ಕದಂಬ ಮರ

ಕದಂಬ : ರೂಬಿಯೇಸೀ ಕುಟುಂಬಕ್ಕೆ ಸೇರಿದ ಸುಂದರವಾದ ಹೂ ಬಿಡುವ ಮರ.

ಕದಂಬ ಮರ
ಕದಂಬ ಮರ
Tree in ಕೊಲ್ಕತ್ತ, West Bengal, India.
ಕದಂಬ ಮರ
ಹೂವಿನ ಸಮೀಪ ನೋಟ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Asterids
ಗಣ:
Gentianales
ಕುಟುಂಬ:
Rubiaceae
ಉಪಕುಟುಂಬ:
Cinchonoideae
ಪಂಗಡ:
Naucleeae
ಕುಲ:
Neolamarckia
ಪ್ರಜಾತಿ:
N. cadamba
Binomial name
Neolamarckia cadamba
(Roxb.) Bosser
Synonyms
  • Nauclea cadamba Roxb.
  • Anthocephalus cadamba (Roxb.) Miq.
  • Anthocephalus chinensis auct., non Anthocephalus chinensis (Lam.) A.Rich. ex Walp.
  • Anthocephalus indicus var. glabrescens H.L.Li
  • Anthocephalus morindifolius Korth.
  • Nauclea megaphylla S.Moore
  • Neonauclea megaphylla (S.Moore) S.Moore
  • Samama cadamba (Roxb.) Kuntze
  • Sarcocephalus cadamba (Roxb.) Kurz

ವೈಜ್ಞಾನಿಕ ಹೆಸರು

ಆಂಥೊಸೆಫಾಲಸ್ ಕದಂಬ ಇದರ ವೈಜ್ಞಾನಿಕ ನಾಮ. ಕಡವಳಮರ ಪರ್ಯಾಯನಾಮ.

ಹರಡುವಿಕೆ

ಭಾರತದ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಈ ಮರವನ್ನು ಇದರ ಸುಂದರವಾದ ಹೂಗಳಿಗಾಗಿ ಉದ್ಯಾನವನಗಳಲ್ಲಿ, ರಸ್ತೆಗಳ ಪಕ್ಕಗಳಲ್ಲಿ ಬೆಳೆಸುತ್ತಾರೆ.

ಲಕ್ಷಣಗಳು

ಕದಂಬ ಮರ 
ಎರಡು ಅರ್ಧದಷ್ಟು ಪೂರ್ಣ ಕಡಮ್
ಕದಂಬ ಮರ 
ಕದಂಬ ಮರದ ಕೆಳಭಾಗದ ಕಾಂಡ

ಇದು ಸು. 9 ಮೀ ಎತ್ತರ ಬೆಳೆಯುವ ಮಧ್ಯಮ ಗಾತ್ರದ ಮರ. ತೊಗಟೆ ಬೂದು ಬಣ್ಣದ್ದಾಗಿದ್ದು ನಯವಾಗಿದೆ. ತೊಗಟೆಯ ಒಳಭಾಗದ ಬಣ್ಣ ಹಳದಿ ಮಿಶ್ರಿತ ಕಂದು. ವಯಸ್ಸಾದ ಮರದ ತೊಗಟೆ ಉದ್ದವಾಗಿ ಸೀಳಿ ಚಚ್ಚೌಕ ಬಿಲ್ಲೆಗಳಾಗಿ ಉದುರುತ್ತದೆ. ಎಲೆಗಳು ಅಭಿಮುಖವಾಗಿ ಜೋಡಣೆಗೊಂಡಿವೆ. ಅವುಗಳ ಆಕಾರ ಕರನೆಯಂತೆ, ಅಂಚು ನಯ ಮತ್ತು ತುದಿ ಮೊನಚು. ಹೂಗೊಂಚಲು ಮಧ್ಯಾರಂಭಿ (ಸೈಮೋಸ್) ಮಾದರಿಯದು. ಚೆಂಡಿನಂತೆ ಆಕಾರ ಹೂಗಳು ಕಿತ್ತಳೆ ಬಣ್ಣದವು. ಸುಗಂಧಪುರಿತವೂ ಹೌದು. ಕ್ರಮೇಣ ಹೂಗಳು ಚಿನ್ನದ ಬಣ್ಣ ತಾಳುತ್ತವೆ. ಫಲ ಸಣ್ಣ ಸಣ್ಣ ಬೀಜಗಳನ್ನೊಳಗೊಂಡ ಸಂಪುಟ ಮಾದರಿಯದು. ಕದಂಬ ಮರವನ್ನು ಬೀಜಗಳಿಂದ ಸುಲಭವಾಗಿ ವೃದ್ಧಿ ಮಾಡಬಹುದು.

ಉಪಯೋಗಗಳು

ಇದರ ಹಣ್ಣುಗಳು ರುಚಿಯಾಗಿರುವುದರಿಂದ ಮನುಷ್ಯರೂ ಪ್ರಾಣಿ ಪಕ್ಷಿಗಳೂ ತಿನ್ನುವುದುಂಟು. ಕೆನೆ ಅಥವಾ ಮಾಸಲು ಬಿಳಿ ಬಣ್ಣದ ಇದರ ಚೌಬೀನೆ ಅಷ್ಟಾಗಿ ಬಾಳಿಕೆ ಬರುವುದಿಲ್ಲ. ಆದರೆ ಅದನ್ನು ಸುಲಭವಾಗಿ ಕೊಯ್ಯಬಹುದು, ಹದಮಾಡಬಹುದು. ಮೆದುವಾಗಿರುವುದರಿಂದ ಬೆಂಕಿಪೆಟ್ಟಿಗೆ, ಸಾಗಾಣಿಕೆ ಪೆಟ್ಟಿಗೆ ಮಾಡಲು ಉಪಯೋಗಿಸುತ್ತಾರೆ.

ಔಷಧೀಯ ಗುಣಗಳು

ಇದರ ತೊಗಟೆಯನ್ನು ಕಣ್ಣುನೋವಿನ ನಿವಾರಣೆಗೂ ಬಾಯಿಹುಣ್ಣಿಗೂ ಬಳಸುತ್ತಾರೆ.

ಉಲ್ಲೇಖಗಳು

ಕದಂಬ ಮರ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕದಂಬ

Tags:

ಕದಂಬ ಮರ ವೈಜ್ಞಾನಿಕ ಹೆಸರುಕದಂಬ ಮರ ಹರಡುವಿಕೆಕದಂಬ ಮರ ಲಕ್ಷಣಗಳುಕದಂಬ ಮರ ಉಪಯೋಗಗಳುಕದಂಬ ಮರ ಔಷಧೀಯ ಗುಣಗಳುಕದಂಬ ಮರ ಉಲ್ಲೇಖಗಳುಕದಂಬ ಮರ

🔥 Trending searches on Wiki ಕನ್ನಡ:

ಛಂದಸ್ಸುವಾಣಿ ಹರಿಕೃಷ್ಣರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಸೂರ್ಯ (ದೇವ)ಸರ್ಪ ಸುತ್ತುಹದಿಹರೆಯಬಿರಿಯಾನಿಶಿವಪ್ಪ ನಾಯಕರೌಲತ್ ಕಾಯ್ದೆಪ್ರಗತಿಶೀಲ ಸಾಹಿತ್ಯಹಳೇಬೀಡುಗಂಗ (ರಾಜಮನೆತನ)ಸಂಶೋಧನೆಪ್ರಶಸ್ತಿಗಳುದ್ರೌಪದಿ ಮುರ್ಮುಭಾರತ ರತ್ನತಾಜ್ ಮಹಲ್ದಕ್ಷಿಣ ಕನ್ನಡಪರಿಸರ ವ್ಯವಸ್ಥೆಟೆನಿಸ್ ಕೃಷ್ಣನೀರುನವಿಲುಜಾಗತಿಕ ತಾಪಮಾನ ಏರಿಕೆದುರ್ಯೋಧನವಿಷ್ಣುಭೀಮಾ ತೀರದಲ್ಲಿ (ಚಲನಚಿತ್ರ)ಅತ್ತಿಮಬ್ಬೆಮಾಟ - ಮಂತ್ರತತ್ಸಮ-ತದ್ಭವರಾಧಿಕಾ ಕುಮಾರಸ್ವಾಮಿಕರ್ನಾಟಕದ ಮಹಾನಗರಪಾಲಿಕೆಗಳುಕ್ಯುಆರ್ ಕೋಡ್ಮಹಾಭಾರತಗದಗಧರ್ಮಸ್ಥಳಎಚ್.ಎಸ್.ವೆಂಕಟೇಶಮೂರ್ತಿಲೋಕಸಭೆಪಂಜೆ ಮಂಗೇಶರಾಯ್ರಾಮಬಳ್ಳಾರಿಕೃಷ್ಣ ಮಠಭಾರತದಲ್ಲಿನ ಶಿಕ್ಷಣಮಲ್ಲಿಕಾರ್ಜುನ್ ಖರ್ಗೆದ್ವಾರಕೀಶ್ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿದೇವರ/ಜೇಡರ ದಾಸಿಮಯ್ಯಭಗತ್ ಸಿಂಗ್ಮೆಕ್ಕೆ ಜೋಳಜಗನ್ನಾಥ ದೇವಾಲಯಮಂಜುಳಜನಪದ ಕಲೆಗಳುಸಂಗೀತಯೂಟ್ಯೂಬ್‌ಕೈಗಾರಿಕೆಗಳುಶ್ರೀನಿವಾಸ ರಾಮಾನುಜನ್ಭಾರತದಲ್ಲಿನ ಚುನಾವಣೆಗಳುರಾಸಾಯನಿಕ ಗೊಬ್ಬರಕೃಷ್ಣರಾಜಸಾಗರವೃತ್ತಪತ್ರಿಕೆವ್ಯಾಪಾರಕಾನೂನುನಾಗಚಂದ್ರಕೃತಕ ಬುದ್ಧಿಮತ್ತೆರಾಣೇಬೆನ್ನೂರುತುಮಕೂರುವಿಜಯನಗರ ಜಿಲ್ಲೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕೃಷ್ಣಾ ನದಿಜಾಗತೀಕರಣಸುಭಾಷ್ ಚಂದ್ರ ಬೋಸ್ಕರಗಕೆ ವಿ ನಾರಾಯಣಆಲಿವ್ಮಾರಾಟ ಪ್ರಕ್ರಿಯೆಗೋವ🡆 More