ತಾಜಪುರ ಎಚ್

ತಾಜಪುರ ಎಚ್ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನಲ್ಲಿದೆ.

ತಾಜಪುರ ಎಚ್
ತಾಜಪುರ ಎಚ್
village

ಭೌಗೋಳಿಕ

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 2500 ಇದೆ. ಅದರಲ್ಲಿ 1300 ಪುರುಷರು ಮತ್ತು 1200 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ,, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ ಮತ್ತು ಸಂಸ್ಕೃತಿ

ತಾಜಪುರ ಎಚ್ 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮ

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆ

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯ

  • ಶ್ರೀ ಮಹಾಲಕ್ಷ್ಮಿ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ವೆಂಕಟೇಶ್ವರ ದೇವಾಲಯ
  • ಶ್ರೀ ಪಾಂಡುರಂಗ ದೇವಾಲಯ
  • ಶ್ರೀ ಹಣಮಂತ ದೇವಾಲಯ

ಮಸೀದಿ

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ

ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಾಲುವೆ

ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಮುಳವಾಡ ಏತ ನೀರಾವರಿ ಕಾಲುವೆ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಕೃಷಿ ಮತ್ತು ತೋಟಗಾರಿಕೆ

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಆರ್ಥಿಕತೆ

ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.

ಉದ್ಯೋಗ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಹಬ್ಬ

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

  • ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾಜಪುರ ಎಚ್
  • ವಿದ್ಯಾವಾಹಿನಿ ಪ್ರಾಥಮಿಕ ಶಾಲೆ, ತಾಜಪುರ ಎಚ್
  • ಶ್ರೀ ಮಲ್ಲಿಕಾರ್ಜುನ ಪ್ರೌಢ ಶಾಲೆ, ತಾಜಪುರ ಎಚ್
  • ಶ್ರೀ ಮಲ್ಲಿಕಾರ್ಜುನ ಪದವಿ ಪೂರ್ವ ಮಹಾವಿದ್ಯಾಲಯ, ತಾಜಪುರ ಎಚ್

ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರ

ಗ್ರಾಮವು ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರವಾಗಿದೆ.

ಸಾಕ್ಷರತೆ

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ಗ್ರಾಮ ಪಂಚಾಯತ

ತಾಜಪುರ(ಎಚ್) ಗ್ರಾಮ ಪಂಚಾಯತಯು ವಿಜಯಪುರದಿಂದ 18 ಕೀ.ಮೀ. ದೂರದಲ್ಲಿದೆ.

ಈ ಗ್ರಾಮ ಪಂಚಾಯತಿಗೆ 5 ಗ್ರಾಮಗಳು ಒಳಪಟ್ಟಿವೆ.

ಗ್ರಾಮ ಪಂಚಾಯತಯಲ್ಲಿ 26 ಸದಸ್ಯರು ಇರುತ್ತಾರೆ.

ಬ್ಯಾಂಕ್

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ತಾಜಪುರ(ಎಚ್)

ದೂರವಾಣಿ ವಿನಿಮಯ ಕೇಂದ್ರ

  • ದೂರವಾಣಿ ವಿನಿಮಯ ಕೇಂದ್ರ, ತಾಜಪುರ(ಎಚ್)

ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆ

  • ಅಂಚೆ ಕಚೇರಿ, ತಾಜಪುರ(ಎಚ್)
  • ಅಂಚೆ ಸೂಚ್ಯಂಕ ಸಂಖ್ಯೆ - 586130

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ತಾಜಪುರ(ಎಚ್)

ರಾಜಕೀಯ

ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ವಿಜಯಪುರ

ಕರ್ನಾಟಕ

Tags:

ತಾಜಪುರ ಎಚ್ ಭೌಗೋಳಿಕತಾಜಪುರ ಎಚ್ ಹವಾಮಾನತಾಜಪುರ ಎಚ್ ಜನಸಂಖ್ಯೆತಾಜಪುರ ಎಚ್ ಸಾಂಸ್ಕೃತಿಕತಾಜಪುರ ಎಚ್ ಕಲೆ ಮತ್ತು ಸಂಸ್ಕೃತಿತಾಜಪುರ ಎಚ್ ಧರ್ಮತಾಜಪುರ ಎಚ್ ಭಾಷೆತಾಜಪುರ ಎಚ್ ದೇವಾಲಯತಾಜಪುರ ಎಚ್ ಮಸೀದಿತಾಜಪುರ ಎಚ್ ನೀರಾವರಿತಾಜಪುರ ಎಚ್ ಕಾಲುವೆತಾಜಪುರ ಎಚ್ ಕೃಷಿ ಮತ್ತು ತೋಟಗಾರಿಕೆತಾಜಪುರ ಎಚ್ ಆರ್ಥಿಕತೆತಾಜಪುರ ಎಚ್ ಉದ್ಯೋಗತಾಜಪುರ ಎಚ್ ಬೆಳೆತಾಜಪುರ ಎಚ್ ಸಸ್ಯತಾಜಪುರ ಎಚ್ ಪ್ರಾಣಿತಾಜಪುರ ಎಚ್ ಹಬ್ಬತಾಜಪುರ ಎಚ್ ಶಿಕ್ಷಣತಾಜಪುರ ಎಚ್ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರತಾಜಪುರ ಎಚ್ ಸಾಕ್ಷರತೆತಾಜಪುರ ಎಚ್ ಗ್ರಾಮ ಪಂಚಾಯತತಾಜಪುರ ಎಚ್ ಬ್ಯಾಂಕ್ತಾಜಪುರ ಎಚ್ ದೂರವಾಣಿ ವಿನಿಮಯ ಕೇಂದ್ರತಾಜಪುರ ಎಚ್ ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆತಾಜಪುರ ಎಚ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘತಾಜಪುರ ಎಚ್ ರಾಜಕೀಯತಾಜಪುರ ಎಚ್ಕರ್ನಾಟಕವಿಜಯಪುರ

🔥 Trending searches on Wiki ಕನ್ನಡ:

ವಿರಾಮ ಚಿಹ್ನೆಕಾಲಾಯ ತಸ್ಮೈ ನಮಃ (ಚಲನಚಿತ್ರ)ಮಂಗಳೂರುಸಂದರ್ಶನಯುರೋಪ್ರಾಮಾಯಣಗಂಗ (ರಾಜಮನೆತನ)ಕಮಲಕರ್ನಾಟಕ ಸ್ವಾತಂತ್ರ್ಯ ಚಳವಳಿಮೋಕ್ಷಗುಂಡಂ ವಿಶ್ವೇಶ್ವರಯ್ಯದೆಹಲಿ ಸುಲ್ತಾನರುವಾಟ್ಸ್ ಆಪ್ ಮೆಸ್ಸೆಂಜರ್ಯಣ್ ಸಂಧಿಅಶ್ವತ್ಥಮರಝಾನ್ಸಿ ರಾಣಿ ಲಕ್ಷ್ಮೀಬಾಯಿರೈತನೀರುಭಾರತದ ಆರ್ಥಿಕ ವ್ಯವಸ್ಥೆಕನ್ನಡ ಸಾಹಿತ್ಯರಾಷ್ಟ್ರೀಯ ಶಿಕ್ಷಣ ನೀತಿಕರಗಭಾರತದಲ್ಲಿ ಪಂಚಾಯತ್ ರಾಜ್ಹಿಂದೂ ಧರ್ಮಕನ್ನಡ ರಂಗಭೂಮಿಏಡ್ಸ್ ರೋಗಕನ್ನಡ ರಾಜ್ಯೋತ್ಸವಶಿಶುಪಾಲವಿದ್ಯಾರಣ್ಯಶ್ರವಣಬೆಳಗೊಳಜಿಡ್ಡು ಕೃಷ್ಣಮೂರ್ತಿಅಳಿಲುಕಿತ್ತೂರು ಚೆನ್ನಮ್ಮಆನೆಅವರ್ಗೀಯ ವ್ಯಂಜನಲೆಕ್ಕ ಬರಹ (ಬುಕ್ ಕೀಪಿಂಗ್)ಜಾಗತೀಕರಣತ್ಯಾಜ್ಯ ನಿರ್ವಹಣೆಜಿ.ಪಿ.ರಾಜರತ್ನಂನಗರೀಕರಣಅಂಡವಾಯುಶಬರಿ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಗೋಪಾಲಕೃಷ್ಣ ಅಡಿಗಶ್ರುತಿ (ನಟಿ)ವಿಜಯಪುರಸೂರ್ಯ ಗ್ರಹಣವಿಷ್ಣುವರ್ಧನ್ (ನಟ)ಪೆರಿಯಾರ್ ರಾಮಸ್ವಾಮಿಡಾ ಬ್ರೋಸ್ಕೌಟ್ ಚಳುವಳಿನೀರಾವರಿಕನ್ನಡ ಗುಣಿತಾಕ್ಷರಗಳುಚಂದ್ರಗುಪ್ತ ಮೌರ್ಯಶ್ರೀಕೃಷ್ಣದೇವರಾಯರಾಮ್ ಮೋಹನ್ ರಾಯ್ಪಂಪ ಪ್ರಶಸ್ತಿನಾಲ್ವಡಿ ಕೃಷ್ಣರಾಜ ಒಡೆಯರುನವರತ್ನಗಳುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಉಪೇಂದ್ರ (ಚಲನಚಿತ್ರ)ಧರ್ಮಸ್ಥಳವಿಷ್ಣು೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ವಿಜ್ಞಾನಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ನದಿವಾಲಿಬಾಲ್ದಾಸ ಸಾಹಿತ್ಯಕನ್ನಡ ಅಕ್ಷರಮಾಲೆಭಾರತದ ನದಿಗಳುಭಾರತದ ಉಪ ರಾಷ್ಟ್ರಪತಿನಿರುದ್ಯೋಗಭಾರತೀಯ ಸಂವಿಧಾನದ ತಿದ್ದುಪಡಿಹಲ್ಮಿಡಿ ಶಾಸನಫಿರೋಝ್ ಗಾಂಧಿಗೋವಿಂದ ಪೈರಾಷ್ಟ್ರಕವಿನಿಯತಕಾಲಿಕ🡆 More