ಮೈಸೂರು ಕನ್ನಡ

ಮೈಸೂರು, ಮಂಡ್ಯ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಶಿವಮೊಗ್ಗ, ಚಿತ್ರದುರ್ಗ, ಮತ್ತು ಚಿಕ್ಕಮಗಳೂರು- ಈ ಜಿಲ್ಲೆಗಳಲ್ಲಿ ಆಡುವ ಕನ್ನಡ ಭಾಷೆಯನ್ನು ಮೈಸೂರುಕನ್ನಡ ಎಂದು ಕರೆಯುವುದು ವಾಡಿಕೆ.

ಮೈಸೂರು ಕನ್ನಡದ ವಿದ್ಯಾವಂತ ಹಾಗೂ ಅವಿದ್ಯಾವಂತರ ಭಾಷೆಗಳ ನಡುವೆ ವ್ಯಾಕರಣ ವಿಚಾರಗಳಲ್ಲಿ ಕೇವಲ ಸ್ವಲ್ಪ ಅಂತರ ಕಂಡುಬರುತ್ತದೆ. ಅವನು ಎಂಬುದನ್ನು ಅವ್ನು, ಅವ ಎಂತಲೂ ಕೆಲವು ರೂಪಗಳು ವ್ಯತ್ಯಾಸಗೊಂಡು ಬಳಕೆಯಲ್ಲಿರುವುದನ್ನು ಗಮನಿಸಬಹುದು. ಹಾಗೆಯೇ ಮಾಡುತ್ತೇನೆ, ಮಾಡ್ತೇನೆ, ಮಾಡ್ತಿನಿ, ನೋಡುತ್ತೇನೆ, ನೋಡ್ತೇನೆ, ನೋಡುವ, ಮಾಡೋಣ, ಮಾಡುವ ಎಂಬ ವಿಧ್ಯರ್ಥಕ ರೂಪಗಳೂ ವಿದ್ಯಾವಂತ ಹಾಗೂ ಅವಿದ್ಯಾವಂತರ ನಡುವೆ ವ್ಯತ್ಯಸ್ತಗೊಂಡು ಉಚ್ಚಾರಗೊಳ್ಳುವುದನ್ನು ಕಾಣಬಹುದು.

ಭಾಷಾವಿಜ್ಞಾನ ಮತ್ತು ವ್ಯಾಕರಣಾಂಶಗಳು

ಸ್ವರಧ್ವನಿಮಾ ವ್ಯವಸ್ಥೆ

ಮೈಸೂರು ಕನ್ನಡದಲ್ಲಿ ಸಾಮಾನ್ಯವಾಗಿ ಸಂಧ್ಯಕ್ಷರಗಳು ಗೋಚರಿಸುವುದಿಲ್ಲ. ವಿದ್ಯಾವಂತರ ಕನ್ನಡದಲ್ಲಿ ಅ, ಆ, ಇ, ಈ, ಉ, ಊ, ಎ, ಏ, ಒ, ಓ, ಎಂಬ ಹತ್ತು ಸ್ವರ ಧ್ವನಿಮಾಗಳಿವೆ. ಅವಿದ್ಯಾವಂತರ ಕನ್ನಡದಲ್ಲಿ ಈ ಹತ್ತು ಸ್ವರ ಧ್ವನಿಮಾಗಳ ಜೊತೆಗೆ ಆ, ಅ್ಯ ಮತ್ತು ಒ ಎಂಬ ಮೂರು ಸ್ವರ ಧ್ವನಿಮಾಗಳು ಸೇರಿ ಒಟ್ಟು 13 ಕ್ಕೂ ಹೆಚ್ಚು ಸ್ವರ ಧ್ವನಿಮಾಗಳು ಗೋಚರವಾಗುತ್ತವೆ.

ಉಪ ಧ್ವನಿಗಳು

ಮಹಾ ಪ್ರಾಣಾಕ್ಷರಗಳು ಕಂಡುಬರುವುದಿಲ್ಲ. ಅವಿದ್ಯಾವಂತರ ಭಾಷೆಯಲ್ಲಿ ವಿಶೇಷವಾಗಿ ಮಂಡ್ಯ ಪ್ರಾಂತದಲ್ಲಿ ಹ ಕಾರ ಲೋಪವಾಗಿ ಹಾಲು ಎಂಬುದನ್ನು ಆಲು ಎಂತಲೂ ಹಲ್ಲು ಎಂಬುದನ್ನು ಅಲ್ಲು ಎಂತಲೂ ಹೇಳುವುದೂ ರೂಡಿ. ಹಾಗೆಯೇ ಅ ಮತ್ತು ಆ ಕಾರಗಳ ಸ್ಥಳದಲ್ಲಿ ಹ ಮತ್ತು ಹಾ ಕಾರಗಳು ನುಸುಳುವುದುಂಟು. ವಿದ್ಯಾವಂತ ಹಾಗೂ ಅವಿದ್ಯಾವಂತರಿಬ್ಬರಲ್ಲೂ ಞ, ಙ ಎಂಬ ಅನುನಾಸಿಕ ಧ್ವನಿಗಳು ನ ಅನುನಾಸಿಕ ಧ್ವನಿಮಾದ ಉಪಧ್ವನಿಗಳಾಗಿ ಕಂಡುಬರುತ್ತವೆ. ಅವಿದ್ಯಾವಂತರ ಕನ್ನಡದಲ್ಲಿ ಶ,ಷ,ಸ, ಎಂಬ ಊಷ್ಮ ಧ್ವನಿಗಳು ಕಂಡುಬರುತ್ತವೆಯಾದರೂ ಅವು ಬೇರೆ ಬೇರೆ ಧ್ವನಿಮಾಗಳಾಗಿರದೆ ಶ ಮತ್ತು ಷ ಧ್ವನಿಗಳು ಸ ಧ್ವನಿಯ ಉಪಧ್ವನಿಯಾಗಿ ಕಂಡಬರುತ್ತವೆ.

ಅನ್ಯಭಾಷಾ ಪ್ರಯೋಗ

  • ಇಂಗ್ಲಿಷಿನ ಕೆಲವು ಸ್ವೀಕೃತ ಪದಗಳಲ್ಲಿ ಫ (ಜಿ) ಜ (z), ಇತ್ಯಾದಿ ಧ್ವನಿಗಳು ಕಂಡುಬರುತ್ತವೆ. ಆದರೂ ಅವುಗಳನ್ನು ಅವಿದ್ಯಾವಂತರು ಪ (ಕಾಪಿs > ಕಾಪಿ) ಮತ್ತು (ಡಜನ್ > ಡಜನ್) ಎಂದೇ ಉಚ್ಚರಿಸುತ್ತಾರೆ. ಪದದ ಆದಿಯಲ್ಲಿ ಬರುವ ಎ ಮತ್ತು ಒ ಸ್ವರಗಳು ‘ಯೆ’ ಮತ್ತು ‘ಮೊ’ ಎಂದು ಉಚ್ಚಾರವಾಗುತ್ತವೆ. ಈ ಬಗೆಯ ಭಾಷಾ ವ್ಯತ್ಯಾಸ ಒಂದೇ ವರ್ಗದ ಅವಿದ್ಯಾವಂತರಿಗೆ ಮಾತ್ರ ಸೀಮಿತವಾಗಿರದೆ ಎಲ್ಲಾ ಜಾತಿ,ಸಂಸ್ಕೃತಿಯ ಜನರಿಗೂ ಅನ್ವಯಿಸುತ್ತದೆ.
  • ನಿಮ್ನವರ್ಗದ ಜನರ ಆಡುಭಾಷೆಯನ್ನು ಗಮನಿಸಿದರೆ, ಅವರು ‘ಏ’ ಕಾರವನ್ನು ‘ಯಾ’ ಎಂತಲೂ ಮತ್ತೆ ಕೆಲವು ವಿದ್ಯಾವಂತರೂ ಕೂಡ ಈ ಬಗೆಯಲ್ಲಿಯೇ ‘ಬೇಡ’ ಎಂಬುದನ್ನು ‘ಬ್ಯಾಡ’ ಎಂತಲೂ ಪೇಟೆ ಎಂಬುದನ್ನು ಪ್ಯಾಟೆ ಎಂತಲೂ ಬೇಟೆ ಎಂಬುದನ್ನು ಬ್ಯಾಟೆ ಎಂತಲೂ ಉಚ್ಚರಿಸುವುದನ್ನು ಕಾಣಬಹುದು. ಹಾಸನ ಪ್ರಾಂತದ ಕೆಲವು ಕಡೆ ಅವಿದ್ಯಾವಂತರಲ್ಲಿ ‘ಕ’ ಕಾರ ಚಕಾರವಾಗಿ ಉಚ್ಚಾರವಾಗುತ್ತದೆ ಉದಾ: ಕೆಂಡ > ಚೆಂಡ, ಕೆರೆ > ಚೆರೆ, ಕೆಲ > ಚೆಲ. ಕೆಲವರು ಚ ಕಾರವನ್ನು ಸ ಕಾರವನ್ನಾಗಿ (ಚಾಪೆ > ಸಾಪೆ) ಉಚ್ಚರಿಸುವುದೂ ಉಂಟು. ಹಾಗೆಯೇ ಕಾಗದ > ಕಾದಗ, ಕಾಜಗ ಎಂದು ಉಚ್ಚರಿಸುವುದನ್ನು ಅಲ್ಲಲ್ಲಿ ಕಾಣಬಹುದು.
  • ಮೈಸೂರು ಕನ್ನಡದ ವಿದ್ಯಾವಂತ ಹಾಗೂ ಅವಿದ್ಯಾವಂತರ ಭಾಷೆಗಳ ನಡುವೆ ವ್ಯಾಕರಣ ವಿಚಾರಗಳಲ್ಲಿ ಕೇವಲ ಸ್ವಲ್ಪ ಅಂತರ ಕಂಡುಬರುತ್ತದೆ. ಅವನು ಎಂಬುದನ್ನು ಅವುï್ನ, ಅವ ಎಂತಲೂ ಕೆಲವು ರೂಪಗಳು ವ್ಯತ್ಯಾಸಗೊಂಡು ಬಳಕೆಯಲ್ಲಿರುವುದನ್ನು ಗಮನಿಸಬಹುದು. ಹಾಗೆಯೇ ಮಾಡುತ್ತೇನೆ, ಮಾಡ್ತೇನೆ, ಮಾಡ್ತಿನಿ, ನೋಡುತ್ತೇನೆ, ನೋಡ್ತೇನೆ, ನೋಡುವ, ಮಾಡೋಣ, ಮಾಡುವ ಎಂಬ ವಿಧ್ಯರ್ಥಕ ರೂಪಗಳೂ ವಿದ್ಯಾವಂತ ಹಾಗೂ ಅವಿದ್ಯಾವಂತರ ನಡುವೆ ವ್ಯತ್ಯಸ್ತಗೊಂಡು ಉಚ್ಚಾರಗೊಳ್ಳುವುದನ್ನು ಕಾಣಬಹುದು.

ಉಲ್ಲೇಖ

ಮೈಸೂರು ಕನ್ನಡ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಮೈಸೂರು ಕನ್ನಡ ಭಾಷಾವಿಜ್ಞಾನ ಮತ್ತು ವ್ಯಾಕರಣಾಂಶಗಳುಮೈಸೂರು ಕನ್ನಡ ಉಲ್ಲೇಖಮೈಸೂರು ಕನ್ನಡಕೋಲಾರಚಿಕ್ಕಬಳ್ಳಾಪುರಚಿಕ್ಕಮಗಳೂರುಚಿತ್ರದುರ್ಗತುಮಕೂರುಬೆಂಗಳೂರುಮಂಡ್ಯಮೈಸೂರುಶಿವಮೊಗ್ಗಹಾಸನ

🔥 Trending searches on Wiki ಕನ್ನಡ:

ಕರ್ನಾಟಕದ ಜಿಲ್ಲೆಗಳುಯು.ಆರ್.ಅನಂತಮೂರ್ತಿಶ್ರೀಶೈಲಅವರ್ಗೀಯ ವ್ಯಂಜನಸರ್ವೆಪಲ್ಲಿ ರಾಧಾಕೃಷ್ಣನ್ಶಿವಕುಮಾರ ಸ್ವಾಮಿಲೆಕ್ಕ ಪರಿಶೋಧನೆಅರ್ಥಶಾಸ್ತ್ರಎಚ್.ಎಸ್.ವೆಂಕಟೇಶಮೂರ್ತಿಮಣ್ಣುಬಿ. ಜಿ. ಎಲ್. ಸ್ವಾಮಿಪಾರ್ವತಿಅಂಗವಿಕಲತೆತಂತ್ರಜ್ಞಾನತತ್ಪುರುಷ ಸಮಾಸಎ.ಕೆ.ರಾಮಾನುಜನ್ಮಂಜಮ್ಮ ಜೋಗತಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಕೇಶಿರಾಜಗಣೇಶ ಚತುರ್ಥಿಉತ್ತರ (ಮಹಾಭಾರತ)ಏಕಲವ್ಯಬೇಲೂರುನಾಗರಹಾವು (ಚಲನಚಿತ್ರ ೧೯೭೨)ಮಯೂರವರ್ಮಬಿ.ಎಲ್.ರೈಸ್ಜಯದೇವಿತಾಯಿ ಲಿಗಾಡೆಬಾನು ಮುಷ್ತಾಕ್ಬ್ಯಾಸ್ಕೆಟ್‌ಬಾಲ್‌ರಾಷ್ಟ್ರಕೂಟಸಂಸ್ಕೃತ ಸಂಧಿಸಂಗೊಳ್ಳಿ ರಾಯಣ್ಣದಕ್ಷಿಣ ಕನ್ನಡಕನ್ನಡ ಸಂಧಿಶಿಶುನಾಳ ಶರೀಫರುಪಂಚಾಂಗರಾಮ ಮನೋಹರ ಲೋಹಿಯಾಕೇಂದ್ರ ಸಾಹಿತ್ಯ ಅಕಾಡೆಮಿಹುಯಿಲಗೋಳ ನಾರಾಯಣರಾಯಬಹಮನಿ ಸುಲ್ತಾನರುಮಧುಮೇಹಕೃಷ್ಣರಾಜಸಾಗರಪ್ಲಾಸಿ ಕದನಯಣ್ ಸಂಧಿಕರ್ಣಅ. ರಾ. ಮಿತ್ರಮೊದಲನೇ ಅಮೋಘವರ್ಷಮಾಸ್ತಿ ವೆಂಕಟೇಶ ಅಯ್ಯಂಗಾರ್ಧರ್ಮಸ್ಥಳಗಣಜಿಲೆಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಮೂಲಧಾತುಸಾಮ್ರಾಟ್ ಅಶೋಕನರಿಜೋಡು ನುಡಿಗಟ್ಟುಗುರುರಾಜ ಕರಜಗಿಆಯ್ಕಕ್ಕಿ ಮಾರಯ್ಯಗೌತಮ ಬುದ್ಧಆರೋಗ್ಯಶ್ರೀ ರಾಮ ನವಮಿವ್ಯಾಸರಾಯರುಅಂಕಿತನಾಮವಿಕ್ರಮಾರ್ಜುನ ವಿಜಯಬ್ರಹ್ಮ ಸಮಾಜಜಯಂತ ಕಾಯ್ಕಿಣಿಭಾರತೀಯ ರಿಸರ್ವ್ ಬ್ಯಾಂಕ್ಪ್ಯಾರಿಸ್ತತ್ಸಮ-ತದ್ಭವಪುಟ್ಟರಾಜ ಗವಾಯಿಸಮೂಹ ಮಾಧ್ಯಮಗಳುಸ್ವಾಮಿ ವಿವೇಕಾನಂದರಾಮ್ ಮೋಹನ್ ರಾಯ್ದಶರಥಮಲ್ಲಿಕಾರ್ಜುನ ಜ್ಯೋತಿರ್ಲಿಂಗಆಂಡಯ್ಯಧರ್ಮವಂದನಾ ಶಿವ🡆 More