ಕಡಲಾಮೆಗಳು

ಸರೀಸೃಪವರ್ಗದ 'ಕಿಲೋನಿಯ ಗಣಕ್ಕೆ (ಆಮೆಗಳ ಗುಂಪು) ಸೇರಿದ ಸಮುದ್ರವಾಸಿ ಪ್ರಾಣಿ (ಟರ್ಟಲ್).

ಕಡಲಾಮೆಗಳು
ಕಡಲಾಮೆ

ಕಡಲಾಮೆಗಳು

ಸಾಮಾನ್ಯವಾಗಿ ಸ್ಫಾರ್ಜಿಡೀ ಮತ್ತು ಕೀಲೊನೈಯಿಡೀ ಕುಟುಂಬಗಳಿಗೆ ಸೇರಿದ ಪ್ರಾಣಿಗಳನ್ನು ಕಡಲಾಮೆಗಳೆನ್ನುತ್ತಾರೆ. ಇವುಗಳಲ್ಲಿ ಮೊದಲನೆಯ ಕುಟುಂಬಕ್ಕೆ ಸೇರಿದ ಡರ್ಮೋಕೆಲಿಸ್ ಕೋರಿಯೇಸಿಯ ಮತ್ತು ಎರಡನೆಯದಕ್ಕೆ ಸೇರಿದ ಕಿಲೋನೀ ಇಂಬ್ರಿಕೇಟ ಮತ್ತು ಕಿ. ಮೈಡಾಸ್ ಎಂಬುವು ಮುಖ್ಯವಾದ ಬಗೆಯ ಕಡಲಾಮೆಗಳು.

ಡರ್ಮೋಕೆಲಿಸ್ ಕೋರಿಯೇಸಿಯ

ತೊಗಲಾಮೆ (ಲೆಧರಿ ಟರ್ಟಲ್) ಎಂದೂ ಕರೆಯಲಾಗುವ ಡರ್ಮೋಕೆಲಿಸ್ ಕೋರಿಯೇಸಿಯ ಕಡಲಾಮೆ ಸಿಂಹಳದ ಕಡಲತೀರ ಪ್ರದೇಶಗಳಲ್ಲಿ ಹೇರಳವಾಗಿ ಕಾಣಬರುತ್ತದೆ. ಇದು ಗಾತ್ರದಲ್ಲಿ ಬಹುದೊಡ್ಡದು. ಸು. 9 ಮೀ ಉದ್ದ ಬೆಳೆಯುತ್ತದೆ. ಚೆನ್ನಾಗಿ ಬೆಳೆದ ಕಡಲಾಮೆ ಅರ್ಧ ಟನ್ ತೂಗುವುದುಂಟು. ಎಲ್ಲ ಆಮೆಗಳಲ್ಲಿರುವಂತೆ ಇದರಲ್ಲೂ ದೇಹವನ್ನು ಆವರಿಸಿದ ಒಂದು ಚಿಪ್ಪಿದೆ. ಚಿಪ್ಪಿನಲ್ಲಿ ಬೆನ್ನಿನ ಕಡೆ ಉಬ್ಬಿಕೊಂಡಿರುವ ಕ್ಯಾರಪೇಸ್ ಎಂಬ ಭಾಗವೂ ಹೊಟ್ಟೆಕಡೆ ಚಪ್ಪಟೆಯಾಗಿರುವ ಪ್ಲಾಸ್ಟ್ರಾನ್ ಎಂಬ ಭಾಗವೂ ಇವೆ. ಕ್ಯಾರಪೇಸಿನ ಮೇಲೆ ಮೃದುವಾದ ಚರ್ಮದ ಹೊದಿಕೆಯಿದೆ. ಅಲ್ಲದೆ ಅದು ಚಿಕ್ಕ ಚಿಕ್ಕ ಬಹುಭುಜಾಕೃತಿಯ ಅಸ್ಥಿಫಲಕಗಳಿಂದ ಕೂಡಿದೆ. ಇಂಥ ಫಲಕಗಳು ಇತರ ಆಮೆಗಳಲ್ಲಿ ಒಳಗಿನ ಪಕ್ಕೆಲುಬುಗಳಿಗೂ ಕಸೇರುಗಳಿಗೂ ಅಂಟಿಕೊಂಡಿರುತ್ತವೆ. ಆದರೆ ಇಲ್ಲಿ ಹಾಗಿಲ್ಲ. ಚಿಪ್ಪಿನಿಂದ ಹೊರಗೆ ಚಾಚಿಕೊಂಡಿರುವ ಎರಡು ಜೊತೆ ಕಾಲುಗಳು ದೋಣಿಯ ಹುಟ್ಟಿನಂತೆ ಮಾರ್ಪಾಟಾಗಿವೆ. ಇದರಿಂದ ಈಜಲು ಅನುಕೂಲ. ಕಾಲುಗಳ ಮೇಲೆಲ್ಲ ಹುರುಪೆಗಳ ಹೊದಿಕೆಯಿದೆ, ನಖಗಳಿಲ್ಲ. ದೇಹದ ಹಿಂತುದಿಯಲ್ಲಿ ಪುಟ್ಟ ಬಾಲವೊಂದಿದೆ. ಕಡಲಾಮೆ ಮಾಂಸಾಹಾರಿ. ಸೀಗಡಿ, ನಳ್ಳಿ, ಮೀನು ಮುಂತಾದವು ಇದರ ಆಹಾರ. ಮೊಟ್ಟೆಯಿಡಲು ಸಮುದ್ರದಂಡೆಗೆ ಬರುತ್ತದೆ. ಮೊಟ್ಟೆಯಿಡುವ ಕಾಲ ವಸಂತಋತು. ಮರಳಿನ ತೀರಕ್ಕೆ ಬಂದು ದೊಡ್ಡ ದೊಡ್ಡ ಗುಂಡಿಗಳನ್ನು ತೋಡಿ ಅವುಗಳಲ್ಲಿ ಮೊಟ್ಟೆಯಿಟ್ಟು ಗುಂಡಿಗಳನ್ನು ಮುಚ್ಚಿ ನೀರಿಗೆ ಮರಳುತ್ತದೆ. ಬಿಸಿಲಿನ ಶಾಖದಿಂದಾಗಿ ಮೊಟ್ಟೆಗಳು ಒಡೆದು ಮರಿ ಆಮೆಗಳು ಹೊರಬರುತ್ತವೆ. ಇವು ನಿಧಾನವಾಗಿ ತೆವಳಿಕೊಂಡು ಹೋಗಿ ಸಮುದ್ರವನ್ನು ಸೇರಿ ತಮ್ಮ ಸ್ವತಂತ್ರ ಜೀವನವನ್ನು ಆರಂಭಿಸುತ್ತವೆ. ಕೀಲೊನೈಯಿಡೀ ಕುಟುಂಬದ ಕಿಲೋನೀ ಜಾತಿಯ ಕಡಲಾಮೆಗಳು ವೆಸ್ಟ್‌ ಇಂಡೀಸ್, ಮಲೇಸಿಯ, ಪಶ್ಚಿಮ ಆಫ್ರಿಕ ಹಾಗೂ ಸಿಂಹಳ ದೇಶಗಳ ಸಮುದ್ರತೀರಗಳಲ್ಲಿ ಸಾಮಾನ್ಯ. ನೋಡುವುದಕ್ಕೆ ತೊಗಲಮೆಯಂತೆ ಕಂಡರೂ ಕೆಲವು ಲಕ್ಷಣಗಳಲ್ಲಿ ಅದಕ್ಕಿಂತ ಭಿನ್ನವಾಗಿವೆ. ಕಾಲುಗಳಲ್ಲಿ ಒಂದು ಅಥವಾ ಎರಡು ಉಗುರುಗಳಿರುವುದೂ ಕ್ಯಾರಪೇಸಿನ ಫಲಕಗಳು ಗಡುಸಾಗಿರುವುದೂ ಇವುಗಳ ಮುಖ್ಯ ಲಕ್ಷಣಗಳು. ಉಳಿದ ಜೀವನಕ್ರಮವೆಲ್ಲ ತೊಗಲಾಮೆ ಯಂತೆಯೇ. ಕಿಲೋನೀ ಇಂಬ್ರಿಕೇಟ ಎನ್ನುವ ಪ್ರಭೇದವನ್ನು ಸಾಮಾನ್ಯವಾಗಿ ಗರುಡಮೂಗಿನ ಆಮೆಯೆಂದು ಕರೆಯುತ್ತಾರೆ. ಇದು ಮಾಂಸಾಹಾರಿ. ಇದರ ಚಿಪ್ಪನ್ನು ಹಲವಾರು ಬಗೆಯ ವಸ್ತುಗಳನ್ನು ಮಾಡಲು ಉಪಯೋಗಿಸುತ್ತಾರೆ. ಕಿಲೋನೀ ಮೈಡಾಸ್ ಪ್ರಭೇದಕ್ಕೆ ಹಸಿರು ಆಮೆ ಎಂಬ ಸಾಮಾನ್ಯ ಹೆಸರಿದೆ. 3 ಮೀ ಉದ್ದ ಬೆಳೆಯುವ ಇದು ಸಸ್ಯಾಹಾರಿ ಇದರ ಕೊಬ್ಬು ಹಸಿರು ಬಣ್ಣಕ್ಕಿರುವುದರಿಂದ ಇದಕ್ಕೆ ಹಸಿರು ಆಮೆ ಎಂಬ ಹೆಸರು.

ಕಡಲಾಮೆಗಳು ತಾವು ಸಿಕ್ಕುವ ಸ್ಥಳಗಳ ನಿವಾಸಿಗಳಿಗೆ ಆಹಾರವಸ್ತುಗಳಾಗಿವೆ. ಇವುಗಳ ಮೊಟ್ಟೆಯನ್ನೂ ತಿನ್ನುತ್ತಾರೆ. ಹಸಿರು ಆಮೆಯ ಮಾಂಸದಿಂದ ಮಾಡಲಾಗುವ ಸಾರು (ಟರ್ಟಲ್ ಸೂಪ್) ಬಹು ಪ್ರಸಿದ್ದವಾದ ಪೇಯವಸ್ತು. (ನೋಡಿ-ಆಮೆ, ಆಮೆಯ-ಚಿಪ್ಪು, ನೀರಾಮೆ)

Tags:

ಪ್ರಾಣಿ

🔥 Trending searches on Wiki ಕನ್ನಡ:

ರೈತರಾಷ್ತ್ರೀಯ ಐಕ್ಯತೆಭಾರತದ ಚುನಾವಣಾ ಆಯೋಗಕರ್ನಾಟಕದ ನದಿಗಳುಮೂಲಧಾತುಬಾಬು ಜಗಜೀವನ ರಾಮ್ಕರ್ನಾಟಕ ಸಂಘಗಳುದಯಾನಂದ ಸರಸ್ವತಿಜಂತುಹುಳುಕರ್ನಾಟಕದ ಸಂಸ್ಕೃತಿಯಲಹಂಕದ ಪಾಳೆಯಗಾರರುಜನಪದ ಕಲೆಗಳುಓಂ (ಚಲನಚಿತ್ರ)ಹಲಸುಪ್ರವಾಸ ಸಾಹಿತ್ಯವಿಜಯನಗರ ಜಿಲ್ಲೆಸೌರಮಂಡಲಪಂಪಜಾತ್ರೆಕಾಳಿಂಗ ಸರ್ಪಸಂಸ್ಕೃತ ಸಂಧಿಕನ್ನಡ ಸಾಹಿತ್ಯ ಪ್ರಕಾರಗಳುಭತ್ತಮಂಗಳಮುಖಿಭಾರತದ ಪ್ರಧಾನ ಮಂತ್ರಿಪ್ರಜಾಪ್ರಭುತ್ವಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಚಿಕ್ಕಮಗಳೂರುಭಾರತದ ಮುಖ್ಯಮಂತ್ರಿಗಳುಚಾರ್ಲಿ ಚಾಪ್ಲಿನ್ರೋಸ್‌ಮರಿವೃತ್ತಪತ್ರಿಕೆದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಮಹಾಲಕ್ಷ್ಮಿ (ನಟಿ)ತಾಜ್ ಮಹಲ್ಭಾರತದ ಸಂವಿಧಾನರಾಷ್ಟ್ರಕೂಟಲಕ್ಷ್ಮಿಜಯಮಾಲಾಪ್ರೇಮಾಇನ್ಸ್ಟಾಗ್ರಾಮ್ಕನ್ನಡ ಸಾಹಿತ್ಯ ಪರಿಷತ್ತುವಿಚಿತ್ರ ವೀಣೆಸಜ್ಜೆಪರಮಾತ್ಮ(ಚಲನಚಿತ್ರ)ಗೋಕಾಕ್ ಚಳುವಳಿಯೋನಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕನ್ನಡ ರಂಗಭೂಮಿಗೋಕರ್ಣಸು.ರಂ.ಎಕ್ಕುಂಡಿಹೆಚ್.ಡಿ.ಕುಮಾರಸ್ವಾಮಿದಿಕ್ಕುಯುಗಾದಿಪಗಡೆಮುದ್ದಣಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಮದುವೆಜನ್ನಬಾದಾಮಿಮೋಕ್ಷಗುಂಡಂ ವಿಶ್ವೇಶ್ವರಯ್ಯನಾಯಕ (ಜಾತಿ) ವಾಲ್ಮೀಕಿಆಯುರ್ವೇದಭಯೋತ್ಪಾದನೆಚಿತ್ರದುರ್ಗಹುಬ್ಬಳ್ಳಿಚಂದ್ರಗುಪ್ತ ಮೌರ್ಯವಿಷ್ಣುವರ್ಧನ್ (ನಟ)ಭಾರತೀಯ ಭಾಷೆಗಳುಹನುಮಂತಅಲಾವುದ್ದೀನ್ ಖಿಲ್ಜಿಪ್ರಜಾವಾಣಿಮೈಸೂರುಧನಂಜಯ್ (ನಟ)ಕನ್ನಡ ಛಂದಸ್ಸುಭಾರತದ ರಾಷ್ಟ್ರೀಯ ಉದ್ಯಾನಗಳು🡆 More