ಸೇವಂತಿಗೆ

ಸೇವಂತಿಗೆ ಆಸ್ಟರೇಸಿಯಿ ಕುಟುಂಬದಲ್ಲಿನ ಕ್ರಿಸ್ಯಾಂಥಮಮ್ ಜಾತಿಯ ಒಂದು ಹೂಬಿಡುವ ಸಸ್ಯ.

ಸೇವಂತಿಗೆ
ಸೇವಂತಿಗೆ
Chrysanthemum sp.
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Asterids
ಗಣ:
Asterales
ಕುಟುಂಬ:
Asteraceae
ಉಪಕುಟುಂಬ:
Asteroideae
ಪಂಗಡ:
Anthemideae
ಕುಲ:
Chrysanthemum

L.
Type species
Chrysanthemum indicum
L.
Synonyms
  • Chrysanthemum subsect. Dendranthema (DC.) DC. ex Kitam.
  • Neuractis Cass.
  • Pyrethrum sect. Dendranthema DC.
  • Leucanthemum (Tourn.) L.
  • Dendranthema (DC.) Des Moul.
  • Pyrethrum sect. Dendranthema DC.

ಅವು ಏಷ್ಯಾ ಮತ್ತು ಈಶಾನ್ಯ ಯೂರೋಪ್‍ಗೆ ಸ್ಥಳೀಯ ಸಸ್ಯ|ಸ್ಥಳೀಯವಾಗಿವೆ. ಬಹುತೇಕ ಪ್ರಜಾತಿಗಳು ಪೂರ್ವ ಏಷ್ಯಾದಿಂದ ಹುಟ್ಟಿಕೊಂಡಿವೆ ಮತ್ತು ಚೀನಾದಲ್ಲಿ ವೈವಿಧ್ಯತೆಯ ಕೇಂದ್ರವಿದೆ.

ಸೇವಂತಿಗೆ ಹೂವಿಗೆ ಆಡುಭಾಷೆಯಲ್ಲಿ ಸೇವಂತಿಗೆ, ಶಾವಂತಿಗೆ, ಶ್ಯಾಮಂತಿಗೆ ಇತ್ಯಾದಿ ಹೆಸರುಗಳಿವೆ. ಸೇವಂತಿಗೆ ಹೂವಿನಲ್ಲಿ ಅನೇಕ ಬಣ್ಣ, ಆಕಾರಗಳಿದ್ದರೂ, ಸಾಧಾರಣವಾಗಿ ಕಂಡು ಬರುವುದು ಹಳದಿ ಬಣ್ಣದ ಹೂವು. ಇತರ ಬಣ್ಣಗಳು - ಬಿಳಿ, ಕೆಂಪು, ನೇರಳೆ, ತಿಳಿ ಗುಲಾಬಿ, ತಿಳಿಗೆಂಪು ಇತ್ಯಾದಿ. ಹಬ್ಬ-ಹರಿದಿನಗಳಲ್ಲಿ ಸೇವಂತಿಗೆ ಹೂವಿನ ಬಳಕೆ ಜಾಸ್ತಿ. ಹೂಗೊಂಚಲು(ಬೊಕೆ) ತಯಾರಿಕೆಯಲ್ಲೂ ಸೇವಂತಿಗೆ ಸೂಕ್ತ ಸ್ಥಾನ ಪಡೆದಿದೆ.

ಬೇಸಾಯ ಕ್ರಮ

ಜಮೀನನ್ನು ಚೆನ್ನಾಗಿ ಹುಡಿ ಮಾಡಿ ಒಂದೂವರೆ ಅಡಿ ಅಂತರ ಬಿಟ್ಟು ಸಾಲುಗಳನ್ನು ನಿರ್ಮಿಸಬೇಕು. ಕೈಅಳತೆಯಲ್ಲಿ ಗುಂಡಿ ತೆಗೆದು ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರ ಬಿಟ್ಟು ಗಿಡಗಳನ್ನು ನಾಟಿ ಮಾಡಬೇಕು. ನಾಟಿಗೆ ಬೇಕಾದ ಸಸಿ ಬೆಳೆಗಾರರ ಬಳಿ ಲಭ್ಯ. ಕೆಲವೊಂದು ಕಂಪೆನಿಗಳು ಸಸಿಯನ್ನು ಪೂರೈಸುತ್ತವೆ. ನಾಟಿಗಿಂತ ಮುಂಚೆ ಗುಂಡಿಗೆ ಒಂಚೂರು ಸುಡುಮಣ್ಣು ಮತ್ತು ಕೊಟ್ಟಿಗೆ ಗೊಬ್ಬರವನ್ನು ನೀಡಿದರೆ ಒಳ್ಳೆಯದು. ಒಂದು ಗುಂಡಿಯಲ್ಲಿ ಒಂದೇ ಗಿಡವನ್ನು ನಾಟಿ ಮಾಡಬೇಕು.ಗಿಡ ನಾಟಿ ಮಾಡಿದ ನಂತರ ಪ್ರತಿದಿನ ಪ್ರತಿಗಿಡಕ್ಕೆ ಒಂದು ಲೋಟದಷ್ಟು ನೀರನ್ನು ನೀಡುತ್ತಿರಬೇಕು. ತಿಂಗಳಿಗೊಮ್ಮೆ ಒಂದು ಬುಡಕ್ಕೆ ಅರ್ಧ ಬುಟ್ಟಿಯಷ್ಟು ಹಟ್ಟಿ ಗೊಬ್ಬರವನ್ನು ನೀಡಬೇಕು. ತಿಂಗಳಿಗೊಮ್ಮೆ ಬುಡಕ್ಕೆ ಮಣ್ಣು ಹಾಕಿದರೆ ಒಳ್ಳೆಯದು.

ಹೂ ಕಟಾವು

ವಿಶೇಷವೆಂದರೆ ಮಳೆಗಾಲದಿಂದ ಈ ಪುಷ್ಪಕ್ಕೆ ಯಾವುದೇ ತೊಂದರೆಯಿಲ್ಲ. ಎಲೆಚುಕ್ಕೆ ರೋಗ, ಬೇರುಕೊಳೆ ಕಾಣಿಸಿಕೊಳ್ಳುವ ಪ್ರಮುಖ ರೋಗಗಳು. ಹದಿನೈದು ದಿನಕ್ಕೊಮ್ಮೆ ಹೂವಿನ ಗಿಡಗಳಿಗೆ ಕಹಿಬೇವಿನ ಹಿಂಡಿಯನ್ನು ಸಿಂಪಡಿಸುವ ಮೂಲಕ ಕೀಟಬಾಧೆಗಳನ್ನು ತಡೆಗಟ್ಟಬಹುದು. ಗಿಡಗಳು ಬಾಡಿದಂತೆ ಕಂಡುಬಂದ ಕೂಡಲೇ ಬೇರುಹುಳುರೋಗ ನಿಯಂತ್ರಕ ಸ್ಪ್ರೇಯರ್‌ಗಳನ್ನು ಸಿಂಪಡಿಸಬೇಕು. ಹೂಗಳು ಗಾತ್ರದಲ್ಲಿ ಸಣ್ಣದಾಗಿ ಬಾಡಿದಂತೆ ಕಂಡುಬಂದರೆ ಅಂತಹ ಹೂಗಳನ್ನು ಗಿಡದಿಂದ ಬೇರ್ಪಡಿಸಬೇಕು.ಕೆಂಪು ಮತ್ತು ಮೆಕ್ಕಲು ಮಣ್ಣು ಬೆಳೆಗೆ ಸೂಕ್ತ. ಗಿಡಗಳಿಗೆ ಬಿಸಿಲಿನ ಅಗತ್ಯವಿದ್ದು ಚಳಿಗಾಲದಲ್ಲಿ ಇಳುವರಿ ಕೂಡಾ ಕಡಿಮೆ. ಕಲ್ಲಿನಿಂದ ಕೂಡಿದ ಗುಡ್ಡ ಪ್ರದೇಶದಲ್ಲಿ ಬೆಳೆಯುವಂತಿಲ್ಲ. ಮಧ್ಯಾಹ್ನದ ವೇಳೆ ಅಂದರೆ ಹೆಚ್ಚಾಗಿ ಬಿಸಿಲಿನ ತಾಪವಿರುವ ವೇಳೆ ಹೂ ಕಟಾವು ಮಾಡುವಂತಿಲ್ಲ. ಮಳೆಗಾಲದಲ್ಲಿ ಇಳುವರಿ ಕೂಡಾ ಕಡಿಮೆ. ಗಿಡದಿಂದ ಗಿಡಕ್ಕೆ ಅಂತರವಿದ್ದಷ್ಟು ಇಳುವರಿ ಅಧಿಕ. ಗಿಡಗಳನ್ನು ನೆಲಕ್ಕೆ ಬಾಗದಂತೆ ನೋಡಿಕೊಳ್ಳಬೇಕು. ಕಳೆಗಳನ್ನು ಬೆಳೆಯಲು ಬಿಡಬಾರದು. ಚಳಿಗಾಲದಲ್ಲಿ ಹೂ ಕಟಾವಿಗಿಂತ ಮೊದಲು ನೀರು ಸಿಂಪಡಿಸುವುದು ಒಳ್ಳೆಯದು.

ಸೇವಂತಿಗೆ ಹೂಗಳ ಭಾವಚಿತ್ರಗಳು

ಉಲ್ಲೇಖಗಳು

Tags:

ಸೇವಂತಿಗೆ ಬೇಸಾಯ ಕ್ರಮಸೇವಂತಿಗೆ ಹೂ ಕಟಾವುಸೇವಂತಿಗೆ ಹೂಗಳ ಭಾವಚಿತ್ರಗಳುಸೇವಂತಿಗೆ ಉಲ್ಲೇಖಗಳುಸೇವಂತಿಗೆಕುಟುಂಬಚೀನಾಜಾತಿಯುರೋಪ್‌

🔥 Trending searches on Wiki ಕನ್ನಡ:

ವಿಷ್ಣುವರ್ಧನ್ (ನಟ)ರುಡ್ ಸೆಟ್ ಸಂಸ್ಥೆಭೂಮಿಸೂರ್ಯ (ದೇವ)ಮೊದಲನೇ ಅಮೋಘವರ್ಷಚಿತ್ರಲೇಖಭಾರತದ ಆರ್ಥಿಕ ವ್ಯವಸ್ಥೆವಿಶ್ವದ ಅದ್ಭುತಗಳುಗಿಡಮೂಲಿಕೆಗಳ ಔಷಧಿರತನ್ ನಾವಲ್ ಟಾಟಾಮಲ್ಟಿಮೀಡಿಯಾಮಹಾತ್ಮ ಗಾಂಧಿಜಾತ್ಯತೀತತೆಸೀತೆಸಂಗ್ಯಾ ಬಾಳ್ಯರೈತ ಚಳುವಳಿರಾಷ್ಟ್ರೀಯ ಶಿಕ್ಷಣ ನೀತಿಉಡುಪಿ ಜಿಲ್ಲೆಹತ್ತಿದಾಸ ಸಾಹಿತ್ಯಶ್ರವಣಬೆಳಗೊಳಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿದಾಳಿಂಬೆಕನ್ನಡ ಛಂದಸ್ಸುಮಾನವ ಅಸ್ಥಿಪಂಜರಅಷ್ಟ ಮಠಗಳುಮಾರೀಚಜೋಡು ನುಡಿಗಟ್ಟುಭಾರತದ ಪ್ರಧಾನ ಮಂತ್ರಿಸೈಯ್ಯದ್ ಅಹಮದ್ ಖಾನ್ದ್ವಿರುಕ್ತಿರಾಮ ಮಂದಿರ, ಅಯೋಧ್ಯೆಕನ್ನಡ ರಂಗಭೂಮಿಮುಖ್ಯ ಪುಟಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಪಾರ್ವತಿಜರಾಸಂಧಕೃಷಿಜವಹರ್ ನವೋದಯ ವಿದ್ಯಾಲಯಉತ್ತರ ಪ್ರದೇಶಕರ್ನಾಟಕದ ಹಬ್ಬಗಳುಕರ್ನಾಟಕದ ಶಾಸನಗಳುಕರ್ಮಧಾರಯ ಸಮಾಸ೧೮೬೨ಸಂಚಿ ಹೊನ್ನಮ್ಮಮಾಸ್ತಿ ವೆಂಕಟೇಶ ಅಯ್ಯಂಗಾರ್ಸಚಿನ್ ತೆಂಡೂಲ್ಕರ್ದೆಹಲಿ ಸುಲ್ತಾನರುಕರ್ನಾಟಕ ಸ್ವಾತಂತ್ರ್ಯ ಚಳವಳಿಊಟಗೋತ್ರ ಮತ್ತು ಪ್ರವರಪೊನ್ನಗಣರಾಜ್ಯೋತ್ಸವ (ಭಾರತ)ಚಾಲುಕ್ಯಪಟ್ಟದಕಲ್ಲುಏಡ್ಸ್ ರೋಗಚಿಲ್ಲರೆ ವ್ಯಾಪಾರಪೂರ್ಣಚಂದ್ರ ತೇಜಸ್ವಿನೀರಾವರಿವಿರಾಟ್ ಕೊಹ್ಲಿಅಭಿಮನ್ಯುಕೃಷ್ಣದೇವರಾಯಕ್ರೈಸ್ತ ಧರ್ಮಕೆ.ಎಲ್.ರಾಹುಲ್ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಭಾರತದಲ್ಲಿ ತುರ್ತು ಪರಿಸ್ಥಿತಿಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಗಿರೀಶ್ ಕಾರ್ನಾಡ್ಜನಪದ ಕಲೆಗಳುರಾಯಲ್ ಚಾಲೆಂಜರ್ಸ್ ಬೆಂಗಳೂರುಭಗತ್ ಸಿಂಗ್ಭಾಮಿನೀ ಷಟ್ಪದಿರಾಷ್ತ್ರೀಯ ಐಕ್ಯತೆರೇಡಿಯೋಹಾರೆಶಾಸನಗಳುಛಂದಸ್ಸುಡಿ.ವಿ.ಗುಂಡಪ್ಪ🡆 More