ಬಾಲ್ವಿಂದರ್ ಸಿಂಗ್ ಫಿದ್ದ

ಬಾಲ್ವಿಂದರ್ ಸಿಂಗ್ ಫಿದ್ದರವರನ್ನು, ಫಿದ್ದು, ಕ್ರೌನ್ಲೆಸ್ ಕಿಂಗ್ ಆಫ್ ಕಬಡ್ಡಿ, ರಸ್ಟ್ಮ್-ಇ-ಕಬಡ್ಡಿ, ಬಕನ್ ಖಿಲಾಡಿ ಮತ್ತು ಕಬಡ್ಡಿ ಡಾ ಲಡ್ಲಾ ಪುಟ್ಟರ್ (ಕಬಡ್ಡಿ ಸನ್) ಎಂದೂ ಕರೆಯಲಾಗುತ್ತಿದೆ.

ಫಿದ್ದರವರು ೨೩ ಮಾರ್ಚ್ ೧೯೫೬ರಂದು ಪಂಜಾಬ್ ಜಿಲ್ಲೆಯ ಕಪರ್ತುಲ ತಾಲ್ಲೂಕಿನ ತಂಡಿ  ಗ್ರಾಮದಲ್ಲಿ ಚರಣ್ ಕೌರ್ ಮತ್ತು ಸರ್ದಾರ್ ಬಂತ ಸಿಂಗ್ ದಂಪತಿಗಳ ಪುತ್ರರಾಗಿ ಜನಿಸಿದರು. ಇವರು ಅರ್ಜುನ ಪ್ರಶಸ್ತಿಯನ್ನು ಪಡೆದ ಪ್ರತಿಭಾನ್ವಿತ ವೃತ್ತಿಪರ ಭಾರತೀಯ ಕಬಡ್ಡಿ ಆಟಗಾರರಾಗಿದ್ದಾರೆ ಹಾಗೂ ಫಿದ್ದರವರು ಕಬಡ್ಡಿ ಆಟದಲ್ಲಿನ ಅತ್ಯುತ್ತಮ ಮತ್ತು ದಿಗ್ಗಜ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಇವರು ಕಬಡ್ಡಿ ಆಟದ  ಎರಡು ಪ್ರಕಾರಗಳಾದ ರಾಷ್ಟ್ರೀಯ ಶೈಲಿ ಹಾಗೂ ವೃತ್ತದ ಶೈಲಿಗಳನ್ನು ಆಡಿದವರಾಗಿದ್ದಾರೆ. ನೈಸರ್ಗಿಕ ಉಡುಗೊರೆಯನ್ನು ಪಡೆದಿರುವ ಇವರು ಉತ್ತಮ ರೈಡರ್ (ಆಕ್ರಮಣಕಾರ) ಆಗಿದ್ದು, ಕಬಡ್ಡಿಯ ಎರಡು ಪ್ರಕಾರಗಳಲ್ಲಿ ತಮ್ಮ ಹೆಸರನ್ನು ಪ್ರತಿಷ್ಠಾಪಿಸಿದ್ದಾರೆ. ೧೯೯೯ ರಲ್ಲಿ ಅವರು ಅರ್ಜುನ ಪ್ರಶಸ್ತಿಗೆ ಆಯ್ಕೆಯಾದರು (ಭಾರತ ಸರ್ಕಾರದ ಅತ್ಯುನ್ನತ ಕ್ರೀಡಾ ಪ್ರಶಸ್ತಿ) ಮತ್ತು ಆಗಸ್ಟ್ ೨೯, ೨೦೦೦ರಂದು ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಬಾಲ್ವಿಂದರ್ ಸಿಂಗ್ ಫಿದ್ದ
ಬಾಲ್ವಿಂದರ್ ಸಿಂಗ್ ಫಿದ್ದ
ಕಬಡ್ಡಿ
ಜನನಮಾರ್ಚ್ ೨೩, ೧೯೫೬
ಕಪರ್ತುಲ ತಾಲ್ಲೂಕು, ತಂಡಿ ಗ್ರಾಮ, ಪಂಜಾಬ್ ಜಿಲ್ಲೆ
ಕಾವ್ಯನಾಮಕ್ರೌನ್ಲೆಸ್ ಕಿಂಗ್ ಆಫ್ ಕಬಡ್ಡಿ, ರಸ್ಟ್ಮ್-ಇ-ಕಬಡ್ಡಿ, ಬಕನ್ ಖಿಲಾಡಿ ಮತ್ತು ಕಬಡ್ಡಿ ಸನ್
ವೃತ್ತಿಭಾರತೀಯ ಕಬಡ್ಡಿ ಆಟಗಾರ, ಪಂಜಾಬ್ ಪೋಲೀಸ್ ಅಧೀಕ್ಷಕ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆನಡಾಲಾ ಮತ್ತು ಜಲಂಧರ್ ನಲ್ಲಿನ ಕ್ರೀಡಾ ಕಾಲೇಜು, ಗುರು ನಾನಕ್ ವಿಶ್ವವಿದ್ಯಾನಿಲಯ
ಕಾಲ21ನೆಯ ಶತಮಾನ
ಪ್ರಮುಖ ಪ್ರಶಸ್ತಿ(ಗಳು)ಅರ್ಜುನ ಪ್ರಶಸ್ತಿ

ಬಾಲ್ಯ ಜೀವನ

ಬಾಲ್ವಿಂದರ್‌ರವರು ೪ನೇ ವರ್ಷದಲ್ಲೇ ಕಬಡ್ಡಿ ಆಟವನ್ನು ಪಂಜಾಬ್‌ನ ತಮ್ಮ ತಂಡಿ ಗ್ರಾಮದಲ್ಲಿ ಆಡಲು ಪ್ರಾರಂಭಿಸಿದರು. ಶಾಲಾ ಮತ್ತು ಕಾಲೇಜು ಮಟ್ಟದಲ್ಲಿ ಒಂದೇ ಕೈಯಿಂದ ಆಡಿ ಲೆಕ್ಕವಿಲ್ಲದಷ್ಟು ಪಂದ್ಯಗಳನ್ನು ಗೆದ್ದರು. ಜಮೀನಿನಲ್ಲಿ ಬೆಳೆದು ಬಲವಾದ ದೇಹವನ್ನು ಬೆಳೆಸಿಕೊಂಡು. ಬಾಲ್ಯದಲ್ಲಿ, ಅವರು (ಚಾರ್ ಮಾಜನ್) ಆಗಿದ್ದಾಗ, ಯಾವಾಗಲೂ ಕಬಡ್ಡಿ ಬಗ್ಗೆ ಕನಸು ಕಂಡರು , ಅವರ ಹೃದಯವು ಅತ್ಯುತ್ತಮ ಕಬಡ್ಡಿ ಆಟಗಾರನಾಗಬೇಕೆಂದು ಬಯಸಿತ್ತು. ಅವರಿಗೆ ದೈತ್ಯವಾದ ಶರೀರವಿತ್ತು, ನಂತರ ಆಟಗಾರನಾದರು. ಅವರ ತರಬೇತುದಾರ ಹೆಸರು ಸರ್ವಾನ್ ಸಿಂಗ್ ರಾಮಿಲ್ಡಿ.

ವೃತ್ತಿ ಜೀವನ

ಫಿದ್ದರವರ ಕಬಡ್ಡಿಯ ಮೊದಲ ಪಂದ್ಯಾವಳಿಯ ಸಮಯದಲ್ಲಿ, ಪಂಜಾಬ್ ರಾಜ್ಯ ಕಬಡ್ಡಿ ಪಂದ್ಯಾವಳಿ ಅವರಿಗೆ ಆಡಲು ಅವಕಾಶ ನೀಡಿರಲಿಲ್ಲ, ಆದರೆ ಫೈನಲ್‌ನಲ್ಲಿ ಅವರ ತರಬೇತುದಾರ ಕೆಲವು ದಾಖಲಾತಿಯ ಕಾರಣಕ್ಕಾಗಿ ಆಡಲು ಅವಕಾಶ ಮಾಡಿಕೊಟ್ಟರು.ಅವರು ತಮ್ಮ ಮೊದಲ ರಾಷ್ಟ್ರೀಯ ಮಟ್ಟದ ಆಟವನ್ನು ೧೯೭೩ರಲ್ಲಿ ಪಂಜಾಬ್ ಸ್ಕೂಲ್ ಅನ್ನು ಇಂದೋರ್ ಸ್ಕೂಲ್‍ನ ನ್ಯಾಷನಲ್ ಗೇಮ್ಸ್‌ನಲ್ಲಿ ಪ್ರತಿನಿಧಿಸುವ ಮೂಲಕ ಪಂದ್ಯವನ್ನು ಗೆದ್ದಿದ್ದಲ್ಲದೆ ಚಿನ್ನದ ಪದಕವನ್ನು ಪಡೆಯುವ ಮೂಲಕ ಪ್ರಾರಂಭಿಸಿದರು. ಫಿದ್ದರವರು ನಡಾಲಾ ಮತ್ತು ಜಲಂಧರ್‌ನಲ್ಲಿನ ಕ್ರೀಡಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದರು ಮತ್ತು ಅಮೃತಸರದಲ್ಲಿನ ಗುರು ನಾನಕ್ ವಿಶ್ವವಿದ್ಯಾನಿಲಯ ಮತ್ತು ಅದರ ಚಿನ್ನದ ಪದಕದಿಂದ ಅಖಿಲ ಭಾರತ ವಿಶ್ವವಿದ್ಯಾನಿಲಯದ ಕಬಡ್ಡಿ ಚಾಂಪಿಯನ್‌ಷಿಪ್ ಅನ್ನು ಗೆದ್ದರು. ಅವರು ಬಾಲ್ಯದಲ್ಲಿಯೇ ಕಬಡ್ಡಿಯಲ್ಲಿ ತಮ್ಮ ಅವಿಭಾಜ್ಯ ರೂಪವನ್ನು ತಲುಪಿದರು ಮತ್ತು ೧೯೭೭ರಲ್ಲಿ ಇಂಗ್ಲೆಂಡ್‍ನಲ್ಲಿ ವೃತ್ತದ ಶೈಲಿಯ ಕಬಡ್ಡಿ ಆಡಲು ಪ್ರಾಯೋಜಿಸಿದರು. ಇಂಗ್ಲೆಂಡ್‌ನಲ್ಲಿ ನಡೆದ ಮೊದಲ ಅಧಿವೇಶನದಲ್ಲಿ, ಅವರು ೮ ಪಂದ್ಯಗಳಲ್ಲಿ ೭ ಪಂದ್ಯಗಳನ್ನು ಗೆಲ್ಲಲು ತಮ್ಮ ತಂಡಕ್ಕೆ ಸಹಾಯ ಮಾಡಿದರು. ಈ ಗೆಲುವಿನಿಂದ ಕಬಡ್ಡಿಯ ಮತ್ತೊಂದು ಹಂತದ ಪ್ರದರ್ಶನದ ಯುಗ ಪ್ರಾರಂಭವಾಯಿತು. ೧೯೮೯ರಲ್ಲಿ ಅವರು ಇಸ್ಲಾಮಾಬಾದ್‍ನ ದಕ್ಷಿಣ ಏಷ್ಯಾದ ಫೆಡರೇಶನ್ ಗೇಮ್ಸ್‌ನ ಭಾರತೀಯ ಕಬಡ್ಡಿ ತಂಡದ ನಾಯಕರಾಗಿದ್ದರು, ಅಲ್ಲಿ ಅವರ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿತು, ಅವರನ್ನು ಎಸ್. ಎ. ಎಫ್. ಜಿ.ಯು ಅತ್ಯುತ್ತಮ ಆಟಗಾರ ಎಂದು ಘೋಷಿಸಿತು. ಬಾಲ್ವಿಂದರ್‌ರವರ ಸಾಟಿಯಿಲ್ಲದ ಪ್ರದರ್ಶನವು ಅವರ ಕ್ಲಬ್‌ನಲ್ಲಿ ಅವರನ್ನು ಹೊಂದಲು ಹಲವಾರು ಕ್ಲಬ್‌ಗಳು ಮತ್ತು ಅಸೋಸಿಯೇಷನ್ ​​ನಡುವೆ ಆರೋಗ್ಯಕರ ಪೈಪೋಟಿಗೆ ಕಾರಣವಾಯಿತು. ಇದರಿಂದಾಗಿ ಪ್ರಬಲವಾದ ಒಳಹರಿವು ಮತ್ತು ಬಂಡವಾಳದ ಹರಿವು ಇದಕ್ಕೆ ಕಾರಣವಾಗಿ ಆಟದ ಗುಣಮಟ್ಟವನ್ನು ಹೆಚ್ಚಿಸಿತು.

ಪ್ರಸ್ತುತ ಜೀವನ

೨೫ ವರ್ಷಗಳ ಕಾಲ ವೃತ್ತಿಪರ ಕಬಡ್ಡಿ ಆಡಿದ ನಂತರ, ಈ ದಂತಕಥೆ ೧೯೯೮ರಲ್ಲಿ ಆಟದಿಂದ ನಿವೃತ್ತರಾದರು. ಪ್ರಸ್ತುತ ಅವರು ಜಲಂಧರ್‌ನಲ್ಲಿ ಪಂಜಾಬ್ ಪೋಲೀಸ್ ಅಧೀಕ್ಷಕರಾಗಿ ಪೋಸ್ಟ್ ಮಾಡಲಾಗಿದ್ದು ಮತ್ತು ಹೊಸ ಪೀಳಿಗೆಯ ಕಬಡ್ಡಿ ಆಟಗಾರರಿಗೆ ತರಬೇತಿಯನ್ನು ನೀಡುವ ಮೂಲಕ ಕಬಡ್ಡಿಗೆ ಸಕ್ರಿಯವಾಗಿ ಉತ್ತೇಜನ ನೀಡುತ್ತಿದ್ದಾರೆ. ಅವರು ಆಲ್ ಇಂಡಿಯಾ ಕಬಡ್ಡಿ ಫೆಡರೇಷನ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಪ್ರಶಸ್ತಿಗಳು

  1. ೧೯೯೯ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉಲ್ಲೇಖಗಳು

Tags:

ಬಾಲ್ವಿಂದರ್ ಸಿಂಗ್ ಫಿದ್ದ ಬಾಲ್ಯ ಜೀವನಬಾಲ್ವಿಂದರ್ ಸಿಂಗ್ ಫಿದ್ದ ವೃತ್ತಿ ಜೀವನಬಾಲ್ವಿಂದರ್ ಸಿಂಗ್ ಫಿದ್ದ ಪ್ರಸ್ತುತ ಜೀವನಬಾಲ್ವಿಂದರ್ ಸಿಂಗ್ ಫಿದ್ದ ಪ್ರಶಸ್ತಿಗಳುಬಾಲ್ವಿಂದರ್ ಸಿಂಗ್ ಫಿದ್ದ ಉಲ್ಲೇಖಗಳುಬಾಲ್ವಿಂದರ್ ಸಿಂಗ್ ಫಿದ್ದ

🔥 Trending searches on Wiki ಕನ್ನಡ:

ಹಾಸನಮಾನಸಿಕ ಆರೋಗ್ಯಮಾನವ ಅಭಿವೃದ್ಧಿ ಸೂಚ್ಯಂಕಮಂಗಳೂರುಮಡಿಕೇರಿಕೃಷ್ಣರಾಜನಗರಶಿವರಾಮ ಕಾರಂತಕಂಸಾಳೆಟಿಪ್ಪು ಸುಲ್ತಾನ್ವ್ಯಾಪಾರಸಂಶೋಧನೆಕರ್ನಾಟಕದ ಅಣೆಕಟ್ಟುಗಳುಚಿಂತಾಮಣಿಒಕ್ಕಲಿಗಕರ್ನಾಟಕ ಲೋಕಾಯುಕ್ತಹಸ್ತ ಮೈಥುನಮಾಸ್ಕೋಸೂರ್ಯ (ದೇವ)ಸಾಲ್ಮನ್‌ಜಾಪತ್ರೆನಾಯಕ (ಜಾತಿ) ವಾಲ್ಮೀಕಿಬೆಂಕಿಮಂತ್ರಾಲಯಲಕ್ಷ್ಮೀಶಸೂರ್ಯವ್ಯೂಹದ ಗ್ರಹಗಳುಒಂದನೆಯ ಮಹಾಯುದ್ಧಪರಿಣಾಮಕನ್ನಡ ವ್ಯಾಕರಣಸೀತಾ ರಾಮರಾಜಕೀಯ ವಿಜ್ಞಾನಕೃಷ್ಣಾ ನದಿಜಾತ್ಯತೀತತೆರೈತ ಚಳುವಳಿಸಂವತ್ಸರಗಳುಅ.ನ.ಕೃಷ್ಣರಾಯಟೊಮೇಟೊಭಾರತದ ರಾಷ್ಟ್ರಪತಿಕನ್ನಡ ರಂಗಭೂಮಿಸಮಾಜ ವಿಜ್ಞಾನವೇದವ್ಯಾಸಅಷ್ಟ ಮಠಗಳುಊಳಿಗಮಾನ ಪದ್ಧತಿಕಾಮಸೂತ್ರಧಾರವಾಡಕನ್ನಡ ಛಂದಸ್ಸುಕರಗಪ್ರಬಂಧಹಂಪೆಕೈವಾರ ತಾತಯ್ಯ ಯೋಗಿನಾರೇಯಣರುಸಂಗ್ಯಾ ಬಾಳ್ಯಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕ್ರೀಡೆಗಳುರಾಮ ಮಂದಿರ, ಅಯೋಧ್ಯೆರಕ್ತದೊತ್ತಡಗ್ರಹಕುಂಡಲಿಮಂಟೇಸ್ವಾಮಿಭಾಷೆಸ್ವರಾಜ್ಯಸ್ವಾಮಿ ವಿವೇಕಾನಂದಸಾಮಾಜಿಕ ಸಮಸ್ಯೆಗಳುಸುದೀಪ್ಎಚ್.ಎಸ್.ಶಿವಪ್ರಕಾಶ್ಕೃಷಿಹಾವಿನ ಹೆಡೆಮಾದರ ಚೆನ್ನಯ್ಯನರೇಂದ್ರ ಮೋದಿಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಫೇಸ್‌ಬುಕ್‌ಶಾತವಾಹನರುಕನ್ನಡ ಚಿತ್ರರಂಗಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮಾರ್ಕ್ಸ್‌ವಾದಸಂಸ್ಕಾರಭಾರತದ ಭೌಗೋಳಿಕತೆಅಸಹಕಾರ ಚಳುವಳಿಚಂದ್ರಶೇಖರ ಕಂಬಾರಗಾಂಧಿ- ಇರ್ವಿನ್ ಒಪ್ಪಂದಚಾಮರಾಜನಗರಮಧುಮೇಹ🡆 More