಿಗೋಷ್ಠಿಯಲ್ಲಿ ಬ್ಯಾರಿ, ಕನ್ನಡ, ತುಳು, ಕೊಂಕಣಿ, ಕೊಡವ, ಮಲಯಾಳಿ, ಇಂಗ್ಲೀಷ್ ಹಾಗೂ ಇತರ ಭಾಷಿಗರೊಂದಿಗೆ ಬೆರೆತು ಬಹುಭಾಷಾ ಕವಿಗೋಷ್ಠಿಯನ್ನು ಹಮ್ಮಿಕೊಳ್ಳುವುದು.


ಹೊರನಾಡು ಕಾರ್ಯಕ್ರಮ

ಬ್ಯಾರಿ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಬ್ಯಾರಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್ಚಿನ ಬ್ಯಾರಿ ಬಾಂಧವರು ಇರುವ ರಾಜ್ಯದ ಹೊರಗಡೆ, ಅಲ್ಲಿನ ಸ್ಥಳೀಯ ಸಂಘ ಸಂಸ್ಥೆಯವರ , ಸ್ಥಳೀಯರ ಸಹಕಾರ ಪಡೆದು ಕಾರ್ಯಕ್ರಮ ಹಮ್ಮಿಕೊಳ್ಳುವುದು.

ಕಾರ್ಯಾಗಾರ ಮತ್ತು ಕಮ್ಮಟಗಳು

ಬ್ಯಾರಿ ಸಾಹಿತ್ಯದಲ್ಲಿ ಸರ್ವಜನಿಕರಿಗೆ ಆಸಕ್ತಿ ಮೂಡಿಸಲು ಹಾಗೂ ಯುವ ಜನರಲ್ಲಿ ಸಾಹಿತ್ಯ ಜಾಗೃತಿ ತರಲು ಸಹಾಯವಾಗುವಂತೆ ಕವಿತೆ ಬರೆಯುವ ಕುರಿತು ಮೂಲಜ್ಞಾನ, ಬರೆಯುವ ರೀತಿ ಇವುಗಳ ಕುರಿತು ಸ್ಪಷ್ಟ ಮಾಹಿತಿ ಒದಗಿಸುವಂತಹ ಕಾರ್ಯಾಗಾರವನ್ನು ಹಮ್ಮಿಕೊಳ್ಳುವುದು. ಭಾಷೆ, ಸಾಹಿತ್ಯ, ಜಾನಪದ, ಕಾವ್ಯ ರಚನೆ, ನಾಟಕ ರಚನೆ, ಗೀತಗಾಯನ, ಅನುವಾದ ಕಮ್ಮಟ, ಸಂಶೋಧನಾ ತರಬೇತಿ ಕಮ್ಮಟ ಅಥವಾ ಶಿಬಿರಗಳನ್ನು ನಡೆಸುವುದು.

ಅಕಾಡೆಮಿ, ಇಲಾಖೆಗಳ ಸಹಯೋಗದೊಂದಿಗೆ ಹಾಗೂ ಬ್ಯಾರಿ ಸಂಘ ಸಂಸ್ಥೆಗಳೊಂದಿಗೆ ಜಂಟಿ ಕಾರ್ಯಕ್ರಮ ಭಾಷೆ, ಸಾಹಿತ್ಯಕ್ಕೆ ಪೂರಕವಾದ ಮತ್ತು ಭಾಷಾ ಬೆಳವಣಿಗೆಯ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳುವಾಗ, ಇಲಾಖೆಗಳು, ಅಕಾಡೆಮಿ ಮತ್ತು ಸಂಘ ಸಂಸ್ಥೆಗಳೊಂದಿಗೆ ಅಕಾಡೆಮಿ ಸಹಯೋಗದಲ್ಲಿ ಅಥವಾ ಅಕಾಡೆಮಿಯೇ ನೇರವಾಗಿ ಸ್ಥಳೀಯ ಸಂಸ್ಥೆಯ ಸಹಕಾರ ಪಡೆದು ನಡೆಸುವುದು.

ಮಹಿಳಾ ಸಮ್ಮೇಳನ ಮತ್ತು ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯಂದು ಬ್ಯಾರಿ ಮಹಿಳಾ ಕೂಟ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನಡೆಸುವುದು.

ಗಡಿನಾಡು ಕಾರ್ಯಕ್ರಮ

ಬ್ಯಾರಿ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಪೂರಕವಾದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಜ್ಯದ ಗಡಿಭಾಗದಲ್ಲಿ ಅಲ್ಲಿನ ಸ್ಥಳೀಯ ಸಂಘ ಸಂಸ್ಥೆಯವರ, ಸ್ಥಳೀಯರ ಸಹಕಾರ ಪಡೆದು ಕಾರ್ಯಕ್ರಮ ಹಮ್ಮಿಕೊಳ್ಳುವುದು.

ವಿಳಾಸ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹ್ಯಾಮಿಲ್ಟನ್ ಕಾಂಪ್ಲೆಕ್ಸ್, ಸ್ಟೇಟ್ ಬ್ಯಾಂಕ್ ಮಂಗಳೂರು-೫೭೫೦೦೧

ಬಾಹ್ಯ ಸಂಪರ್ಕ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ Archived 2017-09-23 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖ

Tags:

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಧ್ಯೇಯ ಮತ್ತು ಉದ್ದೇಶಗಳುಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳುಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ಗ್ರಂಥಕೋಶಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ – ಪುಸ್ತಕ ಬಹುಮಾನಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸಾಹಿತ್ಯ – ಸಾಂಸ್ಕೃತಿಕ ಕಾರ್ಯಕ್ರಮಗಳುಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕವಿ ಸಮ್ಮೇಳನಬಹುಭಾಷಾ ಕವಿಗೋಷ್ಠಿಗಳುಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಹೊರನಾಡು ಕಾರ್ಯಕ್ರಮಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕಾರ್ಯಾಗಾರ ಮತ್ತು ಕಮ್ಮಟಗಳುಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಹಿಳಾ ಸಮ್ಮೇಳನ ಮತ್ತು ದಿನಾಚರಣೆಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಗಡಿನಾಡು ಕಾರ್ಯಕ್ರಮಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವಿಳಾಸಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಬಾಹ್ಯ ಸಂಪರ್ಕಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಉಲ್ಲೇಖಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಪ್ರಶಸ್ತಿಬ್ಯಾರಿಸಾಹಿತ್ಯ

🔥 Trending searches on Wiki ಕನ್ನಡ:

ಕರ್ಣಸಮಾಜವಾದಗಿರೀಶ್ ಕಾರ್ನಾಡ್ಪಾರ್ವತಿಫ್ರಾನ್ಸ್ಭಾರತದ ಸಂಯುಕ್ತ ಪದ್ಧತಿಸೀತೆಭಗತ್ ಸಿಂಗ್ಸ್ತ್ರೀಭಾರತದಲ್ಲಿನ ಶಿಕ್ಷಣರಾಜಧಾನಿಗಳ ಪಟ್ಟಿಮೊಘಲ್ ಸಾಮ್ರಾಜ್ಯಮೈಸೂರು ಪೇಟಖೊಖೊವಿಜಯನಗರಜೀವಕೋಶಆರೋಗ್ಯಸೂರ್ಯ (ದೇವ)ಜೋಗಶುಕ್ರಕ್ರೋಮ್ ಕಾರ್ಯಾಚರಣಾ ವ್ಯವಸ್ಥೆಉಡ್ಡಯನ (ಪ್ರಾಣಿಗಳಲ್ಲಿ)ವಡ್ಡಾರಾಧನೆಕೆ. ಎಸ್. ನರಸಿಂಹಸ್ವಾಮಿಸಾಮ್ರಾಟ್ ಅಶೋಕಅಖಿಲ ಭಾರತ ಬಾನುಲಿ ಕೇಂದ್ರಕನ್ನಡ ಸಾಹಿತ್ಯ ಪ್ರಕಾರಗಳುಭೌಗೋಳಿಕ ಲಕ್ಷಣಗಳುಆಸ್ಪತ್ರೆಭಾರತದ ಜನಸಂಖ್ಯೆಯ ಬೆಳವಣಿಗೆಹನುಮಾನ್ ಚಾಲೀಸಎಚ್.ಎಸ್.ವೆಂಕಟೇಶಮೂರ್ತಿಶಿವರಾಷ್ಟ್ರಕವಿಕ್ರಿಕೆಟ್ಭಾರತದಲ್ಲಿ ತುರ್ತು ಪರಿಸ್ಥಿತಿಚಂದ್ರಗುಪ್ತ ಮೌರ್ಯಜಲ ಮಾಲಿನ್ಯವಚನ ಸಾಹಿತ್ಯಅಣ್ಣಯ್ಯ (ಚಲನಚಿತ್ರ)ಕೈವಾರ ತಾತಯ್ಯ ಯೋಗಿನಾರೇಯಣರುಗಾಂಧಿ ಮತ್ತು ಅಹಿಂಸೆಪರಮಾಣುರಾಜ್ಯಪಾಲಬಿ.ಎ.ಸನದಿನಾಗಚಂದ್ರಅಮೇರಿಕದ ಫುಟ್‌ಬಾಲ್ಗುಬ್ಬಚ್ಚಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿನೀತಿ ಆಯೋಗಆಗಮ ಸಂಧಿಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ರೇಣುಕಮಕರ ಸಂಕ್ರಾಂತಿವಿಕ್ರಮಾರ್ಜುನ ವಿಜಯಬೆಂಗಳೂರು ಕೋಟೆಮಾನವ ಸಂಪನ್ಮೂಲ ನಿರ್ವಹಣೆಆಕೃತಿ ವಿಜ್ಞಾನಮೊಬೈಲ್ ಅಪ್ಲಿಕೇಶನ್ಒಡೆಯರ್ಬಸವರಾಜ ಬೊಮ್ಮಾಯಿಪತ್ರಮೌರ್ಯ ಸಾಮ್ರಾಜ್ಯಕೇಂದ್ರ ಸಾಹಿತ್ಯ ಅಕಾಡೆಮಿಚಾಮುಂಡರಾಯರೆವರೆಂಡ್ ಎಫ್ ಕಿಟ್ಟೆಲ್ಊಳಿಗಮಾನ ಪದ್ಧತಿಲೋಪಸಂಧಿನೀರುಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಭಾವನೆಕಪ್ಪೆ ಅರಭಟ್ಟಕಾರ್ಖಾನೆ ವ್ಯವಸ್ಥೆಕೃಷ್ಣಒನಕೆ ಓಬವ್ವಶ್ಯೆಕ್ಷಣಿಕ ತಂತ್ರಜ್ಞಾನಎಚ್.ಎಸ್.ಶಿವಪ್ರಕಾಶ್ಓಂ (ಚಲನಚಿತ್ರ)🡆 More