ಶಕ

ಶಕ ಪದವನ್ನು ಮಧ್ಯ ಏಷ್ಯಾದಿಂದ ವಲಸೆಬಂದು ಮಧ್ಯ, ಉತ್ತರ ಮತ್ತು ಪಶ್ಚಿಮ ದಕ್ಷಿಣ ಏಷ್ಯಾದ ಭಾಗಗಳಲ್ಲಿ (ಸೋಗ್ದಾ, ಬ್ಯಾಕ್ಟ್ರಿಯಾ, ಅರಕೋಸಿಯಾ, ಗಾಂಧಾರ, ಸಿಂಧ್, ಕಾಶ್ಮೀರ, ಪಂಜಾಬ್, ಹರ್ಯಾಣಾ, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ) ನೆಲೆಸಿದ ಬುಡಕಟ್ಟುಗಳನ್ನು ಸೂಚಿಸಲು ಬಳಸಲಾಗುತ್ತದೆ.

ಇವರು ಕ್ರಿ.ಪೂ. ೨ನೇ ಶತಮಾನದ ಮಧ್ಯಭಾಗದಿಂದ ಕ್ರಿ.ಶ. ೪ನೇ ಶತಮಾನದಲ್ಲಿ ನೆಲೆಸಿದ್ದರು.

ಮ್ಯೂಸ್ (ಕ್ರಿ.ಪೂ. ೧ನೇ ಶತಮಾನ) ದಕ್ಷಿಣ ಏಷ್ಯಾದಲ್ಲಿ ಮೊದಲ ಶಕ ರಾಜನಾಗಿದ್ದನು. ಇವನು ಶಕರ ಅಧಿಕಾರವನ್ನು ಗಂಧಾರದಲ್ಲಿ (ಆಧುನಿಕ ಪಾಕಿಸ್ತಾನ ಮತ್ತು ಅಫ಼್ಘಾನಿಸ್ತಾನ ಪ್ರದೇಶ) ಸ್ಥಾಪಿಸಿದನು ಮತ್ತು ಕ್ರಮೇಣ ತನ್ನ ಪ್ರಭುತ್ವವನ್ನು ವಾಯವ್ಯ ಭಾರತದಲ್ಲಿ ವಿಸ್ತರಿಸಿದನು. ಕ್ರಿ.ಶ. ೩೯೫ರಲ್ಲಿ ಭಾರತದ ಸಾಮ್ರಾಟ ಗುಪ್ತ ಸಾಮ್ರಾಜ್ಯಎರಡನೇ ಚಂದ್ರಗುಪ್ತನ ಕೈಯಲ್ಲಿ ಕೊನೆಯ ಪಶ್ಚಿಮ ಕ್ಷತ್ರಪ ಮೂರನೇ ರುದ್ರಸಿಂಹನ ಪರಾಜಯದಿಂದ ವಾಯವ್ಯ ಭಾರತದಲ್ಲಿ ಶಕರ ಆಳ್ವಿಕೆ ಕೊನೆಯಾಯಿತು. ಕ್ರಿ.ಶ. ೨ನೇ ಶತಮಾನದಲ್ಲಿ ದಕ್ಷಿಣ ಭಾರತದ ಸಾಮ್ರಾಟ ಶಾತವಾಹನ ರಾಜವಂಶದ ಗೌತಮಿಪುತ್ರ ಶಾತಕರ್ಣಿಯ ಕೈಯಲ್ಲಿ ಸೋತ ನಂತರ ಶಕ ರಾಜರ ಅಧಿಕಾರ ಕ್ಷೀಣಿಸಲು ಆರಂಭವಾಯಿತು. ನಂತರ ಶಕ ರಾಜ್ಯವನ್ನು ಎರಡನೇ ಚಂದ್ರಗುಪ್ತನು ೪ನೇ ಶತಮಾನದಲ್ಲಿ ಸಂಪೂರ್ಣವಾಗಿ ನಾಶಮಾಡಿದನು.

ನೈಋತ್ಯ ಏಷ್ಯಾದಲ್ಲಿ ಮೊದಲ ಶಕ ರಾಜ್ಯವು ಪಾಕಿಸ್ತಾನದಲ್ಲಿ ಸಿಂಧ್ ಇಂದ ಸೌರಾಷ್ಟ್ರದ ಪ್ರದೇಶಗಳಲ್ಲಿ ಕ್ರಿ.ಪೂ. ೧೧೦ರಿಂದ ೮೦ ರ ವರೆಗೆ ಸ್ಥಿತವಾಗಿತ್ತು. ಅವರು ಕ್ರಮೇಣ ಮತ್ತಷ್ಟು ಉತ್ತರಕ್ಕೆ ಇಂಡೊ-ಗ್ರೀಕ್ ಪ್ರಾಂತ್ಯದಲ್ಲಿ ವಿಸ್ತರಿಸಿದರು, ಕ್ರಿ.ಪೂ. ೮೦ರಲ್ಲಿ ಮ್ಯೂಸ್‍ನ ವಿಜಯಗಳ ವರೆಗೆ. ಶಕರು ಅಂತಿಮವಾಗಿ ವಾಯವ್ಯದಲ್ಲಿ ತಕ್ಷಶಿಲೆಯ ಹತ್ತಿರ ನೆಲೆಹೊಂದಿದ ರಾಜ್ಯವನ್ನು ಸ್ಥಾಪಿಸಿದರು, ಮತ್ತು ಅವರ ಎರಡು ದೊಡ್ಡ ಕ್ಷತ್ರಪಗಳು, ಪೂರ್ವದಲ್ಲಿ ಮಥುರಾದಲ್ಲಿ, ಮತ್ತು ಇನ್ನೊಂದು ನೈಋತ್ಯದ ಸೌರಾಷ್ಟ್ರದಲ್ಲಿ ಇದ್ದವು.

ಆಗ್ನೇಯದಲ್ಲಿ, ಶಕರು ಉಜ್ಜೈನ್ ಪ್ರದೇಶವನ್ನು ಆಕ್ರಮಣ ಮಾಡಿದರು, ಆದರೆ ತರುವಾಯ ಕ್ರಿ.ಪೂ. ೫೭ರಲ್ಲಿ ಮಾಲ್ವಾದ ರಾಜ ವಿಕ್ರಮಾದಿತ್ಯನು ಅವರನ್ನು ಹಿಮ್ಮೆಟ್ಟಿಸಿದನು. ಈ ಘಟನೆಯ ಸ್ಮರಣಾರ್ಥ ವಿಕ್ರಮಾದಿತ್ಯನು ವಿಕ್ರಮ ಶಕೆಯನ್ನು ಊರ್ಜಿತಗೊಳಿಸಿದನು. ವಿಕ್ರಮ ಶಕೆಯು ಕ್ರಿ.ಪೂ. ೫೭ರಲ್ಲಿ ಆರಂಭವಾಗುತ್ತಿದ್ದ ನಿರ್ದಿಷ್ಟ ಭಾರತೀಯ ಪಂಚಾಂಗವಾಗಿತ್ತು. ಒಂದು ಶತಮಾನಕ್ಕಿಂತ ಹೆಚ್ಚು ಕಾಲದ ನಂತರ, ಶಕರು ಉಜ್ಜೈನ್ ಅನ್ನು ಮತ್ತೊಮ್ಮೆ ಆಕ್ರಮಣ ಮಾಡಿ ಶಕ ಶಕೆಯನ್ನು. ಇದು ಬಹುಕಾಲವಿದ್ದ ಪಶ್ಚಿಮ ಕ್ಷತ್ರಪ ರಾಜ್ಯದ ಆರಂಭವನ್ನು ಗುರುತಿಸಿತು......

ಉಲ್ಲೇಖಗಳು

Tags:

ಕಾಶ್ಮೀರಗಾಂಧಾರಗುಜರಾತ್ಪಂಜಾಬ್ಮಹಾರಾಷ್ಟ್ರರಾಜಸ್ಥಾನಹರ್ಯಾಣಾ

🔥 Trending searches on Wiki ಕನ್ನಡ:

ಚಂದ್ರಯಾನ-೩ರಾವಣಪ್ಲಾಸಿ ಕದನಅಂತರಜಾಲಎರಡನೇ ಮಹಾಯುದ್ಧಜೈನ ಧರ್ಮಹನುಮಂತಉಪ್ಪಿನ ಕಾಯಿಭಾರತೀಯ ಅಂಚೆ ಸೇವೆಹಿಂದೂ ಧರ್ಮಪೆಟ್ರೋಲಿಯಮ್ಬಂಡೀಪುರ ರಾಷ್ಟ್ರೀಯ ಉದ್ಯಾನವನಕಪ್ಪೆಸರೀಸೃಪಗುರುರಾಜ ಕರಜಗಿಬೇಸಿಗೆದ್ರೌಪದಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕರ್ನಾಟಕದಲ್ಲಿ ಸಹಕಾರ ಚಳವಳಿನಿರುದ್ಯೋಗ21ನೇ ಶತಮಾನದ ಕೌಶಲ್ಯಗಳುಇಮ್ಮಡಿ ಪುಲಿಕೇಶಿಬಾಲ್ಯ ವಿವಾಹಭಾರತದ ಆರ್ಥಿಕ ವ್ಯವಸ್ಥೆಹರಿದಾಸಜೋಡು ನುಡಿಗಟ್ಟುಕರ್ನಾಟಕದಲ್ಲಿ ಪಂಚಾಯತ್ ರಾಜ್ವಾಯುಗುಣ ಬದಲಾವಣೆಭಾರತೀಯ ಭೂಸೇನೆಸಂಗೊಳ್ಳಿ ರಾಯಣ್ಣಪಾರ್ವತಿಧೂಮಕೇತುಯಕ್ಷಗಾನತಂಬಾಕು ಸೇವನೆ(ಧೂಮಪಾನ)ಅಕ್ಕಮಹಾದೇವಿಪ್ರತಿಧ್ವನಿದಲಿತಗಣರಾಜ್ಯೋತ್ಸವ (ಭಾರತ)ಭಾರತೀಯ ನಾಗರಿಕ ಸೇವೆಗಳುಕಾಗೋಡು ಸತ್ಯಾಗ್ರಹಭತ್ತರೇಯಾನ್ಆಯ್ದಕ್ಕಿ ಲಕ್ಕಮ್ಮವಿಷುವತ್ ಸಂಕ್ರಾಂತಿಭಾರತದ ರಾಷ್ಟ್ರಗೀತೆನಿರ್ವಹಣೆ ಪರಿಚಯರೋಮನ್ ಸಾಮ್ರಾಜ್ಯಕಬೀರ್ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸ್ತ್ರೀನಾಗರಹೊಳೆ ರಾಷ್ಟ್ರೀಯ ಉದ್ಯಾನವನಅಲಂಕಾರಯುಗಾದಿಕಾರ್ಲ್ ಮಾರ್ಕ್ಸ್ಯಮಚುನಾವಣೆಕದಂಬ ರಾಜವಂಶದಿಕ್ಕುಜವಾಹರ‌ಲಾಲ್ ನೆಹರುನದಿಮೂಕಜ್ಜಿಯ ಕನಸುಗಳು (ಕಾದಂಬರಿ)ಭಾರತದಲ್ಲಿನ ಶಿಕ್ಷಣತಂತ್ರಜ್ಞಾನಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಏಲಕ್ಕಿಡಿ.ವಿ.ಗುಂಡಪ್ಪಭಾರತದ ಗವರ್ನರ್ ಜನರಲ್ತತ್ಸಮ-ತದ್ಭವಎಮಿನೆಮ್ಅಸಹಕಾರ ಚಳುವಳಿಪೃಥ್ವಿರಾಜ್ ಚೌಹಾಣ್ಜಲ ಮಾಲಿನ್ಯಗೊರೂರು ರಾಮಸ್ವಾಮಿ ಅಯ್ಯಂಗಾರ್ಜೀವಸತ್ವಗಳುಬಾದಾಮಿ ಶಾಸನಭಾರತೀಯ ನೌಕಾಪಡೆವಿಮರ್ಶೆಲೆಕ್ಕ ಪರಿಶೋಧನೆ🡆 More