ಸೈಮನ್ ಆಯೋಗ

ಸೈಮನ್ ಆಯೋಗವು ಭಾರತದಲ್ಲಿ ಸ್ಥಾಪಿಸಲಾಗುವ ಸಂವಿಧಾನದ ರಚನೆಯ ಬಗ್ಗೆ ಚರ್ಚೆ ನಡೆಸಲು ಬಂದ ಏಳು ಬ್ರಿಟಿಷ್ ಸಂಸತ್ಸದಸ್ಯರ ತಂಡ.

ತಂಡದ ಅಧ್ಯಕ್ಷತೆ ವಹಿಸಿದ್ದ ಸರ್ ಜಾನ್ ಸೈಮನ್ ಅವರ ಹೆಸರಿನಲ್ಲಿ ಈ ಆಯೋಗ ಜನಪ್ರಿಯವಾಯಿತು. ಕಾಕತಾಳೀಯ(?)ವಾಗಿ ಆಯೋಗದ ಒಬ್ಬ ಸದಸ್ಯ ಕ್ಲೆಮೆಂಟ್ ಆಟ್ಲೀ ಬ್ರಿಟಿಷ್ ಸರಕಾರದಿಂದ ಭಾರತ ಮತ್ತು ಪಾಕಿಸ್ತಾನಗಳು ಸ್ವಾತಂತ್ರ್ಯ ಪಡೆಯುವಾಗ ಬ್ರಿಟನ್ನಿನ ಪ್ರಧಾನ ಮಂತ್ರಿಯಾಗಿದ್ದನು.

ವಿವಾದ

ಆದರೆ ಈ ಆಯೋಗದಲ್ಲಿ ಒಬ್ಬ ಭಾರತೀಯನೂ ಇಲ್ಲದಿದ್ದದ್ದನ್ನು ಕಂಡು ಕೆಂಡಾಮಂಡಲರಾದರು ಭಾರತೀಯರು. ಈ ಕಾರಣದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ಆಯೋಗವನ್ನು ಬಹಿಷ್ಕರಿಸಲು ನಿರ್ಧರಿಸಿತು. ಮುಸ್ಲಿಂ ಲೀಗ್ ಪಕ್ಷದ ಒಂದು ಬಣ ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದಲ್ಲಿ ಬಹಿಷ್ಕಾರಕ್ಕೆ ಬೆಂಬಲ ಸೂಚಿಸಿತು. ಫೆಬ್ರವರಿ ೩, ೧೯೨೮ರಂದು ಮುಂಬಯಿಗೆ ಬಂದಿಳಿದ ಆಯೋಗ ಪ್ರದರ್ಶನಕಾರರ ಧಿಕ್ಕಾರದ ಘೋಷಣೆಗಳನ್ನು ಎದುರಿಸಬೇಕಾಯಿತು. ಇಡೀ ದೇಶ ಹರತಾಳದಲ್ಲಿರುವಂತೆ ಕಂಡು ಬಂದಿತು.

ಪರಿಣಾಮ

ಆಯೋಗವು ತನ್ನ ೧೭ ಸಂಪುಟಗಳ ವರದಿಯನ್ನು ೧೯೩೦ರಲ್ಲಿ ಪ್ರಕಾಶಿಸಿತು. ಪ್ರಾದೇಶಿಕ ಪ್ರತಿನಿಧಿತ್ವ ಮತ್ತು ಹಿಂದೂ-ಮುಸ್ಲಿಮರಿಗೆ ಪ್ರತ್ಯೇಕ ಕೋಮು ಆಧರಿತ ಚುನಾವಣೆ ಪ್ರಕ್ರಿಯೆಗಳನ್ನು ಶಿಫಾರಸು ಮಾಡಿತು. ಸೈಮನ್ ಆಯೋಗ ಪರಿಣಾಮವಾಗಿ ೧೯೩೫ರ ಭಾರತ ಸರಕಾರ ಕಾಯ್ದೆ ಹೊರಬಂದು, ೧೯೩೭ರಲ್ಲಿ ನಡೆದ ಪ್ರಾಂತೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಬಹುತೇಕ ಎಲ್ಲ ಪ್ರಾಂತ್ಯಗಳಲ್ಲಿ ಬಹುಮತದಿಂದ ಆಯ್ಕೆಯಾಗಿತು. ನಂತರ ಸ್ವತಂತ್ರ ಭಾರತದ ಸಂವಿಧಾನದ ಮೇಲೆಯೂ ಈ ಆಯೋಗದ ಪ್ರಭಾವವಿದ್ದಿತು.

ಹೊರಗಿನ ಸಂಪರ್ಕಗಳು


ಸೈಮನ್ ಆಯೋಗ       ಸೈಮನ್ ಆಯೋಗ       ಭಾರತದ ಸ್ವಾತಂತ್ರ್ಯ      ಸೈಮನ್ ಆಯೋಗ            ಸೈಮನ್ ಆಯೋಗ 
ಚರಿತ್ರೆ: ವಸಾಹತುಶಾಹಿ - ಈಸ್ಟ್ ಇಂಡಿಯಾ ಕಂಪನಿ - ಪ್ಲಾಸೀ ಕದನ - ಬಕ್ಸರ್ ಕದನ
ತತ್ವಗಳು: ರಾಷ್ಟ್ರೀಯತೆ - ಸ್ವರಾಜ್ - ಗಾಂಧಿವಾದ - ಸತ್ಯಾಗ್ರಹ - ಹಿಂದೂ ರಾಷ್ಟ್ರೀಯತೆ - ಸ್ವದೇಶಿ - ಸಮಾಜವಾದ
ಘಟನೆ-ಚಳುವಳಿಗಳು: ೧೮೫೭ರ ದಂಗೆ - ಬಂಗಾಳದ ವಿಭಜನೆ - ಕ್ರಾಂತಿಕಾರಿಗಳು - ಚಂಪಾರಣ ಮತ್ತು ಖೇಡಾ - ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ - ಅಸಹಕಾರ - ಸೈಮನ್ ಆಯೋಗ - ನೆಹರು ವರದಿ - ಉಪ್ಪಿನ ಸತ್ಯಾಗ್ರಹ - ೧೯೩೫ರ ಭಾರತ ಸರ್ಕಾರ ಕಾಯ್ದೆ - ಕ್ರಿಪ್ ಆಯೋಗ - ಭಾರತ ಬಿಟ್ಟು ತೊಲಗಿ - ಮುಂಬೈ ದಂಗೆ
ಸಂಘಟನೆಗಳು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ - ಗದರ್ - ಹೋಂ ರೂಲ್ ಚಳುವಳಿ - ಭಾರತೀಯ ರಾಷ್ಟ್ರೀಯ ಸೇನೆ - ಆಜಾದ್ ಹಿಂದ್ - ಅನುಶೀಲನ ಸಮಿತಿ
ನಾಯಕರು: ಮಂಗಲ ಪಾಂಡೆ - ಝಾನ್ಸಿ ರಾಣಿ ಲಕ್ಷ್ಮೀಬಾಯಿ - ಬಾಲ ಗಂಗಾಧರ ತಿಲಕ್ - ಗೋಪಾಲ ಕೃಷ್ಣ ಗೋಖಲೆ - ಮಹಾತ್ಮಾ ಗಾಂಧಿ - ಸರ್ದಾರ್ ಪಟೇಲ್ - ಸುಭಾಷ್ ಚಂದ್ರ ಬೋಸ್ - ಜವಾಹರಲಾಲ್ ನೆಹರು - ಮೌಲಾನಾ ಆಜಾದ್ - ಚಂದ್ರಶೇಖರ್ ಆಜಾದ್ - ರಾಜಾಜಿ - ಭಗತ್ ಸಿಂಗ್
ಬ್ರಿಟಿಷ್ ಆಡಳಿತ: ರಾಬರ್ಟ್ ಕ್ಲೈವ್ - ಲೂಯಿ ಮೌಂಟ್‌ಬ್ಯಾಟನ್
ಸ್ವಾತಂತ್ರ್ಯ: ಕ್ಯಾಬಿನೆಟ್ ಆಯೋಗ - ಭಾರತದ ಸ್ವಾತಂತ್ರ್ಯ ಕಾಯ್ದೆ - ಭಾರತದ ವಿಭಜನೆ - ಭಾರತದ ರಾಜಕೀಯ ಒಗ್ಗೂಡುವಿಕೆ - ಭಾರತದ ಸಂವಿಧಾನ

Tags:

ಪಾಕಿಸ್ತಾನಭಾರತ

🔥 Trending searches on Wiki ಕನ್ನಡ:

ಪ್ಲೇಟೊಚೋಮನ ದುಡಿಕರ್ನಾಟಕ ರತ್ನರಮ್ಯಾಭಾರತೀಯ ಕಾವ್ಯ ಮೀಮಾಂಸೆನವಣೆಕನ್ನಡ ಅಕ್ಷರಮಾಲೆಸಾಮಾಜಿಕ ಸಮಸ್ಯೆಗಳುವಿಚ್ಛೇದನಹುಚ್ಚೆಳ್ಳು ಎಣ್ಣೆಪಂಪಭಾರತೀಯ ರಿಸರ್ವ್ ಬ್ಯಾಂಕ್ದ್ವಿರುಕ್ತಿಮೂಲಧಾತುಗಳ ಪಟ್ಟಿಕಾರವಾರಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಸಾಯಿ ಪಲ್ಲವಿಯುಗಾದಿವರ್ಗೀಯ ವ್ಯಂಜನಶಾಸಕಾಂಗಬಲಚಿನ್ನಮಡಿವಾಳ ಮಾಚಿದೇವಭಾರತದ ಸಂವಿಧಾನದ ಏಳನೇ ಅನುಸೂಚಿಭಾರತದ ಭೌಗೋಳಿಕತೆಭಾರತ ಸಂವಿಧಾನದ ಪೀಠಿಕೆನಾಡ ಗೀತೆಉತ್ತರ ಪ್ರದೇಶವ್ಯಕ್ತಿತ್ವದೊಡ್ಡಬಳ್ಳಾಪುರಗಂಗಾಪ್ರಶಸ್ತಿಗಳುಪರಿಸರ ವ್ಯವಸ್ಥೆಮಂಡ್ಯದೇವರ/ಜೇಡರ ದಾಸಿಮಯ್ಯಭಾರತೀಯ ರೈಲ್ವೆಸ್ವಚ್ಛ ಭಾರತ ಅಭಿಯಾನಪ್ರಜಾಪ್ರಭುತ್ವತಿಪಟೂರುಪ್ರಬಂಧಕರ್ನಾಟಕ ಲೋಕಸೇವಾ ಆಯೋಗಭಾರತೀಯ ಜನತಾ ಪಕ್ಷಕರ್ನಾಟಕದ ಶಾಸನಗಳುಜಾಗತಿಕ ತಾಪಮಾನ ಏರಿಕೆಜವಹರ್ ನವೋದಯ ವಿದ್ಯಾಲಯವಿಜಯಪುರದಾವಣಗೆರೆಜೋಡು ನುಡಿಗಟ್ಟುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಖ್ಯಾತ ಕರ್ನಾಟಕ ವೃತ್ತಸಂಸ್ಕೃತಕನ್ನಡ ಗುಣಿತಾಕ್ಷರಗಳುಜವಾಹರ‌ಲಾಲ್ ನೆಹರುಗುಡಿಸಲು ಕೈಗಾರಿಕೆಗಳುಏಡ್ಸ್ ರೋಗಕೆ.ಎಲ್.ರಾಹುಲ್ವಿರಾಟ್ ಕೊಹ್ಲಿಆಂಧ್ರ ಪ್ರದೇಶಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕನ್ನಡ ಚಂಪು ಸಾಹಿತ್ಯಬಸವರಾಜ ಬೊಮ್ಮಾಯಿಮೌರ್ಯ ಸಾಮ್ರಾಜ್ಯಭಗವದ್ಗೀತೆಪಂಚಾಂಗಜೀವನ ಚೈತ್ರಕೇಂದ್ರಾಡಳಿತ ಪ್ರದೇಶಗಳುಸಮುಚ್ಚಯ ಪದಗಳುಬೀಚಿಆದೇಶ ಸಂಧಿಕನ್ನಡ ವಿಶ್ವವಿದ್ಯಾಲಯಭಾರತದ ಇತಿಹಾಸಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಸಾವಯವ ಬೇಸಾಯವೇದಾವತಿ ನದಿಹೊಯ್ಸಳ ವಾಸ್ತುಶಿಲ್ಪಸಚಿನ್ ತೆಂಡೂಲ್ಕರ್ಚೋಳ ವಂಶಒಗಟು🡆 More