ಇ. ಎಸ್. ವೆಂಕಟರಾಮಯ್ಯ

ಈ ಎಸ್ ವೆಂಕಟರಾಮಯ್ಯ ಎಂದೇ ಖ್ಯಾತರಾದ ಎಂಗಲಗುಪ್ಪೆ ಸೀತಾರಾಮಯ್ಯ ವೆಂಕಟರಾಮಯ್ಯ, ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾದ ಮೊದಲ ಕನ್ನಡಿಗರು.

ಅವರ ವೃತ್ತಿ ಜೀವನ ಇಂತಿದೆ.

ಹುಟ್ಟು

೧೮-೧೨-೧೯೨೪

ಶಿಕ್ಷಣ

ಸರ್ಕಾರಿ ಶಾಲೆ, ಪಾಂಡವಪುರ, (ಮಂಡ್ಯ ಜಿಲ್ಲೆ)
ಡಿ. ಬನುಮಯ್ಯ ಕಾಲೇಜು, ಮೈಸೂರು
ಮಹಾರಾಜಾ ಕಾಲೇಜು, ಮೈಸೂರು
ಸರ್ಕಾರಿ ಕಾನೂನು ಕಾಲೇಜು, ಪುಣೆ, ಮಹಾರಾಷ್ಟ್ರ
ರಾಜಾ ಲಖಮಗೌಡ ಕಾನೂನು ಕಾಲೇಜು, ಬೆಳಗಾವಿ

ವಕೀಲಿ ವೃತ್ತಿ


ಪ್ಲೀಡರ್, ಬೆಂಗಳೂರು ಡಿವಿಷನ್: ೨-೬-೧೯೪೬ - ೫-೧-೧೯೪೮
ಹೈಕೋರ್ಟ್ ವಕೀಲ: ೧೯೪೮-೧೯೬೯
ವಿಶೇಷ ಸರ್ಕಾರಿ ಪ್ಲೀಡರ್: ೫-೬-೧೯೬೯ - ೪-೩-೧೯೭೦
ಅಡ್ವೋಕೇಟ್ ಜನರಲ್: ೫-೩-೧೯೭೦ - ೨೫-೬-೧೯೭೦
ಹೆಚ್ಚುವರಿ ನ್ಯಾಯಮೂರ್ತಿ, ಕರ್ನಾಟಕ ಉಚ್ಚ ನ್ಯಾಯಾಲಯ: ೨೫-೬-೧೯೭೦ - ೧೯-೧೧-೧೯೭೦ ನ್ಯಾಯಮೂರ್ತಿ, ಕರ್ನಾಟಕ ಉಚ್ಚ ನ್ಯಾಯಾಲಯ: ೨೦-೧೧-೧೯೭೦ - ೭-೩-೧೯೭೯
ನ್ಯಾಯಮೂರ್ತಿ, ಭಾರತದ ಸರ್ವೋಚ್ಛ ನ್ಯಾಯಾಲಯ: ೮-೩-೧೯೭೯ - ೧೮-೬-೧೯೮೯
ಮುಖ್ಯ ನ್ಯಾಯಮೂರ್ತಿ, ಭಾರತದ ಸರ್ವೋಚ್ಛ ನ್ಯಾಯಾಲಯ:೧೯-೬-೧೯೮೯ - ೧೭-೧೨-೧೯೮೯

ವಕೀಲರಾಗಿ ಜನಪ್ರಿಯ ಕೇಸುಗಳು

  • ರಾಜ್ಯ ವಿಮಾ ಕಂಪನಿ ವಿರುದ್ಧ ನಾರಾಯಣಸ್ವಾಮಿ ಮತ್ತು ಸನ್ಸ್ ಗಾಗಿ ೧೯೬೮ರ ಕೇಸು

ನ್ಯಾಯಮೂರ್ತಿಯಾಗಿ ತೀರ್ಪುಗಳು

  • ತಮಿಳುನಾಡು ಸರ್ಕಾರದ ಹಿಂದುಳಿದ ವರ್ಗಗಳಿಗೆ ವಿಶೇಷ ಮೀಸಲಾತಿ ಎತ್ತಿ ಹಿಡಿದ ತೀರ್ಪು. ಈ ತೀರ್ಪಿನಲ್ಲಿ "result-oriented discrimination" ಅರ್ಥಾತ್ "ಫಲಿತಾಂಶ ಆಧರಿಸಿದ ಮೀಸಲಾತಿ" ನೀಡುವುದು ಉಚಿತ ಎಂದು ಘೋಷಿಸಿದರು.
  • ಭೋಪಾಲದ ಅನಿಲ ದುರಂತದಲ್ಲಿ ಮಡಿದ ದುರ್ದೈವಿಗಳಿಗೆ ೭೧೫ ಕೋಟಿ ರೂಫಾಯಿ ಪರಿಹಾರ ನೀಡುವಂತೆ ನೀಡಿದ ಆದೇಶ
  • ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಪ್ರೋತ್ಸಾಹಿಸಿದ ಮೊದಲಿಗರಲ್ಲಿ ವೆಂಕಟರಾಮಯ್ಯ ಒಬ್ಬರು.
  • ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ಮೊಕದ್ದಮೆಗಳ ಬಗ್ಗೆ ಸ್ಪಷ್ಟ ದನಿಯಲ್ಲಿ ೧೯೮೭ರಲ್ಲಿ ವೆಂಕಟರಾಮಯ್ಯ ಕಟು ಸತ್ಯ ಹೇಳಿದ್ದರು. "ಯಾವುದೇ ಹೊಸ ಮೊಕದ್ದಮೆ ತೆಗೆದುಕೊಳ್ಲದೆಯೇ, ಕೇವಲ ಈಗ ಬಾಕಿ ಮೊಕದಮೆಗಳನ್ನು ಇತ್ಯರ್ಥ ಮಾಡಲು ಸುಮಾರು ೧೫ ವರ್ಷ ಬೇಕಾಗಬಹುದು" ಎಂದು ಹೇಳಿದ್ದು ದೊಡ್ಡ ವಿವಾದ ಉಂಟು ಮಾಡಿತ್ತು. ಯಾರನ್ನೂ ಓಲೈಸಲು ಒಲ್ಲದ ಮತ್ತು ನಿಜ ಮುಚ್ಚಿಡದ ವೆಂಕಟರಾಮಯ್ಯನವರ ನೇರ ವ್ಯಕ್ತಿತ್ವ ಅವರ ಬದುಕಿನ ಹೆಚ್ಚುಗಾರಿಕೆ.
  • ಕಿರಣ್ ಬೇಡಿ ತೀಸ್ ಹಜ಼ಾರಿ ಕೋರ್ಟ್ ಆಂಗಣದಲ್ಲಿ ವಕೀಲರ ಮೇಲೆ ಲಾಠಿ ಚಾರ್ಜ್ ಮಾಡಲು ಆದೇಶವಿತ್ತು, ಅದರ ವಿಚಾರಣಾಧೀನ ಮಂಡಳಿ ಕಿರಣ್ ಬೇಡಿರಿಗೆ ಆರೋಪದಿಂದ ವಿಮುಕ್ತಿ ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಕಿರಣ್ ಬೇಡಿ ಸರ್ವೋಚ್ಛ ನ್ಯಾಯಾಲಯದಲ್ಲಿ ಖಟ್ಲೆ ಹೂಡಿದರು. ವೆಂಕಟರಾಮಯ್ಯ, ಎಂ ಎಂ ದತ್ ಮತ್ತು ಜಿ ಎಲ್ ಒಜ಼ಾ ರ ಬೆಂಚ್ ನಲ್ಲಿ ದೆಹಲಿ ಪೋಲಿಸರ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಜಿ ರಾಮಸ್ವಾಮಿ ಮತ್ತು ವಕೀಲರ ಪರ ಕೆ ಕೆ ವೇಣುಗೋಪಾಲ್ ವಾದ ಮಾಡಿದರು. ವೆಂಕಟರಾಮಯ್ಯರ ನೇತೃತ್ವದ ಬೆಂಚ್ ಕಿರಣ್ ಬೇಡಿ ಪರ ಆದೇಶವಿತ್ತಿತು . ಇದನ್ನು ಹಲವು ಬಗೆಯಲ್ಲಿ ಪ್ರಶ್ನಿಸಲಾಯಿತು. ದೆಹಲಿ ವಕೀಲರು ೪೮ ಘಂಟೆ ಧರಣಿ ನಡೆಸಿ, ವೆಂಕಟರಾಮಯ್ಯರ ವಿರುದ್ಧ ಕೇಸು ಹಾಕಲು ಹೋರಾಟ ನಡೆಸಿದರು. ಆದರೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳ ವಿರುದ್ಧ ರಾಷ್ಟ್ರಪತಿಗಳ ಅನುಮತಿ ಇಲ್ಲದೆ ಆರೋಪ ಮಾಡುವಂತಿಲ್ಲ. ವಿಚಾರಣಾಧೀನ ಮಂಡಳಿಯ ನ್ಯಾಯಾಧೀಶ ಎನ್ ಎನ್ ಗೋಸ್ವಾಮಿ ಮತ್ತು ನ್ಯಾಯಾಧೀಶ ಡಿ ಪಿ ವಾಧ್ವಾರ ಅರ್ಹತೆಯನ್ನು ಪ್ರಶ್ನಿಸಲಾಗಿದೆ ಎಂಬ ಆರೋಪ ಬಂದಾಗ, ವೆಂಕಟರಾಮಯ್ಯ ಮುಕ್ತ ಮನಸ್ಸಿನಿಂದ ಗೋಸ್ವಾಮಿ ಮತ್ತು ವಾಧ್ವಾ ಇಬ್ಬರಿಗೂ ಕ್ಷಮಾಪಣೆ ಪತ್ರ ಬರೆದರು. ತಾವು ವಿಚಾರಣಾಧೀನ ಮಂಡಳಿಯ ತನಿಖೆ ಮತ್ತು ಕಿರಣ್ ಬೇಡಿರಿಗೆ ಆದ ಅನ್ಯಾಯದ ಬಗ್ಗೆ ಮಾತ್ರ ತೀರ್ಪು ಇತ್ತದ್ದಾಗಿಯೂ, ಮತ್ತು ಇನ್ಯಾವುದೇ ವಿಷಯ ತೀರ್ಪಿನಲ್ಲಿ ಅಡಕವಾಗಿಲ್ಲ ಎಂದು ಸ್ಪಷ್ಟ ಪಡಿಸಿದರು.

ವ್ಯಕ್ತಿತ್ವ

  1. ನೇರ ಮಾತುಗಾರಿಕೆ ವೆಂಕಟರಾಮಯ್ಯರ ಹಿರಿಮೆ. ಕುಲದೀಪ್ ನಯ್ಯರ್ರಿಗೆ ನೀಡಿದ ಸಂದರ್ಶನವೊಂದರಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟ ನ್ಯಾಯಮೂರ್ತಿಗಳು ಇರುವುದನ್ನು ಒಪ್ಪಿಕೊಂಡಿದ್ದರು.
  1. ನ್ಯಾ ವಿ ಎಸ್ ಮಳೀಮಠ ಮತ್ತು ನ್ಯಾ‌ ಕೆ ಜಗನ್ನಾಥ ಶೆಟ್ಟಿ, ಇವರಿಬ್ಬರೂ ಅನುಭವದಲ್ಲಿ ವೆಂಕಟರಾಮಯ್ಯರಿಗಿಂತಲೂ ಹಿರಿಯರಾಗಿದ್ದರೂ, ವೆಂಕಟರಾಮಯ್ಯರ ಪಾಂಡಿತ್ಯದ ಕಾರಣ ೧೯೭೯ರಲ್ಲಿ ಅವರನ್ನು ಸರ್ವೋಚ್ಛ ನ್ಯಾಯಾಲಯಕ್ಕೆ ನೇಮಕ ಮಾಡಲಾಯಿತು. ನ್ಯಾ ವಿ ಎಸ್ ಮಳೀಮಠರನ್ನು ನಂತರ ಸರ್ವೋಚ್ಛ ನ್ಯಾಯಾಲಯಕ್ಕೆ ಸೇರಲು ಆಹ್ವಾನವಿತ್ತರೂ, ತಮಗಿಂತ ಕಿರಿಯರಾದ ವೆಂಕಟರಾಮಯ್ಯರ ಉನ್ನತಿಗೆ ಅಡ್ಡಿಯಾಗಲಾರೆ ಎಂದು ಮಳೀಮಠರು ತಿರಸ್ಕರಿಸಿದರು.

ಇ. ಎಸ್. ವೆಂಕಟರಾಮಯ್ಯ

ಈ ಎಸ್ ವೆಂಕಟರಾಮಯ್ಯ ಎಂದೇ ಖ್ಯಾತರಾದ ಎಂಗಲಗುಪ್ಪೆ ಸೀತಾರಾಮಯ್ಯ ವೆಂಕಟರಾಮಯ್ಯ, ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾದ ಮೊದಲ ಕನ್ನಡಿಗರು.

Tags:

ಇ. ಎಸ್. ವೆಂಕಟರಾಮಯ್ಯ ಹುಟ್ಟುಇ. ಎಸ್. ವೆಂಕಟರಾಮಯ್ಯ ಶಿಕ್ಷಣಇ. ಎಸ್. ವೆಂಕಟರಾಮಯ್ಯ ವಕೀಲಿ ವೃತ್ತಿಇ. ಎಸ್. ವೆಂಕಟರಾಮಯ್ಯ ವಕೀಲರಾಗಿ ಜನಪ್ರಿಯ ಕೇಸುಗಳುಇ. ಎಸ್. ವೆಂಕಟರಾಮಯ್ಯ ನ್ಯಾಯಮೂರ್ತಿಯಾಗಿ ತೀರ್ಪುಗಳುಇ. ಎಸ್. ವೆಂಕಟರಾಮಯ್ಯ ವ್ಯಕ್ತಿತ್ವಇ. ಎಸ್. ವೆಂಕಟರಾಮಯ್ಯ ಬಾಹ್ಯ ಕೊಂಡಿಗಳುಇ. ಎಸ್. ವೆಂಕಟರಾಮಯ್ಯ

🔥 Trending searches on Wiki ಕನ್ನಡ:

ಬ್ಯಾಡ್ಮಿಂಟನ್‌ಡಿ.ಎಸ್.ಕರ್ಕಿಅಮೇರಿಕ ಸಂಯುಕ್ತ ಸಂಸ್ಥಾನದುರ್ಗಸಿಂಹಮುಖ್ಯ ಪುಟಒಂದನೆಯ ಮಹಾಯುದ್ಧಬ್ಯಾಬಿಲೋನ್ಕೇಂದ್ರ ಪಟ್ಟಿಶಾತವಾಹನರುಕನ್ನಡ ಸಂಧಿಸಾಮವೇದಅಶ್ವತ್ಥಮರವಿವಾಹಕ್ರಿಯಾಪದವಾಲಿಬಾಲ್ಜೈನ ಧರ್ಮಶಂಕರ್ ನಾಗ್ಆಕೃತಿ ವಿಜ್ಞಾನಭಾರತದ ರಾಷ್ಟ್ರೀಯ ಚಿನ್ಹೆಗಳುಮುಟ್ಟುರಾಘವಾಂಕಅಲಂಕಾರಗಾಂಧಿ ಮತ್ತು ಅಹಿಂಸೆಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರುಅಕ್ಕಮಹಾದೇವಿಶ್ರೀಶೈಲಅಲ್ಲಮ ಪ್ರಭುಕಂಪ್ಯೂಟರ್ಕಬಡ್ಡಿಹಸ್ತ ಮೈಥುನಹಿಪ್ಪಲಿಕೈಗಾರಿಕಾ ಕ್ರಾಂತಿಸಂಭೋಗರೇಡಿಯೋಕನ್ನಡ ಸಾಹಿತ್ಯ ಪ್ರಕಾರಗಳುಕನ್ನಡ ಛಂದಸ್ಸುಹಂಸಲೇಖಅರ್ಜುನಮೌರ್ಯ ಸಾಮ್ರಾಜ್ಯವಿಶ್ವ ಕನ್ನಡ ಸಮ್ಮೇಳನನದಿಮಲೈ ಮಹದೇಶ್ವರ ಬೆಟ್ಟಕಾರ್ಖಾನೆ ವ್ಯವಸ್ಥೆಪತ್ರನಂಜನಗೂಡುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಭಾರತದಲ್ಲಿ ಮೀಸಲಾತಿಎಚ್.ಎಸ್.ವೆಂಕಟೇಶಮೂರ್ತಿನಾಟಕಭಾರತದ ಮಾನವ ಹಕ್ಕುಗಳುಕೇಂದ್ರಾಡಳಿತ ಪ್ರದೇಶಗಳುಚದುರಂಗದ ನಿಯಮಗಳುವಿಜಯನಗರ ಸಾಮ್ರಾಜ್ಯಮರದೂರದರ್ಶನಜೀವಕೋಶರನ್ನಕೈವಾರ ತಾತಯ್ಯ ಯೋಗಿನಾರೇಯಣರುವೈದೇಹಿಕರ್ನಾಟಕ ಪೊಲೀಸ್ಮೂಲಧಾತುವಾಲ್ಮೀಕಿಕೂಡಲ ಸಂಗಮಶುಕ್ರಶಾಸನಗಳುಭಾರತದ ಸರ್ವೋಚ್ಛ ನ್ಯಾಯಾಲಯಸೀತೆಆದೇಶ ಸಂಧಿಚಂದ್ರಗುಪ್ತ ಮೌರ್ಯಹನುಮಾನ್ ಚಾಲೀಸಜನಪದ ಕರಕುಶಲ ಕಲೆಗಳುಮುದ್ದಣಕರ್ನಾಟಕ ಸ್ವಾತಂತ್ರ್ಯ ಚಳವಳಿಜಲ ಮಾಲಿನ್ಯದಯಾನಂದ ಸರಸ್ವತಿಪಂಪಇಂಡಿ ವಿಧಾನಸಭಾ ಕ್ಷೇತ್ರಮಾರ್ಟಿನ್ ಲೂಥರ್ ಕಿಂಗ್🡆 More