ಡುಟಿ ಚಂದ್

ಡುಟಿ ಚಂದ್ (ದ್ಯುತಿ ಚಂದ್)(ಜನನ: ೩ ಫೆಬ್ರವರಿ ೧೯೯೬:दूती चन्द-ಹಿಂದಿ ద్యుతీ చంద్- ತೆಲಗು/ದ್ಯುತಿ ಚಂದ್) ರವರು ವೃತ್ತಿಪರ ಭಾರತೀಯ ಸ್ಪ್ರಿಂಟರ್ ಮತ್ತು ೧೦೦ ಮೀಟರ್ ಮಹಿಳೆಯರ ಓಟದಲ್ಲಿ ಪ್ರಸ್ತುತ ರಾಷ್ಟ್ರೀಯ ಚಾಂಪಿಯನ್.

ಇವರು ಬೇಸಿಗೆ ಒಲಿಂಪಿಕ್ ಆಟಗಳಿಗೆ, ಮಹಿಳೆಯರ ೧೦೦ ಮೀಟರ್ ಓಟಗಳಿಗೆ ಅರ್ಹತೆ ಪಡೆದ ಮೂರನೇ ಭಾರತೀಯ ಮಹಿಳೆ , ಇವರನ್ನು ಬಿಟ್ಟರೆ ಪಿಟಿ ಊಷಾ ೧೯೮೦ರಲ್ಲಿ ಬೇಸಿಗೆ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು.

ಡುಟಿ ಚಂದ್
ಡುಟಿ ಚಂದ್
ವೈಯುಕ್ತಿಕ ಮಾಹಿತಿ
ಜನನ (1996-02-03) ೩ ಫೆಬ್ರವರಿ ೧೯೯೬ (ವಯಸ್ಸು ೨೮)
ಗೋಪಾಲ್ಪುರ್,ಜೈಪುರ್, ಒಡಿಶಾ, ಭಾರತ.
ಎತ್ತರ1.6 m (5 ft 3 in)
ತೂಕ50
Sport
ದೇಶಡುಟಿ ಚಂದ್ ಭಾರತ
ಕ್ರೀಡೆಅಥ್ಲೆಟಿಕ್ಸ್
ಸ್ಪರ್ಧೆಗಳು(ಗಳು)೧೦೦ ಮೀಟರ್
ಕ್ಲಬ್ಒ.ಎನ್.ಜಿ.ಎಸ್.
Achievements and titles
ವೈಯಕ್ತಿಕ ಪರಮಶ್ರೇಷ್ಠ೧೦೦ ಮೀ: ೧೧.೨೪
(ಆಲ್ಮಟಿ ೨೦೧೬)
೨೦೦ ಮೀ: ೨೩.೭೩
(ಆಲ್ಮಟಿ ೨೦೧೬)
೪‍x೧೦೦ ಮೀ ರಿಲೇ: ೪೩.೪೨
(ಆಲ್ಮಟಿ ೨೦೧೬)
Updated on ೨೦ ಆಗಸ್ಟ್ ೨೦೧೬.

ಆರಂಭಿಕ ಜೀವನ

ಡುಟಿ ಚಂದ್ ರವರು ೩ ಫೆಬ್ರವರಿ ೧೯೯೬ ಒಡಿಶಾದ ಜೈಪುರ್ ಜಿಲ್ಲೆಯ ಗೋಪಾಲ್ಪುರ್ ನಲ್ಲಿ, ಚಕ್ರಧರ್ ಚಂದ್ ಮತ್ತು ಅಕುಚಿ ಚಂದ್ ರವರಿಗೆ ಜನಿಸಿದರು. ಇವರು ಬಡ ನೇಕಾರ ಜೋಡಿಗೆ ಹುಟ್ಟಿದ ನಾಲ್ಕು ಹೆಣ್ಣು ಮಕ್ಕಳಲ್ಲಿ ಒಬ್ಬರು, ಸ್ವತಃ ಕ್ರೀಡಾಪಟು ಆದ ಅವರ ಹಿರಿಯ ಸಹೋದರಿ ಸರಸ್ವತಿ ಚಂದ್ ಇವರ ಸ್ಪೂರ್ತಿಯ ಮೂಲ. ಇವರು ೨೦೧೩ ರಲ್ಲಿ, ಕಾನೂನು ವಿದ್ಯಾಭ್ಯಾಸ ಮುಂದುವರಿಸಲು ಕೆ.ಐ.ಐ.ಟಿ ವಿಶ್ವವಿದ್ಯಾಲಯ ಸೇರಿಕೊಂಡರು .

ವೃತ್ತಿ ವಿರಾಮಗಳು

ಡುಟಿ ಚಂದ್ ರವರು ೨೦೧೨ ರಲ್ಲಿ ೧೦೦ ಮೀಟರ್ ಸ್ಪರ್ಧಯನ್ನು ೧೧.೮ ಸೆಕೆಂಡುಗಳಲ್ಲಿ ಮುಗಿಸಿ ೧೮ ವರುಷ ಕೆಳಗಿನ ವರ್ಗದ ಸ್ಪರ್ಧೆಯ ರಾಷ್ಟ್ರೀಯ ಚಾಂಪಿಯನ್ ರಾದರು . ೨೩.೮೧೧ ಸೆಕೆಂಡುಗಳಲ್ಲಿ ಓಡಿ ೨೦೦ ಮೀಟರ್ ಮಹಿಳೆಯರ ವಿಭಾಗದಲ್ಲಿ, ಪುಣೆಯಲ್ಲಿ ನೆಡೆದ ಏಷ್ಯನ್ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕ ಪಡೆದರು, ೨೦೧೩ ರ ವಿಶ್ವ ಯುವ ಚಾಂಪಿಯನ್ಷಿಪ್ ನ ಅಂತಿಮ ಹಂತ ತಲುಪಿದಾಗ, ಜಾಗತಿಕ ಅಥ್ಲೆಟಿಕ್ಸ್ ನ ೧೦೦ ಮೀಟರ ಕೊನೆ ಹಂತ ತಲುಪಿದ ಮೊದಲ ಮಹಿಳೆಯಾದರು. . ರಾಂಚಿಯಲ್ಲಿ ನೆಡೆದ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನ ೧೦೦ ಮೀಟರ್ ಓಟವನ್ನು ೧೧.೭೩ ಸೆಕೆಂಡುಗಳಲ್ಲಿ ಮುಗಿಸಿ ಮತ್ತು ೨೦೦ ಮೀಟರ್ ಅನ್ನು ತಮ್ಮ ವೃತ್ತಿಯ ಅತ್ಯುತ್ತಮವಾದ ೨೩.೭೩ ಸೆಕೆಂಡುಗಳಲ್ಲಿ ಮುಗಿಸಿ ರಾಷ್ಟ್ರೀಯ ಚಾಂಪಿಯನ್ ಆದರು.

ದಹಲಿಯಲ್ಲಿ ನೆಡೆದ ೨೦೧೬ರ ಫೆಡರೇಷನ್ ಕಪ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ೧೦೦ ಮೀಟರನ್ನು ೧೧:೩೩ ಸೆಕೆಂಡುಗಳಲ್ಲಿ ಮುಗಿಸಿ, ೧೬ ವರುಷ ಹಿಂದಿನ ರಚಿತ ಮಿಸ್ತ್ರಿ ೧೧.೩೮ ಸೆಕೆಂಡುಗಳ ರಾಷ್ಟ್ರೀಯ ದಾಖಲೆಯನ್ನು ಮುರಿದರು, ಆದಾಗ್ಯೂ ಅವರು ರಿಯೊ ಒಲಿಂಪಿಕ್ಸ್ ಅರ್ಹತೆ ಸಮಯವಾದ ೧೧.೩೨ ಸೆಕೆಂಡುಗಳನ್ನು ನೂರನೇ ಒಂದು ಸಕೆಂಡುನಿಂದ ಅರ್ಹತೆ ಆವಕಾಶ ತಪ್ಪಿಸಿಕೊಂಡರು. ಆದರೆ ಅಂತಿಮವಾಗಿ ೨೫ ಜೂನ್ ೨೦೧೬ರಂದು, ಆಲ್ಮಟಿ, ಕಝಾಕಿಸ್ತಾನ್‌ದ ಜಿ ಕೊಸ್ನೋವಾ ಸ್ಮಾರಕದಲ್ಲಿ, ೧೬ನೇ ರಾಷ್ಟ್ರೀಯಾ ಭೇಟಿಯಲ್ಲಿ, ೧೧.೨೪ ಸೆಕೆಂಡುಗಳಲ್ಲು ಮುಗಿಸಿ, ರಾಷ್ಟ್ರೀಯ ದಾಖಲೆಯನ್ನು ಒಂದು ದಿನದಲ್ಲಿ ಎರಡು ಬಾರಿ ಮುರಿದರು ಹಾಗೂ ರಿಯೋ ಒಲಿಂಪಿಕ್ಸ್‌ಗೆ ಆರ್ಹತೆ ಪಡೆದರು.

ಕಾಮನ್ವೆಲ್ತ್ ಗೇಮ್ಸ್ ವಿವಾದ

ಹೈಪರಾಂಡ್ರೊಜಿನಿಸಮ್ ನಿಂದ ಅವರು ಮಹಿಳೆ ಕ್ರಿಡಾಪಟ್ಟು ಆಗಿ ಸ್ಪರ್ಧಿಸಲು ಅರ್ಹರಲ್ಲ ಎಂದು ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಅವರನ್ನು ಕಾಮನ್ವೆಲ್ತ್ ಗೇಮ್ಸ್ ನ ತಂಡದಿಂದ ಕೊನೆ ಗಳಿಗೆಯಲ್ಲಿ ಕೈ ಬಿಟ್ಟಿತ್ತು. ಚಂದ್ ಅವರು ವಂಚನೆ ಅಥಾವ ಉದ್ದೀಪನಾ ದಲ್ಲಿ ತೊಡಗಿದರೆ ಎಂದು ಹೇಳಲಿಲ್ಲ- ಮಹಿಳ ಹೈಪರಾಂಡ್ರೊಜಿನಿಸಮ್ ನಿಂದ ಹೆಚ್ಚು ಗಂಡುಹಾರ್ಮೋನುಗಳು ಇರುವ ಮಹಿಳ ಕ್ರೀಡಾಪಟ್ಟುಗಳಿಗೆ ಹೆಚ್ಚು ಅನುಕೂಲವಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಓಸಿ) ಮಾಡಿದ ನಿಬಂಧನೆಗಳಿವೆ ಅನುಸಾರವಾಗಿ ಅವರನ್ನು ಕೈ ಬಿಡುವ ನಿರ್ಧಾರ ಮಾಡಲಾಗಿತ್ತು. ಈ ನಿರ್ಧಾರವನ್ನು ಆಸ್ಟ್ರೇಲಿಯನ್ ಅಂತರಲಿಂಗಿತ್ವ ವಕೀಲರು ಖಂಡಿಸಿದರು. ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಐಎಎಫ್ ನ ಕ್ರಮಗಳು ಚಂದ್ ರವರ ಖಾಸಗಿತನ ಮತ್ತು ಮಾನವ ಹಕ್ಕುಗಳ ಅಪಮಾನ ಎಂದು, ಈ ನಿರ್ಧಾರ ವ್ಯಾಪಕವಾಗಿ ಟೀಕೆಗೆ ಒಳಗಾಗಿತ್ತು. ಭಾರತೀಯ ಸರ್ಕಾರ ಚಂದ್ ಅವರ ಪರವಾಗಿ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ (ಸಿಎಎಸ್) ಕೋರ್ಟಿನಲ್ಲಿ ಮನವಿ ಮಾಡಿತ್ತು ಮತ್ತು ಜುಲೈ೨೦೧೫ ರಲ್ಲಿ, ಸಿಎ‌ಎಸ್ ಹೈಪರಾಂಡ್ರೊಜಿನಿಸಮ್ ನಿಯಂತ್ರಣವನ್ನು ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡೆಗಳಲ್ಲಿ ಎರಡು ವರುಷಗಳ ಕಾಲ ವಜಾಗೊಳಿಸುವ ನಿರ್ಧಾರ ಬಿಡುಗಡೆ ಮಾಡಿತ್ತು. ಗಂಡುಹಾರ್ಮೋನು ಮಟ್ಟಗಳು ಮತ್ತು ಅವರ ಸುಧಾರಿತ ಕ್ರೀಡಾ ಸಾಧನೆ ನಡುವೆ ಯಾವುದೆ ಲಿಂಕ್ ಮಾಡಲು ಸಾಕಷ್ಟು ಪುರಾವೆಗಳನ್ನು ಸಿಕ್ಕದಿಂದರಿಂದ ಈ ನಿರ್ಧಾರ ಮಾಡಿತ್ತು. ಕೊರ್ಟು ಐಎ‌ಎ‌ಎಫ್ ಗೆ ಬಲವಾದ ಸಾಕ್ಷಿ ಒದಗಿಸಿ ಮನವೊಲಿಸಲು ಎರಡು ವರುಷಗಳ ಅವಕಾಶ ಕೊಟ್ಟಿತ್ತು, ಎರಡು ವರುಷಗಳಲ್ಲಿ ಸಾಕ್ಷಿ ಒದಗಿಸಲು ಆಗಲಿಲ್ಲ ಎಂದರೆ ನಿಯಂತ್ರಣ ಮೇಲೆ ಹೇರಿದ ನಿರ್ಬಂಧ ಹಿಂಪಡೆಯಲಾಗುವುದು ಎಂದು ಹೇಳಿತು. ಈ ನಿರ್ಧಾರ ಪರಿಣಾಮಕಾರಿಯಾಗಿ ಚಂದ್ ಅವರ ಮೇಲೆ ಇದ್ದ ನಿರ್ಬಂಧವನ್ನು ತೆರವುಗೊಳಿಸಿಯತ್ತು ಮತ್ತು ಚಂದ್ ಅವರಿಗೆ ಓಟದ ಸ್ಪರ್ಧೆಯಲ್ಲಿ ಮತ್ತೆ ಭಾಗವಹಿಸಲು ಅವಕಾಶ ಮಾಡಿಕೊಟ್ಟುತು.

ಶಾಂತಿ ಸುಂದರಂಜನ್ ಬೆಂಬಲ

ಶಾಂತಿ ಸುಂದರಂಜನ್ ತಮ್ಮ ಬೆಂಬಲವನ್ನು ಸೂಚಿಸಿದರು ಮತ್ತು ಚಂದ್ ರವರನ್ನು ಬಲಿಪಶು ಮಾಡಬರದು ಎಂದು ಕೇಳಿಕೊಂಡರು, ಇವರು ಚಂದ್ ಅವರ ವಿಷಯವನ್ನು ಸರಿಯಾದ ಸಂವೇದನೆಯಿಂದ ನಿರ್ವಹಿಸಲಾಗುತ್ತಿಲ್ಲ, ಇದರಿಂದ ಅವರ ಭವಿಷ್ಯ ಅಪಾಯದಲ್ಲಿದೆ ಎಂದರು ಮತ್ತು ಚಂದ್ ರವರು ಸ್ಪರ್ಧಿಸಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು .

ಉಲ್ಲೇಖಗಳು

ಬಾಹ್ಯ ಕೊಂಡಿಗಳು

  • ಐಎಎಫ್ ನಲ್ಲಿ ಇರುವ ಡುಟಿ ಚಂದ್[ಶಾಶ್ವತವಾಗಿ ಮಡಿದ ಕೊಂಡಿ] ರವರ ಪ್ರೊಫೈಲ್

Tags:

ಡುಟಿ ಚಂದ್ ಆರಂಭಿಕ ಜೀವನಡುಟಿ ಚಂದ್ ವೃತ್ತಿ ವಿರಾಮಗಳುಡುಟಿ ಚಂದ್ ಕಾಮನ್ವೆಲ್ತ್ ಗೇಮ್ಸ್ ವಿವಾದಡುಟಿ ಚಂದ್ ಶಾಂತಿ ಸುಂದರಂಜನ್ ಬೆಂಬಲಡುಟಿ ಚಂದ್ ಉಲ್ಲೇಖಗಳುಡುಟಿ ಚಂದ್ ಬಾಹ್ಯ ಕೊಂಡಿಗಳುಡುಟಿ ಚಂದ್ಪಿ.ಟಿ ಉಷಾಭಾರತ

🔥 Trending searches on Wiki ಕನ್ನಡ:

ರವೀಂದ್ರನಾಥ ಠಾಗೋರ್ಮಾರ್ಕ್ಸ್‌ವಾದಕಾಂತಾರ (ಚಲನಚಿತ್ರ)ಕ್ರೀಡೆಗಳುಮಾನವನಲ್ಲಿ ನಿರ್ನಾಳ ಗ್ರಂಥಿಗಳುದೆಹಲಿ ಸುಲ್ತಾನರುಹಯಗ್ರೀವಲಕ್ಷ್ಮಿಒನಕೆ ಓಬವ್ವಹರಿಹರ (ಕವಿ)ಸಂಖ್ಯಾಶಾಸ್ತ್ರಕಾಗೋಡು ಸತ್ಯಾಗ್ರಹಗಂಗ (ರಾಜಮನೆತನ)ಬ್ಲಾಗ್ಭಾರತದ ಮುಖ್ಯಮಂತ್ರಿಗಳುಪಪ್ಪಾಯಿಭಾರತ ರತ್ನಭಾರತದ ರೂಪಾಯಿವರದಕ್ಷಿಣೆಮಂಜುಳಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕನ್ನಡ ಗುಣಿತಾಕ್ಷರಗಳುನಾರುದಾಳಿಂಬೆಶ್ರುತಿ (ನಟಿ)ಜೀವನಅರಿಸ್ಟಾಟಲ್‌ನಾಗಸ್ವರಭಾರತದ ಪ್ರಧಾನ ಮಂತ್ರಿಯಕ್ಷಗಾನವ್ಯಾಪಾರಜಶ್ತ್ವ ಸಂಧಿಸೆಸ್ (ಮೇಲ್ತೆರಿಗೆ)ವಿಷ್ಣುವರ್ಧನ್ (ನಟ)ಜಯಂತ ಕಾಯ್ಕಿಣಿಖ್ಯಾತ ಕರ್ನಾಟಕ ವೃತ್ತವಿದ್ಯಾರಣ್ಯಭಾರತದ ಸ್ವಾತಂತ್ರ್ಯ ಚಳುವಳಿಹರಪ್ಪಮೈಸೂರುವಿಭಕ್ತಿ ಪ್ರತ್ಯಯಗಳುಭಾರತದಲ್ಲಿನ ಜಾತಿ ಪದ್ದತಿಬೆಳಗಾವಿಭಾರತದ ಇತಿಹಾಸಚಿನ್ನಹಲ್ಮಿಡಿನಾಟಕನೀರಿನ ಸಂರಕ್ಷಣೆಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಪ್ರಪಂಚದ ದೊಡ್ಡ ನದಿಗಳುಬಾರ್ಲಿ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ತಂತ್ರಜ್ಞಾನಅಂತರ್ಜಲಚಿಲ್ಲರೆ ವ್ಯಾಪಾರಕೊಡಗಿನ ಗೌರಮ್ಮನಚಿಕೇತಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿನಿರುದ್ಯೋಗರಾಷ್ಟ್ರಕೂಟಓಂ ನಮಃ ಶಿವಾಯಅವತಾರವಿನಾಯಕ ದಾಮೋದರ ಸಾವರ್ಕರ್ದಯಾನಂದ ಸರಸ್ವತಿಮೊದಲನೆಯ ಕೆಂಪೇಗೌಡಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಕನ್ನಡ ಸಾಹಿತ್ಯ ಪ್ರಕಾರಗಳುಕರ್ಬೂಜಮಾಸಕನ್ನಡದಲ್ಲಿ ಸಣ್ಣ ಕಥೆಗಳುಅಶೋಕನ ಶಾಸನಗಳುಗೋಪಾಲಕೃಷ್ಣ ಅಡಿಗದ್ವಿಗು ಸಮಾಸಸಂಜಯ್ ಚೌಹಾಣ್ (ಸೈನಿಕ)ಪ್ಯಾರಾಸಿಟಮಾಲ್ಚಿಕ್ಕಮಗಳೂರುನುಡಿ (ತಂತ್ರಾಂಶ)ರೈತವಾರಿ ಪದ್ಧತಿ🡆 More