ಹಳೆ ತಿರುಮಕೂಡಲು

ಹಳೇ ತಿರುಮಕೂಡಲು ಮೈಸೂರಿನಿಂದ ತಿ.ನರಸೀಪುರಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಸಿಗುವುದೇ ಹಳೇ ತಿರುಮಕೂಡಲು, ಈ ಊರಿಗೆ ಸಂಸ್ಕೃತದಲ್ಲಿ ತ್ರಿಮಕೂಟ ಎಂದು ಹೆಸರು.

ಇಲ್ಲಿ ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿಯಾದ ಸ್ಫಟಿಕಸರೋವರಗಳ ತ್ರಿವೇಣೀ ಸಂಗಮವಿದೆ. ಆದ್ದರಿಂದ ತ್ರಿಮಕೂಟ ಅಥವಾ ತಿರುಮಕೂಡಲು ಎಂಬ ಹೆಸರು ಬಂದಿದೆ. ಊರಿಗೆ ಪ್ರವೇಶವಾಗುವಾಗ ಮೊದಲಿಗೆ ಬಲಭಾಗದಲ್ಲಿ ಶ್ರೀಗಣೇಶನ ದೇವಸ್ಥಾನವಿದೆ. ನಂತರ ಗ್ರಾಮದೇವತೆಯಾದ ಚೌಡೇಶ್ವರಿಯ ಗುಡಿಯಿದೆ. ಸ್ವಲ್ಪ ಮುಂದೆ ಹೋದರೆ ಎಡಭಾಗಕ್ಕೆ ಶ್ರೀಹನುಮಂತೇಶ್ವರ ದೇವಾಲಯ. ಆ ಗುಡಿಯನ್ನು ದಾಟಿ ಹೋದರೆ ಅಗಸ್ತ್ಯ ಋಷಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀಅಗಸ್ತ್ಯೇಶ್ವರದೇವಾಲಯದ ಗೋಪುರ ಆಕರ್ಷಕವಾಗಿ ಕಣ್ಸೆಳೆಯುತ್ತದೆ. ಇದು ಬಹಳ ಪುರಾತನವಾದ ದೇವಾಲಯ. ಇಲ್ಲಿನ ಸ್ಥಳಪುರಾಣದಂತೆ ಅಗಸ್ತ್ಯ ಋಷಿಗಳು ಶ್ರೀರಾಮಚಂದ್ರದೇವರಿಂದ ಶಿವಲಿಂಗವನ್ನು ಪ್ರತಿಷ್ಠೆ ಮಾಡಿಸುವ ಸಲುವಾಗಿ ಕಾಶೀಕ್ಷೇತ್ರದಿಂದ ಶಿವಲಿಂಗವನ್ನು ತರುವಂತೆ ಹನುಮಂತದೇವರಿಗೆ ಕೇಳಿಕೊಳ್ಳುತ್ತಾರೆ. ಶಿವಲಿಂಗವನ್ನು ತರಲು ಹೋದ ಹನುಮಂತದೇವರು ಹಿಂದಿರುಗಿ ಬರಲು ತಡಮಾಡಿದಾಗ ಪ್ರತಿಷ್ಠಾಪನಾ ಮುಹೂರ್ತ ಮೀರಿ ಹೋಗುತ್ತದೆ ಎಂಬ ಆತಂಕದಿಂದ ಅಗಸ್ತ್ಯರು, ಒಂದು ಮರಳಿನ ಲಿಂಗವನ್ನು ರಚಿಸಿ, ಶ್ರೀರಾಮಚಂದ್ರನಿಂದ ಪ್ರಾಣಪ್ರತಿಷ್ಠಾಪನೆ ಮಾಡಿಸಿಬಿಡುತ್ತಾರೆ. ಆ ಹೊತ್ತಿಗೆ ಸರಿಯಾಗಿ ಕಾಶಿಯಿಂದ ಶಿವಲಿಂಗವನ್ನು ಹನುಮಂತ ದೇವರು ತರುತ್ತಾರೆ. ತಾವು ತರುವಷ್ಟರಲ್ಲಿ ಪ್ರತಿಷ್ಠಾಪನೆ ಆಗಿಹೋಗಿದ್ದು ಕಂಡು, ಕೋಪದಿಂದಲೋ ಎಂಬಂತೆ ಆ ಲಿಂಗವನ್ನು ಮುಷ್ಟಿಯಿಂದ ಗುದ್ದುತ್ತಾರಂತೆ. ಆಗ ಅದರ ನೆತ್ತಿಯಲ್ಲಿ ಒಂದು ತಗ್ಗು ಬೀಳುತ್ತದೆ. ಅಲ್ಲೇ ಗಂಗೆ ಉದ್ಭವಿಸುತ್ತಾಳೆ. ಹೀಗಾಗಿ ಹನುಮಂತದೇವರು ಶ್ರೀರಾಮನ ಇಚ್ಛೆಯರಿತೇ ಆ ರೀತಿ ನಡೆದುಕೊಂಡರು ಎನ್ನಬಹುದು. ಈಗಲೂ ಸಹ ಅಗಸ್ತ್ಯೇಶ್ವರ ಲಿಂಗದಲ್ಲಿ ಉದ್ಭವಿಸುವ ತೀರ್ಥವನ್ನೇ ಭಕ್ತಾದಿಗಳಿಗೆ ನೀಡುತ್ತಾರೆ. ಇದು ಇಲ್ಲಿನ ವಿಶೇಷಗಳಲ್ಲೊಂದು. ಆ ದೇವಾಲಯದಿಂದ ಎಡಗಡೆಗೆ ಮುಂದುವರೆದು ಹೋದರೆ ಸುಂದರವಾದ ಕಾವೇರೀ ನದಿತೀರದಲ್ಲಿನ ಮರಗಳು ಕಣ್ಣು ಸೆಳೆಯುತ್ತವೆ. ಇನ್ನೂ ಮುಂದೆ ಹೋದರೆ ಸ್ವತಃ ಬ್ರಹ್ಮದೇವರಿಂದ ಪ್ರತಿಷ್ಠಿತಗೊಂಡ ಅಶ್ವತ್ಥವೃಕ್ಷವಿದೆ. ಅದರ ಆವರಣದಲ್ಲೇ ಇನ್ನೊಂದು ಸುಂದರವಾದ ಗಣೇಶನ ಗುಡಿಯಿದೆ. ಮರದ ಸುತ್ತಲೂ ನೂರಾರು ನಾಗರಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದೂ ಸಹ ಬಹಳ ಪುರಾತನವಾದ ಸನ್ನಿಧಾನ. ಈ ಬ್ರಹ್ಮಾಶ್ವತ್ಥದ ಪಕ್ಕದಲ್ಲೇ ಶ್ರೀವ್ಯಾಸರಾಜಮಠದ ಪ್ರಖ್ಯಾತ ಪೀಠಾಧೀಶ್ವರರಾದ ಶೇಷಚಂದ್ರಿಕಾಚಾರ್ಯರೆಂದೇ ಪ್ರಸಿದ್ಧರಾದ ಶ್ರೀರಘುನಾಥತೀರ್ಥರ ವೃಂದಾವನವಿದೆ. ಶ್ರೀವ್ಯಾಸರಾಜರಿಂದ ಹತ್ತನೇಯವರಾಗಿ ಪೀಠಕ್ಕೆ ಬಂದ ಶ್ರೀಗಳು, ಶ್ರೀವ್ಯಾಸರಾಜರು ಅರ್ಧ ರಚಿಸಿದ ತಾತ್ಪರ್ಯಚಂದ್ರಿಕಾ ಗ್ರಂಥದ ಕಡೆಯ ಎರಡು ಅಧ್ಯಾಯಗಳನ್ನು ಅಂದರೆ ಶೇಷಭಾಗವನ್ನು ಪೂರ್ಣಗೊಳಿಸಿದ್ದರಿಂದಾಗಿ ಪೂಜ್ಯರಿಗೆ ಶೇಷಚಂದ್ರಿಕಾಚಾರ್ಯರೆಂದು ಬಿರುದು ಬಂದಿತು ಆ ಹೆಸರೇ ಶಾಶ್ವತವಾಗಿ ಉಳಿದುಕೊಂಡು ಬಂದಿದೆ. ಈ ಯತಿಗಳ ಮಹಿಮೆಗಳೂ ಅಪಾರವಾಗಿವೆ. ಕುಹಕಿಗಳ ಮಾತಿನಿಂದ ವೃಂದಾವನವನ್ನು ಸ್ಥಳಾಂತರ ಮಾಡುವ ಉದ್ದೇಶ ಹೊಂದಿದ್ದ ಹೈದರಾಲಿಯ ಪತ್ನಿಗೆ ಸ್ವಪ್ನದ ಮೂಲಕ ಸೂಚನೆ ನೀಡಿ, ಆ ಯೋಚನೆಯನ್ನು ಕೈಬಿಡಬೇಕಾಯಿತು. ತಮಿಳುನಾಡಿನ ಶ್ರೀರಂಗಂ ಶ್ರೀಕ್ಷೇತ್ರದಲ್ಲೇ ದೇವರ ಎದುರಿನ ಮಂಟಪದಲ್ಲೇ ಚಂದ್ರಿಕಾಗ್ರಂಥವನ್ನು ಪೂರ್ಣಗೊಳಿಸಿದ್ದಾರೆಂದು ಇವರ ಚರಿತ್ರೆ ಹೇಳುತ್ತದೆ.

Tags:

ದೇವಾಲಯನದಿಪತ್ನಿ

🔥 Trending searches on Wiki ಕನ್ನಡ:

ಟಿ.ಪಿ.ಕೈಲಾಸಂಪರಮಾಣುಶಿವಮೊಗ್ಗಕಂಪ್ಯೂಟರ್ಬೌದ್ಧ ಧರ್ಮಗೋಲ ಗುಮ್ಮಟತ್ರಿಪದಿಸಾಮಾಜಿಕ ತಾಣತಾಳೀಕೋಟೆಯ ಯುದ್ಧಎಚ್. ತಿಪ್ಪೇರುದ್ರಸ್ವಾಮಿಕುರುಬಸಾರ್ವಜನಿಕ ಹಣಕಾಸುಹೇಮರೆಡ್ಡಿ ಮಲ್ಲಮ್ಮಸುಭಾಷ್ ಚಂದ್ರ ಬೋಸ್ಸಂಸ್ಕೃತ ಸಂಧಿಕರ್ನಾಟಕದ ತಾಲೂಕುಗಳುಸ್ತ್ರೀನಳಂದಲೋಪಸಂಧಿಯೋಗವಾಹಜನಪದ ಕಲೆಗಳುಹಾವೇರಿಕೆ.ಎಲ್.ರಾಹುಲ್ಬಾಗಲಕೋಟೆಯೋಜಿಸುವಿಕೆಸಾಮ್ರಾಟ್ ಅಶೋಕಜೀವನ ಚೈತ್ರಭ್ರಷ್ಟಾಚಾರಕರ್ನಾಟಕ ಲೋಕಸೇವಾ ಆಯೋಗರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಮಂತ್ರಾಲಯಸಂವತ್ಸರಗಳುಕರುಳುವಾಳುರಿತ(ಅಪೆಂಡಿಕ್ಸ್‌)ಎಕರೆಬಸವೇಶ್ವರಗುರುರಾಜ ಕರಜಗಿಶ್ರವಣಬೆಳಗೊಳಪುನೀತ್ ರಾಜ್‍ಕುಮಾರ್ಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುವೀಳ್ಯದೆಲೆಶೃಂಗೇರಿ ಶಾರದಾಪೀಠದುಂಡು ಮೇಜಿನ ಸಭೆ(ಭಾರತ)ಬ್ರಾಹ್ಮಣಮಾಧ್ಯಮಪಶ್ಚಿಮ ಘಟ್ಟಗಳುಭಾರತದ ಆರ್ಥಿಕ ವ್ಯವಸ್ಥೆಸಂಧ್ಯಾವಂದನ ಪೂರ್ಣಪಾಠಕಾವ್ಯಮೀಮಾಂಸೆಅಲಂಕಾರಮಾಸ್ತಿ ವೆಂಕಟೇಶ ಅಯ್ಯಂಗಾರ್ಕರ್ನಾಟಕದ ಜಾನಪದ ಕಲೆಗಳುವಂದೇ ಮಾತರಮ್ಪ್ರತಿಷ್ಠಾನ ಸರಣಿ ಕಾದಂಬರಿಗಳುಹೆಚ್.ಡಿ.ಕುಮಾರಸ್ವಾಮಿಕಾಲ್ಪನಿಕ ಕಥೆಬಾದಾಮಿ ಗುಹಾಲಯಗಳುದೊಡ್ಡಬಳ್ಳಾಪುರಇಮ್ಮಡಿ ಪುಲಿಕೇಶಿನಾಲಿಗೆಗುರು (ಗ್ರಹ)ಮುಹಮ್ಮದ್ಹರಿಹರ (ಕವಿ)ಲಕ್ಷ್ಮಣಸಿಗ್ಮಂಡ್‌ ಫ್ರಾಯ್ಡ್‌ವಾಣಿವಿಲಾಸಸಾಗರ ಜಲಾಶಯಚದುರಂಗದ ನಿಯಮಗಳುಬಾಳೆ ಹಣ್ಣುವೈದಿಕ ಯುಗಹೃದಯಪ್ರಜಾಪ್ರಭುತ್ವದ ಲಕ್ಷಣಗಳುವೈದೇಹಿಛತ್ರಪತಿ ಶಿವಾಜಿವಿಜಯಪುರ ನಗರ ವಿಧಾನಸಭಾ ಕ್ಷೇತ್ರವೀರಗಾಸೆಕರ್ನಾಟಕದ ಮಹಾನಗರಪಾಲಿಕೆಗಳುಕರ್ನಾಟಕ ಸರ್ಕಾರಜ್ಯೋತಿಬಾ ಫುಲೆ🡆 More