ಟೆನಸೀ ಕಣಿವೆ ಪ್ರಾಧಿಕಾರ

ಟೆನಸೀ ಕಣಿವೆ ಪ್ರಾಧಿಕಾರ- ಟೆನಸೀ ನದಿ ಮತ್ತು ಅದರಉಪನದಿಗಳ ಪ್ರವಾಹವನ್ನು ನಿಯಂತ್ರಿಸಲು ಅವುಗಳ ಮೇಲೆ ಯಾನಸೌಲಭ್ಯವನ್ನು ಹೆಚ್ಚಿಸಲೂ ಅವುಗಳಿಂದ ವಿದ್ಯುತ್ತನ್ನುತ್ಪಾದಿಸಲೂ ಅಮೆರಿಕ ಸಂಯುಕ್ತ ಸಂಸ್ಥಾನಗಳ ಸರ್ಕಾರ 1933ರಲ್ಲಿ ನಿರ್ಮಿಸಿದ ಸಂಸ್ಥೆ (ಟೆನಸೀ ವ್ಯಾಲಿ ಅಥಾರಿಟಿ).ಟಿವಿಎ (TVA) ಎಂದು ಪ್ರಖ್ಯಾತವಾಗಿರುವ ಈ ಸಂಸ್ಥೆಯ ಅಧಿಕಾರವ್ಯಾಪ್ತಿ ಸಾಮಾನ್ಯವಾಗಿ ಟೆನಸೀ ನದಿಯ ಜಲೋತ್ಸಾರಣ ಪ್ರದೇಶಕ್ಕೆ ಸೀಮಿತವಾಗಿದೆ.

ಆದರೆ ಅದರ ಕೆಲವು ಚಟುವಟಿಕೆಗಳು ಈ ಪ್ರದೇಶದಿಂದ ಆಚೆಗೂ ವಿಸ್ತರಿಸಿವೆ. ಜಲೋತ್ಸಾರಣ ಪ್ರದೇಶದ ವಿಸ್ತೀರ್ಣ ಸುಮಾರು 39,000 ಚ.ಮೈ. (99,800 ಚ.ಕಿಮೀ.). ಇದು ಆಲಬಾಮ, ಜಾರ್ಜಿಯ, ಕೆಂಟಕೀ, ಮಿಸಿಸಿಪಿ, ಉತ್ತರ ಕ್ಯಾರಲೈನ, ಟೆನಸೀ ಮತ್ತು ವರ್ಜೆನಿಯ ರಾಜ್ಯಗಳ ಭಾಗಗಳನ್ನೊಳಗೊಂಡಿದೆ.

ಪ್ರವಾಹದ ಪರಿಮಾಣದ ದೃಷ್ಟಿಯಿಂದ ಅಮೆರಿಕ ಸಂಯುಕ್ತ ಸಂಸ್ಥಾನಗಳ ಏಳನೆಯ ನದಿಯೆನಿಸಿದ ಟೆನಸೀ 1800ರಷ್ಟು ಹಿಂದೆಯೇ ಪಶ್ಚಿಮಾಭಿಮುಖ ವಲಸೆಗಾರರ ಯಾನಮಾಧ್ಯಮವಾಗಿತ್ತು. ಆದರೆ ಮಸಲ್ ಷೋಲ್ಸ್ ಬಳಿಯ ವೇಗದ ಹರಿವು ನೌಕಾಯಾನಕ್ಕೆ ಇದ್ದ ಒಂದು ದೊಡ್ಡ ಅಡಚಣೆ. ಇದನ್ನು ನಿವಾರಿಸಿ ಸುಸೂತ್ರವಾದ ಯಾನಸೌಲಭ್ಯ ಕಲ್ಪಿಸಲು ಮಾಡಿದ ಮೊದಮೊದಲ ಖಾಸಗಿ ಪ್ರಯತ್ನಗಳು ಫಲಪ್ರದವಾಗಲಿಲ್ಲ. ರಾಷ್ಟ್ರದ ಗಮನ ಅದರತ್ತ ಹರಿದದ್ದು ಒಂದನೆಯ ಮಹಾಯುದ್ಧದ ಸಮಯದಲ್ಲಿ. ನೈಟ್ರೇಟುಗಳಿಗಾಗಿ ಚಿಲಿ ಮತ್ತು ಜರ್ಮನಿಯಗಳನ್ನು ದೇಶ ಅವಲಂಬಿಸಬೇಕಾಗಿದ್ದ ಪರಿಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ ಆಗ ಸರ್ಕಾರ ಮಸಲ್ ಷೋಲ್ಸ್‍ನಲ್ಲಿ ಎರಡು ನೈಟ್ರೇಟ್ ಕಾರ್ಖಾನೆಗಳನ್ನು ಸ್ಥಾಪಿಸಿತು. ಇವಕ್ಕೆ ಅಗತ್ಯವಾದ ಜಲವಿದ್ಯುತ್ತಿನ ಉತ್ಪಾನೆಗಾಗಿ ನದಿಗೆ ಅಡ್ಡಲಾಗಿ ಕಟ್ಟೆಯನ್ನೂ ಆರ್ಥಿಕ ವಿದ್ಯುತ್ತಿಗಾಗಿ ಒಂದು ಹಬೆ ವಿದ್ಯುತ್ ಉತ್ಪಾದನಾಗಾರವನ್ನೂ ನಿರ್ಮಿಸಲು ನಿರ್ಧರಿಸಿತು. ಯುದ್ಧಮುಗಿದಾಗ ಈ ಕೆಲಸ ಅರ್ಧಕ್ಕೆ ನಿಂತಿತು. ಮುಂದೆ ಈ ಕೆಲಸವನ್ನು ಮುಂದುವರಿಸಲಾಗಲಿ ಇದನ್ನು ಅವಸಾಯನಗೊಳಿಸಲಾಗಲಿ ಆಗಲಿಲ್ಲ. 1933ರಲ್ಲಿ ಅಮೆರಿಕ ಮಹಾ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಕ್ಕಿಕೊಂಡಿತ್ತು. ಮಸಲ್ ಷೋಲ್ಸ್ನಲ್ಲಿ ಸರ್ಕಾರ ಕೈಗೊಂಡಿದ್ದ ನಿರ್ಮಾಣ ಕಾರ್ಯವನ್ನು ಮುಂದುವರಿಸಿ, ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ, ಅªರಿಗೆ ವರಮಾನ ದೊರಕಿಸಿಕೊಟ್ಟು, ಆ ಪ್ರದೇಶದ ಆರ್ಥಿಕ ಪುನಶ್ಚೇತನಕ್ಕೆ ಅನುವು ಮಾಡಿಕೊಡಬೇಕೆಂದು ಅಮೆರಿಕಾಧ್ಯಕ್ಷ ರೂಸ್‍ವೆಲ್ಟ್ ತೀರ್ಮಾನಿಸಿದರು. ಇದಕ್ಕಾಗಿ ಟೆನಸೀ ಕಣಿವೆ ಪ್ರಾಧಿಕಾರವನ್ನು ಸ್ಥಾಪಿಸಲು ಕಾಂಗ್ರೆಸ್ ನಿರ್ಣಯಿಸಿತು. 1933ರ ಮೇ 18ರಂದು ಅಧ್ಯಕ್ಷ ರೂಸ್‍ವೆಲ್ಟ್ ಸಹಿ ಹಾಕಿದರು.

ಈ ಅಧಿನಿಯಮದ ಪ್ರಕಾರ ಇದು ಅಮೆರಿಕ ಸಂಯುಕ್ತ ಸಂಸ್ಥಾನ ಸರ್ಕಾರದ ಅಭಿಕರಣಸಂಸ್ಥೆಯಾಗಿ (ಏಜೆನ್ಸಿ) ಸ್ಥಾಪಿತವಾಯಿತು. ಇದೊಂದು ಸಾರ್ವಜನಿಕ ನಿಗಮ (ಕಾರ್ಪೊರೇಷನ್). ಟೆನಸೀಯ ನಾಕ್ಸ್‍ವಿಲ್‍ನಲಿ ್ಲ ಇದರ ಪ್ರಧಾನ ಕಚೇರಿ. 15,000ಕ್ಕೂ ಹೆಚ್ಚು ಮಂದಿ ನೌಕರರನ್ನು ಇದು ನೇಮಕ ಮಾಡಿಕೊಂಡಿತ್ತು.

ಟೆನಸೀ ಕಣಿವೆಯ ನಿಸರ್ಗ ಸಂಪತ್ತಿನ ಸಭಿವೃದ್ಧಿಗಾಗಿ ನೆಮಕವಾದ ಸಂಯುಕ್ತ ಸರ್ಕಾರದ ಇಲಾಖೆಯೆಂಬಂತೆ ಇದು ರೂಪಿತವಾಯಿತು. ಇದಕ್ಕೆ ಅಂಥ ಅಸಾಧಾರಣವಾದ ಅಧಿಕಾರಗಳೇನೂ ಇರಲಿಲ್ಲ. ಆ ವೇಳೆಗಾಗಲೇ ಟೆನಸಿಯಲ್ಲೂ ಇತರ ಎಡೆಗಳಲ್ಲೂ ಹಲವು ಇಲಾಖೆಗಳು ಸಾಧಿಸುತ್ತಿದ್ದ ಕಾರ್ಯಗಳನ್ನೇ ಅದು ಕೈಗೊಂಡಿತು. ಆದರೆ ಒಂದು ನದಿಯ ಜಲೋತ್ಸಾರಣ ಪ್ರದೇಶಕ್ಕೆ ಸಂಬಂಧಿಸಿದಂತೆ. ಒಂದೇ ಸಂಸ್ಥೆಯಲ್ಲಿ ಈ ವಿವಿಧ ಕಾರ್ಯಗಳೆಲ್ಲ ಸಾಂದ್ರೀ ಕೃತವಾದ್ದೇ ಇದರ ವೈಶಿಷ್ಷ್ಯ. ಇದೊಂದು ಹೊಸ ಪ್ರಯೋಗವಾಗಿತ್ತು.

ಟಿವಿಎಗೆ ಸ್ಥೂಲವಾಗಿ ಮೂರು ಮೂಲಭೂತ ಅಧಿಕಾರಗಳು ದತ್ತವಾಗಿದ್ದುವು : 1 ನದಿಯ ಪ್ರವಾಃದ ನಿಯಂತ್ರಣ, 2 ನದಿಯ ಮೇಲೆ ನೌಕಾಸಂಚಾರ ಅಭಿವೃದ್ಧಿ, 3 ವಿದ್ಯುತ್ತಿನ ಉತ್ಪಾದನೆ ಮತ್ತು ಮಾರಾಟ. ಟಿವಿಎಗೆ ದತ್ತವಾದ ಈ ಅಧಿಕಾರಗಳ ಸಂವಿಧಾನಬದ್ಧತೆಯನ್ನು ಪ್ರಶ್ನಿಸಿ ಸವೋಚ್ಚ ನ್ಯಾಯಾಲಯದಲ್ಲಿ ಹೂಡಲಾದ ತಕರಾರನ್ನು ಆ ನ್ಯಾಯಾಲಯ ತಳ್ಳಿಹಾಕಿತು.

ಅಂತಿಮವಾಗಿ ಟಿವಿಎಯ ನಿರ್ವಹಣೆಗೆ ಒಳಪಟ್ಟ ಮುಖ್ಯ ಕಟ್ಟೆಗಳು 32. ಇವುಗಳ ಪೈಕಿ 9 ಟೆನಸೀ ನದಿಗೂ ಉಳಿದ 23 ಅದರ ಉಪನದಿಗಳಿಗೂ ನಿರ್ಮಿಸಲಾದ ಕಟ್ಟೆಗಳು. ಇವುಗಳಲ್ಲಿ 21ನ್ನು ಟಿವಿಎ ಸಂಸ್ಥೆಯೇ ನಿರ್ಮಿಸಿತು. ಕೆಲವನ್ನು ಖಾಸಗಿ ಕಂಪನಿಯಿಂದ ಕೊಂಡುಕೊಂಡಿತು. ಪ್ರವಾಹ ನಿಯಂತ್ರಣ ಪ್ರಥಮ ಉದ್ದೇಶ. ಇದನ್ನು ಬಹುಮಟ್ಟಿಗೆ ಸಾಧಿಸಲಾಯಿತು. ನೌಕಾ ಸಂಚಾರ ಎರಡನೆಯ ಉದ್ದೇಶ. ಒಂಬತ್ತು ಮುಖ್ಯ ಕಟ್ಟೆಗಳಿಗೂ ನೀರಿನ ಮಟ್ಟ ಬದಲಾವಣೆ ವ್ಯವಸ್ಥೆಗಳನ್ನು ನಿರ್ಮಿಸಲಾಯಿತು. ಇದರಿಂದ ನೌಕಾ ಸಾರಿಗೆ 17ವರ್ಷಗಳಲ್ಲಿ 3,30,00,000 ಟನ್-ಮೈ.ಗಳಿಂದ 60,00,00,000 ಟನ್-ಮೈ.ಗಳಿಗೆ ಏರಿತು. ವಿದ್ಯುತ್ತಿನ ಉತ್ಪಾದನೆ ಮತ್ತು ಮಾರಾಟ ಮೂರನೆಯ ಉದ್ದೇಶ. ಇದಕ್ಕೆ ಖಾಸಗಿ ವಿದ್ಯುತ್ ಕಂಪನಿಗಳ ವಿರೋಧ ಪ್ರಬಲವಾಗಿತ್ತು. ಟಿವಿಎ ಸಂಸ್ಥೆ ಪೌರಸಭೆಗಳೊಂದಿಗೂ ಸಹಕಾರ ಸಂಸ್ಥೆಗಳೊಂದಿಗೂ ಮಿದ್ಯುತ್ತಿನ ಸರಬರಾಜಿಗೆ ಒಪ್ಪಂದ ಮಾಡಿಕೊಂಡು. ಅವುಗಳ ಸಹಕಾರದೊಡನೆ ಏಕೀಕೃತ ವಿದ್ಯುತ್ ವ್ಯವಸ್ಥೆ ಏರ್ಪಡಿಸಿತು. ಆ ಪ್ರದೇಶದ ವಿದ್ಯುತ್ ಬೇಡಿಕೆ ಏರಿದಂತೆ, ಪರಮಾಣುಶಕ್ತಿ ಆಯೋಗವೇ ಮುಂತಾದ ರಕ್ಷಣಾಕಾರ್ಯಗಳ ಬೇಡಿಕೆ ಹೆಚ್ಚಿದಂತೆ ಜಲವಿದ್ಯುತ್ತಿನ ಸರಬರಾಜು ಸಾಲದಾಗಿ, ಹಬೆ ವಿದ್ಯುತ್ತನ್ನು ಉತ್ಪಾದಿಸುವ ಆವಸ್ಯಕತೆ ಬಂತು. 1960ರ ವೇಳೆಗೆ ಟಿವಿಎ ವಿದ್ಯುತ್ ವ್ಯವಸ್ಥೆಯಲ್ಲಿ 48 ಕಟ್ಟೆಗಳೂ ಹಲವು ಹಬೆ ವಿದ್ಯುದಾಗಾರಗಳೂ ಇದ್ದವು. ಮಸಲ್ ಷೋಲ್ಸ್ ನ ನೈಟ್ರೇಟ್ ಕಾರ್ಖಾನೆಗಳ ನಿರ್ವಹಣೆ, ಅರಣ್ಯೀಕರಣ, ಮನೋರಂಜನೆ, ಮಲೇರಿಯಾ ನಿರೋಧ ಮುಂತಾದ ಜನಾರೋಗ್ಯ ಕಾರ್ಯ-ಇವೆಲ್ಲ ಟಿವಿಎ ಸಂಸ್ಥೆಯ ಹೊಣೆ. ಇವನ್ನೂ ಅದು ನಿರ್ವಹಿಸಿದೆ. ಈ ಪ್ರದೇಶದ ಕೈಗಾರಿಕೆಗಳ ಬೆಳೆವಣಿಗೆಗೆ ಇದು ಬಹಳ ಮಟ್ಟಿಗೆ ಕಾರಣವಾಗಿದೆ.

ಟಿವಿಎ ಸಂಸ್ಥೆಯ ಕಾರ್ಯ ಎರಡು ದೃಷ್ಟಿಗಳಿಂದ ಗಮನಾರ್ಹವಾದ್ದು. ಮೊದಲನೆಯದಾಗಿ ಈ ಪ್ರದೇಶದ ನೀರನ್ನು ವಿವಿಧ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ನಡೆಸಿದ ಪ್ರಯತ್ನವಿದು. ಅಮೆರಿಕದ ನದೀ ಕಣಿವೆ ಅಭಿವೃದ್ಧಿಯ ಕ್ಷೇತ್ರದಲ್ಲೇ ಇದು ವಿಶಿಷ್ಟವಾದ್ದು. ಎರಡನೆಯದಾಗಿ, ಟಿವಿಎ ಸಂಸ್ಥೆಗೆ ಆ ಪ್ರದೇಶದ ಮೇಲೆ ವಿಶೇಷಾಧಿಕಾರವೇನೂ ದತ್ತವಾಗಿರಲಿಲ್ಲ. ಆ ಕಣಿವೆಯ ಸ್ಥಳೀಯ ಸರ್ಕಾರಗಳ-ರಾಜ್ಯ, ಜಿಲ್ಲೆ ಮತ್ತು ಪೌರ ಆಡಳಿತಗಳ-ಮೂಲಕವೇ ಅದು ಕಾರ್ಯೋನ್ಮುಖವಾಯಿತು. ಆರೋಗ್ಯ, ಅರಣ್ಯೇಕರಣ, ಕೃಷಿ, ಉದ್ಯಾನವಿರ್ಮಾಣ, ನೌಕಾಯಾನ, ವಿದ್ಯುತ್ತು ಮುಂತಾದ ಕಾರ್ಯಗಳಿಗೆ ಸಂಬಂಧಿಸಿದಂತೆ ಆ ಸರ್ಕಾರಗಳೊಡನೆ ನಾನಾ ಬಗೆಯ ಒಪ್ಪಂದಗಳನ್ನು ಅದು ಮಾಡಿಕೊಂಡಿತು. ಅಮೆರಿಕದಲ್ಲಿ ಸಹಕಾರ ಆಡಳಿತದ ವಿಶಿಷ್ಟ ಪ್ರಯೋಗವಿದು. ಟಿವಿಎ ವ್ಯವಸ್ಥೆ ವಿಶ್ವದ ಅನೇಕ ದೇಶಗಳ ಗಮನ ಸೆಳೆದಿದೆ. ಪ್ರತಿವರ್ಷವೂ ಇದನ್ನು ಸಂದರ್ಶಿಸಲು ಹಲವು ದೇಶಗಳ ಸರ್ಕಾರಗಳ ಉನ್ನತಾಧಿಕಾರಿಗಳೂ ಇತರರೂ ಅಲ್ಲಿಗೆ ಬರುತ್ತಾರೆ. ಭಾರತದ ದಾಮೋದರ ಕಣಿವೆ ಯೋಜನೆಯನ್ನೂ ಕೊಲಂಬಿಂiÀiದ ಕಾಕಾ ನದೀ ಯೋಜನೆಯನ್ನೂ ಟಿವಿಎ ಮಾದರಿಯಲ್ಲಿ ರಚಿಸಲಾಗಿದೆ. ಆದರೆ ಅಮೆರಿಕದಲ್ಲಿ ಇಂಥ ವ್ಯವಸ್ಥೆ ಇದೊಂದೇ.-


Tags:

ಅಮೇರಿಕ ಸಂಯುಕ್ತ ಸಂಸ್ಥಾನಟೆನಸೀ ನದಿ

🔥 Trending searches on Wiki ಕನ್ನಡ:

ದಾಸ ಸಾಹಿತ್ಯಹನುಮಂತಸಜ್ಜೆಅಂತಾರಾಷ್ಟ್ರೀಯ ಸಂಬಂಧಗಳುಭಾರತದ ಪಂಚಾಯತ್ ರಾಜ್ ವ್ಯವಸ್ಥೆಕದಂಬ ರಾಜವಂಶಅಲ್ಲಮ ಪ್ರಭುಆದಿ ಶಂಕರಶಾಸನಗಳುಶನಿಕಾಂತಾರ (ಚಲನಚಿತ್ರ)ಗೀಳು ಮನೋರೋಗಸಂಯುಕ್ತ ರಾಷ್ಟ್ರ ಸಂಸ್ಥೆಚಾಲುಕ್ಯಮಹೇಶ್ವರ (ಚಲನಚಿತ್ರ)ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಪ್ರೇಮಾಫ್ರಾನ್ಸ್ನರ್ಮದಾ ನದಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಗೋವಿಂದ ಪೈಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಸಂವತ್ಸರಗಳುಕಲಬುರಗಿಸಹಕಾರಿ ಸಂಘಗಳುಬಾದಾಮಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಕೊರೋನಾವೈರಸ್ಜ್ಯೋತಿಬಾ ಫುಲೆಪ್ರಜಾಪ್ರಭುತ್ವದ ಲಕ್ಷಣಗಳುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಹರಿದಾಸಮೆಕ್ಕೆ ಜೋಳಶಿಶುನಾಳ ಶರೀಫರುಕೇಂದ್ರಾಡಳಿತ ಪ್ರದೇಶಗಳುಅರ್ಜುನಬಾಲ್ಯ ವಿವಾಹಬಸವೇಶ್ವರಸಾವಿತ್ರಿಬಾಯಿ ಫುಲೆಕರ್ಣಪ್ರಜಾಪ್ರಭುತ್ವದ ವಿಧಗಳುಮಡಿವಾಳ ಮಾಚಿದೇವಕಲ್ಹಣಕ್ಯಾರಿಕೇಚರುಗಳು, ಕಾರ್ಟೂನುಗಳುಕನಕದಾಸರುಶಬ್ದಸ್ತ್ರೀಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಋತುಯಣ್ ಸಂಧಿವರ್ಣಕೋಶ(ಕ್ರೋಮಟೊಫೋರ್)ಲಕ್ಷ್ಮಿಮಲೆನಾಡುಸಾರಾ ಅಬೂಬಕ್ಕರ್ಪಾಕಿಸ್ತಾನಕನ್ನಡದಲ್ಲಿ ಮಹಿಳಾ ಸಾಹಿತ್ಯಭಾರತದಲ್ಲಿನ ಜಾತಿ ಪದ್ದತಿಬಾಬು ಜಗಜೀವನ ರಾಮ್ಕಲಾವಿದಕನ್ನಡ ಅಂಕಿ-ಸಂಖ್ಯೆಗಳುಮಲೈ ಮಹದೇಶ್ವರ ಬೆಟ್ಟಪೂರ್ಣಚಂದ್ರ ತೇಜಸ್ವಿಶ್ರವಣಬೆಳಗೊಳಮಯೂರಶರ್ಮಪತ್ರಋತುಚಕ್ರದ್ವಿರುಕ್ತಿಆರ್ಥಿಕ ಬೆಳೆವಣಿಗೆಶಿಕ್ಷಣಭಾರತದ ಇತಿಹಾಸಹಣದುಬ್ಬರಬನವಾಸಿಸಿದ್ಧರಾಮ🡆 More