ಚಲನಚಿತ್ರ ಶ್ರೀ ಕೃಷ್ಣದೇವರಾಯ: ಕನ್ನಡ ಚಲನಚಿತ್ರ

ಶ್ರೀ ಕೃಷ್ಣದೇವರಾಯ 1970ರ ಒಂದು ಕನ್ನಡ ಐತಿಹಾಸಿಕ ನಾಟಕೀಯ ಚಲನಚಿತ್ರ.

ಇದನ್ನು ಬಿ.ಆರ್.ಪಂತುಲು ನಿರ್ಮಾಣ ಮಾಡಿ ನಿರ್ದೇಶಿಸಿದರು. ವಿಜಯನಗರ ಸಾಮ್ರಾಜ್ಯದಲ್ಲಿನ ೧೬ನೇ ಶತಮಾನದ ಸಾಮ್ರಾಟನಾಗಿದ್ದ ಕೃಷ್ಣದೇವರಾಯನಾಗಿ ರಾಜ್‌ಕುಮಾರ್ ನಟಿಸಿದ್ದಾರೆ. ಆರ್.ನಾಗೇಂದ್ರರಾವ್, ಬಿ. ಆರ್. ಪಂತುಲು, ನರಸಿಂಹರಾಜು ಮತ್ತು ಭಾರತಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ರಾಜ್‍ಕುಮಾರ್‌ರ ಮೊದಲ ಸರ್ವವರ್ಣಕ ಚಲನಚಿತ್ರ.

ಶ್ರೀ ಕೃಷ್ಣದೇವರಾಯ (ಚಲನಚಿತ್ರ)
ಚಲನಚಿತ್ರ ಶ್ರೀ ಕೃಷ್ಣದೇವರಾಯ: ಪಾತ್ರವರ್ಗ, ಧ್ವನಿವಾಹಿನಿ, ಪ್ರಶಸ್ತಿಗಳು
ಶ್ರೀ ಕೃಷ್ಣದೇವರಾಯ
ನಿರ್ದೇಶನಬಿ.ಆರ್.ಪಂತುಲು
ನಿರ್ಮಾಪಕಬಿ.ಆರ್.ಪಂತುಲು
ಪಾತ್ರವರ್ಗರಾಜಕುಮಾರ್, ಭಾರತಿ, ಜಯಂತಿ, ಬಿ.ಆರ್.ಪಂತುಲು, ಎಂ.ವಿ.ರಾಜಮ್ಮ, ನರಸಿಂಹರಾಜು, ಮೈನಾವತಿ
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಎ.ಷಣ್ಮುಗಂ
ಬಿಡುಗಡೆಯಾಗಿದ್ದು೧೯೭೦
ಚಿತ್ರ ನಿರ್ಮಾಣ ಸಂಸ್ಥೆಪದ್ಮಿನಿ ಪಿಕ್ಚರ್ಸ್
ಹಿನ್ನೆಲೆ ಗಾಯನಪಿ.ಬಿ.ಶ್ರೀನಿವಾಸ್, ಎಸ್. ಜಾನಕಿ, ಸೂಲಮಂಗಲಂ ರಾಜಲಕ್ಷ್ಮಿ, ಎಸ್.ಗೋವಿಂದರಾಜನ್

1969–70 ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಚಲನಚಿತ್ರವು ಮೂರು ಪ್ರಶಸ್ತಿಗಳನ್ನು ಗೆದ್ದಿತು - ಅತ್ಯುತ್ತಮ ನಟ (ಬಿ. ಆರ್. ಪಂತುಲು), ಅತ್ಯುತ್ತಮ ನಟಿ (ಎನ್. ಭಾರತಿ) ಮತ್ತು ಅತ್ಯುತ್ತಮ ಸಂಗೀತ ನಿರ್ದೇಶಕ (ಟಿ.ಜಿ.ಲಿಂಗಪ್ಪ). ಚಿತ್ರಮಂದಿರಗಳಲ್ಲಿ ಈ ಚಿತ್ರವು 28 ವಾರ ಓಡಿತು.

ಆದರೆ, ಬಿ. ಆರ್. ಪಂತುಲು ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು. ೨೩ ಸೆಪ್ಟೆಂಬರ್ ೧೯೭೦ರ ಒಂದು ಪತ್ರದಲ್ಲಿ, ಕೃಷ್ಣದೇವರಾಯನ ಪಾತ್ರವಹಿಸಿದ ರಾಜ್‍ಕುಮಾರ್ ಈ ಪ್ರಶಸ್ತಿಗೆ ಹೆಚ್ಚು ಅರ್ಹರಾಗಿದ್ದಾರೆ ಎಂದು ಅವರು ಬರೆದಿದ್ದರು. ಈ ಘಟನೆಯ ನಂತರ, ಕರ್ನಾಟಕ ಸರ್ಕಾರವು ಪ್ರಶಸ್ತಿಗಳ ಎರಡು ಪ್ರತ್ಯೇಕ ವಿಭಾಗಗಳನ್ನು ಆರಂಭಿಸಿತು - ಒಂದು ಮುಖ್ಯ ಪಾತ್ರಗಳಿಗೆ ಮತ್ತು ಇನ್ನೊಂದು ಪೋಷಕ ಪಾತ್ರಗಳಿಗೆ. ಈ ಚಲನಚಿತ್ರವನ್ನು ೧೯೭೧ರಲ್ಲಿ ತೆಲುಗಿನಲ್ಲಿ ಶ್ರೀ ಕೃಷ್ಣದೇವರಾಯಲು ಎಂದು ಡಬ್ ಮಾಡಲಾಯಿತು.

ಪಾತ್ರವರ್ಗ

  • ಕೃಷ್ಣದೇವರಾಯನ ಪಾತ್ರದಲ್ಲಿ ರಾಜ್‍ಕುಮಾರ್
  • ಗಜಪತಿ ಪ್ರತಾಪರುದ್ರನ ಪಾತ್ರದಲ್ಲಿ ಆರ್. ನಾಗೇಂದ್ರ ರಾವ್
  • ಮಹಾಮಂತ್ರಿ ತಿಮ್ಮರುಸು ಪಾತ್ರದಲ್ಲಿ ಬಿ. ಆರ್. ಪಂತುಲು
  • ಚಿನ್ನಾ ದೇವಿ ಪಾತ್ರದಲ್ಲಿ ಎನ್. ಭಾರತಿ
  • ಕಮಲಾ ಪಾತ್ರದಲ್ಲಿ ಎಂ. ವಿ. ರಾಜಮ್ಮ
  • ಮೈನಾವತಿ
  • ಚಿಂದೋಡಿ ಲೀಲಾ
  • ತಿರುಮಲಾಂಬಾ ದೇವಿ ಪಾತ್ರದಲ್ಲಿ ಜಯಂತಿ
  • ವಿಜಯಶ್ರೀ
  • ಪಾಂಡ್ಯ ಮುಖಂಡನ ಪಾತ್ರದಲ್ಲಿ ಆರ್. ಎನ್. ಸುದರ್ಶನ್
  • ತೇನಾಲಿ ರಾಮಕೃಷ್ಣನ ಪಾತ್ರದಲ್ಲಿ ನರಸಿಂಹರಾಜು
  • ಅಚ್ಯುತ ದೇವರಾಯನ ಪಾತ್ರದಲ್ಲಿ ದಿನೇಶ್
  • ನಾಗಪ್ಪ
  • ಬಿ. ಜಯಾ
  • ಎಚ್. ಆರ್. ಶಾಸ್ತ್ರಿ

ಧ್ವನಿವಾಹಿನಿ

ಟಿ. ಜಿ. ಲಿಂಗಪ್ಪ ಈ ಚಿತ್ರದ ಸಂಗೀತವನ್ನು ಸಂಯೋಜಿಸಿದರು ಮತ್ತು ಧ್ವನಿವಾಹಿನಿಗೆ ಸಾಹಿತ್ಯವನ್ನು ಕೆ. ಪ್ರಭಾಕರ ಶಾಸ್ತ್ರಿ ಮತ್ತು ವಿಜಯ ನಾರಸಿಂಹ ಬರೆದರು. ಈ ಧ್ವನಿಸಂಪುಟದಲ್ಲಿ ಒಂಬತ್ತು ಹಾಡುಗಳಿವೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಗಾಯಕ(ರು)ಸಮಯ
1."ಶರಣು ವಿರೂಪಾಕ್ಷ ಶಶಿಶೇಖರ"ಕೆ. ಪ್ರಭಾಕರ ಶಾಸ್ತ್ರಿಎಸ್. ಜಾನಕಿ4:12
2."ಖಾನಾ ಪೀನಾ"ಪಂಡಿತ್ ದೀಪಕ್ ಚಕ್ರವರ್ತಿಎಸ್. ಜಾನಕಿ3:25
3."ಬಹುಜನ್ಮದ ಪೂಜಾಫಲ"ಕೆ. ಪ್ರಭಾಕರ ಶಾಸ್ತ್ರಿಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ2:59
4."ಶ್ರೀ ಚಾಮುಂಡೇಶ್ವರಿ"ಕೆ. ಪ್ರಭಾಕರ ಶಾಸ್ತ್ರಿಪಿ. ಲೀಲಾ, ಸಿರ್ಕಾಳಿ ಗೋವಿಂದರಾಜನ್3:18
5."ಚೆನ್ನರಸಿ ಚೆಲುವರಸಿ"ಕೆ. ಪ್ರಭಾಕರ ಶಾಸ್ತ್ರಿಎಸ್. ಜಾನಕಿ, ಪಿ. ಲೀಲಾ 
6."ಬಾ ವೀರ ಕನ್ನಡಿಗ"ವಿಜಯ ನಾರಸಿಂಹಪೀಠಾಪುರಂ ನಾಗೇಶ್ವರ ರಾವ್1:55
7."ಕಲ್ಯಾಣಾದ್ಭುತ + ತಿರುಪತಿಗಿರಿವಾಸ"ಕೆ. ಪ್ರಭಾಕರ ಶಾಸ್ತ್ರಿಪಿ. ಸುಶೀಲಾ, ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ3:14
8."ಕೃಷ್ಣನ ಹೆಸರೇ ಲೋಕಪ್ರಿಯ"ವಿಜಯ ನಾರಸಿಂಹಸೂಲಮಂಗಲಂ ರಾಜಲಕ್ಷ್ಮಿ, ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ4:17
9."ಮಕ್ಕಲ್ ನಕ್ಕರೆ" ಸಿರ್ಕಾಳಿ ಗೋವಿಂದರಾಜನ್2:42
ಒಟ್ಟು ಸಮಯ:29:20

ಪ್ರಶಸ್ತಿಗಳು

    ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ
  • ಈ ಚಿತ್ರವು ಫಿಲ್ಮ್‌ಫೇರ್ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನು (೧೯೭೦) ಗೆದ್ದಿತು.
    1969–70ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
  • ಅತ್ಯುತ್ತಮ ನಟ - ಬಿ. ಆರ್. ಪಂತುಲು
  • ಅತ್ಯುತ್ತಮ ನಟಿ - ಎನ್. ಭಾರತಿ
  • ಅತ್ಯುತ್ತಮ ಸಂಗೀತ ನಿರ್ದೇಶಕ - ಟಿ. ಜಿ. ಲಿಂಗಪ್ಪ
    ಈ ಚಲನಚಿತ್ರವು ಐಎಫ್ಎಫ್‍ಐ ೧೯೯೨ ಬಿ ಆರ್ ಪಂತುಲು ಗೌರವಾರ್ಪಣ ವಿಭಾಗದಲ್ಲಿ ಪ್ರದರ್ಶನ ಕಂಡಿತು.

ಉಲ್ಲೇಖಗಳು

ಹೊರಗಿನ ಕೊಂಡಿಗಳು

Tags:

ಚಲನಚಿತ್ರ ಶ್ರೀ ಕೃಷ್ಣದೇವರಾಯ ಪಾತ್ರವರ್ಗಚಲನಚಿತ್ರ ಶ್ರೀ ಕೃಷ್ಣದೇವರಾಯ ಧ್ವನಿವಾಹಿನಿಚಲನಚಿತ್ರ ಶ್ರೀ ಕೃಷ್ಣದೇವರಾಯ ಪ್ರಶಸ್ತಿಗಳುಚಲನಚಿತ್ರ ಶ್ರೀ ಕೃಷ್ಣದೇವರಾಯ ಉಲ್ಲೇಖಗಳುಚಲನಚಿತ್ರ ಶ್ರೀ ಕೃಷ್ಣದೇವರಾಯ ಹೊರಗಿನ ಕೊಂಡಿಗಳುಚಲನಚಿತ್ರ ಶ್ರೀ ಕೃಷ್ಣದೇವರಾಯಆರ್.ನಾಗೇಂದ್ರರಾವ್ಕೃಷ್ಣದೇವರಾಯನರಸಿಂಹರಾಜುಬಿ.ಆರ್.ಪಂತುಲುಭಾರತಿ (ನಟಿ)ರಾಜ್‌ಕುಮಾರ್ವಿಜಯನಗರ ಸಾಮ್ರಾಜ್ಯ

🔥 Trending searches on Wiki ಕನ್ನಡ:

ಕ್ಯಾರಿಕೇಚರುಗಳು, ಕಾರ್ಟೂನುಗಳುಕ್ಷತ್ರಿಯಕುರುಪ್ರಾಥಮಿಕ ಶಿಕ್ಷಣಮಡಿಕೇರಿದಲಿತಜ್ವರಭಯೋತ್ಪಾದನೆಗೂಗಲ್ಇಮ್ಮಡಿ ಪುಲಕೇಶಿಕನ್ನಡ ರಾಜ್ಯೋತ್ಸವಭಾರತದ ರಾಷ್ಟ್ರಗೀತೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಭೂಕಂಪಮಾನವನಲ್ಲಿ ನಿರ್ನಾಳ ಗ್ರಂಥಿಗಳುಸ್ವಾಮಿ ವಿವೇಕಾನಂದಜಾಗತೀಕರಣಮದಕರಿ ನಾಯಕಸುದೀಪ್ಬಿಳಿ ರಕ್ತ ಕಣಗಳುಭರತನಾಟ್ಯಕರ್ಬೂಜಕೊಡಗು ಜಿಲ್ಲೆಕೇಶಿರಾಜವಚನಕಾರರ ಅಂಕಿತ ನಾಮಗಳುಕನ್ನಡ ಚಂಪು ಸಾಹಿತ್ಯಶಬ್ದವೇಧಿ (ಚಲನಚಿತ್ರ)ಭಾರತದ ಸ್ವಾತಂತ್ರ್ಯ ದಿನಾಚರಣೆಉಪನಯನಬ್ಯಾಂಕ್ ಖಾತೆಗಳುಕನ್ನಡ ಸಂಧಿಕರ್ನಾಟಕದ ಮುಖ್ಯಮಂತ್ರಿಗಳುಭಾರತದ ಸಂವಿಧಾನಸೆಲರಿದಂತಿದುರ್ಗಫುಟ್ ಬಾಲ್ಕರ್ನಾಟಕಸಂಕಲ್ಪಭೂಕುಸಿತಭಾರತದ ಸ್ವಾತಂತ್ರ್ಯ ಚಳುವಳಿಚಾರ್ಲಿ ಚಾಪ್ಲಿನ್ಕಿತ್ತಳೆಕೊಳಲುಕಮ್ಯೂನಿಸಮ್ಗೋವಿನ ಹಾಡುಲಿಂಗಸೂಗೂರುಬೀಚಿಚಂದ್ರಗುಪ್ತ ಮೌರ್ಯಅಷ್ಟಾಂಗ ಮಾರ್ಗಚಾಮುಂಡೇಶ್ವರಿ ದೇವಸ್ಥಾನ, ಮೈಸೂರುನಾಥೂರಾಮ್ ಗೋಡ್ಸೆಪೆಟ್ರೋಮ್ಯಾಕ್ಸ್ (ಚಲನಚಿತ್ರ)ಗೌತಮ ಬುದ್ಧಜಾಗತಿಕ ತಾಪಮಾನಕನ್ನಡದಲ್ಲಿ ಸಣ್ಣ ಕಥೆಗಳುಆಸ್ಪತ್ರೆಮಳೆಕಲ್ಪನಾಕರ್ನಾಟಕದ ಮಹಾನಗರಪಾಲಿಕೆಗಳುಕವಿರಾಜಮಾರ್ಗಭಾರತದ ಪ್ರಧಾನ ಮಂತ್ರಿಗಳ ಪಟ್ಟಿಸುಗ್ಗಿ ಕುಣಿತಪ್ರಗತಿಶೀಲ ಸಾಹಿತ್ಯಕರ್ಮಪರಮಾತ್ಮ(ಚಲನಚಿತ್ರ)ರತ್ನಾಕರ ವರ್ಣಿಮೂಲಭೂತ ಕರ್ತವ್ಯಗಳುಭೀಮಸೇನಭತ್ತದಿವ್ಯಾಂಕಾ ತ್ರಿಪಾಠಿಕೊಪ್ಪಳಕನ್ನಡಪ್ರಭಬಂಡಾಯ ಸಾಹಿತ್ಯಬೌದ್ಧ ಧರ್ಮಪ್ರಾರ್ಥನಾ ಸಮಾಜಕುಟುಂಬಮಲ್ಲಿಗೆ🡆 More