ಅಬ್ದುಲ್ ಕರೀಂ ಖಾನ್

ಉಸ್ತಾದ್ ಅಬ್ದುಲ್ ಕರೀಂ ಖಾನ್ (ನವೆಂಬರ್ ೧೦,೧೮೭೨ - ೧೯೩೭) ಅವರ ಜೀವಿತ ಕಾಲದಲ್ಲಿ ಹಿಂದೂಸ್ತಾನಿ ಸಂಗೀತದ ಮೇರುವಾಗಿ ಗುರುತಿಸಲ್ಪಟ್ಟವರು.

೨೦ನೇ ಶತಮಾನದ ಉತ್ತಮ ಸಂಗೀತ ಪಟುಗಳಲ್ಲೊಬ್ಬರು. ಉತ್ತರ ಪ್ರದೇಶದ, ದೆಹಲಿಯ ಹತ್ತಿರದ ಕಿರಾಣಾದಲ್ಲಿ ಕಿರಾಣಾ ಘರಾಣ್ಯ ಕುಟುಂಬದಲ್ಲಿ ಜನಿಸಿದರು (ಕಿರಾಣಾ ಘರಾಣೆಯ ಪ್ರಮುಖರಲ್ಲಿ ಉಸ್ತಾದ್ ಗುಲಾಂ ಅಲಿ ಮತ್ತು ಗುಲಾಂ ಮೌಲಾ ಅತ್ಯಂತ ಪ್ರಸಿಧ್ಧರು). ಇವರ ತಂದೆ ಕಾಲೇ ಖಾನ್ ಅವರು ಗುಲಾಂ ಅಲಿಯವರ ಮೊಮ್ಮಗ. ಕರೀಂ ಖಾನರು ತಮ್ಮ ಸಂಗೀತ ವಿಧ್ಯಾಭ್ಯಾಸವನ್ನು ಚಿಕ್ಕಪ್ಪ ನಾನ್ಹೇ ಖಾನ್ ಮತ್ತು ತಂದೆಯವರ ಬಳಿ ಪ್ರಾರಂಭಿಸಿದರು. ಇವರು ಹಾಡು ಗಾರಿಕೆಯಲ್ಲದೇ ಸಾರಂಗೀ, ವೀಣೆ, ಸಿತಾರ್ ಮತ್ತು ತಬಲಾ ಗಳಲ್ಲಿ ಪರಿಣಿತರಾಗಿದಾರು.

ಅಬ್ದುಲ್ ಕರೀಂ ಖಾನ್
ಉಸ್ತಾದ್ ಕರೀಂ ಖಾನ್

ಮುಂಬಯಿ ವಾಸ

ಕರೀಮ ಖಾನ ಹಾಗು ಅವರ ಸೋದರ ಅಬ್ದುಲ್ ಹಕ್ ಇವರೀರ್ವರೂ ಬರೋಡಾದ ಮಹಾರಾಜರ ಆಸ್ಥಾನ ಗಾಯಕರಾಗಿದ್ದರು. ಅಲ್ಲಿ ಕರೀಮ ಖಾನರಿಗೆ ಸರದಾರ ಮಾರುತಿರಾವ ಮಾನೆಯವರ ಪುತ್ರಿ ತಾರಾಬಾಯಿಯೊಂದಿಗೆ ಪರಿಚಯವಾಗಿ, ಪ್ರೇಮ ಬೆಳೆಯಿತು. ಇವರೀರ್ವರೂ ಮದುವೆಯಾಗಲು ಬಯಸಿದಾಗ ಬರೋಡೆಯ ಮಹಾರಾಜರು ಈ ಪ್ರೇಮಿಗಳನ್ನು ಬರೋಡೆಯಿಂದ ಹೊರಹಾಕಿದರು. ಕರೀಮ ಖಾನ ಹಾಗು ತಾರಾಬಾಯಿ ಮುಂಬಯಿಗೆ ಬಂದು ನೆಲೆಸಿದರು. ಆದರೆ ೧೯೨೨ರಲ್ಲಿ ತಾರಾಬಾಯಿ ಅಬ್ದುಲ್ ಕರೀಮ ಖಾನರನ್ನು ತ್ಯಜಿಸಿದಳು.

ಕರ್ನಾಟಕ ಸಂಪರ್ಕ

ಅಬ್ದುಲ್ ಕರೀಮ ಖಾನರಿಗೆ ಮೈಸೂರು ಸಂಸ್ಥಾನದ ಒಡೆಯರಿಂದ ದೊರೆಯುತ್ತಿದ್ದ ಆಹ್ವಾನದ ಮೇರೆಗೆ ಖಾನಸಾಹೇಬರು ಮೇಲಿಂದ ಮೇಲೆ ಮೈಸೂರಿಗೆ ಹೋಗುತ್ತಿದ್ದರು. ಮೈಸೂರು ಒಡೆಯರು ಅವರಿಗೆ ಸಂಗೀತರತ್ನ ಎನ್ನುವ ಬಿರುದನ್ನು ನೀಡಿದ್ದಾರೆ. ಖಾನಸಾಹೇಬರು ತ್ಯಾಗರಾಜರ ಎರಡು ಕೀರ್ತನೆಗಳನ್ನೂ ಸಹ ಹಾಡಿದ್ದಾರೆ.

ಧಾರವಾಡ,ಹುಬ್ಬಳ್ಳಿ,ಕುಂದಗೋಳ

ಅಬ್ದುಲ್ ಕರೀಮ ಖಾನರು ಧಾರವಾಡ ಹಾಗು ಹುಬ್ಬಳ್ಳಿಗೆ ಬಂದಾಗ ಗಂಗೂಬಾಯಿ ಹಾನಗಲ್ ಅವರ ಮನೆಗೂ ಬಂದು (-ಅವರಿನ್ನೂ ಆಗ ಚಿಕ್ಕ ಬಾಲಕಿ-), ಅವರ ತಾಯಿ ಅಂಬಾಬಾಯಿಯವರನ್ನು ಭೇಟಿಯಾಗಿ ಅವರ ಹಾಡುಗಾರಿಕೆಯನ್ನು ಕೇಳುತ್ತಿದ್ದರು.ಹುಬ್ಬಳ್ಳಿಯಲ್ಲಿಯ ಸಿದ್ಧಾರೂಡ ಮಠಕ್ಕೆ ತಪ್ಪದೆ ಭೆಟ್ಟಿಕೊಟ್ಟು ಅಲ್ಲಿ ಹಾಡುತ್ತಿದ್ದರು. ಅಲ್ಲಿ ಒಂದು ದಿನ ಗ್ವಾಲಿಯರ ಘರಾನಾದ ಹಾಡುಗಾರ ರೆಹಮತ್ ಖಾನರವರ ಸಂಗೀತ ಕೇಳಿದ ಖಾನಸಾಹೇಬರು ಬೆರಗಾಗಿ ಹೋದರು. ಅವರಂತೆ ತಾನೂ ಹಾಡಬೇಕು, ತನ್ನ ಧ್ವನಿ ತಂತಿಯ ಹಾಗಾಗಬೇಕು ಎಂದು ಶ್ರದ್ದೆಯಿಂದ ಪ್ರಯತ್ನಿಸಿ, ಕೊನೆಗೂ ಅದನ್ನು ಸಾಧಿಸಿದರು.

ಶಿಷ್ಯವೃಂದ

ಕುಂದಗೋಳದ ಸವಾಯಿ ಗಂಧರ್ವರು ಖಾನಸಾಹೇಬರ ಸುಪ್ರಸಿದ್ಧ ಶಿಷ್ಯರು. ೧೯೧೩ರಲ್ಲಿ ಖಾನ ಸಾಹೇಬರು ಪುಣೆಯಲ್ಲಿ ಆರ್ಯ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿದರು. ಜೊತೆಗೆ ಮಿರಜದಲ್ಲಿ ಸಹ ಶಿಕ್ಷಣ ನೀಡುತ್ತಿದ್ದರು.

ನಿಧನ

ಖಾನಸಾಹೆಬರು ೧೯೩೭ರಲ್ಲಿ ಮಿರಜದಲ್ಲಿ ನಿಧನರಾದರು.

ಸ್ಮೃತಿ ಸಮಾರಾಧನೆ

೧೯೪೧ರಲ್ಲಿ ಸವಾಯಿ ಗಂಧರ್ವರ ಶಿಷ್ಯೆಯಾದ ಕೃಷ್ಣಾಬಾಯಿಯವರು ಹುಬ್ಬಳ್ಳಿಯಲ್ಲಿ ಖಾನಸಾಹೇಬರ ಸ್ಮೃತಿದಿನ ಆಚರಿಸಲಾರಂಭಿಸಿದರು. ಅವರ ಶಿಷ್ಯವರ್ಗದ ಹಾಗು ಸಂಗೀತಪ್ರೇಮಿಗಳ ಸಹಕಾರದಿಂದ ಈ ಕಾರ್ಯಕ್ರಮ ಇನ್ನೂ ಮುಂದುವರೆಯುತ್ತಿದೆ.

ಬಾಹ್ಯ ಸಂಪರ್ಕಗಳು

Tags:

ಅಬ್ದುಲ್ ಕರೀಂ ಖಾನ್ ಮುಂಬಯಿ ವಾಸಅಬ್ದುಲ್ ಕರೀಂ ಖಾನ್ ಕರ್ನಾಟಕ ಸಂಪರ್ಕಅಬ್ದುಲ್ ಕರೀಂ ಖಾನ್ ಶಿಷ್ಯವೃಂದಅಬ್ದುಲ್ ಕರೀಂ ಖಾನ್ ನಿಧನಅಬ್ದುಲ್ ಕರೀಂ ಖಾನ್ ಸ್ಮೃತಿ ಸಮಾರಾಧನೆಅಬ್ದುಲ್ ಕರೀಂ ಖಾನ್ ಬಾಹ್ಯ ಸಂಪರ್ಕಗಳುಅಬ್ದುಲ್ ಕರೀಂ ಖಾನ್ಉತ್ತರ ಪ್ರದೇಶತಬಲಾನವೆಂಬರ್ ೧೦ವೀಣೆಸಿತಾರ್ಹಿಂದೂಸ್ತಾನಿ ಸಂಗೀತ೧೮೭೨೧೯೩೭

🔥 Trending searches on Wiki ಕನ್ನಡ:

ಸಣ್ಣ ಕೊಕ್ಕರೆಡಾ ಬ್ರೋಜಯಮಾಲಾಜಾತ್ರೆಹೃದಯಾಘಾತಮೈನಾ(ಚಿತ್ರ)ಭಾರತದ ಇತಿಹಾಸವಿಷ್ಣುವರ್ಧನ್ (ನಟ)ಭೋವಿಆಗುಂಬೆಹಕ್ಕ-ಬುಕ್ಕತೆಂಗಿನಕಾಯಿ ಮರಮಾನವನ ವಿಕಾಸವಿರಾಟ್ ಕೊಹ್ಲಿಬೃಂದಾವನ (ಕನ್ನಡ ಧಾರಾವಾಹಿ)ಪ್ರಗತಿಶೀಲ ಸಾಹಿತ್ಯಜೋಗಿ (ಚಲನಚಿತ್ರ)ಜೇನು ಹುಳುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ರೇಡಿಯೋಅಮೃತಧಾರೆ (ಕನ್ನಡ ಧಾರಾವಾಹಿ)ದೇವಸ್ಥಾನಗದಗಸುಭಾಷ್ ಚಂದ್ರ ಬೋಸ್ಬಿ. ಆರ್. ಅಂಬೇಡ್ಕರ್ಭಾಷಾಂತರಚಂಡಮಾರುತಗರ್ಭಧಾರಣೆಯಕೃತ್ತುರಾಷ್ಟ್ರಕೂಟರಾಶಿಪರಿಸರ ಶಿಕ್ಷಣರಾಷ್ತ್ರೀಯ ಐಕ್ಯತೆನಾಗವರ್ಮ-೨ಪ್ರಾಥಮಿಕ ಶಿಕ್ಷಣಕಾರ್ಮಿಕರ ದಿನಾಚರಣೆಪಟ್ಟದಕಲ್ಲುಗಣೇಶ ಚತುರ್ಥಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗತ್ರಿಪದಿಮಾನವನಲ್ಲಿ ನಿರ್ನಾಳ ಗ್ರಂಥಿಗಳುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುರವಿಚಂದ್ರನ್ಚಾಣಕ್ಯಆಮ್ಲ ಮಳೆಹಸ್ತ ಮೈಥುನಪ್ರೇಮಾಬೆಟ್ಟದ ನೆಲ್ಲಿಕಾಯಿಭಾರತದ ರಾಷ್ಟ್ರೀಯ ಉದ್ಯಾನಗಳುಭಾರತದಲ್ಲಿ ಮೀಸಲಾತಿಆದಿ ಶಂಕರರು ಮತ್ತು ಅದ್ವೈತಕುರಿಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಮಹಾಕವಿ ರನ್ನನ ಗದಾಯುದ್ಧತಂತ್ರಜ್ಞಾನದ ಉಪಯೋಗಗಳುಹಿಂದೂ ಮಾಸಗಳುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಶಿಕ್ಷಕಬಿ.ಎಫ್. ಸ್ಕಿನ್ನರ್ಮೊದಲನೆಯ ಕೆಂಪೇಗೌಡಕೇಶಿರಾಜಜಾಹೀರಾತುರಮ್ಯಾ ಕೃಷ್ಣನ್ಇತಿಹಾಸಅಮ್ಮಬೆಂಗಳೂರುರಾವಣಉತ್ತರ ಕರ್ನಾಟಕಮೌರ್ಯ (ಚಲನಚಿತ್ರ)ಮಾನ್ವಿತಾ ಕಾಮತ್ಕೈಗಾರಿಕೆಗಳುಕನ್ನಡ ಬರಹಗಾರ್ತಿಯರುರಾಹುಲ್ ದ್ರಾವಿಡ್ಕರ್ಕಾಟಕ ರಾಶಿಚೋಮನ ದುಡಿ (ಸಿನೆಮಾ)ಅಭಿಮನ್ಯು🡆 More