ಕಂಬಿ ಕುಣಿತ

ಉತ್ತರ ಕರ್ನಾಟಕದಲ್ಲಿ ವರುಷಕೊಮ್ಮೆ ಶಿವರಾತ್ರಿ, ಯುಗಾದಿ ಸಮಯದಲ್ಲಿ ಭಕ್ತರು ಮಲ್ಲಿಕಾರ್ಜುನ ದರ್ಶನಕಕ್ಕಾಗಿ ಶ್ರೀಶೈಲ ಪರ್ವತಕ್ಕೆ ಯಾತ್ರೆ ಹೋಗುತ್ತಾರೆ.

ಕಂಬಿ ಕುಣಿತ

ಮುನ್ನುಡಿ

ಈ ಯಾತ್ರಿಕರು ತಮ್ಮ ಹೆಗಲ ಮೇಲೆ "ಕಂಬಿ" ಹೊತ್ತುಕೊಂಡು ಹೋಗುವ ಒಂದು ಸಾಂಪ್ರದಾಯಿಕ ಆಚರಣೆಯೇ "ಕಂಬಿ ಕುಣಿತ". ಈ ಹಿಂದೆ ಭಕ್ತರು ದೇವರ ದರ್ಶನಕ್ಕಾಗಿ ನಡೆದುಕೊಂಡೇ ಹೊಗುತ್ತಿದ್ದರು. ಸುತ್ತಮುತ್ತಲ ಊರಿನವರೆಲ್ಲ ಕೂಡಿಕೊಂಡು ಹಾಡುತ್ತ-ಕುಣಿಯುತ್ತಾ, ದೇವರ ಬಗ್ಗೆ ಕಥೆಗಳನ್ನು, ಪವಾಡಗಳನ್ನು ಹೇಳುತ್ತಾ ದಾರಿ ಸಾಗಿಸುತ್ತಿದ್ದರು. ಇದಕ್ಕೆ "ಪರಿಸೆ" ಹೊರಡುವುದು ಎನ್ನುತ್ತಾರೆ.

ಹಿನ್ನಲೆ

ಸಾಮಾನ್ಯವಾಗಿ ಶ್ರೀಶೈಲಕ್ಕೆ ಹೋಗಿ ಬರಲು ತಿಂಗಳುಗಟ್ಟಲೆ ಹಿಡಿಯುತ್ತಿತ್ತು. ಅಷ್ಟು ಅವಧಿಗೆ ಬೇಕಾಗುವ ಸಾಮಾನುಗಳನ್ನೆಲ್ಲ ಜೊತೆಯಲ್ಲೇ ಒಯ್ಯ ಬೇಕಾಗಿತ್ತು. ಅದನ್ನೆಲ್ಲ ಕಂಬಿ ಕಟ್ಟಿದ ನೆಲುವುಗಳಲ್ಲಿಟ್ಟುಕೊಂಡು ಹೋಗುವುದು ವಾಡಿಕೆ. ಐದಾರು ಮೊಳ ಉದ್ದವಿರುವ ಬಿದಿರಿನ ಗಳ, ಅದರ ಎರಡು ಕೊನೆಗಳಿಗೂ ಬಿಗಿದು ಜೋಡಿಸಿದ ಸುಮಾರು ಮೂರು ಅಡಿ ಎತ್ತರವಿರುವ ಬಿದಿರು ಕಡ್ಡಿಯ ಟಿಸಲು ಗಾಲುಗಳು. ಈ ಕಾಲುಗಳಿಗೆ ಕಟ್ಟಿದ ಕಾಯಕ ಗಂಟೆಗಳು. ಎರಡು ಕಾಲುಗಳಿಗೂ ಸೇರಿಸುವಂತೆ ಅಡ್ಡಲಾಗಿ ಕಟ್ಟಿದ ಮತ್ತೊಂದು ಗಳದ ಮಧ್ಯಭಾಗದಲ್ಲಿ ನಂದಿ ವಿಗ್ರಹ, ಅದಕ್ಕೆ ಕೂಡಿಸಿದ ಕಳಸ ಮತ್ತು ಹಾಕಿದ "ಗಲ್ಲಪ". ಕಂಬಿಯ ಕೋಲಿಗೆ ಬಣ್ಣದ ವಸ್ತ್ರದ (ಪತಾಕೆ) ಆವರಣ. ಅಲ್ಲಲ್ಲಿ ಭಸ್ಮ ಲೇಪನ - ಇದು ಕಂಬಿಯ ಸ್ವರೂಪ. ಇದನ್ನು ಗಲ್ಲಪದ ಹಿಂದೆ ಟಿಸಲು ಗಾಲುಗಳು ಮಧ್ಯದಲ್ಲಿ ಜೋಡಿಸಿದ ಕಾವಡಿಗೆ (ಅಡ್ಡಪಟ್ಟಿ) ನೆಲುವನ್ನು ಕಟ್ಟಿ ನಿತ್ಯ ಬಳಕೆಯ ವಸ್ತುಗಳನ್ನು ಇಟ್ಟುಕೊಳ್ಳುವರು.

ಹರಕೆ

ದೈಹಿಕ ತೊಂದರೆಯಿಂದಲೋ, ಆರ್ಥಿಕ ಅಡಚಣೆಯಿಂದಲೋ ಶ್ರೀಶೈಲಕ್ಕೆ ಹೋಗಲು ಸಾಧ್ಯವಾಗದ ಕೆಲವು ಮಲ್ಲಿಕಾರ್ಜುನನ ಭಕ್ತರು ತಮ್ಮ ಹರಕೆ, ಮುಡಿಪುಗಳನ್ನು ಹೋಗುವವರ ಕೈಲಿ ಕೊಟ್ಟು, ಮಲ್ಲಯ್ಯನಿಗೆ ಮುಟ್ಟಿಸುವಂತೆ ಹೇಳುತ್ತಾರೆ. ಶ್ರೀಶೈಲಕ್ಕೆ ಹೋಗಿ ದೇವರ ದರ್ಶನ ಪಡೆದು ಸುಖವಾಗಿ ಹಿಂದಿರುಗಿದ ಭಕ್ತರ ಬಗ್ಗೆ ಜನರಿಗೆ ಅಪಾರ ಗೌರವ. ಅವರನ್ನು ಪುಣ್ಯವಂತರೆಂದು ಭಾವಿಸಿ, ಅವರ ದರ್ಶನ ಮಾಡಿದರೆ ದೇವರನ್ನು ಕಂಡತಾಗುವುದೆಂದು ತಿಳಿಯುತ್ತಾರೆ. ತಾವು ಕೊಟ್ಟ ಹರಕೆ ಮುಡಿಪುಗಳು ಕಂಬಿಯ ಮೂಲಕ ದೇವರಿಗೆ ಮುಟ್ಟಿಸುವುದರಿಂದ ಆ ಕಂಬಿಯ ಮೂಲಕವೇ ದೇವರು ಬರುತ್ತಾನೆಂಬುದು ಅವರ ನಂಬಿಕೆ. ಈ ಕಂಬಿಯೇ ಕಂಬಿ ಮಲ್ಲಯ್ಯ ನಾದನೆಂದು ಹೇಳುತ್ತಾರೆ. ಹೀಗೆ ಶ್ರೀಶೈಲಕ್ಕೆ ಹೋಗುವ "ಕಂಬಿ ಮಲ್ಲಯ್ಯ"ಗಳನ್ನು ಬೀಳ್ಕೂಡುವ ಊರಿನ ಜನ, ಅವರು ಹಿಂತಿರುಗಿ ಬಂದಾಗಲೂ ಊರಿನ ಗಡಿಯಲ್ಲಿ ಗೌರವದಿಂದ ಸ್ವಾಗತಿಸಿ ಕುಶಲವನ್ನು ವಿಚಾರಿಸುತ್ತಾರೆ. ನಂತರ ತಾಳ, ಮದ್ದಳೆ, ಚಿನ್ನಕಹಳೆ, ಸನಾದಿ, ಮುಂತಾದ ಮಂಗಳ ವಾದ್ಯಗಳೂಂದಿಗೆ ಊರೊಳಗೆ ಕರೆದು ತರುತ್ತಾರೆ.

ಉದ್ಘೋಷ

ದಾರಿಯಲ್ಲಿ "ಸಿದ್ದಗಿರಿ ಶಿವಗಿರಿ ಮಹಾಂತ ಮಲ್ಲಯ್ಯ" ಎಂದು ಕಂಬಿ ಹೊತ್ತವನು ಉದ್ಗರಿಸಿದರೆ ಉಳಿದವರು "ಉಘೇ ಉಘೇ'" ಎಂದು ಜಯಘೋಷ ಮಾಡುತ್ತಾರೆ. ಹೀಗೆ ಶ್ರೀಶೈಲ ಮಲ್ಲಿಕಾರ್ಜುನನ ಬಿರುದಾವಳಿಗಳನ್ನು ಹೇಳಿಕೂಂಡು ಭಕ್ತರು ಆವೇಶದಲ್ಲಿ ಕಂಬಿಯ ಅಯ್ಯಗಳೂ ಸಂಬಾಳದ ಜೊತೆಗೆ ಸೊಗಸಾಗಿ ಕುಣಿಯುತ್ತಾರೆ. ಕುಣಿತದ ನಂತರ ಮಲ್ಲಯ್ಯನನ್ನು ಕುರಿತ ಹಾಡುಗಳನ್ನು ಹೇಳುತ್ತಾರೆ. ಕೊನೆಯಲ್ಲಿ ಮಂಗಳಾರತಿಯಾಗುತ್ತದೆ. "ಕಂಬಿಯ ಅಯ್ಯ"ಗಳು ಶ್ರೀಶೈಲದಿಂದ ಬರುವಾಗ ಮರ ಬುಟ್ಟಿ, ಗಿರಿಯ ಹುಂಡಿ, ದವನ-ಹವನ ಮುಂತಾದವುಗಳನ್ನು ತಂದು ಭಕ್ತರಿಗೆ ಕೊಟ್ಟು ಅವರಿಂದ ಕಾಣಿಕೆ ಪಡೆಯುತ್ತಾರೆ.

ಉಲ್ಲೇಖ

  1. ಗೊ.ರು.ಚನ್ನಬಸಪ್ಪ, ಕರ್ನಾಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ೧೯೭೭, ಪುಟ ಸಂಖ್ಯೆ: ೧೮-೧೯.

Tags:

ಕಂಬಿ ಕುಣಿತ ಕಂಬಿ ಕುಣಿತ ಮುನ್ನುಡಿಕಂಬಿ ಕುಣಿತ ಹಿನ್ನಲೆಕಂಬಿ ಕುಣಿತ ಹರಕೆಕಂಬಿ ಕುಣಿತ ಉದ್ಘೋಷಕಂಬಿ ಕುಣಿತ ಉಲ್ಲೇಖಕಂಬಿ ಕುಣಿತಯುಗಾದಿ

🔥 Trending searches on Wiki ಕನ್ನಡ:

ಜೇನು ಹುಳುಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಪ್ಲೇಟೊಯೋಗಅಕ್ಬರ್ಹನಿ ನೀರಾವರಿದ.ರಾ.ಬೇಂದ್ರೆಮುಟ್ಟು ನಿಲ್ಲುವಿಕೆಸುಮಲತಾಚೋಳ ವಂಶದುಂಡು ಮೇಜಿನ ಸಭೆ(ಭಾರತ)ಆರ್ಯಭಟ (ಗಣಿತಜ್ಞ)ಕರ್ನಾಟಕದ ಹಬ್ಬಗಳುಕೃಷ್ಣರಾಜಸಾಗರಪಂಚಾಂಗದ್ವಿರುಕ್ತಿನೇಮಿಚಂದ್ರ (ಲೇಖಕಿ)ಸಂಗೊಳ್ಳಿ ರಾಯಣ್ಣಇಂಡಿಯನ್ ಪ್ರೀಮಿಯರ್ ಲೀಗ್ಅಲಾವುದ್ದೀನ್ ಖಿಲ್ಜಿಕನ್ನಡ ಚಿತ್ರರಂಗಯೂಟ್ಯೂಬ್‌ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಮೂಢನಂಬಿಕೆಗಳುಭಾರತೀಯ ನದಿಗಳ ಪಟ್ಟಿಸಿಂಧೂತಟದ ನಾಗರೀಕತೆಕೆ.ಗೋವಿಂದರಾಜುಸಾಮ್ರಾಟ್ ಅಶೋಕಕಮಲಶಬರಿಹೃದಯಾಘಾತಉತ್ತಮ ಪ್ರಜಾಕೀಯ ಪಕ್ಷರಮ್ಯಾ ಕೃಷ್ಣನ್ಕಿತ್ತೂರು ಚೆನ್ನಮ್ಮಜಿ.ಎಸ್.ಶಿವರುದ್ರಪ್ಪದಲಿತಉತ್ತರ ಕನ್ನಡಸಾಗುವಾನಿಗಿರೀಶ್ ಕಾರ್ನಾಡ್ದೂರದರ್ಶನಜ್ಞಾನಪೀಠ ಪ್ರಶಸ್ತಿಗಾದೆನಯನತಾರನಿರ್ಮಲಾ ಸೀತಾರಾಮನ್ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಪರಿಸರ ವ್ಯವಸ್ಥೆಬಾಲಕಾರ್ಮಿಕಅರಬ್ಬೀ ಸಾಹಿತ್ಯಭಾರತದ ಮಾನವ ಹಕ್ಕುಗಳುಜೀವವೈವಿಧ್ಯಕರ್ನಾಟಕದ ಮುಖ್ಯಮಂತ್ರಿಗಳುದಿಯಾ (ಚಲನಚಿತ್ರ)ಗುಣ ಸಂಧಿಮಾರುಕಟ್ಟೆಲಕ್ಷ್ಮಣಮತದಾನ ಯಂತ್ರಗಂಗ (ರಾಜಮನೆತನ)ಪುರಂದರದಾಸಶಂಕರ್ ನಾಗ್ಶ್ರೀ ರಾಮಾಯಣ ದರ್ಶನಂಶ್ರೀ ಕೃಷ್ಣ ಪಾರಿಜಾತರಾಹುಲ್ ದ್ರಾವಿಡ್ಭಾರತದ ಇತಿಹಾಸಯು.ಆರ್.ಅನಂತಮೂರ್ತಿಶಬ್ದವೇಧಿ (ಚಲನಚಿತ್ರ)ಜಾಗತೀಕರಣಕನ್ನಡದಲ್ಲಿ ಸಣ್ಣ ಕಥೆಗಳುಗರ್ಭಧಾರಣೆಊಟಸಂಕಲ್ಪವಿಜಯದಾಸರುಮಲ್ಲಿಗೆಬೃಂದಾವನ (ಕನ್ನಡ ಧಾರಾವಾಹಿ)ಗುಬ್ಬಚ್ಚಿಅಯೋಧ್ಯೆಬೇಲೂರುಕನ್ನಡ ರಾಜ್ಯೋತ್ಸವ🡆 More