ಅಂಗವಿಕಲತೆ

ಅಂಗವಿಕಲತೆ ಎಂದರೆ ಒಬ್ಬ ವ್ಯಕ್ತಿಯ ಶಾರೀರಿಕ ಕಾರ್ಯನಿರ್ವಹಣೆ, ಚಲನಶೀಲತೆ, ಕೌಶಲ್ಯ ಅಥವಾ ದೇಹಬಲದ ಮೇಲಿರುವ ಮಿತಿ.

ಇತರ ಅಂಗವಿಕಲತೆಗಳಲ್ಲಿ ಉಸಿರಾಟದ ಅಸ್ವಸ್ಥತೆಗಳು, ಕುರುಡುತನ, ಅಪಸ್ಮಾರ ಮತ್ತು ನಿದ್ರಾ ಅಸ್ವಸ್ಥತೆಗಳಂತಹ ದೈನಂದಿನ ಜೀವನದ ಇತರ ಅಂಶಗಳನ್ನು ಸೀಮಿತಗೊಳಿಸುವ ದುರ್ಬಲತೆಗಳು ಸೇರಿವೆ.

ಪ್ರಸವಪೂರ್ವ ಅಂಗವಿಕಲತೆಗಳು ಜನ್ಮಕ್ಕೆ ಮುಂಚೆ ಆಗಿರುತ್ತವೆ. ಇವು ರೋಗಗಳು ಅಥವಾ ಗರ್ಭಾವಸ್ಥೆಯ ಅವಧಿಯಲ್ಲಿ ತಾಯಿಯು ಒಡ್ಡಲ್ಪಟ್ಟ ವಸ್ತುಗಳು, ಭ್ರೂಣ ಬೆಳವಣಿಗೆ ಸಂಬಂಧಿ ಅಪಘಾತಗಳು ಅಥವಾ ಆನುವಂಶಿಕ ಕಾಯಿಲೆಗಳ ಕಾರಣದಿಂದ ಆಗಿರಬಹುದು. ಮಾನವರಲ್ಲಿ ಪ್ರಸವಾವಧಿಯ ಅಂಗವಿಕಲತೆಗಳು ಜನ್ಮಕ್ಕಿಂತ ಮುಂಚಿನ ಕೆಲವು ವಾರಗಳಿಂದ ಹಿಡಿದು ಜನನದ ನಂತರ ನಾಲ್ಕು ವಾರಗಳ ನಡುವೆ ಆಗುತ್ತವೆ. ಇವು ದೀರ್ಘಕಾಲದ ಆಮ್ಲಜನಕದ ಕೊರತೆ ಅಥವಾ ಶ್ವಾಸವ್ಯೂಹದಲ್ಲಿನ ಅಡ್ಡಿ, (ಉದಾಹರಣೆಗೆ, ಚಿಮುಟದ ಆಕಸ್ಮಿಕ ದುರ್ಬಳಕೆಯಿಂದ) ಜನನದ ಅವಧಿಯಲ್ಲಿ ಮಿದುಳಿಗೆ ಹಾನಿ, ಅಥವಾ ಶಿಶುವು ಅಕಾಲಿಕವಾಗಿ ಹುಟ್ಟಿದ ಕಾರಣದಿಂದ ಆಗಬಹುದು. ಇವು ಆನುವಂಶಿಕ ಅಸ್ವಸ್ಥತೆಗಳು ಅಥವಾ ಅಪಘಾತಗಳ ಕಾರಣದಿಂದಲೂ ಆಗಬಹುದು. ಪ್ರಸವೋತ್ತರ ಅಂಗವಿಕಲತೆಗಳು ಜನನದ ನಂತರ ಉಂಟಾಗುತ್ತವೆ. ಇವು ಅಪಘಾತಗಳು, ಗಾಯಗಳು, ಬೊಜ್ಜು, ಸೋಂಕು ಅಥವಾ ಇತರ ಕಾಯಿಲೆಗಳ ಕಾರಣದಿಂದ ಆಗಬಹುದು. ಇವು ಆನುವಂಶಿಕ ಅಸ್ವಸ್ಥತೆಗಳ ಕಾರಣದಿಂದಲೂ ಉಂಟಾಗಬಹುದು.

ಚಲನಶೀಲತೆಯಲ್ಲಿನ ದುರ್ಬಲತೆಗಳಲ್ಲಿ ಮೇಲಿನ (ಕೈ) ಅಥವಾ ಕೆಳಗಿನ (ಕಾಲು) ಅವಯವ ಇಲ್ಲದಿರುವುದು ಅಥವಾ ದುರ್ಬಲವಾಗಿರುವುದು, ಕಳಪೆ ಕೈ ಕೌಶಲ್ಯ, ಮತ್ತು ದೇಹದ ಒಂದು ಅಥವಾ ಹೆಚ್ಚು ಅಂಗಗಳಿಗೆ ಹಾನಿ ಸೇರಿದಂತೆ ಶಾರೀರಿಕ ದೋಷಗಳು ಸೇರಿವೆ. ಚಲನಶೀಲತೆಯಲ್ಲಿನ ಅಂಗವಿಕಲತೆಯು ಜನ್ಮಜಾತವಾಗಿರಬಹುದು ಅಥವಾ ನಂತರ ಆಗಿರಬಹುದು, ಅಥವಾ ರೋಗದ ಕಾರಣ ಆಗಿರಬಹುದು. ಮುರಿದ ಅಸ್ಥಿ ರಚನೆಯನ್ನು ಹೊಂದಿರುವ ವ್ಯಕ್ತಿಗಳು ಕೂಡ ಈ ವರ್ಗದಲ್ಲಿ ವರ್ಗೀಕರಿಸಲ್ಪಡುತ್ತಾರೆ.

ದೃಷ್ಟಿ ಹಾನಿಯು ಮತ್ತೊಂದು ಪ್ರಕಾರದ ದೈಹಿಕ ದುರ್ಬಲತೆ. ಸಣ್ಣ ಅಥವಾ ವಿವಿಧ ಗಂಭೀರ ದೃಷ್ಟಿಸಂಬಂಧಿ ಗಾಯಗಳು ಅಥವಾ ದುರ್ಬಲತೆಗಳಿಂದ ಬಹಳವಾಗಿ ನರಳುವ ನೂರಾರು ಸಾವಿರಾರು ಜನಗಳಿದ್ದಾರೆ. ಈ ಬಗೆಯ ಗಾಯಗಳು ಅಂಧತ್ವ ಅಥವಾ ನೇತ್ರ ಆಘಾತದಂತಹ ಗಂಭೀರ ಸಮಸ್ಯೆಗಳು ಅಥವಾ ರೋಗಗಳನ್ನು ಕೂಡ ಉಂಟುಮಾಡಬಲ್ಲವು. ಕೆಲವು ಇತರ ಬಗೆಗಳ ದೃಷ್ಟಿ ದುರ್ಬಲತೆಗಳಲ್ಲಿ ಕೆರೆದ ಕಾರ್ನಿಯಾ, ಶ್ವೇತಾಕ್ಷಿಪಟದ ಮೇಲಿನ ಗೀರುಗಳು, ಮಧುಮೇಹ ಸಂಬಂಧಿ ನೇತ್ರ ಪರಿಸ್ಥಿತಿಗಳು, ಒಣ ಕಣ್ಣುಗಳು ಹಾಗೂ ಕಾರ್ನಿಯಾದ ನಾಟಿ, ವೃದ್ಧಾಪ್ಯದಲ್ಲಿ ಮ್ಯಾಕ್ಯುಲಾದ ವಿಕೃತಿ ಹಾಗೂ ಅಕ್ಷಿಪಟಲದ ಬೇರ್ಪಡುವಿಕೆ ಸೇರಿವೆ.

ಉಲ್ಲೇಖಗಳು

Tags:

ಅಪಸ್ಮಾರದೃಷ್ಟಿ ಹಾನಿ

🔥 Trending searches on Wiki ಕನ್ನಡ:

ಮದುವೆಕೊಬ್ಬಿನ ಆಮ್ಲಸೆಲರಿಪುಟ್ಟರಾಜ ಗವಾಯಿಮಡಿವಾಳ ಮಾಚಿದೇವದಾವಣಗೆರೆರಾಷ್ತ್ರೀಯ ಐಕ್ಯತೆಸುಗ್ಗಿ ಕುಣಿತವೇದಎಚ್ ಎಸ್ ಶಿವಪ್ರಕಾಶ್ಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕೊರೋನಾವೈರಸ್ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕೃತಕ ಬುದ್ಧಿಮತ್ತೆಪೊನ್ನಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಧರ್ಮಸ್ಥಳಕನ್ನಡ ಜಾನಪದಕಾಲಾಯ ತಸ್ಮೈ ನಮಃ (ಚಲನಚಿತ್ರ)ಮಾನವ ಹಕ್ಕುಗಳುವಿಷ್ಣುವರ್ಧನ್ (ನಟ)ಛಂದಸ್ಸುರಚಿತಾ ರಾಮ್ಉಡುಪಿ ಜಿಲ್ಲೆಜೋಡು ನುಡಿಗಟ್ಟುಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಬೀಚಿಮಾಸಭಾರತದಲ್ಲಿ ಕೃಷಿಸಂಯುಕ್ತ ರಾಷ್ಟ್ರ ಸಂಸ್ಥೆಭಾರತೀಯ ಸಂವಿಧಾನದ ತಿದ್ದುಪಡಿಚಾಲುಕ್ಯಆಗುಂಬೆರಾಜಧಾನಿಗಳ ಪಟ್ಟಿಸಂತಾನೋತ್ಪತ್ತಿಯ ವ್ಯವಸ್ಥೆವೃತ್ತಪತ್ರಿಕೆಸರ್ವಜ್ಞಯಲಹಂಕದ ಪಾಳೆಯಗಾರರುರಾಜಕೀಯ ಪಕ್ಷಪರಿಸರ ವ್ಯವಸ್ಥೆಎ.ಪಿ.ಜೆ.ಅಬ್ದುಲ್ ಕಲಾಂಜಾತ್ಯತೀತತೆಕನ್ನಡ ರಂಗಭೂಮಿಆದಿ ಶಂಕರರು ಮತ್ತು ಅದ್ವೈತಅನಂತ್ ನಾಗ್ಬೆಳಗಾವಿಕಪ್ಪೆ ಅರಭಟ್ಟಕವಿರಾಜಮಾರ್ಗಅಂತಾರಾಷ್ಟ್ರೀಯ ಸಂಬಂಧಗಳುಹಣಕುರಿಗೌತಮ ಬುದ್ಧರಾಷ್ಟ್ರೀಯ ಶಿಕ್ಷಣ ನೀತಿಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ಆಲದ ಮರರೇಣುಕಶನಿಕರ್ನಾಟಕ ವಿಧಾನ ಪರಿಷತ್ಮಾದರ ಚೆನ್ನಯ್ಯಜಯಚಾಮರಾಜ ಒಡೆಯರ್ಭಾರತೀಯ ಕಾವ್ಯ ಮೀಮಾಂಸೆಶ್ಯೆಕ್ಷಣಿಕ ತಂತ್ರಜ್ಞಾನರಾಜ್ಯಸಭೆಭಾವನಾ(ನಟಿ-ಭಾವನಾ ರಾಮಣ್ಣ)ತುಳಸಿವಿವಾಹಕಾಂತಾರ (ಚಲನಚಿತ್ರ)ಒಕ್ಕಲಿಗಪಟ್ಟದಕಲ್ಲುಭಾರತದ ರೂಪಾಯಿಧನಂಜಯ್ (ನಟ)ಸಂಯುಕ್ತ ಕರ್ನಾಟಕಮುಖ್ಯ ಪುಟಅಕ್ಕಮಹಾದೇವಿದಿಕ್ಕುರೈತಮಳೆಅರಣ್ಯನಾಶ🡆 More