ಉಗಿಯಂತ್ರ

ಉಗಿಯಂತ್ರ (ಉಗಿಎಂಜಿನ್): ಉಗಿಯಲ್ಲಿರುವ ಉಷ್ಣಶಕ್ತಿಯನ್ನು ಯಾಂತ್ರಿಕಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ (ಸ್ಟೀಂ ಎಂಜಿನ್).

ಇದರ ಪ್ರಮುಖ ಬಿಡಿಭಾಗಗಳು ಉರುಳೆ (ಸಿಲಿಂಡರ್) ಮತ್ತು ಅದರೊಳಗೆ ಹಿಂದಕ್ಕೂ ಮುಂದಕ್ಕೂ ಚಲಿಸುವ ಒಂದು ಆಡುಬೆಣೆ ಕೊಂತ (ಪಿಸ್ಟನ್). ಈ ಹಿಂದು-ಮುಂದು ವಿಚ್ಛಿನ್ನ ಚಲನೆಯನ್ನು ವೃತ್ತಾಕಾರದ ಅವಿಚ್ಛಿನ್ನ ಚಲನೆಯನ್ನಾಗಿ ಮಾರ್ಪಡಿಸಲು ಆಡುಬೆಣೆಯ ದಂಡವನ್ನು ವೃತ್ತಾಕಾರದಲ್ಲಿ ತಿರುಗುವ ಒಂದು ಗಾಲಿಯ ಮಗ್ಗುಲಿಗೆ ವಕ್ರದಂಡದ (ಕ್ರಾಂಕ್ ಷಾಪ್ಟ್‌) ಸಹಾಯದಿಂದ ಜೋಡಿಸಿದೆ. ಇನ್ನು ಆಡುಬೆಣೆಯ ಮೇಲೆ ಪತನವಾಗುವ ಸಂಮರ್ದ ಸಮಪ್ರಮಾಣದಲ್ಲಿ ಇರುವುದಿಲ್ಲವಾದ್ದರಿಂದ ಅದರ ಹಿಂದು-ಮುಂದು ಚಲನೆಯಲ್ಲಿ ತತ್ಪರಿಣಾಮವಾಗಿ ಗಾಲಿಯ ವೃತ್ತಾಕಾರದ ಚಲನೆಯಲ್ಲಿ ಏರಿಳಿತಗಳು ತಲೆದೋರುತ್ತವೆ. ಎಂದರೆ ಗಾಲಿಯ ಚಲನೆ ಒಂದು ನಿಯತ ದರದಲ್ಲಿ ಇರುವುದಿಲ್ಲ. ಇದನ್ನೇ ನಿಯಂತ್ರಿಸಿ, ಗಾಲಿಯ ಉರುಳಾಟವನ್ನು ಸಮವೇಗದಲ್ಲಿಡಲು ಒಂದು ಗತಿನಿಯಂತ್ರಕ ಗಾಲಿಯನ್ನು (ಫ್ಲೈವೀಲ್) ಯಂತ್ರಕ್ಕೆ ಅಳವಡಿಸಿದೆ. ಗರಿಷ್ಠ ಸಂಮರ್ದದಲ್ಲಿರುವ ಉಗಿಯನ್ನು ಉರುಳೆಯೊಳಗೆ ಬಿಡಲು ಮತ್ತು ಕಾರ್ಯವೆಸಗಿದ ಉಗಿಯನ್ನು ಹೊರಹಾಕಲು ಒಂದೊಂದು ಕವಾಟ ಇದೆ. ಉಗಿ ಯಂತ್ರಗಳನ್ನು ಏಕಮಾರ್ಗ-ಅಥವಾ-ದ್ವಿಮಾರ್ಗ-ಕ್ರಿಯೆಯ (ಸಿಂಗಲ್-ಆರ್ ಡಬಲ್-ಆ್ಯಕ್ಟಿಂಗ್) ರೀತಿಯವೆಂದೂ ಹಾರಿಜ ಅಥವಾ ಲಂಬ (ಹಾರಿಸಾಂಟಲ್ ಆರ್ ವರ್ಟಿಕಲ್) ರೀತಿಯವೆಂದೂ ಸ್ಥೂಲವಾಗಿ ವಿಂಗಡಿಸಬಹುದು. ಅವು ಪುರೈಸುವ ಉದ್ದೇಶವನ್ನು ಅನುಸರಿಸಿಯೂ ಉಗಿಯಂತ್ರಗಳ ವಿಂಗಡಣೆ ಮಾಡುವುದಿದೆ. ಶಕ್ತಿ ಉತ್ಪಾದನಯಂತ್ರಗಳಲ್ಲಿ ಮೊದಲಿನದಾದ ಉಗಿಯಂತ್ರ ಇಂದಿಗೂ ಅತ್ಯಂತ ವಿಶ್ವಾಸಾರ್ಹವಾದ ಮತ್ತು ಸರಳವಾದ ಏಕೈಕ ಯಂತ್ರ. ಅಂತರ್ದಹನ, ಉಗಿತಿರುಬಾನಿ ಮುಂತಾದ ಯಂತ್ರಗಳ ಉದಯದಿಂದ ಉಗಿಯಂತ್ರದ ಬಳಕೆ ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೆ ಅಗ್ಗದ ಉರುವಲು ಲಭಿಸುವಲ್ಲಿ ಉಗಿ ಯಂತ್ರವೇ ಹೆಚ್ಚು ಉಪಯುಕ್ತ ಮತ್ತು ಲಾಭದಾಯಕ. (ಎಚ್.ಎಲ್.ಕೆ.)

ಉಗಿಯಂತ್ರ
ಉಗಿಯಂತ್ರ
ಉಗಿಯಂತ್ರ
ಉಗಿಯಂತ್ರ2

Tags:

ಶಕ್ತಿ

🔥 Trending searches on Wiki ಕನ್ನಡ:

ಸೂರ್ಯ (ದೇವ)ರನ್ನಛಂದಸ್ಸುಶ್ರೀನಿವಾಸ ರಾಮಾನುಜನ್ಸಂಗ್ಯಾ ಬಾಳ್ಯಾ(ನಾಟಕ)ಬ್ಲಾಗ್ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಕವಿಕಾರ್ಮಿಕರ ದಿನಾಚರಣೆಹನುಮ ಜಯಂತಿಕರ್ನಾಟಕ ಲೋಕಸೇವಾ ಆಯೋಗಜೀವಕೋಶಗೂಗಲ್ಕೊಪ್ಪಳಸರ್ಪ ಸುತ್ತುಧರ್ಮರಾಯ ಸ್ವಾಮಿ ದೇವಸ್ಥಾನಮಿಲಾನ್ವಿಮರ್ಶೆಹಾವಿನ ಹೆಡೆಕನ್ನಡ ಸಾಹಿತ್ಯ ಪ್ರಕಾರಗಳುರೈತವೀರಗಾಸೆಸೀತಾ ರಾಮಕೃಷ್ಣರಾಜಸಾಗರವ್ಯವಸಾಯಕ್ಯಾನ್ಸರ್ಭಾರತೀಯ ಧರ್ಮಗಳುಚಾಣಕ್ಯಭಗತ್ ಸಿಂಗ್ಭಾರತದಲ್ಲಿ ಮೀಸಲಾತಿವಿಷ್ಣುಗೂಬೆಮಹಾವೀರಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಬಯಲಾಟಚದುರಂಗದ ನಿಯಮಗಳುತೆಲಂಗಾಣಕರ್ನಾಟಕದಲ್ಲಿ ಪಂಚಾಯತ್ ರಾಜ್ವಿದ್ಯಾರಣ್ಯಕಾಳಿದಾಸಶಬರಿವಾಸ್ತುಶಾಸ್ತ್ರಚಂದ್ರಶೇಖರ ಕಂಬಾರಬಹುವ್ರೀಹಿ ಸಮಾಸಪ್ರಿನ್ಸ್ (ಚಲನಚಿತ್ರ)ರೇಡಿಯೋಭಾರತದ ಸಂವಿಧಾನದ ೩೭೦ನೇ ವಿಧಿಸಂಯುಕ್ತ ಕರ್ನಾಟಕರಾಷ್ಟ್ರೀಯ ಶಿಕ್ಷಣ ನೀತಿಮುದ್ದಣನುಗ್ಗೆಕಾಯಿಕನ್ನಡದಲ್ಲಿ ಮಹಿಳಾ ಸಾಹಿತ್ಯಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಬಾದಾಮಿ ಶಾಸನಗಾಂಧಿ- ಇರ್ವಿನ್ ಒಪ್ಪಂದಮಾನವ ಸಂಪನ್ಮೂಲ ನಿರ್ವಹಣೆರೇಣುಕಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಶ್ಯೆಕ್ಷಣಿಕ ತಂತ್ರಜ್ಞಾನಬಿಳಿ ರಕ್ತ ಕಣಗಳುರಂಗಭೂಮಿರಾಯಲ್ ಚಾಲೆಂಜರ್ಸ್ ಬೆಂಗಳೂರುಬಿ. ಶ್ರೀರಾಮುಲುಭಾರತದಲ್ಲಿನ ಜಾತಿ ಪದ್ದತಿಕಿತ್ತೂರು ಚೆನ್ನಮ್ಮಪರಿಣಾಮಕರ್ಮ1935ರ ಭಾರತ ಸರ್ಕಾರ ಕಾಯಿದೆಗುರುರಾಜ ಕರಜಗಿವಿನಾಯಕ ಕೃಷ್ಣ ಗೋಕಾಕಅನುರಾಗ ಅರಳಿತು (ಚಲನಚಿತ್ರ)ಆನೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಅಲಂಕಾರಕೇಶಿರಾಜಪಾಂಡವರುಕುತುಬ್ ಮಿನಾರ್🡆 More