ರೋ ಜಿಂಕೆ

ಸರ್ವಸ್ ಕ್ಯಾಪ್ರಿಯೋಲಸ್ Linnaeus, 1758

ರೋ ಜಿಂಕೆ
ರೋ ಜಿಂಕೆ
ಗಂಡು ಮತ್ತು ಹೆಣ್ಣು ರೋ ಜಿಂಕೆ
Conservation status
ರೋ ಜಿಂಕೆ
Least Concern  (IUCN 3.1)
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಮ್ಯಾಮೇಲಿಯಾ
ಗಣ: ಆರ್ಟಿಯೊಡ್ಯಾಕ್ಟೈಲ
ಕುಟುಂಬ: ಸರ್ವಿಡೀ
ಉಪಕುಟುಂಬ: ಕ್ಯಾಪ್ರಿಯೋಲಿನೇ
ಕುಲ: ಕ್ಯಾಪ್ರಿಯೋಲಸ್
ಪ್ರಜಾತಿ:
ಕ. ಕ್ಯಾಪ್ರಿಯೋಲಸ್
Binomial name
ಕ್ಯಾಪ್ರಿಯೋಲಸ್ ಕ್ಯಾಪ್ರಿಯೋಲಸ್
(Linnaeus, 1758)
ರೋ ಜಿಂಕೆ
ರೋ ಜಿಂಕೆಯ ವ್ಯಾಪ್ತಿ
Synonyms

ರೋ ಜಿಂಕೆಯು ಆರ್ಟಿಯೊಡ್ಯಾಕ್ಟಿಲ ಗಣದ ಸರ್ವಿಡೀ ಕುಟುಂಬಕ್ಕೆ ಸೇರಿದ ಜಿಂಕೆ. ಯೂರೇಷ್ಯ ವಲಯದಲ್ಲಿ ತೀರ ಉತ್ತರ ಭಾಗ ಮತ್ತು ಭಾರತಗಳನ್ನುಳಿದು ಉಳಿದೆಡೆಗಳಲ್ಲಿ ವ್ಯಾಪಕವಾಗಿ ಕಾಣದೊರೆಯುತ್ತದೆ. ಕ್ಯಾಪ್ರಿಯೋಲಸ್ ಇದರ ಪ್ರಾಣಿವೈಜ್ಞಾನಿಕ ಹೆಸರು. ವಿರಳವಾಗಿ ಮರ, ಪೊದೆಗಳಿರುವಂಥ ಬಯಲು ಪ್ರದೇಶದಲ್ಲಿ ವಾಸಿಸುತ್ತದೆ.

ದೇಹರಚನೆ

ಇದು ಸುಮಾರು 1 ಮೀ. ಎತ್ತರವಿರುವ ಪ್ರಾಣಿ. ದೇಹದ ಉದ್ದ 1-1.5 ಮೀ, ತೂಕ 15-30 ಕೆಜಿ. ಬಣ್ಣ ಕೆಂಪುಮಿಶ್ರಿತ ಕಂದು. ಗಂಡಿನಲ್ಲಿ 0.25 ಮೀಟರ್ ಉದ್ದದ ಮೂರು ಕವಲುಗಳುಳ್ಳ ಕೊಂಬುಗಳಿವೆ. ಬಾಲ ಇಲ್ಲವೇನೋ ಎನ್ನವಷ್ಟರ ಮಟ್ಟಿಗೆ ಮೋಟಾಗಿದೆ.

ವರ್ತನೆ

ರೋ ಜಿಂಕೆಗಳು ಸಣ್ಣ ಕುಟುಂಬಗಳಲ್ಲಿ ವಾಸಿಸುತ್ತವೆ. ಗಂಡುಗಳು ಸಾಮಾನ್ಯವಾಗಿ ಒಂಟೊಂಟಿಯಾಗಿ ಇರುವುವು. ಬೆಳಗಿನ ಜಾವ ಮತ್ತು ಸಂಜೆಯ ವೇಳೆಯಲ್ಲಿ ಮಾತ್ರ ತಾವು ಅಡಗಿರುವ ತಾಣಗಳಿಂದ ಹೊರಬಂದು ಹುಲ್ಲು ಮೇಯತೊಡಗುತ್ತವೆ. ತುಂಬ ಚುರುಕಾದ ಪ್ರಾಣಿಗಳಿವು. ಬಲು ಚೆನ್ನಾಗಿ ಈಸಬಲ್ಲವು. ಮೇಯುತ್ತಿರುವಾಗ ಏನಾದರೂ ಅಡಚಣೆಯುಂಟಾದರೆ ಅಥವಾ ಗಾಬರಿಯುಂಟಾದರೆ ನಾಯಿ ಬೊಗಳುವಂತೆ ಶಬ್ದಮಾಡಿ ಕೂಗುವುವು.

ಸಂತಾನೋತ್ಪತ್ತಿ

ಗಂಡು ಹೆಣ್ಣುಗಳು ಕೂಡುವ ಕಾಲ ಜುಲೈ-ಆಗಸ್ಟ್. ಗಂಡು ಸಾಮಾನ್ಯವಾಗಿ ಒಂದೇ ಒಂದು ಹೆಣ್ಣಿನೊಡನೆ ಕೂಡುತ್ತದೆ. ಹೆಣ್ಣಿಗಾಗಿ ಗಂಡುಗಳ ನಡುವೆ ಕಾದಾಟ ನಡೆಯುವುದುಂಟು. ಒಂದು ಸೂಲಿಗೆ ಒಂದು ಇಲ್ಲವೆ ಎರಡು ಮರಿ ಜನನ. ರೋ ಜಿಂಕೆಯ ವಿಶಿಷ್ಟಲಕ್ಷಣವೆಂದರೆ ನಿಷೇಚನಕ್ರಿಯೆ ಜರಗಿದ ನಾಲ್ಕೂವರೆ ತಿಂಗಳ ತರುವಾಯ ನಿಷೇಚಿತ ಅಂಡ ಗರ್ಭಾಶಯದ ಭಿತ್ತಿಗೆ ಅಂಟಿ ಪಿಂಡವಾಗಿ ಬೆಳೆಯತೊಡಗುವುದು. ಈ ಗುಣ ಬೇರಾವ ಜಿಂಕೆಗಳಲ್ಲೂ ವರದಿಯಾಗಿಲ್ಲ. ಗರ್ಭಧರಿಸಿದ ಹೆಣ್ಣುಜಿಂಕೆ ಮರಿಹಾಕುವ ಮೊದಲು ತನ್ನೊಡನೆ ಇರಬಹುದಾದ ಹಿಂದಿನ ಪ್ರಾಯದ ಮರಿಗಳನ್ನೆಲ್ಲ ಓಡಿಸಿ ಕಾಡಿನಲ್ಲಿ ಅವಿತಿದ್ದು ಹತ್ತು ದಿವಸಗಳ ಅನಂತರ ಹೊಸ ಮರಿಗಳೊಂದಿಗೆ ಹಿಂತಿರುಗುತ್ತದೆ. ಮರಿಗಳ ಮೈಮೇಲೆ ಮೂರು ಸಾಲು ಬಿಳಿ ಚುಕ್ಕಿಗಳಿರುವುವು. ಕೀಚಲು ಸದ್ದು ಮಾಡುವುವು.

ಆಯಸ್ಸು

ರೋ ಜಿಂಕೆಯ ಆಯಸ್ಸು ಸುಮಾರು 17 ವರ್ಷಗಳೆನ್ನಲಾಗಿದೆ. ಆದರೆ ಮೃಗಾಲಯಗಳಲ್ಲಿ 7-8 ವರ್ಷಗಳಿಗಿಂತ ಹೆಚ್ಚು ಕಾಲ ಬುದುಕುವುದಿಲ್ಲ.

ಉಲ್ಲೇಖಗಳು

ಹೆಚ್ಚಿನ ಓದಿಗೆ

  • Prior, Richard (1995).  ''The Roe Deer: Conservation of a Native Species''. Swan-Hill Press.

ಹೊರಗಿನ ಕೊಂಡಿಗಳು

ರೋ ಜಿಂಕೆ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ರೋ ಜಿಂಕೆ ದೇಹರಚನೆರೋ ಜಿಂಕೆ ವರ್ತನೆರೋ ಜಿಂಕೆ ಸಂತಾನೋತ್ಪತ್ತಿರೋ ಜಿಂಕೆ ಆಯಸ್ಸುರೋ ಜಿಂಕೆ ಉಲ್ಲೇಖಗಳುರೋ ಜಿಂಕೆ ಹೆಚ್ಚಿನ ಓದಿಗೆರೋ ಜಿಂಕೆ ಹೊರಗಿನ ಕೊಂಡಿಗಳುರೋ ಜಿಂಕೆ

🔥 Trending searches on Wiki ಕನ್ನಡ:

ಕಬೀರ್ಮೂಲಧಾತುಗಳ ಪಟ್ಟಿತರಂಗಸಂಸ್ಕೃತ ಸಂಧಿಲಿಂಗಾಯತ ಧರ್ಮಸಿಂಧನೂರುಗ್ರಾಹಕರ ಸಂರಕ್ಷಣೆಶ್ರೀ ರಾಮಾಯಣ ದರ್ಶನಂಪಾಲಕ್ರನ್ನಪೊನ್ನಓಂ (ಚಲನಚಿತ್ರ)ಸಮಸ್ಥಾನಿಗೌತಮಿಪುತ್ರ ಶಾತಕರ್ಣಿಜಾತ್ರೆಊಟಉತ್ತರ ಕರ್ನಾಟಕಅಶ್ವತ್ಥಮರಇಸ್ಲಾಂ ಧರ್ಮವೀರಗಾಸೆರಾಶಿಕಾಲಾಯ ತಸ್ಮೈ ನಮಃ (ಚಲನಚಿತ್ರ)ವಿದ್ಯುಲ್ಲೇಪಿಸುವಿಕೆಪಂಪಕಂಸಾಳೆಹಸಿರು ಕ್ರಾಂತಿಕುಮಾರವ್ಯಾಸರಾಷ್ಟ್ರೀಯತೆಕ್ರಿಕೆಟ್ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಚಂಡಮಾರುತಜಯಮಾಲಾಹುರುಳಿಕರ್ನಾಟಕಮುಮ್ಮಡಿ ಕೃಷ್ಣರಾಜ ಒಡೆಯರುಸಮುದ್ರಗುಪ್ತಪುರಾತತ್ತ್ವ ಶಾಸ್ತ್ರಬಂಡೀಪುರ ರಾಷ್ಟ್ರೀಯ ಉದ್ಯಾನವನಭಾರತದ ರಾಷ್ಟ್ರೀಯ ಉದ್ಯಾನಗಳುಒಡೆಯರ್ಗೋತ್ರ ಮತ್ತು ಪ್ರವರಒನಕೆ ಓಬವ್ವಭೌಗೋಳಿಕ ಲಕ್ಷಣಗಳುಉಪ್ಪು (ಖಾದ್ಯ)ಭಾರತದ ಚುನಾವಣಾ ಆಯೋಗಆದೇಶ ಸಂಧಿಮೋಂಬತ್ತಿಸುರಪುರದ ವೆಂಕಟಪ್ಪನಾಯಕನಾಯಕನಹಟ್ಟಿಅದ್ವೈತರವೀಂದ್ರನಾಥ ಠಾಗೋರ್ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕನ್ನಡ ಸಾಹಿತ್ಯ ಸಮ್ಮೇಳನಹಸ್ತ ಮೈಥುನರಾಜಕೀಯ ವಿಜ್ಞಾನಲಿಯೊನೆಲ್‌ ಮೆಸ್ಸಿಭರತನಾಟ್ಯರುಕ್ಮಾಬಾಯಿಇಂಡಿಯನ್ ಪ್ರೀಮಿಯರ್ ಲೀಗ್ವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಕೋಲಾರ ಚಿನ್ನದ ಗಣಿ (ಪ್ರದೇಶ)ಭಾರತ ಬಿಟ್ಟು ತೊಲಗಿ ಚಳುವಳಿರಾಷ್ಟ್ರೀಯ ಶಿಕ್ಷಣ ನೀತಿಆಹಾರ ಸಂರಕ್ಷಣೆಭರತ-ಬಾಹುಬಲಿದೇವನೂರು ಮಹಾದೇವತಂಬಾಕು ಸೇವನೆ(ಧೂಮಪಾನ)ಭಾರತದ ಪಂಚಾಯತ್ ರಾಜ್ ವ್ಯವಸ್ಥೆಕನ್ನಡ ವ್ಯಾಕರಣಆಹಾರ ಸಂಸ್ಕರಣೆಕಪ್ಪುಕರ್ನಾಟಕ ಜನಪದ ನೃತ್ಯಮಧ್ವಾಚಾರ್ಯವೇಗೋತ್ಕರ್ಷಮೆಣಸಿನಕಾಯಿಬ್ರಾಟಿಸ್ಲಾವಾಸಂಗೀತ ವಾದ್ಯಶಿಕ್ಷಕರಷ್ಯಾ🡆 More