ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬

ಘೋರ ದಾಳಿಗೆ ಭಾರತ ಕಠಿಣ ಪ್ರತಿಕ್ರಿಯೆ ನೀಡಿದೆ.

ಭಯೋತ್ಪಾದನೆ
ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬
ಎಕೆ47::(АК-47)
  • ಶೀರ್ಷಿಕೆ = 2016 ಉರಿ ದಾಳಿ
  • ಧಾಳಿ ವಿಭಾಗ = ಜಮ್ಮು ಮತ್ತು ಕಾಶ್ಮೀರದಲ್ಲಿನ ಬಂಡಾಯ
  • ಸ್ಥಳ = ಹತ್ತಿರ ಉರಿ, ಬಾರಾಮುಲ್ಲಾ ಜಿಲ್ಲೆ, ಜಮ್ಮು ಮತ್ತು ಕಾಶ್ಮೀರ ಭಾರತ
  • ದಿನಾಂಕ = 18 ಸೆಪ್ಟೆಂಬರ್ 2016
  • ಸಮಯ = 5.30 ಬೆಳಗ್ಗೆ
  • ಕಾಲವಲಯ = ಹೊಸದಿಲ್ಲಿ
  • ಕೌಟುಂಬಿಕತೆ = ಇಸ್ಲಾಮಿಕ್ ಭಯೋತ್ಪಾದನೆ, ಸಮೂಹ ಕೊಲೆ
  • ಸಾವು = 24 (17+3=20 ಸೈನಿಕರು, 4 ದಾಳಿಕೋರರು)
  • ಗಾಯಾಳುಗಳು = 19 ರಿಂದ- 30
  • ನುಸುಳುಕೋರರು = 4 ಉಗ್ರಗಾಮಿಗಳು
  • ಸಂಘಟನೆs = ಜೈಶ್ ಇ ಮೊಹಮ್ಮದ್
  • ಶಸ್ತ್ರಾಸ್ತ್ರಗಳು = ಎಕೆ 47 ರೈಫಲ್ಸ್, ಗ್ರೆನೇಡ್
  • ಉದ್ದೇಶವು = ಭಯೋತ್ಪಾದನೆ
  • ಸಂಘಟನೆ ಹಿನ್ನಲೆ= ಪಾಕಿಸ್ತಾನ
  • ರಕ್ಷಣೆ = ಭಾರತೀಯ ಸೇನಾಪಡೆ
.

2016 ರ ಉರಿ ದಾಳಿ

  • ಇಸ್ಲಾಮಿಕ್ ಭಯೋತ್ಪಾದಕರು ಭಾರತದ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಉರಿ ಪಟ್ಟಣದ ಸಮೀಪ, 18 ಸೆಪ್ಟೆಂಬರ್ 2016 ರಂದು ದಾಳಿ ಮಾಡಿದ್ದಾರೆ. ಉರಿ ಪಟ್ಟಣ ಶ್ರೀನಗರದಿಂದ 70 ಕಿ.ಮೀ.ದೂರದಲ್ಲಿದೆ.. ಇದು ಸುಮಾರು ಎರಡು ದಶಕಗಳಲ್ಲಿ ಭಾರತೀಯ ಭದ್ರತಾ ಸಿಬ್ಬಂದಿ ಮೇಲೆ ಮಾರಣಾಂತಿಕ ದಾಳಿ ಎಂದು ವರದಿಯಾಗಿದೆ.
  • ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಜೈಷ್‌–ಎ– ಮೊಹಮ್ಮದ್ ಸಂಘಟನೆಗೆ ಸೇರಿದವರು ಎಂದು ಶಂಕಿಸಲಾದ ನಾಲ್ವರು ಉಗ್ರರು ಈ ದಾಳಿ ನಡೆಸಿದ್ದಾರೆ. ದಾಳಿಯ ಹಿಂದೆ ಇರುವವರು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
  • ದಾಳಿಗೆ ಒಳಗಾದ ಸೇನಾ ಶಿಬಿರವು ನಿಯಂತ್ರಣ ರೇಖೆಯಿಂದ ಕೆಲವೇ ಕಿಲೋಮೀಟರ್‌ ದೂರದಲ್ಲಿದೆ. ಉರಿ ಪಟ್ಟಣ ಶ್ರೀನಗರದಿಂದ 70 ಕಿಲೋಮೀಟರ್‌ ದೂರವಿದೆ.
  • ಸೆಪ್ಟಂಬರ್ 18,2016,ಭಾನುವಾರ ಬೆಳಗ್ಗೆ ಸುಮಾರು 5.30ರ ವೇಳೆಗೆ ಆತ್ಮಾಹುತಿ ದಾಳಿ ನಡೆಸಲಾಯಿತು. ಉರಿಯ ಬ್ರಿಗೇಡ್ 12 ಕೇಂದ್ರ ಕಚೇರಿ ಮೇಲೆ ನಂತರ ಉಗ್ರರು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದರು. ಹಠಾತ್ ದಾಳಿಯಲ್ಲಿ 17 ಯೋಧರು ವೀರ ಮರಣ ಹೊಂದಿದರೆ, 6 ಭಾರತೀಯ ಯೋಧರು ಗಾಯಗೊಂಡಿದ್ದಾರೆ. ಈ ಘಟನೆ ಬಳಿಕ ಗೃಹ ಸಚಿವ ರಾಜನಾಥ್ ಸಿಂಗ್ ಅವರು ರಷ್ಯಾ ಹಾಗೂ ಯುಎಸ್ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಕಾಶ್ಮೀರದಲ್ಲಿ ಉದ್ಭವಿಸಿರುವ ಪರಿಸ್ಥಿತಿ ಬಗ್ಗೆ ಚರ್ಚಿಸಲು ಉನ್ನತ ಮಟ್ಟದ ತುರ್ತುಸಭೆಗೆ ರಾಜನಾಥ್ ಸಿಂಗ್ ಕರೆ ನೀಡಿದ್ದಾರೆ.ನಂತರದ ಎಣಿಕೆಯಲ್ಲಿ ೨೦ ಜನ ಯೋಧರು ಮರಣಹಂದಿದ್ದು ೧೭ ಕ್ಕೂಹೆಚ್ಚು ಜನ ಗಾಯಗೊಂದಿದ್ದಾರೆ. ದಾಳಿಗೆ ಒಳಗಾದ ಸೇನಾ ಶಿಬಿರವು ನಿಯಂತ್ರಣ ರೇಖೆಯಿಂದ ಕೆಲವೇ ಕಿಲೋಮೀಟರ್‌ ದೂರದಲ್ಲಿದೆ. ಉರಿ ಪಟ್ಟಣ ಶ್ರೀನಗರದಿಂದ 70 ಕಿಲೋಮೀಟರ್‌ ದೂರವಿದೆ.
  • ಉತ್ತರ ಕಾಶ್ಮೀರದ ಉರಿಯಲ್ಲಿರುವ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸೇನೆಯ ಮೇಲೆ ನಡೆದ ಅತ್ಯಂತ ಘೋರ ದಾಳಿ ಇದಾಗಿದ್ದು 17 ಯೋಧರು ಹುತಾತ್ಮರಾಗಿದ್ದಾರೆ. 20 ಸೈನಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 20 ಸೈನಿಕರಲ್ಲಿ ಇಂದು ಒಬ್ಬ (ಮೂವರು ಯೋಧರು) ಯೋಧ ಮೃತಪಟ್ಟಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಗಾಯಗೊಂಡ ಯೋಧರಲ್ಲಿ ಇನ್ನು ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮಿಲಿಟರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.(ಮೃತ ಸೈನಿಕರು ಒಟ್ಟು 18? )
  • ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಜೈಷ್‌–ಎ– ಮೊಹಮ್ಮದ್ ಸಂಘಟನೆಗೆ ಸೇರಿದವರು ಎಂದು ಶಂಕಿಸಲಾದ ನಾಲ್ವರು ಉಗ್ರರು ಈ ದಾಳಿ ನಡೆಸಿದ್ದಾರೆ. ದಾಳಿಯ ಹಿಂದೆ ಇರುವವರು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪಾಕಿಸ್ತಾನದತ್ತ ಬೆರಳು

ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ 
ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆ

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ನೇರವಾಗಿ ಪಾಕಿಸ್ತಾನದತ್ತಲೇ ಬೆರಳು ತೋರಿದ್ದಾರೆ. ಪಾಕಿಸ್ತಾನ ಭಯೋತ್ಪಾದಕ ದೇಶ ಎಂದು ಅವರು ಹೇಳಿದ್ದಾರೆ. ಅಂತರರಾಷ್ಟ್ರೀಯ ಸಮುದಾಯ ಈ ದೇಶವನ್ನು ದೂರ ಇರಿಸುವ ಕೆಲಸ ಮಾಡಬೇಕು ಎಂದು ರಾಜನಾಥ್‌ ಕೋರಿದ್ದಾರೆ. ಬಿಜೆಪಿ ಮುಖಂಡ ರಾಮಮಾಧವ್‌ ಪ್ರತಿಕ್ರಿಯೆ ನೀಡಿ, ನಮ್ಮ ಸಂಯಮದ ದಿನಗಳು ಮುಗಿದು ಹೋಗಿವೆ. ದಾಳಿಯ ನಂತರ, ‘ನಮ್ಮ ಒಂದು ಹಲ್ಲು ಹೋದರೆ ಅವರ ಇಡೀ ದವಡೆಯನ್ನು ಒಡೆದು ಹಾಕುವ’ ನೀತಿ ಅನುಸರಿಸಬೇಕಿದೆ ಎಂದು ಹೇಳಿದ್ದಾರೆ. ಕಳವಳ: ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕ (ಡಿಜಿಎಂಒ) ಲೆ. ಜ. ರಣಬೀರ್ ಸಿಂಗ್‌ ಅವರು ಪಾಕಿಸ್ತಾನದ ಡಿಜಿಎಂಒಗೆ ಕರೆ ಮಾಡಿ ದಾಳಿಯ ಬಗ್ಗೆ ತಮ್ಮ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಸೇನಾ ಶಿಬಿರದ ಮೇಲೆ ದಾಳಿ ನಡೆಸಿದವರು ಬಳಸಿದ ಶಸ್ತ್ರಗಳಲ್ಲಿ ಪಾಕಿಸ್ತಾನದಲ್ಲಿ ತಯಾರಾಗಿರುವ ಕುರಿತ ಗುರುತುಗಳಿದ್ದವು. ಇದು ಗಂಭೀರ ಕಳವಳದ ವಿಚಾರ ಎಂದು ರಣಬೀರ್‌ ಸಿಂಗ್‌ ಹೇಳಿದ್ದಾರೆ. ‘ದಾಳಿ ನಡೆಸಿದ ನಾಲ್ವರು ಉಗ್ರರ ಬಳಿ ಇದ್ದ ಶಸ್ತ್ರಗಳಲ್ಲಿಯೂ ಪಾಕಿಸ್ತಾನದ ಗುರುತು ಇತ್ತು. ಹತ್ಯೆಯಾದ ಎಲ್ಲ ಉಗ್ರರು ಜೈಷ್‌–ಎ–ಮೊಹಮ್ಮದ್‌ ಸಂಘಟನೆಗೆ ಸೇರಿದವರು ಎಂಬುದು ಆರಂಭಿಕ ತನಿಖೆಯಿಂದ ತಿಳಿದು ಬಂದಿದೆ’ ಎಂದು ರಣಬೀರ್‌ ಸಿಂಗ್‌ ತಿಳಿಸಿದ್ದಾರೆ. ಉಗ್ರರು ಬೆಂಕಿ ಉಗುಳುವ ಶಸ್ತ್ರಗಳನ್ನು ಹೊಂದಿದ್ದರು. ಇದರಿಂದಾಗಿ ಸೈನಿಕರು ಮಲಗಿದ್ದ ಟೆಂಟ್‌ಗಳಿಗೆ ಬೆಂಕಿ ಹತ್ತಿಕೊಂಡಿತು. ಹುತಾತ್ಮರಾದ 17 ಯೋಧರ ಪೈಕಿ 13–14 ಮಂದಿ ಬೆಂಕಿಯಿಂದಾಗಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಸಭೆ

ಉರಿಯಲ್ಲಿ ನಡೆದ ಉಗ್ರರ ದಾಳಿ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಉನ್ನತಮಟ್ಟದ ಸಭೆ ನಡೆಸಿದರು. ಗೃಹ ಸಚಿವ ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌, ಹಣಕಾಸು ಸಚಿವ ಅರುಣ್‌ ಜೇಟ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೊಬಾಲ್‌, ಭೂಸೇನಾ ಮುಖ್ಯಸ್ಥ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಹಾಗೂ ಕೆಲ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್-ಕಿ-ಮೂನ್

  • ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಸೇನಾ ಪ್ರಧಾನ ಕಚೇರಿ ಮೇಲೆ ನಡೆದಿರುವ ಭಯೋತ್ಪಾದಕ ದಾಳಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್-ಕಿ-ಮೂನ್ ಖಂಡಿಸಿದ್ದಾರೆ. ಉಗ್ರರ ಕೃತ್ಯದ ಬಗ್ಗೆ ಮಾತನಾಡಿರುವ ಬಾನ್-ಕಿ-ಮೂನ್, ಸೈನಿಕರ ಸಾವಿಗೆ ಕಾರಣರಾಗಿರುವ ಭಯೋತ್ಪಾದಕರಿಗೆ ತಕ್ಕ ಶಿಕ್ಷೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
  • ಕಾಶ್ಮೀರದಲ್ಲಿ 20 ಸೈನಿಕರ ಹತ್ಯೆಗೆ ಕಾರಣವಾದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಹ ಖಂಡಿಸಿದ್ದು, ಸೈನಿಕರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ. ದಾಳಿ ನಡೆಸಿದವರಿಗೆ ಸಿಗಬೇಕಾದ ಶಿಕ್ಷೆಯನ್ನು ನೀಡುತ್ತೇವೆ ಎಂಬ ಮಾತುಗಳನ್ನಾಡಿದ್ದಾರೆ.
  • ಉರಿಯಲ್ಲಿ ಉಗ್ರರ ದಾಳಿಗೆ ಬಲಿಯಾದ 20 ಭಾರತೀಯ ಯೋಧರಿಗೆ ಜಮ್ಮು ಮತ್ತು ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.ಶ್ರೀನರಗದ ಬಡಾಮಿಬಾಗ್ ನ ಚಿನಾರ್ ಕ್ರಾಪ್ಸ್ ಹೆಡ್ ಕ್ವಾರ್ಟ್ಸ್ ನಲ್ಲಿ ಹುತಾತ್ಮ ಸೈನಿಕರ ಪಾರ್ಥೀವ ಶರೀರಗಳಿಗೆ ಪುಷ್ಪ ಗುಚ್ಚ ಇರಿಸಿದ ಮಹೆಬೂಬಾ ಶ್ರದ್ಧಾಂಜಲಿ ಅರ್ಪಿಸಿದರು.
  • 18 ಸೆಪ್ಟೆಂಬರ್ 2016 (WAM):
  • ಅಬುಧಾಬಿಯಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ಇಂದು ಉತ್ತರ ಕಾಶ್ಮೀರದ ಯೂರಿ ಜಿಲ್ಲೆಯ ಭಾರತೀಯ ಮಿಲಿಟರಿ ಉದ್ದೇಶಿತ, ಮತ್ತು 17 ಯೋಧರನ್ನು ಕೊಂದ ಮತ್ತು 35 ಗಾಯಗಳು ಸೇನಾಪಡೆಯ ಸಿಬ್ಬಂದಿಗೆ ಕಾರಣವಾದ ಭಯೋತ್ಪಾದಕ ದಾಳಿಯನ್ನು ಖಂಡಿಸಿದರು. ಇಂದು ಬಿಡುಗಡೆ ಒಂದು ಹೇಳಿಕೆಯಲ್ಲಿ, ವಿದೇಶಾಂಗ ಯುಎಇ ಸಚಿವಾಲಯವು ಅಂತರರಾಷ್ಟ್ರೀಯ ಭಯೋತ್ಪಾದನೆ ವಿರುದ್ಧ ಯುಎಇ ಸಂಸ್ಥೆಯ ನಿಲ್ಲುವುದೆಂದು ಹೇಳಿದರು. ಸಚಿವಾಲಯವು ಎಲ್ಲಾ ಕ್ರಿಯೆಗಳನ್ನು ಎದುರಿಸಲು ಮತ್ತು ಭಯೋತ್ಪಾದನೆ ನಿರ್ಮೂಲನೆಗೆ ತೆಗೆದುಕೊಳ್ಳುವ ಭಾರತದ ಕ್ರಮಕ್ಕೆ ತಮ್ಮ ಬೆಂಬಲದೊಂದಿಗೆ ಯುಎಇ ಐಕ್ಯತೆಯನ್ನು ವ್ಯಕ್ತಪಡಿಸಿದರು.
  • ಯುನೈಟೆಡ್ ಸ್ಟೇಟ್ಸ್ - ವಿದೇಶಾಂಗ ಇಲಾಖೆ ವಕ್ತಾರ ಜಾನ್ ಕಿರ್ಬಿ ಹೇಳಿದರು, "ಯುನೈಟೆಡ್ ಸ್ಟೇಟ್ಸ್ ಬಲವಾಗಿ ಕಾಶ್ಮೀರದಲ್ಲಿ ಭಾರತೀಯ ಸೇನಾ ನೆಲೆ ಮೇಲೆ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತದೆ." ಯುನೈಟೆಡ್ ಕಿಂಗ್ಡಮ್ - ವಿದೇಶಾಂಗ ಕಾರ್ಯದರ್ಶಿ ಬೋರಿಸ್ ಜಾನ್ಸನ್ ದಾಳಿಯನ್ನು ಖಂಡಿಸಿದರು. "ಯುಕೆ ಬಲವಾಗಿ ಭಾರತದ-ಆಡಳಿತಕ್ಕೊಳಪಟ್ಟಿರುವ ಕಾಶ್ಮೀರ ಈ ಬೆಳಿಗ್ಗೆ ನ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರ ಕುಟುಂಬಗಳು ಮತ್ತು ಸ್ನೇಹಿತರಿಗೆ ನನ್ನ ಆಳವಾದ ಸಂತಾಪಸೂಚಿಸುತ್ತೇನೆ, ಮತ್ತು ಖಂಡಿಸುತ್ತೇನೆ. ಯುಕೆ ಭಯೋತ್ಪಾದನೆಯ ಎಲ್ಲಾ ರೂಪಗಳನ್ನು ಖಂಡಿಸುತ್ತದೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ಜೊತೆ ಭುಜಕ್ಕೆ ಭುಜ ಕೊಟ್ಟು ನಿಲ್ಲುತ್ತದೆ," ಎಂದರು.
  • ಯುನೈಟೆಡ್ ಸ್ಟೇಟ್ಸ್ - ವಿದೇಶಾಂಗ ಇಲಾಖೆ ವಕ್ತಾರ ಜಾನ್ ಕಿರ್ಬಿ ಹೇಳಿದರು, "ಯುನೈಟೆಡ್ ಸ್ಟೇಟ್ಸ್, ಕಾಶ್ಮೀರದಲ್ಲಿ ಭಾರತೀಯ ಸೇನಾ ಬೇಸ್ ಮೇಲಿನ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತದೆ.'

ಮುನ್ನೆಚ್ಚರಿಕೆಯ ಅಗಣನೆ?

  • ಉಗ್ರ ಬುರ್ಹಾನ್ ವಾನಿಯ ಹತ್ಯೆಯಾದ ನಂತರ ಕಾಶ್ಮೀರದಲ್ಲಿ ಪ್ರತಿಭಟನೆಗಳು ಆರಂಭವಾದವು. ಈ ಸಂದರ್ಭದಲ್ಲಿ, ಲಷ್ಕರ್ ಎ ತಯಬಾ ಸಂಘಟನೆಯ ಮುಖಂಡ ಹಫೀಜ್ ಸಯೀದ್ ಮತ್ತು ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಮುಖಂಡ ಸೈಯದ್ ಸಲಾವುದ್ದೀನ್‌, ಕಾಶ್ಮೀರ ಹಾಗೂ ದೇಶದ ಬೇರೆ ಬೇರೆ ಕಡೆಗಳಲ್ಲಿರುವ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದ್ದರು.
  • ‘ಕಾಶ್ಮೀರದ ಇನ್ನಷ್ಟು ಜನರನ್ನು ಆತ್ಮಹತ್ಯಾ ಬಾಂಬರ್‌ಗಳನ್ನಾಗಿ ತರಬೇತಿಗೊಳಿಸಲಾಗುವುದು. ಕಾಶ್ಮೀರವನ್ನು ಭಾರತೀಯ ಸೇನೆಯ ಪಾಲಿಗೆ ಸ್ಮಶಾನವನ್ನಾಗಿ ಮಾಡಲಾಗುವುದು’ ಎಂದು ಇವರಿಬ್ಬರು ಉಗ್ರರು ಹೇಳಿದ್ದರು.
  • ಈ ಬೆದರಿಕೆಯನ್ನು ಕಡೆಗಣಿಸುವಂತಿಲ್ಲ ಎಂಬ ಮಾಹಿತಿ ಗುಪ್ತಚರ ಸಂಸ್ಥೆಗಳಿಂದ ಸಿಕ್ಕಿದ್ದರೂ, ನವದೆಹಲಿಯಲ್ಲಿರುವ ಸೇನಾಪಡೆಗಳ ಪ್ರಮುಖರು ಇವುಗಳನ್ನು ನಿರ್ಲಕ್ಷಿಸಿದ್ದರು ಎಂದು ಮೂಲಗಳು ತಿಳಿಸಿವೆ. ‘ಪಾಕಿಸ್ತಾನದ ಉಗ್ರರು ಹತ್ತಾರು ಸಂಖ್ಯೆಯಲ್ಲಿ ಕಾಶ್ಮೀರಕ್ಕೆ ಆಗಸ್ಟ್‌ನಲ್ಲಿ ನುಸುಳಿದ್ದಾರೆ.

ನಾಲ್ವರು ಉಗ್ರರು ಲಷ್ಕರ್‌–ಎ–ತಯಬಾ ಸಂಘಟನೆಗೆ ಸೇರಿದವರು

  • ಉರಿಯಲ್ಲಿನ ಸೇನಾ ನೆಲೆಯ ಮೇಲೆ ಭಾನುವಾರ ದಾಳಿ ನಡೆಸಿ 18 ಯೋಧರ ಸಾವಿಗೆ ಕಾರಣರಾದ ನಾಲ್ವರು ಉಗ್ರರು ಲಷ್ಕರ್‌–ಎ–ತಯಬಾ ಸಂಘಟನೆಗೆ ಸೇರಿದವರು ಎಂಬುದನ್ನು ತನಿಖೆ ಖಚಿತಪಡಿಸಿದೆ. ಭಾರಿ ಭದ್ರತೆಯ ಸೇನಾ ಶಿಬಿರದ ಹೊರಗಿನ ತಂತಿ ಬೇಲಿಯನ್ನು ಕತ್ತರಿಸಿ ಉಗ್ರರು ಒಳ ನುಗ್ಗಿದ್ದಾರೆ ಎಂಬ ಅಂಶವೂ ತಿಳಿದು ಬಂದಿದೆ. ನಿಯಂತ್ರಣ ರೇಖೆಯ ಸಮೀಪದಲ್ಲಿರುವ ಸೇನಾ ನೆಲೆಯ ಬಗ್ಗೆ ಉಗ್ರರಿಗೆ ಸಮಗ್ರ ಜ್ಞಾನ ಇತ್ತು. ಅಡುಗೆ ಕೋಣೆ ಮತ್ತು ದಾಸ್ತಾನು ಕೋಣೆಗೆ ಉಗ್ರರು ಹೊರಗಿನಿಂದ ಬೀಗ ಹಾಕಿ ಬೆಂಕಿ ಹಚ್ಚಿದ ನಂತರ ಯೋಧರು ಅಲ್ಲಿಂದ ಹೊರಬರಲಾಗದಂತೆ ಮಾಡಿದ್ದರು ಎಂಬ ಅಂಶವೂ ತನಿಖೆಯಿಂದ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
  • ಸೇನಾ ಶಿಬಿರದೊಳಕ್ಕೆ ನುಗ್ಗಿದ ನಂತರ ಉಗ್ರರು ಅತ್ಯಂತ ನಿಖರವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಹಾಗಾಗಿ ಉಗ್ರರಿಗೆ ‘ಒಳಗಿನವರ ನೆರವು’ ಇತ್ತು ಎಂಬುದನ್ನು ಅಲ್ಲಗಳೆಯಲಾಗದು. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಡುಗೆ ಕೋಣೆ ಮತ್ತು ದಾಸ್ತಾನು ಕೋಣೆಗೆ ಹೊರಗಿನಿಂದ ಬೀಗ ಹಾಕಿದ ಬಳಿಕ ಉಗ್ರರು ಅಧಿಕಾರಿಗಳ ನಿವಾಸಗಳತ್ತ ಸಾಗುತ್ತಿದ್ದರು. ಆದರೆ ಅಲ್ಲಿ ಹೆಚ್ಚಿನ ಹಾನಿ ಉಂಟು ಮಾಡುವ ಮುನ್ನವೇ ಅವರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ದಾಳಿ ನಡೆಸಿದ ಉಗ್ರರು ಜೈಷ್‌–ಎ–ಮೊಹಮ್ಮದ್‌ ಸಂಘಟನೆಗೆ ಸೇರಿದವರು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಆದರೆ ಈ ಉಗ್ರರ ಕಾರ್ಯಾಚರಣೆ ರೀತಿ ಲಷ್ಕರ್‌–ಎ–ತಯಬಾ ಉಗ್ರರ ರೀತಿಯಲ್ಲಿದೆ. ಹಾಗಾಗಿ ಇವರು ಲಷ್ಕರ್‌ ಉಗ್ರಗಾಮಿ ಸಂಘಟನೆಗೆ ಸಂಭವವೇ ಹೆಚ್ಚು ಎಂದು ಹೇಳಲಾಗಿದೆ.

ಪಾಕಿಸ್ತಾನದ ಪ್ರತಿಕ್ರಿಯೆ

  • ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಭಾನುವಾರ ನಡೆದ ಉಗ್ರರ ದಾಳಿ ಸಂಬಂಧ ಭಾರತವು ಆಧಾರ ರಹಿತ ಮತ್ತು ಬೇಜವಾಬ್ದಾರಿಯಾಗಿ ಆರೋಪ ಮಾಡುತ್ತಿದೆ ಎಂದು ಪಾಕಿಸ್ತಾನ ದೂರಿದೆ.‘ಪ್ರತಿ ಬಾರಿ ಭಯೋತ್ಪಾದಕ ದಾಳಿ ನಡೆದ ತಕ್ಷಣ ಪಾಕಿಸ್ತಾನದ ಮೇಲೆ ಆರೋಪ ಹೊರಿಸುವುದು ಭಾರತದ ಅಭ್ಯಾಸವಾಗಿದೆ. ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ವಿಶ್ವ ಸಮುದಾಯದ ದಿಕ್ಕು ತಪ್ಪಿಸಲು ಭಾರತ ಭಿನ್ನಭಿನ್ನ ತಂತ್ರಗಳನ್ನು ಅನುಸರಿಸುತ್ತಿದೆ’ ಎಂದು ಜಕಾರಿಯ ದೂರಿದ್ದಾರೆ.
  • ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರ ಭೇಟಿ ವೇಳೆ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿರುವ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು, ವಿವಾದದ ಸಂಬಂಧ ನಿರ್ಣಯ ತೆಗೆದುಕೊಳ್ಳುವಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸುವಂತೆ ಕೋರಿದ್ದಾರೆ.

ಭಾರತದಲ್ಲಿ ಭಯೋತ್ಪಾದಕ ಧಾಳಿಗಳು

  • ಭಾರತದಲ್ಲಿನ ಭಯೋತ್ಪಾದಕ ಘಟನೆಗಳ ಪಟ್ಟಿ: 2001ರಿಂದ:
  • ಭಾರತದಲ್ಲಿನ ಭಯೋತ್ಪಾದಕ ಘಟನೆಗಳ ಪಟ್ಟಿ
  • 1- 2001:: ಶ್ರೀನಗರ ಮತ್ತು ಭಾರತೀಯ ಸಂಸತ್ತಿನಮೇಲೆ ಧಾಳಿ
  • 2- 2002- 1 ನೇ ರಘುನಾಥ್ ದೇವಾಲಯ ಅಕ್ಷರಧಾಮ ದೇವಾಲಯ, ಕೋಲ್ಕತಾ ಕಲುಚುಕ ಖಾಸಿಮ್ ನಗರ ರಫಿಗನಿ, 2 ನೇ ರಘುನಾಥ್ ದೇವಾಲಯ, ಮುಂಬಯಿ, ಕರ್ನೂಲ್,
  • 3- 2003 - 1 ನೇ ಮುಂಬಯಿ, 2 ನೇ ಮುಂಬಯಿ, 3 ನೇ ಮುಂಬಯಿ, 4 ನೇ ಮುಂಬಯಿ
  • 4- 2005- ಅಯೋಧ್ಯೆ ದೆಹಲಿ ಜಾನ್ಪುರ
  • 5- 2006 ವಾರಣಾಸಿ ದೆಹಲಿ ದೋಡ ಮುಂಬಯಿ ಮಾಲೆಗಾಂವ್ ಪಶ್ಚಿಮ ಬಂಗಾಳ ಶ್ರೀನಗರ
  • 6- 2007- ಸಂಜೋತಾ 1 ನೇ ಹೈದರಾಬಾದ್ 2 ನೇ ಹೈದರಾಬಾದ್ ಅಜ್ಮೀರ ಉತ್ತರ ಪ್ರದೇಶ
  • 7- 2008- ಜೈಪುರ ಬೆಂಗಳೂರು ಅಹಮದಾಬಾದ್ 1 ನೇ ದೆಹಲಿ 2 ನೇ ದೆಹಲಿ ಮಾಲೆಗಾಂವ್ ಅಗರ್ತಲಾ ಇಂಫಾಲ ಅಸ್ಸಾಂ ಮುಂಬಯಿ
  • 8- 2009-1 ನೇ ಗೌಹಾತಿ 2 ನೇ ಗೌಹಾತಿ
  • 9- 2010- ಬೆಂಗಳೂರು ಪುಣೆ ದಾಂತೇವಾಡ ಜ್ಞಾನೇಶ್ವರಿ, ದೆಹಲಿ, ವಾರಣಾಸಿ
  • 10- 2011 - ಮುಂಬಯಿ ; ದೆಹಲಿ
  • 11- 2012- ದೆಹಲಿ, ಪುಣೆ
  • 12- 2013-ಹೈದರಾಬಾದ್ 1 ಶ್ರೀನಗರ ಬೆಂಗಳೂರು ದರ್ಭಾ ಕಣಿವೆ, 2 ನೇ ಶ್ರೀನಗರ, ಬೋಧ ಗಯಾ ಪಾಟ್ನಾ
  • 13- 2014- ಚೆನೈ ,1 ನೇ ಅಸ್ಸಾಂ, ಛತ್ತೀಸ್ಗಢ, ಬುರ್ದ್ವಾನ್, ಕಾಶ್ಮೀರ ಕಣಿವೆಯಲ್ಲಿ, 2 ನೇ ಅಸ್ಸಾಂ
  • 14- 2015- ಅರಾ, ಗುರುದಾಸ್ಪುರ
  • 15- 2016 ಪಠಾನ್ಕೋಟ್ Pಪಂಪೊರೆ , ಉರಿ

ಅಭಿಪ್ರಾಯ

ಅಹಂಕಾರ ಬೇಡ
  • ಸೆಪ್ಟೆಂಬರ್‌ ತಿಂಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ನಮ್ಮ ಸೈನ್ಯವು ‘ನಿರ್ದಿಷ್ಟ ದಾಳಿ’ ಮಾಡಿದ್ದನ್ನು ಅತ್ಯಂತ ಹೆಮ್ಮೆಯಿಂದ ಹೇಳಿಕೊಂಡು ಬೀಗಿದ್ದೆವು. ಅದೇನು ರೋಷಾವೇಶ, ದುರಹಂಕಾರದ ಹೇಳಿಕೆಗಳು! ನಾವು ಅವರ ಮೇಲೆ ಎಂದೋ ಒಂದು ಬಾರಿ ನುಗ್ಗಿದ್ದನ್ನು ವರ್ಣರಂಜಿತವಾಗಿ ಹೇಳಿಕೊಂಡೆವು. ಆದರೆ ಪಾಕಿಸ್ತಾನಿ ಉಗ್ರರು ನೇರವಾಗಿ ನಮ್ಮ ದೇಶದೊಳಗೇ ಬಂದು ಸೇನಾ ನೆಲೆಗಳ ಮೇಲೆ ಪದೇ ಪದೇ ದಾಳಿ ಮಾಡುತ್ತಿದ್ದಾರೆ.
  • ನಮ್ಮಂಥ ನಾಗರಿಕರನ್ನು ಭದ್ರತೆಯ ಹೆಸರಿನಲ್ಲಿ ಸೇನಾ ನೆಲೆಯ ಸನಿಹಕ್ಕೂ ಸುಳಿಯಲು ಬಿಡದಷ್ಟು ‘ಭದ್ರತೆ’ ಇರುವ ಈ ನೆಲೆಗಳಿಗೆ ಉಗ್ರರು ನುಗ್ಗಲು ಹೇಗೆ ಸಾಧ್ಯವಾಗುತ್ತಿದೆ?
  • -ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು..
  • ನಮ್ಮ ಯೋಧರ ಮೇಲೆ ಮತ್ತು ಸೇನಾ ನೆಲೆಗಳ ಮೇಲೆ ಕಣ್ಣಿಟ್ಟಿರುವ ಉಗ್ರರನ್ನು ಸದೆ ಬಡಿಯಲು ಇನ್ನೂ ಹೆಚ್ಚು ಪರಿಣಾಮಕಾರಿ ತಂತ್ರ ಅನುಸರಿಸುವ ಅಗತ್ಯ ಎದ್ದು ಕಾಣುತ್ತದೆ. ಸರ್ಕಾರ ಈಗ ಗಮನ ಹರಿಸಬೇಕಾಗಿರುವುದು ಪಾಕ್‌ ನೆಲದಲ್ಲಿ ತರಬೇತಾದ ಉಗ್ರಗಾಮಿಗಳು ದೇಶದ ಒಳಗೆ ನುಸುಳದಂತೆ ಗಡಿಯಲ್ಲಿ ಭದ್ರತಾ ವ್ಯವಸ್ಥೆ ಬಲಪಡಿಸುವುದರ ಕಡೆಗೆ. ಎರಡೂ ದೇಶಗಳ ನಡುವೆ ಇರುವ 3323 ಕಿ.ಮೀ. ಗಡಿಯ ಪೈಕಿ 1225 ಕಿ.ಮೀ.ನಷ್ಟು ಜಮ್ಮು ಮತ್ತು ಕಾಶ್ಮೀರಕ್ಕೆ ಹೊಂದಿಕೊಂಡಿದೆ.
  • ಇಲ್ಲಿ ಬೇಲಿ ನಿರ್ಮಾಣ ಕಾರ್ಯಕ್ಕೆ ಚುರುಕು ನೀಡಬೇಕು. ಕಣ್ಗಾವಲು ಇಡುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಾಧನಗಳನ್ನು ಅಳವಡಿಸಬೇಕು. ಕೇಂದ್ರ ಗೃಹ ಖಾತೆಯ ಕಾರ್ಯದರ್ಶಿಯಾಗಿದ್ದ ಮಧುಕರ ಗುಪ್ತಾ ನೇತೃತ್ವದ ಉನ್ನತಾಧಿಕಾರ ಸಮಿತಿ ಸಾಕಷ್ಟು ಹಿಂದೆಯೇ ಈ ಬಗ್ಗೆ ವರದಿ ನೀಡಿತ್ತು.
  • ಆಂಟನಿ ಮಾತ್ರ ‘ಪಠಾಣ್‌ಕೋಟ್‌ ದಾಳಿಯಿಂದ ಸರ್ಕಾರ ಪಾಠ ಕಲಿತಿಲ್ಲ ಎಂಬುದನ್ನು ಉರಿ ದಾಳಿ ತೋರಿಸಿಕೊಟ್ಟಿದೆ’ ಎಂದು ಹೇಳಿದ್ದಾರೆ. ಇದು ಸಂದರ್ಭೋಚಿತ ಅಲ್ಲ ಎನಿಸಬಹುದು. ಆದರೆ ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಂತೂ ಇದೆ. ಏಕೆಂದರೆ ಎರಡು ತಿಂಗಳ ಹಿಂದೆ ಹಿಜಬುಲ್‌ ಉಗ್ರ ಬುರ್ಹಾನ್‌ ವಾನಿಯ ಹತ್ಯೆ ಬೆನ್ನಲ್ಲೇ, ಲಷ್ಕರ್‌ ಎ ತಯಬಾ ಮತ್ತು ಹಿಜಬುಲ್‌ ಮುಜಾಹಿದೀನ್‌ ಸಂಘಟನೆಗಳ ನಾಯಕರು ಸೇಡು ತೀರಿಸಿಕೊಳ್ಳುವ ಬೆದರಿಕೆ ಹಾಕಿದ್ದರು.

ಕಾಶ್ಮೀರ ಭಯೋತ್ಪಾದನೆ ಮತ್ತು ಸಾವು

  • ಜಮ್ಮು ಮತ್ತು ಕಾಶ್ಮೀರದಲ್ಲಿ 2010ರ ನಂತರ ಈ ವರ್ಷ (2016-2017) ಅತಿ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ಈ ವರ್ಷ (ಸೆಪ್ಟೆಂಬರ್‌ 18ರವರೆಗೆ) ಮೃತಪಟ್ಟ ಯೋಧರ ಸಂಖ್ಯೆ 64. 2010ರಲ್ಲಿ ಇಲ್ಲಿ 69 ಯೋಧರು ಬಲಿಯಾಗಿದ್ದರು ಎಂದು ಸೌತ್‌ ಏಷ್ಯಾ ಟೆರರಿಸಂ ಪೋರ್ಟಲ್‌ (ಎಸ್‌ಎಟಿಪಿ) ಹೇಳಿದೆ.ಭಾರತ ಮತ್ತು ಪಾಕಿಸ್ತಾನದ ನಡುವಣ ಗಡಿಯಾಗಿರುವ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) 2016ರಲ್ಲಿ ಮೃತಪಟ್ಟ ನಾಗರಿಕರ ಸಂಖ್ಯೆ ಅತ್ಯಂತ ಕಡಿಮೆ.

ಭಯೊತ್ಪಾದಕ ಧಾಳಿಯಲ್ಲಿ ಹಾನಿ

  • 1990 ರಿಂದ 2007ರ ವರೆಗೆ ಭಯೊತ್ಪಾದಕತೆಯಿಂದ 800 ನಾಗರೀಕರು ಬಲಿಯಾಗಿದ್ದಾರೆ. 1990-2010 = ಹೆಚ್ಚಿನ ಭಯೋತ್ಪಾದಕ ಹಿಂಸೆ ನೆಡೆದಿದೆ.2016 ರಲ್ಲಿ ಗಡಿನಿಯಂತ್ರನ ರೇಖೆಯಲ್ಲಿ 31 ನುಸುಳುವ ಉಗ್ರರನ್ನು ಹತ್ಯೆಮಾಡಲಾಗಿದೆ ಮತ್ತು 17 ಗಡಿ ಉಲ್ಲಂಘನೆ ತಡೆದ ಪ್ರಕರಣ ನಡೆದಿದೆ. ; 2012 ರಲ್ಲಿ 16 ನಾಗರಿಕರ ಸಾವು ಸಂಭವಿಸಿದೆ ಹಾಗೂ 17 ಯೋದರ ಸಾವು ಸಂಭವಿಸಿದೆ.
ವರ್ಷ > 2013 2014 2015 2016
ಭದ್ರತಾ ಸಿಬ್ಬಂದಿ ಸಾವು > 61 51 41 64
ನಾಗರೀಕರ ಸಾವು > 100 110 113 116

ಪುರಾವೆ ಪಾಕಿಸ್ತಾನಕ್ಕೆ ಹಸ್ತಾಂತರ

  • ದಿ.28 Sep, 2016;ಪಾಕಿಸ್ತಾನದ ಹೈಕಮಿಷನರ್‌ ಅಬ್ದುಲ್‌ ಬಾಸಿತ್‌ ಅವರನ್ನು ಹತ್ತು ದಿನಗಳಲ್ಲಿ ಎರಡನೇ ಬಾರಿಗೆ ಕರೆಸಿಕೊಂಡಿರುವ ವಿದೇಶಾಂಗ ಸಚಿವಾಲಯ, ಉರಿ ಸೇನಾ ಶಿಬಿರದ ಮೇಲಿನ ದಾಳಿ ಗಡಿಯಾಚಿನಿಂದ ನಡೆದಿದೆ ಎಂಬುದನ್ನು ಸಮರ್ಥಿಸುವ ಪುರಾವೆಗಳನ್ನು ನೀಡಿದೆ. ಜತೆಗೆ ಗಡಿಯಾಚಿನಿಂದ ನಿರಂತರವಾಗಿ ದಾಳಿ ನಡೆಯುತ್ತಿರುವುದನ್ನು ಭಾರತ ಖಂಡಿಸಿದೆ.ಉರಿ ದಾಳಿಯಲ್ಲಿ ಬಲಿಯಾದ ಒಬ್ಬ ಉಗ್ರನನ್ನು ಮುಜಫ್ಫರಬಾದ್‌ನ ದರ್ಬಾಂಗ್‌ ನಿವಾಸಿ ಫಿರೋಜ್‌ ಎಂಬ ವರ ಮಗ ಹಫೀಜ್‌ ಅಹ್ಮದ್‌ ಎಂದು ಗುರುತಿಸಲಾಗಿದೆ ಎಂಬ ಮಾಹಿತಿಯನ್ನು ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈಶಂಕರ್‌ ಅವರು ಬಾಸಿತ್‌ಗೆ ತಿಳಿಸಿದರು. ಪಾಕಿಸ್ತಾನದಿಂದ ಉಗ್ರರಿಗೆ ನಿರ್ದೇಶನ ನೀಡುತ್ತಿದ್ದವರ ಮಾಹಿತಿ ಯನ್ನೂ ಬಾಸಿತ್‌ಗೆ ಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ವಕ್ತಾರ ವಿಕಾಸ್‌ ಸ್ವರೂಪ್‌ ತಿಳಿಸಿದ್ದಾರೆ. ಇದೇ 21ರಂದು ಉರಿ ವಲಯದ ಗ್ರಾಮವೊಂದರ ಜನರು ಪಾಕ್‌ ಆಕ್ರಮಿತ ಕಾಶ್ಮೀರದ ಇಬ್ಬರನ್ನು ಹಿಡಿದು ಭದ್ರತಾ ಪಡೆಗಳಿಗೆ ಹಸ್ತಾಂತರಿಸಿದ್ದಾರೆ. ಉರಿ ಮೇಲೆ ದಾಳಿ ನಡೆಸಿದ ಉಗ್ರರು ನಿಯಂತ್ರಣ ರೇಖೆ ನುಸುಳಿ ಒಳಬರಲು ಈ ಇಬ್ಬರು ನೆರವಾಗಿದ್ದಾರೆ ಎಂಬ ವಿಚಾರವನ್ನು ಬಾಸಿತ್‌ಗೆ ತಿಳಿಸಲಾಗಿದೆ.
  • ಇವರನ್ನು ಫೈಜಲ್‌ ಹುಸೇನ್‌ ಅವಾನ್‌ (20) ಮತ್ತು ಯಾಸೀನ್‌ ಖುರ್ಷಿದ್‌ (19) ಎಂದು ಗುರುತಿಸ ಲಾಗಿದೆ. ಈ ಇಬ್ಬರೂ ಮುಜಫ್ಫರಬಾದ್‌ ನವರು. ಉರಿ ಸೇನಾ ಶಿಬಿರದಲ್ಲಿ 18 ಯೋಧರ ಸಾವಿಗೆ ಕಾರಣವಾದ ಉಗ್ರರಿಗೆ ನೆರವು ಮತ್ತು ಮಾರ್ಗದರ್ಶನ ನೀಡಿರುವುದಾಗಿ ವಿಚಾರಣೆ ವೇಳೆ ಅವಾನ್‌ ಒಪ್ಪಿಕೊಂಡಿದ್ದಾನೆ.

ಪಾಕಿಸ್ತಾನದ ಪ್ರತಿಕ್ರಿಯೆ

  • ಉರಿ ಸೇನಾ ನೆಲೆಯ ಮೇಲೆ ನಡೆದ ದಾಳಿ ‘ಭಾರತವೇ ಹೂಡಿದ ಸಂಚು’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಹೇಳಿದ್ದಾರೆ. ದಾಳಿಯಲ್ಲಿ ಪಾಕಿಸ್ತಾನ ಮೂಲದ ಉಗ್ರರ ಕೈವಾಡವಿದೆ ಎಂಬುದನ್ನು ಸಾಬೀತು ಪಡಿಸಲು ಭಾರತ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸದಿರುವುದು ಇದಕ್ಕೆ ಸಾಕ್ಷಿ ಎಂದು ಆಸಿಫ್‌ ಹೇಳಿರುವುದಾಗಿ ಡಾನ್‌ ಪತ್ರಿಕೆ ವರದಿ ಮಾಡಿದೆ.

ವಿಶ್ವಸಂಸ್ಥೆಯಲ್ಲಿ

  • ಕಾಶ್ಮೀರ ಅಖಂಡ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಸ್ಪಷ್ಟ ಮತ್ತು ಗಟ್ಟಿದನಿಯ ಸಂದೇಶದೊಂದಿಗೆ ಪಾಕಿಸ್ತಾನಕ್ಕೆ ತಿಳಿಸಬೇಕು ಎಂದು ಭಾರತ ಹೇಳಿದೆ. ಕಾಶ್ಮೀರ ಅಖಂಡ ಭಾರತದ ಅಂಗವಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಮಲಿಹಾ ಲೋಧಿ ನೀಡಿದ ಹೇಳಿಕೆಗೆ ಭಾರತ ಈ ರೀತಿ ಪ್ರತಿಕ್ರಿಯೆ ನೀಡಿದೆ.

ದಾಳಿ ಗಡಿಯಾಚಿನಿಂದ ಪುರಾವೆ

  • ಪಾಕಿಸ್ತಾನದ ಹೈಕಮಿಷನರ್‌ ಅಬ್ದುಲ್‌ ಬಾಸಿತ್‌ ಅವರನ್ನು ಹತ್ತು ದಿನಗಳಲ್ಲಿ ಎರಡನೇ ಬಾರಿಗೆ ಕರೆಸಿಕೊಂಡಿರುವ ವಿದೇಶಾಂಗ ಸಚಿವಾಲಯ, ಉರಿ ಸೇನಾ ಶಿಬಿರದ ಮೇಲಿನ ದಾಳಿ ಗಡಿಯಾಚಿನಿಂದ ನಡೆದಿದೆ ಎಂಬುದನ್ನು ಸಮರ್ಥಿಸುವ ಪುರಾವೆಗಳನ್ನು ನೀಡಿದೆ. ಜತೆಗೆ ಗಡಿಯಾಚಿನಿಂದ ನಿರಂತರವಾಗಿ ದಾಳಿ ನಡೆಯುತ್ತಿರುವುದನ್ನು ಭಾರತ ಖಂಡಿಸಿದೆ.
  • ಫೈಜಲ್‌ ಹುಸೇನ್‌ ಅವಾನ್‌ (20) ಮತ್ತು ಯಾಸೀನ್‌ ಖುರ್ಷಿದ್‌ (19) ಈ ಇಬ್ಬರೂ ಮುಜಫ್ಫರಬಾದ್‌ ನವರು. ಉರಿ ಸೇನಾ ಶಿಬಿರದಲ್ಲಿ 18 ಯೋಧರ ಸಾವಿಗೆ ಕಾರಣವಾದ ಉಗ್ರರಿಗೆ ನೆರವು ಮತ್ತು ಮಾರ್ಗದರ್ಶನ ನೀಡಿರುವುದಾಗಿ ವಿಚಾರಣೆ ವೇಳೆ ಅವಾನ್‌ ಒಪ್ಪಿಕೊಂಡಿದ್ದಾನೆ.
  • 17 Oct, 2016
  • ಕಳೆದ ತಿಂಗಳು ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ 19 ಯೋಧರನ್ನು ಕೊಂದ ನಾಲ್ವರು ಪಾಕಿಸ್ತಾನಿ ಉಗ್ರರು ಗಡಿ ನಿಯಂತ್ರಣ ರೇಖೆಯಲ್ಲಿನ (ಎಲ್‌ಒಸಿ) ವಿದ್ಯುತ್ ಸಂಪರ್ಕ ಇರುವ ಬೇಲಿಯನ್ನು ಏಣಿ ಇಟ್ಟು ಹತ್ತಿ ದೇಶಕ್ಕೆ ನುಸುಳಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಸಿಂಧೂ ನೀರಿನ ಒಪ್ಪಂದ ಪನರ್ವಿಮರ್ಶೆ

  • ಸಿಂಧೂ ನೀರು ಹಂಚಿಕೆ ಒಪ್ಪಂದ:
  • ಭಾರತ ಮತ್ತು ಪಾಕಿಸ್ತಾನ ನಡುವೆ 56 ವರ್ಷಗಳ ಹಿಂದೆ ಆಗಿರುವ ಸಿಂಧೂ ನದಿ ನೀರು ಒಪ್ಪಂದ ಪುನರ್‌ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ‘ರಕ್ತ ಮತ್ತು ನೀರು ಜತೆಯಾಗಿ ಹರಿಯಲು ಸಾಧ್ಯವಿಲ್ಲ’ ಎಂದರು.
  • ವಿಶ್ವ ನಮ್ಮ ಬಗ್ಗೆ ಹೊಂದಿರುವ ಸದಭಿಪ್ರಾಯಕ್ಕೆ ನದಿ ನೀರು ಒಪ್ಪಂದ ಮರುಪರಿಶೀಲನೆಯಿಂದ ಧಕ್ಕೆ ಆಗದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕು. ಅಂತರರಾಷ್ಟ್ರೀಯ ಪರಿಣಾಮಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂಥ ವಿಚಾರಗಳನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು.ಇಂತಹ ವಿಷಯಗಳ ಬಗ್ಗೆ ಸಾರಾಸಾರ ವಿಚಾರ ಮಾಡಿ, ಸಂಯಮದಿಂದ ಆಲೋಚಿಸಿ ನಿರ್ಧಾರ ಕೈಗೊಳ್ಳುವುದು ಒಳಿತು. ಭಾವೋದ್ವೇಗದ ಮಾತುಗಳಿಂದ ಪ್ರಯೋಜನ ಇಲ್ಲ.

ಸರ್ಜಿಕಲ್ ಕಾರ್ಯಾಚರಣೆ

  • 29 Sep, 2016:ಭಾರತೀಯ ಸೇನೆ ಪಾಕ್‌ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರ ಅಡುಗುದಾಣಗಳ ಮೇಲೆ ದಾಳಿ ನಡೆಸಿ 35 ಉಗ್ರರು ಸೇರಿದಂತೆ 9 ಪಾಕ್‌ ಸೈನಿಕರನ್ನು ಹತ್ಯೆ ಮಾಡಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಬುಧವಾರ ರಾತ್ರಿ ಹೆಲಿಕಾಪ್ಟರ್‌ ಮೂಲಕ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿದ ಭಾರತೀಯ ಸೇನೆ ಸರ್ಜಿಕಲ್‌ ಕಾರ್ಯಾಚರಣೆಯನ್ನು ಆರಂಭಿಸಿತು. ಈ ವೇಳೆ ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತು. ಈ ಸಂದರ್ಭದಲ್ಲಿ ಕಾರ್ಯಾಚರಣೆಗೆ ಅಡ್ಡಿ ಪಡಿಸಿದ 9 ಪಾಕ್‌ ಯೋಧರನ್ನು ಹತ್ಯೆ ಮಾಡಲಾಗಿದೆ, ಎಂದು ರಕ್ಷಣಾ ಮೂಲಗಳು ತಿಳಿಸಿವೆ.
  • ಸರ್ಜಿಕಲ್ ಕಾರ್ಯಾಚರಣೆ ಎಂದರೆ:
  • ನಿರ್ದಿಷ್ಟ ಮತ್ತು ನಿಖರ ಮಿಲಿಟರಿ ಕಾರ್ಯಾಚರಣೆಯನ್ನು ಸರ್ಜಿಕಲ್ ಆಪರೇಷನ್ ಎನ್ನುತ್ತಾರೆ. ಇದನ್ನು ಪ್ರಿಸಿಷನ್‌ ಆಪರೇಷನ್ ಎಂದೂ ಕರೆಯಲಾಗುತ್ತದೆ. ಇಂಥ ಕಾರ್ಯಾಚರಣೆಗಳು ಸಾಮಾನ್ಯವಾಗಿ ಎರಡು ಕಾರಣಕ್ಕೆ ನಡೆಯುತ್ತವೆ.
  • 1) ನಮ್ಮದೇ ದೇಶದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ, ಸಾಮಾನ್ಯ ಜನರನ್ನು ಒತ್ತೆಯಾಗಿ ಇರಿಸಿಕೊಂಡಾಗ ಜನರ ಬಿಡುಗಡೆಗಾಗಿ.
  • 2) ವೈರಿ ದೇಶದಲ್ಲಿ ನಮ್ಮ ದೇಶದ ಸರ್ಕಾರ ಸಾಧಿಸಬೇಕಾಗಿರುವ ಮಹತ್ತರ ಗುರಿಯ ಈಡೇರಿಕೆಗಾಗಿ.
  • ಇಂಥ ಕಾರ್ಯಾಚರಣೆ ನಡೆಸುವ ಮುನ್ನ ಗುಪ್ತಚರ ಮಾಹಿತಿಯನ್ನು ವ್ಯಾಪಕವಾಗಿ ಕಲೆ ಹಾಕಲಾಗುತ್ತದೆ. ವೈರಿ ದೇಶದಲ್ಲಿ ನಡೆಸಬೇಕಾದ ಕಾರ್ಯಾಚರಣೆಯಾದರೆ ಅದು ಅಲ್ಪ ಕಾಲಾವಧಿಯಲ್ಲಿ ಮುಗಿದುಹೋಗುವಂತೆ ಆದರೆ ಅದರ ಪರಿಣಾಮ ದೀರ್ಘಾವಧಿಯಲ್ಲಿ ಉಳಿದುಕೊಳ್ಳುವಂತೆ ಯೋಜನೆ ರೂಪಿಸಲಾಗುತ್ತದೆ.
  • ‘ಇಂತಹ ಯಾವುದೇ ದಾಳಿ ನಡೆದಿಲ್ಲ. ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯನ್ನೇ ಗುರಿ ನಿರ್ದಿಷ್ಟ ದಾಳಿ ಎಂದು ಭಾರತ ಹೇಳುತ್ತಿದೆ’ ಎಂದು ಪಾಕಿಸ್ತಾನ ಸೇನೆ ಪ್ರತಿಕ್ರಿಯೆ ನೀಡಿದೆ.

‘ಉರಿ’ ದಾಳಿಗೆ ಪ್ರತೀಕಾರ

  • ಸೆ.28–29ರ ನಡುವಣ ರಾತ್ರಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರರ ಏಳು ಶಿಬಿರಗಳನ್ನು ನಾಶ ಮಾಡಲಾಗಿದೆ. ಹಲವು ಉಗ್ರರು ದಾಳಿಗೆ ಬಲಿಯಾಗಿದ್ದಾರೆ ಎಂದು ಸೇನೆ ತಿಳಿಸಿದೆ. ಆದರೆ ಸತ್ತವರ ಸಂಖ್ಯೆ ಎಷ್ಟು ಎಂಬುದನ್ನು ಬಹಿರಂಗಪಡಿಸಿಲ್ಲ. ಐದೂವರೆ ತಾಸು ನಡೆದ ಕಾರ್ಯಾಚರಣೆಯಲ್ಲಿ ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗಿತ್ತು. ‘ಎಲ್‌ಒಸಿಯಿಂದ 2–3 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಉಗ್ರರು ಶಿಬಿರಗಳನ್ನು ಸೃಷ್ಟಿಸಿಕೊಂಡಿದ್ದಾರೆ.
  • ಪಾಕಿಸ್ತಾನ ಬೆಂಬಲ ಭಯೋತ್ಪಾದಕ ದಾಳಿಗಳ, ವರ್ಷಗಳ ನಂತರ, ಭಾರತೀಯ ಸೇನೆಯ 2 ಪಾಕಿಸ್ತಾನಿ ಸೈನಿಕರು ಸೇರಿದಂತೆ ಭಾರೀ ಸಾವುನೋವುಗಳನ್ನು ಉಂಟುಮಾಡಿತು, ಮತ್ತು ನಿಯಂತ್ರಣರೇಖೆಯ ಆಚೆ ಬದಿಯಲ್ಲಿ ಏಳು ಭಯೋತ್ಪಾದಕ ಶಿಬಿರಗಳನ್ನು ಸರ್ಜಿಕಲ್ ಸ್ಟ್ರೈಕಿನಲ್ಲಿ (ಶಸ್ತ್ರಚಿಕಿತ್ಸಾ ಹೊಡೆತ) ನಾಶಪಡಿಸಿರುವುದಾಗಿ ತಿಳಿಸಿದ್ದಾರೆ. ಭಯೋತ್ಪಾದಕರ ಸಾವುನೋವಿನ ಸಂಖ್ಯೆ ಸುಮಾರು 50.[೨]
  • ಅವರಿಗೆ ಭೂಪ್ರದೇಶ ಪರಿಚಿತವಾಗಿದ್ದುದರಿಂದ 6 ಬಿಹಾರ ಮತ್ತು 10 ಡೋಗ್ರಾ ಘಟಕಗಳ ಘಾಟಕ್ ದಳಗಳನ್ನು ಈ ಕಾರ್ಯಾಚರಣೆಗಳ ಭಾಗವಹಿಸುವಂತೆ ಮಾಡಲಾಯಿತು.

ಭಾರತಕ್ಕೆ ಬೆಂಬಲ

  • Dt.3-10-2016 ಸೋಮವಾರ ರಶಿಯಾ ನಿಯಂತ್ರಣ ರೇಖೆ (LOC) ಬದಿಯಲ್ಲಿ ನೆಡೆಸಿರುವ ಭಾರತದ "ಸರ್ಜಿಕಲ್ ಸ್ಟ್ರೈಕ್" ಬೆಂಬಲವಾಗಿ, ಪ್ರತಿ ದೇಶಕ್ಕೂ ಸ್ವತಃ ರಕ್ಷಿಸಿಕೊಳ್ಳುವ ಹಕ್ಕು ಇದೆ ಎಂದು ಹೇಳಿದೆ. ದಹಲಿಯನ್ನು ಬಹಿರಂಗವಾಗಿ ಬೆಂಬಲಿಸಿದ ಮೊದಲ ಒಂದು ಪಿ 5 ದೇಶ.
  • (ಪಿ 5 1 ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಶಾಶ್ವತ ಸದಸ್ಯ-ರಾಷ್ಟ್ರಗಳು- (ಪಿ 5) ಸೂಚಿಸುತ್ತದೆ; ಅವುಗಳೆಂದರೆ ಚೀನಾ, ಫ್ರಾನ್ಸ್, ರಷ್ಯಾ, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್; ಜೊತೆಗೆ ಜರ್ಮನಿ ಸೇರಿದರೆ, ಪಿ 5 +1).
  • ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸೀಮಿತ ದಾಳಿ ನಡೆಸಿರುವ ಭಾರತದ ಕ್ರಮಕ್ಕೆ ಮತ್ತೊಮ್ಮೆ ಅಮೆರಿಕ ಬೆಂಬಲ ಘೋಷಿಸಿದ್ದು, ಭಾರತಕ್ಕೆ ಸ್ವರಕ್ಷಣೆಯ ಹಕ್ಕಿದೆ ಎಂದು ಹೇಳಿದೆ.

ದಾಳಿ ನಡೆದಿಲ್ಲ ಎಂದು ಬಿಂಬಿಸಲು ಪಾಕ್‌

  • ಮಂಧೋಲ್ (ಪಾಕ್‌ ಆಕ್ರಮಿತ ಕಾಶ್ಮೀರ)ನಲ್ಲಿ ಭಾರತದ ಸೈನಿಕರು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿಬಂದು, ಕಾರ್ಯಾಚರಣೆ ನಡೆಸುವುದು ಅಸಾಧ್ಯ ಎಂದು ಪಾಕಿಸ್ತಾನದ ಸೇನೆ ಹೇಳಿದೆ. ಅಂತರರಾಷ್ಟ್ರೀಯ ಮಾಧ್ಯಮಗಳ ಕೆಲವು ಪ್ರತಿನಿಧಿಗಳನ್ನು ಎಲ್‌ಒಸಿ ಬಳಿ ಶನಿವಾರ ಕರೆದೊಯ್ದ ಪಾಕಿಸ್ತಾನದ ಸೇನೆ, ದಾಳಿ ನಡೆದಿಲ್ಲ ಎಂದು ಹೇಳಿಕೊಳ್ಳುವ ಪ್ರಯತ್ನ ನಡೆಸಿದೆ. ಪಾಕಿಸ್ತಾನದ ಸೇನೆಯು ಮಾಧ್ಯಮ ಪ್ರತಿನಿಧಿಗಳನ್ನು ಹೀಗೆ ಕರೆದೊಯ್ದಿರುವುದು ತೀರಾ ಅಪರೂಪ ಎನ್ನಲಾಗಿದೆ. ದಾಳಿ ನಡೆಸಿರುವುದಾಗಿ ಭಾರತ ಹೇಳಿರುವ ಪ್ರದೇಶದ ಸಮೀಪ ಮಾಧ್ಯಮ ಪ್ರತಿನಿಧಿಗಳನ್ನು ಕರೆದೊಯ್ಯಲಾಗಿತ್ತು. ಪತ್ರಕರ್ತ ಜೊತೆ ಪಾಕಿಸ್ತಾನಿ ಸೇನೆಯ ವಕ್ತಾರ, ಲೆಫ್ಟಿನೆಂಟ್ ಜನರಲ್ ಅಸೀಂ ಬಾಜ್ವಾ ಅವರೂ ಇದ್ದರು. ಎಲ್‌ಒಸಿ ಸಮೀಪ ಇರುವ ಮಂಧೋಲ್‌ ಹಳ್ಳಿಯಲ್ಲಿ ಜನಜೀವನ ಸಹಜವಾಗಿತ್ತು. ಅಂಗಡಿಗಳು, ವಾಣಿಜ್ಯ ಕೇಂದ್ರಗಳಲ್ಲಿ ಚಟುವಟಿಕೆಗಳು ಸಹಜವಾಗಿದ್ದವು. ಮಕ್ಕಳು ಶಾಲೆಗೆ ಹೋಗುತ್ತಿದ್ದರು.

ಪಾಕೀಸ್ತಾನದ ಎಸ್.ಪಿ ಸಂಭಾಷಣೆ (ಫಬ್ಲಿಕ್ ಟಿವಿ.)

  • ಯಾವುದೇ ರೀತಿ ಸೀಮಿತ ದಾಳಿ ನಡೆದಿಲ್ಲ ಎಂದು ನವಾಜ್ ಷರೀಫ್ ಹೇಳಿದ್ದಾರೆ. ಸೆಪ್ಟೆಂಬರ್ 29 ರಂದು ಸೀಮಿತ ದಾಳಿ ನಡೆದಿದ್ದು ನಿಜ ಎಂದು ಪಿಒಕೆಯ ಹಿರಿಯ ಪೊಲೀಸ್ ಅಧಿಕಾರಿ ಖಾಸಗಿ ಸುದ್ದಿ ವಾಹಿನಿ ನಡೆಸಿದ 'ಸ್ಟಿಂಗ್ ಆಪರೇಷನ್'ನಲ್ಲಿ ಬಾಯ್ಬಿಟ್ಟಿದ್ದಾರೆ.[೩]
  • ಮಿರ್‍ಪುರ್ ಗುಪ್ತಚರ ವಿಭಾಗದ ಎಸ್‍ಪಿ ಗುಲಾಂ – ನೀವು ಕೇಳ್ತಿರೋದು 29ನೇ ತಾರೀಖಿನಂದು ನಡೆದ ಸರ್ಜಿಕಲ್ ದಾಳಿ ಬಗ್ಗೇನಾ..? ಅದರಲ್ಲಿ ನಮ್ಮವರು ಮೂವರು ಸಾವನ್ನಪ್ಪಿದ್ದಾರೆ. ಅದನ್ನ ಅಲ್ಲಿನ ಸ್ಥಳೀಯ (ಸೈನ್ಯ) ಅಧಿಕಾರಿಗಳು ಬಹಿರಂಗಪಡಿಸಿಲ್ಲ.
  • ವರದಿಗಾರ – ಆದರೆ 30-40 ಮಂದಿ ಸಾವನ್ನಪ್ಪಿದ್ದಾರೆ ಎಂದು ಆ ಕಡೆಯಿಂದ ಭಾರತದವರು ಹೇಳುತ್ತಿದ್ದರಲ್ವಾ..?
  • ಎಸ್‍ಪಿ ಗುಲಾಂ – ಹೌದು. ಅವರು ಜಾಸ್ತಿ ಸಂಖ್ಯೆ ಹೇಳುತ್ತಿದ್ದಾರೆ. ದೊಡ್ಡ ನಾಶ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಸರ್ಜಿಕಲ್ ಸ್ಟ್ರೈಕ್‍ನಿಂದ ಹಾಗಿರೋ ಹಾನಿ ಅಷ್ಟೇನು ದೊಡ್ಡದಲ್ಲ ಸರ್.. ಆದರೆ ಭಾರತದವರು ಅಂದು ರಾತ್ರಿ ಗಡಿಯನ್ನು ಒಳನುಗ್ಗಿ ಬಂದಿದ್ದಾರೆ.ಸರ್ ಸ್ಥಳೀಯರು ಯಾರು ಸತ್ತಿಲ್ಲ.ಸರ್ ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಒಟ್ಟು 12 ಮಂದಿಯಷ್ಟು ಸಾವನ್ನಪ್ಪಿದ್ದಾರೆ. ನಮ್ಮ ಪ್ರಕಾರ 12 ಮಂದಿ. ಜಿಹಾದಿಗಳೇ ಸತ್ತಿರೋ ಸಾಧ್ಯತೆ ಹೆಚ್ಚು.

ಹಿಂದೆಯೂ ನೆಡೆದಿತ್ತು

  • ಇದೇ ಮೊದಲಬಾರಿ ನಿರ್ಧಿಷ್ಟ ಧಾಳಿ ನಡಸಿದ್ದು ಎಂದೂ, ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಿರ್ದಿಷ್ಟ ದಾಳಿ ನಡೆಸಲು ಆದೇಶ ನೀಡುವುದರ ಹಿಂದೆ ‘ಆರ್‌ಎಸ್‌ಎಸ್‌ನ ಬೋಧನೆಗಳು’ ಪ್ರೇರಣೆಯಾಗಿರುವ ಸಾಧ್ಯತೆಗಳಿವೆ ಎಂಬ ಸೂಚನೆಯನ್ನು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ನೀಡಿದರು. ‘ಮಹಾತ್ಮ ಗಾಂಧಿಯ ನಾಡಿನಿಂದ ಬಂದ ಪ್ರಧಾನಿ, ನಿರ್ದಿಷ್ಟ ದಾಳಿಯನ್ನು ಎಂದೂ ನೋಡದ ಗೋವಾದ ನಾನು ರಕ್ಷಣಾ ಸಚಿವ... ಈ ಇಬ್ಬರು ಸೇರಿಕೊಂಡಾಗ ನಿರ್ದಿಷ್ಟ ದಾಳಿ ನಡೆದಿದೆ. ಎಂದು ಮನೋಹರ ಪರಿಕ್ಕರ್, ರಕ್ಷಣಾ ಸಚಿವ ಹೇಳಿದರು.
  • ನವದೆಹಲಿ: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಶಿಬಿರಗಳ ಮೇಲೆ ಸೆ. 29ರಂದು ಸೇನೆ ನಡೆಸಿದ್ದು ಮೊದಲ ನಿರ್ದಿಷ್ಟ ದಾಳಿಯೇ? ಅಲ್ಲ ಎನ್ನುವ ಅಭಿಪ್ರಾಯವನ್ನು ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈಶಂಕರ್‌ ಅವರು ವಿದೇಶಾಂಗ ವ್ಯವಹಾರಗಳ ಸಂಸತ್‌ ಸ್ಥಾಯಿ ಸಮಿತಿಯ ಮುಂದೆ ವ್ಯಕ್ತಪಡಿಸಿದ್ದಾರೆ. ‘ಭಯೋತ್ಪಾದನೆಯ ವಿರುದ್ಧ ಸೇನೆಯು ವೃತ್ತಿಪರ, ಗುರಿ ನಿರ್ದಿಷ್ಟ, ಸೀಮಿತ ಮತ್ತು ಕರಾರುವಾಕ್‌ ಲೆಕ್ಕಾಚಾರದ ದಾಳಿಯನ್ನು ಹಿಂದೆಯೂ ನಡೆಸಿತ್ತು’ ಎಂದು ಜೈಶಂಕರ್‌ ಹೇಳಿದ್ದಾರೆ.

ಧಾಳಿ ಪ್ರತಿಧಾಳಿ

  • 28 Oct, 2016
  • ಇಲ್ಲಿಯವರೆಗೆ ಜಮ್ಮು ಕಾಶ್ಮೀರದ ಅಂತರರಾಷ್ಟ್ರೀಯ ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿದ 15 ಪಾಕ್ ರೇಂಜರ್‍‍ಗಳನ್ನು ಹತ್ಯೆ ಮಾಡಿದ್ದೇವೆ ಎಂದು ಗಡಿ ರಕ್ಷಣಾ ದಳ ಶುಕ್ರವಾರ ಹೇಳಿದೆ. ೨೭ ರಂದು ಅರ್ನಿಯಾ ವಲಯದಲ್ಲಿ ಬಿಎಸ್‌ಎಫ್‌ ಯೋಧರು ನಡೆಸಿದ ಪ್ರತಿದಾಳಿಗೆ ಪಾಕಿಸ್ತಾನದ ಒಬ್ಬ ರೇಂಜರ್‌ ಸಾವನ್ನಪ್ಪಿದ್ದನು. ಈ ದಾಳಿಯಲ್ಲಿ ಓರ್ವ ಬಿಎಸ್‍ಎಫ್ ಯೋಧ ಹತನಾಗಿದ್ದು, 13 ನಾಗರಿಕರಿಗೆ ಗಾಯಗಳಾಗಿತ್ತು.
  • ಸೆಪ್ಟೆಂಬರ್ 28-29 ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಿರ್ದಿಷ್ಟ ದಾಳಿ ನಡೆಸಿದ ನಂತರ ಪಾಕಿಸ್ತಾನದಿಂದ ನಡೆದ ಅಪ್ರಚೋದಿತ ದಾಳಿಯಲ್ಲಿ 5 ಭಾರತೀಯರು ಹತ್ಯೆಯಾಗಿದ್ದು, 34 ಮಂದಿಗೆ ಗಾಯಗಳಾಗಿತ್ತು. ಅಕ್ಟೋಬರ್ 21 ರಂದು ಕಥುವಾ ಪ್ರದೇಶದ ಹಿರಾನಗರದಲ್ಲಿ ಬಿಎಸ್‍ಎಫ್ 7 ಪಾಕಿಸ್ತಾನಿ ರೇಂಜರ್‍‍ಗಳನ್ನು ಮತ್ತು ಓರ್ವ ಉಗ್ರನನ್ನು ಹತ್ಯೆಗೈದಿತ್ತು. ಅಕ್ಟೋಬರ್ 25 ರಂದು ರಜೌರಿ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಇಬ್ಬರು ಅಥವಾ ಮೂವರು ಪಾಕಿಸ್ತಾನಿ ಯೋಧರು ಹತ್ಯೆಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಪಾಕಿಸ್ತಾನ ಶುಕ್ರವಾರವೂ ಅಂತರರಾಷ್ಟ್ರೀಯ ಗಡಿಭಾಗದಲ್ಲಿ ಅಪ್ರಚೋದಿತ ದಾಳಿ ನಡೆಸಿದೆ.

ಇಸ್ಲಾಮಾಬಾದ್‍ನಿಂದ ಹೇಳಿಕೆ:28 Oct, 2016: ಇಲ್ಲಿಯವರೆ ಜಮ್ಮು ಕಾಶ್ಮೀರದ ಅಂತರರಾಷ್ಟ್ರೀಯ ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿದ 15 ಪಾಕ್ ರೇಂಜರ್‍‍ಗಳನ್ನು ಹತ್ಯೆ ಮಾಡಿದ್ದೇವೆ ಎಂಬ ಬಿಎಸ್‍ಎಫ್ ಹೇಳಿಕೆಗೆ ನಮ್ಮ ಯೋಧರು ಹತ್ಯೆಯಾಗಿಲ್ಲ ಎಂದು ಪಾಕ್ ಸೇನೆ ಪ್ರತಿಕ್ರಿಯಿಸಿದೆ.(ಕದನ ವಿರಾಮ ಉಲ್ಲಂಘಿಸಿದ 15 ಪಾಕ್ ರೇಂಜರ್‍ಗಳನ್ನು ಹತ್ಯೆ ಮಾಡಿದ್ದೇವೆ: ಬಿಎಸ್‍ಎಫ್)

ಅಭಿಪ್ರಾಯ - ಸಲಹೆ

ಹೆಚ್ಚಿನ ಓದು

ನೋಡಿ

ಆಭಿಪ್ರಾಯಗಳು

ಉಲ್ಲೇಖ

Tags:

ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ 2016 ರ ಉರಿ ದಾಳಿಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಪಾಕಿಸ್ತಾನದತ್ತ ಬೆರಳುಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಪ್ರಧಾನಿ ಮೋದಿ ಸಭೆಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಮುನ್ನೆಚ್ಚರಿಕೆಯ ಅಗಣನೆ?ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ನಾಲ್ವರು ಉಗ್ರರು ಲಷ್ಕರ್‌–ಎ–ತಯಬಾ ಸಂಘಟನೆಗೆ ಸೇರಿದವರುಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಪಾಕಿಸ್ತಾನದ ಪ್ರತಿಕ್ರಿಯೆಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಭಾರತದಲ್ಲಿ ಭಯೋತ್ಪಾದಕ ಧಾಳಿಗಳುಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಅಭಿಪ್ರಾಯಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಕಾಶ್ಮೀರ ಭಯೋತ್ಪಾದನೆ ಮತ್ತು ಸಾವುಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಭಯೊತ್ಪಾದಕ ಧಾಳಿಯಲ್ಲಿ ಹಾನಿಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಪುರಾವೆ ಪಾಕಿಸ್ತಾನಕ್ಕೆ ಹಸ್ತಾಂತರಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಪಾಕಿಸ್ತಾನದ ಪ್ರತಿಕ್ರಿಯೆಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ವಿಶ್ವಸಂಸ್ಥೆಯಲ್ಲಿಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ದಾಳಿ ಗಡಿಯಾಚಿನಿಂದ ಪುರಾವೆಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಸಿಂಧೂ ನೀರಿನ ಒಪ್ಪಂದ ಪನರ್ವಿಮರ್ಶೆಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಸರ್ಜಿಕಲ್ ಕಾರ್ಯಾಚರಣೆಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ‘ಉರಿ’ ದಾಳಿಗೆ ಪ್ರತೀಕಾರಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಪಾಕೀಸ್ತಾನದ ಎಸ್.ಪಿ ಸಂಭಾಷಣೆ (ಫಬ್ಲಿಕ್ ಟಿವಿ.)ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಹಿಂದೆಯೂ ನೆಡೆದಿತ್ತುಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಧಾಳಿ ಪ್ರತಿಧಾಳಿಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಅಭಿಪ್ರಾಯ - ಸಲಹೆಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಹೆಚ್ಚಿನ ಓದುಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ನೋಡಿಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಆಭಿಪ್ರಾಯಗಳುಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಉಲ್ಲೇಖಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬

🔥 Trending searches on Wiki ಕನ್ನಡ:

ಕೈವಾರ ತಾತಯ್ಯ ಯೋಗಿನಾರೇಯಣರುಕರ್ಬೂಜರುಕ್ಮಾಬಾಯಿಸೌರಮಂಡಲಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಮಾರಿಕಾಂಬಾ ದೇವಸ್ಥಾನ (ಸಾಗರ)ಸಿರ್ಸಿಹಲ್ಮಿಡಿ ಶಾಸನಕನ್ನಡ ಗುಣಿತಾಕ್ಷರಗಳುಆದೇಶ ಸಂಧಿನೀರಾವರಿರಚಿತಾ ರಾಮ್ಫ್ರೆಂಚ್ ಕ್ರಾಂತಿಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಕನ್ನಡ ಸಾಹಿತ್ಯ ಪರಿಷತ್ತುಇಮ್ಮಡಿ ಪುಲಿಕೇಶಿವಿಜಯನಗರಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಜಾತ್ರೆಹಸಿರು ಕ್ರಾಂತಿಭಾರತದ ರಾಷ್ಟ್ರಗೀತೆಏಲಕ್ಕಿಯು.ಆರ್.ಅನಂತಮೂರ್ತಿಜಿ.ಪಿ.ರಾಜರತ್ನಂಮೋಕ್ಷಗುಂಡಂ ವಿಶ್ವೇಶ್ವರಯ್ಯರಕ್ತಲಿಯೊನೆಲ್‌ ಮೆಸ್ಸಿಎಂ. ಎಸ್. ಸ್ವಾಮಿನಾಥನ್ಶಾಲಿವಾಹನ ಶಕೆಬಂಡಾಯ ಸಾಹಿತ್ಯಪ್ಯಾರಾಸಿಟಮಾಲ್ಕನ್ನಡ ವ್ಯಾಕರಣದ್ರೌಪದಿಪ್ರವಾಸೋದ್ಯಮಮದುವೆಕುಡಿಯುವ ನೀರುಸರ್ವಜ್ಞತಾಳೀಕೋಟೆಯ ಯುದ್ಧಶ್ರವಣಾತೀತ ತರಂಗಸಂಯುಕ್ತ ರಾಷ್ಟ್ರ ಸಂಸ್ಥೆಭಾರತೀಯ ನಾಗರಿಕ ಸೇವೆಗಳುಜೀವಕೋಶಬಾಲ್ಯ ವಿವಾಹಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಜಾಗತೀಕರಣದೂರದರ್ಶನಆರ್ಥಿಕ ಬೆಳೆವಣಿಗೆಪರಿಸರ ರಕ್ಷಣೆಜಾನಪದಕೇಂದ್ರಾಡಳಿತ ಪ್ರದೇಶಗಳುಮಾನವನ ಪಚನ ವ್ಯವಸ್ಥೆಸಿದ್ದಲಿಂಗಯ್ಯ (ಕವಿ)ಭಾರತದ ಸರ್ವೋಚ್ಛ ನ್ಯಾಯಾಲಯಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಟಿಪ್ಪು ಸುಲ್ತಾನ್ಸಹಕಾರಿ ಸಂಘಗಳುಆಹಾರ ಸಂರಕ್ಷಣೆಗೌತಮ ಬುದ್ಧಭಾರತೀಯ ಕಾವ್ಯ ಮೀಮಾಂಸೆಅಶೋಕನ ಶಾಸನಗಳುಆಟಧರ್ಮಸ್ಥಳಕೈಗಾರಿಕೆಗಳುಬೌದ್ಧ ಧರ್ಮಬ್ಯಾಂಕ್ನುಡಿಗಟ್ಟುದುರ್ವಿನೀತಕಬಡ್ಡಿವಾಣಿಜ್ಯ ಪತ್ರಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಇಸ್ಲಾಂ ಧರ್ಮರಾಮಅ.ನ.ಕೃಷ್ಣರಾಯಹೋಳಿಭಾರತದ ಇತಿಹಾಸಚಾರ್ಲ್ಸ್‌‌ ಮ್ಯಾನ್ಸನ್‌‌‌ಸಾವಿತ್ರಿಬಾಯಿ ಫುಲೆ🡆 More