ಅಲೆ

ದ್ರವ ಚಲನಶಾಸ್ತ್ರದಲ್ಲಿ, ಅಲೆಗಳು (ಸಾಗರಗಳು, ಸಮುದ್ರಗಳು, ಕೆರೆಗಳು, ನದಿಗಳು, ಕಾಲುವೆಗಳು, ಕೊಚ್ಚೆಗುಂಡಿಗಳು ಅಥವಾ ಕೊಳಗಳಂತಹ) ಜಲಕಾಯಗಳ ಮುಕ್ತ ಮೇಲ್ಮೈ ಮೇಲೆ ಉಂಟಾಗುವ ತರಂಗಗಳು.

ಇವು ದ್ರವದ ಮೇಲ್ಮೈ ಪ್ರದೇಶದ ಮೇಲೆ ಗಾಳಿ ಬೀಸುವುದರಿಂದ ಉಂಟಾಗುತ್ತವೆ. ಸಾಗರಗಳಲ್ಲಿನ ಅಲೆಗಳು ನೆಲ ಮುಟ್ಟುವುದಕ್ಕೆ ಮುಂಚೆ ಸಾವಿರಾರು ಮೈಲಿ ಪ್ರಯಾಣಿಸಬಹುದು. ಭೂಮಿ ಮೇಲಿನ ಅಲೆಗಳು ಗಾತ್ರದಲ್ಲಿ ಸಣ್ಣ ಅಲೆಗಳಿಂದ ಹಿಡಿದು ೧೦೦ ಅಡಿಗಿಂತ ಎತ್ತರದ ಅಲೆಗಳವರೆಗೆ ಇರಬಹುದು.

ಅಲೆ
ಭಾರಿ ದೊಡ್ಡ ಅಲೆ

ಸ್ಥಳೀಯ ಗಾಳಿಯಿಂದ ಉತ್ಪನ್ನವಾದಾಗ ಮತ್ತು ಬಾಧಿತವಾದಾಗ, ಒಂದು ಅಲೆ ವ್ಯವಸ್ಥೆಯನ್ನು ಗಾಳಿ ಸಮುದ್ರ ಎಂದು ಕರೆಯಲಾಗುತ್ತದೆ. ಗಾಳಿ ಬೀಸುವುದು ನಿಂತ ನಂತರ, ಅಲೆಗಳನ್ನು ಉಬ್ಬುವಿಕೆಗಳೆಂದು ಕರೆಯಲಾಗುತ್ತದೆ. ಹೆಚ್ಚು ಸಾಮಾನ್ಯವಾಗಿ, ಉಬ್ಬುವಿಕೆಯು ಆ ಸಮಯದ ಸ್ಥಳೀಯ ಗಾಳಿಯಿಂದ ಗಮನಾರ್ಹವಾಗಿ ಬಾಧಿತವಾಗದ ಅಲೆಗಳನ್ನು ಹೊಂದಿರುತ್ತದೆ. ಅವು ಬೇರೆ ಎಲ್ಲೋ ಅಥವಾ ಸ್ವಲ್ಪ ಸಮಯ ಮೊದಲು ಉತ್ಪತ್ತಿಯಾಗಿರುತ್ತವೆ. ಸಾಗರದಲ್ಲಿನ ಅಲೆಗಳನ್ನು ಸಾಗರ ಮೇಲ್ಮೈ ತರಂಗಗಳು ಎಂದು ಕರೆಯಲಾಗುತ್ತದೆ.

ಅಲೆಗಳನ್ನು ಸಾಮಾನ್ಯವಾಗಿ ಭೂಮಿಯ ಸಮುದ್ರಗಳಲ್ಲಿ ಪರಿಗಣಿಸಲಾಗುತ್ತಾದರೂ, ಟೈಟನ್ ಚಂದ್ರದ ಹೈಡ್ರೊಕಾರ್ಬನ್ ಸಮುದ್ರಗಳೂ ಅಲೆಗಳನ್ನು ಹೊಂದಿರಬಹುದು.

ಅಲೆಗಳಲ್ಲಿನ ಹರಿವಿನ ರಚನೆಗಳ ಮೇಲೆ ಐದು ಅಂಶಗಳು ಪ್ರಭಾವ ಬೀರುತ್ತವೆ: (೧) ಅಲೆಯ ವೇಗದ ಹೋಲಿಕೆಯಲ್ಲಿ ಗಾಳಿಯ ವೇಗ ಅಥವಾ ಬಲ—ಶಕ್ತಿ ವರ್ಗಾವಣೆಯಾಗಲು ಅಲೆಯ ಶಿಖರಕ್ಕಿಂತ ಗಾಳಿಯು ವೇಗವಾಗಿ ಚಲಿಸುತ್ತಿರಬೇಕು; (೨) ಮುಕ್ತ ನೀರಿನ ತಡೆರಹಿತ ದೂರ. ನೀರಿನ ಮೇಲೆ ಗಾಳಿ ಬೀಸಿದಾಗ ದಿಕ್ಕಿನಲ್ಲಿ ಗಮನಾರ್ಹ ಬದಲಾವಣೆಯಾಗಬಾರದು; (೩) ಹರವಿನಿಂದ ಪ್ರಭಾವಿತವಾದ ಪ್ರದೇಶದ ಅಗಲ; (೪) ಗಾಳಿಯ ಕಾಲಾವಧಿ — ನೀರಿನ ಮೇಲೆ ಗಾಳಿ ಬೀಸಿದ ಅವಧಿ; (೫) ನೀರಿನ ಆಳ. ಈ ಎಲ್ಲ ಅಂಶಗಳು ಒಟ್ಟಾಗಿ ಕಾರ್ಯಮಾಡಿ ಅಲೆಗಳ ಗಾತ್ರ ಮತ್ತು ಅವುಗಳಲ್ಲಿನ ಹರಿವಿನ ರಚನೆಯನ್ನು ನಿರ್ಧರಿಸುತ್ತವೆ.

ಪೂರ್ಣವಾಗಿ ವಿಕಸನಗೊಂಡ ಸಮುದ್ರವು ನಿರ್ದಿಷ್ಟ ಬಲ, ಅವಧಿ, ಮತ್ತು ಹರವಿನ ಗಾಳಿಗೆ ಸೈದ್ಧಾಂತಿಕವಾಗಿ ಸಾಧ್ಯವಾದ ಗರಿಷ್ಠ ಅಲೆ ಗಾತ್ರವನ್ನು ಹೊಂದಿರುತ್ತದೆ. ಆ ಗಾಳಿಗೆ ಹೆಚ್ಚಿನ ಒಡ್ಡಿಕೆಯು ಕೇವಲ ಶಕ್ತಿಯ ಚೆದುರುವಿಕೆ ಉಂಟುಮಾಡಬಹುದು, ಏಕೆಂದರೆ ಅಲೆಗಳ ಶಿಖರಗಳು ಒಡೆಯುತ್ತವೆ ಮತ್ತು ನೊರೆಹೊತ್ತ ಹೆದ್ದೆರೆಗಳ ರಚನೆಯಾಗುತ್ತದೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಅಲೆಗಳು ವಿಶಿಷ್ಟವಾಗಿ ಎತ್ತರದ ಶ್ರೇಣಿಯನ್ನು ಹೊಂದಿರುತ್ತವೆ.

ಉಲ್ಲೇಖಗಳು

Tags:

ಕಾಲುವೆಗಾಳಿನದಿಸಮುದ್ರಸಾಗರ

🔥 Trending searches on Wiki ಕನ್ನಡ:

ಭಾರತದ ಜನಸಂಖ್ಯೆಯ ಬೆಳವಣಿಗೆವರದಕ್ಷಿಣೆರಾಷ್ಟ್ರೀಯ ಸೇವಾ ಯೋಜನೆಜಗನ್ನಾಥದಾಸರುಹನುಮಾನ್ ಚಾಲೀಸರಾಮಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಹೊಯ್ಸಳ ವಾಸ್ತುಶಿಲ್ಪಮುಖ್ಯ ಪುಟಭರತನಾಟ್ಯರೈತದೇವತಾರ್ಚನ ವಿಧಿಹೊನ್ನಾವರಮಂಜುಳರಾಮಾಯಣಮಳೆಗಾಲವ್ಯವಸಾಯಕಂದಗಂಡಬೇರುಂಡಭಾರತೀಯ ಮೂಲಭೂತ ಹಕ್ಕುಗಳುವಚನ ಸಾಹಿತ್ಯಕ್ರೈಸ್ತ ಧರ್ಮಅಂಚೆ ವ್ಯವಸ್ಥೆಪ್ರಜಾಪ್ರಭುತ್ವದಿವ್ಯಾಂಕಾ ತ್ರಿಪಾಠಿಕರ್ನಾಟಕದ ಮಹಾನಗರಪಾಲಿಕೆಗಳುಅರಿಸ್ಟಾಟಲ್‌ಪ್ರಜಾವಾಣಿವಿವಾಹಕಾದಂಬರಿತಾಪಮಾನವೃದ್ಧಿ ಸಂಧಿಚದುರಂಗ (ಆಟ)ಶಕ್ತಿಬಹಮನಿ ಸುಲ್ತಾನರುಉತ್ತರ ಪ್ರದೇಶವಾಯು ಮಾಲಿನ್ಯಕೊಡಗಿನ ಗೌರಮ್ಮಭಾರತೀಯ ರೈಲ್ವೆಸವರ್ಣದೀರ್ಘ ಸಂಧಿದೇವನೂರು ಮಹಾದೇವಜರಾಸಂಧಕ್ಯಾರಿಕೇಚರುಗಳು, ಕಾರ್ಟೂನುಗಳುಪ್ರಬಂಧ ರಚನೆಸಂಚಿ ಹೊನ್ನಮ್ಮಉಪನಯನಗುಡಿಸಲು ಕೈಗಾರಿಕೆಗಳುನಿರುದ್ಯೋಗವಿರಾಮ ಚಿಹ್ನೆಸಂಭೋಗಪ್ರಪಂಚದ ದೊಡ್ಡ ನದಿಗಳುಭಾರತದ ಸಂವಿಧಾನಭಾರತದಲ್ಲಿನ ಚುನಾವಣೆಗಳುಜನಪದ ಕಲೆಗಳುಭಾರತದ ಸ್ವಾತಂತ್ರ್ಯ ಚಳುವಳಿಡಿ.ಕೆ ಶಿವಕುಮಾರ್ಜೀವಕೋಶಗೀತಾ (ನಟಿ)ನೀರಾವರಿರಮ್ಯಾಮುಪ್ಪಿನ ಷಡಕ್ಷರಿಶಿಕ್ಷಣನೀನಾದೆ ನಾ (ಕನ್ನಡ ಧಾರಾವಾಹಿ)ತಾಳೀಕೋಟೆಯ ಯುದ್ಧಭಗವದ್ಗೀತೆಗಂಗ (ರಾಜಮನೆತನ)ತೆಲಂಗಾಣನಿಯತಕಾಲಿಕಸಂಸ್ಕೃತ ಸಂಧಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕನ್ನಡ ಗುಣಿತಾಕ್ಷರಗಳುಹಿಂದೂ ಮಾಸಗಳುನಾಮಪದವಿಜಯನಗರರಾಯಚೂರು ಜಿಲ್ಲೆಕುವೆಂಪು🡆 More