ನರಶಾಸ್ತ್ರ ಕಂಪನ

ಕಂಪನ ಒಂದು ಅಥವಾ ಹೆಚ್ಚು ಶರೀರ ಭಾಗಗಳ ತೂಗುವಿಕೆಗಳು ಅಥವಾ ಸೆಳೆತ ಚಲನೆಗಳನ್ನು ಒಳಗೊಂಡ ಒಂದು ಅನೈಚ್ಛೀಕ, ಸ್ವಲ್ಪ ಲಯಬದ್ಧ, ಸ್ನಾಯು ಸಂಕೋಚನ ಮತ್ತು ಸಡಿಲಿಕೆ.

    ಅದಿರ್ಪು ಇಲ್ಲಿ ಪುನರ್ನಿರ್ದೇಶಿಸುತ್ತದೆ. ಭಯ ಲೇಖನಕ್ಕಾಗಿ ಇಲ್ಲಿ ನೋಡಿ.

ಅದು ಎಲ್ಲ ಅನೈಚ್ಛಿಕ ಚಲನೆಗಳಲ್ಲಿ ಅತ್ಯಂತ ಸಾಮಾನ್ಯವಾದದ್ದು ಮತ್ತು ಕೈಗಳು, ತೋಳುಗಳು, ಕಣ್ಣುಗಳು, ಮುಖ, ತಲೆ, ಧ್ವನಿ ತಂತುಗಳು, ಮುಂಡ, ಮತ್ತು ಕಾಲುಗಳ ಪ್ರಭಾವ ಬೀರಬಲ್ಲದು. ಕೆಲವು ವ್ಯಕ್ತಿಗಳಲ್ಲಿ, ಕಂಪನವು ಮತ್ತೊಂದು ನರವೈಜ್ಞಾನಿಕ ಅಸ್ವಸ್ಥತೆಯ ಲಕ್ಷಣವಾಗಿರುತ್ತದೆ. ಸಾಮಾನ್ಯವಾಗಿ ತಂಪಾದ ತಾಪಮಾನಗಳು ಅಥವಾ ಭಯದಿಂದ ಪ್ರಚೋದಿಸಲ್ಪಟ್ಟ ಹಲ್ಲಿನ ಕಟಕಟ ಶಬ್ದ ಒಂದು ಬಹಳ ಸಾಮಾನ್ಯ ಕಂಪನ.

ಕಂಪನವು ದೇಹದಾದ್ಯಂತ ಅಥವಾ ಕೈಗಳಂತಹ ದೇಹದ ನಿರ್ದಿಷ್ಟ ಪ್ರದೇಶಗಳಲ್ಲಿನ ಸ್ನಾಯುಗಳನ್ನು ನಿಯಂತ್ರಿಸುವ ಮಿದುಳಿನ ಭಾಗಗಳಲ್ಲಿನ ಅಸ್ವಸ್ಥತೆಗಳಿಗೆ ಸಂಬಂಧಿಸಿದ ಲಕ್ಷಣವಾಗಿರಬಹುದು. ಕಂಪನವನ್ನು ಉಂಟುಮಾಡುವ ನರವೈಜ್ಞಾನಿಕ ಅಸ್ವಸ್ಥತೆಗಳು ಅಥವಾ ಸ್ಥಿತಿಗಳು, ಬಹು ಅಂಗಾಂಶ ಗಟ್ಟಿಯಾಗುವಿಕೆ, ಮಿದುಳಾಘಾತ, ಆಘಾತಕಾತಿ ಮಿದುಳಿನ ಗಾಯ, ದೀರ್ಘಕಾಲೀನ ಮೂತ್ರಪಿಂಡ ಕಾಯಿಲೆ ಮತ್ತು ಮಿದುಳುಕಾಂಡ ಅಥವಾ ಕಿರಿಮೆದುಳಿನ ಭಾಗಗಳನ್ನು ಹಾನಿಗೊಳಿಸುವ ಅಥವಾ ನಾಶಮಾಡುವ ಅನೇಕ ನರ ಅವನತಿ ರೋಗಗಳನ್ನು (ಉದಾ. ಪಾರ್ಕಿನ್ಸನ್‍ನ ರೋಗ) ಒಳಗೊಂಡಿವೆ. ಇತರ ಕಾರಣಗಳು ಔಷಧಿಗಳ ಬಳಕೆ, ಮದ್ಯಪಾನ, ಪಾದರಸ ವಿಷ ಸೇರಿಕೆ, ಔಷದಿಗಳ ವಾಪಸಾತಿಯನ್ನು ಒಳಗೊಂಡಿವೆ. ಫ಼ೆನಲ್‍ಕೀಟೋನೂರಿಯಾ, ಅತಿಚಟುವಟಿಕೆಯ ಥೈರಾಯ್ಡ್, ಅಥವಾ ಯಕೃತ್ತು ವೈಫಲ್ಯವಿರುವ ಶಿಶುಗಳಲ್ಲಿಯೂ ಕಂಪನಗಳನ್ನು ಕಾಣಬಹುದು. ವೇಗದ ಹೃದಯಬಡಿತ, ಬೆವರುವಿಕೆ ಮತ್ತು ಆತಂಕದ ಜೊತೆಗೆ ಕಂಪನಗಳು ಸಕ್ಕರೆ ಕೊರತೆ ಕಾಯಿಲೆಯ ಸೂಚನೆಯಿರಬಹುದು. ಕಂಪನವು ನಿದ್ದೆಯ ಕೊರತೆ, ವಿಟಮಿನ್‍ಗಳ ಕೊರತೆ, ಅಥವಾ ಹೆಚ್ಚಿದ ಒತ್ತಡದಿಂದಲೂ ಉಂಟಾಗಬಹುದು.

ಲಕ್ಷಣಗಳು ಕೈಗಳು, ತೋಳುಗಳು, ತಲೆ, ಕಾಲುಗಳು ಅಥವಾ ಮುಂಡದಲ್ಲಿ ಲಯಬದ್ದ ಅಲುಗಾಟ; ಅಸ್ಥಿರವಾದ ಧ್ವನಿ; ಮತ್ತು ಮುಳ್ಳು ಚಮಚ ಅಥವಾ ಪೆನ್ನಿನಂತಹ ವಸ್ತುಗಳನ್ನು ಹಿಡಿಯುವಲ್ಲಿ ಸಮಸ್ಯೆಗಳನ್ನು ಒಳಗೊಳ್ಳಬಹುದು. ಕೆಲವು ಕಂಪನಗಳು ಒತ್ತಡ ಅಥವಾ ಪ್ರಬಲ ಭಾವನೆಯ ಸಮಯದಲ್ಲಿ, ವ್ಯಕ್ತಿಯು ದೈಹಿಕವಾಗಿ ದಣಿದಾಗ, ಅಥವಾ ನಿರ್ದಿಷ್ಟ ಭಂಗಿಗಳು ಅಥವಾ ಚಲನೆಗಳ ಅವಧಿಯಲ್ಲಿ ಪ್ರಚೋದಿಸಲ್ಪಡಬಹುದು ಅಥವಾ ಉಲ್ಬಣಗೊಳ್ಳಬಹುದು.

Tags:

ನರವಿಜ್ಞಾನ

🔥 Trending searches on Wiki ಕನ್ನಡ:

ಮಾಧ್ಯಮಗ್ರಾಮಗಳುದಲಿತಭಾರತದ ಬಂದರುಗಳುರಚಿತಾ ರಾಮ್ಒಲಂಪಿಕ್ ಕ್ರೀಡಾಕೂಟರಕ್ತಪೂರಣಅಣ್ಣಯ್ಯ (ಚಲನಚಿತ್ರ)ಬಿಲ್ಹಣಮಕ್ಕಳ ಸಾಹಿತ್ಯಪರಿಸರ ರಕ್ಷಣೆಕಾದಂಬರಿಅರ್ಥ ವ್ಯವಸ್ಥೆಇಂಡಿಯನ್ ಪ್ರೀಮಿಯರ್ ಲೀಗ್ಕುಕ್ಕೆ ಸುಬ್ರಹ್ಮಣ್ಯ ದೇವಾಲಯಎಚ್.ಎಸ್.ವೆಂಕಟೇಶಮೂರ್ತಿಯೋಗ ಮತ್ತು ಅಧ್ಯಾತ್ಮವಿನಾಯಕ ಕೃಷ್ಣ ಗೋಕಾಕಪ್ರವಾಸೋದ್ಯಮಅರಿಸ್ಟಾಟಲ್‌ಸ್ವಾಮಿ ವಿವೇಕಾನಂದಕರ್ನಾಟಕದ ಆರ್ಥಿಕ ಪ್ರಗತಿಎರಡನೇ ಎಲಿಜಬೆಥ್ನಿರ್ಮಲಾ ಸೀತಾರಾಮನ್ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಅಳಿಲುಕಾಟೇರರಷ್ಯಾರಾಮ್ ಮೋಹನ್ ರಾಯ್ಸಲಗ (ಚಲನಚಿತ್ರ)ಕರ್ನಾಟಕದ ಜಾನಪದ ಕಲೆಗಳುಬರವಣಿಗೆಭಾರತೀಯ ಧರ್ಮಗಳುಪುರಾತತ್ತ್ವ ಶಾಸ್ತ್ರದೇವತಾರ್ಚನ ವಿಧಿಕರ್ನಾಟಕ ವಿಧಾನ ಪರಿಷತ್ಭಾರತೀಯ ಸಂಸ್ಕೃತಿಸಂಸ್ಕೃತಿಬಾಲ್ಯ ವಿವಾಹಹಸ್ತ ಮೈಥುನಸೂಳೆಕೆರೆ (ಶಾಂತಿ ಸಾಗರ)ಗಾದೆಮೊದಲನೇ ಅಮೋಘವರ್ಷಜಿ.ಎಸ್.ಶಿವರುದ್ರಪ್ಪಪಂಚ ವಾರ್ಷಿಕ ಯೋಜನೆಗಳುಕ್ರಿಯಾಪದಆದೇಶ ಸಂಧಿಅಂಜನಿ ಪುತ್ರಶ್ರೀನಿವಾಸ ರಾಮಾನುಜನ್ಮೂಲಭೂತ ಕರ್ತವ್ಯಗಳುದೆಹಲಿನೈಸರ್ಗಿಕ ವಿಕೋಪಗಂಗ (ರಾಜಮನೆತನ)ಸಿಂಧನೂರುನವಶಿಲಾಯುಗಮುಂಬಯಿ ವಿಶ್ವವಿದ್ಯಾಲಯಬಡತನಆಟಿಸಂಬೇವುನವೋದಯಆರ್ಥಿಕ ಬೆಳೆವಣಿಗೆಲಕ್ಷದ್ವೀಪಕನ್ನಡ ಗುಣಿತಾಕ್ಷರಗಳುಜ್ಯೋತಿಬಾ ಫುಲೆಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಅಗ್ನಿ(ಹಿಂದೂ ದೇವತೆ)ಸೂರ್ಯವಿಕ್ರಮಾದಿತ್ಯ ೬ಕಬೀರ್ಸಜ್ಜೆಟ್ಯಾಕ್ಸಾನಮಿವಸಾಹತುಶ್ರೀ ರಾಮಾಯಣ ದರ್ಶನಂಹೊನೊಲುಲುಪ್ರೇಮಾಭಾರತೀಯ ರೈಲ್ವೆಈರುಳ್ಳಿಅನುಭೋಗ🡆 More