ವಾದ್ಯತಂಡ ಟೂಲ್‌

ಟೂಲ್‌ ಎಂಬುದು, 1990ರಲ್ಲಿ ರಚನೆಯಾದ, ಅಮೆರಿಕಾ ಸಂಯುಕ್ತ ಸಂಸ್ಥಾನದ ‌ಕ್ಯಾಲಿಫೊರ್ನಿಯಾ ರಾಜ್ಯದ ಲಾಸ್‌ ಏಂಜಲೀಸ್‌ ಮೂಲದ ರಾಕ್‌ ಶೈಲಿ ಸಂಗೀತ ವಾದ್ಯತಂಡ.

ಆರಂಭದಿಂದಲೂ ತಂಡದ ಸದಸ್ಯರ ಪಟ್ಟಿಯಲ್ಲಿ ಡ್ರಮ್‌ ವಾದಕ ಡ್ಯಾನಿ ಕ್ಯಾರಿ, ಗಿಟಾರ್‌ ವಾದಕ ಆಡಮ್‌ ಜೋನ್ಸ್‌ ಹಾಗೂ ಗಾಯಕ ಮೇಯ್ನಾರ್ಡ್‌ ಜೇಮ್ಸ್‌ ಕೀನನ್‌ ಸೇರಿದ್ದಾರೆ. ಇಸವಿ 1995ರಲ್ಲಿ, ಮೂಲ ಬಾಸ್‌ ಗಿಟಾರ್‌ ವಾದಕ ಪಾಲ್‌ ಡಿ'ಆಮೊರ್‌ರ ಸ್ಥಾನದಲ್ಲಿ ಸೇರಿದ ಜಸ್ಟಿನ್‌ ಛಾನ್ಸೆಲರ್‌ ಇಂದಿಗೂ ಸಹ ಬಾಸ್‌ ಗಿಟಾರ್‌ ವಾದಕರಾಗಿದ್ದಾರೆ. ಟೂಲ್‌ ವಾದ್ಯತಂಡವು ಮೂರು ಗ್ರ್ಯಾಮಿ ಪ್ರಶಸ್ತಿಗಳು ಗೆದ್ದಿರುವುದಲ್ಲದೇ, ವಿಶ್ವದಾದ್ಯಂತ ಪ್ರವಾಸ ಪ್ರದರ್ಶನಗಳನ್ನು ನಡೆಸಿದೆ. ಹಲವು ದೇಶಗಳಲ್ಲಿ ಸಂಗೀತ ಪಟ್ಟಿಗಳಲ್ಲಿ ಅಗ್ರಸ್ಥಾನ ಗಿಟ್ಟಿಸಿದ ಆಲ್ಬಮ್‌ಗಳನ್ನು ಸಹ ರಚಿಸಿದೆ.

Tool
ವಾದ್ಯತಂಡ ಟೂಲ್‌
Tool performing live in Barcelona in 2006. Visible from left to right are: Adam Jones, Maynard James Keenan and Justin Chancellor.
ಹಿನ್ನೆಲೆ ಮಾಹಿತಿ
ಮೂಲಸ್ಥಳLos Angeles, California
ಸಂಗೀತ ಶೈಲಿAlternative metal, art rock, progressive metal, progressive rock
ಸಕ್ರಿಯ ವರ್ಷಗಳು1990-present
L‍abelsTool Dissectional, Volcano, Zoo
Associated actsA Perfect Circle, Green Jellÿ, Puscifer, ZAUM, King Crimson
ಅಧೀಕೃತ ಜಾಲತಾಣwww.toolband.com
ಸಧ್ಯದ ಸದಸ್ಯರುDanny Carey
Justin Chancellor
Maynard James Keenan
Adam Jones
ಮಾಜಿ ಸದಸ್ಯರುPaul D'Amour

ಇಸವಿ 1993ರಲ್ಲಿ ಬಿಡುಗಡೆಗೊಳಿಸಿದ ತನ್ನ ಮೊದಲ ಸ್ಟುಡಿಯೊ ಆಲ್ಬಮ್‌ ಅಂಡರ್ಟೋ ನಲ್ಲಿ ಟೂಲ್ ಹೆವಿ ಮೆಟಲ್‌ ಶೈಲಿಯ ಸಂಗೀತ ಬಳಸಿತು. ಇಸವಿ 1996ರಲ್ಲಿ ಬಿಡುಗಡೆಗೊಳಿಸಿದ ಎನಿಮಾ ದೊಂದಿಗೆ ತಂಡವು ಪರ್ಯಾಯ ಮೆಟಲ್‌ ಶೈಲಿ ಸಂಗೀತ ಅಭಿಯಾನದಲ್ಲಿ ಪ್ರಾಬಲ್ಯ ಮೆರೆಯಿತು. ಸಂಗೀತದಲ್ಲಿ ಪ್ರಯೋಗಗಳು, ದೃಶ್ಯ ಕಲೆಗಳು ಹಾಗೂ ವೈಯಕ್ತಿಕ ವಿಕಾಸದ ಸಂದೇಶಗಳನ್ನು ಒಗ್ಗೂಡಿಸುವ ತಂಡದ ಯತ್ನಗಳು,ಲ್ಯಾಟೆರಲಸ್‌ (2001 ) ಆಲ್ಬಮ್‌ನೊಂದಿಗೆ ಮುಂದುವರೆದವು.ಇತ್ತೀಚೆಗೆ ಬಿಡುಗಡೆಯಾದ10,000 ಡೇಸ್‌ (2006 ) ಮೂಲಕ ವಾದ್ಯತಂಡಕ್ಕೆ ವಿಶ್ವದಾದ್ಯಂತ ವಿಮರ್ಶಾತ್ಮಕ ಪ್ರಶಂಸೆ ಹಾಗೂ ಯಶಸ್ಸು ಸಂಪಾದಿಸಿಕೊಟ್ಟಿತು.

ಟೂಲ್‌ ವಾದ್ಯತಂಡವು ದೃಶ್ಯಕಲೆಗಳನ್ನು ಸಂಯೋಜಿಸಿದ್ದರಿಂದ ಹಾಗೂ ತುಲನಾತ್ಮಕವಾಗಿ ದೀರ್ಘಾವಧಿ ಹಾಗೂ ಸಂಕೀರ್ಣವಾದ ಅಲ್ಬಮ್‌ಗಳನ್ನು ಬಿಡುಗಡೆಗೊಳಿಸಿದ್ದರಿಂದ, ಈ ವಾದ್ಯತಂಡವನ್ನು ಸಾಮಾನ್ಯವಾಗಿ ಶೈಲಿಯ ಚೌಕಟ್ಟನ್ನು ಮೀರಿದ ಸಂಗೀತ ತಂಡ, ಹಾಗೂ, ಆಧುನಿಕ ರಾಕ್‌ ಶೈಲಿಯ ಸಂಗೀತ ಮತ್ತು ಕಲಾತ್ಮಕ ರಾಕ್‌ ಶೈಲಿಯ ಸಂಗೀತದ ಅಂಗ ಎಂದು ಬಣ್ಣಿಸಲಾಗಿದೆ. ಈ ವಾದ್ಯತಂಡ ಹಾಗೂ ಇಂದಿನ ಸಂಗೀತ ಉದ್ದಿಮೆಯ ನಡುವಣ ಸಂಬಂಧವು ಅನಿಶ್ಚಯವಾಗಿತ್ತು. ಸೆನ್ಸಾರ್‌ಶಿಪ್‌ ಆಗಿದ್ದ ಸಂದರ್ಭದಲ್ಲಿ ಹಾಗೂ ಟೂಲ್‌ ಸದಸ್ಯರು ತಮಗೆ ಏಕಾಂತತೆ ಬೇಕು ಎಂದು ಒತ್ತಾಯಿಸಿದಾಗ ಹೀಗಾಗಿತ್ತು.

ಇತಿಹಾಸ

ಪ್ರಾರಂಭದ ವರ್ಷಗಳು (1988-1992)

ಚಿತ್ರ:Tool-logo-early.jpg
ದೀರ್ಘಕಾಲದ ಸಹಯೋಗಿ ಕ್ಯಾಮ್‌ ಡಿ ಲಿಯೊನ್‌ ರಚಿಸಿದ ಮುಂಚಿನ ಬ್ಯಾಂಡ್ ಲಾಂಛನ j ಈ ವಿರೂಪವು ಟೂಲ್ ಕಲ್ಪನೆಯಲ್ಲಿ "ಫ್ಯಾಲಿಕ್ ಹಾರ್ಡ್‍‌ವೇರ್‌"ಗೆ ಉದಾಹರಣೆಯಾಗಿದೆ.

1980ರ ದಶಕದಲ್ಲಿ, ಮುಂದೆ ಒಟ್ಟು ಸೇರಲಿದ್ದ ಟೂಲ್‌ ಸದಸ್ಯರಲ್ಲಿ ಪ್ರತಿಯೊಬ್ಬರೂ ಲಾಸ್‌ ಏಂಜಲೀಸ್‌ಗೆ ಸ್ಥಳಾಂತರಗೊಂಡರು. ಪಾಲ್‌ ಡಿ'ಅಮೊರ್‌ ಮತ್ತು ಆಡಮ್‌ ಜೋನ್ಸ್‌ ಸಿನೆಮಾ ಉದ್ಯಮ ಸೇರಬಯಸಿದ್ದರು. ಮೇಯ್ನಾರ್ಡ್‌ ಜೇಮ್ಸ್‌ ಕೀನನ್ ಮಿಷಿಗನ್‌ನಲ್ಲಿ ದೃಶ್ಯಕಲಾ ಶಾಸ್ತ್ರ ವ್ಯಾಸಂಗ ಮಾಡಿ, ಸಾಕುಪ್ರಾಣಿ ಅಂಗಡಿಗಳನ್ನು ಪುನರ್ವಿನ್ಯಾಸಗೊಳಿಸುವ ನೌಕರಿಯನ್ನು ಕಂಡುಕೊಂಡರು. ಡ್ಯಾನಿ ಕ್ಯಾರಿ ವೈಲ್ಡ್‌ ಬ್ಲೂ ಯಾಂಡರ್‌, ಗ್ರೀನ್‌ ಜೆಲ್ಲಿ, ಹಾಗೂ ಕ್ಯಾರೋಲ್ ಕಿಂಗ್ ತಂಡಗಳಿಗೆ ಡ್ರಮ್ ವಾದಕರಾಗಿ ಕಾರ್ಯನಿರ್ವಹಿಸಿದರು. ಜೊತೆಗೆ, ಲಾಸ್‌ ಏಂಜಲೀಸ್‌ ಪ್ರದೇಶದಲ್ಲಿ ಪಿಗ್ಮಿ ಲವ್‌ ಸರ್ಕಸ್‌ ಒಂದಿಗೆ ಪ್ರದರ್ಶನ ನೀಡಿದರು.

ಇಸವಿ 1989ರಲ್ಲಿ ಕೀನನ್ ಮತ್ತು ಜೋನ್ಸ್‌ ಇಬ್ಬರಿಗೂ ಪರಿಚಯವಿರುವ ಸ್ನೇಹಿತನ ಮೂಲಕ ಭೇಟಿಯಾದರು. ತಮ್ಮ ಹಿಂದಿನ ವಾದ್ಯತಂಡ ಯೋಜನೆಯ ಹಾಡೊಂದರ ಧ್ವನಿಸುರುಳಿಯನ್ನು ಕೀನನ್ ಜೋನ್ಸ್‌ಗಾಗಿ ನುಡಿಸಿದಾಗ, ಕೀನನ್ ಧ್ವನಿಯ ಬಗ್ಗೆ ಜೋನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿ, ಅಂತಿಮವಾಗಿ ತಮ್ಮದೇ ವಾದ್ಯತಂಡ ರಚಿಸುವ ಬಗ್ಗೆ ಸ್ನೇಹಿತನ ಜತೆ ಮಾತನಾಡಿದರು. ಅವರಿಬ್ಬರೂ ಒಟ್ಟಿಗೆ ಜ್ಯಾಮ್ ಕಾರ್ಯಕ್ರಮನಡೆಸಲಾರಂಭಿಸಿದರು ಹಾಗೂ ಒಬ್ಬ ಡ್ರಮ್‌ ವಾದಕ ಮತ್ತು ಒಬ್ಬ ಬಾಸ್‌ ವಾದಕನ ಆನ್ವೇಷಣೆಯಲ್ಲಿದ್ದರು. ಕೀನನ್ ವಾಸಿಸುತ್ತಿದ್ದ ಮನೆಯ ಮಹಡಿಯಲ್ಲಿ ಡ್ಯಾನಿ ಕ್ಯಾರಿ ವಾಸಿಸುತ್ತಿದ್ದರು. ಜೋನ್ಸ್‌ನ ಹಳೆಯ ಶಾಲಾ ಸ್ನೇಹಿತ ಹಾಗೂ ಇಲೆಕ್ಟ್ರಿಕ್‌ ಷೀಪ್‌ ವಾದ್ಯತಂಡದ ಮಾಜಿ ಸಹಯೋಗಿಯಾಗಿದ್ದ ಟಾಮ್‌ ಮೊರೆಲ್ಲೊ ಡ್ಯಾನಿ ಕ್ಯಾರಿಯನ್ನು ಜೋನ್ಸ್‌ರಿಗೆ ಪರಿಚಯಿಸಿದರು. ಆಮಂತ್ರಿತರಾದ ಇತರೆ ಸಂಗೀತಗಾರರು ಯಾರೂ ಬರದಿದ್ದ ಕಾರಣ "ಅವರ ಬಗ್ಗೆ ಕನಿಕರವಾಗಿದ್ದರಿಂದ" ಅವರ ತಂಡದ ಸಂಗೀತ ಕಾರ್ಯಕ್ರಮಗಳಲ್ಲಿ ಕ್ಯಾರಿ ತಮ್ಮ ವಾದ್ಯ ನುಡಿಸಲಾರಂಭಿಸಿದರು. ಜೋನ್ಸ್‌ನ ಸ್ನೇಹಿತರೊಬ್ಬರು ಟೂಲ್‌ ತಂಡದ ಸದಸ್ಯರನ್ನು ಬಾಸ್‌ ಗಿಟಾರ್‌ ವಾದಕ ಡಿ'ಅಮೊರ್‌ರಿಗೆ ಪರಿಚಯಿಸುವುದರೊಂದಿಗೆ, ಟೂಲ್‌ ತಂಡದ ಸದಸ್ಯರ ಪಟ್ಟಿ ಸಂಪೂರ್ಣಗೊಂಡಿತು. ಆರಂಭದಲ್ಲಿ, ತಂಡವು ನಕಲಿತತ್ತ್ವಚಿಂತನೆ ಲ್ಯಾಕ್ರಿಮೋಲಜಿ'(ಅಳುವ ಅಧ್ಯಯನ )ಕಾರಣ ರಚನೆಯಾಯಿತು ಎಂಬ ಕಟ್ಟುಕಥೆಯನ್ನು ಹುಟ್ಟುಹಾಕಿತು.

ವಾದ್ಯತಂಡದ ಹೆಸರಿಗೆ ಲ್ಯಾಕ್ರಿಮೋಲಜಿ ಎಂಬುದು ಸ್ಫೂರ್ತಿ ಎನ್ನಲಾಗಿದ್ದರೂ, ಆನಂತರ ಕೀನನ್ ತಮ್ಮ ಉದ್ದೇಶಗಳ ಬಗ್ಗೆ ವಿಭಿನ್ನ ರೀತಿಯ ವಿವರ ನೀಡಿದರು: 'ಟೂಲ್‌ ನಿಖರವಾಗಿ ಹೇಗೆ ಧ್ವನಿಸುತ್ತದೋ ಹಾಗೇ ಇರುತ್ತದೆ. ಇದೊಂದು ದೊಡ್ಡ ಡಿಕ್ ರೀತಿಯಲ್ಲಿರುತ್ತದೆ. ಇದೊಂದು ತಿರುಚುಳಿ.... ನಾವು .... ನಿಮ್ಮ ಟೂಲ್‌‌; ನೀವು ಏನನ್ನು ಗಳಿಸಲು ಹೊರಟಿರುವಿರೋ, ಆ ಪ್ರಕ್ರಿಯೆಯಲ್ಲಿ ನಮ್ಮನ್ನು ಒಂದು ರೀತಿಯ ವೇಗವರ್ಧಕವಾಗಿ ಉಪಯೋಗಿಸಿ.'  
ಚಿತ್ರ:Tool hush screenshot.jpg
ಇಸವಿ 1992ರಲ್ಲಿ ಬಿಡುಗಡೆಯಾದ ಟೂಲ್‌ ವಾದ್ಯತಂಡದ ಮೊದಲ ಸಂಗೀತ ವೀಡಿಯೊ ಹುಷ್‌ನಲ್ಲಿ ವಾದ್ಯತಂಡದ ಸದಸ್ಯರು ಪ್ರಮುಖವಾಗಿ ಕಾಣಿಸಿಕೊಂಡರು.ಈ ಚಿತ್ರದಲ್ಲಿ ಎಡದಿಂದ ಬಲಕ್ಕೆ - ಕೀನನ್, ಕ್ಯಾರಿ, ಡಿ'ಅಮೊರ್‌ ಮತ್ತು ಜೋನ್ಸ್‌ ಜನನಾಂಗಗಳನ್ನು ಪೇರೆಂಟಲ್ ಆಡ್ವೈಸರಿ ಸ್ಟಿಕರ್‌(ಹೆತ್ತವರ ಸಲಹಾ ಸೂಚನಾ ಚೀಟಿ)ಗಳಿಂದ ಮುಚ್ಚಿಕೊಂಡಿದ್ದಾರೆ.

ಕೇವಲ ಕೆಲವೇ ವಾದ್ಯಗೋಷ್ಠಿ ಪ್ರದರ್ಶನಗಳ ನಂತರ, ಧ್ವನಿಮುದ್ರಣಾ ಉದ್ದಿಮೆಗಳು ವಾದ್ಯತಂಡವನ್ನು ಸಂಪರ್ಕಿಸಿದವು, ತಮ್ಮ ವೃತ್ತಿ ಆರಂಭಿಸಿ ಕೇವಲ ಮೂರು ತಿಂಗಳಲ್ಲಿ, ಝೂ ಎಂಟರ್ಟೇನ್ಮೆಂಟ್‌ ಉದ್ದಿಮೆಯೊಂದಿಗೆ ದಾಖಲೆಯ ಒಪ್ಪಂದಕ್ಕೆ ಸಹಿ ಹಾಕಿದರು. ವಾದ್ಯತಂಡದ ಮೊದಲ ಪ್ರಯತ್ನವಾದ'ಒಪಿಯೇಟ್ ‌'ನ್ನು ಝೂ ಮಾರ್ಚ್‌ 1992ರಲ್ಲಿ ಪ್ರಕಟಿಸಿತು. ದೊಡ್ಡ ಶಬ್ದದ ಹೆವಿ ಮೆಟಲ್‌ ಶೈಲಿಯ ಸಂಗೀತ ಹಾಗೂ ಆ ಸಮಯದಲ್ಲಿ ಬರೆದ "ಅತಿ ಗಡಸು ಶಬ್ದ"ದ ಆರು ಹಾಡುಗಳೊಂದಿಗೆ, EP 'ಹುಷ್‌' ಹಾಗೂ 'ಒಪಿಯೇಟ್‌' ಎಂಬ ಎರಡು ಏಕಗೀತೆಗಳನ್ನು ಸೇರಿಸಿಕೊಂಡಿತು. ವಾದ್ಯತಂಡದವರ ಮೊದಲ ಸಂಗೀತ ವೀಡಿಯೊ 'ಹುಷ್‌' ಅಂದು ಪ್ರಮುಖವಾದ ಪೇರೆಂಟ್ಸ್‌ ಮ್ಯೂಸಿಕ್‌ ರಿಸೋರ್ಸ್‌ ಸೆಂಟರ್‌ ಮತ್ತು ಅದರ ಸಂಗೀತ ಸೆನ್ಸಾರ್‌ಶಿಪ್‌ ಪರ ಸಮರ್ಥನೆಯ ವಿರುದ್ಧ ತಂಡವು ತಮ್ಮ ಭಿನ್ನಾಭಿಪ್ರಾಯಗಳಿಗೆ ಒತ್ತಾಸೆಯಾಯಿತು. ಹಾಡಿನ ವೀಡಿಯೊದಲ್ಲಿ ವಾದ್ಯತಂಡದ ಸದಸ್ಯರು ನಗ್ನರಾಗಿ ಅವರ ಜನನಾಂಗ ಪೇರೆಂಟಲ್ ಅಡ್ವೈಸರಿ(ಹೆತ್ತವರ ಸಲಹೆಸೂಚನೆ) ಚೀಟಿಗಳಿಂದ ಮುಚ್ಚಿದ್ದನ್ನು ಹಾಗೂ ಅವರ ಬಾಯಿಗಳನ್ನು ಅಂಟು-ಪಟ್ಟಿಯಿಂದ ಮುಚ್ಚಲಾಗಿದ್ದನ್ನು ತೋರಿಸಿದೆ. ವಾದ್ಯತಂಡವು ರೊಲಿನ್ಸ್‌ ಬ್ಯಾಂಡ್, ಫಿಷ್‌ಬೋನ್‌ ಹಾಗೂ ರೇಜ್‌ ಎಗೇನ್ಸ್ಟ್‌ ದಿ ಮೆಷೀನ್‌ ತಂಡಗಳ ಜತೆ ಸಕಾರಾತ್ಮಕ ಪ್ರತಿಕ್ರಿಯೆಗಳೊಂದಿಗೆ ಪ್ರವಾಸ ಪ್ರದರ್ಶನ ನಡೆಸಿದವು. ಸೆಪ್ಟೆಂಬರ್‌ 1992ರಲ್ಲಿ RIP ಮ್ಯಾಗಝೀನ್‌ ನ ಜಾನಿಸ್‌ ಗಾರ್ಝಾ ಇದನ್ನು ಒಂದು ಸಡಗರದ "ಪ್ರಬಲ ಆರಂಭ" ಎಂದು ಬಣ್ಣಿಸಿದ್ದರು.

ಅಂಡರ್‌ಟೌ (1993–1995)

ತರುವಾಯ ವರ್ಷ, ಪರ್ಯಾಯ ರಾಕ್‌ ಶೈಲಿಯ ಸಂಗೀತ ತನ್ನ ಉತ್ತುಂಗದಲ್ಲಿದ್ದಾಗ, ಟೂಲ್ ತಂಡದವರು‌ ತಮ್ಮ ಮೊಟ್ಟಮೊದಲ ಪೂರ್ಣಪ್ರಮಾಣದ ಆಲ್ಬಮ್‌ ಅಂಡರ್‌ಟೋವ್ (1993 ) ಬಿಡುಗಡೆಗೊಳಿಸಿದರು.

ಒಪಿಯೇಟ್‌ ಗಿಂತಲೂ ಇನ್ನಷ್ಟು ವಿಭಿನ್ನ ನಾದದ ಘಾತದಲ್ಲಿನ ಬದಲಾವಣೆ ಮತ್ತು ಪ್ರಮಾಣಭೇದವನ್ನು(ಡೈನಾಮಿಕ್ಸ್)ಎತ್ತಿತೋರಿಸಿತು. ಟೋಲ್‌ ವಾದ್ಯತಂಡವು ಸ್ವಲ್ಪ ಗಾಢ ಧ್ವನಿಗಳನ್ನು ಬಳಸಿದ ತನ್ನ ಹಿಂದಿನ ಆಲ್ಬಮ್‌ಗಳಲ್ಲಿ ಪ್ರಕಟಿಸದಿರದ ಹಾಡುಗಳನ್ನು ಈ ಆಲ್ಬಮ್‌ನಲ್ಲಿ ಪ್ರಕಟಿಸಿತು.  ಮೇ 1993 ಹೊರತುಪಡಿಸಿ, ಮುಂಚೆಯೇ ಯೋಜಿಸಿದಂತೆ, ಟೂಲ್‌ ವಾದ್ಯತಂಡವು ಪುನಃ ಪ್ರವಾಸ-ಪ್ರದರ್ಶನಗಳನ್ನು ನೀಡತೊಡಗಿತು.  ಹಾಲಿವುಡ್‌ನಲ್ಲಿರುವ ಗಾರ್ಡನ್‌ ಪೆವಿಲಿಯನ್‌ನಲ್ಲಿ ಟೂಲ್‌ ವಾದ್ಯತಂಡವು ಸಂಗೀತಗೋಷ್ಠಿ ನಡೆಸಲಿತ್ತು. ಆದರೆ, ಈ ಪೆವಿಲಿಯನ್‌ ಎಲ್‌ ರಾನ್‌ ಹಬಾರ್ಡ್‌‌ರ ಚರ್ಚ್‌ ಆಫ್‌ ಸಯೆಂಟಾಲಜಿ (ವೈಜ್ಞಾನಿಕ ಧರ್ಮ ದೇವಾಲಯ)ನ ಸ್ವತ್ತು ಎಂಬುದು ಕೊನೆಯ ಗಳಿಗೆಯಲ್ಲಿ ತಂಡದ ಸದಸ್ಯರಿಗೆ ತಿಳಿದುಬಂತು. ಮಾನವ ಜೀವಿಯ ಅಭಿವೃದ್ಧಿಯನ್ನು ಮೊಟಕು ಮಾಡುವ ನಂಬಿಕೆ ವ್ಯವಸ್ಥೆಯನ್ನು ವ್ಯಕ್ತಿಯೊಬ್ಬ ಹೇಗೆ ಅನುಸರಿಸಬಾರದು ಎಂಬ ಬಗ್ಗೆ ಬ್ಯಾಂಡ್ ನೀತಿಗಳ ಜತೆ ಸಂಘರ್ಷವೆಂದು ಇದನ್ನು ಗ್ರಹಿಸಲಾಯಿತು.  ಸಂಗೀತಗೋಷ್ಠಿಯುದ್ದಕ್ಕೂ ಕೀನನ್ ಪ್ರೇಕ್ಷಕರೆದುರು ಕುರಿಯಂತೆ ಕೂಗುತ್ತಿದ್ದರು. 

ಲೊಲಾಪಲೂಝಾ ಉತ್ಸವ ಪ್ರವಾಸ-ಪ್ರದರ್ಶನಗಳಲ್ಲಿ ಟೂಲ್ ತಂಡವು ಹಲವು ಸಂಗೀತಗೋಷ್ಠಿಗಳನ್ನು ನಡೆಸಿತು. ಅವರ ವ್ಯವಸ್ಥಾಪಕ ಹಾಗೂ ಉತ್ಸವದ ಸಹ-ಸಂಸ್ಥಾಪಕ ಟೆಡ್‌ ಗಾರ್ಡ್ನರ್‌ ತಂಡವನ್ನು ಎರಡನೆಯ ವೇದಿಕೆಯಿಂದ ಪ್ರಮುಖ ವೇದಿಕೆಗೆ ಸ್ಥಳಾಂತರಿಸಿದರು. ಟೂಲ್‌ ತಂಡದ ತವರು ನಗರ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಲೊಲಾಪಲೂಝಾದ ಕೊನೆಯ ಸಂಗೀತಗೋಷ್ಠಿಯಲ್ಲಿ, ಹಾಸ್ಯನಟ ಬಿಲ್‌ ಹಿಕ್ಸ್‌ ವಾದ್ಯತಂಡವನ್ನು ಪ್ರೇಕ್ಷಕರಿಗೆ ಪರಿಚಯಿಸಿದರು. ಹಿಕ್ಸ್‌ ವಾದ್ಯತಂಡದ ಸದಸ್ಯರುಗಳ ಸ್ನೇಹಿತರಾಗಿದ್ದರು. ಇದಲ್ಲದೆ, ಅಂಡರ್ಟೋ ಆಲ್ಬಮ್‌ನ ಟಿಪ್ಪಣಿಗಳಲ್ಲಿ ಇವರ ಹೆಸರನ್ನು ಉಲ್ಲೇಖಿಸಿದ ನಂತರ, ತಂಡದ ಮೇಲೆ ಇವರ ಪ್ರಭಾವವುಂಟಾಯಿತು. ಅವರು ತಮಾಷೆಗಾಗಿ, ಕಳೆದುಹೋಗಿದ್ದ ತಮ್ಮ ಕಾಂಟ್ಯಾಕ್ಟ್‌ ಲೆನ್ಸ್‌ನ್ನು ಕದಲದೇ ನಿಂತು ಹುಡುಕಿಕೊಡಲು ಅಲ್ಲಿ ನೆರೆದಿದ್ದ 60,000 ಜನ ಪ್ರೇಕ್ಷಕರನ್ನು ಕೋರಿದರು. ಈ ವಾದ್ಯಗೋಷ್ಠಿಗಳಿಂದ ಹೆಚ್ಚಾದ ಜನಪ್ರಿಯತೆಯಿಂದಾಗಿ, ಸೆಪ್ಟೆಂಬರ್‌ 1993ರಲ್ಲಿ RIAAಇಂದ ಅಂಡರ್ಟೋ ಆಲ್ಬಮ್‌ಗೆ ಗೋಲ್ಡ್‌ ಪ್ರಮಾಣೀಕರಣ, ಹಾಗೂ 1995ರಲ್ಲಿ ಪ್ಲ್ಯಾಟಿನಮ್‌ ಸ್ಥಾನಮಾನ ಸಂದಿತು. ವಾಲ್‌-ಮಾರ್ಟ್‌ನಂತಹ ವಿತರಕರು ಸೆನ್ಸರ್‌ಆದ ಆಲ್ಬಮ್‌ ರಕ್ಷಾಕವಚದೊಂದಿಗೆ ಇವನ್ನು ಮಾರಿದರೂ ಸಹ ಈ ಪ್ರಮಾಣೀಕರಣವು ಸಂದಿತು. ಮಾರ್ಚ್‌ 1994ನಲ್ಲಿ ಸೋಬರ್‌ ಎಂಬ ಏಕಗೀತೆಯು ಅಪಾರ ಜನಪ್ರಿಯತೆ ಗಳಿಸಿತು. ಬ್ಯಾಂಡ್ ಬಿಲ್‌ಬೋರ್ಡ್‌ನಿಂದಸ್ಟಾಪ್‌-ಮೋಷನ್‌ ಸಂಗೀತ ವಿಡಿಯೊ ಜತೆಗೂಡಿದ "ಬೆಸ್ಟ್ ವಿಡಿಯೊ ಬೈ ಎ ನ್ಯೂ ಆರ್ಟಿಸ್ಟ್" ಪ್ರಶಸ್ತಿಯನ್ನು ಗೆದ್ದಿತು.

ಆನಂತರ, 'ಪ್ರಿಸನ್‌ ಸೆಕ್ಸ್‌' ಟೂಲ್‌ ವಾದ್ಯತಂಡದ ಏಕಗೀತೆಯೊಂದಿಗೆ ಈ ವಾದ್ಯತಂಡವು ಸೆನ್ಸಾರ್‌ ಮಂಡಳಿಯ ಕೆಂಗಣ್ಣಿಗೆ ಗುರಿಯಾಯಿತು. ಈ ಹಾಡಿನ ಗೀತೆಗಳು ಮತ್ತು ವೀಡಿಯೊ ಮಕ್ಕಳ ಮೇಲಿನ ದೌರ್ಜನ್ಯ ಕುರಿತಾಗಿತ್ತು. ಇದು ವಿವಾದಾತ್ಮಕ ಪ್ರತಿಕ್ರಿಯೆಗಳಿಗೆ ಕಾರಣವಾಯಿತು. ಕೀನನ್ ಗೀತೆಗಳು ಈ ಸಾಲುಗಳೊಂದಿಗೆ ಆರಂಭವಾದವು: 'ಏನಾಯಿತು ಎಂದು ನೆನಪುಮಾಡಿಕೊಳ್ಳಲು ಬಹಳ ಸಮಯ ತೆಗೆದುಕೊಂಡಿತು. ನಾನು ಆಗ ಅತೀ ಎಳೆಯಪ್ರಾಯದಲ್ಲಿದ್ದೆ ಕನ್ಯಾವಸ್ಥೆಯಲ್ಲಿದ್ದೆ. ಅದು ನೋವುಂಟು ಮಾಡಿತೆಂದು ನಿಮಗೆ ಗೊತ್ತಿರಬಹುದು. ಆದರೆ ನಾನು ಉಸಿರಾಡುತ್ತಿದ್ದೆ, ಹೀಗಾಗಿ ಇನ್ನೂ ಜೀವಂತ ಇದ್ದೇನೆಂದು ಭಾವಿಸಿದೆ... ನನ್ನ ಕೈಗಳನ್ನು ಕಟ್ಟಲಾಗಿತ್ತು, ತಲೆ ಕೆಳಗೆ ವಾಲಿತ್ತು, ನನ್ನ ಕಣ್ಣುಗಳು ಮುಚ್ಚಿದ್ದವು ಮತ್ತು ಹಾಗೂ ಗಂಟಲು ಅಗಲವಾಗಿ ತೆರೆದುಕೊಂಡಿತ್ತು." ಈ ವೀಡಿಯೊವನ್ನು ಮುಖ್ಯವಾಗಿ ಗಿಟಾರ್‌ ವಾದಕ ಆಡಮ್‌ ಜೋನ್ಸ್‌ ರಚಿಸಿದ್ದರು. ಇದು ವಿಷಯದ ಅತಿವಾಸ್ತವಿಕತೆಯ ವ್ಯಾಖ್ಯಾನ ಎಂದು ಭಾವಿಸಿದರು. ಸಮಕಾಲೀನ ಪತ್ರಕರ್ತರು ಈ ವೀಡಿಯೊವನ್ನು ಪ್ರಶಂಸಿಸಿ, ಗೀತೆಗಳನ್ನು ರೂಪಕ ಎಂದು ವಿವರಿಸಿದರೆಮಚ್‌ಮ್ಯೂಸಿಕ್‌ನ ಅಮೆರಿಕನ್‌ ಶಾಖೆಯು, ವಿಚಾರಣೆಯಲ್ಲಿ ವಾದ್ಯತಂಡವನ್ನು ಪ್ರತಿನಿಧಿಸಲು ಕೀನನ್‌‌ಗೆ ತಿಳಿಸಿತು. ಸಂಗೀತದ ವೀಡಿಯೊ ಕಣ್ಣಿದ ಕಟ್ಟಿದ ವರ್ಣನೆ ಮತ್ತು ಅಶ್ಲೀಲತೆಯಿಂದ ಕೂಡಿದೆಯೆಂದು ಎಣಿಸಲಾಯಿತು, ಹಾಗೂ, ಕೆಲವು ದಿನಗಳ ಪ್ರಸಾರದ ನಂತರ ಎಂಟಿವಿ ವಾಹಿನಿಯು ಇದರ ಪ್ರಸಾರ ರದ್ದುಗೊಳಿಸಿತು.

ಸೆಪ್ಟೆಂಬರ್‌ 1995ರಲ್ಲಿ, ವಾದ್ಯತಂಡವು ತನ್ನ ಎರಡನೆಯ ಸ್ಟುಡಿಯೊ ಅಲ್ಬಮ್‌ಗಾಗಿ ಗೀತ-ಸಂಗೀತರಚನೆ ಮತ್ತು ಧ್ವನಿಮುದ್ರಣಾ ಚಟುವಟಿಕೆಗಳನ್ನು ಆರಂಭಿಸಿತು. ಆ ಸಮಯದಲ್ಲಿ, ಟೂಲ್ ಇದುವರೆಗಿನ ಏಕೈಕ ಬದಲಾವಣೆಯನ್ನು ಕಂಡಿತು. ಬಾಸ್‌ ಗಿಟಾರ್‌ ವಾದಕ ಡಿ'ಅಮೊರ್‌ ಈ ತಂಡವನ್ನು ಸ್ನೇಹಭಾವದಿಂದ ಬಿಟ್ಟು ಬೇರೆ ಯೋಜನೆಗಳನ್ನು ಹುಡುಕಿಕೊಂಡು ಹೋದರು. ಪ್ರವಾಸ-ಪ್ರದರ್ಶನಗಳಲ್ಲಿ ಮಾಜಿ ಸಹಯೋಗಿ ಪೀಚ್‌ ತಂಡದ ಸದಸ್ಯ ಜಸ್ಟಿನ್‌ ಛಾನ್ಸೆಲರ್‌ ಡಿ'ಅಮೊರ್‌ ಸ್ಥಾನದಲ್ಲಿ ಸೇರ್ಪಡೆಯಾದರು. ಇವರು ತಮ್ಮ ಪ್ರತಿಸ್ಪರ್ಧಿಗಳಾದ ಕ್ಯುಸ್‌ ತಂಡದ ಸ್ಕಾಟ್‌ ರೀಡರ್‌, ಫಿಲ್ಟರ್‌ ತಂಡದ ಫ್ರ್ಯಾಂಕ್‌ ಕ್ಯಾವನಾಹ್‌, ಪಿಗ್ಮಿ ಲವ್‌ ಸರ್ಕಸ್‌ ತಂಡದ ಇ. ಷೆಫರ್ಡ್‌ ಸ್ಟೀವೆನ್ಸನ್‌ ಹಾಗೂ ಝಾಮ್‌ ತಂಡದ ಮಾರ್ಕೊ ಫಾಕ್ಸ್‌ರನ್ನು ಹಿಂದಿಕ್ಕಿ ಟೂಲ್‌ ತಂಡಕ್ಕೆ ಆಯ್ಕೆಯಾದರು.

ಎನಿಮಾ (1996–2000)

ಚಿತ್ರ:Tool aenima cover dedication to hicks.jpg
ಎನಿಮಾ ಕಲಾಕೃತಿಯ ಪರ್ಯಾಯ ಆವೃತ್ತಿಯು ಹಾಸ್ಯನಟ ಬಿಲ್‌ ಹಿಕ್ಸ್‌ಗೆ 'ಮಡಿದ ಇನ್ನೊಬ್ಬ ನಾಯಕ' ಎಂಬ ಸಮರ್ಪಣೆಯನ್ನು ತೋರಿಸಿದೆ.

ಟೂಲ್‌ ತಂಡದವರು ತಮ್ಮ ಎರಡನೆಯ ಪೂರ್ಣಾವಧಿಯ ಆಲ್ಬಮ್‌ ಎನಿಮಾ ನ್ನು ೧೯೯೬ ಅಕ್ಟೋಬರ್ 1ರಂದು ಬಿಡುಗಡೆಗೊಳಿಸಿದರು. (pronounced /ˈɒnɪmə/) RIAA 4 ಮಾರ್ಚ್‌ 2003ರಂದು ಈ ಆಲ್ಬಮ್‌ಗೆ ಟ್ರಿಪಲ್‌ ಪ್ಲ್ಯಾಟಿನಮ್‌ ಪ್ರಮಾಣೀಕರಣ ನೀಡಲಾಯಿತು. ಪಾಲ್‌ ಡಿ'ಅಮೊರ್‌ ಟೂಲ್‌ ತಂಡದಿಂದ ನಿರ್ಗಮಿಸಿದಾಗ, ಜಸ್ಟಿನ್‌ ಛಾನ್ಸೆಲರ್‌ ಸೇರ್ಪಡೆಯಾದರು. ಆಗಲೇ ಆರಂಭಗೊಂಡಿದ್ದ ಎನಿಮಾ ಆಲ್ಬಮ್‌ಗಾಗಿ ಧ್ವನಿಮುದ್ರಣ ಮುಂದುವರೆಯಿತು. ವಾದ್ಯತಂಡವು ನಿರ್ಮಾಪಕ ಡೇವಿಡ್‌ ಬಾಟ್ರಿಲ್‌ರ ನೆರವು ಪಡೆಯಿತು. ಬಾಟ್ರಿಲ್‌ ಕಿಂಗ್‌ ಕ್ರಿಮ್ಸನ್‌ರ ಕೆಲವು ಆಲ್ಬಮ್‌ಗಳನ್ನು ನಿರ್ಮಿಸಿದ್ದರು. ಜೋನ್ಸ್‌ ಕ್ಯಾಮ್ ಡಿ ಲಿಯೊನ್‌ರ ಸಹಯೋಗದೊಂದಿಗೆ ಎನಿಮಾಸ್ದ ಕಲಾಕೃತಿ ರಚಿಸಿದರು. ಇದು ಗ್ರ್ಯಾಮಿ ಪ್ರಶಸ್ತಿಗಾಗಿ ನಾಮನಿರ್ದೇಶನ ಗಳಿಸಿತು.

ಎರಡುವರೆ ವರ್ಷಗಳ ಹಿಂದೆ ನಿಧನರಾದ ಹಾಸ್ಯನಟ ಬಿಲ್‌ ಹಿಕ್ಸ್‌ರಿಗೆ ಈ ಆಲ್ಬಮ್‌ನ್ನು ಸಮರ್ಪಿಸಲಾಯಿತು. ಹಿಕ್ಸ್‌ರ ವಸ್ತು ಮತ್ತು ಕಲ್ಪನೆಗಳ ಬಗ್ಗೆ ಅರಿವು ಮೂಡಿಸುವುದು ವಾದ್ಯತಂಡದ ಉದ್ದೇಶವಾಗಿತ್ತು, ಏಕೆಂದರೆ, ಹಿಕ್ಸ್‌ ಮತ್ತು ಟೂಲ್‌ ತಂಡವು 'ಒಂದೇ ರೀತಿಯ ಪರಿಕಲ್ಪನೆಗಳನ್ನು ಪಸರಿಸುತ್ತಿದ್ದವು' ಎಂದು ಅವರು ನಂಬಿದ್ದರು. ಅದರಲ್ಲೂ ವಿಶಿಷ್ಟವಾಗಿ, ಎನಿಮಾ ಆಲ್ಬಮ್‌ನ ಕೊನೆಯ ಧ್ವನಿಪಥವಾದ 'ಥರ್ಡ್‌ ಐ' ಮುಂಚೆ ಹಿಕ್ಸ್‌ರ ಪ್ರದರ್ಶನಗಳ ಕ್ಲಿಪ್ ಸೇರಿಸಲಾಗಿತ್ತು. ಎರಡೂ ಕಡೆ ಉಬ್ಬಿರುವ ಎನಿಮಾ ಆಲ್ಬಮ್‌ನ ಕವಚ ಹಾಗೂ ಶೀರ್ಷಿಕೆ ಗೀತೆ ಎನಿಮಾ, ಹಿಕ್ಸ್‌ರ ಅರಿಝೋನಾ ಬೇ ದ ರೂಪರೇಖೆಯನ್ನು ಉಲ್ಲೇಖಿಸಿದೆ. ಇದರಲ್ಲಿ, ಲಾಸ್‌ ಏಂಜಲೀಸ್‌ ಪೆಸಿಫಿಕ್ ಸಾಗರದಲ್ಲಿ ಮುಳುಗಿಹೋಗುವ ಕಲ್ಪನೆಯನ್ನು ಹಿಕ್ಸ್‌ ಕಾಣುತ್ತಾರೆ.

ಮೊದಲ ಏಕಗೀತೆಯಾದ ಸ್ಟಿಂಕ್‌ಫಿಸ್ಟ್‌ ಸೀಮಿತ ಹಾಗೂ ನಿರೀಕ್ಷೆಗಿಂತಲೂ ಕಡಿಮೆ ಪ್ರಸರಣ ಕಂಡಿತು. ರೇಡಿಯೊ ಕಾರ್ಯಕ್ರಮ ಸಂಯೋಜಕರು ಈ ಹಾಡನ್ನು ಮೊಟಕುಗೊಳಿಸಿದರು. ಹೊಲಸು ಅದಿಕಾರ್ಥತೆಗಳಿದ್ದ ಕಾರಣ, ಎಂಟಿವಿ (U.S.) ಸ್ಟಿಂಕ್‌ಫಿಸ್ಟ್‌ನ ಸಂಗೀತ ವೀಡಿಯೊವನ್ನು ಸುಮ್ಮನೆ 'ಟ್ರ್ಯಾಕ್‌ #1' ಎಂದು ಮರುನಾಮಕರಣ ಮಾಡಿತು ಹಾಗೂ ಗೀತೆಯ ಸಂಗೀತವನ್ನು ಬದಲಿಸಿತು. ಸೆನ್ಸರ್‌ಶಿಪ್‌ ಬಗ್ಗೆ ಅಭಿಮಾನಿಗಳ ದೂರುಗಳಿಗೆ ಸ್ಪಂದಿಸಿದ ಎಂಟಿವಿಯ 120 ಮಿನಿಟ್ಸ್ ‌ನ ಮ್ಯಾಟ್‌ ಪಿನ್ಫೀಲ್ಡ್‌, ಈ ವೀಡಿಯೊವನ್ನು ಪರಿಚಯಿಸಿ ಹೆಸರು ಬದಲಾವಣೆಯ ಕಾರಣ ವಿವರಿಸುವಾಗ, ತಮ್ಮ ಮುಷ್ಠಿಯನ್ನು ಮುಖದ ಮುಂದೆ ಆಡಿಸಿ ವಿಷಾದ ವ್ಯಕ್ತಪಡಿಸಿದರು.

'ಎನಿಮಾ' ಬಿಡುಗಡೆಯಾಗಿ ಎರಡು ವಾರಗಳ ನಂತರ, ಅಕ್ಟೋಬರ್‌ 1996ರಲ್ಲಿ ಪ್ರವಾಸವೊಂದು ಆರಂಭವಾಯಿತು. ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಯುರೋಪ್‌‌ನಲ್ಲಿ ಅಸಂಖ್ಯಾತ ಪ್ರದರ್ಶನಗಳ ನಂತರ ಟೂಲ್‌ ವಾದ್ಯತಂಡವು ಮಾರ್ಚ್‌ 1997ರ ಅಪರಾರ್ಧದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಪ್ರವಾಸ ಹೊರಟಿತು. ಆ ವರ್ಷದ ಏಪ್ರಿಲ್‌1ರಂದು ಈ ವಾದ್ಯತಂಡಕ್ಕೆ ಸಂಬಂಧಿಸಿದ ಹಲವು ಏಪ್ರಿಲ್‌ ಫೂಲ್ಸ್‌ ಕುಚೇಷ್ಟೆಗಳು ನಡೆದವು. 'ಹೆದ್ದಾರಿಯೊಂದರಲ್ಲಿ ಅಪಘಾತ ಸಂಭವಿಸಿ, ತಂಡದ ಕನಿಷ್ಠ ಪಕ್ಷ ಮೂವರು ಸದಸ್ಯರ ಸ್ಥಿತಿ ಚಿಂತಾಜನಕವಾಗಿದೆ' ಎಂದು ಟೂಲ್‌ ವಾದ್ಯತಂಡದ ಅರೆ-ಅಧಿಕೃತ ಅಭಿಮಾನಿ ಪುಟದ ವೆಬ್‌ಮಾಸ್ಟರ್‌ (ಅಂತರಜಾಲತಾಣದ ಸಂಚಾಲಕ) ಕಬೀರ್‌ ಅಖ್ತರ್‌ ಬರೆದರು. ಈ ಗಾಳಿಸುದ್ದಿ ವ್ಯಾಪಕ ಗಮನ ಸೆಳೆಯಿತು. ಅಂತಿಮವಾಗಿ ರೇಡಿಯೊ ಮತ್ತು ಎಂಟಿವಿ ವಾಹಿನಿಯಲ್ಲಿ ಬಯಲಾಯಿತು. ಅಖ್ತರ್‌ ಕ್ಷಮಾಪಣಾ ಪತ್ರವನ್ನು ಜಾಲತಾಣದ ಮೇಲೆ ಪ್ರಕಟಿಸಿ, 'ಟೂಲ್ ಪೇಜ್ ಇನ್ನು ಮುಂದೆ ಈ ತರಹದ ವಿಲಕ್ಷಣ ಕುಚೇಷ್ಟೆಗಳಲ್ಲಿ ಒಳಗೊಳ್ಳುವುದಿಲ್ಲ' ಎಂದು ತಿಳಿಸಲಾಯಿತು. ಆದರೂ, ಆನಂತರದ ಏಪ್ರಿಲ್‌ ಫೂಲ್‌ ಕುಚೇಷ್ಟೆಗಳು ಈ ಹೇಳಿಕೆಗೆ ತದ್ವಿರುದ್ಧವಾಗಿತ್ತು. ಮುಂಚೆಯೇ ಘೋಷಿಸಿದಂತೆ, ಪ್ರವಾಸ ಮಾರನೆಯ ದಿನ ಮುಂದುವರೆಯಿತು.

ವಾದ್ಯತಂಡ ಟೂಲ್‌ 
ಇಸವಿ 2006ರ ರಾಸ್ಕಿಲ್ಡ್‌ ಉತ್ಸವದಲ್ಲಿ ಪ್ರದರ್ಶನ ನೀಡುತ್ತಿರುವ ಬಾಸ್‌ ಗಿಟಾರ್‌ ವಾದಕ ಜಸ್ಟಿನ್‌ ಛಾನ್ಸೆಲರ್‌.

ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಮರಳಿದ ನಂತರ, ಟೂಲ್‌ ವಾದ್ಯತಂಡವು ಜುಲೈ 1997ರಲ್ಲಿ ಲೊಲಾಪಲೂಝಾ '97 ಉತ್ಸವದಲ್ಲಿ ಕಾಣಿಸಿಕೊಂಡಿತು. ಇಲ್ಲಿ ಅವರು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ, ನ್ಯೂಯಾರ್ಕ್‌ ಟೈಮ್ಸ್‌ ನಿಂದ ವಿಮರ್ಶಾತ್ಮಕ ಪ್ರಶಂಸೆ ಗಿಟ್ಟಿಸಿಕೊಂಡಿತು:

"Tool was returning in triumph to Lollapalooza after appearing among the obscure bands on the festival's smaller stage in 1993. Now Tool is the prime attraction for a festival that's struggling to maintain its purpose... Tool uses taboo-breaking imagery for hellfire moralizing in songs that swerve from bitter reproach to nihilistic condemnation. Its music has refined all the troubled majesty of grunge."

1990ರ ದಶಕದ ಮಧ್ಯದಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪರ್ಯಾಯ ರಾಕ್ ಶೈಲಿಯ ಸಂಗೀತದ ಜನಪ್ರಿಯತೆ ಕಡಿಮೆಯಾಗುತ್ತಿದ್ದರೂ, ಎನಿಮಾ ತರುವಾಯ ತನ್ನ ಮಾರಾಟಗಳಲ್ಲಿ ಟೂಲ್‌ನ ಆರಂಭಿಕ ಆಲ್ಬಮ್‌ನ ಮಾರಾಟಕ್ಕೆ ಸರಿಸಾಟಿಯಾಯಿತು. ಪ್ರಗತಿಪರ ವಿಚಾರಗಳಿಂದ ಪ್ರಭಾವಿತವಾದ ಎನಿಮಾ ವಾದ್ಯತಂಡವನ್ನು ಪರ್ಯಾಯ ಮೆಟಲ್‌ ಶೈಲಿ ಸಂಗೀತದ ಅಗ್ರಸ್ಥಾನಕ್ಕೆ ಇಳಿಸಿತು. ಇದು ಗ್ರ್ಯಾಮಿ ವಿಜೇತ ಎನಿಮಾವನ್ನೂ ಒಳಗೊಂಡಿತು, ಹಾಗೂ ಹಲವು 'ಬೆಸ್ಟ್‌ ಆಲ್ಬಮ್ಸ್‌ ಆಫ್‌ 1996' ಪಟ್ಟಿಗಳಲ್ಲಿ ಕಾಣಿಸಿಕೊಂಡಿತು. ಇದಕ್ಕೆ ಕೆರ್ರಾಂಗ್‌ ಮತ್ತು ಟೆರರೈಝರ್‌ ಇದಕ್ಕೆ ಗಮನಾರ್ಹ ಉದಾಹರಣೆಗಳು.

ಇದೇ ವರ್ಷ ಆರಂಭಗೊಂಡ ಕಾನೂನು ಮೊಕದ್ದಮೆಯು, ಇನ್ನೊಂದು ಆಲ್ಬಮ್‌ ಬಿಡುಗಡೆಗೆ ನಿರತವಾಗಿದ್ದ ವಾದ್ಯತಂಡದ ಕೆಲಸಕ್ಕೆ ಅಡ್ಡಿಯಾಯಿತು. ಟೂಲ್‌ ತಂಡದ ಆಗಿನ ಬಳಕೆಯಲ್ಲಿಲ್ಲದ 'ಝೂ ಎಂಟರ್ಟೇನ್ಮೆಂಟ್‌' ಏಕಗೀತೆಯ ಉತ್ತರಾಧಿಕಾರಿ ವಾಲ್ಕನೊ ಎಂಟರ್ಟೇನ್ಮೆಂಟ್‌, ಟೂಲ್‌ ತಂಡದಿಂದ ಗುತ್ತಿಗೆಯ ಕರಾರು ಉಲ್ಲಂಘನೆಯಾಗಿದೆ ಎಂದು ಮೊಕದ್ದಮೆ ಹೂಡಿತು. ವಾಲ್ಕನೊ ಪ್ರಕಾರ, ಇತರೆ ಧ್ವನಿಮುದ್ರಣಾ ಉದ್ದಿಮೆಗಳೊಂದಿಗೆ ಅವಕಾಶಗಳನ್ನು ಹುಡುಕುತ್ತಿರುವ ಮೂಲಕ, ಟೂಲ್‌ ತನ್ನೊಂದಿಗಿನ ಕರಾರು ಉಲ್ಲಂಘಿಸಿದೆ. ತಮ್ಮ ಗುತ್ತಿಗೆಯಲ್ಲಿ ವಾಲ್ಕನೊ ನವೀಕರಣ ಆಯ್ಕೆಯನ್ನು ಬಳಸಲು ವಿಫಲವಾಯಿತು ಎಂದು ಟೂಲ್‌ ಪ್ರತಿ-ಮೊಕದ್ದಮೆ ಹೂಡಿದ ನಂತರ, ಉಭಯತ್ರರು ನ್ಯಾಯಾಲಯದ ಹೊರಗೆ ಒಪ್ಪಂದ ಮಾಡಿಕೊಂಡವು. ಡಿಸೆಂಬರ್‌ 1998ರಲ್ಲಿ ಟೂಲ್‌ ಹೊಸ ಗುತ್ತಿಗೆಗೆ ಒಪ್ಪಿಕೊಂಡಿತು. ಇದು ಮೂರು-ವರ್ಷಗಳ ಜಂಟಿ ಸಹಯೋಗದ ಒಪ್ಪಂದವಾಗಿತ್ತು.

ಇಸವಿ 2000ರಲ್ಲಿ, ವಾದ್ಯತಂಡವು ದೀರ್ಘಾವಧಿಯ ಕಾಲ ವ್ಯವಸ್ಥಾಪಕರಾಗಿದ್ದ ಟೆಡ್‌ ಗಾರ್ಡ್ನರ್‌ರನ್ನು ವಜಾ ಮಾಡಿತು. ಈ ಲಾಭದಾಯಕ ಒಪ್ಪಂದದಲ್ಲಿ ತಮಗೆ ಸಲ್ಲಬೇಕಿದ್ದ ದಳ್ಳಾಳಿ ಹಣದ ಕುರಿತು ಈ ವಾದ್ಯತಂಡದ ವಿರುದ್ಧ ಮೊಕದ್ದಮೆ ಹೂಡಿದರು. 

ಈ ಸಮಯದಲ್ಲಿ, ಟೂಲ್ ತಂಡದಲ್ಲಿ ಬಹಳ ಕಾಲ ಗಿಟಾರ್‌ ತಂತ್ರಜ್ಞಾನಿಯಾಗಿದ್ದ ಬಿಲ್ಲಿ ಹೊವರ್ಡೆಲ್‌ ಸ್ಥಾಪಿಸಿದ‌ ಎ ಪರ್ಫೆಕ್ಟ್‌ ಸರ್ಕಲ್‌ ವಾದ್ಯತಂಡಕ್ಕೆ ಕೀನನ್ ಸೇರಿದರು. ಅಲ್ಲದೆ, ಜೋನ್ಸ್‌, ದಿ ಮೆಲ್ವಿನ್ಸ್‌ ತಂಡದ ಬಝ್‌ ಆಸ್ಬೊರ್ನ್‌ಗೆಸೇರಿದರು. ಕ್ಯಾರಿ ಇತರೆ ಉಪಯೋಜನೆಗಳಲ್ಲಿ ಡೆಡ್ ಕೆನೆಡಿಸ್‌‌ ಜೆಲ್ಲೊ ಬಯಾಫ್ರಾ ತಂಡದಲ್ಲಿ ಡ್ರಮ್‌ ವಾದಕರಾಗಿ ಸೇರಿದರು. ಟೂಲ್‌ ತಂಡವು ಒಡದುಹೋಗುತ್ತಿದೆಯೆಂಬ ವದಂತಿಗಳಿದ್ದರೂ ಸಹ, ಕೀನನ್ ವಾಪಸಾತಿಯನ್ನು ನಿರೀಕ್ಷಿಸುತ್ತಿದ್ದ ಚಾನ್ಸಲರ್, ಜೋನ್ಸ್‌ ಮತ್ತು ಕ್ಯಾರಿ ಹೊಸ ಹಾಡುಗಳ ರಚನೆಯಲ್ಲಿ ತೊಡಗಿದರು. ಇಸವಿ 2000ರಲ್ಲಿ, ಸಲೈವಲ್ ‌ ಬಾಕ್ಸ್‌ ಸೆಟ್ (CD/VHS or CD/DVD) ಬಿಡುಗಡೆಯಾಯಿತು. ಇದರಿಂದಾಗಿ, ಎಲ್ಲಾ ವದಂತಿಗಳಿಗೆ ಪರಿಣಾಮಕಾರಿ ತೆರೆಬಿತ್ತು. ಈ ಸಿಡಿ ಹೊಸದಾದ ಮೂಲ ಧ್ವನಿಪಥವನ್ನು ಹೊಂದಿತ್ತು. ಇದು ಲೆಡ್‌ ಝೆಪೆಲಿನ್‌ನ 'ನೋ ಕ್ವಾರ್ಟರ್‌'ನ ಕವರ್(ಜನಪ್ರಿಯ ಹಾಡಿನ ಧ್ವನಿಮುದ್ರಣ)ಆವೃತ್ತಿಯಾಗಿತ್ತು, ಪೀಚ್‌ನ 'ಯು ಲೈಡ್‌' ಹಾಗೂ ಹಳೆಯ ಹಾಡಿಗಳ ಪರಿಷ್ಕೃತ ಆವೃತ್ತಿಗಳು ಸೇರಿದ್ದವು. ವಿಹೆಚ್‌ಎಸ್‌ ಮತ್ತು ಡಿವಿಡಿ ತಲಾ ನಾಲ್ಕು ಸಂಗೀತ ವಿಡಿಯೊಗಳು, ಜೊತೆಗೆ ಡಿವಿಡಿಯಲ್ಲಿ ಹುಷ್‌ ಸಂಗೀತ ವೀಡಿಯೊದ ಒಂದು ಬೊನಸ್‌ ಡಿವಿಡಿ ಹೊಂದಿದ್ದವು. ಸಲೈವಲ್‌ ಯಾವುದೇ ಏಕಗೀತೆಯನ್ನು ಹೊಂದಿಲ್ಲದಿದ್ದರೂ, ಮುಚ್ಚಿಟ್ಟ 'ಮೇಯ್ನಾರ್ಡ್ಸ್‌ ಡಿಕ್' ಧ್ವನಿಪಥವು (ಒಪಿಯೇಟ್‌ ಕಾಲಕ್ಕೆ ಸೇರಿದ್ದು) ಎಫ್‌ಎಮ್‌ ರೇಡಿಯೊದಲ್ಲಿ ಪ್ರಸಾರಗೊಂಡಿತು. ಇದೇ ವೇಳೆ ಹಲವು ಡಿಜೆಗಳು (ಡಿಸ್ಕ್ ಜಾಕಿಗಳು) "ಮೇಯ್ನಾರ್ಡ್ಸ್ ಡೆಡ್‌" ಎಂಬ ಶೀರ್ಷಿಕೆಯಡಿ ಈ ಹಾಡನ್ನು ಪ್ರಸಾರ ಮಾಡಲು ಇಚ್ಛಿಸಿದರು.

ಲ್ಯಾಟೆರಾಲಸ್‌ (2001–2005)

ಜನವರಿ 2001ರಲ್ಲಿ, ಟೂಲ್‌ ಸಿಸ್ಟೆಮಾ ಎನ್ಸೆಫೇಲ್‌ ಎಂಬ ತನ್ನ ಹೊಸ ಆಲ್ಬಮ್, ಜೊತೆಗೆ ಹನ್ನೆರಡು ಹಾಡುಗಳುಳ್ಳ ಧ್ವನಿಪಥಗಳನ್ನು ಬಿಡುಗಡೆಗೊಳಿಸಿತು. ಇದರಲ್ಲಿ 'ರಿವರ್‌ಕ್ರೈಸ್ಟ್', 'ಎನ್ಸೆಫಟಲಿಸ್‌', ಮ್ಯೂಸಿಕ್‌ ಮತ್ತು ಸೀಲಿಯಾಕಸ್‌ ಶೀರ್ಷಿಕೆಗಳ ಹಾಡುಗಳಿದ್ದವು.‌ ನ್ಯಾಪ್‌ಸ್ಟರ್‌ನಂತಹ ಕಡತ ಹಂಚಿಕೆಯ ಜಾಲಗಳಲ್ಲಿ ಇದೇ ಶೀರ್ಷಿಕೆಯ ಹೆಸರುಗಳುಳ್ಳ ನಕಲಿ ಕಡತಗಳು ತುಂಬಿಕೊಂಡವು. ಇದೇ ಸಮಯ, ಟೂಲ್‌ ಸದಸ್ಯರು ಕಡತ ಹಂಚಿಕೆಯ ಜಾಲತಾಣಗಳನ್ನು ಟೀಕಿಸಿದ್ದರು. ಏಕೆಂದರೆ, ವೃತಿಯಲ್ಲಿ ಮುಂದುವರೆಯಲು ತಮ್ಮ ಹಾಡುಗಳ ದಾಖಲೆ ಮಾರಾಟದ ಯಶಸ್ಸಿನ ಮೇಲೆ ಅವಲಂಬಿತರಾಗಿದ್ದ ಕಲಾವಿದರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದೆಂದು ಅವರು ಟೀಕೆ ಮಾಡಿದ್ದರು. ಇಸವಿ 2000ರಲ್ಲಿ ಎನ್‌ವೈ ರಾಕ್ ‌ನೊಂದಿಗಿನ ಸಂದರ್ಶನವೊಂದರಲ್ಲಿ ಕೀನನ್ ಹೇಳಿದ್ದು ಹೀಗೆ - 'ವಿನಾಶಕ್ಕೆ ಅರ್ಹವಾಗಿರಬಹುದಾದ ಇನ್ನೂ ಹಲವು ಉದ್ದಿಮೆಗಳಿವೆಯೆಂದು ಭಾವಿಸುವೆ. ಈ ಎಂಪಿ3 ಆವೃತ್ತಿಗಳಿಂದಾಗಿ ಉದ್ದಿಮೆಗಳು ಹಾಳಾಗದು ಅಥವಾ ವ್ಯವಹಾರಕ್ಕೆ ಪೆಟ್ಟು ಬೀಳುವುದಿಲ್ಲ. ಆದರೆ ಹಾಡುಗಳನ್ನು ಬರೆಯಲು ಯತ್ನಿಸುವ ಜನರಾದ ಕಲಾವಿದರಿಗೆ ಹಾನಿಯಾಗುತ್ತಿದೆ.'

ಒಂದು ತಿಂಗಳ ನಂತರ, ಈ ಹೊಸ ಆಲ್ಬಮ್‌ ನಿಜಕ್ಕೂ ಲ್ಯಾಟೆರಲಸ್‌ ಎಂಬ ಶಿರೋನಾಮೆ ಹೊಂದಿದೆ, ಸಿಸ್ಟೆಮಾ ಎನ್ಸೆಫೇಲ್‌ ಮತ್ತು ಟ್ರಾಕ್‌ಲಿಸ್ಟ್ ಒಂದು ತಂತ್ರ ಎಂದು ಟೂಲ್‌ ವಾದ್ಯತಂಡವು ಬಹಿರಂಗಗೊಳಿಸಿತು. ಲ್ಯಾಟೆರಲಸ್ ಹಾಗೂ ಇತರೆ ಪ್ರವಾಸಗಳು ಟೂಲ್‌ ತಂಡವನ್ನು ಕಲಾತ್ಮಕ ರಾಕ್‌ ಶೈಲಿಯ ಸಂಗೀತ ಹಾಗೂ ಆಧುನಿಕ ರಾಕ್‌ ಶೈಲಿಯ ಸಂಗೀತ ಕ್ಷೇತ್ರದತ್ತ ಒಯ್ದಿತು. ರೋಲಿಂಗ್‌ ಸ್ಟೋನ್‌ ಈ ಆಲ್ಬಮ್‌ ಬಗ್ಗೆ ಸಾರಾಂಶ ನೀಡುವ ಪ್ರಯತ್ನದಲ್ಲಿ ಬರೆದರು: 'ಡ್ರಮ್‌, ಬಾಸ್‌ ಮತ್ತು ಗಿಟಾರ್‌ ವಾದ್ಯಗಳು ಗಟ್ಟಿಧ್ವನಿಯ ಕರ್ಕಶ ಆವರ್ತಗಳಲ್ಲಿ ಹಾಗೂ ನಿಶ್ಯಬ್ದ ಸಾವಿನ ನಡಿಗೆಯಲ್ಲಿ ಸಾಗುತ್ತವೆ. ಲ್ಯಾಟೆರಲಸ್' ‌ ಆಲ್ಬಮ್‌ನ ಹದಿಮೂರು ಹಾಡುಗಳಲ್ಲಿ ಬಹುತೇಕ ಹಾಡುಗಳ ಲಂಬಿಸಿದ ಅವಧಿಗಳು ದಾರಿ ತಪ್ಪಿಸುತ್ತದೆ. ಇಡೀ ಅಲ್ಬಮ್‌ ಸೂಟ್(ಹಲವು ವಾದ್ಯಗಳ ಸೆಟ್) ರೀತಿಯ ಉದ್ದೇಶದೊಂದಿಗೆ ಉರುಳುತ್ತದೆ.ತನ್ನ 79 ನಿಮಿಷಗಳ ಅವಧಿ ಹಾಗೂ ತುಲನಾತ್ಮಕವಾಗಿ ಸಂಕೀರ್ಣ ಹಾಗೂ ಅತ್ಯುದ್ದ ಹಾಡುಗಳುಳ್ಳ ಲ್ಯಾಟೆರಲಸ್‌ ನೊಂದಿಗೆ ಪಾರಾಬೊಲಾ ದ ಹತ್ತುವರೆ ನಿಮಿಷ ಅವಧಿಯ ಸಂಗೀತ ವೀಡಿಯೊದ ಮೇಲ್ತುದಿಯೊಂದಿಗೆ,ಅಭಿಮಾನಿಗಳು ಹಾಗೂ ಸಂಗೀತ ಸಂಯೋಜನೆಗೆ ಸಮಾನವಾಗಿ ಸವಾಲೊಡ್ಡುತ್ತದೆ ಎಂದು ದಿ ಎ.ವಿ. ಕ್ಲಬ್‌ಜೋಷುವಾ ಕ್ಲೀನ್ ‌ಅಭಿಪ್ರಾಯ ವ್ಯಕ್ತಪಡಿಸಿದರು.

ವಾದ್ಯತಂಡ ಟೂಲ್‌ 
ಇಸವಿ 2006ರಲ್ಲಿ ನಡೆದ ರಾಸ್ಕಿಲ್ಡ್‌ ಉತ್ಸವದಲ್ಲಿ ಪ್ರದರ್ಶನ ನೀಡುತ್ತಿರುವ ಗಿಟಾರ್‌ ವಾದಕ ಆಡಮ್‌ ಜೋನ್ಸ್.

ಈ ಆಲ್ಬಮ್‌ ವಿಶ್ವದಾದ್ಯಂತ ಯಶಸ್ಸು ಗಳಿಸಿತು. ತನ್ನ ಮೊದಲ ವಾರದಲ್ಲಿ ಅಮೆರಿಕಾ ದೇಶದ ಬಿಲ್ಬೋರ್ಡ್‌ 200 ಆಲ್ಬಮ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಚಿಸ್ಮ್‌ ಹಾಡಿಗಾಗಿ ಟೂಲ್‌ ತಂಡಕ್ಕೆ ಇಸವಿ 2001ರಲ್ಲಿ ಅತ್ಯುತ್ತಮ ಮೆಟಲ್‌ ಶೈಲಿಯ ಸಂಗೀತ ಪ್ರದರ್ಶನಕ್ಕಾಗಿ ಎರಡನೆಯ ಗ್ರ್ಯಾಮಿ ಪ್ರಶಸ್ತಿ ದೊರಕಿತು. ವಾದ್ಯತಂಡದ ಪರವಾಗಿ, ಡ್ರಮ್‌ ವಾದಕ ಕ್ಯಾರಿ ತಮ್ಮ ಸ್ವೀಕೃತಿ ಭಾಷಣದಲ್ಲಿ ತಮ್ಮನ್ನು ಪೋಷಿಸಿದ ಹೆತ್ತವರು ಮತ್ತು ಸೈತಾನನಿಗೆ ಧನ್ಯವಾದ ಸೂಚಿಸಲು ಬಯಸುವುದಾಗಿ ತಿಳಿಸಿದರು. ಕೊನೆಯಲ್ಲಿ ಮಾತನಾಡಿದ ಬಾಸ್‌ ಗಿಟಾರ್‌ ವಾದಕ ಛಾನ್ಸೆಲರ್‌, 'ನನ್ನ ತಂದೆಗೆ ಧನ್ಯವಾದ ಹೇಳಲು ಬಯಸುತ್ತೇನೆ' ಎಂದರು.

ಇಸವಿ 2001 ಹಾಗೂ 2002ರಲ್ಲಿ ವ್ಯಾಪಕ ಪ್ರವಾಸವುಲ್ಯಾಟೆರಲಸ್‌ ಗೆ ಉತ್ತೇಜಿಸಿತು ಮತ್ತು ಇದರಲ್ಲಿ ಸೇರಿದ ವಾದ್ಯತಂಡಕ್ಕೆ ವೈಯಕ್ತಿಕ ಗಮನಸೆಳೆಯುವ ಅಂಶ ಸೇರಿತ್ತು. ಅದು ಆಗಸ್ಟ್‌ 2001ರಲ್ಲಿ ಕಿಂಗ್‌ ಕ್ರಿಮ್ಸನ್‌ ವೊಂದಿಗೆ ಹತ್ತು ಪ್ರದರ್ಶನಗಳ ಕಿರು-ಪ್ರವಾಸವಾಗಿತ್ತು. ಇವೆರಡೂ ವಾದ್ಯತಂಡಗಳನ್ನು ಹೋಲಿಸಲಾಯಿತು.MTV ಪ್ರಗತಿಪರ ರಾಕ್‌ ಶೈಲಿಯ ಸಂಗೀತದ ಒಂದು ಬಾರಿಯ ಹಾಗೂ ಮುಂದಿನ ಸಾಮ್ರಾಟರು ಎಂದು ಎಂಟಿವಿ ಬಣ್ಣಿಸಿತು. ಈ ಕಿರು-ಪ್ರವಾಸ ಕುರಿತು ಕೀನನ್ ಹೇಳಿದ್ದು ಹೀಗೆ: 'ಕಿಂಗ್‌ ಕ್ರಿಮ್ಸನ್‌ರೊಂದಿಗೆ ವೇದಿಕೆ ಹಂಚುವುದು ಎಂದರೆ ಲೆನಿ ಕ್ರಾವಿಟ್ಸ್‌ ಲೆಡ್‌ ಝೆಪೆಲ್ಲಿನ್‌ರೊಂದಿಗೋ ಅಥವಾ ಡೆಬ್ಬಿ ಜಿಬ್ಸನ್‌ರೊಂದಿಗೆ ಬ್ರಿಟ್ನಿ ಸ್ಪಿಯರ್ಸ್‌ ವೇದಿಕೆ ಹಂಚಿದಂತೆ.'

ನವೆಂಬರ್‌ 2002ರಂದು, ಪ್ರವಾಸದ ಅಂತ್ಯವು ಇನ್ನೊಂದು ಜಡತೆಯು ಆರಂಭವಾಗುವ ಸೂಚನೆಯಂತೆ ಕಂಡಿತಾದರೂ,ವಾದ್ಯತಂಡವು ಸಂಪೂರ್ಣವಾಗಿ ನಿಷ್ಕ್ರಿಯವಾಗಲಿಲ್ಲ. ಕೀನನ್ ಎ ಪರ್ಫೆಕ್ಟ್‌ ಸರ್ಕಲ್‌ ತಂಡದ ಧ್ವನಿಮುದ್ರಣ ಮತ್ತು ಪ್ರವಾಸದಲ್ಲಿ ಪಾಲ್ಗೊಂಡರೆ, ವಾದ್ಯತಂಡದ ಇತರೆ ಸದಸ್ಯರು ಅಭಿಮಾನಿಗಳ ಸಮುದಾಯಕ್ಕಾಗಿ ಹೊಸ ಹಾಡಿನ ಸಂದರ್ಶನ ಮತ್ತು ದ್ವನಿಮುದ್ರಣ ಬಿಡುಗಡೆ ಮಾಡಿದರು. 'ಮೇಯ್ನಾರ್ಡ್‌ ಜೀಸಸ್‌ರನ್ನು ಕಂಡುಹಿಡಿದ' ಎಂದು ಹೇಳಿ, ಟೂಲ್‌ನ ಹೊಸ ಆಲ್ಬಮ್‌ ಧ್ವನಿಮುದ್ರಣವನ್ನು ತಾತ್ಕಾಲಿಕವಾಗಿ ಅಥವಾ ಕಾಯಂ ಸ್ಥಗಿತಗೊಳಿಸುತ್ತದೆ ಎಂದು ಟೂಲ್‌ ತಂಡದ ಅಧಿಕೃತ ಅಂತರಜಾಲತಾಣವು 2005 ಏಪ್ರಿಲ್ 1ರಂದು ಪ್ರಕಟಿಸಿತು. ಎಂಟಿವಿ ವಾಹಿನಿಯ ಕರ್ಟ್‌ ಲೊಡರ್ ಇದನ್ನು ಖಚಿತಪಡಿಸಲು‌ ವಿದ್ಯುನ್ಮಾನ ಅಂಚೆ ಮೂಲಕ ಕೀನನ್‌ರನ್ನು ಸಂಪರ್ಕಿಸಿದರು. ಕೀನನ್‌ರಿಂದ ಅಸಡ್ಡೆಯ ದೃಢೀಕರಣವನ್ನು ಪಡೆದರು. ಲೋಡರ್‌ ಪುನಃ ಪ್ರಶ್ನಿಸಿದಾಗ, ಕೀನಾನ್ "ಹೇ ಹೇ." ಎಂದು ಸುಮ್ಮನೇ ಪ್ರತಿಕ್ರಿಯಿಸಿದರು. ಆದಾಗ್ಯೂ,ಆದರೆ, 7 ಏಪ್ರಿಲ್‌ರಂದು 'ಏಪ್ರಿಲ್‌ ಫೂಲ್ಸ್‌ ಅಭಿಮಾನಿಗಳಿಗೆ ಒಂದು ಸಂತಸ ಸುದ್ದಿ ಎಂದು ಅಧಿಕೃತ ಅಂತರಜಾಲತಾಣವು ಪ್ರಕಟಿಸಿತು. ಹಾಡುಗಳ ಲೇಖನ ಮತ್ತು ಧ್ವನಿಮುದ್ರಣವು ಪುನಃ ಆರಂಭವಾಗಿದೆ.'

ಹಾಡು ಲೇಖನ ಮತ್ತು ಧ್ವನಿಮುದ್ರಣವು ಲ್ಯಾಟೆರಲಸ್‌ ನ ಉತ್ತರ ಭಾಗಕ್ಕಾಗಿ ನಡೆಯಿತು. ಏತನ್ಮಧ್ಯೆ, ಲ್ಯಾಟೆರಲಸ್‌ ವಿನೈಲ್‌ ಆವೃತ್ತಿ ಮತ್ತು ಎರಡು ಡಿವಿಡಿ ಏಕಗೀತೆಗಳು ಬಿಡುಗಡೆಯಾದವು. ವಾದ್ಯತಂಡದ ಅಧಿಕೃತ ಅಂತರಜಾಲತಾಣವು ಕಲಾವಿದ ಜೋಷುವಾ ಡೇವಿಸ್‌ರಿಂದ ಹೊಸ ಕಣ್ಸೆಳೆಯುವ ಇಂಟ್ರೊ ಪಡೆಯಿತು. ಲ್ಯಾಟೆರಲಸ್‌ ನ ಎರಡು ವಿನೈಲ್‌ ನಾಲ್ಕು ಚಿತ್ರಗಳುಳ್ಳ ಡಿಸ್ಕ್‌ಗಳನ್ನು ಮೊದಲು ಹಸ್ತಾಕ್ಷರ ಲಗತ್ತಿಸಲಾದ ಸೀಮಿತ ಆವೃತ್ತಿಯಾಗಿ ಬಿಡುಗಡೆ ಮಾಡಲಾಯಿತು. ಇದು ಕೇವಲ ಅಭಿಮಾನಿ ಬಳಗದವರಿಗೆ ಮಾತ್ರ ವಿಶೇಷವಾಗಿ ಲಭ್ಯವಾಗಿದ್ದು, 23 ಆಗಸ್ಟ್‌ 2005ರಂದು ಬಿಡುಗಡೆಗೊಳಿಸಲಾಯಿತು. ಎರಡೂ ಡಿವಿಡಿಗಳನ್ನು 20 ಡಿಸೆಂಬರ್‌ 2005ರಂದು ಬಿಡುಗಡೆಗೊಳಿಸಲಾಯಿತು. ಒಂದರಲ್ಲಿ ಷಿಸ್ಮ್‌ ಏಕಗೀತೆಯಿತ್ತು. ಇನ್ನೊಂದರಲ್ಲಿ ಪಾರಾಬೊಲಾ ಇತ್ತು. ಇದು ಲಸ್ಟ್‌ಮೊರ್ಡ್‌ರ ರಿಮಿಕ್ಸ್‌ ಆಗಿತ್ತು. ಜೊತೆಗೆ, ಡೇವಿಡ್‌ ಯೊ ಮತ್ತು ಜೆಲ್ಲೊ ಬಯಾಫ್ರಾರಿಂದ ದ್ವಿವಿವರಣೆ ಹೊಂದಿದ್ದ ಸಂಗೀತ ವೀಡಿಯೊಗಳಿದ್ದವು.

10,000 ಡೇಯ್ಸ್‌ (2006-2007)

ವಾದ್ಯತಂಡದ ವೃತ್ತಿಯಲ್ಲಿ ಹದಿನೈದು ವರ್ಷಗಳ ನಂತರ, ರಿವಾಲ್ವರ್‌ನ ಡ್ಯಾನ್‌ ಎಪ್‌ಸ್ಟೀನ್‌ ಹೇಳಿದಂತೆ, ಟೂಲ್ ತಂಡವು ಆರಾಧಕ ಅಭಿಮಾನಿಗಳನ್ನು ಸಂಪಾದಿಸಿತ್ತು. ಲ್ಯಾಟೆರಲಸ್‌ ಪ್ರಭಾವದಿಂದ ಸಹಯೋಗಗಳಾದ ಫ್ಯಾಂಟೊಮಾಸ್‌ ಮತ್ತು ಮೆಷುಗ್ಗಾಹ್‌ ಮುಂತಾದ ವಾದ್ಯತಂಡದ ಮುಂದಿನ ಆಲ್ಬಮ್‌ ಬಗ್ಗೆ ಮಾಹಿತಿ ಹೊರಹೊಮ್ಮಿತು. ಶೀರ್ಷಿಕೆಗಳ ಬಗ್ಗೆ ಊಹಾಪೋಹಗಳು ಮತ್ತು ಸೋರಿಕೆಯಾದ ಹಾಡುಗಳ ಬಗ್ಗೆ ಪೂರ್ವ ಬಿಡುಗಡೆಯ ವದಂತಿಗಳೊಂದಿಗೆ ಹೊಸ ಟೂಲ್ ಸುತ್ತುವರಿದ ವಿವಾದ ಬೆಳಕಿಗೆ ಬಂತು. ಟೂಲ್‌ ತಂಡದ ಅಧಿಕೃತ ಅಂತರಜಾಲತಾಣದಲ್ಲಿ, ಹೊಸ ಆಲ್ಬಮ್‌ನ ಹೆಸರು 10,000 ಡೇಯ್ಸ್‌ ಎಂಬ ವಾರ್ತಾ ತುಣುಕಿನೊಂದಿಗೆ, ಆಲ್ಬಮ್‌ ಶೀರ್ಷಿಕೆಗಳ ಬಗ್ಗೆ ಊಹಾಪೋಹ ಹೋಗಲಾಡಿಸಲಾಯಿತು. ಅದೇನೇ ಇರಲಿ, ಜನರನ್ನು ಮರುಳು ಮಾಡಲು 10,000 ಡೇಯ್ಸ್‌ ಪ್ರಲೋಭನೆಯ ಆಲ್ಬಂ ಎಂಬ ಆರೋಪಗಳೊಂದಿಗೆ ಊಹಾಪೋಹಗಳು ವಾಸ್ತವ ಬಿಡುಗಡೆಯ ದಿನದವರೆಗೆ ಮುಂದುವರಿಯಿತು. ಆದರೂ, ಅಧಿಕೃತ ಬಿಡುಗಡೆಗೆ ಒಂದು ವಾರ ಮುಂಚೆ, ಸೋರಿಕೆಯಾದ ಆಲ್ಬಮ್‌ನ ಪ್ರತಿಯನ್ನು ಕಡತ ಹಂಚುವಿಕೆಯ ಜಾಲತಾಣಗಳಲ್ಲಿ ವಿತರಿಸಿದಾಗ ಅಂತಿಮವಾಗಿ ಈ ಊಹೆಗಳು ಸುಳ್ಳಾದವು.

ವಾದ್ಯತಂಡ ಟೂಲ್‌ 
ತಮ್ಮ '10,000 ಡೇಯ್ಸ್‌' ಪ್ರವಾಸದ ಅಂಗವಾಗಿ ರಾಸ್ಕಿಲ್ಡ್‌ ಉತ್ಸವದಲ್ಲಿ ಪ್ರಮುಖ ಪ್ರದರ್ಶನ ನೀಡುತ್ತಿರುವ ಟೂಲ್‌ ತಂಡ.

17 ಏಪ್ರಿಲ್‌ರಂದು, ಆಲ್ಬಮ್‌ನ ಮೊದಲ ಹಾಡು 'ವೈಕೇರಿಯಸ್‌' ಮೊದಲ ಬಾರಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನದ ಹಲವು ರೇಡಿಯೊ ಕೇಂದ್ರಗಳಲ್ಲಿ ಪ್ರಸಾರವಾಯಿತು. ದಿನಾಂಕ 2 ಮೇ 2006ರಂದು ಧ್ವನಿಮುದ್ರಣವು U.S.ನಲ್ಲಿ ಬಿಡುಗಡೆಯಾಗಿ, ವಿವಿಧ ಅಂತರರಾಷ್ಟ್ರೀಯ ಪಟ್ಟಿಗಳಲ್ಲಿ ಚೊಚ್ಚಲಪ್ರವೇಶದಲ್ಲೇ ಅಗ್ರಸ್ಥಾನ ಗಳಿಸಿತು. ಮೊದಲ ವಾರದಲ್ಲಿ, ಅಮೆರಿಕಾದಲ್ಲಿ 10,000 ಡೇಯ್ಸ್‌ ನ 564,000 ಪ್ರತಿಗಳು ಮಾರಾಟವಾದವು. ಬಿಲ್ಬೋರ್ಡ್ ‌ 200 ಪಟ್ಟಿಗಳ ಅಗ್ರಸ್ಥಾನದಲ್ಲಿತ್ತು. ತನ್ನ ಹತ್ತಿರದ ಪ್ರತಿಸ್ಪರ್ಧಿ ಪರ್ಲ್‌ ಜ್ಯಾಮ್‌ನ ಸ್ವ-ಶೀರ್ಷಿಕೆಯ ಆಲ್ಬಮ್‌ನ ಎರಡರಷ್ಟು ಮಾರಾಟ ದಾಖಲಿಸಿತ್ತು. ಆದರೂ,ಮುಂಚಿನ ಲ್ಯಾಟೆರಲಸ್‌ ಗೆ ಹೋಲಿಸಿದರೆ, 10,000 ಡೇಯ್ಸ್‌ ವಿಮರ್ಶಕರಿಂದ ಅಷ್ಟೇನೂ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯಲಿಲ್ಲ.

10,000 ಡೇಯ್ಸ್‌ ಬಿಡುಗಡೆಯ ನಂತರ, 30 ಏಪ್ರಿಲ್‌ 2006ರಂದು ಕೋಚೆಲ್ಲಾದಲ್ಲಿ ಪ್ರವಾಸ ಪ್ರದರ್ಶನ ನಡೆಯಿತು. ಇಸವಿ 2001ರಲ್ಲಿ ಲ್ಯಾಟೆರಲಸ್‌ ‌ ಪ್ರವಾಸದಂತೆ ಪ್ರವಾಸದ ವೇಳಾಪಟ್ಟಿಯಿತ್ತು. ಇದರಲ್ಲಿ ಐಸಿಸ್‌ ಮತ್ತು ಮ್ಯಾಸ್ಟೊಡಾನ್‌ ಸಹಾಯಕ ಬ್ಯಾಂಡ್‌ಗಳಾಗಿದ್ದವು. ಆಸ್ಟ್ರೇಲಿಯಾ ಮತ್ತು ನ್ಯೂಜೀಲೆಂಡ್‌ ಪ್ರವಾಸಗಳ ನಂತರ, ಮುಂದಿನ ವರ್ಷ ಅಲ್ಪವಿರಾಮ ಪಡೆದ ಸಂದರ್ಭದಲ್ಲಿ, ತನ್ನ ಗೆಳತಿಯ ನಾಯಿಯೊಂದಿಗೆ ಸೆಣಸುವಾಗ ಡ್ರಮ್‌ ವಾದಕ ಡ್ಯಾನಿ ಕ್ಯಾರಿ ಮೇಲ್ತೋಳಿನ ಸ್ನಾಯು ಹರಿತಕ್ಕೊಳಗಾದರು. ಇದರಿಂದಾಗಿ, ಮುಂಬರುವ ಉತ್ತರ ಅಮೆರಿಕಾ ಪ್ರವಾಸ-ಸಂಗೀತಗೋಷ್ಠಿಗಳು ನಡೆಯುವ ಬಗ್ಗೆ ಅನಿಶ್ಚಿತತೆ ಕವಿಯಿತು. 21 ಫೆಬ್ರವರಿಯಂದು ಕ್ಯಾರಿ ಶಸ್ತ್ರಚಿಕಿತ್ಸೆಗೊಳಗಾದರು. ಹಲವು ಪ್ರದರ್ಶನಗಳನ್ನು ಮುಂದೂಡಬೇಕಾಯಿತು. ಏಪ್ರಿಲ್ ತಿಂಗಳೊಳಗೆ ಪ್ರವಾಸ ಪುನಾರಂಭಿಸಿದ ಟೂಲ್‌ ತಂಡವು 15 ಜೂನ್‌ರಂದು ಬೊನಾರೂ ಸಂಗೀತ ಉತ್ಸವದಲ್ಲಿ (ರೇಜ್ ಎಗೇಯ್ನ್‌ಸ್ಟ್‌ ದಿ ಮೆಷೀನ್‌ನ ಟಾಮ್‌ ಮೊರೆಲೊ ಆನ್‌ "ಲ್ಯಾಟೆರಲಸ್‌ನ ಅತಿಥಿ ಪಾತ್ರದೊಂದಿಗೆ ಟೂಲ್ ಮೇಲ್ಪಂಕ್ತಿಯಲ್ಲಿ ಕಾಣಿಸಿಕೊಂಡಿತು.). ಏತನ್ಮಧ್ಯೆ, 49th ಗ್ರ್ಯಾಮಿ ಪ್ರಶಸ್ತಿಗಳಲ್ಲಿ, ಅತ್ಯುತ್ತಮ ಹಾರ್ಡ್‌ ರಾಕ್‌ ಶೈಲಿಯ ಸಂಗೀತ ಪ್ರದರ್ಶನ ಪ್ರಶಸ್ತಿಗಾಗಿ ವೈಕೇರಿಯಸ್‌ ನಾಮನಿರ್ದೇಶಿತವಾಗಿತ್ತು; 10,000 ಡೇಯ್ಸ್‌ ಅತ್ಯುತ್ತಮ ಧ್ವನಿಮುದ್ರಣಾ ಪ್ಯಾಕೇಜ್ ಪ್ರಶಸ್ತಿ ಗಳಿಸಿತು. ವೈಕೇರಿಯಸ್‌ಗಾಗಿ ಸಂಗೀತ ವೀಡಿಯೊವನ್ನು ಸೆಪ್ಟೆಂಬರ್‌ 18ರಂದು DVDಬಿಡುಗಡೆಗೊಳಿಸಲಾಯಿತು.

ವಿರಾಮ ಮತ್ತು ಐದನೆಯ ಸ್ಟುಡಿಯೊ ಆಲ್ಬಮ್‌ (2008-ಇಂದಿನವರೆಗೆ)

ವಾದ್ಯತಂಡ ಟೂಲ್‌ 
ಇಸವಿ 2006ರಲ್ಲಿ ಪ್ಯಾರಿಸ್‌ನಲ್ಲಿದ್ದ ಟೂಲ್‌ ವಾದ್ಯತಂಡ.

ವಾದ್ಯತಂಡವು ಬಹುಶಃ 2008 ಆರಂಭದ ತನಕ ತಮ್ಮ ಪ್ರವಾಸವನ್ನು ಮುಂದುವರೆಸಿ, ಸ್ವಲ್ಪ ದಿನಗಳ ಬಿಡುವು ತೆಗೆದುಕೊಳ್ಳುವುದೆಂದು ಮೇ 2007ರಂದು ನಡೆಸಲಾದ ಸಂದರ್ಶನದಲ್ಲಿ, ಜಸ್ಟಿನ್‌ ಛಾನ್ಸೆಲರ್‌ ತಿಳಿಸಿದರು. ವಾದ್ಯತಂಡವು ಇನ್ನೂ ಕೆಲವು ಹೊಸ ಹಾಡುಗಳನ್ನು ಈಗಾಗಲೇ ರಚಿಸಿದ್ದು, ಮಾರ್ಗದ ಒಂದು ಹಂತದಲ್ಲಿ ಖಂಡಿತವಾಗಿ ಇನ್ನೊಂದು ಆಲ್ಬಂ ಬಿಡುಗಡೆ ಮಾಡುತ್ತದೆ ಎಂದು ತಮ್ಮ ಹೇಳಿಕೆಯನ್ನು ದೃಢಪಡಿಸಿದರು. ಮುಂದಿನ ಆಲ್ಬಮ್‌ ರಚನೆಯಾಗುವ ತನಕ, ವಾದ್ಯತಂಡದ ಚಲನಚಿತ್ರವನ್ನು ನಿರ್ಮಿಸುವ ಸಾಧ್ಯತೆಯಿದೆ. ಇದರ ಸಂಭವನೀಯತೆ ಬಗ್ಗೆ ವಾದ್ಯತಂಡವು ಬಹಳ ಕಾಲ ಪರಿಗಣಿಸಿತ್ತು. ಅತಿವಾಸ್ತವಿಕತಾ ಶೈಲಿಯಲ್ಲಿ ಸಾಕಷ್ಟು ಹಣದೊಂದಿಗೆ ಕಥಾನಿರೂಪಣೆ ಮತ್ತು ಸಾಧ್ಯವಾದಷ್ಟು ವಿಶೇಷ ಪರಿಣಾಮಗಳನ್ನು ನೀಡುವ ಕಲ್ಪನೆಗಳನ್ನು ಹೊಂದಿತ್ತು. ಒಂದೆಡೆ, ಹಲವು ಚಲನಚಿತ್ರ-ನಿಕಟವರ್ತಿಗಳು ಪರಿಚಯವಿದ್ದರಿಂದ ಅಗತ್ಯ ವಿಧಾನಗಳು ಕೈಯಲ್ಲೇ ಇವೆ ಎಂದು ಕ್ಯಾರಿ ಹೇಳಿಕೆ ನೀಡಿದರೆ, 'ಇದು ಬರಿ ಮಾತು ಅಷ್ಟೆ' ಎಂದು ಜೋನ್ಸ್‌ ಈ ಕಲ್ಪನೆಯನ್ನು ತಳ್ಳಿಹಾಕಿದರು. ರೋಲಿಂಗ್‌ ಸ್ಟೋನ್‌ ತಿಳಿಸಿದಂತೆ, 50ನೆಯ ಗ್ರ್ಯಾಮಿ ಪ್ರಶಸ್ತಿಗಳ ಸಮಾರಂಭದ ನಂತರ, ಬೆವರ್ಲಿ ಹಿಲ್ಸ್ ಹೋಟೆಲ್‌ನಲ್ಲಿ ಮೋಜಿನಕೂಟದ ನಂತರ ಸೊನಿ BMG ಗೆ ಹಾಜರಾದಾಗ, ಕೀನನ್ ಇನ್ನೊಂದು ಟೂಲ್‌ ಆಲ್ಬಮ್ ಬಗ್ಗೆ ಭರವಸೆ ನೀಡಿದರು. ಹೊಸ ಅಲ್ಬಮ್‌ ಕುರಿತು, 2009ರ ಆರಂಭದಲ್ಲಿ ಗಿಟಾರ್‌ ವರ್ಲ್ಡ್‌ ನೊಂದಿಗೆ ನಡೆಸಲಾದ ಸಂದರ್ಶನವೊಂದರಲ್ಲಿ, ಜೋನ್ಸ್‌ ಉತ್ತರಿಸಿದ್ದು ಹೀಗೆ - 'ಇದು ಬಹಳ ಸುಗಮವಾಗಿ ಬರುತ್ತಿದೆ..! [ನಗು] ಇಲ್ಲ, ನಾವು ವಿರಾಮದಲ್ಲಿದ್ದೇವೆ. ನಾನು ಬರೆಯುತ್ತಿದ್ದೇನೆ, ಜಸ್ಟಿನ್ ಕೂಡ ಬರೆಯುತ್ತಿದ್ದಾನೆ. ಆದ್ರೆ ಮೇಯ್ನಾರ್ಡ್‌ ತನ್ನ ವೈನ್‌ನತ್ತ ಗಮನ ಕೊಡ್ತಿದ್ದಾನೆ. ನಾವೆಲ್ಲರೂ ಪರಸ್ಪರ ಬೇರೆಯಾಗಿ ಕೆಲವು ಸಮಯ ಕಳೆಯುತ್ತಿದ್ದೇವೆ, ಇದು ಚೆನ್ನಾಗಿದೆ. ನಾನು ಕೆಲವು ಕಾಮಿಕ್ಸ್‌ ನಿರ್ಮಾಣದಲ್ಲಿ ಕಾರ್ಯನಿರತರಾಗಿದ್ದೇವೆ.'

ಕೀನನ್ ಪ್ರಕಾರ, 2008ರ ಆರಂಭದಿಂದಲೂ ಬಿಡುವಿನಲ್ಲಿದ್ದ ಟೂಲ್‌ ತಂಡವು 2009ರಲ್ಲಿ ಯಾವಾಗಲಾದರೂ ಹೊಸ ಆಲ್ಬಮ್‌ ರಚನೆ ಆರಂಭಿಸುವುದನ್ನು ನಿರೀಕ್ಷಿಸಿತ್ತು, ಆದರೆ ಬಿಡುಗಡೆಯ ಯಾವುದೇ ದಿನಾಂಕದ ಬಗ್ಗೆ ವಿವರಗಳನ್ನು ನೀಡಲಿಲ್ಲ . 2009ರ ಮಾರ್ಚ್ 24ರಂದು ವಾದ್ಯತಂಡದ ಅಧಿಕೃತ ಅಂತರಜಾಲತಾಣದಲ್ಲಿ ಟೂಲ್‌ ತಂಡದ ಬೇಸಿಗೆಯ ಪ್ರವಾಸವನ್ನು ಖಚಿತಪಡಿಸಲಾಯಿತು. ಈ ಪ್ರವಾಸವು 18 ಜುಲೈರಂದು ಕೊಲೊರೆಡೊ ರಾಜ್ಯದ ಕಾಮರ್ಸ್‌ ಸಿಟಿಯಲ್ಲಿ ನಡೆದ ಮೈಲ್‌ ಹೈ ಸಂಗೀತ ಉತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನ-ಸಂಗೀತಗೋಷ್ಠಿ ನೀಡಿತು. ಲೊಲಾಪಲೂಝಾ 2009ಗೆ ಆಗಸ್ಟ್‌ 7-9 ಕೊನೆಯ ದಿನಾಂಕಗಳಾಗಿತ್ತು ಮತ್ತು ಕ್ಯಾಲಿಫೋರ್ನಿಯದ ಪೊಮೊನಾದ ಎಪಿಸೆಂಟರ್‌ ಉತ್ಸವಕ್ಕಾಗಿ ಆಗಸ್ಟ್ 22ರಂದು ಮುಕ್ತಾಯ ಪ್ರದರ್ಶನವಿತ್ತು.

ಇವೆರಡಕ್ಕೂ ಟೂಲ್‌ ಮುಂಚೂಣಿಯಲ್ಲಿತ್ತು. 

ವಾದ್ಯತಂಡದ ವೆಬ್ಮಾಸ್ಟರ್‌ ಪ್ರಕಾರ, 2010 ಮಾರ್ಚ್‌ 3ರೊಳಗೆ ಟೂಲ್‌ ತಮ್ಮ ಮುಂದಿನ ಆಲ್ಬಮ್‌ಗಾಗಿ ಹೊಸ ಹಾಡುಗಳನ್ನು ಶ್ರದ್ಧೆಯಿಂದ ಬರೆಯಲು ಸದಸ್ಯರು ಆರಂಭಿಸಿದ್ದರು. ಏಪ್ರಿಲ್‌ ತಿಂಗಳ ಅಂತ್ಯ ಮತ್ತು ಮೇ 2010ರಲ್ಲಿ, ಜೂನ್‌ ಮತ್ತು ಜುಲೈ ತಿಂಗಳಲ್ಲಿ ನಡೆಯಲಿದ್ದ ಅಮೆರಿಕಾ ಹಾಗೂ ಕೆನಡಾ ದೇಶದುದ್ದಕ್ಕೂ ಹಲವು ಪ್ರವಾಸಗಳ ದಿನಾಂಕಗಳನ್ನು ಟೂಲ್‌ ಘೋಷಿಸಿತು.

ಸಂಗೀತದ ಶೈಲಿ ಮತ್ತು ಪ್ರಭಾವಗಳು

ದಿ ಏಜ್‌ ನ ಪ್ಯಾಟ್ರಿಕ್‌ ಡೊನೊವಾನ್‌ ಟೂಲ್‌ ತಂಡವನ್ನು 'ಯೋಚಿಸುವ ವ್ಯಕ್ತಿಯ ಮೆಟಲ್‌ ಶೈಲಿ ವಾದ್ಯತಂಡ' ಎಂದು ಬಣ್ಣಿಸಿದ್ದಾರೆ. ಬುದ್ಧಿಶಕ್ತಿ ಹಾಗೂ ಆಂತರಿಕ-ಭಾವನೆ, ಸೌಮ್ಯ ಹಾಗೂ ಭಾರ, ಮಧುರ ಹಾಗೂ ಕರ್ಕಶ, ಮೃದು ಹಾಗೂ ಕ್ರೂರ, ಚಿರಪರಿಚಿತ ಹಾಗೂ ವಿಚಿತ್ರ, ಪಾಶ್ಚಾತ್ಯ ಶೈಲಿ ಹಾಗೂ ಪ್ರಾಚ್ಯ ಶೈಲಿ, ಸುಂದರ ಹಾಗೂ ವಿರೂಪ, ಬಿಗಿ ಹಾಗೂ ಸಡಿಲ, ಬೃಹದಾಕಾರ - ಒಟ್ಟಿನಲ್ಲಿ ಇದು ವಿರೋಧಾಭಾಸಗಳ ಗೋಜಲಾಗಿದೆ.' ತಮ್ಮ ಸಂಕೀರ್ಣ ಹಾಗು ಎಂದಿಗೂ ವಿಕಸಿಸುತ್ತಿರುವ ಧ್ವನಿವಿನ್ಯಾಸಕ್ಕಾಗಿ ಟೂಲ್‌ ತಂಡವು ಇಂಟರ್ನ್ಯಾಷನಲ್‌ ಹೆರಾಲ್ಡ್‌ ಟ್ರಿಬ್ಯೂನ್‌ನ ಸಿ.ಬಿ. ಲಿಡೆಲ್‌ರಿಂದ ವಿಮರ್ಶಾತ್ಮಕ ಪ್ರಶಂಸೆ ಪಡೆದಿದೆ. ತಂಡದ ಧ್ವನಿವಿನ್ಯಾಸವನ್ನು ಬಣ್ಣಿಸಿದ ಆಲ್‌ಮ್ಯೂಸಿಕ್‌ ಒಂದು ತರಹ ವಿಚಿತ್ರವಾಗಿದೆ, ಪೋಸ್ಟ್‌-ಜೇನ್ಸ್‌ ಅಡಿಕ್ಷನ್‌ ಹೆವಿ ಮೆಟಲ್‌ ಶೈಲಿಯ ಸಂಗೀತ", ಹಾಗೂ ದಿ ನ್ಯೂಯಾರ್ಕ್‌ ಟೈಮ್ಸ್‌ "ಲೆಡ್‌ ಝೆಪೆಲ್ಲಿನ್‌ರ ಏರಿಳಿತದ, ಬಲವಾದ ಗಿಟಾರ್‌ ವಾದನಗಳು ಹಾಗೂ ಮಧ್ಯಪ್ರಾಚ್ಯದ ಶೈಲಿಗಳಿಗೆ ಸಾಮ್ಯತೆಗಳನ್ನು ಕಂಡಿದೆ". ಇಸವಿ 2001ರಲ್ಲಿನ ಲ್ಯಾಟೆರಲಸ್‌ನ್ನು ಆಲ್‌ಮ್ಯೂಸಿಕ್‌ ಪಿಂಕ್‌ ಫ್ಲಾಯ್ಡ್‌ ತಂಡದ ಮೆಡ್ಲ್‌ (1971) ಆಲ್ಬಮ್‌ಗೆ ಹೋಲಿಸಿದೆ. ಆದರೆ ಮೂವತ್ತು ವರ್ಷಗಳ ನಂತರದ ಶೈಲಿಯಲ್ಲಿ ಟೂಲ್‌ ವಾದ್ಯತಂಡವು ಗಡಸು ಗಿಟಾರ್ ಸ್ವರ ಹಾಗೂ ಸಂಪೂರ್ಣ ಭಯಾನಕತೆಯೊಂದಿಗೆ ಅನಂತತೆಯ ಪ್ರತಿಯೊಂದು ಅಂಗುಲವನ್ನು ತುಂಬುವ ಒಳಪ್ರೇರಣೆಯೊಂದಿಗೆ ಬದಲಾಗಿದೆ".

ಸಂಗೀತ ಶೈಲಿ

ಟೂಲ್‌ ವಾದ್ಯತಂಡದ ಹಾಡುಗಳ ಸಂಗ್ರಹದಲ್ಲಿನ ಅಂಶವೊಂದು ಆಡ್‌ ಟೈಮ್‌ ಸಿಗ್ನೇಚರ್‌ ಬಳಕೆಯನ್ನು ಅವಲಂಬಿಸುತ್ತದೆ. ಉದಾಹರಣೆಗೆ, ಲ್ಯಾಟೆರಲಸ್ ‌ ಆಲ್ಬಮ್‌ನ ಮೊದಲ ಏಕಗೀತೆ ಷಿಸ್ಮ್‌ನಲ್ಲಿ ಅಳವಡಿಸಿರುವ ಲಯಸೂಚಿಯನ್ನು(ಟೈಮ್‌ ಸಿಗ್ನೇಚರ್‌) 6.5/8, ನಂತರ ಅದು ಎಲ್ಲಾ ರೀತಿಯ ಇತರೆ ಸಮಯಗಳಿಗೂ ಹೋಗುತ್ತದೆ ಎಂದು ಬಾಸ್ ಗಿಟಾರ್‌ ವಾದಕ ಜಸ್ಟಿನ್‌ ಛಾನ್ಸಲರ್‌ ಬಣ್ಣಿಸಿದ್ದಾರೆ. ಇದೇ ಆಲ್ಬಮ್‌ನ ಶೀರ್ಷಿಕೆ ಗೀತೆ ಪಥ ಬದಲಿಸುವ ಲಯಗಳನ್ನು ಕೂಡ ಪ್ರದರ್ಶಿಸುತ್ತದೆ. ಇದೇ ರೀತಿ, 10,000 ಡೇಯ್ಸ್‌' "ವಿಂಗ್ಸ್‌ ಫಾರ್‌ ಮೇರಿ (ಪಾರ್ಟ್‌ 1)" ಹಾಗೂ "10,000 ಡೇಯ್ಸ್‌ (ವಿಂಗ್ಸ್‌ (ಪಾರ್ಟ್‌ 2)".

ವಾದ್ಯತಂಡದ ಧ್ವನಿ ಅಂಶವನ್ನು ಮೀರಿ, ವಾದ್ಯ ತಂಡದ ಪ್ರತಿಯೊಬ್ಬ ಸದಸ್ಯನೂ ತನ್ನದೇ ಸಂಗೀತದ ವ್ಯಾಪ್ತಿಯಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಾನೆ. ಬಾಸ್‌ ಪ್ಲೇಯರ್‌ ನಿಯತಕಾಲಿಕ ಪತ್ರಿಕೆಯು ಛಾನ್ಸೆಲರ್‌ರ ಬಾಸ್‌ ಗಿಟಾರ್‌ ನುಡಿಸುವ ಶೈಲಿಯನ್ನು 'ದಪ್ಪ ಧ್ವನಿಯ, ಮಧ್ಯಶ್ರೇಣಿಯ ನಾದ, ಗಿಟಾರ್‌-ಶೈಲಿಯ ತಂತ್ರಗಳು ಹಾಗೂ ಸ್ಥಿತಿಸ್ಥಾಪಕದಂತಹ ವಿಭಿನ್ನತೆ' ಎಂದು ಬಣ್ಣಿಸಿದೆ.

'ದಿ ಪೇಷೆಂಟ್'‌ ಹಾಡು ಮುಂತಾದವಲ್ಲಿ, ಸ್ವರಗಳನ್ನು ಎಡಗೈಯಲ್ಲಿ ಕುಟ್ಟಿ, ಬಾಸ್ ಧ್ವನಿ ನಿಯಂತ್ರಣಗಳನ್ನು ಬಳಸಿ, ವಾಹ್‌ ಪರಿಣಾಮವನ್ನು ಬಳಸುವುದು ಇದಕ್ಕೆ ಉದಾಹರಣೆಯಾಗಿದೆ (ಲ್ಯಾಟೆರಲಸ್‌  2001). 

ವಾದ್ಯತಂಡದ ತಾಳ ವಿಭಾಗವನ್ನು ಸಂಪೂರ್ಣಗೊಳಿಸಿ, ಡ್ರಮ್‌ ವಾದಕ ಡ್ಯಾನಿ ಕ್ಯಾರಿ ಪಾಲರಿದಮ್(ಏಕಕಾಲದಲ್ಲಿ ಪ್ರತ್ಯೇಕ ಲಯಗಳ ಶಬ್ದ)‌, ತಬಲಾ ಶೈಲಿಯ ತಂತ್ರಗಳನ್ನು ಬಳಸುವುದುಂಟು. ಜೊತೆಗೆ, ಮುಂಚಿತವಾಗಿಯೇ ಧ್ವನಿಮುದ್ರಣವಾದ ತಬಲಾ ಮತ್ತು ಅಕ್ಟೊಬನ್‌ ಶಬ್ದಗಳು ಮುಂತಾದ ವಿದ್ಯುನ್ಮಾನ ಡ್ರಮ್‌ ಪ್ಯಾಡ್ಸ್‌ ಬಳಸುವುದುಂಟು.

ಮೇಯ್ನಾರ್ಡ್‌ ಜೇಮ್ಸ್‌ ಕೀನನ್‌ರ ಗಾಯಕರಾಗಿ ಸಾಮರ್ಥ್ಯವನ್ನು ಸಿಯೆಟ್ಲ್‌ ಪೋಸ್ಟ್‌-ಇಂಟೆಲಿಜೆನ್ಸರ್ ‌ ಇನ್ನಷ್ಟು ವಸ್ತುನಿಷ್ಠವಾಗಿ ಬಣ್ಣಿಸಿದೆ. ಇಸವಿ 2005ರಲ್ಲಿ ನಡೆದ ಅಲೀಸ್‌ ಇನ್‌ ಚೇಯ್ನ್ಸ್‌ ಪುನರ್ಮಿಲನದ ಸಂಗೀತಗೋಷ್ಠಿಯ ಪ್ರದರ್ಶನದ ನಂತರ ಸ್ವತಂತ್ರ ಅಂಕಣಕಾರ ಟ್ರ್ಯಾವಿಸ್‌ ಹೇ ಅವರನ್ನು 'ಲೇಯ್ನ್‌ ಸ್ಟೇಲೀರ ಸ್ಥಾನ ತುಂಬಬಹುದಾದ ಸಹಜ ಪ್ರತಿಭೆ ಎಂದು ಕಂಡುಕೊಂಡರು. 'ಎ ಪರ್ಫೆಕ್ಟ್‌ ಸರ್ಕಲ್'‌ ಮತ್ತು 'ಟೂಲ್‌'ನಲ್ಲಿ ಕೀನನ್‌ರ ಪಾತ್ರದ ಬಗ್ಗೆ ನ್ಯೂಯಾರ್ಕ್‌ ಟೈಮ್ಸ್ ‌ ಬರೆಯುತ್ತದೆ, "ವಿಷಯಾಸಕ್ತಿ, ಸಿಟ್ಟು, ಜಿಗುಪ್ಸೆಯಂತಹ ಭಾವಗಳನ್ನು ಸಮರ್ಪಕವಾಗಿ ಬಿಂಬಿಸಬಲ್ಲ ಕೀನನ್ ಸಾಮರ್ಥ್ಯದ ಮೇಲೆ ಎರಡೂ ಗುಂಪು ಅವಲಂಬಿತವಾಗಿದೆ ಹಾಗೂ ಅವರ ಧ್ವನಿಯಲ್ಲಿನ ಮಾಧುರ್ಯ ಗಹನತೆಯ ಸ್ಪರ್ಶವನ್ನು ನೀಡುತ್ತದೆ ಎಂದು ಬಣ್ಣಿಸಿದೆ.

ಗಿಟಾರ್ ಪ್ಲೇಯರ್ ‌ ನಿಯತಕಾಲಿಕೆಯ ಪ್ರಕಾರ, ಆಡಮ್‌ ಜೋನ್ಸ್‌ ಯಾವುದೇ ಒಂದು ನಿರ್ದಿಷ್ಟ ಗಿಟಾರ್‌-ನುಡಿಸುವ ತಂತ್ರದ ಮೇಲೆ ಅವಲಂಬಿತವಾಗಿಲ್ಲ. ಆದರೆ ಹಲವು ತಂತ್ರಗಳನ್ನು ಸಂಯೋಜಿಸುತ್ತದೆ. ಉದಾಹರಣೆಗೆ, 'ಸೋಬರ್'‌ನಲ್ಲಿ ಕೀನನ್ ಪರ್ಯಾಯವಾಗಿ ಪವರ್‌ ತಂತಿಗಳು, ಗೀಚುವಂತ ಸದ್ದುಗಳು, ಆರ್ಪೆಜಿಯೊದ ಸ್ವರಮೇಳ ಹಾಗೂ ಹೆಚ್ಚು ಸದ್ದಿಲ್ಲದ ಕನಿಷ್ಠೀಯತೆಯನ್ನು ಬಳಸುತ್ತಾರೆ ಎಂದು 'ಆಲ್‌ಮ್ಯೂಸಿಕ್‌' ಟಿಪ್ಪಣಿ ಮಾಡಿತು. ಇನ್ನೂ ಹೆಚ್ಚಿಗೆ, ವಾದ್ಯತಂಡವು ವಾದ್ಯಗಳ ಪ್ರಯೋಗಗಳ ಸ್ವರೂಪಗಳನ್ನು ಬಳಸುತ್ತದೆ. ಉದಾಹರಣೆಗೆ, 'ಪೈಪ್‌ ಬಾಂಬ್‌ ಮೈಕ್ರೊಫೋನ್‌' (ಇದು ಕಂಚಿನ ಸಿಲಿಂಡರ್‌ನಲ್ಲಿ ಅಳವಡಿಸಲಾದ ಗಿಟಾರ್‌ ಸಾಧನ) ಹಾಗೂ ಜಾಂಬಿಯಲ್ಲಿನ ಟಾಕ್‌ ಬಾಕ್ಸ್‌ ಗಿಟಾರ್‌ ಸೊಲೊ ಪ್ರಯೋಗಗಳೂ ಉಂಟು.

ವಾದ್ಯತಂಡವು ಹಾಡುಗಳ ಧ್ವನಿಯ ಮೇಲೆ ಒತ್ತು ನೀಡುವುದು. ಅಲ್ಲದೆ, ಆಲ್ಬಂ ಜತೆ ಹಾಡಿನ ಸಂಗೀತವನ್ನು ಬಿಡುಗಡೆ ಮಾಡದೆ ಹಾಡುಗಳ ಪರಿಕಲ್ಪನೆ ಮೇಲೆ ಸಂಗೀತಗಳ ಪರಿಣಾಮವನ್ನು ತಗ್ಗಿಸಲು ಯತ್ನಿಸಿದೆ. ಸಂಗೀತ ವಿನ್ಯಾಸಗಳಿಗೆ ವಿಶೇಷ ಗಮನ ನೀಡಲಾಗುತ್ತದೆ, 'ಉದಾಹರಣೆಗೆ ಲ್ಯಾಟೆರಲಸ್‌'. ಲ್ಯಾಟೆರಲಸ್‌ನ ಸಂಗೀತಗಳ ಪ್ರತಿ ಸಾಲಿನಲ್ಲಿರುವ ಉಚ್ಚಾರಾಂಶಗಳ ಸಂಖ್ಯೆಗಳು ಫಿಬೊನಸಿ ಸಂಖ್ಯೆಗಳ ವಿನ್ಯಾಸಕ್ಕೆ ಹೊಂದಿಕೊಳ್ಳುತ್ತವೆ. ಜಾಂಬಿ ಎಂಬ ಹಾಡು ಸಾಮಾನ್ಯ ಮೆಟ್ರಿಕಲ್‌ ಫುಟ್‌ ಇಯಾಂಬ್ ಬಳಸುತ್ತದೆ ಹಾಗೂ ಉಲ್ಲೇಖಿಸುತ್ತದೆ. ಎನಿಮಾ ಮತ್ತು ಲ್ಯಾಟೆರಲಸ್ ‌ ಅಲ್ಬಮ್‌ ಹಾಡಿನ ಸಾಹಿತ್ಯ ತತ್ತ್ವ ಮತ್ತು ಅಧ್ಯಾತ್ಮಿಕತೆ ಮೇಲೆ ಕೇಂದ್ರೀಕೃತವಾಗಿರುತ್ತದೆ. ನಿರ್ದಿಷ್ಟ ವಿಷಯಗಳು ಒಪಿಯೇಟ್‌ ಹಾಡುಗಳಲ್ಲಿ ಸೂಚಿಸಲಾದ ಸಂಘಟಿತ ಧರ್ಮದಿಂದ ವಿಕಸನವರೆಗೆ, ಫಾರ್ಟಿ-ಸಿಕ್ಸ್‌ & 2ನಲ್ಲಿ ಜಂಗಿಯನ್‌ ಮನೋವಿಜ್ಞಾನ ಹಾಗೂ ಲ್ಯಾಟೆರಲಸ್‌ನಲ್ಲಿ ಅತೀಂದ್ರಿಯದ ಮೇಲೆ ಕೇಂದ್ರೀಕೃತವಾಗಿದೆ. 10,000 ಡೇಯ್ಸ್‌ ನಲ್ಲಿ ಕೀನನ್ ತಮಗೆ ಹೆಚ್ಚು ವೈಯಕ್ತಿಕವಾದ ವಿಚಾರಗಳನ್ನು ಪರಿಶೋಧಿಸಲು ಮುಂದಾದರು. ತಮ್ಮ ತಾಯಿಗೆ ಪಾರ್ಶ್ವವಾಯುವುಂಟಾಗಿ, 2003ರಲ್ಲಿ ನಿಧನರಾಗುವ ತನಕ ಅದರ ಪರಿಣಾಮಗಳಿಂದ ನರಳಿದ ಇಪ್ಪತ್ತೇಳು ವರ್ಷಗಳನ್ನು ಆಲ್ಬಮ್‌ ಹೆಸರು ಮತ್ತು ಶೀರ್ಷಿಕೆ ಗೀತೆಯು ಉಲ್ಲೇಖಿಸುತ್ತದೆ.

ಪ್ರಭಾವಗಳು

ತಮ್ಮ ತಂಡದ ಬೆಳವಣಿಗೆಗೆ ಪ್ರಭಾವಿ ಕಾರಣಗಳಲ್ಲಿ ದಿ ಮೆಲ್ವಿನ್ಸ್‌ನ್ನೂ ಸಹ ಬ್ಯಾಂಡ್ ಉಲ್ಲೇಖಿಸಿದೆ. ಆದರೆ, ಬಹಳಷ್ಟು ಪ್ರಚಾರ ಪಡೆದ ಪ್ರಭಾವವೆಂದರೆ ಆಧುನಿಕ ರಾಕ್‌ ಶೈಲಿಯ ಸಂಗೀತದ ಹರಿಕಾರರಾದ ಕಿಂಗ್‌ ಕ್ರಿಮ್ಸನ್‌. ಬಹಳ ವರ್ಷಗಳ ಕಾಲ ಕಿಂಗ್‌ ಕ್ರಿಮ್ಸನ್‌ ತಂಡದ ಸದಸ್ಯರಾಗಿದ್ದ ರಾಬರ್ಟ್‌ ಫ್ರಿಪ್‌ ಟೂಲ್‌ ತಂಡದ ಮೇಲೆ ತಮ್ಮ ಬ್ಯಾಂಡ್ ಪ್ರಭಾವ ಅಷ್ಟೊಂದಿಲ್ಲ ಎನ್ನುವಂತೆ ಪ್ರತಿಕ್ರಿಯೆ ನೀಡಿದರು. ಟೂಲ್‌ ತಂಡದೊಂದಿಗಿನ ಸಂದರ್ಶನವೊಂದರಲ್ಲಿ, ಎರಡೂ ವಾದ್ಯತಂಡಗಳ ನಡುವಣ ಪರಸ್ಪರ ಸಂಬಂಧದ ಬಗ್ಗೆ ಮಾತನಾಡಿದ್ದೂ ಉಂಟು. 'ಪ್ರಭಾವದ ಬಗ್ಗೆ ನಿಮಗೆ ತಿಳಿಯಿತೆ? ಪ್ರಭಾವದ ವಿಚಾರವಾಗಿ, ಹೌದು, ಎಲ್ಲೋ ಒಂದು ಸ್ವರಶ್ರೇಣಿಯಲ್ಲಿ ನಾನು ಪ್ರಭಾವವನ್ನು ಕೇಳಿದ್ದೇನೆ. ಕೇವಲ ಒಂದು. ನಾವು ಅದನ್ನು ಅಭಿವೃದ್ಧಿಪಡಿಸಿ, ನಂತರ ಕೈಬಿಟ್ಟೆವು. ನಿಖರವಾಗಿಯೂ ಇದೇ ಸ್ವರಶ್ರೇಣಿ. ಗಿಟಾರ್‌ನ ಒಂದು ವಿಶಿಷ್ಟ ಶೈಲಿಯೊಂದಿಗಿನ ಆರ್ಪೆಜಿಯೊದ ಮೂರು ಸ್ವರಗಳು. ಹಾಗಾಗಿ, ನೀವು ಅದನ್ನು ಕೇಳಿಸಿಕೊಂಡಿರುವಿರಿ ಎಂದು ನನಗೆ ಅನಿಸುತ್ತಿಲ್ಲ. ಅದೊಂದೇ ವಿಚಾರ." 'ನಾನೂ ಒಬ್ಬ ಟೂಲ್‌ ಅಭಿಮಾನಿ' ಎಂಬುದನ್ನೂ ಸಹ ಬಹಿರಂಗಗೊಳಿಸಿದರು. ಕ್ರಿಮ್ಸನ್‌ ತಂಡವು ತಮ್ಮ ಮೇಲೆ ಪ್ರಭಾವ ಬೀರಿದೆ ಎಂಬುದನ್ನು ಟೂಲ್‌ ಸದಸ್ಯರು ಉದಾರವಾಗಿ ಒಪ್ಪಿಕೊಂಡಿದ್ದಾರೆ. ಅವರ (ಟೂಲ್‌) ಸಂಗೀತದಲ್ಲಿ ಈ ಪ್ರಭಾವವನ್ನು ಗುರುತಿಸಬಲ್ಲೆಯಾ ಎಂದು ಆಡಮ್‌ ಜೋನ್ಸ್‌ ನನ್ನನ್ನು ಕೇಳಿದರು. ನಾನು ಸಾಧ್ಯವಾಗದು ಎಂದೆ. ಟೂಲ್‌ನಲ್ಲಿ ಕಿಂಗ್‌ ಕ್ರಿಮ್ಸನ್‌ನ್ನು ಗುರುತಿಸುವುದಕ್ಕಿಂತ ಹೆಚ್ಚಾಗಿ ನಾನು ಕಿಂಗ್‌ ಕ್ರಿಮ್ಸನ್‌ನಲ್ಲಿ ಟೂಲ್‌ ಪ್ರಭಾವವನ್ನು ಗುರುತಿಸಬಲ್ಲೆ.'

ಸರದಿಯಲ್ಲಿ, ಮಾಲೂಫ್‌ ಮತ್ತು ನ್ಯೂಕ್ವಿಸ್ಟ್ಸ್‌ ತಮ್ಮ ಪುಸ್ತಕ 'ದಿ ನ್ಯೂ ಮೆಟಲ್‌ ಮಾಸ್ಟರ್ಸ್‌ ಆಧುನಿಕ ಮೆಟಲ್‌ ಶೈಲಿಯ ಸಂಗೀತ ಕ್ಷೇತ್ರದ ಮೇಲೆ ಟೂಲ್‌ ತಂಡದ ಪ್ರಭಾವ ತಮ್ಮದೇ ವಿಶಿಷ್ಟ ರೀತಿಯಲ್ಲಿದೆ ಎಂದಿದ್ದಾರೆ. ಈ ಪ್ರಕಾರದ ಸಂಗೀತದ ಮೇಲೆ ಟೂಲ್‌ ತಂಡದ ಪ್ರಭಾವದ ಕುರಿತು ಸಿಸ್ಟಮ್‌ ಆಫ್‌ ಅ ಡೌನ್‌, ಡೆಫ್ಟೋನ್ಸ್ ಹಾಗೂ ಕೋರ್ನ್‌ ಹಾಡುಗಳ ಉದಾಹರಣೆಗಳನ್ನು ದಿ ಬೋಸ್ಟನ್‌ ಫೀನಿಕ್ಸ್‌ ನ ಸೀನ್‌ (ಷಾನ್‌) ರಿಚರ್ಡ್ಸನ್‌ ಉಲ್ಲೇಖಿಸಿದ್ದಾರೆ. ಇನ್ನೂ ಹೆಚ್ಚಿಗೆ, ಕೀನನ್‌ರ ಹಾಡುಗಾರಿಕೆಯ ಅಪೂರ್ವ ಶೈಲಿಯು ಚೆವೆಲ್‌ ತಂಡದ ಪೀಟ್‌ ಲೇಫ್ಲರ್‌ರಂತ ಕಲಾವಿದರ ಮೇಲೆ ಪ್ರಭಾವ ಬೀರಿರುವುದನ್ನು ಮತ್ತೆ ಮತ್ತೆ ಕಾಣಲಾಗಿದೆ.

ದೃಶ್ಯ ಕಲೆಗಳು

ಇತರೆ ಕಲಾಕೃತಿಗಳ ಪ್ರಭಾವಗಳನ್ನು ತಮ್ಮ ಸಂಗೀತ ವೀಡಿಯೊ, ನೇರ ಪ್ರಸಾರದ ಸಂಗೀತಗೋಷ್ಠಿಗಳಲ್ಲಿ ಹಾಗೂ ಆಲ್ಬಮ್‌ ಸಿದ್ಧಪಡಿಸುವಿಕೆಗಳಲ್ಲಿ ಅಳವಡಿಸುವುದು, ವಾದ್ಯತಂಡವಾಗಿ ಟೂಲ್‌ ತಂಡದ ಕಾರ್ಯದ ಭಾಗವಾಗಿದೆ. ವಿಶೇಷವಾಗಿ, ಆಡಮ್‌ ಜೋನ್ಸ್‌ ವಾದ್ಯತಂಡದ ಕಲಾ ನಿರ್ದೇಶಕ ಹಾಗೂ ತಂಡದ ಸಂಗೀತ ವೀಡಿಯೊಗಳ ನಿರ್ದೇಶಕರ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸುವರು. ವಾದ್ಯತಂಡದ ಅಧಿಕೃತ ಅಂತರಜಾಲತಾಣದ ಒಂದು ಪುಟವನ್ನು ಬ್ಯಾಂಡ್ ಕುರಿತ "ಕಲೆಗಳು ಮತ್ತು ಪ್ರಭಾವಗಳಿಗೆ ಮುಡಿಪಾಗಿಟ್ಟಿರುವುದು" ಇದರ ಇನ್ನೊಂದು ಅಭಿವ್ಯಕ್ತಿಯಾಗಿದೆ.

ಸಂಗೀತದ ವೀಡಿಯೊಗಳು

    ಇದನ್ನೂ ನೋಡಿ: ಟೂಲ್‌ ಸಂಗೀತ ಸಂಪುಟಗಳ ಪಟ್ಟಿ
ಚಿತ್ರ:Tool-Sober-video-screencap.jpg
'ಸೋಬರ್‌' ಸಂಗೀತ ವೀಡಿಯೊದ ಸ್ಕ್ರೀನ್‌ಷಾಟ್‌. ಈ ವೀಡಿಯೊದ ನಿರ್ದೇಶಕರು ಆಡಮ್‌ ಜೋನ್ಸ್‌ ಮತ್ತು ಫ್ರೆಡ್‌ ಸ್ಟುಹರ್.

ವಾದ್ಯತಂಡವು ಎಂಟು ಸಂಗೀತ ವೀಡಿಯೊಗಳನ್ನು ಬಿಡುಗಡೆಗೊಳಿಸಿದೆ. ಆದರೆ ಮೊದಲ ಎರಡು ವೀಡಿಯೊಗಳಲ್ಲಿ ಮಾತ್ರ ವೈಯಕ್ತಿಕವಾಗಿ ಕಾಣಿಸಿಕೊಂಡಿತು. ಸಂಗೀತವನ್ನು ಕೇಳುವ ಬದಲಿಗೆ ಜನರು ಅದರಲ್ಲಿ ಭಾಗಿಯಾದ ವ್ಯಕ್ತಿತ್ವಗಳೊಂದಿಗೆ ಅಂಟಿಕೊಳ್ಳುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿತ್ತು. 'ಹುಷ್‌' ಮತ್ತು 'ವೈಕೇರಿಯಸ್'‌ ಹೊರತುಪಡಿಸಿ, ಟೂಲ್‌ ತಂಡದ ಉಳಿದೆಲ್ಲ ಸಂಗೀತ ವೀಡಿಯೊಗಳಲ್ಲಿ ಕೆಲ ಮಟ್ಟಿಗೆ 'ಸ್ಟಾಪ್‌ ಮೋಷನ್‌ ಅನಿಮೇಷನ್' ಸಹ ಸೇರಿದೆ.‌ ಈ ವೀಡಿಯೊಗಳನ್ನು ಪ್ರಾಥಮಿಕವಾಗಿ ಆಡಮ್‌ ಜೋನ್ಸ್‌ ತಯಾರಿಸಿದ್ದು, ಕೆಲವೊಮ್ಮೆ ಚೆಟ್‌ ಝಾರ್‌, ಅಲೆಕ್ಸ್‌ ಗ್ರೇ ಹಾಗೂ ಆಸಿಯಸ್‌ ಲೇಬಿರಿಂತ್‌ ಸಹಯೋಗದೊಂದಿಗೆ ವೀಡಿಯೊಗಳನ್ನು ಸಿದ್ಧಪಡಿಸಿದ್ದುಂಟು.

ವಿಶೇಷವಾಗಿ 'ಸೋಬರ್'‌ ಸಂಗೀತ ವೀಡಿಯೊ ಬಹಳಷ್ಟು ಗಮನ ಸೆಳೆಯಿತು. ಇದಕ್ಕೆ ಯಾವುದೇ ಕಥಾವಸ್ತುವಿಲ್ಲ, ಆದರೆ ಅದರ ಚಿತ್ರಣಗಳೊಂದಿಗೆ ವೈಯಕ್ತಿತ ಭಾವನೆಗಳನ್ನು ಸೇರಿಸುವುದು ಉದ್ದೇಶವಾಗಿತ್ತು ಎಂದು ಜೋನ್ಸ್‌ ವಿವರಿಸಿದರು. 'ಈ ವೀಡಿಯೊದಲ್ಲಿ ದುಷ್ಟ ಕುಳ್ಳ ಮಾನವರು ಕತ್ತಲು ಕೋಣೆಗಳಲ್ಲಿ ವಾಸಿಸುವರು. ಇವುಗಳ ಗೋಡೆಗಳಲ್ಲಿನ ಕೊಳವೆಗಳಲ್ಲಿ ಮಾಂಸಗಳನ್ನು ನೀಡಲಾಗುತ್ತಿತ್ತು.' ಇದನ್ನು 'ಮಹತ್ತರವಾದ, ಅಸಾಮಾನ್ಯ ಕ್ಲಿಪ್ ' ಎಂದು ರೋಲಿಂಗ್‌ ಸ್ಟೋನ್‌ ಈ ಚಿತ್ರಣವನ್ನು ವಿವರಿಸಿದೆ. ಇದು ಹೊಸ ಕಲಾವಿದರೊಬ್ಬರು ರಚಿಸಿದ ಅತ್ಯುತ್ತಮ ವೀಡಿಯೊ ಎಂದು ಬಿಲ್ಬೋರ್ಡ್‌ ಅಭಿಪ್ರಾಯಪಟ್ಟಿತು.

2007ರ ಡಿಸೆಂಬರ್‌ 18ರಂದು ವೈಕೇರಿಯಸ್‌ನ ವೀಡಿಯೊವನ್ನು DVD ಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ವೀಡಿಯೊ ಗಮನಾರ್ಹವಾಗಿದೆ, ಏಕೆಂದರೆ ಇದು ಇಡಿಯಾಗಿ ಸಿಜಿಐ (CGI) ಬಳಸಿ ನಿರ್ಮಿಸಲಾದ ಮೊದಲ ಟೂಲ್‌ ವೀಡಿಯೊ ಆಗಿದೆ.

ತಂಡದ ಹಾಡು 'ದಿ ಪಾಟ್‌'ಗಾಗಿ ವಾದ್ಯತಂಡವು ಹೊಸ ವೀಡಿಯೊ ರಚನೆ ಹಾಗೂ ನಿರ್ಮಾಣದಲ್ಲಿ ಮಗ್ನವಾಗಿದೆ ಎಂದು ಆಡಮ್‌ ಜೋನ್ಸ್‌ ಗಿಟಾರ್‌ ವರ್ಲ್ಡ್‌ನ ಏಪ್ರಿಲ್‌ 2009 ಸಂಚಿಕೆಯಲ್ಲಿ ಪ್ರಸ್ತಾಪಿಸಿದ್ದರು. ಆದರೆ, ತಂಡವು ಈ ಯೋಜನೆಯನ್ನು ಅನುಸರಿಸಿದೆಯೇ ಎಂಬ ಕುರಿತು ಇತ್ತೀಚೆಗಿನ ಯಾವುದೇ ಪರಿಷ್ಕೃತ ಮಾಹಿತಿಗಳು ಲಭ್ಯವಿಲ್ಲ.

ಆಲ್ಬಮ್‌ ಕಲಾಕೃತಿ

ವಾದ್ಯತಂಡದ ಬಹಳಷ್ಟು ಕಲಾಕೃತಿ ಪರಿಕಲ್ಪನೆಗಳಿಗೆ ಆಡಮ್ ಜೋನ್ಸ್‌ ಕಾರಣರು. ತಂಡದ ಮೊದಲ ಆಲ್ಬಮ್‌ ಅಂಡರ್ಟೋ ನ ರಕ್ಷಾಕವಚದಲ್ಲಿ ಆಡಮ್‌ ಜೋನ್ಸ್‌ ರಚಿಸಿದ ಮಾನವ ಪಕ್ಕೆಲುಬಿನ ಗೂಡಿನ ಶಿಲ್ಪಕೃತಿ ಹಾಗೂ ವಾದ್ಯತಂಡದ ಸದಸ್ಯರು ನೀಡಿದ ಚಿತ್ರಗಳು ಸೇರಿದ್ದವು. ಆಮೇಲೆ ಬಿಡುಗಡೆಯಾದ ಆಲ್ಬಮ್‌ಗಳಲ್ಲಿ ಸಹಯೋಗ ನೀಡಿದ ಕಲಾವಿದರ ಕಲಾಕೃತಿಗಳೂ ಇದ್ದವು: ಎನಿಮಾ ಮತ್ತು ಸಲೈವಲ್‌ ಆಲ್ಬಮ್‌ಗಳಿಗಾಗಿ ಕ್ಯಾಮ್‌ ಡಿ ಲಿಯೊನ್‌ರ ಕಲಾಕೃತಿಗಳಿದ್ದವು. ಲ್ಯಾಟೆರಲಸ್‌ ಹಾಗೂ 10,000 ಡೇಯ್ಸ್‌ ಯನ್ನು ಅಲೆಕ್ಸ್‌ ಗ್ರೇ ಅವರ ಸಹಾಯದೊಂದಿಗೆ ಸೃಷ್ಟಿಸಲಾಯಿತು. ಬಿಡುಗಡೆಯಾದ ಈ ಆಲ್ಬಮ್‌ಗಳಿಗೆ ಸಕಾರಾತ್ಮಕ ವಿಮರ್ಶೆಗಳು ದೊರಕಿದವು. ಅಸೋಷಿಯೇಟೆಡ್‌ ಪ್ರೆಸ್‌ನ ಸಂಗೀತ ಪತ್ರಕರ್ತ, ಬ್ಯಾಂಡ್ ನಾವೀನ್ಯತೆಯ ಆಲ್ಬಮ್ ಪ್ಯಾಕೇಜಿಂಗ್‌ಗೆ ಪ್ರಖ್ಯಾತಿ ಹೊಂದಿದೆ ಎಂದು ಹೇಳಿದ್ದಾರೆ.

ಎನಿಮಾ ಹಾಗೂ 10,000 ಡೇಯ್ಸ್‌ ಇವೆರಡೂ ಆಲ್ಬಮ್‌ಗಳಿಗೆ ಅತ್ಯುತ್ತಮ ಧ್ವನಿಮುದ್ರಣಾ ಪ್ಯಾಕೇಜ್ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿಗಾಗಿ ನಾಮನಿರ್ದೇಶನ ಪಡೆಯಿತು. ಮೊದಲು ತಿಳಿಸಲಾದ ಆಲ್ಬಮ್‌ 1997ರಲ್ಲಿ ಪ್ರಶಸ್ತಿ ಗಿಟ್ಟಿಸದಿದ್ದರೂ, ಇನ್ನೊಂದು ಆಲ್ಬಮ್‌ 2007ರಲ್ಲಿ ಪ್ರಶಸ್ತಿ ಗಳಿಸಿತು. ಕಲಾ ನಿರ್ದೇಶಕರಾಗಿ, ಆಡಮ್‌ ಜೋನ್ಸ್‌ 10,000 ಡೇಯ್ಸ್‌ ಆಲ್ಬಮ್‌ಗಾಗಿ ಪ್ಯಾಕೇಜಿಂಗ್ ರೂಪಿಸಿದರು. ವಿಧಾನದಲ್ಲಿ 3-D ಕಲಾಕೃತಿ ಮತ್ತು ಛಾಯಾಚಿತ್ರಗಳನ್ನು ವೀಕ್ಷಿಸಲು ತ್ರಿವಿಮಿತಿದರ್ಶಕ (ಸ್ಟೀರಿಯೊಸ್ಕೊಪಿಕ್‌) ಮಸೂರಗಳನ್ನು ಒಳಗೊಂಡಿದ್ದವು. ಜೋನ್ಸ್‌ ಆಜೀವ ಪರ್ಯಂತ ತ್ರಿವಿಮಿತೀಯ ಛಾಯಾಚಿತ್ರಗ್ರಹಣದ ಅಭಿಮಾನಿಯಾಗಿದ್ದರು. ಈ ಪ್ಯಾಕೇಜಿಂಗ್ ವಿಧಾನವು ವಿಶಿಷ್ಟವಾಗಿರಬೇಕು ಹಾಗೂ ಅವರು ಪ್ರಶಂಸಿಸುತ್ತಿದ್ದ 1970ರ ಕಾಲಾವಧಿಯ ಶೈಲಿಯನ್ನು ಅನುಸರಿಸುವಂತಿರಬೇಕು ಎಂಬುದು ಅವರ ಹಂಬಲವಾಗಿತ್ತು.

ನೇರ ವೀಕ್ಷಣೆಯ ಪ್ರದರ್ಶನಗಳು

ವಾದ್ಯತಂಡ ಟೂಲ್‌ 
ಇಸವಿ 2006ರಲ್ಲಿ ಪ್ರದರ್ಶನ ನೀಡಿದ ಟೂಲ್‌ ತಂಡ. ವೇದಿಕೆಯ ಹಿನ್ನೆಲೆಯಲ್ಲಿ ವರ್ಣಚಿತ್ರ ಕಲಾವಿದ ಅಲೆಕ್ಸ್‌ ಗ್ರೇ ರಚಿಸಿದ 10,000 ಡೇಯ್ಸ್‌ ಕಲಾಕೃತಿ ಬಳಸಿಕೊಂಡು ಅದ್ಧೂರಿ ಬೆಳಕಿನ ಪ್ರದರ್ಶನ.

1990ರ ದಶಕದ ಆರಂಭ ಕಾಲದಲ್ಲಿನ ಮೊದಲ ಪ್ರವಾಸಗಳ ನಂತರ, ಟೂಲ್‌ ತಂಡವು ಹಲವು ವಿಶ್ವ ಪ್ರವಾಸಗಳಲ್ಲಿ ಮತ್ತು ಪ್ರಮುಖ ಉತ್ಸವಗಳಲ್ಲಿ ವ್ಯಾಪಕ ಪ್ರಚಾರದಿಂದ ಕೂಡಿದ ಪ್ರದರ್ಶನ ನೀಡಿತು.ಲೊಲಾಪಲೂಝಾ (1997 ಮತ್ತು 2009), ಕೋಚೆಲಾ (1999 ಮತ್ತು 2006), ಡೌನ್‌ಲೋಡ್‌ ಫೆಸ್ಟಿವಲ್‌ (2006), ರೊಸ್ಕಿಲ್ಡ್‌ (2001 ಮತ್ತು 2006), ಬಿಗ್‌ ಡೇ ಔಟ್‌ (2007), ಬೊನಾರೂ (2007), ಆಲ್‌ ಪಾಯಿಂಟ್ಸ್‌ ವೆಸ್ಟ್‌ ಸಂಗೀತ & ಕಲಾ ಉತ್ಸವ (2009) ಮತ್ತು ಎಪಿಸೆಂಟರ್‌ (2009) ಮುಂತಾದವು. ಇವರೊಂದಿಗೆ ಹಲವು ಕಲಾವಿದರು ಟೂಲ್‌ ತಂಡದೊಂದಿಗೆ ವೇದಿಕೆಯಲ್ಲಿ ಸೇರಿದ್ದರು: ಇವರಲ್ಲಿ ಬಝ್‌ ಆಸ್ಬೊರ್ನ್‌ ಮತ್ತು ಸ್ಕಾಟ್‌ ರೀಡರ್‌ಅನೇಕ ಸಂದರ್ಭಗಳಲ್ಲಿ; 1991 ಪ್ರವಾಸದಲ್ಲಿ ಟಾಮ್‌ ಮೊರೆಲೊ ಮತ್ತು ಝಾಕ್‌ ಡಿ ಲಾ ರೊಚಾ; 2001-02 ಇಸವಿಯ ಲ್ಯಾಟೆರಲಸ್‌ ಪ್ರವಾಸದಲ್ಲಿ ಮ್ಯಾಸ್ಟೊಡಾನ್‌ನ ಟ್ರಿಕಿ, ರಾಬರ್ಟ್‌ ಫ್ರಿಪ್‌, ಮೈಕ್‌ ಪ್ಯಾಟನ್‌, ಡೇವ್‌ ಲೊಂಬಾರ್ಡೊ, ಬ್ರಾನ್‌ ಡೇಲರ್‌ ಹಾಗೂ ಪ್ರಾಯೋಗಿಕ ಕಲಾ ದ್ವಯರಾದ ಆಸಿಯಸ್‌ ಲ್ಯಾಬಿರಿಂತ್‌; ಹಾಗೂ, 2006-07 ಪ್ರವಾಸದಲ್ಲಿ ಕಿರ್ಕ್‌ ಹ್ಯಾಮೆಟ್‌, ಫಿಲ್‌ ಕ್ಯಾಂಪ್ಬೆಲ್‌, ಸರ್ಜ್‌ ಟ್ಯಾಂಕಿಯನ್‌ ಮತ್ತು ಟಾಮ್‌ ಮೊರೆಲೊ ಸೇರಿದ್ದಾರೆ.

ಲೆಡ್‌ ಝೆಪೆಲಿನ್‌, ಟೆಡ್‌ ನ್ಯುಜೆಂಟ್‌, ಪೀಚ್‌, ಕ್ಯುಸ್‌ ಹಾಗೂ ರಾಮೊನ್ಸ್‌ರ ಹಾಡುಗಳನ್ನೂ ಒಳಗೊಂಡಿವೆ.. 

ಟೂಲ್‌ ತಂಡದ 'ಪ್ರಚಾರ ಪಡೆದ' ಪ್ರವಾಸಗಳಲ್ಲಿ ಅಸಾಂಪ್ರದಾಯಿಕ ವೇದಿಕೆಯ ವಿನ್ಯಾಸ ಮತ್ತು ವೀಡಿಯೊ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ. ಗಾಯಕ ಮೇಯ್ನಾರ್ಡ್‌ ಜೇಮ್ಸ್‌ ಕೀನನ್ ಹಿಂಭಾಗದಲ್ಲಿ ಎತ್ತರದ ವೇದಿಕೆಗಳ ಮೇಲೆ ಡ್ರಮ್‌ ವಾದಕ ಡ್ಯಾನಿ ಕ್ಯಾರಿಯೊಂದಿಗೆ ನಿಲ್ಲುವುದುಂಟು. ಗಿಟಾರ್‌ ವಾದಕ ಆಡಮ್‌ ಜೋನ್ಸ್‌ ಮತ್ತು ಬಾಸ್‌ ಗಿಟಾರ್‌ ವಾದಕ ಜಸ್ಟಿನ್‌‌ ಛಾನ್ಸೆಲರ್‌ ಮುಂಭಾಗದಲ್ಲಿ ವೇದಿಕೆಯ ಬದಿಯ ತುದಿಗಳಲ್ಲಿ ನಿಲ್ಲುವರು. ಕೀನನ್ ತಾವು ಗಾಯಕರಾಗಿದ್ದರೂ, ಶ್ರೋತೃಗಳ ಬದಲು ವೇದಿಕೆಯ ಹಿನ್ನೆಲೆ ಅಥವಾ ಬದಿಗಳತ್ತ ಮುಖ ಮಾಡುವುದುಂಟು.

ಇದರಲ್ಲಿ ಫಾಲೊಸ್ಪಾಟ್‌ ಆಗಲೀ ಲೈವ್‌ ಕ್ಯಾಮೆರಾಗಳನ್ನಾಗಲಿ ಬಳಸಲಿಲ್ಲ. ಬದಲಿಗೆ,  ವಾದ್ಯತಂಡ ಸದಸ್ಯರ ಮೇಲಿಂದ ಗಮನವನ್ನು ದೂರಸರಿಸಿ, ಹಿನ್ನೆಲೆಯಲ್ಲಿರುವ ದೊಡ್ಡ ಪರದೆಗಳು ಮತ್ತು ಗುಂಪುಗಳ ಮೇಲೆ ಕೇಂದ್ರೀಕರಿಸಲು ವಿಸ್ತಾರವಾದ ಹಿನ್ನೆಲೆ ಬೆಳಕಿನ ವ್ಯವಸ್ಥೆಯನ್ನು ಬ್ಯಾಂಡ್ ಅಳವಡಿಸುತ್ತದೆ.  ವಾದ್ಯತಂಡದ ನೇರ-ವೀಕ್ಷಣಾ ವೀಡಿಯೊ ನಿರ್ದೇಶಕ ಬ್ರೆಕಿನ್ರಿಡ್ಜ್‌ ಹ್ಯಾಗರ್ಟಿ ಹೇಳುವಂತೆ, ಬಹುತೇಕ ಮೇಯ್ನಾರ್ಡ್‌ಗಾಗಿಯೇ ವೇದಿಕೆಯ ಮೇಲಿನ ಕತ್ತಲಿನ ಜಾಗಗಳನ್ನು ಮೀಸಲಿಡಲಾಗಿದೆ. "ಹಲವು ಹಾಡುಗಳು ಅವರ ವೈಯಕ್ತಿಕ ಪ್ರಯಾಣವನ್ನು ಬಿಂಬಿಸುತ್ತದೆ. ಶ್ರೋತೃಗಳಿಗಾಗಿ ಈ ಭಾವುಕತೆಗಳನ್ನು ಪ್ರದರ್ಶಿಸುವ ಪ್ರಯತ್ನದಲ್ಲಿ ಪ್ರಖರ ಬೆಳಕುಗಳಿಂದಾಗಿ ಅಡ್ಡಿಯಾಗುತ್ತದೆ ಎಂದು ಅವರು ವಿವರಿಸಿದ್ದಾರೆ.  ಅವರಿಗೆ ಸ್ವಲ್ಪ ವೈಯಕ್ತಿಕ ಜಾಗದ ಅಗತ್ಯವಿದೆ. ನೆರಳುಗಳಲ್ಲಿ ನಿಲ್ಲುವುದು ಅವರಿಗೆ ಹೆಚ್ಚು ಹಿತಕರವಾಗುತ್ತದೆ.'   

ಲೂಪಡ್ ಕ್ಲಿಪ್‌ಗಳನ್ನು ದೊಡ್ಡ ಪರದೆಗಳಲ್ಲಿ ಪ್ರದರ್ಶಿಸಲು ಬಳಸಲಾಗುತ್ತದೆ. ಅವು ಸಂಗೀತ ವಿಡಿಯೋ ಮುಂತಾದ ಹಾಡುಗಳ ಜಾಡು ಹಿಡಿಯುವುದಿಲ್ಲ. ವಾದ್ಯತಂಡವು ಎಂದಿಗೂ ಟೈಮ್‌ಕೋಡ್‌ ಬಳಸಿಲ್ಲ. ವಿಡಿಯೋಗಳನ್ನು ಯಾವುದೇ ಸಿದ್ಧತೆಯಿಲ್ಲದೇ ಅದನ್ನು ಸುಧಾರಿಸುವ ರೀತಿಯಲ್ಲಿ ಬದಲಾಯಿಸಬಹುದೆಂದು ಅವರು ಸದಾ ಖಾತರಿ ಮಾಡಿದ್ದರು. ಪ್ರದರ್ಶನವು ಎರಡು ಬಾರಿ ಒಂದೇ ರೀತಿಯಲ್ಲಿ ಇರುವುದಿಲ್ಲ." 10,000 ಡೇಯ್ಸ್‌ ಪ್ರವಾಸದಲ್ಲಿ, ತಂಡದ ವೀಡಿಯೊ ವಸ್ತುವಿನಲ್ಲಿ ಸುಮಾರು ಆರು ತಾಸು ಅವಧಿಯ ವೀಡಿಯೊಗಳಿದ್ದವು. ಆಡಮ್‌ ಜೋನ್ಸ್‌, ಅವರ ಪತ್ನಿ ಕ್ಯಾಮೆಲ್ಲಾ ಗ್ರೇಸ್‌, ಚೆಟ್‌ ಝಾರ್‌, ಮೀಟ್ಸ್‌ ಮೇಯರ್‌ ಮತ್ತು ಬ್ರೆಕಿನ್ರಿಡ್ಜ್‌ ಹ್ಯಾಗರ್ಟಿ ರಚಿಸಿದ ವೀಡಿಯೊಗಳಿವು. ಚೆಟ್‌ ಝಾರ್‌ ರಚಿಸಿದ ವಸ್ತುಗಳಲ್ಲಿ ಕೆಲವು, 'ಡಿಸ್ಟರ್ಬ್‌ ದಿ ನಾರ್ಮಲ್‌ ' ಎಂಬ ತಮ್ಮ ಡಿವಿಡಿಯಲ್ಲಿ ಬಿಡುಗಡೆಯಾಗಿವೆ.

ಧ್ವನಿಮುದ್ರಿಕೆ ಪಟ್ಟಿ

    ಸ್ಟುಡಿಯೊ ಆಲ್ಬಮ್‌ಗಳು
  • ಅಂಡರ್‌ಟೋ (1993)
  • ಎನಿಮಾ' (1996)
  • ಲ್ಯಾಟೆರಲಸ್‌ (2001)
  • 10,000 ಡೇಯ್ಸ್‌ (2006)
  • Fear Inoculum (2019)

ಗ್ರ್ಯಾಮಿ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

Year Recipient Award Result
1998 "ಎನಿಮಾ" ಅತ್ಯುತ್ತಮ ಮೆಟಲ್‌ ಶೈಲಿಯ ಸಂಗೀತ ಪ್ರದರ್ಶನ ಗೆಲುವು
ಎನಿಮಾ ಅತ್ಯುತ್ತಮ ಧ್ವನಿಮುದ್ರಣಾ ಪ್ಯಾಕೇಜ್ ನಾಮನಿರ್ದೇಶನ
"ಸ್ಟಿಂಕ್‌ಫಿಸ್ಟ್‌" ಅತ್ಯುತ್ತಮ ಸಂಗೀತ ವೀಡಿಯೊ, ಕಿರು-ಆವೃತ್ತಿ ನಾಮನಿರ್ದೇಶನ
2002 "ಷಿಸ್ಮ್‌" ಅತ್ಯುತ್ತಮ ಮೆಟಲ್‌ ಶೈಲಿಯ ಸಂಗೀತ ಪ್ರದರ್ಶನ ಗೆಲುವು
2007 10,000 ಡೇಯ್ಸ್‌ ಅತ್ಯುತ್ತಮ ಧ್ವನಿಮುದ್ರಣಾ ಪ್ಯಾಕೇಜ್ ಗೆಲುವು
"ವೈಕ್ಯಾರಿಯಸ್‌" ಅತ್ಯುತ್ತಮ ಹಾರ್ಡ್‌ ರಾಕ್‌ ಶೈಲಿಯ ಸಂಗೀತ ಪ್ರದರ್ಶನ ನಾಮನಿರ್ದೇಶನ
2008 "ದಿ ಪಾಟ್‌" ನಾಮನಿರ್ದೇಶನ


ಆಕರಗಳು

ಸಾಹಿತ್ಯ

  • Akhtar, Kabir (2001-07-16). "The Tool FAQ". The Tool Page.
  • DeRogatis, Jim (2003). Turn on Your Mind: Four Decades of Great Psychedelic Rock. Hal Leonard Corporation. ISBN 0634055488.
  • Erlewine, Stephen Thomas. "Tool". Allmusic. AllMusic.com. Retrieved April 28, 2006.
  • Kitts, Jeff (2002). Guitar World Presents Nu-Metal. Hal Leonard Corporation. ISBN 0634032879.
  • McIver, Joel (2002). Nu-Metal: The Next Generation of Rock and Punk. Omnibus Press. ISBN 978-0711992092.
  • Newquist, Harvey P. (2004). The New Metal Masters. Backbeat Books. ISBN 978-0879308049.
  • Sherry, James (2006). Heavy Metal Thunder: Kick-Ass Cover Art from Kick-Ass Albums. Chronicle Books. ISBN 0811853535.
  • Sokal, Roman (2001-05-23). "Tool - Stepping Out From the Shadows". Exclaim!. Archived from the original on 2009-07-14. Retrieved 2010-08-20.

ಬಾಹ್ಯ ಕೊಂಡಿಗಳು

Tags:

ವಾದ್ಯತಂಡ ಟೂಲ್‌ ಇತಿಹಾಸವಾದ್ಯತಂಡ ಟೂಲ್‌ ಸಂಗೀತದ ಶೈಲಿ ಮತ್ತು ಪ್ರಭಾವಗಳುವಾದ್ಯತಂಡ ಟೂಲ್‌ ದೃಶ್ಯ ಕಲೆಗಳುವಾದ್ಯತಂಡ ಟೂಲ್‌ ಧ್ವನಿಮುದ್ರಿಕೆ ಪಟ್ಟಿವಾದ್ಯತಂಡ ಟೂಲ್‌ ಗ್ರ್ಯಾಮಿ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳುವಾದ್ಯತಂಡ ಟೂಲ್‌ ಆಕರಗಳುವಾದ್ಯತಂಡ ಟೂಲ್‌ ಬಾಹ್ಯ ಕೊಂಡಿಗಳುವಾದ್ಯತಂಡ ಟೂಲ್‌ಕ್ಯಾಲಿಫೊರ್ನಿಯ

🔥 Trending searches on Wiki ಕನ್ನಡ:

ಪ್ರಪಂಚದ ದೊಡ್ಡ ನದಿಗಳುಸೂಫಿಪಂಥಮೆಕ್ಕೆ ಜೋಳಇಸ್ಲಾಂ ಧರ್ಮವ್ಯವಹಾರರವೀಂದ್ರನಾಥ ಠಾಗೋರ್ವಿಜಯನಗರಚಿತ್ರದುರ್ಗತ. ರಾ. ಸುಬ್ಬರಾಯಜಶ್ತ್ವ ಸಂಧಿರಾಷ್ತ್ರೀಯ ಐಕ್ಯತೆನುಗ್ಗೆಕಾಯಿಅಂತಿಮ ಸಂಸ್ಕಾರಕಾಗೋಡು ಸತ್ಯಾಗ್ರಹಗಾದೆ ಮಾತುಷಟ್ಪದಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಮಾಧ್ಯಮಸಾಮ್ರಾಟ್ ಅಶೋಕಉತ್ತರ ಕನ್ನಡಡಿ.ವಿ.ಗುಂಡಪ್ಪಧಾರವಾಡಭೋವಿಬಾರ್ಲಿಬ್ಲಾಗ್ಛಂದಸ್ಸುಜ್ಞಾನಪೀಠ ಪ್ರಶಸ್ತಿಹಣಕಾಸುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಅಂಟುಸುಗ್ಗಿ ಕುಣಿತಪೂರ್ಣಚಂದ್ರ ತೇಜಸ್ವಿವೀರಗಾಸೆಕನ್ನಡ ಸಾಹಿತ್ಯ ಪ್ರಕಾರಗಳುಲಸಿಕೆವಾಲಿಬಾಲ್ಆಧುನಿಕ ವಿಜ್ಞಾನಹಲ್ಮಿಡಿ ಶಾಸನಯಕ್ಷಗಾನಪಾಂಡವರುಜೀವವೈವಿಧ್ಯಭಾರತದ ರಾಷ್ಟ್ರಗೀತೆಜೋಡು ನುಡಿಗಟ್ಟುಸಂಸ್ಕಾರಕರ್ನಾಟಕದ ಕಲೆ ಮತ್ತು ಸಂಸ್ಕೃತಿರೋಮನ್ ಸಾಮ್ರಾಜ್ಯಅರವಿಂದ ಘೋಷ್ಕನ್ನಡ ಗುಣಿತಾಕ್ಷರಗಳುನದಿಬಿಳಿಗಿರಿರಂಗನ ಬೆಟ್ಟನೀರುಸ್ವರರಾಜ್ಯಸಭೆಜೀವನಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಕಾದಂಬರಿಛತ್ರಪತಿ ಶಿವಾಜಿನವೋದಯಧರ್ಮಮೂಲಧಾತುಗಳ ಪಟ್ಟಿಪಂಜುರ್ಲಿಬಂಗಾರದ ಮನುಷ್ಯ (ಚಲನಚಿತ್ರ)ಗಿಡಮೂಲಿಕೆಗಳ ಔಷಧಿಅನುನಾಸಿಕ ಸಂಧಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಕೃಷ್ಣಾ ನದಿಹೊಯ್ಸಳ ವಾಸ್ತುಶಿಲ್ಪಹವಾಮಾನಸಂಖ್ಯೆಸ್ಕೌಟ್ಸ್ ಮತ್ತು ಗೈಡ್ಸ್ಹತ್ತಿಚುನಾವಣೆಸಂಗ್ಯಾ ಬಾಳ್ಯಶ್ಚುತ್ವ ಸಂಧಿಇಮ್ಮಡಿ ಪುಲಿಕೇಶಿಜಯಪ್ರಕಾಶ್ ಹೆಗ್ಡೆ೧೮೬೨ಪ್ರಬಂಧ ರಚನೆ🡆 More