ಎರಿಕ್ ದಿ ರೆಡ್

ಎರಿಕ್ ದಿ ರೆಡ್: 950-1003, ನಾರ್ವೆದೇಶದ ಪರಿಶೋಧಕ.

ಹುಟ್ಟಿದ್ದು ಸ್ಟಾವಾಂಗರಿನ ಸಮೀಪದಲ್ಲಿ. ಎರಿಕ್ ಟೂರ್ ಮ್ಯಲ್ಸನ್ ಎಂಬುದು ಇವನ ನಿಜನಾಮಧೇಯ. ಎರಿಕ್ ದಿ ರೆಡ್ ಎಂಬ ಅಡ್ಡ ಹೆಸರು ಹಾಸ್ಯವಾಗಿ ಇವನಿಗೆ ಅಂಟಿಕೊಂಡಿತು.ಬಹುಶಃ ಇವನ ಗಡ್ಡ ಅಥವಾ ತಲೆಗೂದಲಿನ ಬಣ್ಣದಿಂದ ಇದು ಬಂದಿರಬಹುದು., ಈ ಹೆಸರಿನಿಂದಲೇ ಈತ ಪ್ರಸಿದ್ಧನಾಗಿದ್ದಾನೆ. ಕೊಲೆ ಆಪಾದನೆಯ ಮೇಲೆ ಗಡೀಪಾರಾದ ತಂದೆಯೊಂದಿಗೆ ಇವನೂ ದೇಶಭ್ರಷ್ಟನಾಗಬೇಕಾಯಿತು. ಅನಂತರ ಈತ ಐಸ್ಲೆಂಡಿನಲ್ಲಿ ನೆಲೆಸಿದ. ಜಗಳದಲ್ಲಿ ಭಾಗವಹಿಸಿದನೆಂದು ಅಲ್ಲಿಂದಲೂ ಇವನನ್ನು ಹೊರಹಾಕಲಾಯಿತು, ಪಶ್ಚಿಮದಲ್ಲಿ ಇದೆಯೆಂದು ಹೇಳಲಾಗಿದ್ದ ಹೊಸ ಭೂಮಿಗೆ ಆಗ ಈತ ಪಯಣ ಬೆಳೆಸಿದ; ಗ್ರೀನ್ಲೆಂಡ್ ತಲಪಿ ಮುಂದುವರಿದು ಇಂದಿನ ಗಾಟ್ಹಾಪಿನಲ್ಲಿ ಚಳಿಗಾಲ ದಾಟಿ ಕರಾವಳಿಯ ಪರಿಶೋಧನೆಯಲ್ಲೇ ಮೂರು ವರ್ಷ ಕಳೆದು ಐಸ್ಲೆಂಡಿಗೆ ಮರಳಿ 986ರಲ್ಲಿ ಪ್ರಥಮ ವಲಸೆಗಾರರೊಂದಿಗೆ ಗ್ರೀನ್ಲೆಂಡಿಗೆ ಹೋದ. ಈತ ಸಾಯುವುದಕ್ಕೆ ಮುನ್ನ ಇವರ ಮಗ ಲೀಫ್ ಎರಿಕ್ಸನ್ ಅಮೆರಿಕದ ಈಶಾನ್ಯ ಕರಾವಳಿ ಪರಿಶೋಧಿಸಿದ. ಎರಿಕ್ಸನ್ನನೇ ಉತ್ತರ ಅಮೆರಿಕದ ಪ್ರಥಮ ಐರೋಪ್ಯ ಪರಿಶೋಧಕನೆಂದು ನಂಬಲಾಗಿದೆ.

ಎರಿಕ್ ದಿ ರೆಡ್
Erik the Red from Arngrímur Jónsson's Gronlandia. Note anachronistic details in his weapons and armor.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ನಾರ್ವೆ

🔥 Trending searches on Wiki ಕನ್ನಡ:

ಆರೋಗ್ಯಭಾರತೀಯ ನೌಕಾಪಡೆರಾಮಕೃಷ್ಣ ಹೆಗಡೆಕಿರುಧಾನ್ಯಗಳುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಜವಹರ್ ನವೋದಯ ವಿದ್ಯಾಲಯಕವಿರಾಜಮಾರ್ಗಇತಿಹಾಸಬಸವರಾಜ ಬೊಮ್ಮಾಯಿಗುಪ್ತ ಸಾಮ್ರಾಜ್ಯಹಣಪಂಚಾಂಗಫೇಸ್‌ಬುಕ್‌ಬನವಾಸಿಭಾರತದ ರಾಜಕೀಯ ಪಕ್ಷಗಳುದೀಪಾವಳಿಸುದೀಪ್ಕಾಳಿದಾಸವ್ಯಕ್ತಿತ್ವಆಟಿಸಂಕ್ರಿಕೆಟ್ಸ್ವಾಮಿ ವಿವೇಕಾನಂದರಾಜ್ಯಸಭೆಏಡ್ಸ್ ರೋಗರಹಮತ್ ತರೀಕೆರೆಹೊಯ್ಸಳಶರಭಮಕ್ಕಳ ಸೈನ್ಯಯಾಹೂಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕಬೀರ್ನಿಕೋಲ್‌ ಕಿಡ್‌ಮನ್‌ರಚಿತಾ ರಾಮ್ರಸ(ಕಾವ್ಯಮೀಮಾಂಸೆ)ಕೆಂಪು ಕೋಟೆನಂದಿ ಬೆಟ್ಟ (ಭಾರತ)ದಕ್ಷಿಣಾಮೂರ್ತಿ -ನರೇಂದ್ರ ಮೋದಿಕಟ್ಟೆಪಠ್ಯಪುಸ್ತಕಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಗ್ರಾಮ ಪಂಚಾಯತಿಕಲ್ಕಿಈಸೂರುಆಸ್ಟ್ರೇಲಿಯಕೃಷ್ಣಬಬಲಾದಿ ಶ್ರೀ ಸದಾಶಿವ ಮಠಬೀಚಿಸ್ವಚ್ಛ ಭಾರತ ಅಭಿಯಾನಸರ್ವಜ್ಞಬೆನ್ ಸ್ಟೋಕ್ಸ್ಪರಮಾಣುವಿಜಯಪುರ ಜಿಲ್ಲೆಅಶ್ವತ್ಥಮರಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕೈಗಾರಿಕೆಗಳುಭಾರತದ ಸ್ವಾತಂತ್ರ್ಯ ಚಳುವಳಿಪೈಜರಿಸಂಖ್ಯಾಶಾಸ್ತ್ರಕಾನೂನುಭಂಗ ಚಳವಳಿದೇವರ/ಜೇಡರ ದಾಸಿಮಯ್ಯ೨೦೧೬ಭಾರತದ ಜನಸಂಖ್ಯೆಯ ಬೆಳವಣಿಗೆಭಾರತದ ಇತಿಹಾಸಬಡತನಛಂದಸ್ಸುಭಾರತದ ವಿಜ್ಞಾನಿಗಳುಮೈಗ್ರೇನ್‌ (ಅರೆತಲೆ ನೋವು)ಅರ್ಕರಾಧಿಕಾ ಪಂಡಿತ್ರತ್ನತ್ರಯರುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ಮಾರ್ಚ್ಚಿನ್ನಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ🡆 More