ಮಹಲಿಂಗರಂಗ

ಮಹಲಿಂಗರಂಗ : - ಕ್ರಿ.ಶ.೧೬೭೫ ರಲ್ಲಿ ಇದ್ದ ಅಚ್ಚ ಕನ್ನಡ ಕವಿ.

ಕನ್ನಡದ ಕೆಚ್ಚೆದೆಯಿಂದ ಕನ್ನಡದ ಭಾಷೆಯ ಅಭಿಮಾನವನ್ನು ಸಾರಿ ಹೇಳಿದ ಕವಿಗಳ ಸಾಲಿನಲ್ಲಿ (ರಂಗನಾಥ) ಮಹಾಲಿಂಗರಂಗ ಒಂದು ಗಣ್ಯವಾದ ಪಡೆದಿದ್ದಾನೆ. ಅದ್ವೈತ ಸಿದ್ಧಾಂತವನ್ನು ಸರಳವಾಗಿ ಕನ್ನಡ ಭಾಷೆಯಲ್ಲಿ ಬೋಧಿಸುವ ಅವನ ಅನುಭವಾಮೃತ ಪ್ರಸಿದ್ಧಿ ಪಡೆದಿದೆ.

ಜನನ

ಸ್ಥಳ :- ಚಿತ್ರದುರ್ಗ ಜಿಲ್ಲೆಗೆ ಸೇರಿದ ಉಚ್ಚಿಂಗಿ ದುರ್ಗದಲ್ಲಿ ಜನಿಸಿದರು.ಗುರು ಸಹಜಾನಂದ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕೊಣಚಗಲ್ ಬಳಿಯ ರಂಗನಾಥಸ್ವಾಮಿ ಗುಡ್ಡದಲ್ಲಿ ನಿರ್ವಾಣ ಹೊಂದಿದರು. .

ಅನುಭವಾಮೃತ

ಅನುಭಾವಮೃತ ಕೃತಿಯನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿದನು.ಗ್ರಂಥದಲ್ಲಿ ಒಟ್ಟು ೮೦೪ ಪಂದ್ಯಗಳು ೧೧ ಅಧ್ಯಾಯಗಳಲ್ಲಿ ಹಂಚಿಕೆಯಾಗಿದೆ.

    ಸುಲಿದ ಬಾಳೆಯ ಹಣ್ಣಿನಂದದಿ.
    ಕಳೆದ ಸಿಗುರಿನ ಕಬ್ಬಿನಂದದಿ.
    ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ.
    ಲಲಿತವಹ ಕನ್ನಡದ ನುಡಿಯಲಿ.
    ತಿಳಿದು ತನ್ನೊಳು ತನ್ನ ಮೋಕ್ಷವ.
    ಗಳಿಸಿಕೊಂಡರೆ ಸಾಲದೇ? ಸಂಸ್ಕೃತದಲಿನ್ನೇನು?


ಹೀಗೆ ಕನ್ನಡ ನುಡಿಯ ಹಿರಿಮೆಯನ್ನು 17ನೆಯ ಶತಮಾನದಲ್ಲೇ ಸಾರಿದ ಮಹಾನ್ ಕವಿ ಮಹಲಿಂಗರಂಗ.

ಮಣ್ಣ ಬೆನಕಗೆ ಮಜ್ಜನದೊಳೇ ತನ್ನ ಮರಣವದೆಂಬ ಗಾದೆಯಲಿನ್ನು ಮಾಯೆಗೆ ತನ್ನ ಮೂಲವನರಿಯೆ ಲಯವಹುದು ಈ ಬಗೆಯ‌ ಹೇರಳವಾದ ದೃಷ್ಟಾಂತಗಳಿಂದ ಅತ್ಯಂತ ಗಹನವಾದ ಪ್ರಮೇಯವನ್ನು ತಿಳಿ ಹೇಳುವುದರಲ್ಲಿ ರಂಗನಾಥ ಕವಿ ಬಹುಮಟ್ಟಿಗೆ ಯಶಸ್ವಿಯಾಗಿದ್ದಾನೆ. ಅದ್ವೈತ ಸಿದ್ಧಾಂತದ ಬೆಳಕಿನಲ್ಲಿ ಆಧ್ಯಾತ್ಮಿಕ ಜಿಜ್ಞಾಸೆ 'ಕೈವಲ್ಯ ಸಾಹಿತ್ಯ'ದ ಮುಖ್ಯಸ್ರೋತವಾಗಿತ್ತು. ಪರಮಾರ್ಥಸಾಧನೆಯ ಮಾರ್ಗದ ಶೋಧವೇ 'ಕೈವಲ್ಯ ಸಾಹಿತ್ಯ'ದ ಉದ್ದೇಶವಾಗಿತ್ತು. 'ಭಕ್ತಿಮಾರ್ಗ'ಕ್ಕಿಂತ ಭಿನ್ನವಾದ 'ಜ್ಞಾನಮಾರ್ಗ'ಕ್ಕೆ ಒತ್ತು ನೀಡಿದ ಸಾಹಿತ್ಯ ಈ 'ಕೈವಲ್ಯ ಸಾಹಿತ್ಯ'.

ವೀರಶೈವ ತತ್ತ್ವವನ್ನು ಅದ್ವೈತ ಸಿದ್ಧಾಂತದೊಡನೆ ಸಮನ್ವಯಗೊಳಿಸಿ ಅರ್ಥೈಸಲೆತ್ನಿಸಿದ ನಿಜಗುಣ ಶಿವಯೋಗಿಗಳು 15ನೆಯ ಶತಮಾನದಲ್ಲಿ 'ಕೈವಲ್ಯ ಸಾಹಿತ್ಯ'ಕ್ಕೆ ಶ್ರೇಷ್ಠ ಕೊಡುಗೆ ಸಲ್ಲಿಸಿದರು. ಈ ಸಾಹಿತ್ಯಪ್ರಕಾರದಲ್ಲಿ ಅನಂತರದ ಮಹತ್ತರ ಕೊಡುಗೆ 17ನೆಯ ಶತಮಾನದ ಕವಿ ಮಹಲಿಂಗರಂಗನದು. ನಿಜಜೀವನದ ಅನುಪಮ ಉಪಮೆಗಳಿಂದ ಕೂಡಿದ ಷಟ್ಪದಿಗಳ ಮೂಲಕ ಮಹಲಿಂಗರಂಗ ಕವಿಯು ತನ್ನ 'ಅನುಭವಾಮೃತ' ಕೃತಿಯಲ್ಲಿ ಆದಿಶಂಕರರ ಅದ್ವೈತ ತತ್ತ್ವವನ್ನು ಪ್ರಸ್ತುತಪಡಿಸಿರುವ ಬಗೆ ಅನನ್ಯವಾದುದಾಗಿದೆ. ಈ ಕೃತಿಯು ಕನ್ನಡದ ಶ್ರೇಷ್ಠ ಕೃತಿಗಳಲ್ಲೊಂದೆಂದು ಹೇಳ ಬಹುದಾಗಿದೆ

ಮರ್ಕಟಕೇಕೆ ಮಾಣಿಕ್ಯ?, ನಾಯಿಗೇತಕೆ ನವರಸಸಾನ್ನ?, ರಾಣಿಯೇಕೆ ನಂಪುಂಸಕಗೆ?,ನರಿಗೇಕೆ ಸುದ್ದಿಲೋಕ? - ಇಂತಹ ದೃಷ್ಟಾಂತ, ಉಪಮಾ,ರೂಪಕದ ಮಾತುಗಳು ಇವನ ಶೈಲಿ ಎಷ್ಟು ಹೃದ್ಯ ವಾದಿಸಿದ್ದರು ಎನ್ನುವುದನ್ನು ತೋರಿಸುತ್ತದೆ.ಈ ಕನ್ನಡ ಗ್ರಂಥ ಸಂಸ್ಕೃತ ಭಾಷೆಗೆ ಹಿಂದೆಯೇ ಭಾಷಾಂತರವಾಗಿದೆ.

ಉಲ್ಲೇಖಗಳು

Tags:

ಅಚ್ಚ ಕನ್ನಡಕನ್ನಡರಂಗನಾಥ

🔥 Trending searches on Wiki ಕನ್ನಡ:

ಎಸ್.ಎಲ್. ಭೈರಪ್ಪಭಾರತೀಯ ರಿಸರ್ವ್ ಬ್ಯಾಂಕ್ಯೋಗಪ್ರಗತಿಶೀಲ ಸಾಹಿತ್ಯಡಿ.ಎಸ್.ಕರ್ಕಿಬಹುರಾಷ್ಟ್ರೀಯ ನಿಗಮಗಳುನೀರು (ಅಣು)ರಾಜಧಾನಿಗಳ ಪಟ್ಟಿಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ಬನವಾಸಿಬಂಡಾಯ ಸಾಹಿತ್ಯಬಿ. ಎಂ. ಶ್ರೀಕಂಠಯ್ಯಪ್ರಬಂಧಹೆಚ್.ಡಿ.ಕುಮಾರಸ್ವಾಮಿವೆಂಕಟೇಶ್ವರ ದೇವಸ್ಥಾನಪಶ್ಚಿಮ ಘಟ್ಟಗಳುವಿಜಯಪುರಶ್ರೀ ರಾಮ ನವಮಿಕೆ. ಎಸ್. ನರಸಿಂಹಸ್ವಾಮಿಋಗ್ವೇದಸೋಮೇಶ್ವರ ಶತಕಸಮುಚ್ಚಯ ಪದಗಳುನೆಪೋಲಿಯನ್ ಬೋನಪಾರ್ತ್ಹೈದರಾಲಿಕೊಪ್ಪಳನಾಗಲಿಂಗ ಪುಷ್ಪ ಮರಸಹಕಾರಿ ಸಂಘಗಳುಕಾನೂನುಭೂಮಿಕಲೆವಾಸ್ಕೋ ಡ ಗಾಮಟಾಮ್ ಹ್ಯಾಂಕ್ಸ್ದೇವರ ದಾಸಿಮಯ್ಯಭಾರತದ ಉಪ ರಾಷ್ಟ್ರಪತಿಕರ್ನಾಟಕದ ಜಿಲ್ಲೆಗಳುಮಾರ್ಟಿನ್ ಲೂಥರ್ ಕಿಂಗ್ಗೋಲ ಗುಮ್ಮಟಮುಹಮ್ಮದ್ಗೋತ್ರ ಮತ್ತು ಪ್ರವರನ್ಯೂಟನ್‍ನ ಚಲನೆಯ ನಿಯಮಗಳುರವಿ ಡಿ. ಚನ್ನಣ್ಣನವರ್ಪ್ಯಾರಿಸ್ಭಾರತದ ಚುನಾವಣಾ ಆಯೋಗಭಾರತವೈದೇಹಿರುಮಾಲುಷಟ್ಪದಿತಂಬಾಕು ಸೇವನೆ(ಧೂಮಪಾನ)ಅಗ್ನಿ(ಹಿಂದೂ ದೇವತೆ)ವಿಜಯನಗರಪ್ರೀತಿಯೇಸು ಕ್ರಿಸ್ತಅವ್ಯಯಪಾಟೀಲ ಪುಟ್ಟಪ್ಪಕನ್ನಡದಲ್ಲಿ ಕಾದಂಬರಿ ಸಾಹಿತ್ಯರಾಮಶ್ರವಣಬೆಳಗೊಳಮೋಕ್ಷಗುಂಡಂ ವಿಶ್ವೇಶ್ವರಯ್ಯಮಾದಿಗಭೀಮಸೇನಜೀವಕೋಶಸರಸ್ವತಿಬಸವೇಶ್ವರನೆಲ್ಸನ್ ಮಂಡೇಲಾಭಾರತದ ಇತಿಹಾಸಶಬ್ದಕಿರುಧಾನ್ಯಗಳುಗೋವರಾಯಚೂರು ಜಿಲ್ಲೆದರ್ಶನ್ ತೂಗುದೀಪ್ಪಲ್ಸ್ ಪೋಲಿಯೋನೀರುಕರ್ನಾಟಕ ವಿಧಾನ ಸಭೆ🡆 More