ಬಿಡುವು

ಬಿಡುವು ಶಬ್ದವನ್ನು ಹಲವುವೇಳೆ ಅನುಭವದ ಗುಣಮಟ್ಟ ಅಥವಾ ಪುರುಸೊತ್ತಿನ ಸಮಯ ಎಂದು ವ್ಯಾಖ್ಯಾನಿಸಲಾಗಿದೆ.

ಪುರುಸೊತ್ತಿನ ಸಮಯವೆಂದರೆ ವ್ಯಾಪಾರ, ಕೆಲಸ, ಕೆಲಸದ ಹುಡುಕಾಟ, ಮನೆಗೆಲಸ, ಮತ್ತು ಶಿಕ್ಷಣ, ಜೊತೆಗೆ ನಿದ್ದೆ ಮತ್ತು ತಿನ್ನಾಟದಂತಹ ಅಗತ್ಯ ಚಟುವಟಿಕೆಗಳಿಂದ ದೂರ ಕಳೆಯಲಾದ ಸಮಯ. ಸಂಶೋಧನೆಯ ದೃಷ್ಟಿಯಿಂದ, ಈ ವಿಧಾನವು ಕಾಲ ಮತ್ತು ಸಮಯದ ಕುರಿತು ಅಳೆಯಬಹುದಾದ ಮತ್ತು ಹೋಲಿಸಬಹುದಾದ ಅನುಕೂಲಗಳನ್ನು ಹೊಂದಿದೆ.

ಬಿಡುವು
ಸಾರ್ವಜನಿಕ ಉದ್ಯಾನಗಳನ್ನು ಮನರಂಜನೆ, ಬಿಡುವು ಮತ್ತು ಕ್ರೀಡೆಗಾಗಿ ಮೀಸಲಿಡಲಾಗುತ್ತದೆ

ಅನುಭವವಾಗಿ ಬಿಡುವು ಸಾಮಾನ್ಯವಾಗಿ ಗ್ರಹಿಸಿದ ಸ್ವಾತಂತ್ರ್ಯ ಮತ್ತು ಆಯ್ಕೆಯ ಆಯಾಮಗಳಿಗೆ ಪ್ರಾಧಾನ್ಯನೀಡುತ್ತದೆ. ಇದನ್ನು ಅನುಭವ ಮತ್ತು ಒಳಗೊಳ್ಳುವಿಕೆಯ ಗುಣಮಟ್ಟಕ್ಕಾಗಿ ಮಾಡಲಾಗುತ್ತದೆ. ಮನರಂಜನೆ ಬಿಡುವಿನಿಂದ ಭಿನ್ನವಾಗಿದೆ, ಹೇಗೆಂದರೆ ಮನರಂಜನೆಯು ಚಟುವಟಿಕಾ ಸಂದರ್ಭಗಳಲ್ಲಿ ಬಿಡುವಿನ ಅನುಭವವನ್ನು ಒಳಗೊಳ್ಳುವ ಒಂದು ಉದ್ದೇಶಪೂರ್ವಕ ಚಟುವಟಿಕೆ.

ಬಿಡುವು ಮತ್ತು ತಪ್ಪಿಸಲಾಗದ ಚಟುವಟಿಕೆಗಳ ನಡುವಿನ ವ್ಯತ್ಯಾಸ ಕಟ್ಟುನಿಟ್ಟಾಗಿ ವ್ಯಾಖ್ಯಾನಿಸಲಾದದ್ದೇನಲ್ಲ, ಉದಾ. ಕೆಲವೊಮ್ಮೆ ಜನರು ಕೆಲಸ-ಉದ್ದೇಶಿತ ಕಾರ್ಯಗಳನ್ನು ಸಂತೋಷಕ್ಕಾಗಿ ಜೊತೆಗೆ ದೀರ್ಘಾವಧಿಯ ಉಪಯುಕ್ತತೆಗಾಗಿ ಮಾಡುತ್ತಾರೆ. ಖಂಡಿತವಾಗಿ ಬಹುತೇಕ ಜನರ ಬಿಡುವಿನ ಚಟುವಟಿಕೆಗಳು ಸಂಪೂರ್ಣವಾಗಿ ಮುಕ್ತ ಆಯ್ಕೆಯಾಗಿರುವುದಿಲ್ಲ ಮತ್ತು ಸಾಮಾಜಿಕ ಒತ್ತಡಗಳಿಂದ ನಿರ್ಬಂಧಿತವಾಗಿರಬಹುದು, ಉದಾ. ನೆರೆಹೊರೆಯ ತೋಟಗಳ ಗುಣಮಟ್ಟಕ್ಕೆ ಸರಿಸಮನಾಗುವ ಅಗತ್ಯದಿಂದ ಜನರು ತೋಟದ ಕೆಲಸದಲ್ಲಿ ಕಾಲ ಕಳೆಯುವುದಕ್ಕೆ ಅಥವಾ ಸಾಮಾಜಿಕ ಒತ್ತಡಗಳ ಕಾರಣದಿಂದ ಪಾರ್ಟಿಗಳಿಗೆ ಹೋಗುವುದಕ್ಕೆ ಒತ್ತಾಯಕ್ಕೊಳಪಟ್ಟಿರಬಹುದು.

ಸಾಮಾಜಿಕ ಬಿಡುವು ಒಂದು ಸಂಬಂಧಿತ ಪರಿಕಲ್ಪನೆಯಾಗಿದೆ. ಇದು ಸಾಮಾಜಿಕ ಸನ್ನಿವೇಶದಲ್ಲಿ ಬಿಡುವಿನ ಚಟುವಟಿಕೆಗಳನ್ನು ಒಳಗೊಳ್ಳುತ್ತದೆ, ಉದಾಹರಣೆಗೆ ಪಠ್ಯೇತರ ಚಟುವಟಿಕೆಗಳು, ಕ್ರೀಡೆ, ಕ್ಲಬ್. ಕುಟುಂಬದವರೊಡನೆ ಬಿಡುವು ಮತ್ತೊಂದು ಸಂಬಂಧಿತ ಪರಿಕಲ್ಪನೆಯಾಗಿದೆ. ಇತರರೊಂದಿಗಿನ ಸಂಬಂಧಗಳು ಸಾಮಾನ್ಯವಾಗಿ ತೃಪ್ತಿ ಮತ್ತು ಆಯ್ಕೆ ಎರಡರಲ್ಲೂ ಪ್ರಮುಖ ಅಂಶವಾಗಿರುತ್ತವೆ.

ಬಿಡುವಿನ ಚಟುವಟಿಕೆಗಳು ತೀರಾ ಅನೌಪಚಾರಿಕ ಹಾಗೂ ಸಾಂದರ್ಭಿಕದಿಂದ ಹಿಡಿದು ತೀರಾ ಸಂಘಟಿತ ಮತ್ತು ದೀರ್ಘಾವಧಿಯ ಚಟುವಟಿಕೆಗಳವರೆಗೆ ವಿಸ್ತರಿಸುತ್ತವೆ. ಹವ್ಯಾಸಗಳು ಬಿಡುವಿನ ಚಟುವಟಿಕೆಗಳ ಒಂದು ಗಮನಾರ್ಹ ಉಪವರ್ಗವಾಗಿವೆ. ಹವ್ಯಾಸಗಳನ್ನು ವೈಯಕ್ತಿಕ ತೃಪ್ತಿಗಾಗಿ ಕೈಗೊಳ್ಳಲಾಗುತ್ತದೆ, ಸಾಮಾನ್ಯವಾಗಿ ನಿಯಮಿತವಾಗಿ. ಕೌಶಲ್ಯ ಅಭಿವೃದ್ಧಿ ಅಥವಾ ಗುರುತಿಸಲ್ಪಟ್ಟ ಸಾಧನೆಯ ಮೂಲಕ ಇವುಗಳಿಂದ ತೃಪ್ತಿ ಸಿಗುತ್ತದೆ. ಹವ್ಯಾಸಗಳ ಪಟ್ಟಿ ಸಮಾಜ ಬದಲಾದಂತೆ ಸದಾ ಬದಲಾಗುತ್ತಿವೆ.

ಉಲ್ಲೇಖಗಳು

Tags:

ಉದ್ಯೋಗಶಿಕ್ಷಣಸಮಯ

🔥 Trending searches on Wiki ಕನ್ನಡ:

ಪೂರ್ಣಚಂದ್ರ ತೇಜಸ್ವಿಭೌಗೋಳಿಕ ಲಕ್ಷಣಗಳುಅಕ್ಬರ್ಭತ್ತರೆವರೆಂಡ್ ಎಫ್ ಕಿಟ್ಟೆಲ್ಶುಭ ಶುಕ್ರವಾರಆಸ್ಟ್ರೇಲಿಯಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಗ್ರಹಕುಂಡಲಿ2017ರ ಕನ್ನಡ ಚಿತ್ರಗಳ ಪಟ್ಟಿಏಡ್ಸ್ ರೋಗಮೂಲವ್ಯಾಧಿಶಬ್ದಕಾವ್ಯಮೀಮಾಂಸೆಏಷ್ಯನ್ ಕ್ರೀಡಾಕೂಟಶಕ್ತಿತ್ರಿಪುರಾದ ಜಾನಪದ ನೃತ್ಯಗಳುಇಮ್ಮಡಿ ಪುಲಕೇಶಿಮದಕರಿ ನಾಯಕವಿಕಿಪೀಡಿಯವರ್ಣತಂತು (ಕ್ರೋಮೋಸೋಮ್)ಪು. ತಿ. ನರಸಿಂಹಾಚಾರ್ಕಳಿಂಗ ಯುದ್ಧಕರ್ನಾಟಕದ ನದಿಗಳುಗೋವಿಂದ III (ರಾಷ್ಟ್ರಕೂಟ)ಮೊದಲನೇ ಅಮೋಘವರ್ಷಬಿ. ಆರ್. ಅಂಬೇಡ್ಕರ್ಪರಮಾಣುಟಿಪ್ಪಣಿಭಾರತದ ಸರ್ವೋಚ್ಛ ನ್ಯಾಯಾಲಯನರರೋಗ(Neuropathy)ಜಶ್ತ್ವ ಸಂಧಿಸೋನಾರ್ಕನ್ನಡದಲ್ಲಿ ಸಣ್ಣ ಕಥೆಗಳುಬಳ್ಳಾರಿಅಂತಾರಾಷ್ಟ್ರೀಯ ಸಂಬಂಧಗಳುಚಂಡಮಾರುತಮಹಾವೀರಹರಪ್ಪಭರತ-ಬಾಹುಬಲಿಇಂದಿರಾ ಗಾಂಧಿಬೆಂಗಳೂರುಪರಿಮಾಣ ವಾಚಕಗಳುಮೌರ್ಯ ಸಾಮ್ರಾಜ್ಯಜಾಗತಿಕ ತಾಪಮಾನ ಏರಿಕೆಜ್ಞಾನಪೀಠ ಪ್ರಶಸ್ತಿಧೂಮಕೇತುಕರ್ನಾಟಕ ಹೈ ಕೋರ್ಟ್ಚಾಲುಕ್ಯಶಂಖಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಪಂಚ ವಾರ್ಷಿಕ ಯೋಜನೆಗಳುನೈಸರ್ಗಿಕ ವಿಕೋಪಭಾರತ ಸಂವಿಧಾನದ ಪೀಠಿಕೆಆಯ್ದಕ್ಕಿ ಲಕ್ಕಮ್ಮವಾಟ್ಸ್ ಆಪ್ ಮೆಸ್ಸೆಂಜರ್ವಿಸ್ಕೊನ್‌ಸಿನ್ಧರ್ಮ (ಭಾರತೀಯ ಪರಿಕಲ್ಪನೆ)ಮಹೇಂದ್ರ ಸಿಂಗ್ ಧೋನಿದೂರದರ್ಶನಆಧುನಿಕತಾವಾದಮೊಘಲ್ ಸಾಮ್ರಾಜ್ಯಪತ್ನಿಟಿಪ್ಪು ಸುಲ್ತಾನ್ಓಂ ನಮಃ ಶಿವಾಯಕೇಶಿರಾಜಶ್ರೀಕೃಷ್ಣದೇವರಾಯಸುದೀಪ್ಗೋಪಾಲಕೃಷ್ಣ ಅಡಿಗರವೀಂದ್ರನಾಥ ಠಾಗೋರ್ಭಾರತದ ಸ್ವಾತಂತ್ರ್ಯ ಚಳುವಳಿಸಿಂಧೂತಟದ ನಾಗರೀಕತೆಟಿ.ಪಿ.ಕೈಲಾಸಂಶೀತಲ ಸಮರಉಡುಪಿ ಜಿಲ್ಲೆಬಿ. ಎಂ. ಶ್ರೀಕಂಠಯ್ಯಭಯೋತ್ಪಾದನೆಫುಟ್ ಬಾಲ್🡆 More