ಕಂದಗನೂರ

ಕಂದಗನೂರ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿದೆ.

ಕಂದಗನೂರ
ಕಂದಗನೂರ
village

ಭೌಗೋಳಿಕ

ಗ್ರಾಮವು ಭೌಗೋಳಿಕವಾಗಿ 16* 31' 10"x ಉತ್ತರ ಅಕ್ಷಾಂಶ ಮತ್ತು 75* 31' 19" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43 ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ 9 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - 35°C-43°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - 18°C-30°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ)ಹಾಗೂ 17 ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 2500 ಇದೆ. ಅದರಲ್ಲಿ 1300 ಪುರುಷರು ಮತ್ತು 1200 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ

ಕಂದಗನೂರ 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮ

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆ

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯ

  • ಶ್ರೀ ದುರ್ಗಾದೇವಿ ದೇವಾಲಯ
  • ಶ್ರೀ ಹಣಮಂತ ದೇವಾಲಯ
  • ಶ್ರೀ ದ್ಯಾಮವ್ವ ದೇವಾಲಯ

ಮಸೀದಿ

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ

ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕೃಷಿ

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಆರ್ಥಿಕತೆ

ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.

ಉದ್ಯೋಗ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಹಬ್ಬ

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಪ್ರತಿ 3 ವರ್ಷಕ್ಕೊಮ್ಮೆ ದುರ್ಗಾದೇವಿ ಜಾತ್ರೆ ಅತೀ ವಿಜ್ರಂಭಣೆಯಿಂದ ಜರುಗುತ್ತದೆ.

ಜಾತ್ರೆಗೆ ದೇಶದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುತ್ತಾರೆ.

ಶಿಕ್ಷಣ

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಇರುತ್ತವೆ.

ಸಾಕ್ಷರತೆ

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು 67%. ಅದರಲ್ಲಿ 75% ಪುರುಷರು ಹಾಗೂ 55% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ

ಗ್ರಾಮವು 26-ಮುದ್ದೇಬಿಹಾಳ ವಿದಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ವಿಜಯಪುರ ಕರ್ನಾಟಕ

ಕಂದಗನೂರ 
ಬಿಜಾಪುರ ತಾಲ್ಲೂಕುಗಳು
ಇಂಡಿ | ಕೊಲ್ಹಾರ | ಚಡಚಣ | ತಾಳಿಕೋಟಿ | ತಿಕೋಟಾ | ದೇವರ ಹಿಪ್ಪರಗಿ | ನಿಡಗುಂದಿ | ಬಬಲೇಶ್ವರ | ಬಸವನ ಬಾಗೇವಾಡಿ | ಮುದ್ದೇಬಿಹಾಳ | ಸಿಂದಗಿ | ಬಿಜಾಪುರ

Tags:

ಕಂದಗನೂರ ಭೌಗೋಳಿಕಕಂದಗನೂರ ಹವಾಮಾನಕಂದಗನೂರ ಜನಸಂಖ್ಯೆಕಂದಗನೂರ ಸಾಂಸ್ಕೃತಿಕಕಂದಗನೂರ ಕಲೆಕಂದಗನೂರ ಧರ್ಮಕಂದಗನೂರ ಭಾಷೆಕಂದಗನೂರ ದೇವಾಲಯಕಂದಗನೂರ ಮಸೀದಿಕಂದಗನೂರ ನೀರಾವರಿಕಂದಗನೂರ ಕೃಷಿಕಂದಗನೂರ ಆರ್ಥಿಕತೆಕಂದಗನೂರ ಉದ್ಯೋಗಕಂದಗನೂರ ಬೆಳೆಕಂದಗನೂರ ಸಸ್ಯಕಂದಗನೂರ ಪ್ರಾಣಿಕಂದಗನೂರ ಹಬ್ಬಕಂದಗನೂರ ಶಿಕ್ಷಣಕಂದಗನೂರ ಸಾಕ್ಷರತೆಕಂದಗನೂರ ರಾಜಕೀಯಕಂದಗನೂರಕರ್ನಾಟಕಮುದ್ದೇಬಿಹಾಳವಿಜಯಪುರ

🔥 Trending searches on Wiki ಕನ್ನಡ:

ಭಾರತದ ತ್ರಿವರ್ಣ ಧ್ವಜರಾಜಧಾನಿಗಳ ಪಟ್ಟಿಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿತಾಜ್ ಮಹಲ್ಬಿಳಿ ರಕ್ತ ಕಣಗಳುಕುಟುಂಬಕೊಬ್ಬಿನ ಆಮ್ಲಪಾಂಡವರುವಿದ್ಯಾರಣ್ಯಚೋಮನ ದುಡಿರೇಣುಕಅವತಾರಬೆಟ್ಟದಾವರೆಜಾನಪದಚಂದ್ರಶೇಖರ ಕಂಬಾರಭಾರತದ ರಾಷ್ಟ್ರಪತಿಹೆಚ್.ಡಿ.ದೇವೇಗೌಡಶಿಶುನಾಳ ಶರೀಫರುಪಂಚ ವಾರ್ಷಿಕ ಯೋಜನೆಗಳುಮನರಂಜನೆಶಿಕ್ಷಕಚಂದ್ರಗುಪ್ತ ಮೌರ್ಯಹಸ್ತ ಮೈಥುನಜವಾಹರ‌ಲಾಲ್ ನೆಹರುಆದಿಚುಂಚನಗಿರಿಭಾರತದ ರೂಪಾಯಿಸಂಚಿ ಹೊನ್ನಮ್ಮಪರಿಸರ ವ್ಯವಸ್ಥೆಆಗಮ ಸಂಧಿಮುಹಮ್ಮದ್ಭಾರತೀಯ ಕಾವ್ಯ ಮೀಮಾಂಸೆ1935ರ ಭಾರತ ಸರ್ಕಾರ ಕಾಯಿದೆಪಂಚಾಂಗಕಾರ್ಲ್ ಮಾರ್ಕ್ಸ್ಪರಶುರಾಮಮತದಾನಸಂಯುಕ್ತ ರಾಷ್ಟ್ರ ಸಂಸ್ಥೆಮಿಥುನರಾಶಿ (ಕನ್ನಡ ಧಾರಾವಾಹಿ)ಅಮ್ಮಬೈಲಹೊಂಗಲವಿತ್ತೀಯ ನೀತಿಉಪನಯನನಾಥೂರಾಮ್ ಗೋಡ್ಸೆತಾಳೀಕೋಟೆಯ ಯುದ್ಧಕೊಡಗು೧೬೦೮ಪುರಂದರದಾಸಖಾತೆ ಪುಸ್ತಕಪ್ರಾಥಮಿಕ ಶಿಕ್ಷಣಪ್ರೇಮಾಜಗನ್ನಾಥದಾಸರುಶೈಕ್ಷಣಿಕ ಮನೋವಿಜ್ಞಾನಮಕರ ಸಂಕ್ರಾಂತಿಸಾಮಾಜಿಕ ಸಮಸ್ಯೆಗಳುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಭಾರತದ ಸಂವಿಧಾನದ ೩೭೦ನೇ ವಿಧಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮಡಿಕೇರಿಅಂತರರಾಷ್ಟ್ರೀಯ ನ್ಯಾಯಾಲಯದೇಶದೇವರಾಜ್‌ಬೆಂಗಳೂರುಸರ್ವಜ್ಞವಿನಾಯಕ ಕೃಷ್ಣ ಗೋಕಾಕಪ್ರಜಾಪ್ರಭುತ್ವಭಾರತದ ಬುಡಕಟ್ಟು ಜನಾಂಗಗಳುರಾಸಾಯನಿಕ ಗೊಬ್ಬರದ್ರಾವಿಡ ಭಾಷೆಗಳುದಾಳಿಂಬೆಸಂಶೋಧನೆಪಪ್ಪಾಯಿಸಮಾಜ ವಿಜ್ಞಾನಭಾರತದ ಸ್ವಾತಂತ್ರ್ಯ ಚಳುವಳಿಅರವಿಂದ ಘೋಷ್ನೀರುಭೀಮಸೇನಜ್ಯೋತಿಷ ಶಾಸ್ತ್ರಅಂತರಜಾಲ🡆 More