ಪತಂಜಲಿ ಆಯುರ್ವೇದ

ಪತಂಜಲಿ ಆಯುರ್ವೇದ ನಿಯಮಿತ ಒಂದು ಭಾರತೀಯ ಎಫ್ಎಮ್‍ಸಿಜಿ (ವೇಗವಾಗಿ ಚಲಿಸುವ ಗ್ರಾಹಕ ಸರಕುಗಳು) ಕಂಪನಿ.

ತಯಾರಿಕಾ ಘಟಕಗಳು ಮತ್ತು ಪ್ರಧಾನ ಕಚೇರಿ ಹರಿದ್ವಾರದ ಕೈಗಾರಿಕಾ ಪ್ರದೇಶದಲ್ಲಿ ನೆಲೆಸಿದೆ. ಇದರ ನೊಂದಾಯಿತ ಕಚೇರಿ ದೆಹಲಿಯಲ್ಲಿದೆ. ಈ ಕಂಪನಿ ಖನಿಜ ಮತ್ತು ಗಿಡಮೂಲಿಕೆ ಉತ್ಪನ್ನಗಳನ್ನು ತಯಾರಿಸುತ್ತದೆ. ಅದು ನೇಪಾಳದಲ್ಲೂ ತಯಾರಿಕಾ ಘಟಕಗಳನ್ನು ಹೊಂದಿದೆ. ಸಿಎಲ್ಎಸ್ಎ ಮತ್ತು ಎಚ್ಎಸ್‍ಬಿಸಿ ಪ್ರಕಾರ, ಪತಂಜಲಿ ಭಾರತದಲ್ಲಿನ ಅತ್ಯಂತ ತ್ವರಿತ ಬೆಳವಣಿಗೆಯ ಎಫ್ಎಮ್‍ಸಿಜಿ ಕಂಪನಿ. ಇದರ ಮಾರುಕಟ್ಟೆ ಮೌಲ್ಯ ರೂ ೩೦೦೦ ಕೋಟಿ ಮತ್ತು ಕೆಲವರು ೨೦೧೫-೧೬ರ ಆರ್ಥಿಕ ವರ್ಷಕ್ಕೆ ೫೦೦೦ ಕೋಟಿ ರೂ. ಆದಾಯ ಎಂದು ಅಂದಾಜಿಸುತ್ತಾರೆ. ೨೦೧೮ರಲ್ಲಿ ಭಾರತದ ವಿಶ್ವಾಸಾರ್ಹ ಬ್ರ್ಯಾಂಡ್ ಪಟ್ಟಿಯಲ್ಲಿ ೧೩ನೇ ಸ್ಥಾನ ಪಡೆದಿದೆ ಮತ್ತು ಎಫ್ಎಮ್‍ಸಿಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಪತಂಜಲಿ ಉತ್ಪನ್ನಗಳಿಂದ ಬರುವ ಲಾಭ ಧರ್ಮಾರ್ಥ ಸಂಸ್ಥೆಗೆ ಹೋಗುತ್ತದೆ ಎಂದು ತಮ್ಮ ಸಂದರ್ಶನದಲ್ಲಿ ಬಾಬಾ ರಾಮ್ ದೇವ್ ಹೇಳಿದ್ದಾರೆ.

ಸ್ಥಾಪನೆ

೨೦೦೬ರಲ್ಲಿ ಬಾಬಾ ರಾಮ್ ದೇವ್ ಬಾಲಕೃಷ್ಣರ ಜೊತೆಗೆ ಪತಂಜಲಿ ಆಯುರ್ವೇದ ನಿಯಮಿತವನ್ನು ಸ್ಥಾಪಿಸಿದರು. ಆಯುರ್ವೇದ ವಿಜ್ಞಾನವನ್ನು ಆಧುನಿಕ ತಂತ್ರಜ್ಞಾನ ಮತ್ತು ಪ್ರಾಚೀನ ಜ್ಞಾನಕ್ಕೆ ಅನುಗುಣವಾಗಿ ಸಮನ್ವಯಗೊಳಿಸುವುದು ಇದರ ಉದ್ದೇಶ.

ಉತ್ಪಾದನೆ

ಹರಿದ್ವಾರದಲ್ಲಿರುವ ಪತಂಜಲಿ ಆಹಾರ ಮತ್ತು ಗಿಡಮೂಲಿಕೆ ಉದ್ಯಾನವನ ಪತಂಜಲಿ ಆಯುರ್ವೇದ ನಿರ್ವಹಿಸುತ್ತಿರುವ ಮುಖ್ಯ ಉತ್ಪಾದನ ಕೇಂದ್ರವಾಗಿದೆ. ಈ ಕಂಪನಿಯು ೩೫,೦೦೦ ಕೋಟಿ ಉತ್ಪಾದಾನ ಸಾಮರ್ಥ್ಯವನ್ನು ಹೊಂದಿದೆ. ತನ್ನ ಉತ್ಪಾದಾನ ಸಾಮರ್ಥ್ಯವನ್ನು ಹೊಸ ಉತ್ಪಾದಾನ ಘಟಕಗಳ ಮೂಲಕ ವಿಸ್ತರಿಸುವ ಪಕ್ರಿಯೆಯಲ್ಲಿದೆ. ಭಾರತ ಮತ್ತು ನೇಪಾಳದಲ್ಲಿ ಮತ್ತಷ್ಟು ಘಟಕಗಳನ್ನು ಸ್ಥಾಪಿಸುವ ಯೋಜನೆಯಲ್ಲಿದೆ.

ಉತ್ಪನ್ನಗಳು

ಪತಂಜಲಿ ಆಯುರ್ವೇದ ಪರ್ಸನಲ್ ಕೇರ್ ಮತ್ತು ಆಹಾರ ವರ್ಗಗಳಲ್ಲಿ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಕಂಪನಿಯು ೪೫ ಬಗೆಯ ಸೌಂದರ್ಯವರ್ಧಕ ಉತ್ಪನ್ನ ಮತ್ತು ೩೦ ಬಗೆಯ ಆಹಾರ ಉತ್ಪನ್ನಗಳನ್ನು ಒಳಗೊಂಡೆತಡ ೨೫೦೦ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತದೆ. ಪತಂಜಲಿ ಸೌಂದರ್ಯ ಮತ್ತು ಶಿಶು ಉತ್ಪನ್ನಗಳನ್ನು ಸಹ ಪ್ರಾರಂಭಿಸಿದೆ. ನೆಗಡಿ ಮತ್ತು ದೀರ್ಘಕಾಲದ ಪಾರ್ಶ್ವವಾಯುವರೆಗೆ ಅನೇಕ ಕಾಯಿಲೆಗಳು ಮತ್ತು ಶಾರೀರಿಕ ಪರಿಸ್ಥಿತಿಗಳನ್ನು ಗುಣಪಡಿಸಲು ಪತಂಜಲಿ ಆಯುರ್ವೇದಿಕ ತಯಾರಿಕಾ ವಿಭಾಗವು ೩೦೦ಕ್ಕಿಂತ ಹೆಚ್ಚು ಔಷಧಿಗಳನ್ನು ಹೊಂದಿದೆ.೨೦೧೬ರಲ್ಲಿ ಪತಂಜಲಿ ಜವಳಿ ಉತ್ಪಾದಾನ ಕೇಂದ್ರಕ್ಕೆ ಪ್ರವೇಶಿಸುವುದಾಗಿ ಘೋಷಿಸಿದೆ. ಕಂಪನಿಯು ಕುರ್ತಾ, ಪೈಜಾಮದಂತಹ ಸಾಂಪ್ರದಾಯಿಕ ಬಟ್ಟೆಗಳನ್ನು ಮಾತ್ರವಲ್ಲದೆ ಜೀನ್ಸ್‌ನಂತಹ ಜನಪ್ರಿಯ ಪಾಶ್ಚಾತ್ಯ ಬಟ್ಟೆಗಳನ್ನೂ ತಯಾರಿಸುತ್ತದೆ ಎಂದು ಹೇಳಿದೆ.

ಮಾರಾಟ ಮತ್ತು ವಿತರಣೆ

ಮೇ ೨೦೧೬ರ ಪ್ರಕಾರ ಪತಂಜಲಿ ಆಯುರ್ವೇದ ಸುಮಾರು ೪೭೦೦ ಮಾರಾಟ ಮಳಿಗೆಗಳ ಮೂಲಕ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಪತಂಜಲಿ ತನ್ನ ಉತ್ಪನ್ನಗಳನ್ನು ಆನ್‌ಲೈನ್‌ ಮೂಲಕ ಕೂಡ ಮಾರಾಟ ಮಾಡುತ್ತದೆ. ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಲ್ಲು ತನ್ನ ಮಳಿಗೆಗಳನ್ನು ತೆರೆಯಲು ಯೋಚಿಸುತ್ತಿದೆ.ಪತಂಜಲಿ ಆಯುರ್ವೇದವು ಪಿಟ್ಟಿ ಗ್ರೂಪ್ ಮತ್ತು ಕಿಶೋರ್ ಬಿಯಾನಿಯ ಫ್ಯೂಚರ್ ಗ್ರೂಪ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಫ್ಯೂಚರ್ ಗ್ರೂಪ್ ನೊಂದಿಗೆ ಒಪ್ಪಂದದ ಪ್ರಕಾರ ಪತಂಜಲಿಯ ಎಲ್ಲಾ ಗ್ರಾಹಕ ಉತ್ಪನ್ನಗಳು ಫ್ಯೂಚರ್ ಗ್ರೂಪ್ ಮಳಿಗೆಗಳಲ್ಲಿ ಲಭ್ಯವಿರಯತ್ತದೆ. ಪತಂಜಲಿ ಆಯುರ್ವೇದ ಉತ್ಪನ್ನಗಳು ಆನ್ ಲೈನ್ ಚಾನೆಲ್ ಗಳ ಹೊರತಾಗಿ ಹೈಪರ್ ಸಿಟಿ ಮತ್ತು ಸ್ಟಾರ್ ಬಜಾರ್ ಸೇರಿದಂತೆ ಆಧುನಿಕ ಮಳಿಗೆಗಳಲ್ಲಿ ಲಭ್ಯವಿದೆ. ಫ್ಯೂಚರ್ ಗ್ರೂಪ್ ಪ್ರತಿ ತಿಂಗಳು ಸುಮಾರು ೩೦ ಕೋಟಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.

ಉಲ್ಲೇಖಗಳು

Tags:

ಪತಂಜಲಿ ಆಯುರ್ವೇದ ಸ್ಥಾಪನೆಪತಂಜಲಿ ಆಯುರ್ವೇದ ಉತ್ಪಾದನೆಪತಂಜಲಿ ಆಯುರ್ವೇದ ಉತ್ಪನ್ನಗಳುಪತಂಜಲಿ ಆಯುರ್ವೇದ ಮಾರಾಟ ಮತ್ತು ವಿತರಣೆಪತಂಜಲಿ ಆಯುರ್ವೇದ ಉಲ್ಲೇಖಗಳುಪತಂಜಲಿ ಆಯುರ್ವೇದಖನಿಜದೆಹಲಿನೇಪಾಳಬಾಬಾ ರಾಮ್ ದೇವ್ಭಾರತಹರಿದ್ವಾರ

🔥 Trending searches on Wiki ಕನ್ನಡ:

ಶೈಕ್ಷಣಿಕ ಮನೋವಿಜ್ಞಾನಭಾರತೀಯ ಸಂಸ್ಕೃತಿಓಂಪಟ್ಟದಕಲ್ಲುಗುರು (ಗ್ರಹ)ಶೃಂಗೇರಿವಸುಧೇಂದ್ರಚಂಪೂಚಂದ್ರಶೇಖರ ವೆಂಕಟರಾಮನ್ರಾಷ್ಟ್ರೀಯ ಸೇವಾ ಯೋಜನೆರಾಷ್ಟ್ರೀಯ ಉತ್ಪನ್ನಗೋಕರ್ಣಕೋಟಿ ಚೆನ್ನಯಶರಭನಾಗರೀಕತೆಸರ್ವೆಪಲ್ಲಿ ರಾಧಾಕೃಷ್ಣನ್ರವಿ ಡಿ. ಚನ್ನಣ್ಣನವರ್ವಿಶ್ವ ಕನ್ನಡ ಸಮ್ಮೇಳನಕರ್ನಾಟಕನಾಟಕಬಿರಿಯಾನಿಪದಬಂಧಹದ್ದುಭರತ-ಬಾಹುಬಲಿಕರ್ನಾಟಕದ ಶಾಸನಗಳುಪರಶುರಾಮಸಮಾಸಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆವಚನಕಾರರ ಅಂಕಿತ ನಾಮಗಳುಕೃಷ್ಣಮಹಾಭಾರತಮೊದಲನೆಯ ಕೆಂಪೇಗೌಡಯುಗಾದಿಚಾಣಕ್ಯಭಾರತೀಯ ರೈಲ್ವೆಬಾದಾಮಿಶಬರಿಐಹೊಳೆಇಂಡಿ ವಿಧಾನಸಭಾ ಕ್ಷೇತ್ರದರ್ಶನ್ ತೂಗುದೀಪ್ಬೆಳಗಾವಿಅನಸುಯ ಸಾರಾಭಾಯ್ಮಳೆಗಾಲಹಂಸಲೇಖಗೋಲ ಗುಮ್ಮಟಬಾಲ್ಯ ವಿವಾಹಡಿ.ವಿ.ಗುಂಡಪ್ಪಟೆನಿಸ್ ಕೃಷ್ಣತುಂಬೆಗಿಡಆಶೀರ್ವಾದಇಂಡಿಯನ್ ಪ್ರೀಮಿಯರ್ ಲೀಗ್ರೋಹಿತ್ ಶರ್ಮಾರಾಮಾನುಜಅಮಿತ್ ಶಾಬಾಳೆ ಹಣ್ಣುವೇದವ್ಯಾಸಭಾರತದ ಪ್ರಧಾನ ಮಂತ್ರಿಗಳ ಪಟ್ಟಿಬಸವರಾಜ ಬೊಮ್ಮಾಯಿರಾಧಿಕಾ ಕುಮಾರಸ್ವಾಮಿಗರ್ಭಕಂಠದ ಕ್ಯಾನ್ಸರ್‌ಅದ್ವೈತಶೃಂಗೇರಿ ಶಾರದಾಪೀಠಖ್ಯಾತ ಕರ್ನಾಟಕ ವೃತ್ತದಲಿತಬಿ. ಆರ್. ಅಂಬೇಡ್ಕರ್ಕರ್ನಾಟಕ ಐತಿಹಾಸಿಕ ಸ್ಥಳಗಳುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ್ವಿರುಕ್ತಿಭಾರತದ ಬಂದರುಗಳುಕ್ರೀಡೆಗಳುಕ್ರಿಸ್ತ ಶಕಚೋಳ ವಂಶನೊಬೆಲ್ ಪ್ರಶಸ್ತಿಜಯಮಾಲಾನಾಗಠಾಣ ವಿಧಾನಸಭಾ ಕ್ಷೇತ್ರಶನಿಕಲ್ಯಾಣ ಕರ್ನಾಟಕವಿಕ್ರಮಾರ್ಜುನ ವಿಜಯ🡆 More