ವೈಷ್ಣವಿ ಗೌಡ: ಚಲನಚಿತ್ರ ನಟಿ

ವೈಷ್ಣವಿ ಗೌಡ ಒಬ್ಬ ಭಾರತೀಯ ಮೂಲದ ಕಿರುತೆರೆ ಮತ್ತು ಚಲನಚಿತ್ರ ನಟಿ ಆಗಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಖ್ಯಾತಿಗಳಿಸಿದ್ದರು. ಇವರು ಬಿಗ್ ಬಾಸ್ ಕನ್ನಡ (ಸೀಸನ್ 8)ರ ಟಾಪ್- 4 ಸ್ಪರ್ಧಿಗಳಲ್ಲಿ ಒಬ್ಬರು ಆಗಿದ್ದರು. ಪ್ರಸ್ತುತ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ವೈಷ್ಣವಿ ಗೌಡ
ವೈಷ್ಣವಿ ಗೌಡ: ವೈಯಕ್ತಿಕ ಜೀವನ, ಚಲನಚಿತ್ರಗಳು, ದೂರದರ್ಶನ
ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ವೈಷ್ಣವಿ ಗೌಡ
Born (1995-02-20) ೨೦ ಫೆಬ್ರವರಿ ೧೯೯೫ (ವಯಸ್ಸು ೨೯)
Other namesಸನ್ನಿಧಿ
Educationಬಿ.ಎ
Occupation(s)ನಟಿ, ನಿರೂಪಕಿ
Years active೨೦೧೧– ಪ್ರಸ್ತುತ
Parents
  • ರವಿ ಕುಮಾರ್ ಗೌಡ (father)
  • ಭಾನು ರವಿ ಗೌಡ (mother)

ವೈಯಕ್ತಿಕ ಜೀವನ

ವೈಷ್ಣವಿ ಗೌಡ ಇವರು ಫೆಬ್ರವರಿ 20, 1995 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ರವಿಕುಮಾರ್ ಗೌಡ ಮತ್ತು ತಾಯಿ ಭಾನು ಗೌಡ ಆಗಿದ್ದಾರೆ. ಇವರಿಗೆ ಸುನೀಲ್ ಕುಮಾರ್ ಎಂಬ ಸಹೋದರನಿದ್ದಾನೆ.

ಕನ್ನಡ ಚಲನಚಿತ್ರ ನಟಿ ಅಮೂಲ್ಯ ಇವರ ಉತ್ತಮ ಸ್ನೇಹಿತೆ ಆಗಿದ್ದಾರೆ.

ಶಿಕ್ಷಣ ಮತ್ತು ವೃತ್ತಿ ಜೀವನ

ಇವರು ಬೆಂಗಳೂರಿನ ಜಯನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿಪೂರ್ವವನ್ನು ಪೂರ್ಣಗೊಳಿಸಿದರು. ಆದರೆ ಹಾಜರಿ ಕೊರತೆಯಿಂದ ಪದವಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ನಂತರ, ಬೆಂಗಳೂರು ವಿಶ್ವವಿದ್ಯಾಲಯದಿಂದ ದೂರಶಿಕ್ಷಣದ ಮೂಲಕ ಬಿಎಯಲ್ಲಿ ಪದವಿಯನ್ನು ಪಡೆದುಕೊಂಡರು.

ಇವರು ಭರತನಾಟ್ಯ, ಕುಚುಪುಡಿ ಮತ್ತು ಮೂರನೇ ಹಂತದ ಬೆಲ್ಲಿ ಡ್ಯಾನ್ಸ್ನಲ್ಲಿ ತರಬೇತಿ ಪಡೆದು ಕೊಂಡಿದ್ದಾರೆ.

೨೦೧೧ರಲ್ಲಿ ಝೀ ಕನ್ನಡದಲ್ಲಿ ಪ್ರಸಾರವಾದ ದೇವಿ ಧಾರಾವಾಹಿಯ ಮೂಲಕ ತಮ್ಮ ಹದಿನಾರನೇ ವಯಸ್ಸಿನಲ್ಲಿ ಕಿರುತೆರೆಯನ್ನು ಪ್ರವೇಶಿಸಿದರು. ವೈಷ್ಣವಿ ಗೌಡ ಅವರು ಅದರಲ್ಲಿನ ದೇವಿ ಪಾತ್ರ ಮತ್ತು ೨೦೧೩ರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರದ ಮೂಲಕ ಪ್ರಸಿದ್ಧರಾದರು.

ಇವರು ೨೦೧೭ರಲ್ಲಿ ಭರ್ಜರಿ ಕಾಮಿಡಿ ಶೋನಲ್ಲಿ ನಿರೂಪಕರಾಗಿದ್ದರು.

ಅಗ್ನಿಸಾಕ್ಷಿ

ಡಿಸೆಂಬರ್ ೨, ೨೦೧೩ರಲ್ಲಿ ತೆರೆ ಕಂಡ ಅಗ್ನಿಸಾಕ್ಷಿ ಧಾರಾವಾಹಿಯು ೧೫೮೬ ಎಪಿಸೋಡುಗಳು ಕಾಲ ಪ್ರಸಾರವಾಗಿತ್ತು. ೬ ವರ್ಷಗಳ ಕಾಲ ಕಲರ್ಸ್ ಕನ್ನಡವಾಹಿನಿಯಲ್ಲಿ ಪ್ರಸಾರವಾದ ಈ ಧಾರಾವಾಹಿಯು ೧೯.೭ ರಷ್ಟು ಟಿ.ಆರ್.ಪಿ ಹೊಂದಿತ್ತು. ಇದು ಈಗಲೂ ಕನ್ನಡ ಧಾರಾವಾಹಿಗಳ ಮಟ್ಟಿಗಿನ ಗರಿಷ್ಟ ಟಿ.ಆರ್.ಪಿ ಆಗಿದೆ.

ಚಲನಚಿತ್ರಗಳು

ಕೀಲಿ
ವೈಷ್ಣವಿ ಗೌಡ: ವೈಯಕ್ತಿಕ ಜೀವನ, ಚಲನಚಿತ್ರಗಳು, ದೂರದರ್ಶನ  ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷ ಶೀರ್ಷಿಕೆ ಪಾತ್ರ ನಾಯಕ ನಟ ನಿರ್ದೇಶಕ ಭಾಷೆ ಟಿಪ್ಪಣಿಗಳು Ref.
೨೦೧೬ ಡ್ರೆಸ್ ಕೋಡ್ ಪೃಥ್ವಿ ದಯಾನಂದ್ ಶಿವು ಕುಮಾರ್ ಕನ್ನಡ ಪೃಥ್ವಿ ದಯಾನಂದ್, ಹೇಮಾ, ದಿವ್ಯಾ ಉರುಡುಗ, ಕಾಂಚನಾ ಅವರು ಈ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ
೨೦೧೯ ಗಿರಿಗಿಟ್ಲೆ ಚಂದ್ರಶೇಖರ್, ಗುರುರಾಜ್, ಪ್ರದೀಪ್ ರಾಜ್ ರವಿ ಕಿರಣ್ ಕನ್ನಡ ಚಂದ್ರಶೇಖರ್, ಗುರುರಾಜ್, ಪ್ರದೀಪ್ ರಾಜ್ ನಾಯಕನಟರಾಗಿ ಅಭಿನಯಿಸಿದ್ದ ಈ ಚಿತ್ರದಲ್ಲಿ ವೈಷ್ಣವಿ ಗೌಡ ಮತ್ತು ಅದ್ವಿತಿ ಶೆಟ್ಟಿ ಅವರು ನಾಯಕಿಯರಾಗಿ ನಟಿಸಿದ್ದಾರೆ.

ದೂರದರ್ಶನ

ಧಾರಾವಾಹಿಗಳು

ವರ್ಷ ಶೀರ್ಷಿಕೆ ಪಾತ್ರ ಭಾಷೆ ವಾಹಿನಿ ಟಿಪ್ಪಣಿಗಳು Ref.
2011 ದೇವಿ ದೇವಿ (ನಾಯಕಿ) ಕನ್ನಡ ಝೀ ಕನ್ನಡ
2013 ಪುನರ್ ವಿವಾಹ ಪೋಷಕ ನಟಿ ಕನ್ನಡ ಝೀ ಕನ್ನಡ
ಅಗ್ನಿಸಾಕ್ಷಿ ಸನ್ನಿಧಿ (ನಾಯಕಿ) ಕನ್ನಡ ಕಲರ್ಸ್ ಕನ್ನಡ 2 ಡಿಸೆಂಬರ್ 2013 ರಿಂದ 3 ಜನವರಿ 2020 ರವರೆಗೆ
2023 ಸೀತಾರಾಮ ಸೀತಾ(ನಾಯಕಿ) ಕನ್ನಡ ಝೀ ಕನ್ನಡ

ರಿಯಾಲಿಟಿ ಶೋಗಳು

ವರ್ಷ ಶೀರ್ಷಿಕೆ ಪಾತ್ರ ಭಾಷೆ ವಾಹಿನಿ ಇತರೆ ಟಿಪ್ಪಣಿಗಳು Ref.
2017 ಭರ್ಜರಿ ಕಾಮಿಡಿ ನಿರೂಪಕಿ ಕನ್ನಡ ಸ್ಟಾರ್ ಸುವರ್ಣ ದೊಡ್ಡಣ್ಣ, ರಾಗಿಣಿ ದ್ವಿವೇದಿ ಅವರು ನಿರ್ಣಾಯಕರಾಗಿದ್ದ ಈ ಶೋ ನಲ್ಲಿ ವೈಷ್ಣವಿ ಗೌಡ ಅವರು ನಿರೂಪಣೆ ಮಾಡಿದ್ದರು.
2021 ಬಿಗ್ ಬಾಸ್ ಕನ್ನಡ (ಸೀಸನ್ 8) ಸ್ಪರ್ಧಿ ಕನ್ನಡ ಕಲರ್ಸ್ ಕನ್ನಡ COVID-19 ಸಾಂಕ್ರಾಮಿಕ ರೋಗದಿಂದಾಗಿ 8 ಮೇ 2021 ರಂದು ಸೀಸನ್ ಅನ್ನು ಅಮಾನತುಗೊಳಿಸಲಾಗಿತ್ತು. ಕೊನೆಯ ಸಂಚಿಕೆಯು 71 ದಿನಗಳ ಪ್ರದರ್ಶನದ ನಂತರ ಪ್ರಸಾರವಾಯಿತು. ನಂತರ ಈ ಸೀಸನ್ 23 ಜೂನ್ 2021 ರಿಂದ ಮುಂದುವರೆಯಿತು.

ಪ್ರಶಸ್ತಿಗಳು

ಟಿಪ್ಪಣಿಗಳು

ವೈಷ್ಣವಿ ಮತ್ತು ಬಿಗ್ ಬಾಸ್ ಎಂಟು

  • ^ಟಿಪ್ಪಣಿ 1 : ವೈಷ್ಣವಿ ಅವರು ಕನ್ನಡದ ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನ ಎಂಟನೇ ಅವತರಣಿಕೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಯಾರ ವಿರೋಧವನ್ನೂ ಕಟ್ಟಿಕೊಳ್ಳದೇ, ಬೈಯೋದನ್ನೂ ನಗುನಗುತ್ತಲೇ ಬಯ್ಯುತ್ತಿದ್ದ ಇವರು ರೇಷ್ಮೆ ಸೀರೆ ಎಂದು ಪ್ರಖ್ಯಾತರಾಗಿದ್ದರು. ಇವರು ಇದರ ಟಾಪ್-೪ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ವೈಷ್ಣವಿ ಗೌಡ ವೈಯಕ್ತಿಕ ಜೀವನವೈಷ್ಣವಿ ಗೌಡ ಚಲನಚಿತ್ರಗಳುವೈಷ್ಣವಿ ಗೌಡ ದೂರದರ್ಶನವೈಷ್ಣವಿ ಗೌಡ ಪ್ರಶಸ್ತಿಗಳುವೈಷ್ಣವಿ ಗೌಡ ಟಿಪ್ಪಣಿಗಳುವೈಷ್ಣವಿ ಗೌಡ ಉಲ್ಲೇಖಗಳುವೈಷ್ಣವಿ ಗೌಡ ಬಾಹ್ಯ ಕೊಂಡಿಗಳುವೈಷ್ಣವಿ ಗೌಡಅಗ್ನಿ ಸಾಕ್ಷಿ (ಧಾರಾವಾಹಿ)ಕಲರ್ಸ್ ಕನ್ನಡಝೀ ಕನ್ನಡಬಿಗ್ ಬಾಸ್ ಕನ್ನಡ (ಸೀಸನ್ 8)ಸೀತಾ ರಾಮ

🔥 Trending searches on Wiki ಕನ್ನಡ:

ನಾಮಪದವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಪರೀಕ್ಷೆಮಳೆಗಾಲಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಮಂಜುಳಸಂವಹನಉಪಯುಕ್ತತಾವಾದ೧೮೬೨ಗಾಂಧಿ- ಇರ್ವಿನ್ ಒಪ್ಪಂದಭಾರತದಲ್ಲಿ ತುರ್ತು ಪರಿಸ್ಥಿತಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆದಿಕ್ಕುಮಾದಕ ವ್ಯಸನಉಪನಯನಫುಟ್ ಬಾಲ್ಯಕೃತ್ತುಕೃಷ್ಣಏಡ್ಸ್ ರೋಗಅಲಂಕಾರತ್ರಿವೇಣಿಸಾಮಾಜಿಕ ಸಮಸ್ಯೆಗಳುಅಧಿಕ ವರ್ಷಯೋಗಪಶ್ಚಿಮ ಘಟ್ಟಗಳುರತ್ನತ್ರಯರುಸಾಮ್ರಾಟ್ ಅಶೋಕಶಿಕ್ಷಣಜೀವವೈವಿಧ್ಯಚಂದ್ರಶೇಖರ ಕಂಬಾರಚಾಮರಾಜನಗರವಂದೇ ಮಾತರಮ್ಎಸ್.ಎಲ್. ಭೈರಪ್ಪಮುಪ್ಪಿನ ಷಡಕ್ಷರಿಅಷ್ಟ ಮಠಗಳುಗೋತ್ರ ಮತ್ತು ಪ್ರವರಜಾಗತಿಕ ತಾಪಮಾನಪಾರ್ವತಿಆದಿಚುಂಚನಗಿರಿಅಂತರ್ಜಲನೀತಿ ಆಯೋಗಕರ್ನಾಟಕದ ಸಂಸ್ಕೃತಿಸಾರ್ವಜನಿಕ ಆಡಳಿತಕ್ರಿಕೆಟ್ಕರ್ನಾಟಕ ವಿಧಾನ ಪರಿಷತ್ಜ್ಯೋತಿಬಾ ಫುಲೆಭಾರತದ ಸ್ವಾತಂತ್ರ್ಯ ದಿನಾಚರಣೆನೀನಾದೆ ನಾ (ಕನ್ನಡ ಧಾರಾವಾಹಿ)ಶಿವಜೀವನಕ್ರೈಸ್ತ ಧರ್ಮಪು. ತಿ. ನರಸಿಂಹಾಚಾರ್ಅನುರಾಧಾ ಧಾರೇಶ್ವರಉತ್ತರ ಕನ್ನಡಕಾಂತಾರ (ಚಲನಚಿತ್ರ)ಮಲ್ಲಿಕಾರ್ಜುನ್ ಖರ್ಗೆಶಿರ್ಡಿ ಸಾಯಿ ಬಾಬಾಸಾವಿತ್ರಿಬಾಯಿ ಫುಲೆಮಾನವನ ವಿಕಾಸಸ್ಕೌಟ್ ಚಳುವಳಿತುಮಕೂರುಎಸ್.ಜಿ.ಸಿದ್ದರಾಮಯ್ಯನಾಟಕಭಾರತದ ರೂಪಾಯಿಜವಹರ್ ನವೋದಯ ವಿದ್ಯಾಲಯಗೂಬೆಮೌರ್ಯ ಸಾಮ್ರಾಜ್ಯಭೋವಿಲೆಕ್ಕ ಬರಹ (ಬುಕ್ ಕೀಪಿಂಗ್)ಸೀತೆಭಾರತ ಸಂವಿಧಾನದ ಪೀಠಿಕೆಮಹಿಳೆ ಮತ್ತು ಭಾರತವಿಕ್ರಮಾರ್ಜುನ ವಿಜಯಜೋಡು ನುಡಿಗಟ್ಟುಹೊಯ್ಸಳ ವಿಷ್ಣುವರ್ಧನಅರ್ಜುನ🡆 More