ಜನಪದ ನೃತ್ಯಗಳು

ಜನಪದ ನೃತ್ಯಗಳು: ಮನುಷ್ಯನ ಬದುಕನ್ನು ತೀವ್ರ ಸಂವೇದನೆಗೊಳಗಾಗಿಸುವ ಹುಟ್ಟು, ಸಾವು ಮತ್ತು ಇವುಗಳ ನಡುವೆ ಅವನಿಗೆ ಉಂಟಾಗುವ ನಾನಾ ತರಹದ ಅನುಭವಗಳಿಗೆ ಒಂದು ಜನಾಂಗ ಚಲನೆಯ ಮೂಲಕ ವ್ಯಕ್ತಪಡಿಸುವ ಒಂದು ಪ್ರತಿಕ್ರಿಯೆಯಾಗಿ ನೃತ್ಯ ಹುಟ್ಟಿತೆನ್ನಬಹುದು.

ಮೂಲಭೂತವಾಗಿ ಅದು ಅವನ ಅತೀವ ಆನಂದದ, ತೃಪ್ತಿಯ ಸರಳ ಅಭಿವ್ಯಕ್ತಿ. ಜನಾಂಗದ ಆಚರಣೆ, ಸಂಪ್ರದಾಯ, ನಂಬಿಕೆ, ಮೂಢನಂಬಿಕೆ, ವೃತ್ತಿ ಮುಂತಾದವನ್ನೂ ಅದು ಪ್ರತಿ ಬಿಂಬಿಸುತ್ತದೆ.

ಹಿನ್ನೆಲೆ

ಜನಪದ ನೃತ್ಯ ಆದಿಮಾನವನ ಅನಿಸಿಕೆಗಳನ್ನು ಅಭಿವ್ಯಕ್ತಪಡಿಸುವ ಮೊದಲ, ಮತ್ತು ಏಕಮಾತ್ರ ಮಾಧ್ಯಮ ಆಗಿತ್ತೆಂಬ ಅಭಿಪ್ರಾಯವಿದೆ. ಅವನು ತನಗೂ ತನ್ನ ದೇವರಿಗೂ ಇರುವ ಸಂಬಂಧವನ್ನು ವ್ಯಕ್ತಪಡಿಸುವುದಕ್ಕಾಗಿ, ಬದುಕಿನಲ್ಲಿ ಬರುವ ಕೆಡಕುಗಳನ್ನು ನಿವಾರಿಸಿಕೊಳ್ಳುವುದಕ್ಕಾಗಿ, ಋತುಮಾನಗಳಲ್ಲಾಗುವ ಬದಲಾವಣೆಗಳನ್ನು ಗಮನಿಸುವುದಕ್ಕಾಗಿ, ಸೂರ್ಯನ ಉದಯ ಮತ್ತು ಅಸ್ತಮಗಳನ್ನು ಸೂಚಿಸುವುದಕ್ಕಾಗಿ, ಚಂದ್ರನ ಆಕಾರದಲ್ಲಾಗುವ ವ್ಯತ್ಯಾಸಗಳನ್ನು ಗುರುತಿಸುವುದಕ್ಕಾಗಿ, ಬದುಕಿನಲ್ಲಿ ಬೇರೆ ಬೇರೆ ಕೆಲಸಗಳನ್ನು ಅರಸುವುದರ ಪ್ರತೀಕವಾಗಿ, ಪ್ರಕೃತಿ, ಪ್ರಾಣಿಪಕ್ಷಿ ಇವುಗಳ ಚಲನವಲನಗಳನ್ನು ಅಭಿನಯನದ ಮೂಲಕ ಹಿಡಿದಿಡುವುದಕ್ಕಾಗಿ ನೃತ್ಯವನ್ನು ಅಭಿನಯಿಸಲಾರಂಭಿಸಿದ. ಪ್ರತಿಯೊಂದು ದೇಶವೂ ತನ್ನದೇ ಆದ ಜನಪದ ನೃತ್ಯ ಸಂಪ್ರದಾಯಗಳನ್ನು ಹೊಂದಿದ್ದರೂ ಬಹುಪಾಲು ನೃತ್ಯಗಳ ಮೂಲ ಉದ್ದೇಶ ಮರೆತುಹೋಗಿದೆ. ಆದರೂ ನೃತ್ಯಗಳ ಮೂಲ ಉದ್ದೇಶಗಳನ್ನು ಪ್ರಯತ್ನದಿಂದ ಸ್ವಲ್ಪಮಟ್ಟಿಗೆ ಸಂಶೋಧಿಸಲಾಗಿದೆ.

ನೃತ್ಯ ಮಾಡುವ ಸ್ಥಳ

ಸಾಮಾನ್ಯವಾಗಿ ಪ್ರತಿಯೊಂದು ಜನಪದ ನೃತ್ಯವೂ ಆಯಾ ಪ್ರದೇಶದ ಭೌಗೋಳಿಕ ಹಿನ್ನೆಲೆಯ ಮೇಲೆ ಬೆಳೆದಿರುತ್ತದೆ. ಚುರುಕಾದ, ಶ್ರಮಸಾಧ್ಯವಾದ ಮತ್ತು ಕಟ್ಟುನಿಟ್ಟಾದ ಚಲನೆಯ ನೃತ್ಯಗಳು ಉತ್ತರ ರಷ್ಯ, ಸ್ಕ್ಯಾಂಡಿನೇವಿಯ ಮತ್ತು ಸ್ಕಾಟ್ಲೆಂಡಿನಂಥ ಚಳಿ ಪ್ರದೇಶಗಳ ನೃತ್ಯಗಳಾದರೆ, ಆವೇಶಪೂರಿತವಾದ ಮತ್ತು ಭಾವೋದ್ರೇಕದ ನೃತ್ಯಗಳು ಅಧಿಕ ಉಷ್ಣಾಂಶಗಳಿರುವ ಸ್ಪೇನ್, ಮೆಕ್ಸಿಕೋ ಆಫ್ರಿಕ, ದಕ್ಷಿಣ ಇಟಲಿಯಂಥ ಪ್ರದೇಶಗಳಲ್ಲಿ ಕಂಡುಬರುತ್ತವೆ. ಜನಪದ ನೃತ್ಯಗಳ ಅಸಂಖ್ಯ ಶೈಲಿಗೆ ಆಯಾ ಜನಾಂಗ ವಾಸಮಾಡುವ ಭೂಮಿಯ ವ್ಯವಸ್ಥೆಯೂ ಕಾರಣವಾಗಿರುತ್ತದೆ. ಮರಳ ಗಾಡಿನಲ್ಲಿ ಬದುಕುವ ಜನ ನೃತ್ಯಮಾಡುವಾಗ ಒಂದೇ ಸಮನೆ ತಮ್ಮ ದೇಹದ ಭಾರವನ್ನು ಕಾಲಿನಿಂದ ಕಾಲಿಗೆ ಬದಲಾಯಿಸುತ್ತಿರುತ್ತಾರೆ. ಇದಕ್ಕೆ ಕಾರಣ-ಮರಳುಗಾಡಿನಲ್ಲಿ ನೆಲ ವಿಪರೀತವಾಗಿ ಕಾಯುವುದರಿಂದ ಒಂದೇ ಸ್ಥಳದಲ್ಲಿ ಒಂದು ಕಾಲನ್ನು ಹೆಚ್ಚು ಹೊತ್ತು ಇಡಲಾಗುವುದಿಲ್ಲ. ಏಷ್ಯದ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಬೇಟೆಗಾರರು ಮತ್ತು ಕುದುರೆ ಸಾಕುವವರು ವಿಭಿನ್ನ ರೀತಿಯ ನೃತ್ಯ ಸಂಪ್ರದಾಯಗಳನ್ನು ಹೊಂದಿದ್ದಾರೆ. ಇಲ್ಲಿನ ನೃತ್ಯಗಳಲ್ಲಿ ಲಯಬದ್ಧವಾದ ಚಲನೆಗಳು ಕಂಡುಬರುವುದಿಲ್ಲ. ಆದರು ಕೆಲವು ಸಾರಿ ಬೇಟೆಯ ಯಾವುದಾದರೊಂದು ಅನಿರೀಕ್ಷಿತವಾದ ಅಂಶವನ್ನು ಪ್ರದರ್ಶಿಸಬಹುದು; ಕುದುರೆಯ ಚಲನೆವಲನೆಗಳನ್ನು ಅನುಕರಿಸಬಹುದು; ಅಥವಾ ಕುಣಿಯುವಾಗ ಹೆಚ್ಚು ಉದ್ದಕ್ಕೆ ಹಾರುವುದರಿಂದ ತಾವು ಎಷ್ಟು ಮೈಲಿ ಪ್ರಯಾಣ ನಡೆಸಿದೆವು ಎಂಬುದನ್ನು ತೋರಿಸಬಹುದು. ಫಲವತ್ತಾದ ಬಯಲು ಪ್ರದೇಶಗಳಲ್ಲಿ ವಾಸಿಸುವ ಅಥವಾ ನದೀತಟಾಕಗಳಲ್ಲಿ ವಾಸಿಸುವ ಜನ ದೊಡ್ಡ ದೊಡ್ಡ ಗುಂಪುಗಳಾಗಿ ಸೇರಿ, ಮದುವೆ, ಹಬ್ಬ, ಸಾವು, ಚೈತ್ರ, ವಸಂತ, ಚಳಿಗಾಲ ಇಂಥ ಸಂದರ್ಭಗಳಲ್ಲಿ ನೃತ್ಯಮಾಡುತ್ತಾರೆ.

ವಿಧಗಳು

ಧಾರ್ಮಿಕ ನೃತ್ಯಗಳಿಗೆ ಭಾರತ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಬಂಗಾಳದ ಕಾಠೀ, ಹಿಮಾಚಲದ ಸಾಂಗಲ, ಕರ್ನಾಟಕದ ವೀರಗಾಸೆ ಕುಣಿತ, ಗೊರವರ (ಕಡಬಡ್ಡರ) ಕುಣಿತ, ಬೀಸುಕಂಸಾಳೆ ನೃತ್ಯ ಶೈವ ಸಂಬಂಧಿಯಾದದ್ದು. ಗೊರವರ ನೃತ್ಯ. ಮೈಲಾರಲಿಂಗನ ಗುಡ್ಡರಾದ ಗೊರವರು ತಲೆಯ ಮೇಲೆ ಕರಡಿಯ ಕೂದಲ ಟೊಪ್ಪಿಗೆ, ಮೈಮೇಲೆ ಕಪ್ಪು ನಿಲುವಂಗಿ, ಕವಡೆಯ ಸರಗಳು, ಕೈಯಲ್ಲಿ ಡಮರುಗ ತ್ರಿಶೂಲಗಳನ್ನು ಹಿಡಿದು ವೃತ್ತಾಕಾರವಾಗಿ ನರ್ತಿಸುತ್ತಾರೆ. ಆಫ್ರಿಕದ ಗಂಟೆ ನೃತ್ಯ (ಬೆಲ್ ಡಾನ್ಸ್) ಮಳೆಗಾಗಿ ಆಚರಿಸುವಂಥದು. ಮಂಜು, ಗಾಳಿ, ನೀರು ಮತ್ತು ಸೂರ್ಯನ ಮೇಲೆ ಪ್ರಭಾವ ಬೀರುವುದರ ಉದ್ದೇಶವಾಗಿ ಎಕ್ವಡಾರಿನಲ್ಲಿ ವೇಯಾರ ಎಂಬ ನೃತ್ಯವನ್ನು ಮಾಡುತ್ತಾರೆ.

ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ನೃತ್ಯಗಳು

ಸೂರ್ಯ, ಚಂದ್ರ, ನಕ್ಷತ್ರಗಳನ್ನು ಜಗತ್ತಿನ ರೈತ ಜನಾಂಗ ಮತ್ತು ಅಲೆಮಾರಿ ಜನಾಂಗಗಳು ಮೊದಲಿನಿಂದಲೂ ಪೂಜಿಸುತ್ತ ಬಂದಿದ್ದಾರೆ. ಇಂಥ ಜನಾಂಗದವರು ಬೋಲಿವೀಯ ಸೂರ್ಯನೃತ್ಯವನ್ನು ಇಂದಿಗೂ ಮಾಡುತ್ತಾರೆ. ರಾಮಧನ್ ಎಂಬ, ಚಂದ್ರನಿಗೆ ಸಂಬಂಧಿಸಿದ ನೃತ್ಯವನ್ನು ಉತ್ತರ ಆಫ್ರಿಕ ಮುಂತಾದ ಕಡೆ ಅಭಿನಯಿಸುತ್ತಾರೆ. ಸೂರ್ಯ ಮುಂತಾದ ಖಗೋಳ ವಸ್ತುಗಳ ಬಗ್ಗೆ ಇರುವ ಗೌರವ, ಕೃತಜ್ಞತೆಗಳೇ ಈ ನೃತ್ಯಕ್ಕೆ ಪ್ರೇರಕವಾಗಿದೆ.

ವೃತ್ತಿ ನೃತ್ಯಗಳು

ಫಲವತ್ತಾದ ಬಯಲು ಪ್ರದೇಶಗಳಲ್ಲಿ ಮತ್ತು ನದೀತೀರದ ಪ್ರದೇಶಗಳಲ್ಲಿ ವಾಸಿಸಲು ಪ್ರಾರಂಭಿಸಿದಾಗಿನಿಂದಲೂ ಮನುಷ್ಯ ವ್ಯವಸಾಯವನ್ನು ಮಾಡಿ ಬದುಕಲು ಪ್ರಾರಂಭಿಸಿದ : ಪ್ರಾಣಿಗಳನ್ನು ಸಾಕಿದ. ಆ ತರಹದ ಬದುಕಿನ ಬಗ್ಗೆ ಇದ್ದ ಕುತೂಹಲ ಆತನ ನೃತ್ಯಗಳಲ್ಲಿ ಅಭಿವ್ಯಕ್ತಿಯನ್ನು ಪಡೆಯಿತು. ಮಾಂತ್ರಿಕತೆಯನ್ನು ನಂಬಿದ ಆತ ನೃತ್ಯಮಾಡುವುದರಿಂದ ತನ್ನ ವ್ಯವಸಾಯ ಹುಲುಸಾಗುವುದೆಂದು ನಂಬಿದ. ಯಾವುದೇ ಒಂದು ದೇಶದಲ್ಲಿ ಕಾಣಬರುವ ಸುಗ್ಗಿ ಕುಣಿತ ತನ್ನ ಕ್ರಿಯೆಯಲ್ಲಿ ಉಳಿದ ದೇಶಗಳ ಸುಗ್ಗಿಕುಣಿತದೊಂದಿಗೆ ತಾದಾತ್ಮ್ಯ ಹೊಂದಿರುತ್ತದೆ. ಮರ ಕಡಿಯುವ ನೃತ್ಯ ಫ್ರಾನ್ಸ್, ಕರೇಲ್ಯ ಮತ್ತು ಸೈಬಿರಿಯದ ಕೆಲವು ಭಾಗಗಳಲ್ಲಿ ಕಾಣಬರುತ್ತವೆ. ಚಮ್ಮಾರರ ನೃತ್ಯಗಳು ಸ್ಕ್ಯಾಂಡಿನೇವಿಯ, ಪೋಲೆಂಡ್ ಮತ್ತು ಭಾರತದ ಉತ್ತರ ಪ್ರದೇಶ, ಪೋಲೆಂಡುಗಳಲ್ಲಿ ಕಂಡು ಬರುತ್ತದೆ. ಪಶು ಸಂಗೋಪನ ನೃತ್ಯ ಫಿನ್ಲೆಂಡ್ ಮತ್ತು ಉಕ್ರೇನ್‍ಗಳಲ್ಲಿ ಕಂಡುಬಂದರೆ, ಬತ್ತ ತುಂಬುವ ನೃತ್ಯಗಳು ಮಲಯ, ಚೀನ ಮುಂತಾದ ಕಡೆ ಇವೆ.

ಯೂರೋಪಿನ ಬಹುಪಾಲು ವೃತ್ತಿ ನೃತ್ಯಗಳು ಮಕ್ಕಳ ಆಟಗಳಾಗಿ ಪರಿವರ್ತನೆಗೊಂಡಿವೆ.

ಪ್ರಾಣಿ ನೃತ್ಯಗಳು

ಆದಿಮಾನವ ಪ್ರಾಣಿಗಳನ್ನು ಪಕ್ಷಿಗಳನ್ನು ಮತ್ತು ಮೀನುಗಳನ್ನು ಪೂಜಿಸಿದ. ಅವುಗಳ ಚಲನೆಗಳನ್ನು ಅನುಕರಿಸುವುದರ ಮೂಲಕ ಅವುಗಳ ಶಕ್ತಿ, ಹಾರುವ ವೇಗ ಮತ್ತು ಕುತಂತ್ರಗಳನ್ನು ಅರಿತುಕೊಂಡು, ಅವನ್ನು ಸುಲಭವಾಗಿ ಹಿಡಿಯಲು ಸಾಧ್ಯವಾಗುತ್ತದೆ ಎಂದು ನಂಬಿದ. ಈ ಕಾರಣದಿಂದ ಅನೇಕ ಬಗೆಯ ಪ್ರಾಣಿನೃತ್ಯಗಳು ಅಸ್ತಿತ್ವಕ್ಕೆ ಬಂದವು. ಆಸ್ಟ್ರೇಲಿಯ, ಆಫ್ರಿಕ ಮತ್ತು ಅಮೆರಿಕಗಳ ಬುಡಕಟ್ಟುಗಳಲ್ಲಿ ಮೊಸಳೆ ನೃತ್ಯ, ಆಮೆ ನೃತ್ಯ ಮತ್ತು ಲೈರ್ ಹಕ್ಕಿಯ ನೃತ್ಯಗಳಿವೆ. ಉತ್ತರ ಅಮೆರಿಕದ ರೆಡ್ ಇಂಡಿಯನ್ನರು ಕರಡಿಗಳ, ಕತ್ತೆಕಿರುಬಗಳ ಮತ್ತು ನರಿಗಳ ಚಲನೆಗಳನ್ನು ಅನುಕರಿಸುತ್ತಾರೆ. ಭಾರತದಲ್ಲಿ ಮಯೂರ ನೃತ್ಯ, ಸರ್ಪ ನೃತ್ಯ ಮುಂತಾದ ಪ್ರಕಾರಗಳಿವೆ. ಜಾರ್ಜಿಯದ ಕೋಸ್ಯಾಕ್ ಜನಾಂಗದ ರಣಹದ್ದಿನ ನೃತ್ಯ ತುಂಬ ಕುತೂಹಲಕಾರಿಯಾಗಿದೆ.

ಬೇಟೆಗಾರರ ಮತ್ತು ಬೆಸ್ತರ ನೃತ್ಯಗಳು

ಪ್ರಾಣಿಗಳು ನಡೆಯುವುದು, ಬೇಟೆಗಾಗಿ ನಿರೀಕ್ಷಿಸುವುದು, ವೇಗವಾಗಿ ಬಂದು ಹಾರಿ ಪ್ರಾಣಿಗಳನ್ನು ಕೊಲ್ಲುವುದು-ಈ ಕ್ರಿಯೆಗಳನ್ನು ಈ ನೃತ್ಯಗಳು ಒಳಗೊಳ್ಳುತ್ತವೆ. ಆಫ್ರಿಕದ ಮೂಲ ನಿವಾಸಿಗಳಲ್ಲಿ ಮಾತ್ರ ಪ್ರಪಂಚದ ಅನೇಕ ಬುಡಕಟ್ಟುಗಳಲ್ಲಿ ಈ ಬಗೆಯ ನೃತ್ಯಗಳನ್ನು ಕಾಣಬಹುದು. ಯೂರೋಪಿನಲ್ಲಿ ಒಂದು ಹೆಣ್ಣನ್ನು ಒಂದು ಗಂಡು ಅಟ್ಟಿಸಿಕೊಂಡು ಹೋಗುವುದರ ಮೂಲಕ ಇದನ್ನು ಅಭಿನಯಿಸುತ್ತಾರೆ. ಅಮೆರಿಕದ ಇಂಡಿಯನ್ನರಲ್ಲಿ ಜಿಂಕೆನೃತ್ಯ, ಬಿಲ್ಲುಬಾಣಗಳ ನೃತ್ಯ ಕಂಡುಬರುತ್ತವೆ. ಭಾರತದಲ್ಲಿ ಸಂತಾಲ ಆದಿವಾಸಿಗಳು ಷಿಕಾರ್ ಎಂಬ ನೃತ್ಯವನ್ನು ಅಭಿನಯಿಸುತ್ತಾರೆ. ಇದರಲ್ಲಿ ಅವರು ಕಾಡುಪ್ರಾಣಿಗಳ ಬೇಟೆಗೆ ಹೋಗುವುದನ್ನು ಮತ್ತು ಬೇಟೆಯೊಂದಿಗೆ ಹಿಂತಿರುಗುವುದನ್ನು ಅಭಿನಯಿಸುತ್ತಾರೆ. ಬೆಸ್ತರ ನೃತ್ಯಗಳಲ್ಲಿ ಕೈ ಮತ್ತು ತೋಳುಗಳು ಪ್ರಮುಖ ಪಾತ್ರವಹಿಸುತ್ತವೆ. ಹಗ್ಗದಿಂದ ಗಂಟುಗಳನ್ನು ಮಾಡುವುದು, ಬಲೆ ಹೆಣೆಯುವುದು ಮತ್ತು ಮೀನಿನ ಚಲನೆ-ಇವನ್ನು ಇದರಲ್ಲಿ ಅಭಿನಯಿಸಲಾಗುತ್ತದೆ. ಭಾರತ, ಫಿನ್ಲೆಂಡ್, ಕಪ್ಪು ಸಮುದ್ರ ಹಾಗೂ ಮೆಡಿಟರೇನಿಯನ್ ತೀರಪ್ರದೇಶ-ಮುಂತಾದ ಭಾಗಗಳಲ್ಲಿ ಈ ಬಗೆಯ ನೃತ್ಯ ಕಂಡುಬರುತ್ತದೆ. ದೋಣಿ ನೃತ್ಯ, ನಾವಿಕರ ನೃತ್ಯ ನ್ಯೂಜಿಲ್ಯಾಂಡ್ ಮತ್ತು ಇತರ ಕೆಲವು ದೇಶದಲ್ಲಿ ಪ್ರಚಾರದಲ್ಲಿವೆ.

ಪಢಾರ ಎಂಬ ನೃತ್ಯವನ್ನು ಸೌರಾಷ್ಟ್ರದ ಬೆಸ್ತರು ಅಭಿನಯಿಸುತ್ತಾರೆ. ಅವರು ದೋಣಿಯೊಂದರ ನಡೆಯನ್ನು ಅನುಕರಿಸುತ್ತ ಚಿಕ್ಕ ಕೋಲುಗಳನ್ನು ಬಡಿಯುತ್ತ ನೃತ್ಯ ಮಾಡುತ್ತಾರೆ.

ಯುದ್ಧ ಮತ್ತು ಆಯುಧಗಳ ನೃತ್ಯಗಳು

ಯುದ್ಧನೃತ್ಯಗಳು ಬಹುಪಾಲು ಯುದ್ಧಗಳನ್ನು ಅನುಕರಿಸುವುದರಿಂದ ಆವಿರ್ಭವಿಸಿದಂಥವು. ಇಂದಿಗೂ ಅನೇಕ ಆದಿವಾಸಿಗಳಲ್ಲಿ ಈ ನೃತ್ಯದ ಪ್ರಖರತೆಯನ್ನು ಕಾಣಬಹುದು. ನೃತ್ಯಕಾರರು ವೃತ್ತಾಕಾರವಾಗಿ ಒಂದೆಡೆ ಸೇರುವುದು ಅನಂತರ ಗುಂಪು ಒಡೆದು ಬೇರೆ ಬೇರೆಯಾಗಿ ಹೊಡೆದಾಡುವುದು-ಇಲ್ಲಿ ಕಂಡುಬರುತ್ತದೆ. ಗ್ರೀಸಿನ ಸೈನಿಕರ ನೃತ್ಯಗಳಲ್ಲಿ ಇಂದಿಗೂ ಯುದ್ಧದ ಕೆಚ್ಚನ್ನು ಕಾಣಬಹುದು.

ಉಲ್ಲೇಖಗಳು

Tags:

ಜನಪದ ನೃತ್ಯಗಳು ಹಿನ್ನೆಲೆಜನಪದ ನೃತ್ಯಗಳು ನೃತ್ಯ ಮಾಡುವ ಸ್ಥಳಜನಪದ ನೃತ್ಯಗಳು ವಿಧಗಳುಜನಪದ ನೃತ್ಯಗಳು ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ನೃತ್ಯಗಳುಜನಪದ ನೃತ್ಯಗಳು ವೃತ್ತಿ ನೃತ್ಯಗಳುಜನಪದ ನೃತ್ಯಗಳು ಪ್ರಾಣಿ ನೃತ್ಯಗಳುಜನಪದ ನೃತ್ಯಗಳು ಬೇಟೆಗಾರರ ಮತ್ತು ಬೆಸ್ತರ ನೃತ್ಯಗಳುಜನಪದ ನೃತ್ಯಗಳು ಯುದ್ಧ ಮತ್ತು ಆಯುಧಗಳ ನೃತ್ಯಗಳುಜನಪದ ನೃತ್ಯಗಳು ಉಲ್ಲೇಖಗಳುಜನಪದ ನೃತ್ಯಗಳು

🔥 Trending searches on Wiki ಕನ್ನಡ:

ಸಾಲುಮರದ ತಿಮ್ಮಕ್ಕಸಂಶೋಧನೆಇಂದಿರಾ ಗಾಂಧಿರಾಯಲ್ ಚಾಲೆಂಜರ್ಸ್ ಬೆಂಗಳೂರುಕ್ಯಾರಿಕೇಚರುಗಳು, ಕಾರ್ಟೂನುಗಳುಹೆಚ್.ಡಿ.ದೇವೇಗೌಡಚದುರಂಗದ ನಿಯಮಗಳುಭಾರತದಲ್ಲಿ ತುರ್ತು ಪರಿಸ್ಥಿತಿಕದಂಬ ರಾಜವಂಶಕೊಳಲುಶಾಸನಗಳುಜ್ವರವಾದಿರಾಜರುಮಡಿವಾಳ ಮಾಚಿದೇವಕೊಪ್ಪಳಪರಿಸರ ಶಿಕ್ಷಣಶ್ರೀಗಿರೀಶ್ ಕಾರ್ನಾಡ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ವಿಜ್ಞಾನಹೊಯ್ಸಳ ವಿಷ್ಣುವರ್ಧನಮುಟ್ಟುರೋಸ್‌ಮರಿಅಷ್ಟಾಂಗ ಮಾರ್ಗದ್ರಾವಿಡ ಭಾಷೆಗಳುದೇವತಾರ್ಚನ ವಿಧಿಬಿ.ಎಫ್. ಸ್ಕಿನ್ನರ್ಹವಾಮಾನಶಿಕ್ಷಕಬೆಂಗಳೂರು ಕೋಟೆಪ್ರದೀಪ್ ಈಶ್ವರ್ರಾಹುಲ್ ಗಾಂಧಿಒಕ್ಕಲಿಗಹಣಕಾಸುಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)ಪಿ.ಲಂಕೇಶ್ಕಾರ್ಲ್ ಮಾರ್ಕ್ಸ್ಪಠ್ಯಪುಸ್ತಕಜಯಪ್ರಕಾಶ ನಾರಾಯಣಚೋಳ ವಂಶಪಂಚತಂತ್ರದುಂಡು ಮೇಜಿನ ಸಭೆ(ಭಾರತ)ಜಲ ಮಾಲಿನ್ಯತಾಪಮಾನಸಂಯುಕ್ತ ಕರ್ನಾಟಕರೈತಪ್ರವಾಸ ಸಾಹಿತ್ಯಊಟಮೈಗ್ರೇನ್‌ (ಅರೆತಲೆ ನೋವು)ಮಧುಮೇಹಪಂಪವಾಯು ಮಾಲಿನ್ಯಬಸವ ಜಯಂತಿಮಹಾತ್ಮ ಗಾಂಧಿಹೃದಯಾಘಾತದಕ್ಷಿಣ ಕನ್ನಡಸಂಗೊಳ್ಳಿ ರಾಯಣ್ಣವಿಜಯದಾಸರುಮಿಥುನರಾಶಿ (ಕನ್ನಡ ಧಾರಾವಾಹಿ)ಕಾಲ್ಪನಿಕ ಕಥೆಕನ್ನಡಮೊದಲನೆಯ ಕೆಂಪೇಗೌಡಮತದಾನ ಯಂತ್ರವಿದ್ಯಾರಣ್ಯದರ್ಶನ್ ತೂಗುದೀಪ್ವಿಚ್ಛೇದನಅಂತರಜಾಲಮಂಡಲ ಹಾವುಜಶ್ತ್ವ ಸಂಧಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣನೀತಿ ಆಯೋಗಕರ್ಮಧಾರಯ ಸಮಾಸಕೃಷ್ಣದೇವರಾಯರಾಮಕೃಷ್ಣ ಪರಮಹಂಸದಿಯಾ (ಚಲನಚಿತ್ರ)ಆಹಾರ ಸರಪಳಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ🡆 More