ಅಕ್ಕಿತವುಡು ಎಣ್ಣೆ

ತವುಡು ಎಣ್ಣೆಯನ್ನು ಅಕ್ಕಿ ತವುಡುನಿಂದ ಉತ್ಪನ್ನ ಮಾಡಲಾಗುತ್ತದೆ.

ತವುಡು ಎಣ್ಣೆ ಅಡುಗೆಯಲ್ಲಿ ಬಳಸುವುದಕ್ಕೆ ಯೋಗ್ಯವಾದ ಎಣ್ಣೆ. ತವುಡು, ಬತ್ತ/ನೆಲ್ಲುಗೆ ಅಕ್ಕಿ ಸಲುವಾಗಿ ಅಕ್ಕಿಗಿರಣಿಯಲ್ಲಿ ನಡೆಸಿದ್ದಾಗ ,ತವುಡು ಉಪ ಉತ್ಪತ್ತಿಯಾಗಿ ಲಭ್ಯವಾಗುತ್ತದೆ. ಬತ್ತ/ನೆಲ್ಲು ಏಕದಳ ಬೀಜ ವರ್ಗಕ್ಕೆ ಸೇರಿರುವ ಸಸ್ಯ. ಇದು ಪೊಯೇಸಿ(poaceae)ಸಸ್ಯ ಕುಟುಂಬಕ್ಕೆ ಸೇರಿದ ಗಿಡ. ಇದು ಏಕ ವಾರ್ಷಿಕ ಗಿಡ. ಈ ಗಿಡದ ಸಸ್ಯ ಶಾಸ್ತ್ರ ಹೆಸರುಒರೈಜಾ ಸಟಿವಾ(oriza sativa), ಇದು ಏಷಿಯಾಖಂಡಕ್ಕೆ ದಕ್ಕಾಗಿರುವ ಸಸ್ಯ. ಆಫ್ರಿಕಾಕ್ಕೆ ದಕ್ಕಾಗಿರುವ ಗಿಡ. ಸಸ್ಯ ಶಾಸ್ತ್ರ ಹೆಸರುಒರೈಜಾ ಗ್ಲಾಬೆರಿಮಾ. ಲಭ್ಯ ವಾಗಿರುವ ಇತಿಹಾಸಿಕ ಆಧಾರಗಳಿಂದ ೪ ಸಾವಿರ ವರ್ಷಕ್ಕೆ ಹಿಂದೆ ಇದನ್ನು ಚೈನಾದೇಶದಲ್ಲಿ ವೊದಲನೆ ಬಾರಿ ಪೈರಾಗಿ ಬೇಳೆಸಿದರೆಂದು ತಿಳಿದು ಬಂದಿದೆ.ಆಮೇಲೆ ಗ್ರೀಸ್ ದೇಶಕ್ಕಿಂತ ಮುಂಚೆ ಭಾರತ ದೇಶದಲ್ಲಿ ನೆಲ್ಲು/ಭತ್ತ ಗಿಡವನ್ನು ಪೈರಾಗಿ ಬಳಸುವುದು ಪ್ರಾರಂಭವಾಗಿದೆ. ಸದ್ಯಕ್ಕೆ ಸಾವಿರ ಭತ್ತದ ಪ್ರಭೇದಗಳು ಸಾಗುವಳಿಯಲ್ಲಿ ಇವೆ.

ಅಕ್ಕಿತವುಡು ಎಣ್ಣೆ
ತವುಡು
ಅಕ್ಕಿತವುಡು ಎಣ್ಣೆ
ಗುಳಿಗೆ ಮಾಡುವ ಯಂತ್ರ(pelletiser)
ಅಕ್ಕಿತವುಡು ಎಣ್ಣೆ
ತವುಡು ಗುಳಿಗೆ
ಅಕ್ಕಿತವುಡು ಎಣ್ಣೆ
ಸಾಲ್ವೆಂಟ್ ಪ್ಲಾಂಟ್
ಅಕ್ಕಿತವುಡು ಎಣ್ಣೆ
ಕಚ್ಚಾ ಎಣ್ಣೆ

ತವುಡು

ಅಕ್ಕಿಗಿರಣಿಯಲ್ಲಿ ಭತ್ತದಿಂದ ಅಕ್ಕಿಯನ್ನು ಬೇರೆ ಮಾಡುವಾಗ ತವುಡು ಉಪೌತ್ಪತ್ತಿಯಾಗಿ ಉತ್ಪನ್ನ ವಾಗುತ್ತಿದೆ. ಬತ್ತದ ಹೊರಗಡೆ, ಅಕ್ಕಿನ ಮೇಲಿನ ಬಿರುಸಾಗಿರುವ ಭಾಗವನ್ನು ಹೊಟ್ಟು /ಸೆಪ್ಪಿ (hull/husk) ಎಂದು ಕರೆಯುತ್ತಾರೆ. ಹೊಟ್ಟು ಮತ್ತು ಅಕ್ಕಿಯ ಮಧ್ಯದಲ್ಲಿ ಅಕ್ಕಿನ ಉಪರಿತಲೆ ಮೇಲೆ ಇರುವ ತೆಳುವಾದ ಕಂದುಬಣ್ಣದ ಪೊರೆ (membrane) ಯನ್ನು ತವುಡುಎಂದು ಕರೆಯುತ್ತಾರೆ. ತವುಡುನ್ನು ಹಸುಗಳಿಗೆ ಆಹಾರವಾಗಿ, ನೀರಿನ ಜೊತೆ ಮಿಶ್ರಣ ಮಾಡಿ ಕೊಡುತ್ತಾರೆ .ತವುಡಲ್ಲಿ ಎಣ್ಣೆಯು ಇರುತ್ತದೆ. ತವುಡನ್ನು ಎರಡು ,ಮೂರು ತರಹದಲ್ಲಿ ಉತ್ಪನ್ನ ಮಾಡಲಾಗುತ್ತದೆ. ಭತ್ತದಿಂದ ಅಕ್ಕಿಯನ್ನು ಬೇರೆ ಮಾಡು ಅಕ್ಕಿಗಿರಣಿಗಳು ಮೂರು, ನಾಲ್ಕು ತರಹ ಇವೆ . ಅಕ್ಕಿ ಹೊರ ಭಾಗದಲ್ಲಿ ಸಣ್ಣ ತೆಳುವಾದ ಪೊರೆ ತರಹ ಕಂದು ಬಣ್ಣದಲ್ಲಿರುವ ತವುಡು ,ಅಕ್ಕಿಯನ್ನು ಬೆಳ್ಳಗೆ ಕಾಣಿಸುವುದಕ್ಕೆ ಪಾಲಿಷ್ (polish) ಮಾಡುವಾಗ, ಅಕ್ಕಿಯಿಂದ ವಿಂಗಡಿಸಲಾಗುತ್ತದೆ. ಈ ರೀತಿಯಲ್ಲಿ ತವುಡು ಉತ್ಪತ್ತಿ ಆಗುತ್ತದೆ. ತವುಡಿನಲ್ಲಿ ಎಣ್ಣೆ ಪ್ರತಿಶತ ೧೪-೨೫% ತನಕ ಇರುತ್ತದೆ. ಪ್ರೊಟಿನ್ ೭-೧೪% ಇರುತ್ತದೆ. ನಾರು ಪದಾರ್ಥ ೯-೨೦% ವರೆಗೆ ಇರುತ್ತದೆ, ಇನ್ನೂ ತವುಡಿನಲ್ಲಿ 40-50% ಕಾರ್ಬೊಹೈಡ್ರೇಟ್ಸ್ ಇವೆ. ಭತ್ತವನ್ನು ಗಿರಣಿ ಮಾಡಿದಾಗ ಹೊಟ್ಟು ೨೫.೦%,ಕಡೆಯಕ್ಕಿ ೩-೫%, ತವುಡು ೬-೮%,ಇಳುದು ಅಕ್ಕಿ ಬರುತ್ತದೆ. ತವುಡಿನಲ್ಲಿ ಇನ್ನೂ ಬಾಳಹೊಳುಪು (vitamine) "A","E" ಗಳಿವೆ. ಅದಕ್ಕೆ ಹಿಂದಿನ ಕಾಲದಲ್ಲಿ ವೈದ್ಯರು ಕೈಯಿಂದ ತಳಿಸಿದ(hand pounded) ಅಕ್ಕಿಯನ್ನು ಉಪಯೋಗಿಸುವುದಕ್ಕೆ ಸಲಹೆ ಕೊಟ್ಟಿದ್ದರು. ಹೀಗೆ ಕೆಲವು ದೇಶಗಳಲ್ಲಿ ಪಾಲಿಷ್ ಮಾಡದಿರುವ ಅಕ್ಕಿಯನ್ನು ಮಾರಾಟ ಮಾರುತ್ತಾರೆ. ತವುಡು ಎರಡು ತರಹ, ಒಂದು ಹಸಿ ತವುಡು(Raw bran),ಎರಡನೆದು ಉಕ್ಕಿಸಿದ ತವುಡು (boiled bran). 1.ಹಸಿ ತವುಡು:ಶೇಖರಣೆ ಮಾಡಿದ ಭತ್ತ/ನೆಲ್ಲುಯನ್ನು ಚೆನ್ನಾಗಿ ಒಣಗಿಸಿ, ಆಮೇಲೆ ನೇರವಾಗಿ ಅಕ್ಕಿಗಿರಣಿಯಲ್ಲಿ ಪ್ರಾಸೆಸ್ ಮಾಡಿದರೆ ಬರುವ ತವುಡನ್ನು ಹಸಿ ತವುಡು.ಹಸಿ ತವುಡನ್ನು ತಡವಿಲ್ಲದೆ ಸಾಲ್ವೆಂಟ್ ಪ್ಲಾಂಟ್ಕ್ಕೆ ಕಳುಹಿಸಿ/ರವಾನೆ ಮಾಡಿ ಎಣ್ಣೆಯನ್ನು ತೆಗೆಯಬೇಕು. ಇಲ್ಲಂದರೆ ಎಣ್ಣೆಯಲ್ಲಿ ಫ್ರೀಫ್ಯಾಟಿ ಆಮ್ಲಗಳ ಪ್ರತಿಶತ ಹೆಚ್ಚುತ್ತಾ ಹೋಗುತ್ತದೆ. ಫ್ರೀಪ್ಯಾಟಿ ಆಮ್ಲ ಹೆಚ್ಚಾಗಿದ್ದರೆ, ರಿಫೈನರಿ ಮಾಡುವುದರಲ್ಲಿ ತೊಂದರೆ ಉಂಟಾಗುತ್ತದೆ. ತವುಡಿನಲ್ಲಿರುವ ಲಿಪೇಜ್ (lipaze)ಎನ್ನುವ ಎಂಜೈಮ್ ಕಾರಣ, ಹಸಿ ತವುಡಿನಲ್ಲಿ ಫ್ರೀಫ್ಯಾಟಿ ಆಮ್ಲ ಪ್ರಮಾ ಣವು ಬೆಳೆಯುತ್ತ ಹೋಗುತ್ತದೆ.. 2.ಉಕ್ಕಿಸಿದ/ಕುದಿಸಿದ ತವುಡು:ಭತ್ತವನ್ನು ವೊದಲು ಆವಿಯಿಂದ(steam)ಕುದಿಸಿ/ಮರುಗಿಸಿ, ಆಮೇಲೆ ಬಿಸಿಗಾಳಿಯಿಂದ (hot air)ಒಣಗಿಸಿ ಅಕ್ಕಿಯನ್ನು ಉತ್ಪಾದಿಸಿದಾಗ ಬರುವ ತವುಡಿಗೆ ಉಕ್ಕಿಸಿದ ಅಥವಾ ಕುದಿಸಿದ ತವುಡು (Boiled Bran)ಅಂತಾರೆ. ಭತ್ತವನ್ನು ಉಕ್ಕಿಸಿದ ಕಾರಣದಿಂದ, ತವುಡುನಲ್ಲಿರುವ ಲಿಪೆಜ್ ಕ್ರಿಯಾ ರಹಿತವಾಗುತ್ತದೆ. ಅದರಿಂದ ಉಕ್ಕಿಸಿದ ತವುಡಿನಲ್ಲಿ, ಫ್ರೀಫ್ಯಾಟಿ ಆಮ್ಲ ತ್ವರಿತ ರೀತಿಯಲ್ಲಿ ಬೆಳೆಯುವುದಿಲ್ಲ. ಆದರೆ ದೀರ್ಘಕಾಲ ದಾಸ್ತಾನು ಮಾಡಿದರೆ, ಮತ್ತು ಫ್ರೀಫ್ಯಾಟಿ ಆಮ್ಲ (F.F.A) ಹೆಚ್ಚುತ್ತದೆ. ಉಕ್ಕಿಸಿದ ತವುಡಿನಲ್ಲಿ ಎಣ್ಣೆ೨೦-೨೬% ತನಕ ಇರುತ್ತದೆ. ಭತ್ತದಿಂದ ಅಕ್ಕಿ, ತವುಡು ಮತ್ತು ಹೊಟ್ಟನ್ನು ಬೇರ್ಪಡಿಸುವ ಗಿರಣಿಗಳು ಮೂರು ತರಹಗಳಿವೆ. ಅವು ೧.ಹಲ್ಲರು ಮಿಲ್,೨.ಷೆಲ್ಲರು ಗಿರಣಿ, ೩.ಮಾಡ್ರೆನ್ ರಬ್ಬರು ಷೆಲ್ಲರು ಮಿಲ್ಲು.

  1. ಹಲ್ಲರು ಮಿಲ್: ಈ ತರಹ ಗಿರಣಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ಅಕ್ಕಿಯನ್ನು ಪ್ರಾಸೆಸ್ ಮಾಡಲಾಗುತ್ತದೆ. ತವುಡು ಸ್ವಚ್ಛವಾಗಿರುವುದಿಲ್ಲ, ತವುಡಿನಲ್ಲಿ ಹೊಟ್ಟು ಕೂಡಾ ಮಿಶ್ರಣ ವಾಗಿರುತ್ತದೆ. ಇದು ಕಡೇ ಮಟ್ಟದ ತವುಡು. ಹಲ್ಲರು ತವುಡಿನಲ್ಲಿ ಎಣ್ಣೆ ೪-೬% ವರೆಗೆ ಇರುತ್ತದೆ. ಸಾಂಡು ಮತ್ತು ಸಿಲಿಕಾ ೧೨-೧೪%,ನಾರು ಪದಾರ್ಥ೧೮-೨೦% ವರೆಗೆ ಇರುತ್ತದೆ. ಹಲ್ಲರು ಮಿಲ್ನಿಂದ ಬರುವ ತವುಡನ್ನು ಚೀಟ್ಟೂ,ಪಾರೂ ಅಂತಾ ಕರೆಯುತ್ತಾರೆ.
  2. ಷೆಲ್ಲರು ರೈಸ್ ಮಿಲ್: ಈ ತರಹದ ಗಿರಣಿಯಿಂದ ಬರುವ ಹಸಿ ತವುಡಿನಲ್ಲಿ ಎಣ್ಣೆ ೧೪-೧೬%, ಸಾಂಡ್ ಮತ್ತು ಸಿಲಿಕಾ ೫-೮%,ಮತ್ತು ನಾರು ಪದಾರ್ಥ ೯-೧೦% ವರೆಗೆ ಇರುತ್ತದೆ. ಉಕ್ಕಿಸಿದ ತವುಡಲ್ಲಿ ೧೫-೨೦% ಎಣ್ಣೆ ಇರುತ್ತದೆ.
  3. ಮಾಡ್ರೆನ್ ರಬ್ಬರು ಷೆಲ್ಲರು ಮಿಲ್: ಇದು ಆಧುನೀಕ, ಉತ್ತಮ ಮಟ್ಟ ಅಕ್ಕಿಗಿರಣಿ. ಇಂತಹ ಗಿರಣಿಯಲ್ಲಿ ಉತ್ಪನ್ನ ಮಾಡಲಾಗುವ ಹಸಿ ತವುಡಿನಲ್ಲಿ ಎಣ್ಣೆ 18-24%, ಸಾಂಡ್ ಮತ್ತು ಸಿಲಿಕಾ ೩.೦%, ಮತ್ತು ನಾರು ಪದಾರ್ಥ ೮-೬-೮% ಇರುತ್ತದೆ. ಉಕ್ಕಿಸಿದ ತವುಡಿನಲ್ಲಿ ೨೫-೩೦% ವರೆಗೆ ಎಣ್ಣೆ ಇರುತ್ತದೆ.

ತವುಡಿನಲ್ಲಿರುವ ಪುಷ್ಟಿದಾಯಕ ಪದಾರ್ಥಗಳ ಪಟ್ಟಿ

ಪುಷ್ಟಿದಾಯಕ ಪದಾರ್ಥ ಹಲ್ಲರು ಹಸಿ ತವುಡು/ಮಾಡ್ರೆನ್ ಗಿರಣಿ ಉಕ್ಕಿಸಿದ ತವುಡು
ತೇವೆ % 9-10 8-9 8-9
ಎಣ್ಣೆ% 5-8 16-20 20-24
ಪ್ರೋಟಿನ್% 7-8 13-14 14-15
ಸಾಂಡ್/ಸಿಲಿಕಾ% 12-14 3-5 6-7
ನಾರು ಪದಾರ್ಥ% 18-20 9-10 9-11

ತವುಡು-ಫ್ರೀಫ್ಯಾಟಿ ಆಮ್ಲಗಳು

ಮೂರು ಕೊಬ್ಬಿನ ಆಮ್ಲಗಳ, ಒಂದು ಗ್ಲಿಸರೊಲ್/ಗ್ಲಿಸರಿನ್ ಅಣುಗಳ ಸಂಯೋಜನೆಯಿಂದ/ಒಂದುಗೂಡುವುರಿಂದ ಒಂದು ಅಣು ಎಣ್ಣೆ ಮತ್ತು ಮೂರು ಅಣುಗಳ ನೀರು ರೂಪುಗೊಂಡಿರುತ್ತವೆ. ಎಣ್ಣೆಯನ್ನು ಟ್ರಿಗ್ಲಿಸೆರೈಡ್ ಅಂತಾ ಕರೆಯುತ್ತಾರೆ. ಗ್ಲಿಸರೊಲ್ ನಲ್ಲಿ ಮೂರು OH(ಹೈಡ್ರಾಕ್ಷಿ)ಗ್ರೋಪ್ಗಳಿರುತ್ತವೆ. ಈ ಮೂರು OH ಗ್ರೂಪ್ ಗಳ ಜೊತೆ ಮೂರು ಕೊಬ್ಬಿನ ಆಮ್ಲಗಳು ಬಂಧನವಾಗುವುದರಿಂದ ಎಣ್ಣೆ ಉತ್ಪನ್ನವಾಗುತ್ತದೆ. ಈ ರಾಸಾಯನಿಕ ಸಂಯೋಜನೆ ಚರ್ಯೆಯನ್ನು ಎಸ್ಟರಿಫಿಕೆಸನು(esterfication)ಅಂತಾರೆ. ಎಸ್ಟರಿಫಿಕೆಸಂಗೆ ವ್ಯತಿರಿಕ್ತವಾದದ್ದು ಹೈಡ್ರೊಲಿಸಿಸ್(hydrolysis). ಹೈಡ್ರೊಲಿಸಿಸ್ ಚರ್ಯೆ ನಡೆದಾಗ ಎಣ್ಣೆ ಕೊಬ್ಬಿನ ಆಮ್ಲ ಮತ್ತು ಗ್ಲಿಸರೊಲ್ ಆಗಿ ಬೇರೆ ಆಗುತ್ತವೆ. ತವುಡಿನಲ್ಲಿ ಲಿಪೇಜ್ ಅಂತಾ ಒಂದು ಎಂಜೈಮ್ ಇದ್ದು, ಇದು ಹಸಿ ತವುಡಿನಲ್ಲಿ ಕ್ರಿಯಾಶೀಲವಾಗಿದ್ದು ಎಣ್ಣೆಯಲ್ಲಿ ಹೈಡ್ರಿಲಿಸಿಸ್ ಕ್ರಿಯೆ ಆಗುವಂತೆ ಮಾಡುತ್ತದೆ. ಎಣ್ಣೆಯಿಂದ ಬೇರೆಯಾಗಿ ಸ್ವ ಚ್ಚವಾದ ಸ್ಥಿತಿಯಲ್ಲಿದ್ದ ಕೊಬ್ಬಿನ ಆಮ್ಲವನ್ನು ಸ್ವೇಚ್ಛಾಯುತ ಕೊಬ್ಬಿನ ಆಮ್ಲ(Free fatty acid)ಎನ್ನುತ್ತಾರೆ . ಎಣ್ಣೆಯಲ್ಲಿ F.F.A.ಹೆಚ್ಚಾಗಿದ್ದರೆ, ಎಣ್ಣೆ ಯನ್ನು ರಿಫೈನರಿ ಮಾಡುವುದು ಕಷ್ಟ. ಹಸಿ ತವುಡಿನಲ್ಲಿ ಲಿಪೇಜ್ ತುಂಬಾ ಕ್ರಿಯಶೀಲವಾಗಿ, ಎಣ್ಣೆಯನ್ನು ತ್ವರಿತವಾಗಿ ಗ್ಲಿಸರೊಲ್ ಮತ್ತು ಕೊಬ್ಬು ಆಮ್ಲಗಳಾಗಿ ಬೇರ್ಪಡಿಸುತ್ತದೆ.

RCO2CH2CH(O2CR')CH2CO2R'' + 3H2O → HOCH2CH(OH)CH2OH + RCO2H + R'CO2H + R''CO2H
ಎಣ್ಣೆ(ಟ್ರೈ ಗ್ಲಿಸೆರೈಡ್) → ೧ಗ್ಲಿಸೆರೊಲ್ + ೩ಕೊಬ್ಬಿನ ಆಮ್ಲಗಳು
ಹೈಡ್ರೊಲಿಸಿಸ್ ರಾಸಾಯನಿಕ ಚರ್ಯೆ

ಉಕ್ಕಿಸಿದ ತವುಡಿನಲ್ಲಿರುವ ಲಿಪೇಜ್ ಕ್ರಿಯಾ ರಹಿತವಾಗಿರುತ್ತದೆ. ತವುಡನ್ನು ಉಕ್ಕಿಸುವುದರಿಂದ ಲಿಪೇಜ್ ಕ್ರಿಯಾ ರಹಿತವಾಗುತ್ತದೆ. ಅದರಿಂದ ಉಕ್ಕಿಸಿ ತವುಡಲ್ಲಿ F.F.A.ಅಷ್ಟು ಬೇಗನೆ ವೃದ್ಧಿಯಾಗುವುದಿಲ್ಲ.

ಎಣ್ಣೆಯನ್ನು ಉತ್ಪಾದಿಸುವ ವಿಧಾನ

ತವುಡಿನಿಂದ ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ಯಲ್ಲಿ ಬಳಸಿ ತೆಗೆಯಲಾಗುತ್ತದೆ. ತವುಡು ಪುಡಿಯಾಗಿರುವುದರಿಂದ, ತವುಡುನಿಂದ ನೇರವಾಗಿ ಎಣ್ಣೆಯನ್ನು ತೆಗೆಯುವುದಕ್ಕೆ ಆಗುವುದಿಲ್ಲ. ತವುಡುಗೆ ವೊದಲು ಪೆಲ್ಲೆಟೈಜರು(pelletiser)ಯಂತ್ರವನ್ನು ಬಳಸಿ ಗುಳಿಗೆಗಳನ್ನಾಗಿ ಮಾಡಿ, ಸಾಲ್ವೆಂಟ್ ಪ್ಲಾಂಟ್ ಗೆ ಕಳುಹಿಸಿ ಎಣ್ಣೆಯನ್ನು ತೆಗೆವರು. ಸಾಲ್ವೆಂಟ್ ಪ್ಲಾಂಟನಲ್ಲಿ ಹೆಕ್ಸೆನು ಎನ್ನುವ ದ್ರಾವಣವನ್ನು ಉಪಯೋಗಿಸಿ ತವುಡಿನಿಂದ ಎಣ್ಣೆ ಯನ್ನು ತೆಗೆಯಲಾಗುತ್ತದೆ .ಕೆಲವು ಕಡೆ ಎಕ್ಸುಪೆಲ್ಲರು ಯಂತ್ರವನ್ನು ಬಳಸಿ ಎಣ್ಣೆಯನ್ನು ತೆಗೆಯುತ್ತಿದ್ದರು, ಆದರೆ ಎಕ್ಸುಪೆಲ್ಲರುನಿಂದ ತವುಡಿನಲ್ಲಿರುವ ಒಟ್ಟು ಎಣ್ಣೆಯನ್ನು ತೆಗೆಯುವುದಕ್ಕೆ ಆಗುವುದಿಲ್ಲ. ಅದರಿಂದ ಸಾಲ್ವೇಂಟ್ ಪ್ಲಾಂಟ್ ನಲ್ಲಿ ಮಾತ್ರ ತವುಡಿ ನಿಂದ ಎಣ್ಣೆಯನ್ನು ಸಂಪೂರ್ಣವಾಗಿ ತೆಗೆಯಲಾಗುತ್ತದೆ.

ಎಣ್ಣೆ

ಸಾಲ್ವೆಂಟ್ ಪ್ಲಾಂಟ್ನಿಂದ ತೆಗೆದ ಎಣ್ಣೆಯನ್ನು ನೇರವಾಗಿ ಅಡುಗೆ ಎಣ್ಣೆಯಾಗಿ ಬಳಸುವುದಕ್ಕೆ ಆಗುವುದಿಲ್ಲ. ಕಚ್ಚಾ ಎಣ್ಣೆ ಯನ್ನು ರಿಫೈನರಿಯಲ್ಲಿ ರಿಫೈಂಡ್ ಮಾಡಿದ ಮೇಲೆ ಅಡಿಗೆ ಎಣ್ಣೆಯನ್ನಾಗಿ ಉಪಯೋಗಿಸುತ್ತಾರೆ. ಸಾಧಾರಣವಾಗಿ ೨೦-೩೦%ಕ್ಕಿಂತ ಕಡಿಮೆ F.F.A.ಇದ್ದ ಎಣ್ಣೆಯನ್ನು ಮಾತ್ರ ರಿಫೈಂಡ್ ಮಾಡೆವರು. ಅದಕ್ಕಿಂತೆ ಹೆಚ್ಚು F.F.A.ಇರುವ ಎಣ್ಣೆಯಿಂದ ಕೊಬ್ಬುಆಮ್ಲಗಳನ್ನು ಉತ್ಪನ್ನ ಮಾಡುವರು. ಕಚ್ಚಾ ಎಣ್ಣೆ ಹಳದಿ, ಕೆಂಪು ಬಣ್ಣಗಳ ಮಿಶ್ರಣವಾಗಿ ಕಾಣಿಸುತ್ತದೆ. ಎಣ್ಣೆಯಲ್ಲಿ ಸಂತೃಪ್ತ ಮತ್ತು ಅಸಂತೃಪ್ತ ಕೊಬ್ಬು ಆಮ್ಲಗಳು ಸಮತೋಲನವಾಗಿರುತ್ತವೆ. ಕಡಿಮೆ ಕೊಲೆಸ್ಟರಲ್ ಫ್ಯಾಕ್ಟರು ಹೊಂದಿರುತ್ತದೆ. ಎಣ್ಣೆಯಲ್ಲಿರುವ ಒರೈಜೊನಲ್ (oryzanol)ಹೈಡೆನ್ಸಿಟಿ ಕೊಲೆಸ್ಟೆರಾಲ್ (HDL:High density lipid) ಯನ್ನು ರಕ್ತದಲ್ಲಿ ಹೆಚ್ಚು ಮಾಡುತ್ತದೆ. HDL ಕೊಲೆಸ್ಟರಾಲ್ ರಕ್ತದಲ್ಲಿ ಹೆಚ್ಚಾಗಿ ಇರುವುದರಿಂದ ಹೃದಯಘಾತವನ್ನು ತಡೆ ಹಿಡಿಯುತ್ತದೆ. ಹಾಗೆ ಬಹುಳ ದ್ವಿಬಂಧಗಳಿರುವ ಸ್ಕ್ವಾಲಿನ್ (squalene)ಚರ್ಮವನ್ನು ರಕ್ಷಿಸುತ್ತದೆ ಮತ್ತು ಎಣ್ಣೆಯಲ್ಲಿ ವಿಟಮಿನ್ 'E' ಇದೆ, ಇದು ನರಗಳ ವ್ಯವಸ್ಥೆಯನ್ನು ಸಮತೋಲನದಲ್ಲಿಡುತ್ತದೆ. ಅದಕ್ಕಾಗಿ ತವುಡು ಎಣ್ಣೆಯನ್ನು ಹೃದಯದ ಮಿತ್ರ(friend of heart)ಎಂದು ಕರೆಯುತ್ತಾರೆ. ರಿಫೈಂಡ್ ಮಾಡಿದ ಎಣ್ಣೆಯ ಸ್ಮೋಕ್ ಪಾಯಿಂಟ್ ಕೂಡಾ ಬೇರೆ ಎಣ್ಣೆಗಳಿಗಿಂತ ಹೆಚ್ಚು. ಅದರಿಂದ ಕಾಯಿಸಿದ ಎಣ್ಣೆ ತ್ವರಿತವಾಗಿ ಕೆಟ್ಟು ಹೋಗುವುದಿಲ್ಲ. ತವುಡು ಎಣ್ಣೆಗೂ ಕಡಲೇಕಾಯಿ ಎಣ್ಣೆ/ಶೇಂಗಾ ಎಣ್ಣೆಗೆ ಹೋಲಿಕೆಯಿದೆ. ಎರಡು ಎಣ್ಣೆಗಳ ಭೌತಿಕ ಧರ್ಮಗಳು ಹತ್ತಿರ ಹತ್ತಿರವಾಗಿರುತ್ತವೆ. ಎರಡು ಎಣ್ಣೆಗಳಲ್ಲಿ ಒಲಿಕ್ ಆಮ್ಲ ೪೫-೫೦% ತನಕ ಇರುತ್ತದೆ. ಅಯೋ ಡಿನ್ ಮೌಲ್ಯವು ಅಷ್ಟೆ, ಶೇಂಗಾ ಎಣ್ಣೆಯದು ೮೫-೯೯ ಇದ್ದರೆ, ತವುಡುಎಣ್ಣೆಯದು ೯೫-೧೦೪.ಸಾಂದ್ರತೆಯಲ್ಲಿಯು ಹೋಲಿಕೆಯಿದೆ. ಕಚ್ಚಾ ಮತ್ತು ರಿಫೈಂಡ್ ತವುಡು ಎಣ್ಣೆಯ ಭೌತಿಕ ಧರ್ಮಗಳ ಪಟ್ಟಿ

ಎಣ್ಣೆಯ ಸ್ವಭಾವ ಕಚ್ಚಾ ಎಣ್ಣೆ ರಿಫೈಂಡ್ ಎಣ್ಣೆ
ತೇವ 0.5-1.0% 0.1-0.15%
ಸಾಂದ್ರತೆ(15/150C) 0.913-0.920 0.913-0.920
ವಕ್ರೀಭವನ ಸೂಚಿಕೆ 1.4672 1.4672
ಅಯೋಡಿನ್ ಮೌಲ್ಯ 95-100 95-104
ಸಪೋನಿಫಿಕೆಸನ್ ಸಂಖ್ಯೆ/ಮೌಲ್ಯ 187 187
ಅನ್ ಸಪೋನಿಫಿಯಬುಲ್ ಪದಾರ್ಥ 4.5-5.5 1.8-2.5
ಫ್ರೀ ಫ್ಯಾಟಿ ಆಸಿಡ್ಸು(F.F.A) 5-15% 0.15-0.2%
ಒರೈಜನೋಲ್ 2.0 1.5-1.8
ಟೊಕೊಪೆರೊಲ್ 0.15 0.05
ವರ್ಣ(ಟಿಂಟೋಮೀಟರು) 20Y*+2.8R** 10Y+1.0R

ಸೂಚನೆ:Y*=yellow color,R**=red color ತವುಡು ಎಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಆಮ್ಲಗಳು ೨೦-೨೫% ವರೆಗೆ ಇರುತ್ತವೆ. ಇದರಲ್ಲಿ ೧೬ ಕಾರ್ಬನುಗಳು ಇರುವ ಪಾಮಿಟಿಕ್ ಕೊಬ್ಬಿನ ಆಮ್ಲ ೧೫-೧೮% ವರೆಗೆ, ೧೮ ಕಾರ್ಬನುಗಳು ಇದ್ದು ಸ್ಟಿಯರಿಕ್ ಆಮ್ಲ ೧-೨% ವರೆಗೆ, ಉಳಿದಿದ್ದವು ೨-೩% ತನಕ ಇರುತ್ತವೆ. ಅಸಂತೃಪ್ತ ಕೊಬ್ಬಿನ ಆಮ್ಲಗಳು ೭೫-೮೫% ವರೆಗೆ ಇರುತ್ತವೆ. ಏಕ ದ್ವಿಬಂಧ ಇರುವ ಒಲಿಕ್ ಆಮ್ಲ ೪೦-೪೫%, ಎರಡು ದ್ವಿಬಂದಗಳಿರುವ ಲಿನೊಲಿಕ್ ಆಮ್ಲ ೩೮-೪೨% ತನಕ ಇರುತ್ತವೆ. ಮೂರು ದ್ವಿಬಂಧಗಳಿರುವ ಲಿನೊಲೆನಿಕ್/ಒಮೇಗಾ-೩ ಆಮ್ಲ ೧.೦% ತನಕ ಇರುತ್ತದೆ. ಅಕ್ಕಿತವುಡು ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ಪಟ್ಟಿ

ಕೊಬ್ಬಿನ ಆಮ್ಲ ಶೇಕಡ
ಪಾಮಿಟಿಕ್ ಆಮ್ಲ(C16:0) 15.0%
ಸ್ಟಿಯರಿಕ್ ಆಮ್ಲ(C18:0) 1.9%
ಅರಚಿಡಿಕ್ ಆಮ್ಲ(C20:0) 0.5%
ಬೆಹೆನಿಕ್ ಆಮ್ಲ(C22:0) 0.2%
ಒಲಿಕ್ ಆಮ್ಲ (C18:1) 42.5%
ಲಿನೊಲಿಕ್ ಆಮ್ಲ(C18:2 39.1%
ಲಿನೊಲೆನಿಕ್ ಆಮ್ಲ/ಒಮೇಗಾ-೩(C18:3) 1.1%

ಎಣ್ಣೆಯ ಉಪಯುಕ್ತಗಳು

  • ರಿಫೈಂಡ್ ಮಾಡಿದ ಎಣ್ಣೆಯನ್ನು ಅಡುಗೆ ಎಣ್ಣೆ(cooking oil)ಯಾಗಿ ಬಳಸುತ್ತಾರೆ. ಆಹಾರ ಪದಾರ್ಥಗಳನ್ನು ಬೇಯಿಸುವುದ್ದಕ್ಕೆ ಒಳ್ಳೆ ಯೋಗ್ಯವಾದ ಎಣ್ಣೆ. ಸಲಾಡ್ ಡ್ರೆಸ್ಸೀಂಗ್ ನಲ್ಲಿ ಉಪಯೋಗಿಸುತ್ತಾರೆ. ಬೇಕರಿ ಅಂಗಡಿಯಲ್ಲಿಯೂ ಬಳಸುತ್ತಾರೆ.
  • ಪೂರ್ವ ಏಷಿಯಾ ದೇಶಗಳಲ್ಲಿ ಇದನ್ನು ಹಾರ್ಟ್ ಆಯಿಲ್(heart oil)ಎಂದು ಕರೆಯುತ್ತಾರೆ. ತವುಡು ಎಣ್ಣೆಯನ್ನು ಅಡುಗೆಯಲ್ಲಿ ಉಪಯೋಗಿಸುವುದರಿಂದ ಹೃದಯಘಾತ ಬರುವ ಅವಕಾಶ ಕಡಿಮೆ ಆಗುತ್ತದೆ. ಇದಕ್ಕೆ ಕಾರಣ ಎಣ್ಣೆಯಲ್ಲಿರುವ ಒರೈಜನೋಲ್ ಮತ್ತು ಟೊಕೊಪೆರೊಲ್ಸುಗಳು.ಕಾನ್ಸರು ರೋಗವನ್ನು ತಡೆಹಿಡಿಯುತ್ತದೆ. ಇಮ್ಯೂನ್ ಸಿಸ್ಟಮ್ ನ್ನು ಎಕ್ಟಿವೇಟ್ ಮಾಡುತ್ತದೆ. ಅಷ್ಟೆ ಅಲ್ಲದೆ ಚರ್ಮ ಕ್ಕೆ ಮೆರುಗು ಬರುತ್ತದೆ. ಪೂರ್ವ ಏಷಿಯಾದ ಜಪಾನ್, ಕೊರಿಯ ಮಹಿಳೆಯರು ದೇಹ ತೈಲವನ್ನಾಗಿ, ಕೇಶತೈಲವನ್ನಾಗಿ ಬಳಸುತ್ತಾರೆ.
  • ಹೆಚ್ಚು ಫ್ರಿಫ್ಯಾಟಿ ಆಮ್ಲಗಳು ಇರುವ(F.F.A)ಎಣ್ಣೆಯನ್ನು ಸಾಬೂನ್ ಮಾಡುವುದಕ್ಕೆ ಉಪಯೋಗಿಸುತ್ತಾರೆ
  • ವನಸ್ಪತಿ/ಡಾಲ್ಡಾ/ಹೈಡ್ರೊಜೆನೆಟೆಡ್ ಫ್ಯಾಟ್ ತಯಾರಿಸುವುದಕ್ಕೆ ಉಪಯೋಗಿಸುತ್ತಾರೆ. ಭಾರತದಲ್ಲಿ ವನಸ್ಪತಿಯಲ್ಲಿ ೨೦% ವರೆಗೆ ರಿಫೈಂಡ್ ಎಣ್ಣೆಯನ್ನು ಬಳಸಬಹುದು

ಉಲ್ಲೇಖನ

Tags:

ಅಕ್ಕಿತವುಡು ಎಣ್ಣೆ ತವುಡುಅಕ್ಕಿತವುಡು ಎಣ್ಣೆ ಎಣ್ಣೆಯನ್ನು ಉತ್ಪಾದಿಸುವ ವಿಧಾನಅಕ್ಕಿತವುಡು ಎಣ್ಣೆ ಎಣ್ಣೆಅಕ್ಕಿತವುಡು ಎಣ್ಣೆಅಕ್ಕಿಆಫ್ರಿಕಾಏಷಿಯಾಚೈನಾ

🔥 Trending searches on Wiki ಕನ್ನಡ:

ಹರಪ್ಪಜೀವಕೋಶದೇವನೂರು ಮಹಾದೇವಯು. ಆರ್. ಅನಂತಮೂರ್ತಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಅಮೇರಿಕ ಸಂಯುಕ್ತ ಸಂಸ್ಥಾನನೀರಿನ ಸಂರಕ್ಷಣೆಗುಪ್ತ ಸಾಮ್ರಾಜ್ಯಋಗ್ವೇದದ್ವಿಗು ಸಮಾಸವ್ಯಾಪಾರ ಸಂಸ್ಥೆಪುಟ್ಟರಾಜ ಗವಾಯಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಆಟಆಟಿಸಂಡ್ರಾಮಾ (ಚಲನಚಿತ್ರ)ಗೋಕಾಕ್ ಚಳುವಳಿಮಹಮದ್ ಬಿನ್ ತುಘಲಕ್ಕರ್ನಾಟಕದ ಇತಿಹಾಸಯು.ಆರ್.ಅನಂತಮೂರ್ತಿಕದಂಬ ರಾಜವಂಶಇತಿಹಾಸಜಾಗತಿಕ ತಾಪಮಾನಮತದಾನಶಾಸನಗಳುಶಾಂತಲಾ ದೇವಿಕರ್ನಾಟಕದ ಕಲೆ ಮತ್ತು ಸಂಸ್ಕೃತಿಮಾನವನ ವಿಕಾಸವಾಲಿಬಾಲ್ಲೋಪಸಂಧಿರಾಮ ಮಂದಿರ, ಅಯೋಧ್ಯೆಭಾರತ ರತ್ನಲಕ್ಷ್ಮಿಭೂಮಿಚಂದ್ರಶೇಖರ ಕಂಬಾರಬಂಜಾರಡಿ.ವಿ.ಗುಂಡಪ್ಪವಿಕಿಪೀಡಿಯಜಾತಿಭಾಷಾ ವಿಜ್ಞಾನಸೂಫಿಪಂಥಕಾರ್ಮಿಕರ ದಿನಾಚರಣೆಜವಾಹರ‌ಲಾಲ್ ನೆಹರುಕರಗರೇಡಿಯೋಪಾಕಿಸ್ತಾನಸೀತಾ ರಾಮಅಶ್ವತ್ಥಮರತಾಜ್ ಮಹಲ್ಶಿಕ್ಷಣಭಾರತದಲ್ಲಿ ಬಡತನಸಿದ್ದಪ್ಪ ಕಂಬಳಿರಾಯಚೂರು ಜಿಲ್ಲೆವಿರಾಮ ಚಿಹ್ನೆಒಗಟುಭಾಷೆಮಹಿಳೆ ಮತ್ತು ಭಾರತಜವಹರ್ ನವೋದಯ ವಿದ್ಯಾಲಯಚದುರಂಗ (ಆಟ)ದಕ್ಷಿಣ ಕನ್ನಡಇಸ್ಲಾಂ ಧರ್ಮಅಮೃತಧಾರೆ (ಕನ್ನಡ ಧಾರಾವಾಹಿ)ದಶಾವತಾರಸಂಭೋಗಭಾರತದ ರಾಷ್ಟ್ರಪತಿಸುಭಾಷ್ ಚಂದ್ರ ಬೋಸ್ತತ್ಪುರುಷ ಸಮಾಸಬ್ಯಾಡ್ಮಿಂಟನ್‌ಅಷ್ಟ ಮಠಗಳುಅನುಶ್ರೀಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಅಕ್ಕಮಹಾದೇವಿಜ್ಯೋತಿಷ ಶಾಸ್ತ್ರನಿರುದ್ಯೋಗ🡆 More