ಬಲ್ಲಾಳ ರಾಯನ ದುರ್ಗ

ಬಲ್ಲಾಳ ರಾಯನ ದುರ್ಗ ಕುದುರೆಮುಖ ಪರ್ವತಶ್ರೇಣಿಯಲ್ಲಿರುವ ಒಂದು ಪರ್ವತ.

ಇದು ಚಿಕ್ಕಮಗಳೂರಿನ ಪ್ರವಾಸಿ ಸ್ಥಳ. ದಕ್ಷಿಣಕನ್ನಡ ಮತ್ತು ಚಿಕ್ಕಮಗಳೂರಿನ ಗಡಿಯಲ್ಲಿದ್ದು ಮೂಡಿಗೆರೆ ತಾಲೂಕಿನಲ್ಲಿರುವ ದುರ್ಗದಹಳ್ಳಿ ಗ್ರಾಮದಲ್ಲಿದೆ. ಇಲ್ಲಿ ಹೊಯ್ಸಳ ರಾಜ ಒಂದನೆಯ ವೀರ ಬಲ್ಲಾಳ ೧೨ನೆಯ ಶತಮಾನದಲ್ಲಿ ಕಟ್ಟಿಸಿದ ಕೋಟೆ ಇದೆ. ಹಾಗಾಗಿ ಬಲ್ಲಾಳರಾಯನದುರ್ಗ ಎಂಬ ಹೆಸರು ಬಂದಿದೆ. ಇದು ಸಮುದ್ರ ಮಟ್ಟದಿಂದ ೧೫೦೯ ಮೀಟರ್ ಎತ್ತರವಿದ್ದು ಸುತ್ತಲೂ ರಮಣೀಯ ದೃಶ್ಯ ಕಾಣಬರುತ್ತದೆ.ಇಲ್ಲಿಂದ ಸುಂದರವಾದ ಸೂರ್ಯಾಸ್ತವನ್ನು ವೀಕ್ಷಿಸಬಹುದಾಗಿದೆ.

    ಬಿದನೂರಿನ ಬಸಪ್ಪನಾಯಕನು ೧೭೫೫ ಕಾಲವಾಗಲು ಅವನ ಹೆಂಡತಿಯೂ ಚನ್ನಬಸವಯ್ಯನೆಂಬ (ಚನ್ನಬಸವ ನಾಯಕ) ಅವನ ಪುತ್ರ ರಾಜ್ಯವನ್ನು ನೋಡಿಕೊಳ್ಳುತ್ತಿದ್ದರು ಆದರೆ ರಾಣಿ ನಿಂಬಯ್ಯನೆಂಬುವನನ್ನು ಕಟ್ಟಿಕೊಂಡು ದುರ್ನಡತೆಗೆ ಬಿದ್ದಿದ್ದಳು ಇದು ಮಗನಿಗೆ ತಿಳಿದು ಆಕ್ಷೇಪಿಸಿದನು.ಆದುದರಿಂದ ಅವನನ್ನು ಕೂಲ್ಲಿಸಿದರು     ಇದನ್ನೇ ನೆವವಾಗಿರಿಸಿ ಹೈದರಾಲಿ ಬಿದನೂರಿಗೆ ಮುತ್ತಿಗೆ ಹಾಕಲು ರಾಣಿಗೂ,ಅವಳ ಇನಿಯನಿಗೂ ಹೆದರಿಕೆ ಉಂಟಾಗಿ ಬಲ್ಲಾಳರಾಯನದುರ್ಗಕ್ಕೆ ಸೊಸೆ (ಚನ್ನಬಸವನಾಯಕನ ಹೆಂಡತಿ) ಜೊತೆ ಓಡಿ ಬಂದರು, ಸೊಸೆ ತುಂಬಿದ ಬಸುರಿ ಇಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಳು ಇದನ್ನೇ ರಾಣಿ ಜರಿ ಎನ್ನುತ್ತಾರೆ     ಅನಂತರ ಹೈದರಾಲಿ ರಾಣಿ ಮತ್ತು ನಿಂಬಯ್ಯ ಇವರನ್ನು ಮದ್ಧಗಿರಿಯ ದುರ್ಗದಲ್ಲಿ ಸೆರೆಯಿಡಿಸಿದನು. 

(Willks ರವರ ಮೈಸೂರು ಚರಿತ್ರೆ---ಮೊದಲನೇ ಬಾಗ ,ಪುಟ ೪೪೭ - ೪೫೪)

    ಇನ್ನೂ ಹೆಚ್ಚಿನ ವಿವರಗಳಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರ 'ಚೆನ್ನಬಸವನಾಯಕ 'ಕಾದಂಬರಿ ಓದಿ ಮತ್ತು ಕುವೆಂಪು ಅವರ ರಕ್ತಾಕ್ಷಿ ನಾಟಕದ ಮುನ್ನುಡಿ ನೋಡಿ 

ಚಾರಣ ಸ್ಥಳ

  • ಇದೊಂದು ಪ್ರಶಸ್ತವಾದ ಚಾರಣ ಸ್ಥಳವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮುಂಡಾಜೆಯಿಂದ ಚಾರಣ ಮಾಡಬಹುದಾಗಿದೆ. ದಾರಿಯಲ್ಲಿ ಸಿಗುವ ಬಂಡಾಜೆ ಅರ್ಬಿ (ಜಲಪಾತ)ಚಾರಣಿಗರಿಗೆ ಹೆಚ್ಚುವರಿ ಆಕರ್ಷಣೆ.
  • ಕೊಟ್ಟಿಗೆಹಾರ ರಸ್ತೆಯಿಂದ ಕಳಸಕ್ಕೆ ಸಾಗುವ ಮಾರ್ಗದಲ್ಲಿ ಸುಂಕಸಾಲೆ ಗ್ರಾಮದ ಬಳಿ ಒಂದು ರಸ್ತೆ ಎಡಕ್ಕೆ ಸಾಗಿದರೆ ಬಲ್ಲಾಳರಾಯನ ದುರ್ಗದ ಬುಡ ತಲುಪಬಹುದು. ಬಸ್ ಸೌಕರ್ಯ ಇಲ್ಲದೆ ಇರುವುದರಿಂದ ಖಾಸಗಿ ವಾಹನದಲ್ಲಿ ಇಲ್ಲಿಗೆ ಬರುವುದು ಸೂಕ್ತ. ಕೋಟೆ ಇರುವ ಸ್ಥಳಕ್ಕೆ ಸಾಗಬೇಕಾದರೆ ಸುಮಾರು 3 ಕಿ.ಮಿ ದೂರ ಬೆಟ್ಟಸಾಲುಗಳ ನಡುವೆ ಕಾಲ್ನಡಿಗೆಯಲ್ಲೆ ಸಾಗಬೇಕು.

ಉಲ್ಲೇಖಗಳು

ಬಲ್ಲಾಳ ರಾಯನ ದುರ್ಗ 
Forts of Karnataka. ()

ಈ ಟೆಂಪ್ಲೇಟ್ ಅನ್ನು ಕರ್ನಾಟಕದ ಕೋಟೆಗಳು ಲೇಖನದಲ್ಲಿ ಬಳಸಲಾಗಿದೆ.

Tags:

ಕುದುರೆಮುಖಚಿಕ್ಕಮಗಳೂರುಹೊಯ್ಸಳ

🔥 Trending searches on Wiki ಕನ್ನಡ:

ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಮೌರ್ಯ ಸಾಮ್ರಾಜ್ಯಮೋಳಿಗೆ ಮಾರಯ್ಯಗ್ರಹಭಾರತದ ಸಂವಿಧಾನದ ೩೭೦ನೇ ವಿಧಿ1935ರ ಭಾರತ ಸರ್ಕಾರ ಕಾಯಿದೆಒಡೆಯರ್ಕೆ. ಅಣ್ಣಾಮಲೈಹುಲಿಇಮ್ಮಡಿ ಪುಲಿಕೇಶಿಹೆಚ್.ಡಿ.ಕುಮಾರಸ್ವಾಮಿದಾವಣಗೆರೆ೧೬೦೮ಚುನಾವಣೆಖ್ಯಾತ ಕರ್ನಾಟಕ ವೃತ್ತದೆಹಲಿ ಸುಲ್ತಾನರುಕರ್ನಾಟಕದ ಏಕೀಕರಣಆರತಿಶ್ರೀಕೃಷ್ಣದೇವರಾಯಅನುನಾಸಿಕ ಸಂಧಿಸ್ಕೌಟ್ ಚಳುವಳಿಸರಾಸರಿಶಿವಮೊಗ್ಗಸೀತಾ ರಾಮಸಂಸ್ಕಾರನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಮತದಾನತೀ. ನಂ. ಶ್ರೀಕಂಠಯ್ಯಕರ್ಮಉಪ್ಪಿನ ಸತ್ಯಾಗ್ರಹಹೊಯ್ಸಳೇಶ್ವರ ದೇವಸ್ಥಾನರಾಷ್ಟ್ರೀಯ ಸೇವಾ ಯೋಜನೆಕರಗ (ಹಬ್ಬ)ಭಾರತದ ಸಂವಿಧಾನ ರಚನಾ ಸಭೆಮೂಲಧಾತುಗಳ ಪಟ್ಟಿಯೇಸು ಕ್ರಿಸ್ತಭಾರತೀಯ ರಾಷ್ಟ್ರೀಯ ಕಾಂಗ್ರೆಸ್ವಿಮರ್ಶೆನಚಿಕೇತಭಾರತದ ರೂಪಾಯಿಮಧ್ವಾಚಾರ್ಯಭಾರತೀಯ ಕಾವ್ಯ ಮೀಮಾಂಸೆಗಿಡಮೂಲಿಕೆಗಳ ಔಷಧಿಉತ್ತರ ಕನ್ನಡದಶಾವತಾರಅಂತರ್ಜಲಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಭಾರತೀಯ ಮೂಲಭೂತ ಹಕ್ಕುಗಳುಬಾಹುಬಲಿಕರ್ನಾಟಕ ಹೈ ಕೋರ್ಟ್ತತ್ಪುರುಷ ಸಮಾಸಮೂಕಜ್ಜಿಯ ಕನಸುಗಳು (ಕಾದಂಬರಿ)ದ್ವಿರುಕ್ತಿಅಶೋಕನ ಶಾಸನಗಳುಬಿ.ಜಯಶ್ರೀಕನ್ನಡ ಸಾಹಿತ್ಯ ಪರಿಷತ್ತುಬೆಳಗಾವಿಅಸ್ಪೃಶ್ಯತೆಪ್ರಾಥಮಿಕ ಶಾಲೆವೇಶ್ಯಾವೃತ್ತಿತ್ರಿವೇಣಿಎಳ್ಳೆಣ್ಣೆನಾಲ್ವಡಿ ಕೃಷ್ಣರಾಜ ಒಡೆಯರುಶಾಂತರಸ ಹೆಂಬೆರಳುಟಿಪ್ಪು ಸುಲ್ತಾನ್ರವಿಚಂದ್ರನ್ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಗೊರೂರು ರಾಮಸ್ವಾಮಿ ಅಯ್ಯಂಗಾರ್ಪರೀಕ್ಷೆಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಅಡಿಕೆಭಾರತದ ರಾಷ್ಟ್ರಪತಿರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಬೆಂಗಳೂರು🡆 More