ಇಲ್ಹಮ್ ಅಲಿಯೇವ್

ಇಲ್ಹಾಂ ಅಲಿಯೇವ್ ರವರು ಅಜರ್ ಬೈಜಾನ್ ದೇಶದ ಪ್ರಮುಖ ರಾಜಕಾರಣಿ.

ಪ್ರಸಕ್ತ ೨೦೦೩ರಿಂದ , ಶ್ರೀಯುತರು ಅಜರ್ ಬೈಜಾನ್ ದೇಶದ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇಲ್ಹಮ್ ಅಲಿಯೇವ್

ಜನನ

೨೪ ಡಿಸೆಂಬರ್ ೧೯೬೧ರಂದು ಬಾಕು ನಲ್ಲಿ ಜನಿಸಿದ ಶ್ರೀಯುತರು, ರಾಜಕಾರಣಿಗಳ ಕುಟುಂಬದಲ್ಲಿ ಜನಿಸಿದರು. ತಾತ ಅಜೀಜ್ ಅಲಿಯೇವ್, ತಂದೆ ಹೈದರ್ ಅಲಿಯೇವ್ ರಿಂದ ರಾಜಕಾರಣದ ನಂಟು ಇಲ್ಹಾಂರಿಗೆ ಒದಗಿತು. ಇಲ್ಹಾಂರ ತಾಯಿ ಕಣ್ಣಿನ ವೈದ್ಯರಾಗಿದ್ದ ಜರೀಫಾ ಅಲಿಯೇವಾ.

ವಿದ್ಯಾಭ್ಯಾಸ

ಬಾಕುವಿನಲ್ಲಿ ೧೯೭೭ರವರೆಗೆ ಶಾಲೆ ಕಲಿತ ಇಲ್ಹಾಂ, ಮಾಸ್ಕೋವಿನಲ್ಲಿ ೧೯೮೨ರಲ್ಲಿ ಸ್ನಾತಕೋತ್ತರ ಪದವಿ ಪಡೆದರು.೧೯೮೫ರಲ್ಲಿ ಇತಿಹಾಸದಲ್ಲಿ ಡಾಕ್ಟರೇಟ್ ಪಡೆದು, ೧೯೯೦ರವರೆಗೆ ಮಾಸ್ಕೋನಲ್ಲಿ ಪ್ರಾಧ್ಯಾಪಕರಾಗಿದ್ದರು. ೧೯೯೧-೯೪ರ ಅವಧಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ದುಡಿದರು.

ವೃತ್ತಿ

೧೯೯೪-೨೦೦೩ರಲ್ಲಿ ಅಜರ್ ಬೈಜಾನ್ ದೇಶದ ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆಯ ಉಪಾಧಕ್ಷರಾಗಿ ದುಡಿದರು. ತೈಲ ಸಂಪತ್ತನ್ನು ವಿಫುಲವಾಗಿ ಶೋಧಿಸಿ, ಹೊರತೆಗೆವ ಪಾಶ್ಚಿಮಾತ್ಯ ದೇಶದ ಸಂಸ್ಥೆಗಳೊಡನೆ ಮೈತ್ರಿ ನಿರ್ವಹಣೆ ಮತ್ತು ಒಡಂಬಡಿಕೆ ಏರ್ಪಡಿಸುವಲ್ಲಿ ತಮ್ಮ ತಂದೆ ಮತ್ತು ಅಜರ್ ಬೈಜಾನಿನ ಅಂದಿನ ರಾಷ್ಟ್ರಪತಿ ಹೈದರ್ ಅಲಿಯೇವ್ ರ ಹೆಗ್ಗುರಿಯನ್ನು ಇಲ್ಹಾಂ ಈಡೇರಿಸಿದರು. ಇಲ್ಹಾಂ ಇದೇ ಅವಧಿಯಲ್ಲಿ ರಾಜ್ಯಶಾಸ್ತ್ರದಲ್ಲಿಯೂ ಡಾಕ್ಟರೇಟ್ ಪಡೆದರು.

ರಾಜಕೀಯ ಬದುಕು

೧೯೯೯ರಲ್ಲಿ ನವ ಅಜರ್ ಬೈಜಾನ್ ಪಕ್ಷದ ಐದು ಮಂದಿ ಉಪ ಅಧ್ಯಕ್ಷರಲ್ಲಿ ಒಬ್ಬರಾಗಿ ಆಯ್ಕೆಯಾದ ಇಲ್ಹಾಂ, ೨೦೦೧ರಲ್ಲಿ ಹಿರಿಯ ಉಪಾಧ್ಯಕ್ಷರಾದರು. ೨೦೦೫ರಲ್ಲಿ ಅಧ್ಯಕ್ಷರಾದರು. ಇವರ ಅವಧಿಯಲ್ಲಿ ಪಕ್ಷದ ಸದಸ್ಯತ್ವ ೭ ಲಕ್ಷಕ್ಕೆ ಏರಿತು.

ಆಡಳಿತ

ಅಕ್ಟೋಬರ್ ೨೦೦೩ರಲ್ಲಿ ಇಲ್ಹಾಂ, ಅಜರ್ ಬೈಜಾನ್ ದೇಶದ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿ ಶೇಕಡ ೭೬.೪೮% ಮತ ಗಳಿಸಿ ರಾಷ್ಟ್ರಪತಿಯಾದರು. ಅಲ್ಹಾಂರ ತಂದೆ ಹೈದರ್ ಅಲಿಯೇವ್ ತಮ್ಮ ಮಗನಿಗಾಗಿ ಪದತ್ಯಾಗ ಮಾಡಿದರು. ಅಂತರ್ರಾಷ್ಟ್ರೀಯ ನೇತಾರರ ಕಟುಟೀಕೆಗಳ ಹೊರತಾಗಿಯೂ, ತಮ್ಮ ಚುನಾವಣೆಯನ್ನು ಸಮರ್ಥಿಸಿಕೊಂಡ ಇಲ್ಹಾಂ, ಈಸಾ ಗುಂಬರ್ ರನ್ನು ಸೋಲಿಸಿದರು. ೨೦೦೮ ಮತ್ತು ೨೦೧೩ರ ಚುನಾವಣೆಗಳನ್ನೂ ಸಹ ಇಲ್ಹಾಂ ಗೆದ್ದರು. ಈ ಯಾವ ಚುನಾವಣೆಗಳೂ ಕೂಡ, ಅಜರ್ ಬೈಜಾನ್ ದೇಶದ ನಾಗರೀಕರ ಮುಕ್ತ ಆಯ್ಕೆಯಲ್ಲ ಎಂಬುದು ವಿಶ್ವಸಂಸ್ಥೆಯೇ ಸೇರಿದಂತೆ ಎಲ್ಲಾ ದೇಶಗಳ ವಾದ.

ಸರ್ವಾಧಿಕಾರದ ಆರೋಪ

೨೦೦೯ರಲ್ಲಿ ರಾಷ್ಟ್ರಪತಿ ಹುದ್ದೆಗೆ ಇದ್ದ ಅವಧಿಯ ಮಿತಿಯನ್ನು ಸಂವಿಧಾನಕ್ಕೆ ತಿದ್ದುಪಡಿ ತಂದು ತೆಗೆದು ಹಾಕಲಾಯಿತು. ೨೦೧೩ರ ಚುನಾವನೆಯಲ್ಲಿ ಅಜರ್ ಬೈಜಾನ್ ಚುನಾವಣಾ ಆಯೋಗವು ಮೊದಲ ಬಾರಿಗೆ ಸ್ಮಾರ್ಟ್ ಫೋನ್ ಆಪ್ ಅನ್ನು ಹೊರತಂದಿತು. ಇದರ ಉದ್ದೇಶ ಮತದಾನದ ಎಣಿಕೆ ಕಾರ್ಯವನ್ನು ನೈಜವಾಗಿ ಜನ ಕಾಣಲಿ ಎಂಬುದಾಗಿತ್ತು. ಆದರೆ, ಚುನಾವಣಾ ಎಣಿಕೆಯ ಮುನ್ನವೇ ಈ ಆಪ್, ಫಲಿತಾಂಶವನ್ನು ತೋರಿಸಿತು. ಇದು ಇಲ್ಹಾಂರ ತಂತ್ರ ಎಂದು ಯೂರೋಪ್ ಮತ್ತು ವಿಶ್ವಸಂಸ್ಥೆ ಟೀಕೆ ಮಾಡಿತು. ಇದಾವುದನ್ನೂ ಲೆಕ್ಕಿಸದ ಇಲ್ಹಾಂ, ೨೦೧೩ರಲ್ಲಿ ಮತ್ತೆ ರಾಷ್ಟ್ರಪತಿಯಾದರು.

ರಾಷ್ಟ್ರಗಳ ಜೊತೆ ಮೈತ್ರಿ

ಇಲ್ಹಾಂ ಯುರೋಪಿಯನ್ ರಾಷ್ಟ್ರಗಳ ಜೊತೆ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನ್ದ ಜೊತೆ ಮೈತ್ರಿ ಏರ್ಪಡಿಸಿಕೊಂಡಿದ್ದಾರೆ. ಅಜರ್ ಬೈಜಾನಿನ ವಿಫುಲ ತೈಲ ಸಂಪತ್ತು, ಈ ಮೈತ್ರಿಗೆ ಮೂಲ ಕಾರಣವೆಂದೂ, ಇದರ ಬಲದಿಂದಲೇ ಇಲ್ಹಾಂರ ಕೃತ್ಯಗಳಿಗೆ ಮೌನವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ಇವೆ ಎಂಬುದು ಮಾನವ ಹಕ್ಕುಗಳ ಸಂಘಟನೆಗಳ ವಾದ.

ಕುಟುಂಬ

ಇಲ್ಹಾಂ ಅಲಿಯೇವ್ ರ ಪತ್ನಿ ಶ್ರೀಮತಿ ಮೆಹ್ರಿಬಾನ್ ಪಶಯೇವಾ. ೧೯೮೩ರಲ್ಲಿ ಮದುವೆಯಾದ ಶ್ರೀಯುತರಿಗೆ ೩ ಮಂದಿ ಮಕ್ಕಳು. ಮೆಹ್ರಿಬಾನ್ ಪಶಯೇವಾ ಅಜರ್ ಬೈಜಾನ್ ದೇಶದ ಮೊದಲ ಉಪರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಉಲ್ಲೇಖಗಳು

Tags:

ಇಲ್ಹಮ್ ಅಲಿಯೇವ್ ಜನನಇಲ್ಹಮ್ ಅಲಿಯೇವ್ ವಿದ್ಯಾಭ್ಯಾಸಇಲ್ಹಮ್ ಅಲಿಯೇವ್ ವೃತ್ತಿಇಲ್ಹಮ್ ಅಲಿಯೇವ್ ರಾಜಕೀಯ ಬದುಕುಇಲ್ಹಮ್ ಅಲಿಯೇವ್ ಆಡಳಿತಇಲ್ಹಮ್ ಅಲಿಯೇವ್ ಸರ್ವಾಧಿಕಾರದ ಆರೋಪಇಲ್ಹಮ್ ಅಲಿಯೇವ್ ರಾಷ್ಟ್ರಗಳ ಜೊತೆ ಮೈತ್ರಿಇಲ್ಹಮ್ ಅಲಿಯೇವ್ ಕುಟುಂಬಇಲ್ಹಮ್ ಅಲಿಯೇವ್ ಉಲ್ಲೇಖಗಳುಇಲ್ಹಮ್ ಅಲಿಯೇವ್ಅಜೆರ್ಬೈಜಾನ್

🔥 Trending searches on Wiki ಕನ್ನಡ:

ಸಂಸ್ಕೃತ ಸಂಧಿತಿರುಪತಿವಿರಾಮ ಚಿಹ್ನೆಜಿ.ಎಸ್.ಶಿವರುದ್ರಪ್ಪತಿಂಥಿಣಿ ಮೌನೇಶ್ವರದ್ರಾವಿಡ ಭಾಷೆಗಳುಕಿತ್ತೂರು ಚೆನ್ನಮ್ಮಗ್ರಾಮ ಪಂಚಾಯತಿತಾಜ್ ಮಹಲ್ಮದಕರಿ ನಾಯಕಗಿಡಮೂಲಿಕೆಗಳ ಔಷಧಿಎ.ಪಿ.ಜೆ.ಅಬ್ದುಲ್ ಕಲಾಂಶನಿಭಾರತದ ಆರ್ಥಿಕ ವ್ಯವಸ್ಥೆಭಾರತದ ಸರ್ವೋಚ್ಛ ನ್ಯಾಯಾಲಯಮೂಲಧಾತುಭಾರತದಲ್ಲಿ ಮೀಸಲಾತಿರಾಜಧಾನಿಗಳ ಪಟ್ಟಿಮನುಸ್ಮೃತಿಆಯುರ್ವೇದಶಿವರಾಜ್‍ಕುಮಾರ್ (ನಟ)ಎಲೆಕ್ಟ್ರಾನಿಕ್ ಮತದಾನ೧೮೬೨ಮ್ಯಾಕ್ಸ್ ವೆಬರ್ಪಂಚತಂತ್ರಹಿಂದೂ ಮಾಸಗಳುಕನ್ನಡ ಸಾಹಿತ್ಯ ಪರಿಷತ್ತುಜಶ್ತ್ವ ಸಂಧಿಈಡನ್ ಗಾರ್ಡನ್ಸ್ಅಮೃತಬಳ್ಳಿಕೈಗಾರಿಕಾ ನೀತಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಜಾಗತೀಕರಣಜಾತ್ರೆಷಟ್ಪದಿಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಕೃಷ್ಣಾ ನದಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ನವರತ್ನಗಳುಹರಿಹರ (ಕವಿ)ಅರ್ಜುನಕರ್ಕಾಟಕ ರಾಶಿಸಂಭವಾಮಿ ಯುಗೇ ಯುಗೇದಾಳಿಂಬೆಧನಂಜಯ್ (ನಟ)1935ರ ಭಾರತ ಸರ್ಕಾರ ಕಾಯಿದೆತುಮಕೂರುಹಯಗ್ರೀವಹುಣಸೆಕೂಡಲ ಸಂಗಮಶನಿ (ಗ್ರಹ)ದೇವನೂರು ಮಹಾದೇವರಾಹುಲ್ ಗಾಂಧಿಕನ್ನಡ ವ್ಯಾಕರಣಲಿಂಗಾಯತ ಪಂಚಮಸಾಲಿಹೆಣ್ಣು ಬ್ರೂಣ ಹತ್ಯೆಮಿಥುನರಾಶಿ (ಕನ್ನಡ ಧಾರಾವಾಹಿ)ಪ್ರೀತಿಲಕ್ಷ್ಮಣಭಾರತೀಯ ರಿಸರ್ವ್ ಬ್ಯಾಂಕ್ಭಾರತದ ಪ್ರಧಾನ ಮಂತ್ರಿಬೆಂಗಳೂರು ಕೋಟೆಹಲ್ಮಿಡಿ ಶಾಸನಸರ್ವಜ್ಞಸಂಸ್ಕಾರಮದುವೆಮಾನ್ವಿತಾ ಕಾಮತ್ಕಾಳಿಂಗ ಸರ್ಪಸಮುದ್ರಗುಪ್ತದ್ವಿರುಕ್ತಿರಾಷ್ಟ್ರೀಯ ಮತದಾರರ ದಿನಭಗತ್ ಸಿಂಗ್ಕನ್ನಡ ಬರಹಗಾರ್ತಿಯರುಬೆಂಗಳೂರಿನ ಇತಿಹಾಸನಾಲ್ವಡಿ ಕೃಷ್ಣರಾಜ ಒಡೆಯರುಭಾರತದ ಪಂಚಾಯತ್ ರಾಜ್ ವ್ಯವಸ್ಥೆಉಡಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು🡆 More