ಸುರಪುರ

ಶೋರಾಪುರ (ಸುರಪುರ) ಯಾದಗಿರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.

ಇದರ ಮೂಲ ಹೆಸರು ಸುರಪುರ. ಇದು ಒಂದು ಐತಿಹಾಸಿಕ ಸ್ಥಳ.ಈ ತಾಲೂಕಿಗೆ ದೊಡ್ಡ ಇತಿಹಾಸವಿದೆ. ಹಿಂದೆ ರಾಜವೆಂಕಟಪ್ಪನಾಯಕ ಸಾತಂತ್ರ್ಯಕ್ಕಾಗಿ ಹೋರಾಡಿ ತನ್ನ ಪ್ರಾಣವನ್ನೆ ತ್ಯಾಗ ಮಾಡಿದನು.

ಶೊರಾಪುರ
ಸುರಪುರ
ಪಟ್ಟಣ
ದೇಶಸುರಪುರ ಭಾರತ
ರಾಜ್ಯಕರ್ನಾಟಕ
ಜಿಲ್ಲೆಯಾದಗಿರಿ
ಲೋಕ ಸಭೆ ಚುನಾವಣಾ ಕ್ಷೇತ್ರರಾಯಚೂರು
Elevation
೪೭೨ m (೧,೫೪೯ ft)
Population
 (2011)
 • Total೫೧,೩೯೮
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
Vehicle registrationKA 33
Websitewww.surpurcity.mrc.gov.in

ಜನ ಸಂಖ್ಯೆ

೨೦೧೧ ರ ಭಾರತದ ಜನಗಣತಿಯ ಪ್ರಕಾರ ಸುರಪುರ 51398 ಜನಸಂಖ್ಯೆಯನ್ನು ಹೊಂದಿದ್ದು, 25,770 ಪುರುಷರು ಮತ್ತು 25,628 ಮಹಿಳೆಯರು ಇದ್ದಾರೆ.

ಸುರಪುರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು

  • ಕೊಡೇಕಲ್ ದೇವಸ್ಥಾನ : ಕೊಡೇಕಲ್ ತಾಲೂಕ್ ಕೇಂದ್ರವಾದ ಸುರಪುರದಿಂದ ನೈಋತ್ಯಕ್ಕೆ ೪೨ ಕಿ.ಮೀ. ದೂರದಲ್ಲಿದೆ. ಸುಮಾರು ೧೫ನೇ ಶತಮಾನದಲ್ಲಿದ್ದ ಅರೂಢ ಸಂಪ್ರದಾಯದ ಕೊಡೇಕಲ್ ಬಸವಣ್ಣ ಇಲ್ಲಿ ನೆಲೆ ನಿಂತು ಕಾಲಜ್ಞಾನ ರಚಿಸಿ, ಹಿಂದೂ – ಮುಸ್ಲಿಂ ಭಾವೈಕ್ಯತೆಗಾಗಿ ದುಡಿದು ದೇಹ ತ್ಯಜಿಸಿದ ಪುಣ್ಯ ಸ್ಥಳವಾಗಿದ್ದು, ಅದರಿಂದಾಗಿ ಇದಕ್ಕೆ ಅಮರ ಕಲ್ಯಾಣವೆಂದೂ ಕರೆಯುವ ವಾಡಿಕೆಯಿದೆ.ಕೊಡೇಕಲ್ ನಲ್ಲಿ ಬಸವಣ್ಣನ ಎರಡು ಗುಡಿಗಳಿದ್ದು, ಪೇಟೆ ಬಸವಣ್ಣನ ಗುಡಿಯು ಕೊಡೇಕಲ ಬಸವಣ್ಣ ಕುಳಿತು ಕಾಲಜ್ಞಾನ ಬರೆದಂತಹ ಸ್ಥಳವಾದರೆ, ಊರ ಬಸವಣ್ಣನ ಗುಡಿಯು ಇವನು ಐಕ್ಯ ಹೊಂದಿದ ಸ್ಥಳವಾಗಿದೆ. ಈ ಎರಡೂ ಗುಡಿಗಳು ಮುಸ್ಲಿಂ ವಾಸ್ತು ಶೈಲಿಯ ರಚನೆಗಳಾಗಿದ್ದು, ಸುಂದರವಾಗಿವೆ
  • ದೇವರ ಗೋನಾಳ : ದೇವರ ಗೋನಾಳ ತಾಲೂಕ ಕೇಂದ್ರವಾದ ಸುರಪೂರದಿಂದ ವಾಯುವ್ಯಕ್ಕೆ ೧೦ ಕಿ.ಮೀ. ದೂರದಲ್ಲಿದ್ದು ಪವಾಡ ಪುರುಷ ತಿಂಥಿಣಿ ಮೌನೇಶ್ವರರ ಹುಟ್ಟೂರಾಗಿರುವುದರಿಂದ ಮಹತ್ವ ಪಡೆದಿದೆ. ಗ್ರಾಮ ಪಂಚಾಯಿತಿ ಕಛೇರಿ ಮುಂದಿರುವ ಎರಡು ಶಿಲಾ ಶಾಸನಗಳಿಂದ ಈ ಊರಿನ ಪ್ರಾಚೀನತೆಯನ್ನು ಸುಮಾರು ೧೧ -೧೨ ನೇ ಶತಮಾನದಷ್ಟು ಹಿಂದಕ್ಕೆ ಗುರುತಿಸಬಹುದಾಗಿದೆ. ಇವುಗಳಲ್ಲಿ ಸುಮಾರು ೧೧೦೬ ರ ಪ್ರಾಚೀನ ಶಾಸನವು ಕಲ್ಯಾಣದ ಚಾಳುಕ್ಯ ಅರಸ ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ್ದು, ಮಹಾಮಂಡಳೇಶ್ವರ ದೇವರಸ, ಭೋಗರಸ, ದಂಡನಾಯಕರು ಹಾಗೂ ಚಕ್ರವರ್ತಿಯ ರಾಣಿ ಧಾರಲ ದೇವಿಯ ಬಗ್ಗೆ ಪ್ರಸ್ತಾಪಿಸುತ್ತಿದ್ದು ಮುಂದಿನ ಭಾಗ ಹಾಳಾಗಿರುವುದರಿಂದ ಹೆಚ್ಚಿನ ವಿವರ ಲಭಿಸುವುದಿಲ್ಲ.
  • ತಿಂಥಿಣಿ ಶ್ರೀ ಮೌನೇಶ್ವರ : ಕೃಷ್ಣಾ ನದಿಯ ಎಡ ದಂಡೆಯ ಮೇಲಿರುವ ಹಿಂದೂ – ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಧಾರ್ಮಿಕ ಕೇಂದ್ರವಾಗಿದೆ. ಸುಮಾರು ೧೭ ನೇ ಶತಮಾನದಲ್ಲಿ ಜೀವಿಸಿದ್ದ ಸಂತ ಮೌನಪ್ಪಯ್ಯನ ಗದ್ದುಗೆ ಇಲ್ಲಿದ್ದು ಹಿಂದೂಗಳು ಇವರನ್ನು ಮೌನೇಶ್ವರ ನೆಂದೂ ಮತ್ತು ಮುಸ್ಮಿಮರು ಮೌನುದ್ದೀನ್ ರೆಂದೂ ಭಕ್ತಿಯಿಂದ ಆರಾಧಿಸುತ್ತಾರೆ.
  • ಟೈಲರ್ಸ್ ಬಂಗ್ಲಾ: ಹೈದ್ರಾಬಾದ್ ನಿಜಾಮರ ಆಳ್ವಿಕೆಯಲ್ಲಿ ಸುರಪೂರ ಸಂಸ್ಥಾನದಲ್ಲಿ ಕಮಿಷನರ್ ಆಗಿ ೧೮೪೦ ರಿಂದ ರಾಜಾ ವೆಂಕಟಪ್ಪನಾಯಕನನ್ನು ಸಿಂಹಾಸನದಲ್ಲಿ ಕೂಡಿಸಿ ಅಧಿಕಾರ ನಡೆಸಿದ ಮೇಡೋಸ್ ಟೈಲರನು ಇಲ್ಲಿ ನಿರ್ಮಿಸಿರುವ ಬಂಗಲೆಯು ಭವ್ಯವಾಗಿದ್ದು ಅತ್ಯುತ್ತಮ ತಾಂತ್ರಿಕತೆಗೆ ಹೆಸರಾಗಿದ್ದು ವೀಕ್ಷಕರಲ್ಲಿ ವಿಸ್ಮಯವನ್ನುಂಟು ಮಾಡುತ್ತಿದ್ದು, ಇಂದು ಇದು ವಿಶ್ರಾಂತಿಯ ಗೃಹವಾಗಿ ಬಳಸಲ್ಪಡುತ್ತಿದೆ. ಗುಲಬರ್ಗಾದ ಹಲವು ಐತಿಹಾಸಿಕ ನೆಲೆಗಳನ್ನು ಬೆಳಕಿಗೆ ತಂದ ಕೀರ್ತಿ ಮೆಡೋಸ್ ಟೈಲರನಿಗೆ ಸಲ್ಲುತ್ತದೆ.


ಉಲ್ಲೇಖಗಳು

ಸುರಪುರ 
ಯಾದಗಿರಿ ತಾಲ್ಲೂಕುಗಳು
ಯಾದಗಿರಿ | ಶಹಾಪುರ | ಶೋರಾಪುರ | ಹುಣಸಗಿ | ವಡಗೇರಾ | ಗುರುಮಟ್ಕಲ

Tags:

ಯಾದಗಿರಿ

🔥 Trending searches on Wiki ಕನ್ನಡ:

ಸಾಲುಮರದ ತಿಮ್ಮಕ್ಕಕರ್ನಾಟಕದ ವಾಸ್ತುಶಿಲ್ಪಭಾರತದ ಸಂವಿಧಾನದ ೩೭೦ನೇ ವಿಧಿಕಾವೇರಿ ನದಿಸಮಾಜಶಾಸ್ತ್ರಕನ್ನಡ ಚಿತ್ರರಂಗಭಾರತದ ರಾಷ್ಟ್ರಪತಿಯಲಹಂಕದ ಪಾಳೆಯಗಾರರುಮುಹಮ್ಮದ್ರಾಮಕೃಷ್ಣ ಪರಮಹಂಸಕಾವೇರಿ ನದಿ ನೀರಿನ ವಿವಾದಅಮ್ಮವಾಯು ಮಾಲಿನ್ಯಮಳೆನೀರು ಕೊಯ್ಲುಭಾರತದಲ್ಲಿ ಮೀಸಲಾತಿಶ್ರೀ ಕೃಷ್ಣ ಪಾರಿಜಾತಲಕ್ಷ್ಮಿಹೈದರಾಲಿಮುರುಡೇಶ್ವರಚನ್ನಬಸವೇಶ್ವರದ.ರಾ.ಬೇಂದ್ರೆಸಂಗೊಳ್ಳಿ ರಾಯಣ್ಣಉದಯವಾಣಿಜಯಪ್ರಕಾಶ ನಾರಾಯಣಅರಿಸ್ಟಾಟಲ್‌ಜಶ್ತ್ವ ಸಂಧಿತೀ. ನಂ. ಶ್ರೀಕಂಠಯ್ಯಭಾರತದಲ್ಲಿನ ಚುನಾವಣೆಗಳುಇಂದಿರಾ ಗಾಂಧಿಕೃಷ್ಣದೇವರಾಯಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಮಹಾಲಕ್ಷ್ಮಿ (ನಟಿ)ರನ್ನನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಸವರ್ಣದೀರ್ಘ ಸಂಧಿದುಂಡು ಮೇಜಿನ ಸಭೆ(ಭಾರತ)ಧರ್ಮಸ್ಥಳವಿಕ್ರಮಾರ್ಜುನ ವಿಜಯಸರ್ವೆಪಲ್ಲಿ ರಾಧಾಕೃಷ್ಣನ್ತ್ಯಾಜ್ಯ ನಿರ್ವಹಣೆಪ್ರವಾಹರಾವಣಬೆಂಗಳೂರು ಗ್ರಾಮಾಂತರ ಜಿಲ್ಲೆಜನಪದ ಕಲೆಗಳುಆದಿ ಶಂಕರರು ಮತ್ತು ಅದ್ವೈತಚಿತ್ರದುರ್ಗಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಜಾಲತಾಣಆಟಜಯಂತ ಕಾಯ್ಕಿಣಿಪ್ರವಾಸೋದ್ಯಮಅಂಬಿಗರ ಚೌಡಯ್ಯಧನಂಜಯ್ (ನಟ)ಸಿಂಧೂತಟದ ನಾಗರೀಕತೆಕರ್ನಾಟಕದಲ್ಲಿ ಪಂಚಾಯತ್ ರಾಜ್ಭಾರತದ ರಾಷ್ಟ್ರಪತಿಗಳ ಪಟ್ಟಿಸೆಲರಿಸಂಭವಾಮಿ ಯುಗೇ ಯುಗೇಅಳಲೆ ಕಾಯಿಪ್ಯಾರಾಸಿಟಮಾಲ್ಭಾರತಿ (ನಟಿ)ಕುಮಾರವ್ಯಾಸಕರ್ನಾಟಕದ ಮುಖ್ಯಮಂತ್ರಿಗಳುಗ್ರಾಮ ಪಂಚಾಯತಿಕರ್ನಾಟಕದ ಜಾನಪದ ಕಲೆಗಳುಕನ್ನಡ ಚಂಪು ಸಾಹಿತ್ಯಕೈಗಾರಿಕಾ ನೀತಿಮಹಾತ್ಮ ಗಾಂಧಿಭಾರತೀಯ ಸಂಸ್ಕೃತಿವಿವಾಹಭಾರತದ ಆರ್ಥಿಕ ವ್ಯವಸ್ಥೆಪಂಚಾಂಗಕುರುಗೋಲ ಗುಮ್ಮಟಶಿಕ್ಷಣ ಮಾಧ್ಯಮಪಾಲಕ್🡆 More