ಹಿಂದೂ ಮದುವೆ

Expression error: Unexpected < operator.

ಹಿಂದೂ ಮದುವೆ ಯು ಇಬ್ಬರು ಸೂಕ್ತ, ಸಮರಸದ ವ್ಯಕ್ತಿಗಳನ್ನು ಒಟ್ಟಿಗೆ ತರುವ ಪ್ರಕ್ರಿಯೆಯೇ ವಿವಾಹವೆನಿಸಿದೆ. ಹಿಂದೂ ಮದುವೆಯ ಸಮಾರಂಭಗಳು ಸಾಂಪ್ರದಾಯಿಕವಾಗಿ ಕನಿಷ್ಠಪಕ್ಷ ಭಾಗಶಃ ಸಂಸ್ಕೃತದಲ್ಲಿ ನೆರವೇರಿಸಲ್ಪಡುತ್ತವೆ.ಬಹುತೇಕ ಹಿಂದೂ ಸಮಾರಂಭಗಳಲ್ಲಿ ಈ ಭಾಷೆಯು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಸ್ಥಳೀಯ ಜನರ ಭಾಷೆಯನ್ನೂ ಸಹ ಬಳಸಲಾಗುತ್ತಿದ್ದು,ಬಹಳಷ್ಟು ಹಿಂದೂಗಳು ಸಂಸ್ಕೃತವನ್ನು ಅಷ್ಟಾಗಿ ಅರ್ಥ ಮಾಡಿಕೊಳ್ಳಲು ಸಮರ್ಥರಾಗಿರುವುದಿಲ್ಲ. ಅವರಲ್ಲಿ ಹಲವು ಧಾರ್ಮಿಕ ಕ್ರಿಯೆಗಳಿವೆ,ಸಾಂಪ್ರದಾಯಿಕ ಕಾಲದಿಂದಲೂ ಅವು ನಡೆದುಕೊಂಡು ಬರುತ್ತಿವೆ,ಅದಲ್ಲದೇ ಹಲವಾರು ಆಧುನಿಕ ಪಾಶ್ಚಿಮಾತ್ಯ ಮದುವೆ ಸಮಾರಂಭಗಳಿಗಿಂತ ವಿಭಿನ್ನವಾಗಿರುತ್ತವೆ.ಈ ಮದುವೆಯ ಶಿಷ್ಟಾಚಾರ ಸಂಪ್ರದಾಯಗಳು ವಿವಿಧ ಪ್ರದೇಶ,ಕುಟುಂಬಗಳು ಮತ್ತು ಜಾತಿಗಳು ಇಂತಹವುಗಳ ಮೇಲೆ ಅವಲಂಬಿಸುತ್ತಿರುತ್ತವೆ.ಉದಾಹರಣೆಗೆ ರಜಪೂತ್ ಮದುವೆಗಳು ಮತ್ತು ಐಯ್ಯರ್ ಮದುವೆಗಳು ಹೀಗೆ ವಿಂಗಡಿಸಲ್ಪಡುತ್ತವೆ. ಹಿಂದೂಗಳು ಈ ಮದುವೆಗಳ ಸಂಬಂಧಕ್ಕೆ ಬಹಳಷ್ಟು ಮಹತ್ವ ನೀಡುತ್ತಾರೆ.ಮದುವೆಯ ಸಮಾರಂಭಗಳು ರಂಗುರಂಗಿನಿಂದಲ್ಲದೇ ಅದ್ದೂರಿಯಿಂದ ಕೂಡಿರುತ್ತವೆ.ಅದಲ್ಲದೇ ಈ ಸಮಾರಂಭಗಳು ಹಲವು ದಿನಗಳ ವರೆಗೂ ನಡೆಯುತ್ತವೆ.

ಬಹುಸಂಖ್ಯಾತ ಹಿಂದೂಗಳು ವಾಸಿಸುವ ಭಾರತದಲ್ಲಿ ಆಯಾ ಧರ್ಮಗಳಿಗೆ ಸಂಬಂಧಿಸಿದಂತೆ ವಿವಾಹ ಕಾನೂನುಗಳು ವಿಭಿನ್ನವಾಗಿರುತ್ತವೆ. ಆಗ ೧೯೫೫ ರಲ್ಲಿ ಭಾರತದ ಸಂಸತ್ತಿನಲ್ಲಿ ಅನುಮೊದನೆಗೊಂಡ ಹಿಂದೂ ವಿವಾಹ ಕಾಯ್ದೆ ೧ ರ ಪ್ರಕಾರ ಎಲ್ಲಾ ಕಾನೂನು ಉದ್ದೇಶಗಳಿಗೆ ಎಲ್ಲ ಜಾತಿ,ಮತ ಅಥವಾ ಪಂಥ,ಸಿಖ್ಖ,ಬೌದ್ಧರು ಮತ್ತು ಜೈನ್ ಧರ್ಮದವರನ್ನು ಈ ಹಿಂದೂ ವಿವಾಹ ಕಾಯ್ದೆಯಡಿ ಒಂದೇ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ವಿಶೇಷ ವಿವಾಹ ಕಾಯ್ದೆ ೧೯೫೪ ರ ಪ್ರಕಾರ ಹಿಂದೂ ಅಲ್ಲದ ಯಾರನ್ನಾದರೂ ಓರ್ವ ಹಿಂದೂ ವಿವಾಹವಾಗಬಹುದು.ಕಾನೂನು ನಿಗದಿಪಡಿಸಿದ ಷರತ್ತುಗಳನ್ನು ಅನುಸರಿಸಿ ಅಗತ್ಯ ಶಿಷ್ಟಾಚಾರ ಪಾಲಿಸಿ ಈ ವಿವಾಹ ಊರ್ಜಿತಗೊಳಿಸಬಹುದು.

ಮದುವೆ-ಪೂರ್ವದ ಸಮಾರಂಭಗಳೆಂದರೆ ನಿಶ್ಚಿತಾರ್ಥ (ಇದು ವಾಗ್ದಾನ ಒಳಗೊಂಡಿರುತ್ತದೆ,ಅಥವಾ ಮೌಖಿಕ ಒಪ್ಪಂದ ಮತ್ತು ಲಗ್ನ-ಪತ್ರ ,ಲಿಖಿತ ಘೋಷಣೆ)ಅಲ್ಲದೇ ವರನ ಕಡೆಯವರು ವಧುವಿನ ಮನೆಗೆ ವರಾತ ಬರುವುದು;ಸಾಮಾನ್ಯವಾಗಿ ಶಾಸ್ತ್ರೋಕ್ತ ಮೆರವಣಿಗೆ ಮೂಲಕ ಬರುತ್ತಾರೆ. ಮದುವೆ-ನಂತರದ ಸಮಾರಂಭಗಳಲ್ಲಿ ವಧುವನ್ನು ಆಕೆಯ ಹೊಸಮನೆಗೆ ಸ್ವಾಗತಿಸುವುದೂ ಒಂದಾಗಿದೆ.

ಆಧುನಿಕ ಯುಗದಲ್ಲಿಯೂ ಹಿಂದೂ ಧರ್ಮವು ಪವಿತ್ರವಾದ ಪುರಾಣಗಳಲ್ಲಿ ಉಲ್ಲೇಖಿತವಾದಂತೆ ದೇವರುಗಳ ಪೂಜಾ ಪದ್ಧತಿಗಳ ಮೇಲೆ ಬಹಳಷ್ಟು ಅವಲಂಬಿತವಾಗಿದೆ.ಹಿಂದೂ ಧರ್ಮದಲ್ಲಿನ ವಿವಾಹಪದ್ಧತಿಯಲ್ಲಿ ವೇದದ ಒಳಗಿರುವ ಯಜ್ಞ ದ ಪ್ರಕಾರವು ಅಗ್ರಸ್ಥಾನದಲ್ಲಿದೆ.(ಒಂದು ಪ್ರಕಾರದ ಅಗ್ನಿ-ತ್ಯಾಗ) ಈ ಅಗ್ನಿಪೂಜೆಯೊಂದಿಗೆ ಇಂಡೊ-ಆರ್ಯನ್ ಪದ್ಧತಿಯಲ್ಲಿ ಆರ್ಯರ ದೇವತೆಗಳನ್ನು ಪ್ರಾರ್ಥನೆ ಮೂಲಕ ಆಹ್ವಾನಿಸಲಾಗುತ್ತದೆ. ಇದು ಮೂಲದಲ್ಲಿ ಪುರಾತನವಾದ ಈ ಸಮಾರಂಭಗಳು ಸ್ನೇಹ/ಸಂಬಂಧಗಳನ್ನು ಗಹನವಾಗಿ ಬಂಧಿಸಿಡುವಲ್ಲಿ ಸಫಲವಾಗಿವೆ.(ಅದಲ್ಲದೇ ಪೌರಾಣಿಕ ಪಠ್ಯಗಳಲ್ಲಿ ಕಾಣುವುದೇನೆಂದರೆ ಒಂದೇ ಲಿಂಗದ ಅಥವಾ ವಿಭಿನ್ನ ಲಿಂಗದ ಜನರನ್ನು ಒಟ್ಟಿಗೆ ತರುವುದೇ ಇಂತಹ ಸಮಾರಂಭಗಳ ಗಹನವಾದ ಉದ್ದೇಶವಾಗಿದೆ.)ಇಂದೂ ಕೂಡಾ ಈ ಸಾಂಪ್ರದಾಯಿಕತೆಯ ಗಾಢತೆಯು ಮದುವೆಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಹಿಂದೂ ಮದುವೆಗಳ ಪ್ರಮುಖ ಸಾಕ್ಷಿ ಎಂದರೆ ಅಗ್ನಿ-ದೇವ (ಅಥವಾ ಪವಿತ್ರ ಅಗ್ನಿ) ಅಗ್ನಿ ,ಯಾವುದೇ ಕಾನೂನು ಮತ್ತು ಸಂಪ್ರದಾಯಗಳನ್ನು ಅನುಸರಿಸಿದರೂ ಈ ಪವಿತ್ರ ಅಗ್ನಿಸಾಕ್ಷಿ ಇಲ್ಲದೇ ಮದುವೆಯ ಪ್ರಕ್ರಿಯೆ ಪೂರ್ಣವಾಗದು.ವಧು ಮತ್ತು ವರರಿಬ್ಬರೂ ಈ ಪವಿತ್ರ ಅಗ್ನಿ ಸುತ್ತಲೂ ಏಳು ಸುತ್ತು ಸುತ್ತಿ ತಮ್ಮ ಪವಿತ್ರ ಸಂಬಂಧಕ್ಕೆ ಕಾರಣರಾಗುತ್ತಾರೆ.ಪಾಣಿಗ್ರಹಣ ಕೂಡ ಎನ್ನತ್ತಾರೆ

ವೈವಾಹಿಕ ಬದುಕಿನ ಮೂಲಾಧಾರವನ್ನು ಗಟ್ಟಿಗೊಳಿಸಿ ಪೂರ್ಣಗೊಳಿಸುವ ರೂಢಿಗಳು

ಓರ್ವ ವೇದಕಾಲದ ಋಷಿ ಹೇಳುವಂತೆ ಸಂತಸ ಮತ್ತು ಸಂತೃಪ್ತಿಯ ವೈವಾಹಿಕ ಜೀವನವೆಂದರೆ ಭಾವನಾತ್ಮಕವಾಗಿ ಒಂದುಗೂಡುವಿಕೆ,ಅನ್ಯೋನ್ಯತೆ ಮತ್ತು ಪತಿ,ಪತ್ನಿಯರ ನಡುವಿನ ಪ್ರೀತಿಯ ಸಂಬಂಧವೆಂಬುದಾಗಿದೆ. ಹೀಗೆ ಮದುವೆಯೆಂದರೆ ಸ್ವಯಂ-ತೃಪ್ತಿಪಡುವಿಕೆಯಲ್ಲ;ಇದು ಜೀವನದುದ್ದಕೂ ಸಾಮಾಜಿಕ ಮತ್ತು ದೈವಿಕ ಜವಾಬ್ದಾರಿಯನ್ನು ನೆರವೇರಿಸುವಂತಹದ್ದಾಗಿದೆ. ವೈವಾಹಿಕ ಜೀವನವೆಂದರೆ ಇಬ್ಬರು ಒಂದಾಗುವ ಅವಕಾಶದೊಂದಿಗೆ ಜೀವನದುದ್ದಕ್ಕೂ ಆತ್ಮ ಸಂಗಾತಿಗಳಾಗಿರುವುದು.

ಪ್ರಧಾನ ಧಾರ್ಮಿಕ ಆಚರಣೆಗಳು

ಎಲ್ಲಾ ಧಾರ್ಮಿಕ ಆಚರಣೆಗಳು ಕುಟುಂಬದ ಸಂಪ್ರದಾಯಗಳ ಮೇಲೆ ನಿರ್ಧಾರವಾಗುತ್ತವೆ. ಕೆಲವು ಸಾಂಪ್ರದಾಯಿಕ ಆಚರಣೆಗಳು ವಿಭಿನ್ನ ಪ್ರದೇಶಗಳಲ್ಲಿ ಕೊಂಚ ವ್ಯತ್ಯಾಸ ಹೊಂದಿರುತ್ತವೆ.

ಮದುವೆಯ ಸಂದರ್ಭದ ಸಂಭ್ರಮಾಚರಣೆಗಳು

ಸಪ್ತಪದಿ

ಹಿಂದೂ ಮದುವೆ 
ಸಪ್ತಪದಿ ಸಮಾರಂಭದ ಕೆಲ ಕ್ಷಣಗಳ ನಂತರ ಕಾಣುವ ಓರ್ವ ಹಿಂದೂ ವಧು

ಸಪ್ತಪದಿ ಎಂದರೆ (ಸಂಸ್ಕೃತದಲ್ಲಿ ಏಳು ಮೆಟ್ಟಿಲುಗಳು/ಹೆಜ್ಜೆಗಳು , c.f.(ಒಟ್ಟುಗೂಡಿಸುವಿಕೆ) ಲ್ಯಾಟಿನ್ ನ ಆಡುಭಾಷಾ ಸೂತ್ರದಲ್ಲಿ ಅದು ರಕ್ತ ಸಂಬಂಧಗಳಿಗೆ ಸಂಬಂಧಿಸಿದ್ದಾಗಿದೆ; ಸಪ್ತಮ +ಪಾದಗಳು ) ಅಥವಾ ಇನ್ನೊಂದೆಂದರೆ ಸಾಥ್ ಫೆಯೆರಾಸ್ ಎಂಬ ಪದಗಳು ಹಿಂದೂ ವಿವಾಹಗಳ ಬಗ್ಗೆ ವೇದಗಳ ಕಾಲದಿಂದಲೂ ಆಚರಣೆಗೆ ಬಂದ ಅತ್ಯಂತ ಮಹತ್ವದ ಅಂಗವೆನಿಸಿವೆ. ವಿವಾಹಿತ ಜೋಡಿಯು ಪವಿತ್ರ ಅಗ್ನಿಯ ಮಂಡಲದ ಸುತ್ತಲೂ ಏಳು ಬಾರಿ ಸುತ್ತು ಹಾಕುತ್ತದೆ.ಈ (ಅಗ್ನಿ ),ಅವರಿಬ್ಬರೂ ಒಬ್ಬರಿಗೊಬ್ಬರು ಬದ್ಧರಾಗುವ ವಚನಗಳಿಗಾಗಿ ಮಾಡಿದ ಪ್ರಮಾಣಕ್ಕೆ ಅದು ಸಾಕ್ಷಿಯಾಗುತ್ತದೆ ಎಂದು ಪರಿಗಣಿಸಲಾಗುತ್ತದೆ. ಇನ್ನು ಕೆಲವು ಪ್ರದೇಶಗಳಲ್ಲಿ ವಧು ಮತ್ತು ವರ, ಇವರ ನಡುವೆ ಕೊಂಡಿಯಾಗಿ ಬಟ್ಟೆಯೊಂದರ ಗಂಟೊಂದನ್ನು ಸಾಂಕೇತಿಕವಾಗಿ ಹಾಕಿ ಈ ಸಮಾರಂಭದಲ್ಲಿ ಜೋಡಿಸಲಾಗುತ್ತದೆ. ಎಲ್ಲಾ ಕಡೆಗೂ ಅಥವಾ ಬೇರೆಡೆಗೆ ಹೋಗುವಾಗ ವರನು ವಧುವಿನ ಬಲಗೈಯನ್ನು ತನ್ನ ಬಲಗೈಯಲ್ಲಿ ಹಿಡಿದಿರುತ್ತಾನೆ. ಪ್ರತಿಯೊಂದು ಸುತ್ತುವಿಕೆಯು ಆಯಾ ಸಮುದಾಯ ಮತ್ತು ಪ್ರದೇಶಗಲ್ಲಿನ ವಧುವರರ ಸಂಬಂಧದಂತೆ ನಡೆಯುತ್ತದೆ. ಮೊದಲ ಸುತ್ತಿನಲ್ಲಿ ಸಾಮಾನ್ಯವಾಗಿ ವಧುವೇ ವರನನ್ನು ಕೊಂಡೊಯ್ಯುತ್ತಾಳೆ. ಉತ್ತರ ಭಾರತದಲ್ಲಿ ಮೊದಲ ಆರು ಸುತ್ತುಗಳನ್ನು ವಧುವೇ ಮುಂದಾಗಿ ನಡೆಯುವುದು ಸಾಮಾನ್ಯವಾಗಿದೆ.ಕೊನೆಯ ಸುತ್ತು ಮಾತ್ರ ವರನು ಮುಂದಾಗುತ್ತಾನೆ. ಭಾರತದ ಮಧ್ಯ ಭಾಗಗಳಲ್ಲಿ ಮೊದಲ ಮೂರು ಅಥವಾ ನಾಲ್ಕು ಸುತ್ತುಗಳನ್ನು ವಧುವೇ ಮುನ್ನಡೆಸುತ್ತಾಳೆ. ಪ್ರತಿಯೊಂದು ಸುತ್ತಿಗೂ ದಂಪತಿ ಜೋಡಿಯು ಒಂದೊಂದು ವಚನದ ಬದ್ಧತೆಯನ್ನು ತೋರಿಸುತ್ತದೆ.ಸಂತಸದ ಸಂಬಂಧ ಮತ್ತು ಗೃಹ ಜವಾಬ್ದಾರಿ ಬಗೆಗೆ ಉತ್ತಮ ಕೊಂಡಿಯನ್ನು ಜೋಡಿಸುತ್ತದೆ.

  • ಪುರೋಹಿತರು ಆಯಾ ಜೋಡಿಗೆ ಮಂತ್ರ ಘೋಷಣೆ ಮಾಡುತ್ತಾರೆ.ಅದೇ ರೀತಿ ವರನು ವಧುವಿಗೆ ಅದನ್ನು ಪುನರುಚ್ಚರಿಸುತ್ತಾನೆ.
  • ವಧುವಿನ ಕಡೆಯ ಹೆಣ್ಣುಮಗಳೊಬ್ಬಳು ಅಭಿವೃದ್ಧಿಯ ಸಂಕೇತವಾಗಿ ಇಬ್ಬರ ಸಮೃದ್ಧಿಗಾಗಿ ಸಸಿಯೊಂದನ್ನು ಹೊತ್ತು ಮುನ್ನಡೆಯುತ್ತಾಳೆ.
  • ವಧು ಅಥವಾ ವರನಿಗೆ ಮಕ್ಕಳಿದ್ದರೆ ಅವರು ಈ ಸಮಾರಂಭದ ಭಾಗವಾಗಲಾರರು.ಅಂದರೆ ಮರುಮದುವೆಯ ಕಾಲದಲ್ಲಿ ಮಕ್ಕಳ ಅಸ್ತಿತ್ವ ಇಲ್ಲಿ ಬರಲಾರದು.
  • ವಧುವಿಗೆ ಸುಗಂಧ ಪರಿಮಳ ಸಿಂಪಡಿಸಿ ಉದಾಹರಣೆಗೆ ಗುಲಾಬಿ ಪಕಳೆಗಳ ಪರಿಮಳ ಇತ್ಯಾದಿ ವಧುಗೆ ಸಂತಸಪಡಿಸಲು ಬಳಸಲಾಗುತ್ತದೆ.

ದಕ್ಷಿಣ ಭಾರತದಲ್ಲಿ ಪುರೋಹಿತರು ಹೇಳುವ ಪ್ರತಿ ಮಂತ್ರವನ್ನು ಜೋಡಿಯು ಪುನರುಚ್ಚರಿಸುತ್ತದೆ:

    "ನಾವೀಗ ಒಟ್ಟಾಗಿ ಈ ಪ್ರಮಾಣ ಮಾಡೋಣ. ನಾವು ಪ್ರೀತಿ,ಆಹಾರ,ನಮ್ಮ ಬಲ ಮತ್ತು ಸಮ ರುಚಿಯನ್ನು ಒಟ್ಟಾಗಿ ಸಮನಾಗಿ ಹೊಂದೋಣ. ನಮ್ಮಿಬ್ಬರ ಮನಸ್ಸು ಒಂದೇ ಇರಲಿ,ನಮ್ಮ ಪ್ರತಿಜ್ಞೆಯನ್ನು ನಾವು ಒಟ್ಟಾಗಿ ನೆರವೇರಿಸೋಣ. ನಾನು ಸಾಮವೇದ, ನೀನು ಋಗ್ವೇದ, ನಾನು ಮೇಲಿನ ಲೋಕವಾದರೆ, ನೀನು ಭೂಮಿ; ನಾನು ಸುಖಿಲಾಮ್, ನೀನು ಅದನ್ನು ಹೊಂದಿದಾಕೆ - ಒಂದಾಗಿ ಹೊಂದಾಣಿಕೆಯಿಂದ ಒಟ್ಟಾಗಿರೋಣ ಮತ್ತು ಮಕ್ಕಳನ್ನು ಪಡೆಯೋಣ ಅದಲ್ಲದೇ ಇನ್ನುಳಿದ ಸಂಪತ್ತಿಗೂ ಪಾಲುದಾರರಾಗೋಣ; ಬಾ ಜೊತೆಗೆ ಸಾಗೋಣ ಓ ನನ್ನ ಸುಂದರಿಯೇ ನನ್ನೊಡನೆ ಬಾ.

!"

ಉತ್ತರ ಭಾರತದಲ್ಲಿ ವಿವಾಹಗಳಲ್ಲಿ ವಧುವರರು ಏಳು ಹೆಜ್ಜೆಗಳ ನಂತರ ಕೆಳಗಿನ ಶಬ್ದೋಚ್ಛಾರ ಮಾಡುತ್ತಾರೆ:

    "ನಾವು ಸಪ್ತಪದಿ ತುಳಿದಿದ್ದೇವೆ. ನೀನು ಯಾವಾಗಲೂ ನನ್ನವಳಾಗಿರು. ಹೌದು.ನಾವಿಬ್ಬರೂ ಈಗ ಬದುಕಿನಲ್ಲಿ ಪಾಲುದಾರರು. ನಾನು ನಿನ್ನವಳಾಗಿದ್ದೇನೆ. ಇದರ ನಂತರ,ನೀನಿಲ್ಲದೇ ನಾನು ಬದುಕಲು ಸಾಧ್ಯವಿಲ್ಲ. ನಾನಿಲ್ಲದೇ ಬದುಕಬೇಡ. ಸಂತಸಗಳನ್ನು ಒಟ್ಟಿಗೆ ಹಂಚಿಕೊಳ್ಳೋಣ. ನಾವಿಬ್ಬರೂ ಶಬ್ದಾರ್ಥ, ಒಟ್ಟಾಗಿ ಇರುತ್ತೇವೆ. ನೀನೆ ವಿಚಾರಸರಣಿ ಮತ್ತು ನಾನು ಅದರ ಸ್ಪಷ್ಟತೆಯಾಗಿರುವೆ. ರಾತ್ರಿಯು ನಮಗೆ ಜೇನಿನ- ಸಿಹಿಯಾಗಲಿ. ಈ ಮುಂಜಾವು ನಮಗೆ ಜೇನಿನ- ಸಿಹಿಯಾಗಲಿ. ಈ ಭೂಮಿ ನಮಗೆ ಜೇನಿನ- ಸಿಹಿಯಾಗಲಿ. ಈ ಸ್ವರ್ಗಗಳು ನಮಗೆ ಜೇನಿನ- ಸಿಹಿಯಾಗಲಿ. ಈ ಸಸ್ಯರಾಶಿಯು ನಮಗೆ ಜೇನಿನ- ಸಿಹಿಯಾಗಲಿ. ಈ ಸೂರ್ಯನು ನಮಗೆ ಜೇನಿನ- ಸಿಹಿಯಾಗಲಿ. ಈ ಹಸುಗಳ ಹಾಲು ನಮಗೆ ಜೇನಿನ- ಸಿಹಿಯಾಗಲಿ. ಈ ಸ್ವರ್ಗವು ಸ್ಥಿರವಾಗಿದ್ದು,ಈ ಭೂಮಿ ಸ್ಥಿರವಾಗಿದ್ದು,ಈ ಪರ್ವತಗಳು ಸ್ಥಿರವಾಗಿದ್ದು ಹೀಗೆ ನಮ್ಮ ಸಂಬಂಧವು ಸದಾ ಕಾಲ ಶಾಶ್ವತ ಸ್ಥಿತವಾಗಿರಲಿ. "

ಹೂ ಹಾಸಿಗೆ ಸಮಾರಂಭ

ಹಿಂದೂ ಮದುವೆ 
ಹೂವಿನ ಹಾಸಿಗೆ.

ಈ ಹೂ ಹಾಸಿಗೆ ಉತ್ಸವದಲ್ಲಿ ವಧು ಹೂವಿನ ಅಲಂಕಾರದೊಂದಿಗೆ ತುಂಬಿಹೋಗಿರುತ್ತಾಳೆ.ಮದುವೆಯ ಅನಂತರ ಹಾಸಿಗೆ, ಕೋಣೆಗಳನ್ನು ವರನ ಕುಟುಂಬದವರು ಹೂವಿನ ರಾಶಿಯಿಂದ ಅಲಂಕರಿಸುತ್ತಾರೆ. ಮನೋಭಿಲಾಷೆ ಪೂರೈಕೆಯು ಒಂದು ರಾತ್ರಿಯ ಶುಭ ಸಂದರ್ಭದಲ್ಲಿ ನಡೆಯುತ್ತದೆ.

ಉಲ್ಲೇಖಗಳು‌‌

ಬಾಹ್ಯ ಕೊಂಡಿಗಳು‌‌

Tags:

ಹಿಂದೂ ಮದುವೆ ವೈವಾಹಿಕ ಬದುಕಿನ ಮೂಲಾಧಾರವನ್ನು ಗಟ್ಟಿಗೊಳಿಸಿ ಪೂರ್ಣಗೊಳಿಸುವ ರೂಢಿಗಳುಹಿಂದೂ ಮದುವೆ ಪ್ರಧಾನ ಧಾರ್ಮಿಕ ಆಚರಣೆಗಳುಹಿಂದೂ ಮದುವೆ ಹೂ ಹಾಸಿಗೆ ಸಮಾರಂಭಹಿಂದೂ ಮದುವೆ ಉಲ್ಲೇಖಗಳು‌‌ಹಿಂದೂ ಮದುವೆ ಬಾಹ್ಯ ಕೊಂಡಿಗಳು‌‌ಹಿಂದೂ ಮದುವೆ

🔥 Trending searches on Wiki ಕನ್ನಡ:

ಜನ್ನಮಫ್ತಿ (ಚಲನಚಿತ್ರ)ವಾಣಿವಿಲಾಸಸಾಗರ ಜಲಾಶಯನಾಟಕಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಗೋವವಾಲಿಬಾಲ್ಓಂ ನಮಃ ಶಿವಾಯಸಂವತ್ಸರಗಳುಸಾಮ್ರಾಟ್ ಅಶೋಕಆಗಮ ಸಂಧಿಒಲಂಪಿಕ್ ಕ್ರೀಡಾಕೂಟಬೆಟ್ಟದಾವರೆಉಪ್ಪಿನ ಸತ್ಯಾಗ್ರಹಹಿಂದೂ ಮಾಸಗಳುಕಲ್ಯಾಣ್ಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕನ್ನಡದ ಉಪಭಾಷೆಗಳುಸಮೂಹ ಮಾಧ್ಯಮಗಳುಗೋಪಾಲಕೃಷ್ಣ ಅಡಿಗಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಪಶ್ಚಿಮ ಘಟ್ಟಗಳುಹರಿಹರ (ಕವಿ)ಜಾಹೀರಾತುಭಾರತದ ರಾಷ್ಟ್ರೀಯ ಚಿನ್ಹೆಗಳುಹಸಿರುಮನೆ ಪರಿಣಾಮರನ್ನಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಕಪ್ಪೆಚಿಪ್ಪುಯಕ್ಷಗಾನಕರ್ನಾಟಕ ಹೈ ಕೋರ್ಟ್ಭಾರತದ ಸಂಸತ್ತುರಾಣೇಬೆನ್ನೂರುಮುಖ್ಯ ಪುಟಏಡ್ಸ್ ರೋಗಮಲ್ಲಿಕಾರ್ಜುನ ಜ್ಯೋತಿರ್ಲಿಂಗಭಾರತದ ಪ್ರಧಾನ ಮಂತ್ರಿರಚಿತಾ ರಾಮ್ಬಾದಾಮಿಚೋಳ ವಂಶಮಹಾತ್ಮ ಗಾಂಧಿಪ್ರಬಂಧ ರಚನೆವ್ಯಾಯಾಮಭಾರತದ ಪ್ರಧಾನ ಮಂತ್ರಿಗಳ ಪಟ್ಟಿಶಬ್ದಮಣಿದರ್ಪಣ1935ರ ಭಾರತ ಸರ್ಕಾರ ಕಾಯಿದೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಮಲೆನಾಡುರವೀಂದ್ರನಾಥ ಠಾಗೋರ್ಧನಂಜಯ್ (ನಟ)ಶಿವನ ಸಮುದ್ರ ಜಲಪಾತಪಂಜೆ ಮಂಗೇಶರಾಯ್ಚಾಲುಕ್ಯಕನ್ನಡ ಚಂಪು ಸಾಹಿತ್ಯಮಗುವಿನ ಬೆಳವಣಿಗೆಯ ಹಂತಗಳುಭಾರತದಲ್ಲಿ ಬಡತನಕರ್ನಾಟಕ ಸಂಗೀತವ್ಯಾಸರಾಯರುಯೋಗವಾಹತುಳಸಿಕರ್ನಾಟಕದ ಜಿಲ್ಲೆಗಳುಕೃಷಿಒನಕೆ ಓಬವ್ವವಿಶ್ವ ರಂಗಭೂಮಿ ದಿನಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಖ್ಯಾತ ಕರ್ನಾಟಕ ವೃತ್ತಕನ್ನಡದಲ್ಲಿ ಸಣ್ಣ ಕಥೆಗಳುಗಣೇಶ್ (ನಟ)ಗಿರೀಶ್ ಕಾರ್ನಾಡ್ಕಟ್ಟುಸಿರುನಾಗವರ್ಮ-೧ರಂಜಾನ್ಜೋಳಮೊದಲನೇ ಅಮೋಘವರ್ಷಬಾಲ್ಯ ವಿವಾಹಹಿಂದಿಯೋನಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ🡆 More