ಬೆಂಗಳೂರು ಅಕ್ವೇರಿಯಂ

ಸರ್ಕಾರಿ ಅಕ್ವೇರಿಯಂ ಎಂದೂ ಕರೆಯಲ್ಪಡುವ ಬೆಂಗಳೂರು ಅಕ್ವೇರಿಯಂ ಭಾರತದ ಎರಡನೇ ಅತಿದೊಡ್ಡ ಅಕ್ವೇರಿಯಂ ಆಗಿದೆ.

ಇದು ಭಾರತದ ಬೆಂಗಳೂರಿನ ಕಬ್ಬನ್ ಪಾರ್ಕ್ ಪ್ರವೇಶದ್ವಾರದಲ್ಲಿದೆ ಮತ್ತು ಇದನ್ನು ೧೯೮೩ ರಲ್ಲಿ ಸ್ಥಾಪಿಸಲಾಯಿತು. ಇದು ವೈವಿಧ್ಯಮಯ ವಿಲಕ್ಷಣ ಕೃಷಿಯೋಗ್ಯ ಹಾಗೂ ಅಲಂಕಾರಿಕ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದು ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಹತ್ತಿರದಲ್ಲಿದೆ. ಅಕ್ವೇರಿಯಂ ಅನ್ನು ಕರ್ನಾಟಕ ರಾಜ್ಯ ಸರ್ಕಾರದ ಮೀನುಗಾರಿಕೆ ಇಲಾಖೆಯು ನಿರ್ವಹಿಸುತ್ತದೆ.

Bangalore Aquarium
ಬೆಂಗಳೂರು ಅಕ್ವೇರಿಯಂ
Bangalore Aquarium in November 2021
Date opened೧೯೮೩
Locationಬೆಂಗಳೂರು, ಕರ್ನಾಟಕ, ಭಾರತ
Coordinates12°58′35″N 77°35′55″E / 12.9765°N 77.5986°E / 12.9765; 77.5986
ಬೆಂಗಳೂರು ಅಕ್ವೇರಿಯಂ
Bangalore Aquarium 103

ಕಟ್ಟಡ

ಸಾರ್ವಜನಿಕ ಪ್ರದರ್ಶನಕ್ಕಾಗಿ ಸರ್ಕಾರಿ ಅಕ್ವೇರಿಯಂ ಅನ್ನು ೧೯೭೨ ರಲ್ಲಿ ನಿರ್ಮಿಸಲಾಯಿತು ಮತ್ತು ಅಧಿಕೃತವಾಗಿ ೨೭.೦೮.೧೯೮೩ ರಂದು ಉದ್ಘಾಟಿಸಲಾಯಿತು. ಸರ್ಕಾರಿ ಅಕ್ವೇರಿಯಂ, ಕಬ್ಬನ್ ಪಾರ್ಕ್ ಅಷ್ಟಭುಜಾಕೃತಿಯ ಆಕಾರದಲ್ಲಿರುವ 'ಶುದ್ಧ ನೀರಿನ ಮೀನಿನ ಅಕ್ವೇರಿಯಂ' ಆಗಿದ್ದು ಇದೊಂದು ಮೂರು ಅಂತಸ್ತಿನ ಕಟ್ಟಡವಾಗಿದೆ. ಸರ್ಕಾರಿ ಅಕ್ವೇರಿಯಂನ ಒಟ್ಟು ವಿಸ್ತೀರ್ಣ ೨೭೦೦ಚ.ಮೀ. ನಿರ್ಮಿತ ಪ್ರದೇಶದ ಪೈಕಿ ೮೫೦ ಚ.ಮೀ. ಇದು ದೇಶದ ಎರಡನೇ ಅತಿದೊಡ್ಡ ಅಕ್ವೇರಿಯಂ ಆಗಿದೆ. ನೆಲ ಮಹಡಿ ಕಚೇರಿಯನ್ನು ಒಳಗೊಂಡಿದೆ. ಮೊದಲ ಮಹಡಿಯಲ್ಲಿ ೧೪ ದೊಡ್ಡ ಟ್ಯಾಂಕ್‌ಗಳಿವೆ. ಎರಡನೇ ಮಹಡಿಯಲ್ಲಿ, ಅಕ್ವೇರಿಯಂಗಳನ್ನು ಎರಡು ಸಾಲುಗಳಲ್ಲಿ ಜೋಡಿಸಲಾಗಿದೆ ಮತ್ತು ಮಧ್ಯಮದಿಂದ ಸಣ್ಣ ಗಾತ್ರದ ಒಟ್ಟು ೬೨ ಅಕ್ವೇರಿಯಗಳಿವೆ . ಇದು ಸುಮಾರು ೪೦-೫೦ ಪ್ರಭೇದಗಳ ಸ್ಥಳೀಯ ಮತ್ತು ವಿಲಕ್ಷಣ ಜಾತಿಯ ಸಿಹಿನೀರಿನ ಅಲಂಕಾರಿಕ ಮೀನುಗಳನ್ನು ಹೊಂದಿದೆ. ಸರ್ಕಾರಿ ಅಕ್ವೇರಿಯಂ ಮೀನುಗಾರಿಕೆ ನಿರ್ದೇಶನಾಲಯದ ನೇರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಕ್ಯುರೇಟರ್ ಅಕ್ವೇರಿಯಂನ ಮುಖ್ಯಸ್ಥರಾಗಿರುತ್ತಾರೆ.

  • ಅಕ್ವೇರಿಯಂ ಈ ದಿನಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ದಿನಗಳಲ್ಲಿ ಸಾರ್ವಜನಿಕರಿಗೆ ತೆರೆದಿರುತ್ತದೆ:
    • ಸೋಮವಾರ ಮತ್ತು ಎರಡನೇ ಮತ್ತು ನಾಲ್ಕನೇ ಮಂಗಳವಾರ.
    • ಎಲ್ಲಾ ಸರ್ಕಾರಿ ರಜಾದಿನಗಳು (ಅಲ್ಲದೆ ಭಾನುವಾರದಂದು ರಜೆ ಇದ್ದರೆ)
  • ಪ್ರತಿ ವರ್ಷ ಜನವರಿ ೨೬, ಆಗಸ್ಟ್ ೧೫ ಮತ್ತು ನವೆಂಬರ್೧ ರಂದು ಅಕ್ವೇರಿಯಂ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ. (ಮುಂದಿನ ಕೆಲಸದ ದಿನದಂದು ಅಕ್ವೇರಿಯಂ ಮುಚ್ಚಲ್ಪಡುತ್ತದೆ)
  • ಸಮಯ: ೧೦:೦೦ AM ನಿಂದ ೫:೩೦ PM
    ಪ್ರವೇಶ ಶುಲ್ಕ
  • ಪ್ರವೇಶ ಶುಲ್ಕ ತಲಾ ೧೦ ರೂ.
  • ಮಕ್ಕಳು ತಮ್ಮ ಶಾಲೆಗಳ ಮೂಲಕ ಅಕ್ವೇರಿಯಂಗೆ ಭೇಟಿ ನೀಡಿದರೆ, ಟಿಕೆಟ್ ದರ ತಲಾ ರೂ.೫.೦೦ (೨೦ ನೇ ತರಗತಿಯವರೆಗೆ).
  • ೫ ವರ್ಷದೊಳಗಿನ ಮಕ್ಕಳಿಗೆ ಯಾವುದೇ ಶುಲ್ಕವಿಲ್ಲ.

ಪ್ರದರ್ಶನದಲ್ಲಿ ಜಾತಿಗಳು

ಅಕ್ವೇರಿಯಂನಲ್ಲಿ ಕಂಡುಬರುವ ಮೀನುಗಳಲ್ಲಿ ಈಲ್ಸ್, ಏಂಜೆಲ್ಫಿಶ್, ಗ್ಲೋಲೈಟ್ ಟೆಟ್ರಾ, ಹಾಕಿ ಸ್ಟಿಕ್ ಟೆಟ್ರಾ, ರೆಡ್-ಟೈಲ್ ಶಾರ್ಕ್, ಕ್ಯಾಟ್ಲಾ, ಇಂಡಿಯನ್ ಟೈಗರ್ ಬಾರ್ಬ್, ಮಹ್ಸೀರ್, ಸಿಹಿನೀರಿನ ಸೀಗಡಿಗಳು, ನೀಲಿ ಗೌರಾಮಿ, ಪರ್ಲ್ ಗೌರಾಮಿ, ಗೋಲ್ಡ್ ಫಿಶ್, ಮೂನ್ ಟೈಲ್ ಮತ್ತು ಹೆಚ್ಚಿನವು ಸೇರಿವೆ.

ಆಡಳಿತ

ಬೆಂಗಳೂರು ಅಕ್ವೇರಿಯಂ ರಾಜ್ಯ ಸರ್ಕಾರದ ಆಡಳಿತದಲ್ಲಿದೆ.

ಗ್ಯಾಲರಿ

ಸಹ ನೋಡಿ

ಉಲ್ಲೇಖಗಳು

Tags:

ಬೆಂಗಳೂರು ಅಕ್ವೇರಿಯಂ ಕಟ್ಟಡಬೆಂಗಳೂರು ಅಕ್ವೇರಿಯಂ ಪ್ರದರ್ಶನದಲ್ಲಿ ಜಾತಿಗಳುಬೆಂಗಳೂರು ಅಕ್ವೇರಿಯಂ ಆಡಳಿತಬೆಂಗಳೂರು ಅಕ್ವೇರಿಯಂ ಗ್ಯಾಲರಿಬೆಂಗಳೂರು ಅಕ್ವೇರಿಯಂ ಸಹ ನೋಡಿಬೆಂಗಳೂರು ಅಕ್ವೇರಿಯಂ ಉಲ್ಲೇಖಗಳುಬೆಂಗಳೂರು ಅಕ್ವೇರಿಯಂಅಕ್ವೇರಿಯಂಕಬ್ಬನ್ ಪಾರ್ಕ್ಕರ್ನಾಟಕಬೆಂಗಳೂರುಭಾರತಮೀನುಮೋಕ್ಷಗುಂಡಂ ವಿಶ್ವೇಶ್ವರಯ್ಯ

🔥 Trending searches on Wiki ಕನ್ನಡ:

ಬಿ.ಎ.ಸನದಿಶಂಕರ್ ನಾಗ್ಗ್ರಾಹಕರ ಸಂರಕ್ಷಣೆಅಖಿಲ ಭಾರತ ಬಾನುಲಿ ಕೇಂದ್ರಶ್ರೀ ರಾಮ ನವಮಿಮೊಬೈಲ್ ಅಪ್ಲಿಕೇಶನ್ಚನ್ನಬಸವೇಶ್ವರಮರುಭೂಮಿರವೀಂದ್ರನಾಥ ಠಾಗೋರ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಎಂ. ಎಂ. ಕಲಬುರ್ಗಿಸನ್ನತಿಭಾರತದ ಪ್ರಧಾನ ಮಂತ್ರಿಮೇರಿ ಕೋಮ್ಭ್ರಷ್ಟಾಚಾರಕ್ರಿಕೆಟ್ಲೋಪಸಂಧಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಆಯ್ಕಕ್ಕಿ ಮಾರಯ್ಯರಜಪೂತಗೌತಮಿಪುತ್ರ ಶಾತಕರ್ಣಿಮಹಾತ್ಮ ಗಾಂಧಿಭಾರತೀಯ ರೈಲ್ವೆಶಿವನ ಸಮುದ್ರ ಜಲಪಾತಪುನೀತ್ ರಾಜ್‍ಕುಮಾರ್ಕಲೆಗ್ರಹವೇದಹಳೆಗನ್ನಡಕನ್ನಡದಲ್ಲಿ ಅಂಕಣ ಸಾಹಿತ್ಯಮಣ್ಣುನಂಜನಗೂಡುಮುದ್ದಣಶ್ರೀಪಾದರಾಜರುಸಂಭೋಗನಾಮಪದಒಲಂಪಿಕ್ ಕ್ರೀಡಾಕೂಟಕೈಗಾರಿಕಾ ಕ್ರಾಂತಿಕೇಶಿರಾಜಭಾರತದಲ್ಲಿನ ಚುನಾವಣೆಗಳುಭಾರತದಲ್ಲಿ ಮೀಸಲಾತಿಭರತೇಶ ವೈಭವಸಾಕ್ರಟೀಸ್ಭತ್ತರಾಘವಾಂಕಯೇಸು ಕ್ರಿಸ್ತವಿಶ್ವ ಪರಿಸರ ದಿನಆದಿ ಶಂಕರಕನ್ನಡಪ್ರಭವಾರ್ಧಕ ಷಟ್ಪದಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಿನಾಯಕ ಕೃಷ್ಣ ಗೋಕಾಕಮಂಜಮ್ಮ ಜೋಗತಿಕಪ್ಪೆ ಅರಭಟ್ಟಗೌರಿ ಹಬ್ಬಭಾರತೀಯ ಮೂಲಭೂತ ಹಕ್ಕುಗಳುಎಸ್. ಶ್ರೀಕಂಠಶಾಸ್ತ್ರೀಬೌದ್ಧ ಧರ್ಮಕ್ರೀಡೆಗಳುಓಂ ನಮಃ ಶಿವಾಯಕನ್ನಡ ಸಂಧಿಕನ್ನಡದಲ್ಲಿ ಜೀವನ ಚರಿತ್ರೆಗಳುಅಗ್ನಿ(ಹಿಂದೂ ದೇವತೆ)ಗಿರೀಶ್ ಕಾರ್ನಾಡ್ಪಾರ್ವತಿಬ್ಯಾಬಿಲೋನ್ಜಿ.ಎಸ್.ಶಿವರುದ್ರಪ್ಪನೀರು (ಅಣು)ಹೊಯ್ಸಳ ವಿಷ್ಣುವರ್ಧನಅಮೇರಿಕ ಸಂಯುಕ್ತ ಸಂಸ್ಥಾನವ್ಯಾಪಾರಕಮಲದಹೂಬುದ್ಧನೀರಿನ ಸಂರಕ್ಷಣೆಸೂಳೆಕೆರೆ (ಶಾಂತಿ ಸಾಗರ)ಗೊರೂರು ರಾಮಸ್ವಾಮಿ ಅಯ್ಯಂಗಾರ್ಮಂತ್ರಾಲಯನಡುಕಟ್ಟುಚಾಲುಕ್ಯ🡆 More