ಮಲ್ಲಿಕಾ ಘಂಟಿ

ಮಲ್ಲಿಕಾ ಘಂಟಿಯವರು ಕನ್ನಡದ ಲೇಖಕಿ.

ಗುಲಬರ್ಗಾ ವಿಶ್ವವಿದ್ಯಾಲಯದ ಸಂಡೂರ ಕೇಂದ್ರದ ಕನ್ನಡ ವಿಭಾಗದಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿದ್ದ. ಡಾ ಮಲ್ಲಿಕಾ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು.

ಜನನ

೧೯೫೯ ಏಪ್ರಿಲ್ ೪ ರಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಅಗಸಬಾಳದಲ್ಲಿ ಜನಿಸಿದ್ದಾರೆ.

ಶಿಕ್ಷಣ

ಪ್ರಾಥಮಿಕ ವಿದ್ಯಾಭ್ಯಾಸ ಹಂಗರಗಿ ಗ್ರಾಮ ಮತ್ತು ಬಾದಾಮಿಯಲ್ಲಿ. ವೀರ ಪುಲಿಕೇಶಿ ಹೈಸ್ಕೂಲಿನಲ್ಲಿ ಪಿ.ಯು.ವರೆಗೆ ವಿದ್ಯಾಭ್ಯಾಸ, ಬಾಗಲಕೋಟೆ ಮತ್ತು ಜಮಖಂಡಿ ಬಸವೇಶ್ವರ ವಿದ್ಯಾವರ್ಧಕ ಸಂಘದಿಂದ ಬಿ.ಎ. ಪದವಿ. ಧಾರವಾಡದ ವಿಶ್ವವಿದ್ಯಾಲಯದಿಂದ “ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ” ಕುರಿತು ಬರೆದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಬಿ ಎ, ಎಂ ಎ(೧೯೮೨) ಮತ್ತು ಪಿ ಹೆಚ್ ಡಿ(೧೯೯೨) ಪಡೆದರು. ೧೯೮೭ರಿಂದ ೨೩ ವರ್ಷ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡಿದ ಡಾ. ಮಲ್ಲಿಕಾ ಸಂಶೋಧನೆ, ಆಡಳಿತ ಮತ್ತು ಪಾಠ ಈ ಎಲ್ಲಾ ಕ್ಷೇತ್ರಗಳಲ್ಲಿ ಅನುಭವ ಗಳಿಸಿದ್ದಾರೆ.

ವೃತ್ತಿ

ಪದವಿ ಪಡೆದ ನಂತರ ಉದ್ಯೋಗಕ್ಕಾಗಿ ಸೇರಿದ್ದು ಕೆರೂರು ಎಂ.ಎಚ್.ಎಂ. ಕಿರಿಯ ಮಹಾ ವಿದ್ಯಾಲಯದಲ್ಲಿ. ೧೯೮೩ರಿಂದ ೧೯೮೭ರವರೆಗೆ ಉಪನ್ಯಾಸಕಿ ಹುದ್ದೆ. ೧೯೮೭ರಿಂದ ೧೯೯೪ರವರೆಗೆ ಗುಲಬರ್ಗಾದ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ, ೧೯೯೪ರಿಂದ ಸ್ನಾತಕೋತ್ತರ ಕೇಂದ್ರ ಸಂಡೂರಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಮುಂದುವರಿಕೆ.

ಗುಲಬರ್ಗಾ ವಿಶ್ವವಿದ್ಯಾಲಯದ ಸಂಡೂರ ಕೇಂದ್ರದ ಕನ್ನಡ ವಿಭಾಗದಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿದ್ದ. ಡಾ ಮಲ್ಲಿಕಾ,ಸೆಪ್ಟೆಂಬರ್ ೨೦೧೫ರಿಂದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದಾರೆ.

ಕೃತಿಗಳು

ಕವನ ಸಂಕಲನ

  • ತುಳಿಯದಿರಿ ನನ್ನ
  • ಈ ಹೆಣ್ಣುಗಳೆ ಹೀಗೆ
  • ರೊಟ್ಟಿ ಮತ್ತು ಹುಡುಗಿ
  • ಬೆಲ್ಲದಚ್ಚು ಮತ್ತು ಇರುವೆ ದಂಡು

ನಾಟಕ

  • ಚಾಜ

ಜೀವನ ಚರಿತ್ರೆ

  • ಅಹಲ್ಯಾಬಾಯಿ ಹೋಳ್ಕರ್

ವಿಮರ್ಶೆ

  • ಕನ್ನಡದ ಕಥೆಗಾರ್ತಿಯರು
  • ತನುಕರಗದವರಲ್ಲಿ
  • ಭೂಮಿಯ ಮೇಲೆ

ಮಹಾಪ್ರಬಂಧ

  • ಕನ್ನಡದಲ್ಲಿ ಮಹಿಳಾ ಕಥಾಸಾಹಿತ್ಯ

ಲೇಖನಗಳು

  • ತನು ಕರಗದವರಲ್ಲಿ

ಪ್ರಶಸ್ತಿಗಳು

ಮಾಣಿಕಬಾಯಿ ಪ್ರಶಸ್ತಿ, ತನುಕರಗದವರಲ್ಲಿ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಿಂಧೂರ ದತ್ತಿ ನಿ ಪ್ರಶಸ್ತಿ, ‘ರೊಟ್ಟಿ ಮತ್ತು ಹುಡುಗಿ’ ಕೃತಿಗೆ ಲಿಂಗರಾಜ ಪ್ರಶಸ್ತಿ, ‘ಈ ಹೆಣ್ಣುಗಳೇ ಹೀಗೆ’ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು.

ಉಲ್ಲೇಖಗಳು

Tags:

ಮಲ್ಲಿಕಾ ಘಂಟಿ ಜನನಮಲ್ಲಿಕಾ ಘಂಟಿ ಶಿಕ್ಷಣಮಲ್ಲಿಕಾ ಘಂಟಿ ವೃತ್ತಿಮಲ್ಲಿಕಾ ಘಂಟಿ ಕೃತಿಗಳುಮಲ್ಲಿಕಾ ಘಂಟಿ ಪ್ರಶಸ್ತಿಗಳುಮಲ್ಲಿಕಾ ಘಂಟಿ ಉಲ್ಲೇಖಗಳುಮಲ್ಲಿಕಾ ಘಂಟಿಕನ್ನಡ

🔥 Trending searches on Wiki ಕನ್ನಡ:

ಸುವರ್ಣ ನ್ಯೂಸ್ಪರಿಸರ ರಕ್ಷಣೆಬಿದಿರುಚುನಾವಣೆಡಿ. ದೇವರಾಜ ಅರಸ್ಬಾದಾಮಿ ಗುಹಾಲಯಗಳುಹಂಪೆಅರ್ಜುನಹಾಸನವಸ್ತುಸಂಗ್ರಹಾಲಯಉತ್ತರ ಕನ್ನಡಯಣ್ ಸಂಧಿಋಗ್ವೇದಕದಂಬ ರಾಜವಂಶಕಲೆದ್ರಾವಿಡ ಭಾಷೆಗಳುಮೈಗ್ರೇನ್‌ (ಅರೆತಲೆ ನೋವು)ಒಗಟುರಾಜ್‌ಕುಮಾರ್ಕರ್ಣಕನ್ನಡ ಬರಹಗಾರ್ತಿಯರುಚಿಕ್ಕಬಳ್ಳಾಪುರಭಾರತದಲ್ಲಿ ಮೀಸಲಾತಿಕರ್ನಾಟಕ ಸಂಗೀತಕಾಮಸೂತ್ರದ್ವಂದ್ವ ಸಮಾಸಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಉಗ್ರಾಣಭಗವದ್ಗೀತೆತಲಕಾಡುಭಕ್ತಿ ಚಳುವಳಿಹೈದರಾಲಿಕೃಷ್ಣಭಾರತದ ರಾಷ್ಟ್ರಗೀತೆವಾಣಿಜ್ಯ(ವ್ಯಾಪಾರ)ಜೇನು ಹುಳುಚಂದ್ರಯಾನ-೩ಕರ್ನಾಟಕ ಸರ್ಕಾರಚಿಲ್ಲರೆ ವ್ಯಾಪಾರಮಹಾವೀರಹರಿಹರ (ಕವಿ)ಉಪನಯನಭರತ-ಬಾಹುಬಲಿಮನಮೋಹನ್ ಸಿಂಗ್ಗಣಗಲೆ ಹೂಪ್ಲಾಸ್ಟಿಕ್ಚದುರಂಗದ ನಿಯಮಗಳುರಾಮಾಯಣಜ್ಯೋತಿಷ ಶಾಸ್ತ್ರಕರ್ನಾಟಕದ ಸಂಸ್ಕೃತಿಸಂವತ್ಸರಗಳುಸ್ವಾಮಿ ವಿವೇಕಾನಂದದೆಹಲಿ ಸುಲ್ತಾನರುಸಿ. ಆರ್. ಚಂದ್ರಶೇಖರ್ಗುಲಾಬಿಶೈಕ್ಷಣಿಕ ಮನೋವಿಜ್ಞಾನಶ್ರೀ ಸಿದ್ಧಲಿಂಗೇಶ್ವರಸಂಸ್ಕೃತತುಳುಖೊಖೊಪೂಜಾ ಕುಣಿತಶಂಕರ್ ನಾಗ್ವ್ಯವಸಾಯಉಪ್ಪು ನೇರಳೆತಂತ್ರಜ್ಞಾನಅರವಿಂದ ಘೋಷ್ಬಿಜು ಜನತಾ ದಳಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮನಾಕುತಂತಿದಿಯಾ (ಚಲನಚಿತ್ರ)ಸಚಿನ್ ತೆಂಡೂಲ್ಕರ್ಮದುವೆಹವಾಮಾನಹನುಮಂತಗೊರೂರು ರಾಮಸ್ವಾಮಿ ಅಯ್ಯಂಗಾರ್ವಿದುರಾಶ್ವತ್ಥಸಿಂಧೂತಟದ ನಾಗರೀಕತೆಶಿವನ ಸಮುದ್ರ ಜಲಪಾತಮಗಧ🡆 More