ನಟ್ಸುಮೆ ಸೊಸೆಕಿ

ನಟ್ಸುಮೆ ಸೊಸೆಕಿ ಫೆಬ್ರವರಿ ೯, ೧೮೬೭ - ಡಿಸೆಂಬರ್‍ ೯, ೧೯೧೬ ಅವರನ್ನು ಆಧುನಿಕ ಜಪಾನಿನ ಅತಿ ಪ್ರಖ್ಯಾತ ಸಾಹಿತಿ ಎನ್ನಬಹುದು.

ನಟ್ಸುಮೆ ಸೊಸೆಕಿ

ಟೋಕಿಯೋ ಇಂಪೀರಿಯಲ್ ವಿಶ್ವವಿದ್ಯಾನಿಲಯದಲ್ಲಿ ವಿಶಿಷ್ಟ ಮನ್ನಣೆಗಳನ್ನು ಪಡೆದು ಪದವೀಧರರಾದ ಮೇಲೆ ಅಧ್ಯಾಪಕ ವೃತ್ತಿ ಕೈಗೊಂಡರು. ಆದರೆ ಬಹು ಬೇಗ ಕೆಲಸಕ್ಕೆ ತಿಲಾಂಜಲಿಯಿತ್ತು, ಆಂಗ್ಲೇಯ ಸಾಹಿತ್ಯದಲ್ಲಿ ಇನ್ನು ಹೆಚ್ಚಿನ ಸಂಶೋಧನೆ ನಡೆಸಲು ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು. ಹತ್ತು ವರ್ಷಗಳ ಹಿಂದೆ ತಾವು ಓದಿದ ವಿಶ್ವವಿದ್ಯಾಲಯದಲ್ಲೇ ಅಧ್ಯಾಪಕರಾಗಲು ಮತ್ತೆ ಜಪಾನಿಗೆ ಮರಳಿದರು. ನಾಲ್ಕು ವರ್ಷಗಳ ನಂತರ ಆ ವೃತ್ತಿಯನ್ನೂ ಬಿಟ್ಟರು. ಆದರೆ ‘ಟೋಕಿಯೊ ಅಸಾಹಿ ಶಂಬನ್’ ಎಂಬ ಸಂಸ್ಥೆಯ ಸಾಹಿತ್ಯವಿಭಾಗದ ಮೇಲ್ವಿಚಾರಕರಾಗಿ ಕೆಲಸ ಮಾಡುವ ಸುಯೋಗ ಒದಗಿತು. ಅವರು ಕಾದಂಬರಿಕಾರರೆಂದು ಹೆಸರು ಪಡೆಯಲು ಪ್ರಾರಂಭವಾದದ್ದು ಇಲ್ಲಿಂದಲೇ. ಅಲ್ಲಿಯ ತನಕ ಅವರೊಬ್ಬ ಕವಿ ಹಾಗು ಲಘು ಪ್ರಬಂಧಗಳ ಲೇಖಕರೆಂದು ಜನತೆಗೆ ಪರಿಚಿತರಾಗಿದ್ದರು. ಕಾಲಕ್ರಮೇಣ ಅವರ ಲೇಖನಿ ಕಾದಂಬರಿಗಳಿಗೆ ಮೀಸಲಾಗುತ್ತ ಬಂತು.

‘ಲಂಡನ್ನಿನ ಶಿಖರ’ (ಟವರ್‍ ಆಫ್ ಲಂಡನ್) ಮತ್ತು ‘ನಾನೊಂದು ಬೆಕ್ಕು’ (ಐ ಆಮ್ ಎ ಕ್ಯಾಟ್) ಎಂಬ ಕೃತಿಗಳ ಪ್ರಕಟನೆಯಿಂದ ಅವರು ಅತ್ಯಲ್ಪ ಕಾಲದಲ್ಲೇ ಕೀರ್ತಿವಂತರಾದರು. ‘ನಾನೊಂದು ಬೆಕ್ಕು’ ಎಂಬ ಕಾದಂಬರಿ ಜನಪ್ರಿಯ ಸಾಹಿತ್ಯ ಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಇದರ ವಿಷಯ ಗಹನವಾಗಿದೆ. ಪೊಫೆಸರೊಬ್ಬರ ಗೃಹಕೃತ್ಯದ ಜೀವಾಳವನ್ನೆಲ್ಲ ಅಲ್ಲಿದ್ದ ಬೆಕ್ಕಿನ ದೃಷ್ಟಿಯಲ್ಲಿ ಚಿತ್ರಿಸಲಾಗಿದೆ. ಕಡೆಯ ಪ್ರಸಂಗದಲ್ಲಿ ಬೆಕ್ಕು ಸತ್ತಾಗ ಓದುಗರು ವಾಸ್ತವವಾಗಿ ಕಣ್ಣೀರು ಸುರಿಸಿದರಂತೆ.

ಉಲ್ಲೇಖನ

Tags:

🔥 Trending searches on Wiki ಕನ್ನಡ:

ದಿ ಡೋರ್ಸ್‌ಸೇನಾ ದಿನ (ಭಾರತ)ರಗಳೆಭೂಮಿಯ ವಾಯುಮಂಡಲಭಗವದ್ಗೀತೆದೇವತಾರ್ಚನ ವಿಧಿಮಾನವನ ಪಚನ ವ್ಯವಸ್ಥೆರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಜಿ.ಎಸ್.ಶಿವರುದ್ರಪ್ಪಆಲಿವ್ವಿರಾಮ ಚಿಹ್ನೆಜೀವಸತ್ವಗಳುತಾಜ್ ಮಹಲ್ಕನ್ನಡ ಛಂದಸ್ಸುಹಣದುಬ್ಬರಕೊಡಗುಕನ್ನಡ ಸಾಹಿತ್ಯಮಲೆನಾಡುಅಮೆರಿಕಕಲಾವಿದಕೆ. ಅಣ್ಣಾಮಲೈವಾಯು ಮಾಲಿನ್ಯಹೋಳಿವಿರೂಪಾಕ್ಷ ದೇವಾಲಯನುಡಿಗಟ್ಟುಪುರಾತತ್ತ್ವ ಶಾಸ್ತ್ರಶಾತವಾಹನರುಮೇರಿ ಕೋಮ್ರಾಷ್ತ್ರೀಯ ಐಕ್ಯತೆಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಉಡುಪಿ ಜಿಲ್ಲೆಪಾರ್ವತಿವಾಲಿಬಾಲ್ದ್ರಾವಿಡ ಭಾಷೆಗಳುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಹಿಂದೂ ಮಾಸಗಳುರಾಮಕೃಷ್ಣ ಪರಮಹಂಸಕೈಗಾರಿಕಾ ಕ್ರಾಂತಿಮಾನವನಲ್ಲಿ ರಕ್ತ ಪರಿಚಲನೆಕಾನೂನುಭಂಗ ಚಳವಳಿಗೃಹರಕ್ಷಕ ದಳಹೆಚ್.ಡಿ.ದೇವೇಗೌಡರಾಜಸ್ಥಾನ್ ರಾಯಲ್ಸ್ಕರ್ನಾಟಕ ಲೋಕಸೇವಾ ಆಯೋಗರಾಮಾಚಾರಿ (ಕನ್ನಡ ಧಾರಾವಾಹಿ)ವಿಜಯನಗರ ಸಾಮ್ರಾಜ್ಯಗರ್ಭಧಾರಣೆಲಕ್ಷ್ಮೀಶಹಣ೧೯೭೧ರ ಭಾರತ-ಪಾಕಿಸ್ತಾನ ಯುದ್ಧಪುತ್ತೂರುಟೈಗರ್ ಪ್ರಭಾಕರ್ಭಾರತೀಯ ಧರ್ಮಗಳುಗೋವಿಂದ ಪೈಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಆರ್ಥಿಕ ಬೆಳೆವಣಿಗೆಶ್ರೀ ರಾಘವೇಂದ್ರ ಸ್ವಾಮಿಗಳುಕೊರೋನಾವೈರಸ್ಗಣೇಶ್ (ನಟ)ಹಳೆಗನ್ನಡಶ್ರವಣಬೆಳಗೊಳಚೆನ್ನಕೇಶವ ದೇವಾಲಯ, ಬೇಲೂರುಇಮ್ಮಡಿ ಪುಲಿಕೇಶಿರಾಷ್ಟ್ರೀಯ ಶಿಕ್ಷಣ ನೀತಿಕಲ್ಯಾಣಿಬಿ.ಎಫ್. ಸ್ಕಿನ್ನರ್ಬೆಂಗಳೂರುಅವರ್ಗೀಯ ವ್ಯಂಜನಭಾರತದ ಜನಸಂಖ್ಯೆಯ ಬೆಳವಣಿಗೆವ್ಯಂಜನಕರ್ನಾಟಕದ ಅಣೆಕಟ್ಟುಗಳುಕರ್ನಾಟಕದ ವಾಸ್ತುಶಿಲ್ಪನೀರುಸಿದ್ದಲಿಂಗಯ್ಯ (ಕವಿ)ಶಿಕ್ಷಣಜಲ ಮಾಲಿನ್ಯಗುರುರಾಜ ಕರಜಗಿಸ್ತನ್ಯಪಾನ🡆 More