ಗರಗಸ ಮೀನು

Anoxypristis White & Moy-Thomas, 1941 Pristis Linck, 1790

ಗರಗಸ ಮೀನು
Temporal range:
PreꞒ
O
S
D
C
P
T
J
K
Pg
N
ಗರಗಸ ಮೀನು
Longcomb sawfish, Pristis zijsron
Conservation status
Critically Endangered
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
Chondrichthyes
Subclass:
Elasmobranchii
ಮೇಲ್ಗಣ:
Batoidea
ಗಣ:
Pristiformes
ಕುಟುಂಬ:
Pristidae

Bonaparte, 1838
Genera

ಗರಗಸ ಮೀನು
Sawfish in Georgia Aquarium, 2006
ಗರಗಸ ಮೀನು
A large sawfish brought alongside for tagging
ಗರಗಸ ಮೀನು
ಗರಗಸ ಮೀನು

ಗರಗಸ ಮೀನು ಪ್ರಪಂಚದ ಉಷ್ಣವಲಯ ಸಾಗರಗಳಲ್ಲಿ ಕಾಣಸಿಗುವ ಒಂದು ಬಗೆಯ ಮೃದ್ವಸ್ಥಿ ಮೀನು (ಸಾ ಫಿಶ್). ಶಾರ್ಕ್, ರೇ, ಸ್ಕೇಟ್ ಮೀನುಗಳ ವರ್ಗದಲ್ಲಿ ಸ್ಕ್ವಾಲಿಫಾರ್ಮಿಸ್ ಗಣದ ಪ್ರಿಸ್ಟಿಡೆ ಕುಟುಂಬದ ಮೀನು. ಇದರ ಶಾಸ್ತ್ರೀಯ ಹೆಸರು ಪ್ರಿಸ್ಟಿಸ್. ಅಕ್ಕ ಪಕ್ಕದಲ್ಲಿ ಚೂಪಾದ ಹಲ್ಲುಗಳಿರುವ ಮತ್ತು ಬಲು ಉದ್ದವಾಗಿರುವ ಗರಗಸದಂಥ ಮೂತಿಯಿರುವುದರಿಂದ ಇದಕ್ಕೆ ಈ ಹೆಸರು.ಇದು ಸುಮಾರು ೭ ಮೀಟರ್ ಉದ್ದವಿರುತ್ತದೆ.

ಪ್ರಬೇಧಗಳು

ಗರಗಸ ಮೀನು 
೩.೫ ಅಡಿ ಉದ್ದವಿರುವ ಗರಗಸ ಮೀನಿನ ಮೂತಿ

ಇದರಲ್ಲಿ ಆರು ಪ್ರಬೇಧಗಳಿವೆ. ಇವುಗಳಲ್ಲಿ ಅಮೆರಿಕದ ಆಗ್ನೇಯ ಹಾಗೂ ಗಲ್ಫ್ ತೀರ ಪ್ರದೇಶಗಳಲ್ಲಿ ಕಾಣಬರುವ ಪೆಕ್ಟಿನೇಟಸ್ ಪ್ರಭೇದ, ಮೆಡಿಟರೇನಿಯನ್ ಮತ್ತು ಅಟ್ಲಾಂಟಿಕ್ ಸಾಗರಗಳಲ್ಲಿ ಕಾಣಬರುವ ಆಂಟಿಕೋರಮ್ ಪ್ರಭೇದ ಮತ್ತು ಭಾರತದ ತೀರ ಪ್ರದೇಶಗಳಲ್ಲಿ ಸಿಕ್ಕುವ ಕಸ್ಪಿಡೇಟಸ್ ಮತ್ತು ಮೈಕ್ರೋಡಾನ್ ಪ್ರಭೇದಗಳು ಪ್ರಮುಖವಾದವು.

ವಾಸ್ತವ್ಯ

ಗರಗಸ ಮೀನುಗಳು ತೀರಕ್ಕೆ ಸಮೀಪದಲ್ಲಿ ಮತ್ತು ಅಳಿವೆಗಳಲ್ಲಿ ಜೀವಿಸುವುವು. ಅನೇಕ ಸಂದರ್ಭದಲ್ಲಿ ನದಿಗಳಲ್ಲಿ ಒಳನಾಡಿಗೂ ಹಲವಾರು ಮೈಲಿಗಳಷ್ಟು ದೂರ ಬರುವುದೂ ಉಂಟು.

ಲಕ್ಷಣಗಳು

ಇದು ಸು. 6.1 ಮೀ ಗಳವರೆಗೆ ಬೆಳೆಯುತ್ತದೆ. ದೇಹರಚನೆಯಲ್ಲಿ ಶಾರ್ಕ್ ಮೀನನ್ನು ಹೋಲುತ್ತದಾದರೂ ಇದು ರೇ ಮೀನುಗಳ ಹತ್ತಿರದ ಸಂಬಂಧಿ ಅಂದರೆ ಕಿವಿರು ದ್ವಾರಗಳು ದೇಹದ ತಳ ಭಾಗದಲ್ಲಿರುತ್ತವೆ. (ಶಾರ್ಕ್ ಮೀನುಗಳಲ್ಲಿ ಕಿವಿರು ದ್ವಾರಗಳು ದೇಹದ ಪಾರ್ಶ್ವದಲ್ಲಿರುತ್ತವೆ). ಅಗಲವಾದ ಎದೆಯ ಈಜುರೆಕ್ಕೆಗಳು, ಎರಡು ಬೆನ್ನಿನ ಈಜುರೆಕ್ಕೆಗಳು, ಬಾಲದ ಈಜುರೆಕ್ಕೆ, ಗರಗಸದಂತಹ ಮೂತಿ, ತಲೆಯ ಕೆಳಭಾಗದಲ್ಲಿನ ಅರ್ಧಚಂದ್ರಾಕೃತಿಯ ಬಾಯಿ, ಬಾಲದ ಆಚೀಚೆ ದೋಣಿಯ ಆಕಾರದ ಚರ್ಮದ ಮಡಿಕೆ-ಇವು ಗರಗಸ ಮೀನಿನ ಬಾಹ್ಯ ಲಕ್ಷಣಗಳು. ಮೂತಿ ಚಪ್ಪಟೆಯಾಗಿ ಬಲು ಉದ್ದವಾಗಿರುತ್ತದೆ; ಕೆಲವು ಮೀನುಗಳಲ್ಲಿ ಸು. 1.8ಮೀ ಉದ್ದವಿರುತ್ತದೆ. ಅದರ ಒಂದೊಂದು ಅಲುಗಿನಲ್ಲಿ ಚೂಪಾದ ಸುಮಾರು 22-32 ಹಲ್ಲುಗಳಿರುತ್ತವೆ. ಸಾಗರತಳವನ್ನು ಹೆಕ್ಕಿ ಅದರೊಳಗಿರುವ ಹಲವಾರು ಬಗೆಯ ಪ್ರಾಣಿಗಳನ್ನು ತಿನ್ನಲು ಈ ಗರಗಸವನ್ನು ಬಳಸುತ್ತದೆ. ಅಲ್ಲದೆ ಚಲಿಸುವಾಗ ಸಣ್ಣ ಮೀನುಗಳ ಗುಂಪಿನಲ್ಲಿ ಮಧ್ಯೆ ನುಗ್ಗಿ ಗರಗಸವನ್ನು ಅತ್ತಿತ್ತ ಬಲವಾಗಿ ಆಡಿಸಿ ಕೆಲವು ಮೀನುಗಳು ಇದರ ಹೊಡೆತಕ್ಕೆ ಸಿಕ್ಕಿ ಸಾಯುವಂತೆ ಮಾಡಿ ತಿನ್ನುವುದೂ ಉಂಟು. ಗರಗಸ ಮೀನು ಜರಾಯುಜ ಪ್ರಾಣಿ. ಹುಟ್ಟುವ ಮುನ್ನವೇ ಮರಿಗಳಿಗೆ ಗರಗಸವಿರುವುದಾದರೂ ಅದು ಬಲು ಮೃದುವಾಗಿಯೂ ಒಂದು ಬಗೆಯ ಹೊದಿಕೆಯಿಂದ ಆವೃತವಾಗಿರುವುದರಿಂದ ತಾಯಿಯ ಹೊಟ್ಟೆಲ್ಲಿರುವಾಗ ಅಲ್ಲಿನ ಅಂಗಾಂಶಗಳಿಗೆ ಹಾನಿಯಾಗುವ ಸಂಭವವಿರುವುದಿಲ್ಲ.

ಬಳಕೆ

ಮಲೇಶಿಯಾ, ಇಂಡೋನೇಶಿಯಾ ಮತ್ತು ಚೀನಾಗಳಲ್ಲಿ ಗರಗಸ ಮೀನನ್ನು ತಿನ್ನುತ್ತಾರೆ. ಇದರ ಮಾಂಸ ಶಾರ್ಕ್ ಮೀನಿನ ಮಾಂಸದಷ್ಟೇ ರುಚಿ ಎಂದು ಹೇಳಲಾಗಿದೆ. ಅಲ್ಲದೆ ಈ ಮೀನಿನ ಚರ್ಮದಿಂದ ಕತ್ತಿಯ ಒರೆಯನ್ನು ಮಾಡುವುದಿದೆ. ಇದರ ಯಕೃತ್ತಿನಿಂದ ಎಣ್ಣೆಯನ್ನು ತೆಗೆಯುತ್ತಾರೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಗರಗಸ ಮೀನು ಪ್ರಬೇಧಗಳುಗರಗಸ ಮೀನು ವಾಸ್ತವ್ಯಗರಗಸ ಮೀನು ಲಕ್ಷಣಗಳುಗರಗಸ ಮೀನು ಬಳಕೆಗರಗಸ ಮೀನು ಉಲ್ಲೇಖಗಳುಗರಗಸ ಮೀನು ಬಾಹ್ಯ ಸಂಪರ್ಕಗಳುಗರಗಸ ಮೀನು

🔥 Trending searches on Wiki ಕನ್ನಡ:

ಶತಮಾನಕಬ್ಬಿಣದ ಅದಿರುಬಲೆಅರ್ಜುನಸಂತಾನೋತ್ಪತ್ತಿಯ ವ್ಯವಸ್ಥೆಭೂಮಿಕಂಪ್ಯೂಟರ್ಜಿ.ಎಸ್.ಶಿವರುದ್ರಪ್ಪರಾಜ್ಯಗಳ ಪುನರ್ ವಿಂಗಡಣಾ ಆಯೋಗತತ್ಸಮ-ತದ್ಭವಪೂರ್ಣಚಂದ್ರ ತೇಜಸ್ವಿಮೆಣಸಿನಕಾಯಿಕೋವಿಡ್-೧೯ಕ್ಯಾರಿಕೇಚರುಗಳು, ಕಾರ್ಟೂನುಗಳುಅಂತಿಮ ಸಂಸ್ಕಾರಕುರಿ ಸಾಕಾಣಿಕೆಶಿರ್ಡಿ ಸಾಯಿ ಬಾಬಾಡಿ.ಕೆ ಶಿವಕುಮಾರ್ಹೊನ್ನಾವರಕೃಷ್ಣರಾಜಸಾಗರಮಾವುಬರವಣಿಗೆಭಾರತೀಯ ಶಾಸ್ತ್ರೀಯ ನೃತ್ಯರೇಷ್ಮೆ ಹುಳು ಸಾಕಣೆಇಂದಿರಾ ಗಾಂಧಿಕಾಂತಾರ (ಚಲನಚಿತ್ರ)ಟಿಪ್ಪು ಸುಲ್ತಾನ್ಮಾನವ ಅಸ್ಥಿಪಂಜರವಿಜಯನಗರಕೆಳದಿಯ ಚೆನ್ನಮ್ಮಪ್ರಬಂಧಚಂದನಾ ಅನಂತಕೃಷ್ಣಕುರಿವರಾಹಾವತಾರರಾಶಿಸ್ಕೌಟ್ ಚಳುವಳಿಮಲ್ಟಿಮೀಡಿಯಾಶ್ಚುತ್ವ ಸಂಧಿಶಬ್ದಭಾರತದ ಸಂಸತ್ತುಕರ್ನಾಟಕ ವಿಧಾನ ಸಭೆಭಾರತೀಯ ಅಂಚೆ ಸೇವೆನೇಮಿಚಂದ್ರ (ಲೇಖಕಿ)ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಯುನೈಟೆಡ್ ಕಿಂಗ್‌ಡಂಕೊಪ್ಪಳಸಂಸ್ಕೃತ ಸಂಧಿಮೊಗಳ್ಳಿ ಗಣೇಶಯು.ಆರ್.ಅನಂತಮೂರ್ತಿನೃಪತುಂಗ ಸಾಹಿತ್ಯ ಪ್ರಶಸ್ತಿ೧೭೯೨ದೆಹಲಿ ಸುಲ್ತಾನರುಜಯಮಾಲಾಸುದೀಪ್ಗ್ರಾಮ ಪಂಚಾಯತಿರಂಗಭೂಮಿಭಾಷಾ ವಿಜ್ಞಾನಷಟ್ಪದಿನರ್ಗಿಸ್ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಶ್ರೀಲೀಲಾ (ನಟಿ)ಹೇಮರೆಡ್ಡಿ ಮಲ್ಲಮ್ಮಭಾರತೀಯ ಸಂವಿಧಾನದ ತಿದ್ದುಪಡಿತುಮಕೂರುಪ್ರೀತಿಮಹಾಬಲೇಶ್ವರ ದೇವಾಲಯ ಗೋಕರ್ಣಜೈನ ಧರ್ಮಭಾರತದ ನದಿಗಳುಬ್ಯಾಂಕ್ರಾಷ್ಟ್ರೀಯ ಉತ್ಪನ್ನಭಾರತೀಯ ಕಾವ್ಯ ಮೀಮಾಂಸೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಶನಿ (ಗ್ರಹ)ದಾವಣಗೆರೆರಾಷ್ಟ್ರೀಯ ಸ್ವಯಂಸೇವಕ ಸಂಘಹದಿಹರೆಯಯಶವಂತ ಚಿತ್ತಾಲ🡆 More