ದಕ್ಷ: ದೇವತೆ

ಹಿಂದೂ ದಂತಕಥೆಯ ಪ್ರಕಾರ, ವಾಯವ್ಯದಲ್ಲಿ ವಾಸಿಸುವ ದಕ್ಷನು ಬ್ರಹ್ಮನ ಪುತ್ರರಲ್ಲಿ ಒಬ್ಬನು.

ಬ್ರಹ್ಮನು ಹತ್ತು ಮಾನಸ ಪುತ್ರರನ್ನು ಸೃಷ್ಟಿಸಿದ ನಂತರ, ದಕ್ಷ, ಧರ್ಮ, ಕಾಮದೇವ ಮತ್ತು ಅಗ್ನಿಯರನ್ನು ಅನುಕ್ರಮವಾಗಿ ಬಲ ಹೆಬ್ಬೆರಳು, ಎದೆ, ಹೃದಯ ಮತ್ತು ಹುಬ್ಬುಗಳಿಂದ ಸೃಷ್ಟಿಸಿದನು. ತನ್ನ ಉದಾತ್ತ ಜನ್ಮದ ಜೊತೆಗೆ, ದಕ್ಷನು ಮಹಾನ್ ರಾಜನಾಗಿದ್ದನು. ಚಿತ್ರಗಳು ಅವನನ್ನು ಸ್ಥೂಲವಾದ ದೇಹ, ಚಾಚಿಕೊಂಡಿರುವ ಹೊಟ್ಟೆ, ಹಾಗೂ ಮಾಂಸಲವಾಗಿರುವ ಜೊತೆಗೆ ಕಾಡು ಮೇಕೆಯಂತಹ ಪ್ರಾಣಿಯ ಹಾಗೆ ಸುರುಳಿ ಕೊಂಬುಗಳನ್ನು ಹೊಂದಿರುವ ದುಂಡುದುಂಡಾಗಿರುವ ಮತ್ತು ದಪ್ಪ ಮನುಷ್ಯನನ್ನಾಗಿ ತೋರಿಸುತ್ತವೆ.

ದಕ್ಷ: ದೇವತೆ
ವೀರಭದ್ರನೊಂದಿಗೆ ಟಗರು ಮುಖದ ದಕ್ಷ

ಪುರಾಣಗಳ ಪ್ರಕಾರ, ದಕ್ಷನು ತನ್ನ ಪತ್ನಿ ಪ್ರಸೂತಿಯಿಂದ ೮೯ ಪುತ್ರಿಯರು ಮತ್ತು ತನ್ನ ಪತ್ನಿ ಪಂಚಜನಿಯಿಂದ ಮತ್ತೆ ೧೧೬ ಪುತ್ರಿಯರನ್ನು ಹೊಂದಿದ್ದನು. ಇವರಲ್ಲಿ ಸತಿಯು ಶಿವನನ್ನು, ರತಿ ಕಾಮದೇವನನ್ನು ಮದುವೆಯಾದಳು.

ದಕ್ಷ ಯಜ್ಞವು ಹಿಂದೂ ಧರ್ಮದಲ್ಲಿ ಶಾಕ್ತ ಪಂಥ ಮತ್ತು ಶೈವ ಪಂಥದಂತಹ ಪಂಥಗಳ ಸೃಷ್ಟಿ ಮತ್ತು ಅಭಿವೃದ್ಧಿಯಲ್ಲಿ ಒಂದು ಪ್ರಮುಖ ತಿರುವಾಗಿತ್ತು. ಇದು ಶಕ್ತಿಪೀಠಗಳ 'ಸ್ಥಳ ಪುರಾಣ'ದ ಹಿಂದಿನ ಕಥೆಯಾಗಿದೆ. ದಕ್ಷಿಣ ಏಷ್ಯಾದಾದ್ಯಂತ ೫೧ ಶಕ್ತಿಪೀಠಗಳಿವೆ (ಕೆಲವರು ೧೦೮ ಎಂದು ಹೇಳುತ್ತಾರೆ). ಈ ಕಥೆಯು ದೇವತೆ ಪಾರ್ವತಿಯನ್ನು ಸತಿಯ ಜಾಗದಲ್ಲಿ ದೇವಿಯಾಗಿ ಮಾಡಿತು ಮತ್ತು ಗಣೇಶ ಹಾಗೂ ಕಾರ್ತಿಕೇಯರ ಕಥೆಗೆ ಕಾರಣವಾಯಿತು.

ದಕ್ಷನು ಒಂದು ಬೃಹತ್ ಯಜ್ಞವನ್ನು ಆಯೋಜಿಸಿದನು ಮತ್ತು ಉದ್ದೇಶಪೂರ್ವಕವಾಗಿ ಶಿವ ಮತ್ತು ಸತಿಯರನ್ನು ಕರೆಯಲಿಲ್ಲ. ತಮ್ಮನ್ನು ಆಮಂತ್ರಿಸದ ಕಾರಣ ಶಿವನು ಸತಿಗೆ ಯಜ್ಞಕ್ಕೆ ಹೋಗಬಾರದೆಂದು ಹೇಳಿ ವಿರೋಧಿಸಿದನು. ಹೆತ್ತವರ ಬಂಧವು ಸತಿಯನ್ನು ಸಾಮಾಜಿಕ ಶಿಷ್ಟಾಚಾರ ಮತ್ತು ತನ್ನ ಪತಿಯ ಆಶಯಗಳನ್ನು ನಿರ್ಲಕ್ಷಿಸುವಂತೆ ಮಾಡಿತು. ಸತಿಯು ಕಾರ್ಯಕ್ರಮಕ್ಕೆ ಒಬ್ಬಳೇ ಹೋದಳು. ದಕ್ಷನು ಅವಳ ಮುಖಭಂಗ ಮಾಡಿ ಅತಿಥಿಗಳ ಮುಂದೆ ಅವಮಾನಿಸಿದನು. ಮತ್ತಷ್ಟು ಅವಮಾನವನ್ನು ತಾಳಲಾರದೇ ಸತಿಯು ಯಜ್ಞದ ಅಗ್ನಿಯ ಕಡೆ ಓಡಿ ತನ್ನನ್ನು ಬಲಿ ಕೊಟ್ಟುಕೊಂಡಳು. ಭಯಾನಕ ಘಟನೆಯ ಬಗ್ಗೆ ತಿಳಿದ ಶಿವನು, ಕ್ರೋಧದಲ್ಲಿ ಸ್ವಲ್ಪ ಕೂದಲನ್ನು ಕಿತ್ತು ನೆಲದ ಮೇಲೆ ಅದನ್ನು ಬಡಿದು ವೀರಭದ್ರ ಹಾಗೂ ಭದ್ರಕಾಳಿಯರನ್ನು ಆವಾಹಿಸಿದನು. ವೀರಭದ್ರ ಮತ್ತು ಭೂತಗಣಗಳು ದಕ್ಷಿಣಕ್ಕೆ ನಡೆದು ಎಲ್ಲ ಆವರಣವನ್ನು ನಾಶಮಾಡಿದರು. ದಕ್ಷನ ತಲೆಯನ್ನು ಕಡಿಯಲಾಯಿತು ಮತ್ತು ಕ್ರೋಧಾವೇಶದಲ್ಲಿ ಯಜ್ಞಶಾಲೆಯು ನಾಶವಾಯಿತು.

ಉಲ್ಲೇಖಗಳು

Tags:

ಅಗ್ನಿಕಾಮದೇವಧರ್ಮಬ್ರಹ್ಮ

🔥 Trending searches on Wiki ಕನ್ನಡ:

ದೇವತಾರ್ಚನ ವಿಧಿಭಾವನಾ(ನಟಿ-ಭಾವನಾ ರಾಮಣ್ಣ)ಚೆನ್ನಕೇಶವ ದೇವಾಲಯ, ಬೇಲೂರುವರ್ಗೀಯ ವ್ಯಂಜನಬಿ. ಆರ್. ಅಂಬೇಡ್ಕರ್ದಕ್ಷಿಣ ಕರ್ನಾಟಕಮೈಸೂರು ದಸರಾಶಿವರಾಜ್‍ಕುಮಾರ್ (ನಟ)ರಾಜ್‌ಕುಮಾರ್ತಾಳೆಮರಜಾತ್ಯತೀತತೆಕರ್ಣಕಿತ್ತೂರು ಚೆನ್ನಮ್ಮಕರ್ನಾಟಕದ ಜಾನಪದ ಕಲೆಗಳುಗಣೇಶ ಚತುರ್ಥಿಕರ್ನಾಟಕದಲ್ಲಿ ವನ್ಯಜೀವಿಧಾಮಗಳುಮಧ್ವಾಚಾರ್ಯಕೊಡಗು ಜಿಲ್ಲೆಫುಟ್ ಬಾಲ್ವೃತ್ತಪತ್ರಿಕೆಭಾಷೆಒಡೆಯರ್ಮಂಗಳಮುಖಿಚಿತ್ರದುರ್ಗಸರ್ವಜ್ಞದಸರಾಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ಪಂಚತಂತ್ರಭಾರತೀಯ ನದಿಗಳ ಪಟ್ಟಿಗಾಂಧಿ ಜಯಂತಿಮೂಳೆಮೌರ್ಯ (ಚಲನಚಿತ್ರ)ಬುಡಕಟ್ಟುನಯನತಾರಮಕರ ಸಂಕ್ರಾಂತಿಕನ್ನಡದಲ್ಲಿ ಸಣ್ಣ ಕಥೆಗಳುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕನ್ನಡ ಸಾಹಿತ್ಯ ಪರಿಷತ್ತುಆಯ್ದಕ್ಕಿ ಲಕ್ಕಮ್ಮಸೆಸ್ (ಮೇಲ್ತೆರಿಗೆ)ಜೋಗಿ (ಚಲನಚಿತ್ರ)ಫೇಸ್‌ಬುಕ್‌ಅಳಲೆ ಕಾಯಿತಾಜ್ ಮಹಲ್ಗಣರಾಜ್ಯೋತ್ಸವ (ಭಾರತ)ಕರ್ನಾಟಕ ಹೈ ಕೋರ್ಟ್ಪ್ರೀತಿಬಾಲ್ಯಅಂತಿಮ ಸಂಸ್ಕಾರಮಾನವನ ವಿಕಾಸಏಡ್ಸ್ ರೋಗರಾಜಧಾನಿಗಳ ಪಟ್ಟಿಮಾನವ ಸಂಪನ್ಮೂಲ ನಿರ್ವಹಣೆಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ಮಾನವ ಹಕ್ಕುಗಳುದಲಿತಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಋತುಬೆಂಗಳೂರುಚೋಮನ ದುಡಿ (ಸಿನೆಮಾ)ವಿಶ್ವವಿದ್ಯಾಲಯ ಧನಸಹಾಯ ಆಯೋಗಕನ್ನಡಪ್ರಭಪಂಚಾಂಗಚೋಮನ ದುಡಿದೇವರಾಜ್‌ಕೂಡಲ ಸಂಗಮಹಣಕಾಸುಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುದುಂಡು ಮೇಜಿನ ಸಭೆ(ಭಾರತ)ಬೌದ್ಧ ಧರ್ಮಮಡಿವಾಳ ಮಾಚಿದೇವಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆರಾಮ ಮಂದಿರ, ಅಯೋಧ್ಯೆಸರಸ್ವತಿ ವೀಣೆಹರಿಹರ (ಕವಿ)ಸೀತಾ ರಾಮ🡆 More